{{Infobox Indian Jurisdiction |type = village |native_name= ಶ್ರೀ ಮಹಾಂತೇಶ್ವರ ಮಠ ಕರೇಗುಡ್ಡ |taluk_names=ಮಾನವಿ |nearest_city=[[ ಮಾನವಿ] |parliament_const=ರಾಯಾಚೂರು |assembly_const= |latd = 16.1833 |longd = 75.7000 |state_name=ಕರ್ನಾಟಕ |district=ರಾಯಾಚೂರು |leader_title= |leader_name= |altitude= |population_as_of=| population_total=| population_density= |area_magnitude= |area_total= |area_telephone= |postal_code= |vehicle_code_range= |website=

ಇತಿಹಾಸಸಂಪಾದಿಸಿ

ಇಂಗಳೇಶ್ವರವು ವಿಜಯಪುರದಿಂದ ಪೂರ್ವಕ್ಕೆ ೪೫ ಕಿ.ಮೀ. ದೂರದಲ್ಲಿದ್ದು, ಇದು ಬಸವಣ್ಣನವರ ತಾಯಿ ಮಾದಲಾಂಬಿಕೆಯ ತವರು ಮನೆಯಾಗಿದೆ. ಇಂಗಳೇಶ್ವರವು ಒಂದು ಐತಿಹಾಸಿಕವಾದ ಅಗ್ರಹಾರವಾಗಿತ್ತು. ಅದು ಹಲವಾರು ಐತಿಹಾಸಿಕ ಐತಿಹ್ಯಗಳನ್ನು ಹೊಂದಿದೆ. ಊರಿನ ಹೊರ ವಲಯದಲ್ಲಿರುವ “ಗುಡ್ಡದ ರೇವಣಸಿದ್ಧೇಶ್ವರ ದೇವಾಲಯ”ವು ಒಂದು ಪ್ರಮುಖವಾದ ದೇವಾಲಯವಾಗಿದೆ. ಅದೇ ರೀತಿ ಗ್ರಾಮದಲ್ಲಿ ಕಲ್ಮೇಶ್ವರ, ಸೋಮೇಶ್ವರ, ನಾರಾಯಣ, ಸಂಗಮೇಶ್ವರ ದೇವಾಲಯಗಳಿದ್ದು, ಇವುಗಳ ಪೈಕಿ ಶೋಬನದೇವರ ಗುಡಿಯನ್ನು ಕ್ರಿ.ಶ.೧೧೨೮ರಲ್ಲಿ ನೀಲಕಂಠನಾಯಕನೆಂಬ ಅಧಿಕಾರಿಯು ನಿರ್ಮಿಸಿದನೆಂದು ಶಾಸನಗಳಿಂದ ತಿಳಿಯುತ್ತದೆ.

ಅದೇ ರೀತಿಯಾಗಿ ಊರಿನಲ್ಲಿ ನೂತನವಾಗಿ “ವಚನ ಶಿಲಾ ಮಂಟಪ”ವನ್ನು ನಿರ್ಮಿಸಲಾಗಿದೆ. ಇಲ್ಲಿ ಬಸವಾದಿ ಶರಣರ ಸುಮಾರು ೪೩,೦೦೦ ವಚನಗಳನ್ನು ಕಲ್ಲಿನಲ್ಲಿ ಕೆತ್ತಿಸಲಾಗಿದೆ. ಇದರಿಂದಾಗಿ ವಚನಗಳ ಪರಂಪರೆ ಮುಂದಿನ ಪೀಳಿಗೆಗೆ ಹರಿದು ಬರಲು ಸಹಾಯಕವಾಗಿದೆ. ಆಲಮಟ್ಟಿಯು “ಕರ್ನಾಟಕದ ಗಾಂಧೀ” ಎಂದು ಚಿರಪರಿಚಿತರಾಗಿದ್ದ ಹರ್ಡೇಕರ ಮಂಜಪ್ಪನವರ ತಪೋಭೂಮಿಯಾಗಿರುವುದು ವಿಶೇಷವಾಗಿದೆ. ವಚನ ಸಾಹಿತ್ಯವನ್ನು ಸಂಶೋಧಿಸಿ, ಪರಿಷ್ಕರಿಸಿ, ಕನ್ನಡ ಸಾರಸ್ವತ ಲೋಕಕ್ಕೆ ಒದಗಿಸಿದ ಕೀರ್ತಿಯು ಹರ್ಡೇಕರ ಮಂಜಪ್ಪನವರಿಗೆ ಸಲ್ಲುತ್ತದೆ. ಇವರ ಸಮಾಧಿ ಸ್ಮಾರಕ ಆಲಮಟ್ಟಿ ಡ್ಯಾಮಸೈಟ್‌ನಲ್ಲಿರುವ ಎಂ.ಎಚ್.ಎಮ್. ಪ. ಪೂ. ಕಾಲೇಜಿನ ಆವರಣದಲ್ಲಿದೆ.

ವಿಜಯಪುರ ಜಿಲ್ಲೆಯ ಬಾಗೆವಾಡಿ ತಾಲ್ಲೂಕಿನಲ್ಲಿ ಬಾಗೆವಾಡಿಗೆ 10 ಕಿಮೀ ದೂರದಲ್ಲಿದೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಉಪರಾಜಧಾನಿಯಾಗಿತ್ತು. ಕಳಚೂರ್ಯ ಬಿಜ್ಜಳನ ಜನ್ಮಸ್ಥಳವೆಂದು ಚರಿತ್ರೆಕಾರರು ಹೇಳುತ್ತಾರೆ. ಶೈವ, ವೈಷ್ಣವ, ವೀರಶೈವ ಮತಸ್ಥರ ದೇವಾಲಯಗಳಿವೆ. 11ನೆಯ ಶತಮಾನದ ಕನ್ನಡ ಕವಿ ಅಗ್ಗಳನ ಜನ್ಮಸ್ಥಳವೆಂದೂ ತನ್ನ ಚಂದ್ರಪ್ರಭ ಪುರಾಣವನ್ನು ಆತ ಇಲ್ಲಿಯೇ ಬರೆದನೆಂದೂ ಹೇಳುತ್ತಾರೆ. ಪೂರ್ವದಲ್ಲಿ ಚಂದ್ರಪ್ರಭ ಬಸದಿ ಪ್ರಖ್ಯಾತವಾಗಿತ್ತು; ಈಗ ಅದರ ಕುರುಹಿಲ್ಲ. ಅಲ್ಲಿಯ ವಿಗ್ರಹ ರೇವಣಸಿದ್ಧೇಶ್ವರ ಗವಿಯಲ್ಲಿ ರಕ್ಷಿಸಲ್ಪಟ್ಟಿದೆ. ವೀರಶೈವ ಆಚಾರ್ಯಪುರುಷರಲ್ಲಿ ಒಬ್ಬನಾದ ರೇವಣಸಿದ್ಧನೆಂದು ಹೇಳಲಾದ ಈ ಗವಿಯಲ್ಲಿ ಆ ಮಹಾತ್ಮನ ವಿಗ್ರಹವಿದೆ. ಮತ್ತೊಂದು ಭಾಗದಲ್ಲಿ ಚನ್ನಬಸವಣ್ಣನ ತಾಯಿ ಎನ್ನಲಾದ ಅಕ್ಕನಾಗಮ್ಮನ ಗವಿಯಿದೆ. ಹಿಂದೆ ಇಂಗಳೇಶ್ವರ ದೊಡ್ಡ ನಗರವಾಗಿದ್ದಂತೆ ಕಾಣಬರುತ್ತದೆ. ಇದರ ಶಾಖಾನಗರವೇ ಬಾಗೆವಾಡಿ. ಸಂಸ್ಕೃತ ಬಸವಪುರಾಣಗಳಲ್ಲಿ ಇಂಗಳೇಶ್ವರ ಬಾಗೆವಾಡಿ ಎಂದು ಹೇಳಲಾಗಿದೆ. ಇಲ್ಲಿ ಶಿಲಾಶಾಸನಗಳು, ನಿಸದಿಕಲ್ಲುಗಳು, ಮಹಾಶಾಸನಗಳು ವಿಪುಲವಾಗಿ ಇವೆ.

ಇಂಗಳೇಶ್ವರದಲ್ಲಿ ಎರಡು ಗವಿ ದೇವಾಲಯಗಳನ್ನೊಳಗೊಂಡಂತೆ ಎಂಟು ಪುರಾತನ ದೇವಾಲಯಗಳಿವೆ. ಅವುಗಳಲ್ಲಿ ಮೂರನ್ನು 1128ರಲ್ಲಿ ನೀಲಕಂಠನಾಯಕ ಕಟ್ಟಿಸಿದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಸೋಮೇಶ್ವರ ದೇವಾಲಯ 38 ದುಂಡುಗಂಬಗಳಿಂದ ಕೂಡಿದ ದೊಡ್ಡ ದೇವಸ್ಥಾನ. ಮುಖಮಂಟಪದ ಮೇಲ್ಛಾವಣಿಗೆ ಹೊದ್ದಿಸಿರುವ ಅಷ್ಟಕೋಣಾಕೃತಿಯ ಶಿಲೆ ನವಗ್ರಹಗಳನ್ನು ಪ್ರತಿಬಿಂಬಿಸುತ್ತದೆ. ಗರ್ಭಗೃಹದ ಬಾಗಿಲಲ್ಲಿ ಎರಡು ಸ್ತ್ರೀವಿಗ್ರಹಗಳಿವೆ. ಅದರ ಎರಡು ಪಕ್ಕಗಳಲ್ಲಿ ಗರ್ಭಗುಡಿಯಿದ್ದು ಗಣಪತಿ ಮತ್ತು ಈಶ್ವರ ವಿಗ್ರಹಗಳಿವೆ. ಇನ್ನೊಂದು ವೈಷ್ಣವ ದೇವಾಲಯ. 24 ದುಂಡುಗಂಬಗಳಿಂದ ಕೂಡಿದ ಆ ದೇವಾಲಯದಲ್ಲಿ ನಾಲ್ಕು ಅಡಿ ಎತ್ತರದ ಮುದ್ದಾದ ನಾರಾಯಣ ವಿಗ್ರಹವಿದೆ. ಇದು ಪೇಶ್ವೆಯರ ಕಾಲದಲ್ಲಿ ಪ್ರತಿಷ್ಠಾಪಿತವಾಗಿರಬೇಕೆಂದು ತಿಳಿದುಬರುತ್ತದೆ.

ನಾರಾಯಣ ದೇವಸ್ಥಾನದಲ್ಲಿ ಎರಡು ಶಾಸನಗಳೂ ಮತ್ತು ಸೋಮೇಶ್ವರದಲ್ಲಿ ಒಂದು ಶಾಸನವೂ ಇವೆ. ಹಳಗನ್ನಡದಲ್ಲಿರುವ ಆ ಶಾಸನಗಳಲ್ಲಿ ದೇವಸ್ಥಾನವನ್ನು ಕಟ್ಟಿಸಿದವರ ಮತ್ತು ದತ್ತಿಯ ವಿಷಯಗಳನ್ನು ತಿಳಿಸಿದೆ.

ಶ್ರೀ ಗುರು ಬಸವಣ್ಣನವರ ತಾಯಿಯ ತವರೂರು ಇಂಗಳೇಶ್ವರವಾಗಿದ್ದು, ಬಸವಣ್ಣನವರ ಜನನವು ಇದೇ ಗ್ರಾಮದಲ್ಲಿ ಆಗಿತ್ತು. ಬಸವಣ್ಣನವರ ಪೂರ್ವಜರು ಈಗಲೂ ಇಂಗಳೇಶ್ವರದಲ್ಲೇ ವಾಸಿಸುತ್ತಿದ್ದಾರೆ. ಇದು ಇಂದಿಗೂ ಕುಗ್ರಾಮವಾಗಿ ಉಳಿದು ಕೊಂಡಿದ್ದು ಅಭಿವೃದ್ದಿಯಲ್ಲಿ ತೀರಾಹಿಂದುಳಿದಿದೆ. ಈ ಹಳ್ಳಿಯನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ. ಇಂಗಳೇಶ್ವರವು ಒಂದು ಐತಿಹಾಸಿಕವಾದ ಅಗ್ರಹಾರವಾಗಿತ್ತು. ಅದು ಹಲವಾರು ಐತಿಹಾಸಿಕ ಐತಿಹ್ಯಗಳನ್ನು ಹೊಂದಿದೆ. ಇಂಗಳೇಶ್ವರವು ಅಕ್ಕನಾಗಮ್ಮ, ಚೆನ್ನಬಸವಣ್ಣ, ಬಲದೇವ ಮೊದಲಾದ ಶರಣರ ಜನಿಸಿದ ನಾಡು. ಇತ್ತೀಚೆಗೆ ಇಂಗಳೇಶ್ವರದಲ್ಲಿ ಕೂಡಲಸಂಗಮ ಅಭಿವೃದ್ದಿ ಮಂಡಳಿಯಿಂದ ಬಸವೇಶ್ವರ ದೇವಸ್ಥಾನ, ಮಾದಲಾಂಬಿಕೆ ಭವನ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಅದಲ್ಲದೆ ಬಸವಣ್ಣವರು ಹುಟ್ಟಿದ ಮನೆಯು ಸ್ಮಾರಕವಾಗಿ ನಿರ್ಮಾಣವಾಗುತ್ತಿದೆ. ಇಂಗಳೇಶ್ವರದಲ್ಲಿ ನೂತನವಾಗಿ “'ವಚನ ಶಿಲಾ ಮಂಟಪ'”ವನ್ನು ನಿರ್ಮಿಸಲಾಗಿದೆ. ಇಲ್ಲಿ ಬಸವಾದಿ ಶರಣರ ಸುಮಾರು ೪೩,೦೦೦ ವಚನಗಳನ್ನು ಕಲ್ಲಿನಲ್ಲಿ ಕೆತ್ತಿಸಲಾಗಿದೆ. ಇದರಿಂದಾಗಿ ವಚನಗಳ ಪರಂಪರೆ ಮುಂದಿನ ಪೀಳಿಗೆಗೆ ಹರಿದು ಬರಲು ಸಹಾಯಕವಾಗಿದೆ.

ಪ್ರೇಕ್ಷಣೀಯ ಸ್ಥಳ

ಅಕ್ಕನಾಗಮ್ಮನವರ ಗವಿಯು ಇಂಗಳೇಶ್ವರದಿಂದ ಸುಮಾರು ೨ ಕಿ.ಮೀ. ದೂರದಲ್ಲಿದೆ. ಚಂದ್ರಪ್ರಭಾ ಅರಸರ ಕಾಲದಲ್ಲಿ ನಿರ್ಮಾಣಗೊಂಡ ೫-೬ ದೇವಾಲಯಗಳಿವೆ. ಇಂಗಳೇಶ್ವರವು ವಿಜಯಪುರದಿಂದ ಪೂರ್ವಕ್ಕೆ ೪೫ ಕಿ.ಮೀ. ದೂರದಲ್ಲಿದ್ದು, ಬಸವನ ಬಾಗೇವಾಡಿಯಿಂದ ೧೧ ಕಿ. ಮೀ ದೂರವಿದೆ.

ಭೌಗೋಳಿಕಸಂಪಾದಿಸಿ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಜನಸಂಖ್ಯೆಸಂಪಾದಿಸಿ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 8365 ಇದೆ. ಅದರಲ್ಲಿ 4278 ಪುರುಷರು ಮತ್ತು 4087 ಮಹಿಳೆಯರು ಇದ್ದಾರೆ.

ಹವಾಮಾನಸಂಪಾದಿಸಿ

 • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
 • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
 • ಚಳಿಗಾಲ ಮತ್ತು
 • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
 • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
 • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಸಾಂಸ್ಕೃತಿಕಸಂಪಾದಿಸಿ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿಸಂಪಾದಿಸಿ

 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮಗಳುಸಂಪಾದಿಸಿ

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆಗಳುಸಂಪಾದಿಸಿ

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯಗಳುಸಂಪಾದಿಸಿ

 • ವಿರಕ್ತ ಮಠ
 • ಶ್ರೀ ಮಹಾಲಕ್ಷ್ಮಿ ದೇವಸ್ಥಾನ
 • ಶ್ರೀ ದುರ್ಗಾದೇವಿ ದೇವಲಯ
 • ಶ್ರೀ ಮಲ್ಲಿಕಾರ್ಜುನ ದೇವಾಲಯ
 • ಶ್ರೀ ಬಸವೇಶ್ವರ ದೇವಾಲಯ
 • ಶ್ರೀ ವೆಂಕಟೇಶ್ವರ ದೇವಾಲಯ
 • ಶ್ರೀ ಪಾಂಡುರಂಗ ದೇವಾಲಯ
 • ಶ್ರೀ ಹಣಮಂತ ದೇವಾಲಯ

ಮಸೀದಿಗಳುಸಂಪಾದಿಸಿ

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿಸಂಪಾದಿಸಿ

ಗ್ರಾಮದ ಪ್ರತಿಶತ 2೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಉದ್ಯೋಗಸಂಪಾದಿಸಿ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆಗಳುಸಂಪಾದಿಸಿ

ಆಹಾರ ಬೆಳೆಗಳು ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ ವಾಣಿಜ್ಯ ಬೆಳೆಗಳು ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಶಿಕ್ಷಣಸಂಪಾದಿಸಿ

 • ಸರಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆ, ಇಂಗಳೇಶ್ವರ
 • ಸರಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆ, ಇಂಗಳೇಶ್ವರ
 • ಶಿವಶರಣೆ ಕಿರಿಯ ಪ್ರಾಥಮಿಕ ಶಾಲೆ, ಇಂಗಳೇಶ್ವರ
 • ಎಸ್.ಆರ್. ಪ್ರೌಢ ಶಾಲೆ, ಇಂಗಳೇಶ್ವರ
 • ಗೊಲಗೇರಿ ಪ್ರೌಢ ಶಾಲೆ, ಇಂಗಳೇಶ್ವರ
 • ರೇಣುಕಾಚಾರ್ಯ ಪದವಿ ಪೂರ್ವ ಮಹಾವಿದ್ಯಾಲಯ, ಇಂಗಳೇಶ್ವರ
 • ಆರ್.ಜಿ.ಶೆಟ್ಟಿ ಪದವಿ ಪೂರ್ವ ಮಹಾವಿದ್ಯಾಲಯ, ಇಂಗಳೇಶ್ವರ

ಸಾಕ್ಷರತೆಸಂಪಾದಿಸಿ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯಸಂಪಾದಿಸಿ

ಗ್ರಾಮವು ವಿಜಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಹಬ್ಬಗಳುಸಂಪಾದಿಸಿ

ಪ್ರತಿವರ್ಷ ಶ್ರೀ ಹನುಮಾನ ಉತ್ಸವ (ಓಕಳಿ), ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಪವನ ವಿದ್ಯುತ್ ಘಟಕಸಂಪಾದಿಸಿ

 • ಫಾರ್ಚೂನ್ ಪವನ ವಿದ್ಯುತ್ ಘಟಕ, ಇಂಗಳೇಶ್ವರ, ಬಸವನ ಬಾಗೇವಾಡಿ, ವಿಜಯಪುರ

ಬ್ಯಾಂಕ್ಸಂಪಾದಿಸಿ

 • ಐ.ಎನ್.ಜಿ ವೈಶ್ಯ ಬ್ಯಾಂಕ್, ಇಂಗಳೇಶ್ವರ

ಗ್ರಾಮ ಪಂಚಾಯತಿಸಂಪಾದಿಸಿ

 • ಗ್ರಾಮ ಪಂಚಾಯತಿ, ಇಂಗಳೇಶ್ವರ

ದೂರವಾಣಿ ವಿನಿಮಯ ಕೇಂದ್ರಸಂಪಾದಿಸಿ

 • ದೂರವಾಣಿ ವಿನಿಮಯ ಕೇಂದ್ರ, ಇಂಗಳೇಶ್ವರ

ಅಂಚೆ ಕಚೇರಿಸಂಪಾದಿಸಿ

 • ಅಂಚೆ ಕಚೇರಿ, ಇಂಗಳೇಶ್ವರ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಸಂಪಾದಿಸಿ

 • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಇಂಗಳೇಶ್ವರ

ಪ್ರಾಥಮಿಕ ಪಶು ಚಿಕಿತ್ಸಾಲಯಸಂಪಾದಿಸಿ

 • ಪ್ರಾಥಮಿಕ ಪಶು ಚಿಕಿತ್ಸಾಲಯ, ಇಂಗಳೇಶ್ವರ

ಬಾಹ್ಯ ಸಂಪರ್ಕಗಳುಸಂಪಾದಿಸಿ