ಇಂಡಿ ನಗರ ಹಾಗೂ ತಾಲ್ಲೂಕು ಕೇಂದ್ರ. ಇದು ನಿಯೋಜಿತ ಜಿಲ್ಲೆ ೫ ತಾಲೂಕು ಒಳಗೊಂಡಿದೆ. ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ಇಂಡಿ ಪಟ್ಟಣವು ರಾಜ್ಯ ಹೆದ್ದಾರಿ - ೪೧ ರಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೬೦ಕಿ. ಮಿ. ದೂರ ಇದೆ.

ಇಂಡಿ
ಇಂಡಿ
village
Websitehttp://www.inditown.mrc.gov.in/
ಇಂಡಿ

ಚರಿತ್ರೆ

ಬದಲಾಯಿಸಿ

ನಗರವು ಶ್ರೀ ಶಾಂತೇಶ್ವರ ಸ್ವಾಮಿಜಿಗಳ ತಪೋಭೂಮಿಯಾಗಿತ್ತು. ಇಂಡಿಯಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕಗಳು ಹಾಗೂ ಇತರೆ ಕಚೇರಿಗಳಿವೆ.

ಭೌಗೋಳಿಕ

ಬದಲಾಯಿಸಿ

ಕರ್ನಾಟಕದ ಉತ್ತರದ ಗಡಿಯಲ್ಲಿರುವ ಇಂಡಿ ತಾಲ್ಲೂಕದ ಉತ್ತರಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ , ದಕ್ಷಿಣಕ್ಕೆ ವಿಜಯಪುರ ತಾಲ್ಲೂಕು ಮತ್ತು ಪೂರ್ವಕ್ಕೆ ಸಿಂದಗಿ ತಾಲ್ಲೂಕುಗಳಿವೆ. ಈ ತಾಲ್ಲೂಕದ ವಿಸ್ತೀರ್ಣ ೨,೨೨೫ ಚ.ಕಿಮೀ ಮತ್ತು ವಾರ್ಷಿಕ ಮಳೆ ೫೯ ಸೆ.ಮೀ. ಇಂಡಿ ತಾಲ್ಲೂಕವು ೧೨೨ ಹಳ್ಳಿಗಳು, ೪೪ ಗ್ರಾಮ ಪಂಚಾಯತಗಳು, ಮತ್ತು ೩ ಹೊಬಳಗಳನ್ನೊಳಗೊಂಡಿದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಚಡಚಣ ನಗರವನ್ನು ಹೊಸ ತಾಲ್ಲೂಕನ್ನಾಗಿ ರಚಿಸಿದೆ.

ಹವಾಮಾನ

ಬದಲಾಯಿಸಿ
  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦- ೬೦೦ ಮಿ.ಮಿ.ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮ ಕಿ.ಮಿ./ಗಂ. (ಜೂನ), ೧೯ ಕಿ.ಮಿ./ಗಂ. (ಜುಲೈ) ಹಾಗೂ ೧೭ ಕಿ.ಮಿ./ಗಂ. (ಅಗಸ್ಟ್) ಇರುತ್ತದೆ.

ಜನಸಂಖ್ಯೆ

ಬದಲಾಯಿಸಿ

ನಗರದಲ್ಲಿ ಜನಸಂಖ್ಯೆ (೨೦೧೧) ಸುಮಾರು ೩೮,೨೧೭ ಇದೆ. ಅದರಲ್ಲಿ ೧೯,೫೩೧ ಪುರುಷರು ಮತ್ತು ೧೮,೬೮೬ ಮಹಿಳೆಯರು ಇದ್ದಾರೆ.

ಆಹಾರ (ಖಾದ್ಯ)

ಬದಲಾಯಿಸಿ

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

ಬದಲಾಯಿಸಿ
 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು (ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮಗಳು

ಬದಲಾಯಿಸಿ

ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆಗಳು

ಬದಲಾಯಿಸಿ

ನಗರದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯಗಳು

ಬದಲಾಯಿಸಿ
  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ವೆಂಕಟೇಶ್ವರ ದೇವಾಲಯ
  • ಶ್ರೀ ಪಾಂಡುರಂಗ ದೇವಾಲಯ
  • ಶ್ರೀ ಹಣಮಂತ ದೇವಾಲಯ

ಮಸೀದಿಗಳು

ಬದಲಾಯಿಸಿ

ನಗರದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿಗಳು ಇವೆ.

ಹಬ್ಬಗಳು

ಬದಲಾಯಿಸಿ

ಪ್ರತಿವರ್ಷ ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ನೀರಾವರಿ

ಬದಲಾಯಿಸಿ

ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆಗಳು

ಬದಲಾಯಿಸಿ

ಕೃಷ್ಣಾ ನದಿಯ ನಾರಾಯಣಪುರ ಆಣೆಕಟ್ಟು ಮತ್ತು ಆಲಮಟ್ಟಿ ಆಣೆಕಟ್ಟೆಯಿಂದ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ

ಬದಲಾಯಿಸಿ

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ

ಬದಲಾಯಿಸಿ

ಫಲವತ್ತಾದ ಭೂಮಿ ಇದುವುದರಿಂದ 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆಗಳು

ಬದಲಾಯಿಸಿ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ(ಕ್ಯಾರೆಟ) ಮೆಣಸಿನಕಾಯಿ, ಸೌತೆಕಾಯಿ, ಮೂಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತ್ತಂಬರಿ ಇತ್ಯಾದಿ.

ಸಾಕ್ಷರತೆ

ಬದಲಾಯಿಸಿ

2011 ವರ್ಷದ ಪ್ರಕಾರ ಸಾಕ್ಷರತೆಯು ೬೭%. ಅದರಲ್ಲಿ ೭೭% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ. ಪುರುಷರು ೨ ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು ೧.೫ ಲಕ್ಷಕ್ಕೂ ಹೆಚ್ಚು ಮಹಿಳೆಯರು ಒಟ್ಟಾರೆಯಾಗಿ ೨ ಲಕ್ಷಕ್ಕೂ ಹೆಚ್ಚು ಸಾಕ್ಷರರಾಗಿದ್ದಾರೆ.

ಶಿಕ್ಷಣ

ಬದಲಾಯಿಸಿ

ಪ್ರಮುಖ ಶಿಕ್ಷಣ ಸಂಸ್ಥೆಗಳು

  • ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಇಂಡಿ
  • ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಇಂಡಿ
  • ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಇಂಡಿ
  • ಸರಕಾರಿ ಉರ್ದು ಪ್ರೌಡ ಶಾಲೆ, ಇಂಡಿ
  • ಲಯನ್ಸ್ ಶಾಲೆ, ಇಂಡಿ
  • ಶಾಂತಿನಿಕೇತನ ಪ್ರೌಡ ಶಾಲೆ, ಇಂಡಿ
  • ಶ್ರೀ ಶಾಂತೇಶ್ವರ ಪ್ರೌಡ ಶಾಲೆ, ಇಂಡಿ
  • ನ್ಯಾಶನಲ್ ಉರ್ದು ಪ್ರೌಡ ಶಾಲೆ, ಇಂಡಿ
  • ಆಂಜಲ್ಸ್ ಆಂಗ್ಲ ಮಾಧ್ಯಮ ಪ್ರೌಡ ಶಾಲೆ, ಇಂಡಿ
  • ಶ್ರೀ ಶಾಂತೇಶ್ವರ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಇಂಡಿ
  • ಶ್ರೀ ಗುರುಬಸವ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಇಂಡಿ
  • ಅಂಜುಮನ್ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಇಂಡಿ
  • ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಇಂಡಿ
  • ಶ್ರೀ ಜಿ.ಆರ್.ಗಂಧಿ ಕಲಾ ಮತ್ತು ಶ್ರೀ ವಾಯ್.ಎ.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ಇಂಡಿ
  • ಖೇಡ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಇಂಡಿ
  • ಶ್ರೀ ನೂರೊಂದೇಶ್ವರ ಕೈಗಾರಿಕಾ ತರಬೇತಿ ಕೇಂದ್ರ,ಲೋಣಿ, ಇಂಡಿ
  • ಶ್ರೀ ಸಂಗಮೇಶ್ವರ ಕೈಗಾರಿಕಾ ತರಬೇತಿ ಕೇಂದ್ರ,ಲಚ್ಯಾಣ, ಇಂಡಿ
  • ಇಂದಿರಾ ಕೈಗಾರಿಕಾ ತರಬೇತಿ ಕೇಂದ್ರ,ಲೋಣಿ, ಇಂಡಿ
  • ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಲೋಣಿ ಬಿ.ಕೆ, ಇಂಡಿ
  • ಶ್ರೀ ಪದ್ಮಾವತಿ ಶಿಕ್ಷಣ ಸಂಸ್ಥೆಯ ಪದ್ಮಾವತಿ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಲೋಣಿ ಬಿ.ಕೆ, ಇಂಡಿ
  • ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಚಡಚಣ, ಇಂಡಿ
  • ಶ್ರೀ ನೂರೊಂದೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಇಂಡಿ
  • ಶ್ರೀ ಶಾಂತೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಇಂಡಿ
  • ಶ್ರೀ ವೀರಭದ್ರೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಇಂಡಿ
  • ಕರ್ನಾಟಕ ಶಿಕ್ಷಣ ಮಹಾವಿದ್ಯಾಲಯ, ಇಂಡಿ

ಪ್ರಮುಖ ವ್ಯಕ್ತಿಗಳು

ಬದಲಾಯಿಸಿ

ವಿದ್ಯುತ್ ಪರಿವರ್ತನಾ ಕೇಂದ್ರಗಳು

ಬದಲಾಯಿಸಿ

ಇಂಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು

  • ೨೨೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಇಂಡಿ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಇಂಡಿ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಝಳಕಿ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಲಚ್ಯಾಣ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಹಿರೇಬೇವನೂರ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಚಡಚಣ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಅಥರ್ಗಾ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಹೊರ್ತಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಹಲಸಂಗಿ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಧೂಳಖೇಡ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ತಡವಲಗಾ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ,ತಾಂಬಾ
  • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ನಿವರಗಿ

ಬ್ಯಾಂಕುಗಳು

ಬದಲಾಯಿಸಿ
  • ಎಸ್.ಬಿ.ಐ.ಬ್ಯಾಂಕ್ - ಇಂಡಿ, ಚಡಚಣ,
  • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ - ಭತಗುಣಕಿ, ಧೂಳಖೇಡ, ಇಂಡಿ, ಜಿಗಜಿವಣಿ, ಲೋಣಿ ಬಿ.ಕೆ., ನಾದ ಬಿ.ಕೆ., ಚಡಚಣ
  • ಸಿಂಡಿಕೇಟ್ ಬ್ಯಾಂಕ್ - ಹೊರ್ತಿ, ಇಂಡಿ, ಕೊರವಾರ, ಲಚ್ಯಾಣ, ಚಡಚಣ
  • ವಿಜಯ ಬ್ಯಾಂಕ್, ಇಂಡಿ
  • ಡಿ.ಸಿ.ಸಿ. ಬ್ಯಾಂಕ್, ಇಂಡಿ
  • ಶ್ರೀ ರೇವಣಸಿದ್ದೇಶ್ವರ ಸಹಕಾರಿ ಬ್ಯಾಂಕ್, ಇಂಡಿ
  • ಶ್ರೀ ಶಾಂತೇಶ್ವರ ಸಹಕಾರಿ ಬ್ಯಾಂಕ್, ಇಂಡಿ
  • ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್, ಇಂಡಿ
  • ಚಡಚಣ ಪಟ್ಟಣ ಸಹಕಾರಿ ಬ್ಯಾಂಕ್, ಚಡಚಣ , ಇಂಡಿ
  • ಇಂಡಿ ಪಟ್ಟಣ ಸಹಕಾರಿ ಬ್ಯಾಂಕ್, ಚಡಚಣ , ಇಂಡಿ
  • ಶ್ರೀ ರೇವಣಸಿದ್ದೇಶ್ವರ ಸಹಕಾರಿ ಬ್ಯಾಂಕ್, ಇಂಡಿ
  • ಡಿ.ಸಿ.ಸಿ. ಬ್ಯಾಂಕ್, ವಿಜಯಪುರ (ಮುಖ್ಯ ಕಚೇರಿ)

ಇಂಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು

ಬದಲಾಯಿಸಿ

ಇಂಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು

ಬದಲಾಯಿಸಿ

ಅಗರಖೇಡ, ಅಹಿರಸಂಗ, ಆಲೂರ, ಅಂಜುಟಗಿ, ಅಥರ್ಗಾ, ಬಬಲಾದ ಕುಂತಿದೇವಿ, ಬಳ್ಳೊಳ್ಳಿ, ಬರಡೋಲ, ಬಸನಾಳ, ಬೆನಕನಹಳ್ಳಿ, ಭತಗುಣಕಿ, ಚಡಚಣ, ಚಿಕ್ಕಬೇನೂರ, ದೇವರ ನಿಂಬರಗಿ, ಧೂಳಖೇಡ, ಹಡಲಸಂಗ, ಹಲಸಂಗಿ, ಹಂಜಗಿ, ಹತ್ತಳ್ಳಿ, ಹಿಂಗಣಿ, ಹಿರೇಬೇವನೂರ, ಹೊರ್ತಿ, ಇಂಚಗೇರಿ, ಜಿಗಜೇವಣಿ, ಖ್ಯಾಡಗಿ, ಕೊಳುರಗಿ, ಲಚ್ಯಾಣ, ಲಾಳಸಂಗಿ, ಲೋಣಿ ಬಿ.ಕೆ., ಮಸಳಿ ಬಿ.ಕೆ., ಮಿರಗಿ, ನಾದ ಕೆ. ಡಿ., ನಂದರಗಿ, ನಿಂಬಾಳ ಕೆ.ಡಿ., ನಿವರಗಿ, ಪಡನೂರ, ರೇವತಗಾಂವ, ರೂಗಿ, ಸಾಲೋಟಗಿ, ಶಿರಶ್ಯಾಡ, ತಡವಲಗಾ, ತಾಂಬಾ, ತೆನಹಳ್ಳಿ, ಉಮರಾಣಿ, ಝಳಕಿ, ಚವಡಿಹಾಳ ಸಂಗೋಗಿ,

ಇಂಡಿ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು

ಬದಲಾಯಿಸಿ

ನಾಡ ಕಚೇರಿಗಳು

ಬದಲಾಯಿಸಿ

ಇಂಡಿ ತಾಲ್ಲೂಕಿನ ನಾಡ ಕಚೇರಿಗಳು

ಬಳ್ಳೊಳ್ಳಿ

ಕಂದಾಯ ಕಚೇರಿಗಳು

ಬದಲಾಯಿಸಿ

ಇಂಡಿ ತಾಲ್ಲೂಕಿನ ಕಂದಾಯ ಕಚೇರಿಗಳು ಬಳ್ಳೊಳ್ಳಿ, ಚಡಚಣ, ಇಂಡಿ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಬ್ಯಾಂಕಗಳು)

ಬದಲಾಯಿಸಿ

ಇಂಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಬ್ಯಾಂಕಗಳು)

ಅಗರಖೇಡ, ಅಹಿರಸಂಗ, ಅರ್ಜನಾಳ, ಅಂಜುಟಗಿ, ಅಥರ್ಗಾ, ಬರಡೋಲ, ಬಸನಾಳ, ಬೆನಕನಹಳ್ಳಿ, ಭತಗುಣಕಿ, ಚಡಚಣ, ಭೂಯ್ಯಾರ, ಚಿಕ್ಕಬೇನೂರ, ದೇವರ ನಿಂಬರಗಿ, ಧೂಳಖೇಡ, ಗೊರನಾಳ, ಗೋಡಿಹಾಳ, ಗೊಳಸಾರ, ಹಲಗುಣಕಿ, ಹಲಸಂಗಿ, ಹಂಜಗಿ, ಹತ್ತಳ್ಳಿ, ಹಿರೇಬೇವನೂರ, ಹೊರ್ತಿ, ಹಾವಿನಾಳ, ಇಂಚಗೇರಿ, ಇಂಡಿ, ಜಿಗಜೇವಣಿ, ಖ್ಯಾಡಗಿ, ಲಚ್ಯಾಣ, ಲೋಣಿ ಬಿ.ಕೆ., ಮರಸನಹಳ್ಳಿ, ಮಿರಗಿ, ನಾದ ಬಿ.ಕೆ., ನಂದರಗಿ, ನಿಂಬಾಳ ಕೆ.ಡಿ., ನಿವರಗಿ, ಪಡನೂರ, ರೇವತಗಾಂವ, ಸಾಲೋಟಗಿ, ಸಾತಲಗಾಂವ, ಸಾವಳಸಂಗ, ಶಿರಶ್ಯಾಡ, ಶಿರಾಡೋಣ, ಸೋನಕನಹಳ್ಳಿ, ತಡವಲಗಾ, ತಾಂಬಾ, ಉಮರಜ, ಉಮರಾಣಿ, ಝಳಕಿ ಸಂಗೋಗಿ,

ಕೆರೆಗಳು

ಬದಲಾಯಿಸಿ

ಇಂಡಿ ತಾಲ್ಲೂಕಿನ ಕೆರೆಗಳು

ಕೂಡಗಿ, ಚಡಚಣ, ಹಡಲಸಂಗ, ಕೊಳುರಗಿ, ಕೊಟ್ನಾಳ, ರಾಜನಾಳ, ಹಂಜಗಿ, ನಿಂಬಾಳ ಬಿ.ಕೆ., ಇಂಚಗೇರಿ, ತಡವಲಗಾ, ಲೋಣಿ ಕೆ.ಡಿ., ನಂದರಗಿ, ಜಿಗಜಿವಣಿ, ಜಿಗಜಿವಣಿ ಸಣ್ಣ ಕೆರೆ, ಗುಂದವಾನ-1, ಗುಂದವಾನ-2, ಹೊರ್ತಿ, ಹಳಗುಣಕಿ, ಗೋಡಿಹಾಳ.

ಇಂಡಿ ತಾಲ್ಲೂಕಿನ ಜಿನುಗು ಕೆರೆಗಳು

ಅಗಸನಾಳ, ಇಂಚಗೇರಿ, ಸಾತಲಗಾಂವ ಪಿ.ಐ., ಬಬಲಾದ, ಇಂಡಿ-1, ಇಂಡಿ-2, ಜಿಗಜಿವಣಿ, ಸಾವಳಸಂಗ, ಹಿರೇಬೇವನೂರ, ಹಿರೇರೂಗಿ, ಹಾಲಳ್ಳಿ, ದೇಗಿನಾಳ-2, ಚಂದು ತಾಂಡಾ, ಶಿರಾಡೋಣ, ಹಡಲಸಂಗ, ಗೋಡಿಹಾಳ, ಶಿರಕನಹಳ್ಳಿ.

ಆರಕ್ಷಕ (ಪೋಲಿಸ್) ಠಾಣೆ

ಬದಲಾಯಿಸಿ
  • ಇಂಡಿ ನಗರದ ಪೋಲಿಸ್ ಠಾಣೆ
  • ಇಂಡಿ ಗ್ರಾಮಾಂತರ ಠಾಣೆ.

ಇಂಡಿ ತಾಲ್ಲೂಕಿನ ಪೋಲಿಸ್ ಠಾಣೆಗಳು

ಬದಲಾಯಿಸಿ

ಸಕ್ಕರೆ ಕಾರ್ಖಾನೆಗಳು

ಬದಲಾಯಿಸಿ

ಪ್ರಾಥಮಿಕ ಆರೋಗ್ಯ ಕೇಂದ್ರಗಳು

ಬದಲಾಯಿಸಿ

ಇಂಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು

ಚಡಚಣ, ಇಂಡಿ, ಹೊರ್ತಿ, ಇಂಚಗೇರಿ, ಅಗರಖೇಡ, ತಡವಲಗಾ, ತಾಂಬಾ, ಅಥರ್ಗಾ, ಹಲಸಂಗಿ, ಬರಡೋಲ, ಲೋಣಿ ಬಿ.ಕೆ., ಜಿಗಜೇವಣಿ, ಲಚ್ಯಾಣ, ಝಳಕಿ, ಚಿಕ್ಕಬೇವನೂರ.

ಪಶು ಆಸ್ಪತ್ರೆಗಳು

ಬದಲಾಯಿಸಿ

ಪಶು ಆಸ್ಪತ್ರೆ, ಇಂಡಿ

ಪಶು ಚಿಕಿತ್ಸಾಲಯಗಳು

ತಡವಲಗಾ, ಅಥರ್ಗಾ, ಹೊರ್ತಿ, ಚಡಚಣ, ತಾಂಬಾ, ಹಲಸಂಗಿ, ಝಳಕಿ, ಧೂಳಖೇಡ, ಹಿರೇಬೇವನೂರ, ಜಿಗಜೇವಣಿ, ಅಂಜುಟಗಿ, ಬಳ್ಳೊಳ್ಳಿ , ಬರಡೋಲ, ನಿಂಬಾಳ, ಸಾಲೋಟಗಿ, ನಾದ ಕೆ. ಡಿ.

ಪ್ರಾಥಮಿಕ ಪಶು ಚಿಕಿತ್ಸಾಲಯಗಳು

ಅಗರಖೇಡ, ಲಚ್ಯಾಣ, ಭತಗುಣಕಿ, ಅಹಿರಸಂಗ, ಖೇಡಗಿ, ಹಿರೇಮಸಳಿ, ನಿವರಗಿ, ರೇವತಗಾಂವ, ಲೋಣಿ ಬಿ.ಕೆ., ಇಂಚಗೇರಿ, ಸಾತಲಗಾಂವ.

ಹಾಲು ಉತ್ಪಾದಕ ಘಟಕಗಳು

ಬದಲಾಯಿಸಿ

ಇಂಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು

ಅಂಜುಟಗಿ, ಅಥರ್ಗಾ, ಆಲೂರ, ಅಣಚಿ, ಬರಡೋಲ, ಭತಗುಣಕಿ, ಕಪನಿಂಬರಗಿ, ಹಲಸಂಗಿ, ಹಿಂಗಣಿ, ಹಂಜಗಿ, ಹತ್ತಳ್ಳಿ, ಹೊಳಿಸಂಖ, ಹೊರ್ತಿ, ಇಂಚಗೇರಿ, ಜಿಗಜೇವಣಿ, ಕಾತ್ರಾಳ, ಕೆರೂರ, ಮರಗೂರ, ರೇವತಗಾಂವ, ಸಾಲೋಟಗಿ, ಸಾತಲಗಾಂವ, ಸಾವಳಸಂಗ, ಉಮರಜ, ಉಮರಾಣಿ, ಪಡನೂರ, ನಿಂಬಾಳ ಕೆ.ಡಿ., ಕೊಳುರಗಿ, ಗೋವಿಂದಪುರ, ಗೋಟ್ಯಾಳ, ಧೂಳಖೇಡ, ದೇಗಿನಾಳ, ಚನೇಗಾಂವ, ಬಳ್ಳೊಳ್ಳಿ, ಬಬಲೇಶ್ವರ, ಅಣಚಿ, ಅಹಿರಸಂಗ, ಅಗರಖೇಡ. ಸಂಗೋಗಿ

ತಾಲ್ಲೂಕು ಪಂಚಾಯತಿಗಳು

ಬದಲಾಯಿಸಿ
  • ತಾಲ್ಲೂಕು ಪಂಚಾಯತ, ಇಂಡಿ

ಇಂಡಿ ತಾಲ್ಲೂಕಿನಲ್ಲಿ ಒಟ್ಟು 33 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.

ಇಂಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು

ಜಿಲ್ಲಾ ಪಂಚಾಯತ

ಬದಲಾಯಿಸಿ

ಇಂಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು

ಸರಕಾರಿ ವಾಹನ ನಿಲ್ದಾಣಗಳು

ಬದಲಾಯಿಸಿ

ರಾಜಕೀಯ

ಬದಲಾಯಿಸಿ

ಇಂಡಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ೮ ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಇಂಡಿ ಮತಕ್ಷೇತ್ರ ೨೦೧೮ ದಲ್ಲಿ ೧,೧೮,೬೨೬ ಪುರುಷರು, ೧,೦೯,೮೧೮ ಮಹಿಳೆಯರು ಸೇರಿ ಒಟ್ಟು ೨,೨೮,೪೪೪ ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

ಪುಣ್ಯಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದ ಇಂಡಿ ಕ್ಷೇತ್ರವು ವಿಜಯಪುರ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ. ಕರ್ನಾಟಕದ ಉತ್ತರದ ಗಡಿಯಲ್ಲಿರುವ ಇಂಡಿಯು ಉತ್ತರಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ , ದಕ್ಷಿಣಕ್ಕೆ ವಿಜಯಪುರ ತಾಲ್ಲೂಕು ಮತ್ತು ಪೂರ್ವಕ್ಕೆ ಸಿಂದಗಿ ತಾಲ್ಲೂಕುಗಳಿವೆ.

ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಬಂಥನಾಳದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. ಲಚ್ಯಾಣದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು.

ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ ಸಾಲೋಟಗಿಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ.

ಭೀಮಾ ನದಿ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚು ಹರಿಯುವುದೇ ಇಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ. ಅಪರಾಧಿಕ ಚಟುವಟಿಕೆಗಳಿಂದಲೂ ಇಂಡಿ ರಾಜ್ಯದಲ್ಲೇ ಕುಖ್ಯಾತ. ಭೀಮಾ ತೀರ ಎಂದರೇ ಇಂದಿಗೂ ಬೆಚ್ಚಿ ಬೀಳುವವರು ಇದ್ದಾರೆ.

ಯಶವಂತರಾಯಗೌಡ ಪಾಟೀಲರು ಪಂಚಾಯಿತಿ ಮಟ್ಟದಿಂದಲೇ ಈ ಹಂತಕ್ಕೆ ಬೆಳೆದವರು. ೧೯೯೫ ರಲ್ಲಿ ಅಂಜುಟಗಿ ಜಿಪಂ ಕ್ಷೇತ್ರದಿಂದ ಆಯ್ಕೆಯಾದ ಇವರು, ಮೊದಲ ಸಲ ಗೆದ್ದಾಗಲೇ ಜಿಲ್ಲಾ ಪರಿಷತ್‌ ಪ್ರತಿಪಕ್ಷದ ನಾಯಕರಾಗಿದ್ದರು. ೨೦೦೦ ರಲ್ಲಿ ೨ನೇ ಬಾರಿ ಆಯ್ಕೆಯಾಗಿ ೨೦೦೨-೦೩ ರಲ್ಲಿ ಜಿಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೦೫ ರಲ್ಲಿ ೩ನೇ ಬಾರಿ ಜಿಪಂ ಸದಸ್ಯರಾದರು. ೨೦೦೮ ರಲ್ಲಿ ಇಂಡಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ ೫೭೧ ಮತಗಳಿಂದ ಪರಾಭವಗೊಂಡರು. ೨೦೧೩ ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು.

ಕ್ಷೇತ್ರದ ವಿಶೇಷತೆ

  • ಮಲ್ಲಪ್ಪ ಸುರಪುರ, ರೇವಣಸಿದ್ದಪ್ಪ ಕಲ್ಲೂರ ಹಾಗೂ ರವಿಕಾಂತ ಪಾಟೀಲರು ತಲಾ ೩ ಬಾರಿ ಆಯ್ಕೆಯಾಗಿದ್ದಾರೆ. ಇಂಡಿ ವಿಧಾನಸಭಾ ಕ್ಷೇತ್ರದ ಮತದಾರರು ಮೂವರಿಗೆ ತಲಾ ಮೂರು ಬಾರಿ ಶಾಸಕರಾಗುವ ಅವಕಾಶ ನೀಡಿದ್ದಾರೆ. ಅದರಲ್ಲೂ ರವಿಕಾಂತ ಪಾಟೀಲ ಪಕ್ಷೇತರರಾಗಿ ಹ್ಯಾಟ್ರಿಕ್‌ ವಿಜಯಭೇರಿ ಬಾರಿಸಿದ ಕ್ಷೇತ್ರವಿದು.
  • ೧೯೭೮, ೧೯೮೩, ೧೯೮೯ ರಲ್ಲಿ ರೇವಣಸಿದ್ದಪ್ಪ ಕಲ್ಲೂರ ಶಾಸಕರಾದ ಆಗಿನ ಮುಖ್ಯಮಂತ್ರಿ ಗುಂಡೂರಾವ್‌ಗೆ ೯ ಕೆ.ಜಿ. ತೂಕದ ಬೆಳ್ಳಿ ಪಂಪ್‌ಸೆಟ್‌ ನೀಡಿದ ಹೆಗ್ಗಳಿಕೆ ಇವರದ್ದು.
  • ೧೯೯೪, ೧೯೯೯, ೨೦೦೪ ರಲ್ಲಿ ಪಕ್ಷೇತರರಾಗಿ ಮೊದಲ ಬಾರಿಗೆ ಹ್ಯಾಟ್ರಿಕ್‌ ವಿಜಯಭೇರಿ ದಾಖಲಿಸಿದ ಕೀರ್ತಿ ರವಿಕಾಂತ ಪಾಟೀಲರದ್ದು. ಈ ಸಾಧನೆ ವಿಜಯಪುರ ಜಿಲ್ಲೆಯಲ್ಲಿ ಇದುವರೆಗೆ ಯಾರೂ ಮಾಡಿರದ ಅಪರೂಪದ ದಾಖಲೆಯಾಗಿದೆ.
  • ೨೦೦೮ ರಲ್ಲಿ ಡಾ.ಸರ್ವಭೌಮ ಬಗಲಿಯವರು ಬಿಜೆಪಿಯಿಂದ ಕೇವಲ ಒಮ್ಮೆ ಆಯ್ಕೆಯಾಗಿದ್ದು ಈ ಕ್ಷೇತ್ರದ ವಿಶೇಷತೆಯಾಗಿದೆ.
  • ಯಶವಂತರಾಯಗೌಡ ಪಾಟೀಲರು ಕಳೆದ ೪೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮರಗೂರಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ೨೦೧೮ ರಲ್ಲಿ ಪೂರ್ಣಗೊಳಿಸಿದ್ದು ಇವರ ಹೆಗ್ಗಳಿಕೆ.
  • ಯಶವಂತಗೌಡ ಪಾಟೀಲರು ೨೦೧೮-೧೯ ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಮ್ಮಿಸ್ರ ಸರ್ಕಾರದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದರು.
  • ಇಂಡಿ ವಿಧಾನಸಭಾ ಕ್ಷೇತ್ರದಿಂದ ಸರ್ಕಾರದಲ್ಲಿ ಇದುವರೆಗೆ ಯಾರೂ ಮಂತ್ರಿ ಪದವಿ ಅಲಂಕರಿಸಿಲ್ಲ.

ಜನಪ್ರತಿನಿಧಿಗಳ ವಿವರ

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತರು ಪಕ್ಷ ಮತಗಳು ಉಪಾಂತ ವಿಜೇತರು ಪಕ್ಷ ಮತಗಳು
ಇಂಡಿ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
೨೦೧೮ ಇಂಡಿ ವಿಧಾನಸಭಾ ಕ್ಷೇತ್ರ ಯಶವಂತರಾಯಗೌಡ ಪಾಟೀಲ ಕಾಂಗ್ರೇಸ್ ೫೦,೪೦೧ ಬಿ.ಡಿ.ಪಾಟೀಲ (ಹಂಜಗಿ) ಜೆಡಿಎಸ್ ೪೦,೪೬೩
೨೦೧೩ ಇಂಡಿ ವಿಧಾನಸಭಾ ಕ್ಷೇತ್ರ ಯಶವಂತರಾಯಗೌಡ ಪಾಟೀಲ ಕಾಂಗ್ರೇಸ್ ೫೮,೫೬೨ ರವಿಕಾಂತ ಪಾಟೀಲ ಕೆ.ಜೆ.ಪಿ. ೨೫,೨೬೦
೨೦೦೮ ಇಂಡಿ ವಿಧಾನಸಭಾ ಕ್ಷೇತ್ರ ಡಾ.ಸರ್ವಭೌಮ ಬಗಲಿ ಬಿ.ಜೆ.ಪಿ. ೨೯,೪೫೬ ಯಶವಂತರಾಯಗೌಡ ಪಾಟೀಲ ಕಾಂಗ್ರೇಸ್ ೨೮,೮೮೫
೨೦೦೪ ಇಂಡಿ ವಿಧಾನಸಭಾ ಕ್ಷೇತ್ರ ರವಿಕಾಂತ ಪಾಟೀಲ ಪಕ್ಷೇತರ ೪೨,೯೮೪ ಬಿ.ಜಿ.ಪಾಟೀಲ (ಹಲಸಂಗಿ) ಕಾಂಗ್ರೇಸ್ ೩೩,೬೫೨
೧೯೯೯ ಇಂಡಿ ವಿಧಾನಸಭಾ ಕ್ಷೇತ್ರ ರವಿಕಾಂತ ಪಾಟೀಲ ಪಕ್ಷೇತರ ೪೪,೫೨೩ ಬಿ.ಆರ್.ಪಾಟೀಲ (ಅಂಜುಟಗಿ) ಕಾಂಗ್ರೇಸ್ ೨೫,೨೦೩
೧೯೯೪ ಇಂಡಿ ವಿಧಾನಸಭಾ ಕ್ಷೇತ್ರ ರವಿಕಾಂತ ಪಾಟೀಲ ಪಕ್ಷೇತರ ೨೩,೨೦೦ ಬಿ.ಜಿ.ಪಾಟೀಲ (ಹಲಸಂಗಿ) ಜೆ.ಡಿ.ಎಸ್. ೧೯,೪೬೯
೧೯೮೯ ಇಂಡಿ ವಿಧಾನಸಭಾ ಕ್ಷೇತ್ರ ಆರ್.ಆರ್. ಕಲ್ಲೂರ ಕಾಂಗ್ರೇಸ್ ೨೭,೧೫೪ ಬಿ.ಜಿ.ಪಾಟೀಲ (ಹಲಸಂಗಿ) ಜೆ.ಡಿ.ಎಸ್. ೧೮,೪೩೮
೧೯೮೫ ಇಂಡಿ ವಿಧಾನಸಭಾ ಕ್ಷೇತ್ರ ಎನ್.ಎಸ್.ಖೇಡ ಜೆ.ಎನ್.ಪಿ ೩೦,೩೪೯ ಭೀಮನಗೌಡ ಪಾಟೀಲ ಕಾಂಗ್ರೇಸ್ ೨೩,೪೫೧
೧೯೮೩ ಇಂಡಿ ವಿಧಾನಸಭಾ ಕ್ಷೇತ್ರ ಆರ್.ಆರ್. ಕಲ್ಲೂರ ಕಾಂಗ್ರೇಸ್ ೨೪,೧೩೨ ಬಸನಗೌಡ ಪಾಟೀಲ ಸ್ವತಂತ್ರ ೧೧,೦೯೮
೧೯೭೮ ಇಂಡಿ ವಿಧಾನಸಭಾ ಕ್ಷೇತ್ರ ಆರ್.ಆರ್. ಕಲ್ಲೂರ ಜೆ.ಎನ್.ಪಿ ೨೬,೦೨೨ ಸಿದ್ದೂಬಾ ಮಿಸಾಳೆ ಕಾಂಗ್ರೇಸ್ ೧೫,೮೫೬
ಇಂಡಿ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
೧೯೭೨ ಇಂಡಿ ವಿಧಾನಸಭಾ ಕ್ಷೇತ್ರ ಮಲ್ಲಪ್ಪ ಸುರಪುರ ಕಾಂಗ್ರೇಸ್ ೧೭,೫೧೭ ರೇವಣಸಿದ್ದಪ್ಪ ಕಲ್ಲೂರ ಎನ್.ಸಿ.ಓ ೧೪,೪೯೦
೧೯೬೭ ಇಂಡಿ ವಿಧಾನಸಭಾ ಕ್ಷೇತ್ರ ಮಲ್ಲಪ್ಪ ಸುರಪುರ ಎಸ್.ಡಬ್ಲೂ.ಎ ೧೫,೭೬೯ ರೇವಣಸಿದ್ದಪ್ಪ ಕಲ್ಲೂರ ಕಾಂಗ್ರೇಸ್ ೧೧,೭೦೩
೧೯೬೨ ಇಂಡಿ ವಿಧಾನಸಭಾ ಕ್ಷೇತ್ರ ಗುರುಲಿಂಗಪ್ಪ ಪಾಟೀಲ ಎಸ್.ಡಬ್ಲೂ.ಎ ೧೪,೬೨೪ ಮಲ್ಲಪ್ಪ ಸುರಪುರ ಕಾಂಗ್ರೇಸ್ ೧೩,೬೭೩
೧೯೫೭ ಇಂಡಿ ವಿಧಾನಸಭಾ ಕ್ಷೇತ್ರ-೧ ಜಟ್ಟೇಪ್ಪ ಕಬಾಡಿ ಕಾಂಗ್ರೇಸ್ ೧೭,೪೦೨ ಲಚ್ಚಪ್ಪ ಸಂಧಿಮನಿ ಸ್ವತಂತ್ರ ೧೬,೩೯೦
೧೯೫೭ ಇಂಡಿ ವಿಧಾನಸಭಾ ಕ್ಷೇತ್ರ-೨ ಮಲ್ಲಪ್ಪ ಸುರಪುರ ಕಾಂಗ್ರೇಸ್ ೨೩,೦೩೩ ಯಶವಂತರಾವ್ ಪಾಟೀಲ ಎಸ್.ಎಫ.ಸಿ ೬,೫೮೬
ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
೧೯೫೧ ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ-೧ ಜಟ್ಟೇಪ್ಪ ಕಬಾಡಿ ಕಾಂಗ್ರೇಸ್ ೩೦,೨೩೧ ಬಾಬುರಾಮ ಹುಜರೆ ಎಸ್.ಎಫ.ಸಿ ೫,೪೫೭
೧೯೫೧ ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ-2 ಮಲ್ಲಪ್ಪ ಸುರಪುರ ಕಾಂಗ್ರೇಸ್ ೩೦,೩೨೨ ರಾವಪ್ಪ ಕಾಳೆ ಸ್ವತಂತ್ರ ೪,೫೩೬

ಸಾಹಿತ್ಯ

ಬದಲಾಯಿಸಿ

ಹೆದ್ದಾರಿಗಳು

ಬದಲಾಯಿಸಿ

ದೂರವಾಣಿ ಸಂಕೇತಗಳು

ಬದಲಾಯಿಸಿ
  • ಇಂಡಿ - ೦೮೩೫೯
  • ಚಡಚಣ - ೦೮೪೨೨

ದೂರವಾಣಿ ವಿನಿಮಯ ಕೇಂದ್ರಗಳು

ಇಂಡಿ ತಾಲ್ಲೂಕಿನಲ್ಲಿರುವ ಬಿ.ಎಸ್.ಎನ್.ಎಲ್ ದೂರವಾಣಿ ವಿನಿಮಯ ಕೇಂದ್ರಗಳು

ಅಗರಖೇಡ, ಅಥರ್ಗಾ, ಬಳ್ಳೊಳ್ಳಿ, ಬರಡೋಲ, ಭತಗುಣಕಿ, ಚಡಚಣ, ದೇವರ ನಿಂಬರಗಿ, ಧೂಳಖೇಡ, ಹಲಸಂಗಿ, ಇಂಡಿ, ಗೊಳಸಾರ, ಹಿರೇಬೇವನೂರ, ಹೊರ್ತಿ, ಇಂಚಗೇರಿ, ಖೇಡಗಿ, ಲೋಣಿ ಬಿ.ಕೆ., ಲಚ್ಯಾಣ, ಮಸಳಿ ಬಿ.ಕೆ., ರೇವತಗಾಂವ, ಹಿರೇರೂಗಿ, ಸಾಲೋಟಗಿ, ತಡವಲಗಾ, ತಾಂಬಾ.

ಪಿನಕೋಡ್ ಸಂಕೇತಗಳು

ಬದಲಾಯಿಸಿ

ಗ್ರಂಥಾಲಯಗಳು / ವಾಚನಾಲಯಗಳು

ಬದಲಾಯಿಸಿ
  • ಗ್ರಂಥಾಲಯ, ಇಂಡಿ.
  • ಗ್ರಾ.ಪಂ. ಗ್ರಂಥಾಲಯ, ಚಡಚಣ.

ದೂರವಾಣಿ ಕೈಪಿಡಿ

ಬದಲಾಯಿಸಿ

ಇಂಡಿ ತಾಲ್ಲೂಕು ಸರ್ಕಾರಿ ಕಾರ್ಯಾಲಯಗಳು

  • ತಹಸಿಲ್ದಾರರ ಕಾರ್ಯಾಲಯ - ೩೨೨೭೫೦
  • ಖಜಾನೆ ಕಾರ್ಯಾಲಯ - ೩೨೨೬೮೦
  • ಆಹಾರ ಮತ್ತು ನಾಗರಿಕ ಪುರೈಕೆ ಕಾರ್ಯಾಲಯ - ೩೨೨೨೨೦
  • ಪ್ರಧಾನ ನ್ಯಾಯಾಧೀಶರ ಕಾರ್ಯಾಲಯ - ೩೨೨೨೭೬
  • ಭೂಮಿ ಕಾರ್ಯಾಲಯ - ೩೨೨೦೫೦
  • ಉಪನೋಂದನಿ ಅಧಿಕಾರಿಗಳ ಕಾರ್ಯಾಲಯ - ೨೦೫೭೬೩

ಉಲ್ಲೇಖಗಳು

ಬದಲಾಯಿಸಿ



"https://kn.wikipedia.org/w/index.php?title=ಇಂಡಿ&oldid=1229824" ಇಂದ ಪಡೆಯಲ್ಪಟ್ಟಿದೆ