ಮುಖ್ಯ ಮೆನು ತೆರೆ

ಇಂದಿನ ವಿಶೇಷ ಲೇಖನ

ಕರ್ನಾಟಕ ರಾಜ್ಯೋತ್ಸವದ ಭಾಗವಾಗಿ ಡೊಳ್ಳು ಕುಣಿತ ಸಾಂಪ್ರದಾಯಿಕ ನೃತ್ಯ

Karnataka flag.png ಕರ್ನಾಟಕ ರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಚನೆ ದಿನ ಪ್ರತಿ ವರ್ಷ ನವೆಂಬರ್ ೧ರಂದು ವಿಶ್ವದಾದ್ಯಂತ ಕನ್ನಡಿಗರು ನೆಲೆಸಿರುವ ಪ್ರದೇಶಗಳಲ್ಲಿ ಕನ್ನಡ ಭಾಷೆ ಮಾತನಾಡುವ ಜನರಿಂದ ಆಚರಿಸುವ ನಾಡ ಹಬ್ಬ. ೧೯೫೬ರ ರಾಜ್ಯಗಳ ಪುನರ್ ವಿಂಗಡಣಾ ಕಾಯಿದೆಯಂತೆ ೧೯೫೬ರ ನವೆಂಬರ್ ೧ರಂದು ಮೈಸೂರು ರಾಜ್ಯ (ಈಗಿನ ಕರ್ನಾಟಕ) ಗಡಿ ಭಾಗದಲ್ಲಿರುವ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ಮೈಸೂರು ರಾಜ್ಯದಲ್ಲಿ ವಿಲೀನಗೊಳಿಸಿ ಕರ್ನಾಟಕ ರಾಜ್ಯ ರಚಿಸಲಾಯಿತು. ಇದರ ಸಂಕೇತವಾಗಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ರಾಜ್ಯೋತ್ಸವದ ದಿನ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜೆ ಇದ್ದು, ಕರ್ನಾಟಕ ಸರಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕನ್ನಡಿಗರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುತ್ತಿದೆ.

« ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು »

ಸುದ್ದಿಯಲ್ಲಿ

  • ನವೆಂಬರ್ ೧೪ : ಸಂಪರ್ಕ ಉಪಗ್ರಹ ಜಿಸ್ಯಾಟ್‌–೨೯ನ್ನು ಇಸ್ರೊ ಜಿಎಸ್‌ಎಲ್‌ವಿ ಎಂಕೆ3–ಡಿ೨ ರಾಕೆಟ್‌ ಮೂಲಕ ಉಡಾವಣೆ ಮಾಡಿದೆ.
  • ನವೆಂಬರ್ ೧೨: ಕೇಂದ್ರ ಸಚಿವ ಅನಂತ್ ಕುಮಾರ್ ಕಾನ್ಸರ್ ನಿಂದ ನಿಧನ.
  • ನವೆಂಬರ್ ೬: ಕರ್ನಾಟಕ ರಾಜ್ಯ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜನತಾದಳ(ಜಾತ್ಯತೀತ) ಮೈತ್ರಿಕೂಟ ಮೂರು ವಿಧಾನಸಭೆ ಸ್ಥಾನಗಳಲ್ಲಿ ಮತ್ತು ಒಂದು ಲೋಕಸಭೆ ಕ್ಷೇತ್ರದಲ್ಲಿ ಗೆಲುವು [[೧]]
  • ನವೆಂಬರ್ ೧: ರಾಷ್ಟ್ರವಾರು ವ್ಯಾಪಾರ ವಹಿವಾಟು ಸುಲಭಗಾಣುವಿಕೆ ಮಾಪನಾಂಕ ಪಟ್ಟಿಯಲ್ಲಿ ಭಾರತ ೭೭ನೆಯ ಸ್ಥಾನದಲ್ಲಿ, ೨೩ ಸ್ಥಾನಗಳ ಬಡ್ತಿ [[೨]]
  • ಅಕ್ಟೋಬರ್ ೧೯: ಅಮೃತಸರದ ಚೋರಾ ಬಜಾರ್ ಸಮೀಪ ವಿಜಯದಶಮಿ ಆಚರಣೆ ವೇಳೆ ರೈಲ್ವೆ ಹಳಿ ಮೇಲೆ ನಿಂತಿದ್ದ ಜನರ ಮೇಲೆ ರೈಲ್ವೆ ಹರಿದು ೬೧ ಜನ ಸಾವು.

ಗೂಗಲ್ ಡೂಡಲ್ ಲೇಖನಗಳು


ಅಕ್ಷರವಾರು ವಿಂಗಡಣೆ


ಇನ್ನೊಂದು ಭಾಷೆಯಲ್ಲಿ ಓದು