ಅಫಜಲ್ಪುರ
ಅಫಜಲಪುರ
ಅಫಜಲಪುರ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ತಾಲೂಕು ಕೇಂದ್ರ.
ಭೌಗೋಳಿಕ ವಿವರಗಳು
ಬದಲಾಯಿಸಿ- ಅಕ್ಷಾಂಶ / ರೇಖಾಂಶ : ೧೭.೨ ಡಿಗ್ರಿ ಉತ್ತರ ಮತ್ತು ೭೬.೩೫ ಡಿಗ್ರಿ ಉತ್ತರ.
- ಸಮುದ್ರಮಟ್ಟದಿಂದ ಸರಾಸರಿ ಎತ್ತರ : ೪೦೮ ಮೀಟರುಗಳು.
- ಕ್ಷೇತ್ರಫಲ : ೩ ಚದರ ಕಿ.ಮೀ
- ಅಕ್ಕಪಕ್ಕದ ತಾಲೂಕುಗಳು : ಆಳಂದ್ ಉತ್ತರಕ್ಕೆ, ಗುಲ್ಬರ್ಗ ಪೂರ್ವಕ್ಕೆ, ಜೇವರ್ಗಿ ಮತ್ತು ಸಿಂದಗಿ (ಬಿಜಾಪುರ ಜಿಲ್ಲೆ) ದಕ್ಷಿಣಕ್ಕೆ, ಇಂಡಿ (ಬಿಜಾಪುರ ಜಿಲ್ಲೆ) ಪಶ್ಷಿಮಕ್ಕೆ, ಮತ್ತು ಮಹಾರಾಷ್ಟ್ರದ ಅಕ್ಕಲಕೋಟೆ ಉತ್ತರ-ಪಶ್ಷಿಮಕ್ಕೆ
ಭೀಮಾ ಮತ್ತು ಅಮರ್ಜಾ ನದಿಗಳು ಈ ತಾಲೂಕಿನಲ್ಲಿ ಹರಿಯುತ್ತವೆ.
- ಪ್ರಮುಖ ಬೆಳೆಗಳು: ಕಬ್ಬು, ತೊಗರಿ, ಜೋಳ, ಸೂರ್ಯಕಾಂತಿ, ಕುಸುಬೆ, ಕಡಲೆ, ಶೇಂಗಾ, ಹೆಸರು.
ಪ್ರಮುಖ ಕಾರ್ಖಾನೆಗಳು
ಬದಲಾಯಿಸಿ- ಶ್ರೀ ರೇಣುಕಾ ಶುಗರ್ಸ್, ಹಾವಳಗಾ. ಅಫಜಲಪುರ.
ಜನಸಂಖ್ಯಾ ಅಂಕಿ ಅಂಶ
ಬದಲಾಯಿಸಿ೨೦೦೧ರ ಜನಗಣತಿ ಯ ಪ್ರಕಾರ ಅಫಜಲ್ಪುರದ ಜನಸಂಖ್ಯೆ ೧೯,೧೧೪. ಇದರಲ್ಲಿ ೫೨% ಶೇಕಡಾ ಪುರುಷರು ಮತ್ತು ಬಾಕಿ ೪೮% ಸ್ತ್ರೀಯರು. ಇಲ್ಲಿಯ ೫೪% ಸರಾಸರಿ ಸಾಕ್ಷರತೆ ಭಾರತದ ಸಾಕ್ಷರತಾ ಪ್ರಮಾಣಕ್ಕಿಂತ (೫೯.೫%) ಕಡಿಮೆಯಿದೆ. ೬೦% ಪುರುಷರು ಮತ್ತು ೪೦% ಸ್ತ್ರೀಯರು ಅದರಲ್ಲಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ೧೫%ರಷ್ಟಿದ್ದಾರೆ.
ಪ್ರೇಕ್ಷಣೀಯ ಸ್ಥಳಗಳು
ಬದಲಾಯಿಸಿ- ಘತ್ತರ್ಗಾ- ಶ್ರೀ ಭಾಗ್ಯವ೦ತಿ,ದೇವಾಲಯ
- ರೇವೂರ..ಶ್ರೀಬಮ್ಮಲಿಂಗೇಶ್ವರ - ಶ್ರೀರೇವಣಸಿದ್ದೇಶ್ವರ ದೇವಾಲಯ,
- ಚಿನ್ನಮಳ್ಳಿಯ -ಶ್ರೀ ಮಲ್ಲಿಕಾರ್ಜುನ,ದೇವಾಲಯ,
- ಅಫಜಲಪುರ: ಶ್ರೀ ಸಿದ್ಫರಾಮೇಶ್ವರ ಜಾತ್ರೆ ,ಶ್ರೀ ಸೋಂದೇಸಾಹೇಬ್ ದರ್ಗಾ, ಶ್ರೀ ಕಾಳಿಕಾದೇವಿ ಜಾತ್ರೆ, ಶ್ರೀ ಅಂಬಾಭವಾನಿ ಜಾತ್ರೆ, ಶ್ರೀ ಲಕ್ಷ್ಮಿದೇವಾಲಯ,
- ಸಂಗಾಪುರದ: ಶ್ರೀ ಸಂಗಮೇಶ್ವರ ದೇವಾಲಯ,
- ಮಣ್ಣೂರದ-ಶ್ರೀ ಯಲ್ಲಮ್ಮಾದೇವಾಲಯ,
- ಅತನೂರ,ಗೂಬುರ,ಇಲ್ಲಿ ಪ್ರಾಚೀನ ಗೂಡೇಗಳಿವೆ ಅವಶೇಷಗಳಿವೆ.
- ಮರ್ಜಿ ಪೀರ್ ದರ್ಗಾ (ಭೀಮಾ ಮತ್ತು ಅಮರ್ಜಾ ನದಿಗಳ ಸಂಗಮದಲ್ಲಿದೆ
- ಉಡಚಣ, ಗೌರ(ಬಿ), ಅಳ್ಳಗಿ (ಬಿ),ಗಳ ಪವಾಡ ಪುರುಷ :ಶ್ರೀ ಹುಚ್ಚಲಿಂಗೇಶ್ವರರ ಜಾತ್ರೆ.
- ಮಲ್ಲಾಬಾದ: ಶ್ರೀ ಲಕ್ಷ್ಮಿ ದೇವಾಲಯ,
- ಬಳೂರ್ಗಿ: ಶ್ರೀ ಬಸವೇಶ್ವರ ದೇವಾಲಯ,
- ಬಡದಾಳ:ಚನ್ನಮಲ್ಲೇಶ್ವರ ಮಠ
- ಬಂದರವಾಡ: ಶ್ರೀ ಲಲಿತಾದೇವಿ ದೇವಾಲಯ
- ದೇವಲ ಗಾಣಗಾಪೂರ: ತ್ರಿಮೂರ್ತಿ ಶ್ರೀ ದತ್ತಾತ್ರೇಯ
- ಗುಡ್ಡೆವಾಡಿ:- ಭೀಮಾ ತೀರದ ಉದ್ಭವಲಿಂಗ ಶ್ರೀ ಬ್ರಹ್ಮಲಿಂಗಶ್ವರ ದೇವಾಲಯ ತಾಲ್ಲೂಕಿನ ಹೆಮ್ಮೆಯ ಅತ್ಯಂತ ಪವಿತ್ರವಾದ ಸ್ಥಳವಾಗಿದೆ ಈ ಸ್ಥಳವು ಗಾಣಗಾಪುರ & ಘತ್ತರಗಿ ಹಾದು ಹೋಗುವ ರಸ್ತೆಯಲ್ಲಿ ಬರುತ್ತದೆ
- ಹೈದ್ರಾ: ಶ್ರೀ ಖಾಜಾ ಬಂದೇನವಾಜ ದರ್ಗಾ
- ನಂದರ್ಗಾ: ಶ್ರೀ ರೇವಣಸಿದ್ದೇಶ್ವರ.
- ಗೌಡಗಾಂವ:ಶ್ರೀ ಮಲ್ಲಿಕಾರ್ಜುನ ದೇವಸ್ಥಾನ
- ಹೊಸೂರು: ಅಂಭಾಭವಾನಿ ದೇವಿ, ಭೀರಲಿಂಗೇಶ್ವರ ದೇವಸ್ಥಾನ
ಅಂಕಲಗಾ: ಮಲ್ಲಿಕಾರ್ಜುನ ದೇವಸ್ಥಾನ, ಭಾಗ್ಯವಂತಿ ದೇವಸ್ಥಾನ, ಹಜರತ್ ಜಿಂದಾಶಾ ಮಾದರಸಾಹೇಬ ದರ್ಗಾ
ಅಫಜಲ ಖಾನ
ಬದಲಾಯಿಸಿಅಫಜಲ ಖಾನ ಎನ್ನುವವರು ಔರಂಗಜೇಬನನ್ನು ಕೊಂದನು.ಇದರ ಸವಿ ನೆನಪಿಗಾಗಿ ಅಫಜಲಪುರ ಎಂದು ನಾಮಕರಣ ಮಾಡಲಾಗಿದೆ. ಅಫಜಲ ಖಾನ ಒಬ್ಬ ವೀರ.