ಬಸವಣ ಬಾಗೇವಾಡಿ ಒಂದು ನಗರ, ಪುಣ್ಯಕ್ಷೇತ್ರ ಹಾಗೂ ತಾಲ್ಲೂಕು ಕೇಂದ್ರ. ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ಬಸವನ ಬಾಗೇವಾಡಿ ಪಟ್ಟಣವು ವಿಜಯಪುರ - ಮುದ್ದೇಬಿಹಾಳ ರಾಜ್ಯ ಹೆದ್ದಾರಿ - ೬೧ ರಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೪೩ ಕಿ.ಮೀ. ದೂರದಲ್ಲಿದೆ.

ಬಸವನ ಬಾಗೇವಾಡಿ
ಪಟ್ಟಣ
ಬಸವನ ಬಾಗೇವಾಡಿ is located in Karnataka
ಬಸವನ ಬಾಗೇವಾಡಿ
ಬಸವನ ಬಾಗೇವಾಡಿ
Location in Karnataka, India
Coordinates: 16°35′00″N 75°58′01″E / 16.5833°N 75.967°E / 16.5833; 75.967
ದೇಶ India
ರಾಜ್ಯಕರ್ನಾಟಕ
ಜಿಲ್ಲೆವಿಜಯಪುರ
Elevation
೬೦೭ m (೧,೯೯೧ ft)
Population
 (೨೦೦೧)
 • Total೨೮೫೮೨
ಭಾಷೆಗಳು
 • ಅಧಿಕೃತಕನ್ನಡ
Time zoneUTC+೫:೩೦ (ಐಎಸ್‍ಟಿ)
ಪಿನ್
೫೮೬ ೨೦೩
ದೂರವಾಣಿ ಕೋಡ್೦೮೩೫೮
ISO 3166 codeIN-KA
Vehicle registrationಕೆಎ-೨೮
Websitekarnataka.gov.in
ವಿಶ್ವಗುರು ಮಹಾತ್ಮ ಬಸವಣ್ಣನವರು
ಅಂಚೆ ಚೀಟಿ ಮೇಲೆ ಗುರು ಬಸವಣ್ಣನವರ ಭಾವಚಿತ್ರ
ಆಲಮಟ್ಟಿ ಆಣೆಕಟ್ಟು
ಆಲಮಟ್ಟಿ ರಾಕ್ ಉದ್ಯಾನವನ

ಬಸವನ ಬಾಗೇವಾಡಿಯಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕಗಳು ಹಾಗೂ ಇತರೆ ಕಚೇರಿಗಳಿವೆ.

ಚರಿತ್ರೆ

ಬದಲಾಯಿಸಿ

ಬಸವನ ಬಾಗೇವಾಡಿ ನಗರವು ವಿಜಯಪುರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಬಸವನ ಬಾಗೇವಾಡಿ ನಗರವು ವಿಜಯಪುರ ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಸ್ಥಳ. ವಿಜಯಪುರ ಜಿಲ್ಲಾ ಕೇಂದ್ರದಿಂದ ೪೩ ಕಿಲೋ ಮೀಟರ್ ದೂರದಲ್ಲಿರುವ ಈ ನಾಡು ಪವಿತ್ರ ಪುಣ್ಯಕ್ಷೇತ್ರವಾಗಲು ಕಾರಣವೇ ಭಕ್ತಿ ಭಂಡಾರಿ ಬಸವಣ್ಣನವರು. ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಐತಿಹ್ಯ

ಬದಲಾಯಿಸಿ

೮೦೦ ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ (ವಾದಿರಾಜ) ಮಾದರಸ ಹಾಗೂ ಮಾದಲಾಂಬಿಕೆ ಎಂಬ ದಂಪತಿ ನಂದೀಶ್ವರನ ಭಕ್ತರಾಗಿದ್ದರು. ಅವರು ಕೈಗೊಂಡ ನಂದಿವ್ರತದ ಫಲವಾಗಿ ದೈವಕೃಪೆಯಿಂದ ಶಿವನೇ ತನ್ನ ವಾಹನ ನಂದಿಯನ್ನು ಇವರ ಪುತ್ರರಾಗಿ ಹುಟ್ಟುವಂತೆ ಅನುಗ್ರಹಿಸಿದನು. ಹೀಗೆ ದೈವಾನುಗ್ರಹದಿಂದ ಜನಿಸಿದ ಆ ಕಂದನೇ ೧೨ ನೇಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ ಜಗಜ್ಯೋತಿ ಬಸವೇಶ್ವರರು.

ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಬಸವಣ್ಣನವರು, ತಮ್ಮ ಉಪನಯನದ ಬಳಿಕ, ಮೇಲು - ಕೀಳೆಂಬ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಭಟಿಸಲು ಯಜ್ಞೋಪವೀತವನ್ನು ಕಿತ್ತು ಹಾಕಿ, ಸಂಗಮಕ್ಕೆ ಹೋದರೆಂದು ಹೇಳಲಾಗಿದೆ.[][]

ಆಗ ಕಳಚೂರ್ಯ ಬಿಜ್ಜಳನ ಬಳಿ ದಂಡಾಧೀಶನಾಗಿದ್ದ ಇವರ ಸೋದರಮಾವ ಬಲದೇವ ತನ್ನ ಒಬ್ಬಳೇ ಮಗಳು ಗಂಗಾಂಬಿಕೆಯನ್ನು ಕೊಟ್ಟು ಮದುವೆ ಮಾಡಿದರು. ನಂತರ ಬಸವೇಶ್ವರರು ಬಿಜ್ಜಖನ ಇನ್ನೊಬ್ಬ ದಂಡನಾಯಕ ಸಿದ್ಧರಸನ ಮಗಳು ನೀಲಾಂಬಿಕೆಯನ್ನು ವರಿಸಿದರು. ಬಿಜ್ಜಳನ ಭಂಡಾರದ ಮಂತ್ರಿಯಾಗಿ, ಹಲವು ಕ್ರಾಂತಿಕಾರಿ ಕ್ರಮಕೈಗೊಂಡ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಕಲ್ಪನೆ ಜೀವನಾದರ್ಶವಾಗಿದೆ.

ವಚನಕಾರರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಬಸವಣ್ಣನವರ ಜನ್ಮಭೂಮಿ ಇಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಬಾಗೇವಾಡಿಯಿಂದ ಬಸವನ ಬಾಗೇವಾಡಿ ಎಂದೇ ಖ್ಯಾತವಾಗಿದೆ. ಇಲ್ಲಿ ಪುರಾತನ ಕಾಲದ ಬಸವೇಶ್ವರ ದೇವಸ್ಥಾನವಿದೆ.[]

ಬಸವನ ಬಾಗೇವಾಡಿ ಪುರಸಭೆ

ಬದಲಾಯಿಸಿ

ಬಸವನ ಬಾಗೇವಾಡಿ ಪುರಸಭೆಯು ೧೯೭೩ ರಲ್ಲಿ ಸ್ಥಾಪನೆಯಾಯಿತು.[] ೨೦೧೧ ರ ಜನಗಣತಿಯ ಪ್ರಕಾರ ಬಸವನ ಬಾಗೇವಾಡಿ ಪುರಸಭೆ ವ್ಯಾಪ್ತಿಯಲ್ಲಿ ೩೫೦೦೦ ಜನಸಂಖ್ಯೆಯನ್ನು ಹೊಂದಿರುತ್ತದೆ. ಬಸವನ ಬಾಗೇವಾಡಿ ಪುರಸಭೆ ವ್ಯಾಪ್ತಿಯಲ್ಲಿ ೨೩ ವಾರ್ಡ್‌ಗಳಿದ್ದು ೨೩ ಚುನಾಯಿತ ಸದಸ್ಯರು ಹಾಗೂ ೫ ನಾಮನಿರ್ದೇಶಿತ ಸದಸ್ಯರಿರುತ್ತಾರೆ. ಬಸವನ ಬಾಗೇವಾಡಿ ಪುರಸಭೆಯ ವ್ಯಾಪ್ತಿಯು ಒಟ್ಟು ೧೦ ಚದರ ಕೀಲೋಮೀಟರ್‌ಗಳಿರುತ್ತದೆ.[] ಶ್ರೀ ಬಸವೇಶ್ವರ ಜನ್ಮಸ್ಥಳವು ಬಸವ ಸ್ಮಾರಕ ಎಂದು ಪ್ರಸಿದ್ದಿ ಪಡೆದಿದೆ. ಇದು ಪುರಸಭೆ ವ್ಯಾಪ್ತಿಯಲ್ಲಿದ್ದು ಈ ಸ್ಥಳವು ಕೂಡಲ ಸಂಗಮ ಅಭಿವೃದ್ದಿ ಪ್ರಾಧಿಕಾರ ಇಲಾಖೆಗೆ ಒಳಪಡುತ್ತದೆ. ಬಸವನ ಬಾಗೇವಾಡಿಯ ಪ್ರಸಿದ್ದವಾದ ಪುರಾತನ ಕಾಲದ ಬಸವೇಶ್ವರ ದೇವಸ್ಥಾನ ಈ ದೇವಾಲಯಕ್ಕೆ ಜನರು ದೇಶ ವಿದೇಶದಿಂದ ಬರುತ್ತಾರೆ ಹಾಗೂ ವರ್ಷಕೊಮ್ಮೆ ನಡೆಯುವ ಜಾತ್ರೆ ಸಮಯದಲ್ಲಿ ಈ ದೇವರನ್ನು ನೋಡಲು ಜನಸಾಗರವೇ ಹರಿದು ಬರುತ್ತದೆ.[]

ಇಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಆಲಮಟ್ಟಿ ಯೋಜನೆ ಏಷ್ಯಾ ಖಂಡದಲ್ಲಿಯೇ ಅತಿದೊಡ್ಡದು.[]

ಭೌಗೋಳಿಕ

ಬದಲಾಯಿಸಿ

ಕರ್ನಾಟಕದ ಉತ್ತರದ ಗಡಿಯಲ್ಲಿರುವ ಬಸವನ ಬಾಗೇವಾಡಿ ತಾಲ್ಲೂಕಿನ ಉತ್ತರಕ್ಕೆ ವಿಜಯಪುರ ತಾಲ್ಲೂಕು, ಪಶ್ಚಿಮಕ್ಕೆ ವಿಜಯಪುರ ತಾಲ್ಲೂಕು ದಕ್ಷಿಣಕ್ಕೆ ಬೀಳಗಿ ತಾಲ್ಲೂಕು ಮತ್ತು ಪೂರ್ವಕ್ಕೆ ಮುದ್ದೇಬಿಹಾಳ ತಾಲ್ಲೂಕು ಇದೆ. ಈ ತಾಲ್ಲೂಕಿನ ವಿಸ್ತೀರ್ಣ ೨೨೨೫ ಚ.ಕಿ.ಮೀ ಮತ್ತು ವಾರ್ಷಿಕ ಮಳೆ ೫೯.೫ ಸೆಂ.ಮೀ. ಇದೆ. ಬಸವನ ಬಾಗೇವಾಡಿ ತಾಲ್ಲೂಕು ೧೪೩ ಹಳ್ಳಿಗಳು, ೩೨ ಗ್ರಾಮ ಪಂಚಾಯತಿಗಳು ಹಾಗೂ ೪ ಹೋಬಳಿಗಳನ್ನೊಳಗೊಂಡಿದೆ.[]

ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ನಿಡಗುಂದಿ ಮತ್ತು ಕೊಲ್ಹಾರ ನಗರಗಳನ್ನು ಹೊಸ ತಾಲ್ಲೂಕನ್ನಾಗಿ ರಚಿಸಿದೆ.

ಹವಾಮಾನ

ಬದಲಾಯಿಸಿ

ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ (ಎಪ್ರೀಲ್‌ನಲ್ಲಿ), ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸ್‍ವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.

ಉಷ್ಣತೆ

ಬದಲಾಯಿಸಿ
  • ಬೇಸಿಗೆ ಕಾಲ - ೩೫ - ೪೨ ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು ಮಳೆಗಾಲ - ೧೮ - ೨೮ ಡಿಗ್ರಿ ಸೆಲ್ಸಿಯಸ್

ಪ್ರತಿ ವರ್ಷ ಮಳೆ ೩೦೦ - ೬೦೦ ಮಿ.ಮೀ ಗಳಷ್ಟು ಆಗಿರುತ್ತದೆ.

ಗಾಳಿಯ ವೇಗ ೧೮.೨ ಕಿ.ಮೀ/ಗಂ (ಜೂನ್), ೧೯.೬ ಕಿ.ಮೀ/ಗಂ (ಜುಲೈ) ಹಾಗೂ ೧೭.೫ ಕಿ.ಮೀ/ಗಂ (ಅಗಸ್ಟ್) ನಷ್ಟು ಇರುತ್ತದೆ.

ಮಳೆ ಮಾಪನ ಕೇಂದ್ರಗಳು

ಬದಲಾಯಿಸಿ

ಆಲಮಟ್ಟಿ , ಹೂವಿನ ಹಿಪ್ಪರಗಿ, ಮನಗೂಳಿ, ಮಟ್ಟಿಹಾಳ ಇವು ಬಸವನ ಬಾಗೇವಾಡಿಯ ಮಳೆ ಮಾಪನ ಕೇಂದ್ರಗಳಾಗಿವೆ.

ಸಾಂಸ್ಕೃತಿಕ

ಬದಲಾಯಿಸಿ

ಇಲ್ಲಿನ ಮುಖ್ಯ ಭಾಷೆ ಕನ್ನಡವಾಗಿದೆ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಇಲ್ಲಿನ ಮುಖ್ಯ ಉದ್ಯೋಗವಾಗಿದೆ. ಜೊತೆಗೆ ಚಡಚಣ, ತಾಂಬಾ, ವಂದಾಲ ಮುಂತಾದ ಗ್ರಾಮಗಳಲ್ಲಿ ನೇಕಾರಿಕೆ ಇದೆ.

ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ, ಶೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಧಾರ್ಮಿಕ ಕೇಂದ್ರಗಳು

ಬದಲಾಯಿಸಿ
  • ಬಸವನ ಬಾಗೇವಾಡಿ - ಬಸವಣ್ಣನವರ ಜನ್ಮಸ್ಥಳವಾಗಿ, ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ.
  • ಇಂಗಳೇಶ್ವರ - ಬಸವಣ್ಣನವರ ತಾಯಿಯ ತವರು ಮನೆಯ ಊರಾಗಿ, ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ.

ಮಸೀದಿಗಳು

ಬದಲಾಯಿಸಿ

ಇಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ಹಬ್ಬಗಳು

ಬದಲಾಯಿಸಿ

ಇಲ್ಲಿ ಪ್ರತಿವರ್ಷ ಶ್ರೀ ಬಸವೇಶ್ವರ ಜಾತ್ರೆ, ಶ್ರೀ ಪಾಂಡುರಂಗ ಸಪ್ತಾಹ (ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಗಣೇಶ ಉತ್ಸವ, ಗೌರಿ ಜಾತ್ರೆ, ಬಸವ ಜಯಂತಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಕೃಷಿ ಬಸವನ ಬಾಗೇವಾಡಿ ತಾಲ್ಲೂಕಿನ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ಆಲಮಟ್ಟಿಯಲ್ಲಿನ ಕೃಷ್ಣಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ ಮತ್ತು ಕಬ್ಬು.

ತೋಟಗಾರಿಕೆ

ಬದಲಾಯಿಸಿ

ತೋಟಗಾರಿಕೆ ಆಧಾರಿತ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಉಳ್ಳಾಗಡ್ಡಿ, ಅರಿಷಿಣ, ಬಾಳೆ, ಇತ್ಯಾದಿ ಬೆಳೆಯುತ್ತಾರೆ.

ನೀರಾವರಿ

ಬದಲಾಯಿಸಿ

ಬಸವನ ಬಾಗೇವಾಡಿ ತಾಲ್ಲೂಕಿನ ಪ್ರತಿಶತ ೩೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ಕೂಡಿದ್ದು, ನೀರಾವರಿ ಸೌಲಭ್ಯ ಒದಗಿಸುತ್ತದೆ.

ಸಂಸ್ಕೃತಿ

ಬದಲಾಯಿಸಿ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು (ಪಟಕ) ಧರಿಸುತ್ತಾರೆ. ಮಹಿಳೆಯರು ಇಳಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ ಲಂಬಾಣಿ ಜನಾಂಗವು ವಿಶೇಷವಾಗಿದೆ.

ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.

ಆರ್ಥಿಕತೆ

ಬದಲಾಯಿಸಿ

ಆರ್ಥಿಕ ವ್ಯವಸ್ಥೆ ಮಧ್ಯಮಗತಿಯಲ್ಲಿದೆ. ಇದರಿಂದಾಗಿ ಬಸವನ ಬಾಗೇವಾಡಿಯು ಆರ್ಥಿಕವಾಗಿ ಹಿಂದುಳಿದಿದೆ.

ವ್ಯಾಪಾರ

ಬದಲಾಯಿಸಿ

ಬಸವನ ಬಾಗೇವಾಡಿ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ.

ಉದ್ಯೋಗ

ಬದಲಾಯಿಸಿ

ಫಲವತ್ತಾದ ಭೂಮಿ ಇದುವುದರಿಂದ ಸುಮಾರು ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ.

ಕೆರೆಗಳು

ಬದಲಾಯಿಸಿ

ರೋಣಿಹಾಳ, ಮಣ್ಣೂರ, ಮನಗೂಳಿ, ಹೂವಿನ ಹಿಪ್ಪರಗಿ, ಅರಳಿಚಂಡಿ, ಮುತ್ತಗಿ, ಕುಪಕಡ್ಡಿ, ಅಗಸಬಾಳ, ಕೂಡಗಿ, ನಾಗವಾಡ, ಮಸೂತಿ, ಕಿರಿಶ್ಯಾಳ, ಸುಳಖೋಡ, ಮುಕಾರ್ತಿಹಾಳ, ಆಸಂಗಿ, ಗರಸಂಗಿ ಇವು ಬಸವನ ಬಾಗೇವಾಡಿಯ ಕೆರೆಗಳಾಗಿವೆ.

ಬಸವನ ಬಾಗೇವಾಡಿ ತಾಲ್ಲೂಕಿನ ಜಿನುಗು ಕೆರೆಗಳು

ಬದಲಾಯಿಸಿ

ಆಕಳವಾಡಿ, ಮಲಘಾಣ, ತಳೇವಾಡ, ಉಕ್ಕಲಿ, ಉಕ್ಕಲಿ ಇಂಗು ಕೆರೆ, ಬೆಳ್ಳುಬ್ಬಿ, ವಡವಡಗಿ, ಮಸೂತಿ, ತಳೇವಾಡ ಇಂಗು ಕೆರೆ, ಕೊಡಗಾನೂರ, ಮುಳವಾಡ, ಇಂಗಳೇಶ್ವರ.

ಆಣೆಕಟ್ಟುಗಳು

ಬದಲಾಯಿಸಿ

ಕಾಲುವೆಗಳು

ಬದಲಾಯಿಸಿ
  • ಜಂಬಗಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ.
  • ಬಳೂತಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ.

ಕೃಷಿ ಮಾರುಕಟ್ಟೆಗಳು

ಬದಲಾಯಿಸಿ
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಸವನ ಬಾಗೇವಾಡಿ
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಗೊಳಸಂಗಿ
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಹೂವಿನ ಹಿಪ್ಪರಗಿ
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ನಿಡಗುಂದಿ

ರೈತ ಸಂಪರ್ಕ ಕೇಂದ್ರಗಳು

ಬದಲಾಯಿಸಿ

ಕೊಲ್ಹಾರ, ಹೂವಿನ ಹಿಪ್ಪರಗಿ ಇವು ಬಸವನ ಬಾಗೇವಾಡಿಯ ರೈತ ಸಂಪರ್ಕ ಕೇಂದ್ರಗಳಾಗಿವೆ.

ಹಾಲು ಉತ್ಪಾದಕ ಘಟಕಗಳು

ಬದಲಾಯಿಸಿ

ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ ಭೂತನಾಳ ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ಇದನ್ನು ವಿಜಯಪುರ ಡೈರಿ ಎಂದೂ ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.

ಬಸವನ ಬಾಗೇವಾಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು

ಬದಲಾಯಿಸಿ

ಅರಳದಿನ್ನಿ, ಬಸವನ ಬಾಗೇವಾಡಿ, ಗೊಳಸಂಗಿ, ಹಣಮಾಪುರ, ಹೆಬ್ಬಾಳ, ಹುಣಶ್ಯಾಳ ಪಿ.ಬಿ., ಹೂವಿನ ಹಿಪ್ಪರಗಿ, ಕಲಗುರ್ಕಿ, ಕಣಕಾಲ, ಕನ್ನಾಳ, ಕವಲಗಿ, ಕೊಲ್ಹಾರ, ಮನಗೂಳಿ, ಮಸೂತಿ, ಮುಳವಾಡ, ಮುತ್ತಗಿ, ನಿಡಗುಂದಿ, ನಾಗರದಿಣ್ಣಿ, ನಂದಿಹಾಳ, ಸಾಸಲಗಿ, ಉಕ್ಕಲಿ, ಯರನಾಳ.

ಬೆಳೆಗಳು

ಬದಲಾಯಿಸಿ

ಆಹಾರ ಬೆಳೆಗಳು

ಬದಲಾಯಿಸಿ

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಅಕ್ಕಿ, ಕಡಲೆ, ತೊಗರಿ ಮತ್ತು ಹೆಸರು ಇತ್ಯಾದಿ.

ವಾಣಿಜ್ಯ ಬೆಳೆಗಳು

ಬದಲಾಯಿಸಿ

ದ್ರಾಕ್ಷಿ, ದಾಳಿಂಬೆ, ಚಿಕ್ಕು, ನಿಂಬೆ, ಮಾವು, ಬಾಳೆ, ಬಾರಿಹಣ್ಣು, ಕಬ್ಬು, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ (ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದಲಾಯಿಸಿ

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೂಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತ್ತಂಬರಿ ಇತ್ಯಾದಿ.

ಸಸ್ಯಗಳು

ಬದಲಾಯಿಸಿ

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ ಇಲ್ಲಿ ಕಂಡುಬರುವ ಮರಗಳಾಗಿವೆ.

ಪ್ರಾಣಿಗಳು

ಬದಲಾಯಿಸಿ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ ಇಲ್ಲಿ ಕಂಡುಬರುವ ಪ್ರಾಣಿಗಳಾಗಿವೆ.

ಸಾಕ್ಷರತೆ

ಬದಲಾಯಿಸಿ

ಸಾಕ್ಷರತೆಯು ೨೦೧೧ ವರ್ಷದ ಪ್ರಕಾರ ೬೭%. ಅದರಲ್ಲಿ ೭೭% ಪುರುಷರು ಹಾಗೂ ೫೬% ಮಹಿಳೆಯರು ಸಾಕ್ಷರತೆ ಹೊಂದಿದ್ದಾರೆ.[]

ಶಿಕ್ಷಣ

ಬದಲಾಯಿಸಿ

ಪ್ರಮುಖ ಶಿಕ್ಷಣ ಸಂಸ್ಥೆಗಳು

  • ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಬಸವನ ಬಾಗೇವಾಡಿ
  • ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಬಸವನ ಬಾಗೇವಾಡಿ
  • ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಬಸವನ ಬಾಗೇವಾಡಿ
  • ಸರಕಾರಿ ಉರ್ದು ಪ್ರೌಡ ಶಾಲೆ, ಬಸವನ ಬಾಗೇವಾಡಿ
  • ಲಯನ್ಸ್ ಶಾಲೆ, ಬಸವನ ಬಾಗೇವಾಡಿ
  • ಸರಕಾರಿ ಪ್ರೌಡ ಶಾಲೆ, ಬಸವನ ಬಾಗೇವಾಡಿ
  • ಕಿತ್ತೂರ ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಪ್ರಾಥಮಿಕ ಮತ್ತು ಪ್ರೌಡ ಶಾಲೆ, ಬಸವನ ಬಾಗೇವಾಡಿ
  • ಮೂರಾರ್ಜಿ ದೇಸಾಯಿ ವಸತಿ ಪ್ರಾಥಮಿಕ ಮತ್ತು ಪ್ರೌಡ ಶಾಲೆ, ಬಸವನ ಬಾಗೇವಾಡಿ
  • ನೂತನ ಪ್ರೌಡ ಶಾಲೆ, ಬಸವನ ಬಾಗೇವಾಡಿ
  • ಸರ್ವೋದಯ ಪ್ರೌಡ ಶಾಲೆ, ಬಸವನ ಬಾಗೇವಾಡಿ
  • ಸರಕಾರಿ ಶ್ರೀ ಬಸವೇಶ್ವರ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ
  • ಸರಕಾರಿ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ
  • ಶ್ರೀ ಸಿದ್ದೇಶ್ವರ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ
  • ಬಿ.ಎಲ್.ಡಿ.ಈ.ಎ. ಶ್ರೀ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ
  • ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಬಸವನ ಬಾಗೇವಾಡಿ
  • ಶ್ರೀ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಗೊಳಸಂಗಿ, ಬಸವನ ಬಾಗೇವಾಡಿ
  • ಶ್ರೀ ಎಮ್.ವಿ.ನಾಗಠಾಣ ಕಲಾ ಮಹಾವಿದ್ಯಾಲಯ, ನಿಡಗುಂದಿ, ಬಸವನ ಬಾಗೇವಾಡಿ
  • ಶ್ರೀ ಸಂಗನಬಸವೇಶ್ವರ ಕಲಾ ಮಹಾವಿದ್ಯಾಲಯ, ಮಸೂತಿ-ಕೂಡಗಿ, ಬಸವನ ಬಾಗೇವಾಡಿ
  • ಶ್ರೀ ಕಾಳಿಕಾದೇವಿ ವಿದ್ಯಾಸಂಸ್ಥೆಯ ಶ್ರೀ ವಿಶ್ವಕರ್ಮ ಕಲಾ ಮಹಾವಿದ್ಯಾಲಯ, ಹೂವಿನ ಹಿಪ್ಪರಗಿ, ಬಸವನ ಬಾಗೇವಾಡಿ
  • ಶ್ರೀ ಸದ್ಗುರು ಸಿದ್ದಾರೂಢ ಮಹಾಸ್ವಾಮಿಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಹೂವಿನ ಹಿಪ್ಪರಗಿ, ಬಸವನ ಬಾಗೇವಾಡಿ
  • ಶ್ರೀ ಆರ್.ಎಸ್.ವಿ.ಎಲ್.ಬಿ. ಚಿತ್ರಕಲಾ ಶಾಲೆ, ಹೂವಿನ ಹಿಪ್ಪರಗಿ, ಬಸವನ ಬಾಗೇವಾಡಿ
  • ಜನತಾ ಶಿಕ್ಷಣ ಸಮಿತಿಯ ಶ್ರೀ ಬಿ.ಎಸ್.ಪಾಟೀಲ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಮನಗೂಳಿ, ಬಸವನ ಬಾಗೇವಾಡಿ
  • ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಕೈಗಾರಿಕಾ ತರಬೇತಿ ಕೇಂದ್ರ, ಬಸವನ ಬಾಗೇವಾಡಿ
  • ಶ್ರೀ ನಂದೀಶ್ವರ ಕೈಗಾರಿಕಾ ತರಬೇತಿ ಕೇಂದ್ರ, ಬಸವನ ಬಾಗೇವಾಡಿ
  • ಶ್ರೀ ಸಂಗಮೇಶ್ವರ ಕೈಗಾರಿಕಾ ತರಬೇತಿ ಕೇಂದ್ರ, ಬಸವನ ಬಾಗೇವಾಡಿ
  • ಜಿ.ವಿ.ವಿ.ಎಸ್. ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ನಿಡಗುಂದಿ, ಬಸವನ ಬಾಗೇವಾಡಿ
  • ಜನತಾ ಶಿಕ್ಷಣ ಸಮಿತಿಯ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಮನಗೂಳಿ, ಬಸವನ ಬಾಗೇವಾಡಿ
  • ಶ್ರೀ ಸಂಗಮೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಕೊಲ್ಹಾರ, ಬಸವನ ಬಾಗೇವಾಡಿ
  • ಹರ್ಡೆಕರ ಮಂಜಪ್ಪ್ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಆಲಮಟ್ಟಿ, ಬಸವನ ಬಾಗೇವಾಡಿ
  • ನಂದಿ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಬಸವನ ಬಾಗೇವಾಡಿ
  • ಜಿ.ವಿ.ವಿ.ಎಸ್. ಪ್ರೌಢ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ನಿಡಗುಂದಿ, ಬಸವನ ಬಾಗೇವಾಡಿ

ಪ್ರಮುಖ ವ್ಯಕ್ತಿಗಳು

ಬದಲಾಯಿಸಿ

ರಾಜಕೀಯ

ಬದಲಾಯಿಸಿ

ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ೮ ವಿಧಾನ ಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ೨೦೧೮ ರಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ೧,೦೧,೩೪೫ ಪುರುಷರು ಹಾಗೂ ೯೫,೦೪೪ ಮಹಿಳೆಯರು ಸೇರಿ ಒಟ್ಟು ೧,೯೬,೩೮೯ ಮತದಾರರಿದ್ದಾರೆ.[೧೦]

ಕ್ಷೇತ್ರದ ಇತಿಹಾಸ

ಬದಲಾಯಿಸಿ

ಬಸವನ ಬಾಗೇವಾಡಿ ಎಂದೊಡನೆ ನೆನಪಾಗುವುದು ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಇದು ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ. ೧೨ ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲಸಂಗಮ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು.

ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಆಲಮಟ್ಟಿ ಜಲಾಶಯದಿಂದಾಗಿ ಜಮೀನು, ಮನೆ ಕಳೆದುಕೊಂಡವರು ನೂರಾರು ಜನ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರದಲ್ಲಿ ಲಂಬಾಣಿ ಜನರನ್ನೂ ಕಾಣಬಹುದು.

ನೀರಾವರಿ ಈ ಕ್ಷೇತ್ರದ ಬಹು ದೊಡ್ಡ ಬಲವಾದರೆ, ನೀರಾವರಿ ಹಾಗೂ ವಿದ್ಯುತ್‌ ಯೋಜನೆಗಳಿಗೆ ಭೂಮಿ ಕಳೆದುಕೊಂಡು ಸಂತ್ರಸ್ತರ ಸಮಸ್ಯೆಯೇ ಇಲ್ಲಿನ ಬಲಹೀನತೆ. ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲಬಹದ್ದೂರ ಶಾಸ್ತ್ರಿ ಜಲಾಶಯ ಇರುವುದು ಇದೇ ಕ್ಷೇತ್ರದ ಆಲಮಟ್ಟಿಯಲ್ಲಿ. ಸಂತ್ರಸ್ತರ ಪುನರ್ವಸತಿ ಕೇಂದ್ರಗಳು ಅಭಿವೃದ್ಧಿಗೆ ಕಾಯುತ್ತಿವೆ. ಈಚೆಗಷ್ಟೇ ತಲೆ ಎತ್ತಿರುವ ದೇಶಕ್ಕೆ ಬೆಳಕು ನೀಡುವ ಮಹತ್ವಾಕಾಂಕ್ಷೆಯ ಎನ್‌ಟಿಪಿಸಿ ಕೂಡಗಿ ಯೋಜನೆ ಕೂಡ ಈ ಕ್ಷೇತ್ರದಲ್ಲೇ ಇದೆ. ಪರಿಸರಕ್ಕೆ ಹಾನಿ ಎಂಬ ಕಾರಣಕ್ಕೆ ಈ ಯೋಜನೆ ವಿರೋಧಿಸಿ ರೈತರು ಗುಂಡೇಟು ತಿಂದಿದ್ದು, ನೂರಾರು ರೈತರು ಜೈಲು ಪಾಲಾಗಿ ಕೋರ್ಟ್‌ ಅಲೆಯುತ್ತಿದ್ದರು. ಈಚೆಗಷ್ಟೇ ಈ ರೈತರ ಮೇಲಿನ ಮೊಕದ್ದಮೆ ಹಿಂಪಡೆಯುವ ಮೂಲಕ ಸರ್ಕಾರ ರೈತರಿಗೆ ಸಂಕಷ್ಟದಿಂದ ಮುಕ್ತಿ ನೀಡಿದೆ.

ಇಂಥ ನೆಲಕ್ಕೆ ಒಂದೂವರೆ ದಶಕದ ಹಿಂದೆ ಕಾಲಿಟ್ಟವರು ತಿಕೋಟಾ ಕ್ಷೇತ್ರದಲ್ಲಿ ಜನತಾದಳ ಹಾಗೂ ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿದ್ದ ಶಿವಾನಂದ ಪಾಟೀಲ. ಈ ಕ್ಷೇತ್ರದಿಂದಲೂ ಮೂರು ಬಾರಿ ಶಾಸಕರಾಗಿರುವ ಶಿವಾನಂದ ಪಾಟೀಲ ಅವರು ಐದು ಬಾರಿ ಶಾಸಕರಾಗಿ ಸಚಿವರಾಗಿದ್ದಾರೆ. ಇದೇ ಕ್ಷೇತ್ರದಿಂದ ಸೋಮನಗೌಡ(ಅಪ್ಪು) ಪಾಟೀಲ ಅವರ ತಂದೆ ಬಿ.ಎಸ್‌.ಪಾಟೀಲ(ಮನಗೂಳಿ) ಅವರನ್ನು ೬ ಬಾರಿ ಆಯ್ಕೆ ಮಾಡಿದ್ದ ಕ್ಷೇತ್ರದ ಮತದಾರರು, ಅವರು ಸಚಿವರಾಗಲು ನೆರವಾಗಿದ್ದರು.[೧೧]

ಮಾಜಿ ಸಿಎಂ ಬಂಗಾರಪ್ಪ ಅವರ ಕೆಸಿಪಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಸಂಗಪ್ಪ ಕಲ್ಲಪ್ಪ ಬೆಳ್ಳುಬ್ಬಿ ಬಿಜೆಪಿ ಸೇರುವ ಮೂಲಕ ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್‌ ಅನ್ನು ಸೋಲಿಸಿ ಎರಡು ಬಾರಿ ಗೆದ್ದವರು.[೧೨] ತಮ್ಮ ಮೂಲಕ ಬಿಜೆಪಿ ಖಾತೆ ತೆರೆದ ಎಸ್‌.ಕೆ. ಬೆಳ್ಳುಬ್ಬಿ ಅಪ್ಪಟ ಹಳ್ಳಿ ಸೊಗಡಿನ ರಾಜಕೀಯ ನಾಯಕ. ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಪಂಚಾಯಿತಿ ಮಟ್ಟದಿಂದಲೇ ವಿಧಾನಸಭೆ ತನಕ ರಾಜಕಾರಣದಲ್ಲಿ ಯಶಸ್ಸು ಕಂಡವರು. ೧೯೭೮ ರಲ್ಲಿ ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾದ ಬೆಳ್ಳುಬ್ಬಿ, ೧೯೮೩ ರಲ್ಲಿ ಕೊಲ್ಹಾರ ಗ್ರಾ.ಪಂ ಅಧ್ಯಕ್ಷರಾಗಿದ್ದರು. ೧೯೮೭ ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಮಂಡಲ ಪ್ರಧಾನ ಹುದ್ದೆಯನ್ನೂ ಗಿಟ್ಟಿಸಿಕೊಂಡರು. ೧೯೯೪ ರಲ್ಲಿ ಕೆಸಿಪಿ ಪಕ್ಷದಿಂದ ಬಸವನಬಾಗೇವಾಡಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸುವ ಮೊದಲ ಪ್ರಯತ್ನ ಫಲಿಸಲಿಲ್ಲ. ಮತ್ತೆ ೧೯೯೯ ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಬೆಳ್ಳುಬ್ಬಿ ಶಾಸಕರಾಗಿ ಆಯ್ಕೆಯಾದರು. ೨೦೦೮ ರಲ್ಲಿ ೨ ನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕೆಲ ತಿಂಗಳು ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು. ೨೦೦೪ ಹಾಗೂ ೨೧೦೩ ರ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ.

೧೩ ಚುನಾವಣೆ ಕಂಡಿರುವ ಬಸವ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ ೮ ಬಾರಿ ಗೆದ್ದಿರುವ ಕಾಂಗ್ರೆಸ್‌, ಒಂದು ಬಾರಿ ಅಂಗ ಪಕ್ಷ ಕಾಂಗ್ರೆಸ್‌-ಐ ಅಭ್ಯರ್ಥಿಯನ್ನೂ ಆಯ್ಕೆ ಮಾಡಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿದೆ. ಕ್ಷೇತ್ರಕ್ಕೆ ನಡೆದ ಮೊದಲ ಎರಡು ಚುನಾವಣೆಯಲ್ಲಿ ಸುಶೀಲಾಬಾಯಿ ಶಹಾ ಎಂಬ ಮಹಿಳೆ ಗೆದ್ದಿರುವುದು ವಿಶೇಷ. ಮಹಿಳಾ ಸಮಾನತೆ ಹರಿಕಾರ ಬಸವ ಜನ್ಮಭೂಮಿ ಜನರು ಮಹಿಳೆಯನ್ನು ಆಯ್ಕೆ ಮಾಡಿದ್ದೇ ಬಸವ ತತ್ವಕ್ಕೆ ಆದ್ಯತೆ ನೀಡಿದ್ದಕ್ಕೆ ಸಾಕ್ಷಿ. ವ್ಯಕ್ತಿ ಪೂಜೆಗೆ ಆದ್ಯತೆ ನೀಡಿರುವ ಈ ಕ್ಷೇತ್ರ ಮನಗೂಳಿಯ ಬಿ.ಎಸ್‌. ಪಾಟೀಲ ಅವರನ್ನು ೬ ಬಾರಿ ವಿಧಾನಸೌಧಕ್ಕೆ ಕಳಿಸಿದ್ದು, ಎಸ್‌.ಕೆ.ಬೆಳ್ಳುಬ್ಬಿ ಅವರ ಮೂಲಕ ಬಿಜೆಪಿ ಎರಡು ಬಾರಿ ಇಲ್ಲಿ ನೆಲೆ ಕಂಡುಕೊಂಡಿದೆ. ಕುಮಾರಗೌಡ ಪಾಟೀಲ ಸೇರಿ ಇಬ್ಬರು ಈ ಕ್ಷೇತ್ರದಲ್ಲಿ ಜನತಾಪಕ್ಷದಿಂದ ಗೆದ್ದಿದ್ದಾರೆ.

ಕ್ಷೇತ್ರದ ವಿಶೇಷತೆ

ಬದಲಾಯಿಸಿ
  • ಕಾಂಗ್ರೇಸಿನ ಬಿ.ಎಸ್.ಪಾಟೀಲ(ಮನಗೂಳಿ)ರು ೬ ಸಲ ಆಯ್ಕೆಯಾಗಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ನೀರಾವರಿ ಸಚಿವರಾಗಿದ್ದರು.
  • ಕ್ಷೇತ್ರದಿಂದ ೧೯೫೭ ಮತ್ತು ೧೯೬೨ ರಲ್ಲಿ ಕಾಂಗ್ರೇಸಿನಿಂದ ಸುಶಿಲಾಬಾಯಿ ಶಹಾ ಅವರನ್ನು ಆಯ್ಕೆ ಮಾಡಿ ವಿಜಯಪುರ ಜಿಲ್ಲೆಯ ಪ್ರಪ್ರಥಮ ಮಹಿಳಾ ಶಾಸಕಿಯಾಗಿದ್ದರು.
  • ಬಿಜೆಪಿಯಿಂದ ಎಸ್.ಕೆ.ಬೆಳ್ಳುಬ್ಬಿಯವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ೨೦೦೮ ರಲ್ಲಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿದ್ದರು.
  • ಕ್ಷೇತ್ರದಿಂದ ಕಾಂಗ್ರೇಸಿನ ಶಿವಾನಂದ ಪಾಟೀಲ ಮೂರು ಬಾರಿ ಆಯ್ಕೆಯಾಗಿ ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದರು.

ಜನಪ್ರತಿನಿಧಿಗಳ ವಿವರ

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತ ಪಕ್ಷ ಮತಗಳು ಉಪಾಂತ ವಿಜೇತ ಪಕ್ಷ ಮತಗಳು
ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
೨೦೧೮ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಶಿವಾನಂದ ಪಾಟೀಲ ಕಾಂಗ್ರೇಸ್ ೫೮೬೪೭ ಅಪ್ಪು ಪಾಟೀಲ(ಮನಗೂಳಿ) ಜೆಡಿಎಸ್ ೫೫೪೬೧
೨೦೧೩ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಶಿವಾನಂದ ಪಾಟೀಲ ಕಾಂಗ್ರೇಸ್ ೫೬೩೨೯ ಎಸ್.ಕೆ.ಬೆಳ್ಳುಬ್ಬಿ ಬಿ.ಜೆ.ಪಿ ೩೬೬೫೩
೨೦೦೮ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಎಸ್.ಕೆ.ಬೆಳ್ಳುಬ್ಬಿ ಬಿ.ಜೆ.ಪಿ ೪೮೪೮೧ ಶಿವಾನಂದ ಪಾಟೀಲ ಕಾಂಗ್ರೇಸ್ ೩೪೫೯೪
೨೦೦೪ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಶಿವಾನಂದ ಪಾಟೀಲ ಕಾಂಗ್ರೇಸ್ ೫೦೨೩೮ ಎಸ್.ಕೆ.ಬೆಳ್ಳುಬ್ಬಿ ಬಿ.ಜೆ.ಪಿ ೪೬೯೩೩
೧೯೯೯ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಎಸ್.ಕೆ.ಬೆಳ್ಳುಬ್ಬಿ ಬಿ.ಜೆ.ಪಿ ೫೦೫೪೩ ಬಿ.ಎಸ್.ಪಾಟೀಲ(ಮನಗೂಳಿ) ಕಾಂಗ್ರೇಸ್ ೪೦೪೮೭
೧೯೯೪ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) ಕಾಂಗ್ರೇಸ್ ೨೭೫೫೭ ಕುಮಾರಗೌಡ ಪಾಟೀಲ ಜೆ.ಡಿ ೧೯೨೭೦
೧೯೮೯ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) ಕಾಂಗ್ರೇಸ್ ೩೭೮೬೮ ಕುಮಾರಗೌಡ ಪಾಟೀಲ ಜೆ.ಡಿ ೨೫೨೩೫
೧೯೮೫ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಕುಮಾರಗೌಡ ಪಾಟೀಲ ಜೆ.ಎನ್.ಪಿ ೨೯೩೨೦ ಭೀಮನಗೌಡ ಪಾಟೀಲ ಕಾಂಗ್ರೇಸ್ ೨೩೭೪೪
೧೯೮೩ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) ಕಾಂಗ್ರೇಸ್ ೩೪೩೮೬ ರಾಜಶೇಖರ ಪಟ್ಟಣಶೆಟ್ಟಿ ಬಿಜೆಪಿ ೧೫೫೭೭
೧೯೭೮ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) ಜೆ.ಎನ್.ಪಿ ೨೭೮೦೬ ಬಸವಂತರಾಯ ಪಾಟೀಲ ಕಾಂಗ್ರೇಸ್ ೧೬೦೪೮
ಬಾಗೇವಾಡಿ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
೧೯೭೨ ಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) ಎನ್.ಸಿ.ಓ ೨೩೦೬೧ ಜಿ.ವಿ.ಪಾಟೀಲ ಕಾಂಗ್ರೇಸ್ ೧೬೨೫೦
೧೯೬೭ ಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಿ.ಎಸ್.ಪಾಟೀಲ(ಮನಗೂಳಿ) ಕಾಂಗ್ರೇಸ್ ೨೫೧೭೩ ಜಿ.ಬಿ.ಈರಯ್ಯ ಸ್ವತಂತ್ರ ೨೭೫೯
೧೯೬೨ ಬಾಗೇವಾಡಿ ವಿಧಾನಸಭಾ ಕ್ಷೇತ್ರ ಸುಶಿಲಾಬಾಯಿ ಶಹಾ ಕಾಂಗ್ರೇಸ್ ೧೨೩೬೫ ರಾಮನಗೌಡ ಪಾಟೀಲ ಸ್ವತಂತ್ರ ೬೧೧೩
೧೯೫೭ ಬಾಗೇವಾಡಿ ವಿಧಾನಸಭಾ ಕ್ಷೇತ್ರ ಸುಶಿಲಾಬಾಯಿ ಶಹಾ ಕಾಂಗ್ರೇಸ್ ೧೧೯೪೧ ರಾಮಣ್ಣ ಕಲ್ಲೂರ ಸ್ವತಂತ್ರ ೪೮೮೩
ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
೧೯೫೧ ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ ಶಂಕರಗೌಡ ಪಾಟೀಲ ಕಾಂಗ್ರೇಸ್ ೧೭೭೫೨ ಸಾವಳಗೆಪ್ಪ ನಂದಿ ಕೆಎಂಪಿಪಿ ೫೫೦೭

ಆರೋಗ್ಯ

ಬದಲಾಯಿಸಿ

ಬಸವನ ಬಾಗೇವಾಡಿ ನಗರದಲ್ಲಿ ಸರಕಾರಿ ತಾಲ್ಲೂಕು ಆಸ್ಪತ್ರೆಯಿದೆ.

ವಿದ್ಯುತ್ ಪರಿವರ್ತನಾ ಕೇಂದ್ರಗಳು

ಬದಲಾಯಿಸಿ

ಬಸವನ ಬಾಗೇವಾಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು

  • ಆಲಮಟ್ಟಿ ಜಲ ವಿದ್ಯುತ್ ಸ್ಥಾವರ, ಆಲಮಟ್ಟಿ, ಬಸವನ ಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ.
  • ಕೂಡಗಿ ಉಷ್ಣ ವಿದ್ಯುತ್ ಸ್ಥಾವರ, ಕೂಡಗಿ, ಬಸವನ ಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ.
  • ೨೨೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಸವನ ಬಾಗೇವಾಡಿ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಸವನ ಬಾಗೇವಾಡಿ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮಟ್ಟಿಹಾಳ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮುಕಾರ್ತಿಹಾಳ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮುತ್ತಗಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಹೂವಿನ ಹಿಪ್ಪರಗಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮನಗೂಳಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ನಿಡಗುಂದಿ

ಬ್ಯಾಂಕ್‍ಗಳು

ಬದಲಾಯಿಸಿ
  • ವಿಜಯ ಬ್ಯಾಂಕ್, ಬಸವನ ಬಾಗೇವಾಡಿ
  • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಬಸವನ ಬಾಗೇವಾಡಿ
  • ಡಿ.ಸಿ.ಸಿ. ಬ್ಯಾಂಕ್, ಬಸವನ ಬಾಗೇವಾಡಿ
  • ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್, ಬಸವನ ಬಾಗೇವಾಡಿ
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಸವನ ಬಾಗೇವಾಡಿ
  • ಸಿಂಡಿಕೇಟ್ ಬ್ಯಾಂಕ್, ಬಸವನ ಬಾಗೇವಾಡಿ
  • ಕಾರ್ಪೋರೇಶನ್ ಬ್ಯಾಂಕ್, ಬಸವನ ಬಾಗೇವಾಡಿ
  • ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್, ಬಸವನ ಬಾಗೇವಾಡಿ, ವಿಜಯಪುರ
  • ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್, ನಿಡಗುಂದಿ, ಬಸವನ ಬಾಗೇವಾಡಿ, ವಿಜಯಪುರ


ಖಜಾನೆ ಕಚೇರಿಗಳು

ಬದಲಾಯಿಸಿ
  • ಬಸವನಬಾಗೇವಾಡಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)

ಬದಲಾಯಿಸಿ

ಅರೇಶಂಕರ, ಬಸವನ ಬಾಗೇವಾಡಿ, ಬಳೂತಿ, ಬೇನಾಳ, ಬೊಮ್ಮನಹಳ್ಳಿ, ಬ್ಯಾಕೋಡ, ಚಿಮ್ಮಲಗಿ, ಡೋಣೂರ, ಗೊಳಸಂಗಿ, ಗೋನಾಳ, ಗುಡದಿನ್ನಿ, ಗುಳಬಾಳ, ಹಳೆರೊಳ್ಳಿ, ಹಂಗರಗಿ, ಹತ್ತರಕಿಹಾಳ, ಹೆಬ್ಬಾಳ, ಹುಣಶ್ಯಾಳ ಪಿ.ಬಿ., ಹೂವಿನ ಹಿಪ್ಪರಗಿ, ಇಂಗಳೇಶ್ವರ, ಇವಣಗಿ, ಕಲಗುರ್ಕಿ, ಕಣಕಾಲ, ಕೊಲ್ಹಾರ, ಕುಪಕಡ್ಡಿ, ಕುದರಿ ಸಾಲವಾಡಗಿ, ಮಲಘಾಣ, ಮನಗೂಳಿ, ಮಣ್ಣೂರ, ಮಸಬಿನಾಳ, ಮಸೂತಿ, ಮಟ್ಟಿಹಾಳ, ಮುಳವಾಡ, ಮುತ್ತಗಿ, ನಿಡಗುಂದಿ, ರಬಿನಾಳ, ರೋಣಿಹಾಳ, ಸಾಸನೂರ, ಸಾತಿಹಾಳ, ಸೋಲವಾಡಗಿ, ಸೋಮನಾಳ, ಟಕ್ಕಳಕಿ, ತಳೇವಾಡ, ತೆಲಗಿ, ಉಕ್ಕಲಿ, ವಡವಡಗಿ, ಯಾಳವಾರ ಇವು ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಾಗಿವೆ.

ಪಟ್ಟಣ ಪಂಚಾಯತಿಗಳು

ಬದಲಾಯಿಸಿ
  • ಬಸವನ ಬಾಗೇವಾಡಿ

ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು

ಬದಲಾಯಿಸಿ

ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು ಇಂತಿವೆ.[೧೩]

ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು

ಬದಲಾಯಿಸಿ

ಆಲಮಟ್ಟಿ , ಅರಷಣಗಿ, ಬೀರಲದಿನ್ನಿ, ಬ್ಯಾಕೋಡ, ಚಿಮ್ಮಲಗಿ, ದಿಂಡವಾರ, ಡೋಣುರ, ಗೊಳಸಂಗಿ, ಹೂವಿನ ಹಿಪ್ಪರಗಿ, ಹಣಮಾಪುರ, ಹೆಬ್ಬಾಳ, ಹುಣಶ್ಯಾಳ ಪಿ.ಬಿ., ಇಂಗಳೇಶ್ವರ, ಇಟಗಿ, ಕುದರಿ ಸಾಲವಾಡಗಿ, ಕಣಕಾಲ, ಕೋಲ್ಹಾರ, ಕೂಡಗಿ, ಮಲಘಾಣ, ಮನಗೂಳಿ, ಮಣ್ಣೂರ, ಮಾರ್ಕಬ್ಬಿನಹಳ್ಳಿ, ಮಸಬಿನಾಳ, ಮಸೂತಿ, ಮುಳವಾಡ, ಮುತ್ತಗಿ, ನರಸಲಗಿ, ನಿಡಗುಂದಿ, ರೋಣಿಹಾಳ, ಸಾಸನೂರ, ಸಾತಿಹಾಳ, ತಳೇವಾಡ, ತೆಲಗಿ, ಉಕ್ಕಲಿ, ವಡವಡಗಿ, ವಂದಾಲ, ಯಾಳವಾರ, ಯರನಾಳ ಇವು ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳಾಗಿವೆ.[೧೪]

ಬಸವನ ಬಾಗೇವಾಡಿ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು

ಬದಲಾಯಿಸಿ

ಮನಗೂಳಿ, ಹೂವಿನ ಹಿಪ್ಪರಗಿ, ಕೊಲ್ಹಾರ, ನಿಡಗುಂದಿ, ಬಸವನ ಬಾಗೇವಾಡಿಯಲ್ಲಿ ಬಸವನ ಬಾಗೇವಾಡಿ ತಾಲ್ಲೂಕಿನ ನೆಮ್ಮದಿ ಕೇಂದ್ರಗಳಿವೆ.

ನಾಡ ಕಚೇರಿಗಳು

ಬದಲಾಯಿಸಿ
 
ಬಸವನ ಬಾಗೇವಾಡಿ ತಾಲ್ಲೂಕು

ಹೂವಿನ ಹಿಪ್ಪರಗಿಯಲ್ಲಿ ಬಸವನ ಬಾಗೇವಾಡಿ ತಾಲ್ಲೂಕಿನ ನಾಡ ಕಚೇರಿ ಇದೆ.

ಕಂದಾಯ ಕಚೇರಿಗಳು

ಬದಲಾಯಿಸಿ

ಹೂವಿನ ಹಿಪ್ಪರಗಿ, ಕೊಲ್ಹಾರ, ನಿಡಗುಂದಿ, ಬಸವನ ಬಾಗೇವಾಡಿಯಲ್ಲಿ ಬಸವನ ಬಾಗೇವಾಡಿ ತಾಲ್ಲೂಕಿನ ಕಂದಾಯ ಕಚೇರಿಗಳಿವೆ.

ತಾಲ್ಲೂಕು ಪಂಚಾಯತಿ

ಬದಲಾಯಿಸಿ

ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಒಟ್ಟು ೨೮ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.

ಬಸವನ ಬಾಗೇವಾಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು

ಜಿಲ್ಲಾ ಪಂಚಾಯತಿ

ಬದಲಾಯಿಸಿ

ಬಸವನ ಬಾಗೇವಾಡಿ ತಾಲ್ಲೂಕಿನ ಜಿಲ್ಲಾ ಪಂಚಾಯತಿ ಚುನಾವಣಾ ಕ್ಷೇತ್ರಗಳು

ಬಸವನ ಬಾಗೇವಾಡಿ ತಾಲ್ಲೂಕಿನ ಆರಕ್ಷಕ (ಪೋಲಿಸ್) ಠಾಣೆಗಳು

ಬದಲಾಯಿಸಿ

ಅಗ್ನಿಶಾಮಕ ಠಾಣೆಗಳು

ಬದಲಾಯಿಸಿ

ಬಸವನ ಬಾಗೇವಾಡಿಯಲ್ಲಿ ಅಗ್ನಿಶಾಮಕ ಠಾಣೆ ಇದೆ.

ನ್ಯಾಯಾಲಯಗಳು

ಬದಲಾಯಿಸಿ

ತಾಲೂಕು ಸಿವಿಲ್ ನ್ಯಾಯಾಲಯವು ಬಸವನ ಬಾಗೇವಾಡಿಯಲ್ಲಿ ಇದೆ.

ಸಕ್ಕರೆ ಕಾರ್ಖಾನೆಗಳು

ಬದಲಾಯಿಸಿ
  • ಕೊಲ್ಹಾರ ಸಕ್ಕರೆ ಕಾರ್ಖಾನೆ, ತಡಲಗಿ, ಬಸವನ ಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳು

ಬದಲಾಯಿಸಿ

ಕೂಡಗಿ, ಮನಗೂಳಿ, ನಿಡಗುಂದಿ, ಕುದರಿ ಸಾಲವಾಡಗಿ, ತೆಲಗಿ, ರೋಣಿಹಾಳ, ಉಕ್ಕಲಿ, ವಡವಡಗಿ, ಗೊಳಸಂಗಿ, ಕೊಲ್ಹಾರ, ಮುಳವಾಡ, ಯಾಳವಾರ, ಸಾಸನೂರ, ಹೂವಿನ ಹಿಪ್ಪರಗಿ ಇಲ್ಲಿ ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ.

ಪಶು ಆಸ್ಪತ್ರೆಗಳು

ಬದಲಾಯಿಸಿ

ಬಸವನ ಬಾಗೇವಾಡಿಯಲ್ಲಿ ಪಶು ಆಸ್ಪತ್ರೆ ಕೂಡ ಇದೆ.

ಪಶು ಚಿಕಿತ್ಸಾಲಯಗಳು

ಬದಲಾಯಿಸಿ

ನಿಡಗುಂದಿ, ಮನಗೂಳಿ, ಹೂವಿನ ಹಿಪ್ಪರಗಿ, ಕೂಡಗಿ, ವಂದಾಲ, ಕೊಲ್ಹಾರ, ನರಸಲಗಿ, ಗೊಳಸಂಗಿ, ಸಾಸನೂರ, ಉಕ್ಕಲಿ, ತೆಲಗಿ, ಮುಳವಾಡ, ಮಸಬಿನಾಳ, ಮುತ್ತಗಿ.

ಪ್ರಾಥಮಿಕ ಪಶು ಚಿಕಿತ್ಸಾಲಯಗಳು

ಬದಲಾಯಿಸಿ

ಇಂಗಳೇಶ್ವರ, ಮಲಘಾಣ, ಡೋಣುರ, ಯಾಳವಾರ, ಸಾತಿಹಾಳ, ವಡವಡಗಿ, ಬಿಸನಾಳ.

ಉಚಿತ ಪ್ರಸಾದನಿಲಯಗಳು

ಬದಲಾಯಿಸಿ

ಬಸವನ ಬಾಗೇವಾಡಿ, ಹೆಬ್ಬಾಳ, ಹೂವಿನ ಹಿಪ್ಪರಗಿ, ಕುದರಿ ಸಾಲವಾಡಗಿ, ತೆಲಗಿ, ವಡವಡಗಿ, ಜಾಯವಾಡಗಿ, ನರಸಲಗಿ, ನಿಡಗುಂದಿ, ಸಿದ್ದನಾಥ.

ದೂರವಾಣಿ ಸಂಕೇತ ಹಾಗೂ ವಿನಿಮಯ ಕೇಂದ್ರಗಳು

ಬದಲಾಯಿಸಿ
  • ಬಸವನ ಬಾಗೇವಾಡಿ - ೦೮೩೫೮

ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು

ಬದಲಾಯಿಸಿ

ಆಲಮಟ್ಟಿ, ಬಸವನ ಬಾಗೇವಾಡಿ, ಡೋಣೂರ, ಹೂವಿನ ಹಿಪ್ಪರಗಿ, ಹಣಮಾಪುರ, ಹಂಗರಗಿ, ಇಂಗಳೇಶ್ವರ, ಕೋಲ್ಹಾರ, ಕುದರಿ ಸಾಲವಾಡಗಿ, ಮನಗೂಳಿ, ಮಸಬಿನಾಳ, ಮಸೂತಿ, ಮುಳವಾಡ, ಮುತ್ತಗಿ, ನರಸಲಗಿ, ರಬಿನಾಳ, ಸಾಸನೂರ, ತೆಲಗಿ, ಉಕ್ಕಲಿ, ವಡವಡಗಿ, ವಂದಾಲ, ಯಾಳವಾರ

ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು

ಬದಲಾಯಿಸಿ

ದೂರವಾಣಿ ಕೈಪಿಡಿ

ಬದಲಾಯಿಸಿ
  • ತಹಸಿಲ್ದಾರರ ಕಾರ್ಯಾಲಯ - ೩೨೧೭೫೦
  • ಖಜಾನೆ ಕಾರ್ಯಾಲಯ - ೩೨೧೬೮೦
  • ಆಹಾರ ಮತ್ತು ನಾಗರಿಕ ಪೂರೈಕೆ ಕಾರ್ಯಾಲಯ - ೩೨೧೨೨೦
  • ಪ್ರಧಾನ ನ್ಯಾಯಾಧೀಶರ ಕಾರ್ಯಾಲಯ - ೩೨೧೨೭೬
  • ಉಪನೋಂದಣಿ ಅಧಿಕಾರಿಗಳ ಕಾರ್ಯಾಲಯ - ೨೪೫೫೮೦

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು

ಬದಲಾಯಿಸಿ

ರಾಷ್ಟ್ರೀಯ ಹೆದ್ದಾರಿ - ೧೩ => ಸೋಲಾಪುರ - ವಿಜಯಪುರ - ಇಲಕಲ್ಲ - ಹೊಸಪೇಟೆ - ಚಿತ್ರದುರ್ಗ - ಶಿವಮೊಗ್ಗ - ಮಂಗಳೂರು.

ರಾಜ್ಯ ಹೆದ್ದಾರಿ - ೪೧ => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರು.

ರಾಜ್ಯ ಹೆದ್ದಾರಿ - ೬೧ => ಮನಗೂಳಿ - ಬಸವನ ಬಾಗೇವಾಡಿ - ತಾಳಿಕೋಟೆ - ಹುಣಸಗಿ - ದೇವಾಪುರ - ದೇವದುರ್ಗ - ಶಿರವಾರ.

ರಾಜ್ಯ ಹೆದ್ದಾರಿ - ೧೨೪ => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.

ಸರಕಾರಿ ವಾಹನ ನಿಲ್ದಾಣಗಳು

ಬದಲಾಯಿಸಿ

ಬಸವನ ಬಾಗೇವಾಡಿ - ಮನಗೂಳಿ, ಹೂವಿನ ಹಿಪ್ಪರಗಿ, ನಿಡಗುಂದಿ, ಕೊಲ್ಹಾರ ಇಲ್ಲಿ ಸರಕಾರಿ ವಾಹನ ನಿಲ್ದಾಣಗಳಿವೆ.

ಸರಕಾರಿ ವಾಹನ ಘಟಕಗಳು

ಬದಲಾಯಿಸಿ

ಬಸವನ ಬಾಗೇವಾಡಿಯಲ್ಲಿ ಸರಕಾರಿ ವಾಹನ ಘಟಕವಿದೆ.

ಚಿತ್ರ ಮಂದಿರಗಳು

ಬದಲಾಯಿಸಿ
  • ಸತ್ಯನಾರಾಯಣ ಚಿತ್ರ ಮಂದಿರ
  • ಅಲಂಕಾರ ಚಿತ್ರ ಮಂದಿರ

ಆಕರ್ಷಕ ಸ್ಥಳಗಳು

ಬದಲಾಯಿಸಿ

ಈ ತಾಲೂಕಿನಲ್ಲಿ ಕೆಲವು ಪ್ರಸಿದ್ಧ ಸ್ಥಳಗಳೂ ಇವೆ.

  • ಬಸವನ ಬಾಗೇವಾಡಿ

ಬಸವನ ಬಾಗೇವಾಡಿ ಮುಖ್ಯ ನಗರಗಳಿಂದ ಇರುವ ದೂರ

ಬದಲಾಯಿಸಿ

ದಿಕ್ಕುಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Jan Peter Schouten (1995), Revolution of the Mystics: On the Social Aspects of Vīraśaivism, Motilal Banarsidass, ISBN 978-8120812383, page 4
  2. SK Das (2005), A History of Indian Literature, 500–1399: From Courtly to the Popular, Sahitya Akademi, ISBN 978-8126021710, page 163
  3. https://karnatakatravel.blogspot.com/2016/08/basaveshwara-devalaya-basavana-bagewadi.html
  4. "ಆರ್ಕೈವ್ ನಕಲು". Archived from the original on 2016-01-10. Retrieved 2016-05-12.
  5. https://web.archive.org/web/20160110145737/http://www.basavanabagewaditown.mrc.gov.in/
  6. https://utsav.gov.in/view-event/shri-basaveshwar-temple-jatra-mahotsavbasavana-bagevadivijayapura-1
  7. "ಆರ್ಕೈವ್ ನಕಲು". Archived from the original on 2023-08-19. Retrieved 2023-08-19.
  8. https://web.archive.org/web/20160110145737/http://www.basavanabagewaditown.mrc.gov.in/
  9. www.census2011.co.in
  10. https://vijayapura.nic.in/en/document/basavana-bagewadi-taluk-bijapur-legislative-council-list-of-draft-roll-2018/
  11. "Karnataka Assembly Election 1994". Empowering India. {{cite web}}: Missing or empty |url= (help)
  12. Basavaraj F Kattimani (3 July 2012). "Basavana Bagewadi MLA S K Bellubbi handed over 623 newly built houses to flood affected families of Donur village in Basavana Bagewadi taluk on Tuesday". The Times of India. TNN. Retrieved 2018-07-16.
  13. https://www.onefivenine.com/india/villag/Bijapur-District/Basavana-Bagewadi
  14. "Reports of National Panchayat Directory: Village Panchayat Names of Basavana Bagewadi, Bijapur, Karnataka". Registrar General & Census Commissioner, India. Archived from the original on 13 November 2011.
  15. https://news.abplive.com/pincode/karnataka/bijapur-kar/basavan-bagewadi-pincode-586203.html