ಕರ್ನಾಟಕದ ಜಿಲ್ಲೆಗಳು

ಕರ್ನಾಟಕದ ಜಿಲ್ಲೆಗಳ ಪಟ್ಟಿ
ಕರ್ನಾಟಕದ ನಕ್ಷೆ


ಹಿನ್ನೆಲೆ ಬದಲಾಯಿಸಿ

ನಮ್ಮ ಕರ್ನಾಟಕ ರಾಜ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ ಅವರ ಸುಗಮ ಆಡಳಿತದ ಕಾರಣಕ್ಕಾಗಿ ವಿವಿಧ ಜಿಲ್ಲೆಗಳನ್ನು Archived 2023-05-24 ವೇಬ್ಯಾಕ್ ಮೆಷಿನ್ ನಲ್ಲಿ. ರಚಿಸಲಾಯಿತು. ಅನೇಕ ಸಂದರ್ಭಗಳಲ್ಲಿ ಜಿಲ್ಲಾ ಕೇಂದ್ರಗಳು ಬದಲಾಗಿವೆ. ಕೆಲವು ಜಿಲ್ಲೆಗಳು ಚಿಕ್ಕದಾಗಿದ್ದು, ಕೆಲವು ವಿಸ್ತಾರಗೊಂಡಿವೆ. ಕೆಲವೊಂದು ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ಎರಡು ಜಿಲ್ಲೆಗಳನ್ನು ರಚಿಸಲಾಗಿದೆ. ಈ ಜಿಲ್ಲೆಗಳ ಆಡಳಿತವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೋಡಿಕೊಳ್ಳುತ್ತಾರೆ. ನಮ್ಮ ರಾಜ್ಯ ಸರ್ಕಾರದ ಆಡಳಿತದ ಅನುಕೂಲಕ್ಕಾಗಿ ಇರುವ ಮೂವತ್ತೊಂದು ಜಿಲ್ಲೆಗಳು ನಾಲ್ಕು ಕಂದಾಯ ವಿಭಾಗಗಳ ಅಡಿಯಲ್ಲಿ ಬರುವಂತೆ ರೂಪಿಸಲಾಗಿದೆ, ಅವು ಈ ಕೆಳಗಿನಂತೆ ಇವೆ:

1. ಬೆಂಗಳೂರು ವಿಭಾಗ ಬದಲಾಯಿಸಿ

 
ಬೆಂಗಳೂರು ವಿಭಾಗದ ಜಿಲ್ಲೆಗಳು

ಕರ್ನಾಟಕದ ರಾಜಧಾನಿ ಬೆಂಗಳೂರು ಆಗಿದೆ. ಇದು ಒಂದು ಆಡಳಿತ ಕಂದಾಯ ವಿಭಾಗವಾಗಿದೆ. ಈ ವಿಭಾಗದಲ್ಲಿ ಒಂಭತ್ತು ಜಿಲ್ಲೆಗಳಿವೆ. ಅವು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ. ನಮ್ಮ ರಾಜ್ಯದ ದಕ್ಷಿಣ ಭಾಗದಲ್ಲಿ ಇವು ನೆಲೆಗೊಂಡಿವೆ.

2. ಮೈಸೂರು ವಿಭಾಗ ಬದಲಾಯಿಸಿ

 
ಮೈಸೂರು ವಿಭಾಗದ ಜಿಲ್ಲೆಗಳು

ನಮ್ಮ ರಾಜ್ಯದ ಮತ್ತೊಂದು ಆಡಳಿತ ವಿಭಾಗವೆಂದರೆ ಮೈಸೂರು ವಿಭಾಗ. ಮೈಸೂರು ಆರಂಭದಲ್ಲಿ ಒಡೆಯರ್ ವಂಶಸ್ಥರ ರಾಜಧಾನಿಯಾಗಿತ್ತು. ಈ ವಿಭಾಗದಲ್ಲಿರುವ ಎಂಟು ಜಿಲ್ಲೆಗಳೆಂದರೆ: ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ಕೊಡಗು. ಕರ್ನಾಟಕದ ಅನೇಕ ಶ್ರೀಮಂತ ಜಿಲ್ಲೆಗಳು ಈ ವಿಭಾಗದಲ್ಲಿವೆ. ಈ ವಿಭಾಗವು ನದಿಗಳಿಗೆ, ಪರ್ವತ ಶ್ರೇಣಿಗಳಿಗೆ, ಅರಣ್ಯಗಳಿಗೆ, ಕಾಡು ಪ್ರಾಣಿಗಳಿಗೆ, ಕಾಫಿ ತೋಟಗಳಿಗೆ, ಕರಾವಳಿಗೆ, ಬಂದರುಗಳಿಗೆ ಪ್ರಸಿದ್ಧವಾಗಿದೆ.

3. ಬೆಳಗಾವಿ ವಿಭಾಗ ಬದಲಾಯಿಸಿ

 
ಬೆಳಗಾವಿ ವಿಭಾಗದ ಜಿಲ್ಲೆಗಳು

ಈ ವಿಭಾಗದ ನಾಲ್ಕು ಜಿಲ್ಲೆಗಳು 1956ರವರೆಗೆ ಬಾಂಬೆ ಪ್ರಾಂತ್ಯದಲ್ಲಿ ಇದ್ದವು. ನಂತರ ಕರ್ನಾಟಕ ರಾಜ್ಯದಲ್ಲಿ ಸೇರ್ಪಡೆಯಾದವು. ಈ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟ ಮತ್ತು ಉತ್ತರ ಕನ್ನಡ. ಇವುಗಳಲ್ಲಿ ಉತ್ತರ ಕನ್ನಡ ಮತ್ತು ಬೆಳಗಾವಿ ಕರ್ನಾಟಕದ ಅತಿದೊಡ್ಡ ಜಿಲ್ಲೆಗಳಾಗಿವೆ.

4. ಕಲಬುರ್ಗಿ ವಿಭಾಗ ಬದಲಾಯಿಸಿ

 
ಕಲಬುರ್ಗಿ ವಿಭಾಗದ ಜಿಲ್ಲೆಗಳು

ಕಲಬುರ್ಗಿ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: ಕಲಬುರ್ಗಿ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಹೊಸದಾಗಿ ಉದಯವಾದ ವಿಜಯನಗರ. ದುರದೃಷ್ಟವಶಾತ್ ಈ ಜಿಲ್ಲೆಗಳು ಸಾಕ್ಷರತಾ ಪ್ರಮಾಣ, ತಲಾ ಆದಾಯ, ಕೃಷಿ, ಜೀವಿತಾವಧಿ ಮುಂತಾದ ವಿಷಯಗಳಲ್ಲಿ ಸಾಕಷ್ಟು ಹಿಂದುಳಿದಿವೆ. ಅದಕ್ಕಾಗಿ ಕರ್ನಾಟಕ ಸರ್ಕಾರವು 2000ರಲ್ಲಿ ಡಾ. ಡಿ. ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ತೀರಾ ಇತ್ತೀಚೆಗೆ ಭಾರತ ಸರ್ಕಾರ ಈ ಜಿಲ್ಲೆಗಳ ಅಭಿವೃದ್ಧಿಗಾಗಿ ಸಂವಿಧಾನದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ.

ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಅಧಿಕೃತ ಪಟ್ಟಿ ಬದಲಾಯಿಸಿ

ವಿವರಣೆ
ಬೆಂಗಳೂರು ವಿಭಾಗ
ಮೈಸೂರು ವಿಭಾಗ
ಬೆಳಗಾವಿ ವಿಭಾಗ
ಕಲಬುರ್ಗಿ ವಿಭಾಗ


ಸಂಕೇತ[೧] ಜಿಲ್ಲೆ ಜಿಲ್ಲಾ ಕೇಂದ್ರ[೨] ಸ್ಥಾಪನೆ[೩][೪] ತಾಲೂಕುಗಳು ಜನಸಂಖ್ಯೆ[೫](2011ರ ಜನಗಣತಿಯ ಪ್ರಕಾರ) ವಿಸ್ತೀರ್ಣ[೨] ಜನಸಾಂದ್ರತೆ[೫](2011ರ ಜನಗಣತಿಯ ಪ್ರಕಾರ) ನಕ್ಷೆ
BK ಬಾಗಲಕೋಟ ಬಾಗಲಕೋಟ 15 ಆಗಸ್ಟ್ 1997[೬] 1,889,752 6,575 km2 (2,539 sq mi) 288/km2 (750/sq mi)  
BN ಬೆಂಗಳೂರು ನಗರ ಬೆಂಗಳೂರು 1 ನವೆಂಬರ್ 1956 9,621,551 2,190 km2 (850 sq mi) 4,393/km2 (11,380/sq mi)  
BR ಬೆಂಗಳೂರು ಗ್ರಾಮಾಂತರ ಬೆಂಗಳೂರು 15 ಆಗಸ್ಟ್ 1986[೭] 990,923 2,259 km2 (872 sq mi) 431/km2 (1,120/sq mi)  
BG ಬೆಳಗಾವಿ ಬೆಳಗಾವಿ 1 ನವೆಂಬರ್ 1956 4,779,661 13,415 km2 (5,180 sq mi) 356/km2 (920/sq mi)  
BL ಬಳ್ಳಾರಿ ಬಳ್ಳಾರಿ 1 ನವೆಂಬರ್ 1956 2,452,595 8,450 km2 (3,260 sq mi) 290/km2 (750/sq mi)  
BD ಬೀದರ್ ಬೀದರ್ 1 ನವೆಂಬರ್ 1956 1,703,300 5,448 km2 (2,103 sq mi) 313/km2 (810/sq mi)  
BJ ವಿಜಯಪುರ ವಿಜಯಪುರ 1 ನವೆಂಬರ್ 1956 2,177,331 10,494 km2 (4,052 sq mi) 207/km2 (540/sq mi)  
CJ ಚಾಮರಾಜನಗರ ಚಾಮರಾಜನಗರ 15 ಆಗಸ್ಟ್ 1997[೬] 1,020,791 5,101 km2 (1,970 sq mi) 181/km2 (470/sq mi)  
CB ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ 10 ಸೆಪ್ಟೆಂಬರ್ 2007[೬] 1,255,104 4,524 km2 (1,747 sq mi)[೮] 296/km2 (770/sq mi)  
CK ಚಿಕ್ಕಮಗಳೂರು ಚಿಕ್ಕಮಗಳೂರು 1 ನವೆಂಬರ್ 1956 1,137,961 7,201 km2 (2,780 sq mi) 158/km2 (410/sq mi)  
CT ಚಿತ್ರದುರ್ಗ ಚಿತ್ರದುರ್ಗ 1 ನವೆಂಬರ್ 1956 1,659,456 8,440 km2 (3,260 sq mi) 197/km2 (510/sq mi)  
DK ದಕ್ಷಿಣ ಕನ್ನಡ ಮಂಗಳೂರು 1 ನವೆಂಬರ್ 1956 2,089,649 4,560 km2 (1,760 sq mi) 430/km2 (1,100/sq mi)  
DA ದಾವಣಗೆರೆ ದಾವಣಗೆರೆ 15 ಆಗಸ್ಟ್ 1997[೬] 1,945,497 5,924 km2 (2,287 sq mi) 328/km2 (850/sq mi)  
DH ಧಾರವಾಡ ಧಾರವಾಡ 1 ನವೆಂಬರ್ 1956 1,847,023 4,260 km2 (1,640 sq mi) 434/km2 (1,120/sq mi)  
GA ಗದಗ ಗದಗ 24 ಆಗಸ್ಟ್ 1997[೬] 1,064,570 4,656 km2 (1,798 sq mi) 229/km2 (590/sq mi)  
GU ಕಲಬುರ್ಗಿ ಕಲಬುರ್ಗಿ 1 ನವೆಂಬರ್ 1956 2,566,326 10,951 km2 (4,228 sq mi) 234/km2 (610/sq mi)  
HS ಹಾಸನ ಹಾಸನ 1 ನವೆಂಬರ್ 1956 1,776,421 6,814 km2 (2,631 sq mi) 261/km2 (680/sq mi)  
HV ಹಾವೇರಿ ಹಾವೇರಿ 24 ಆಗಸ್ಟ್ 1997[೬] 1,597,668 4,823 km2 (1,862 sq mi) 331/km2 (860/sq mi)  
KD ಕೊಡಗು ಮಡಿಕೇರಿ 1 ನವೆಂಬರ್ 1956 554,519 4,102 km2 (1,584 sq mi) 135/km2 (350/sq mi)  
KL ಕೋಲಾರ ಕೋಲಾರ 1 ನವೆಂಬರ್ 1956 1,536,401 3,969 km2 (1,532 sq mi)[೯] 386/km2 (1,000/sq mi)  
KP ಕೊಪ್ಪಳ ಕೊಪ್ಪಳ 24 ಆಗಸ್ಟ್ 1997[೬] 1,389,920 7,189 km2 (2,776 sq mi) 250/km2 (650/sq mi)  
MA ಮಂಡ್ಯ ಮಂಡ್ಯ 1 ನವೆಂಬರ್ 1956
(29 ಆಗಸ್ಟ್ 1939)[೧೦][೧೧]
1,805,769 4,961 km2 (1,915 sq mi) 364/km2 (940/sq mi)  
MY ಮೈಸೂರು ಮೈಸೂರು 1 ನವೆಂಬರ್ 1956 3,001,127 6,854 km2 (2,646 sq mi) 476/km2 (1,230/sq mi)  
RA ರಾಯಚೂರು ರಾಯಚೂರು 1 ನವೆಂಬರ್ 1956 1,928,812 6,827 km2 (2,636 sq mi) 228/km2 (590/sq mi)  
RM ರಾಮನಗರ ರಾಮನಗರ 10 ಸೆಪ್ಟೆಂಬರ್ 2007[೬] 1,082,636 3,556 km2 (1,373 sq mi) 308/km2 (800/sq mi)  
SH ಶಿವಮೊಗ್ಗ ಶಿವಮೊಗ್ಗ 1 ನವೆಂಬರ್ 1956 1,752,753 8,477 km2 (3,273 sq mi) 207/km2 (540/sq mi)  
TU ತುಮಕೂರು ತುಮಕೂರು 1 ನವೆಂಬರ್ 1956 2,678,980 10,597 km2 (4,092 sq mi) 253/km2 (660/sq mi)  
UD ಉಡುಪಿ ಉಡುಪಿ 25 ಆಗಸ್ಟ್ 1997[೬] 1,177,361 3,880 km2 (1,500 sq mi) 329/km2 (850/sq mi)  
UK ಉತ್ತರ ಕನ್ನಡ ಕಾರವಾರ 1 ನವೆಂಬರ್ 1956 1,437,169 10,291 km2 (3,973 sq mi) 140/km2 (360/sq mi)  
VN ವಿಜಯನಗರ ಹೊಸಪೇಟೆ 18 ನವೆಂಬರ್ 2020 1,353,628 5,644 km2 (2,179 sq mi)  
ಯಾದಗಿರಿ ಯಾದಗಿರಿ 30 ಡಿಸೆಂಬರ್ 2009[೧೨] 1,174,271 5,273 km2 (2,036 sq mi) 223/km2 (580/sq mi)  

ಉಲ್ಲೇಖಗಳು ಬದಲಾಯಿಸಿ

 1. "NIC Policy on format of e-mail Address: Appendix (2): Districts Abbreviations as per ISO 3166–2" (PDF). Ministry Of Communications and Information Technology, Government of India. 2004-08-18. pp. 5–10. Archived from the original (PDF) on 2008-09-11. Retrieved 2008-11-24.
 2. ೨.೦ ೨.೧ "Know India — Districts of Karnataka". Government of India portal. Retrieved 16 November 2010.
 3. ಇಲ್ಲಿ 'ಸ್ಥಾಪನೆ' ಎಂದರೆ ಆ ಜಿಲ್ಲೆಯು ಕರ್ನಾಟಕದಲ್ಲಿ ಜಿಲ್ಲೆಯಾಗಿ ಸ್ಥಾಪನೆಯಾದ ವರ್ಷವನ್ನು ಸೂಚಿಸುತ್ತದೆ. ಒಂದು ವೇಳೆ ಆ ಜಿಲ್ಲೆಯು ಕರ್ನಾಟಕದ ಒಳಗೆ ಜಿಲ್ಲೆಯಾಗಿ ಸೇರ್ಪಡೆಯಾಗುವ ಮೊದಲೇ ಸ್ಥಾಪಿತವಾಗಿದ್ದರೆ ೧ ನವೆಂಬರ್ ೧೯೫೬ರನ್ನು ಜಿಲ್ಲಾ ಸ್ಥಾಪನೆಯ ದಿನ ಎಂದು ಪರಿಗಣಿಸಲಾಗುತ್ತದೆ.
 4. "STATES REORGANISATION ACT 1956 - Formation of a new Mysore State". Archived from the original on 16 May 2008. Retrieved 17 November 2010.
 5. ೫.೦ ೫.೧ http://www.census2011.co.in/census/state/districtlist/karnataka.html
 6. ೬.೦ ೬.೧ ೬.೨ ೬.೩ ೬.೪ ೬.೫ ೬.೬ ೬.೭ ೬.೮ "A Handbook of Karnataka — Administration" (PDF). Government of Karnataka. pp. 354, 355. Archived from the original (pdf) on 8 October 2011. Retrieved 16 November 2010.
 7. "District Profile". Archived from the original on 29 November 2010. Retrieved 18 November 2010.
 8. "District Profile — Area and population". Archived from the original on 25 November 2010. Retrieved 18 November 2010.
 9. "Kolar district at a glance" (PDF). Archived from the original (pdf) on 12 March 2011. Retrieved 18 November 2010.
 10. ವಿಶೇಷ ಮಾಹಿತಿ: ಈ ತಾರೀಕು ಜಿಲ್ಲೆ ಸ್ಥಾಪನೆಯಾದ ದಿನವನ್ನು ಸೂಚಿಸುತ್ತದೆ. 1956ರ ನವೆಂಬರ್ 1ರ ಮುಂಚೆಯೇ ಈ ಜಿಲ್ಲೆ ಮೈಸೂರು ರಾಜ್ಯದ ಭಾಗವಾಗಿತ್ತು
 11. "Formation of Mandya district". Archived from the original on 2 ಆಗಸ್ಟ್ 2010. Retrieved 18 November 2010.
 12. ಉಲ್ಲೇಖ ದೋಷ: Invalid <ref> tag; no text was provided for refs named newdistrict