ಕೋಲ್ಹಾರ

ವಿಜಯಪುರ
(ಕೊಲ್ಹಾರ ಇಂದ ಪುನರ್ನಿರ್ದೇಶಿತ)

ಕೊಲ್ಹಾರ ಒಂದು ಪಟ್ಟಣ. ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿದೆ.[] ಕೊಲ್ಹಾರ ಗ್ರಾಮವು ವಿಜಯಪುರ - ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ - ೨೧೮ರಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೪೦ ಕಿ. ಮಿ. ದೂರದಲ್ಲಿದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ ಕೊಲ್ಹಾರ ನಗರವನ್ನು ಹೊಸ ತಾಲ್ಲೂಕೆಂದು ರಚಿಸಿದೆ. []

ಕೋಲ್ಹಾರ
ಕೊಲ್ಹಾರ
village
Population
 (೨೦೧೨)
 • Total೧೫೦೦೦

ಚರಿತ್ರೆ

ಬದಲಾಯಿಸಿ

ಕೊಲ್ಹಾರದಲ್ಲಿ ಒಳ್ಳೆಯ ಶಿಕ್ಷಣ, ವ್ಯಾಪಾರ, ಹಣಕಾಸು, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಪೋಲಿಸ್ ಠಾಣೆ, ಅಂಚೆ ಕಚೇರಿ, ಎಸ್.ಬಿ.ಐ ಬ್ಯಾಂಕ್ ಹಾಗೂ ಇತರೆ ಕಚೇರಿಗಳಿವೆ.

ಭೌಗೋಳಿಕ

ಬದಲಾಯಿಸಿ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

ಬದಲಾಯಿಸಿ
  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಏಪ್ರಿಲ್‍ನಲ್ಲಿ), ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C - ೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C - ೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ೩೦೦ - ೬೦೦ಮಿಮೀಗಳಷ್ಟು ಮಳೆ ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮೀ/ಗಂ (ಜೂನ್), ೧೯.೬ ಕಿಮೀ/ಗಂ (ಜುಲೈ)ಹಾಗೂ ೧೭.೫ ಕಿಮೀ/ಗಂ (ಆಗಸ್ಟ್) ಇರುತ್ತದೆ.

ಜನಸಂಖ್ಯೆ

ಬದಲಾಯಿಸಿ

೨೦೧೧ರ ಜನಸಂಖ್ಯೆ ಪ್ರಕಾರ ಗ್ರಾಮದಲ್ಲಿ ೧೬೫೬೮ ಜನಸಂಖ್ಯೆ ಇದೆ. ಅದರಲ್ಲಿ ೮೪೭೧ ಪುರುಷರು ಮತ್ತು ೮೦೯೭ ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ

ಬದಲಾಯಿಸಿ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

ಬದಲಾಯಿಸಿ
 
ಉತ್ತರ ಕರ್ನಾಟಕದ ಊಟ

ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯಗಳು

ಬದಲಾಯಿಸಿ

ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಮಸೀದಿಗಳು

ಬದಲಾಯಿಸಿ

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ಹಬ್ಬಗಳು

ಬದಲಾಯಿಸಿ

ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ನೀರಾವರಿ

ಬದಲಾಯಿಸಿ

ಗ್ರಾಮದ ಪ್ರತಿಶತ ೮೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆ

ಬದಲಾಯಿಸಿ

ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಮುಳವಾಡ ಏತ ನೀರಾವರಿ ಕಾಲುವೆ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಕೃಷಿ ಮತ್ತು ತೋಟಗಾರಿಕೆ

ಬದಲಾಯಿಸಿ

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ

ಬದಲಾಯಿಸಿ

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದೆ.

ಉದ್ಯೋಗ

ಬದಲಾಯಿಸಿ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆಗಳು

ಬದಲಾಯಿಸಿ

ಆಹಾರ ಬೆಳೆಗಳು

ಬದಲಾಯಿಸಿ

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಅಕ್ಕಿ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ಬದಲಾಯಿಸಿ

ದ್ರಾಕ್ಷಿ, ದಾಳಿಂಬೆ, ಚಿಕ್ಕು, ನಿಂಬೆ, ಮಾವು, ಬಾಳೆ,ಬಾರಿಹಣ್ಣು, ಕಬ್ಬು, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದಲಾಯಿಸಿ

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಶಿಕ್ಷಣ

ಬದಲಾಯಿಸಿ
  • ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ
  • ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ
  • ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ
  • ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ, ಕೊಲ್ಹಾರ, ಬಸವನ ಬಾಗೇವಾಡಿ
  • ಶ್ರೀ ಸಂಗಮೇಶ್ವರ ಪ್ರೌಢ ಶಾಲೆ, ಕೊಲ್ಹಾರ
  • ಶ್ರೀ ಮಾರುತಿ ಪ್ರೌಢ ಶಾಲೆ, ಕೊಲ್ಹಾರ
  • ಶ್ರೀ ಸರಕಾರಿ ಪ್ರೌಢ ಶಾಲೆ, ಕೊಲ್ಹಾರ
  • ಸಿಕ್ಯಾಬ್ ಉರ್ದು ಪ್ರೌಢ ಶಾಲೆ, ಕೊಲ್ಹಾರ
  • ಶ್ರೀ ಸಂಗಮೇಶ್ವರ ಪದವಿಪೂರ್ವ ಮಹಾವಿದ್ಯಾಲಯ, ಕೊಲ್ಹಾರ
  • ಸಿಕ್ಯಾಬ್ ಪದವಿಪೂರ್ವ ಮಹಾವಿದ್ಯಾಲಯ, ಕೊಲ್ಹಾರ
  • ಶ್ರೀ ಸಂಗಮೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಕೊಲ್ಹಾರ
  • ಅಂಜುಮನ್ ಎ - ಇಸ್ಲಾಂ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಕೊಲ್ಹಾರ
  • ಶ್ರೀ ಕೃಷ್ಣ ಕೈಗಾರಿಕಾ ತರಬೇತಿ ಕೇಂದ್ರ, ಕೊಲ್ಹಾರ
  • ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಕೊಲ್ಹಾರ

ರಾಜಕೀಯ

ಬದಲಾಯಿಸಿ

ಕೊಲ್ಹಾರ ಗ್ರಾಮವು ವಿಜಯಪುರ ಜಿಲ್ಲೆಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರ ದ ವ್ಯಾಪ್ತಿಯಲ್ಲಿ ಬರುತ್ತದೆ.

ಮಾಜಿ ಮಂತ್ರಿ ಹಾಗೂ ಶಾಸಕರಾದ ಎಸ್.ಕೆ.ಬೆಳ್ಳುಬ್ಬಿ(ಸಂಗಣ್ಣ ಕಲ್ಲಪ್ಪ ಬೆಳ್ಳುಬ್ಬಿ)ಯವರು ಕೊಲ್ಹಾರ ಗ್ರಾಮದವರು.

ಆರೋಗ್ಯ

ಬದಲಾಯಿಸಿ

ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ.

ಆರಕ್ಷಕ (ಪೋಲಿಸ್) ಠಾಣೆ

ಬದಲಾಯಿಸಿ

ಗ್ರಾಮದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು ೪೦ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.

ವಿದ್ಯುತ್ ಪರಿವರ್ತನಾ ಕೇಂದ್ರ

ಬದಲಾಯಿಸಿ

೩೩ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರವು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಒದಗಿಸುತ್ತದೆ.

ಬ್ಯಾಂಕುಗಳು

ಬದಲಾಯಿಸಿ
  • ಎಸ್.ಬಿ.ಐ.ಬ್ಯಾಂಕ್, ಕೊಲ್ಹಾರ
  • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ, ಕೊಲ್ಹಾರ
  • ಬ್ಯಾಂಕ್ ಆಫ್ ಇಂಡಿಯಾ, ಕೊಲ್ಹಾರ
  • ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ, ಕೊಲ್ಹಾರ

ಪಟ್ಟಣ ಪಂಚಾಯತಿ

ಬದಲಾಯಿಸಿ

ಕೊಲ್ಹಾರ ಪಟ್ಟಣ ಪಂಚಾಯತಿ ಕಾರ್ಯಾಲಯದ ಅಂತಾರ್ಜಾಲ ತಾಣ Archived 2020-01-26 ವೇಬ್ಯಾಕ್ ಮೆಷಿನ್ ನಲ್ಲಿ.

ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆ

ಬದಲಾಯಿಸಿ

ಪಶು ಆಸ್ಪತ್ರೆ

ಬದಲಾಯಿಸಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

ಬದಲಾಯಿಸಿ
  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕೊಲ್ಹಾರ

ರೈತ ಸಂಪರ್ಕ ಕೇಂದ್ರ

ಬದಲಾಯಿಸಿ

ಹಾಲು ಉತ್ಪಾದಕ ಸಹಕಾರಿ ಸಂಘ

ಬದಲಾಯಿಸಿ

ಸೇತುವೆ

ಬದಲಾಯಿಸಿ

ಕೃಷ್ಣಾ ನದಿಗೆ ಅಡ್ಡಲಾಗಿ ಸುಮಾರು ೧೦ಕ್ಕೂ ಹೆಚ್ಚು ಸೇತುವೆ ಮತ್ತು ಬ್ಯಾರೇಜುಗಳನ್ನು ನಿರ್ಮಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿ ಉದ್ದವಾದ ಸೇತುವೆಯನ್ನು ವಿಜಯಪುರ ಜಿಲ್ಲೆಯ ಕೊಲ್ಹಾರ ಗ್ರಾಮದ ಬಳಿ ಅಡ್ಡಲಾಗಿ ನಿರ್ಮಿಸಲಾಗಿದೆ.[] ಕೃಷ್ಣಾ ನದಿಯನ್ನು ಉತ್ತರ ಕರ್ನಾಟಕದಲ್ಲಿ ಹಿರಿ ಹೊಳಿಯಂತಲು ಕರೆಯುತ್ತಾರೆ. ಕರ್ನಾಟಕ ರಾಜ್ಯದಲ್ಲಿಯೇ ಅತಿ ದೊಡ್ಡ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ ನ್ನು ಈ ನದಿಯಿಂದ ಕೈಗಿತ್ತಿಕೊಳ್ಳಲಾಗಿದೆ. ಈ ನದಿಯು ಉತ್ತರ ಕರ್ನಾಟಕದ ಜೀವ ನದಿಯಾಗಿದೆ. ರಾಯಚೂರ ಜಿಲ್ಲೆಯ ಕುಡ್ಲು ಎಂಬಲ್ಲಿ ಭೀಮಾ ನದಿಯು ಕೃಷ್ಣಾ ನದಿಯನ್ನು ಸೇರುತ್ತದೆ.

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು

ಬದಲಾಯಿಸಿ

ರಾಷ್ಟ್ರೀಯ ಹೆದ್ದಾರಿ - ೨೧೮ => ಹುಬ್ಬಳ್ಳಿ - ನವಲಗುಂದ - ನರಗುಂದ - ಬಾಗಲಕೋಟೆ (ಗದ್ದನಕೇರಿ ಕ್ರಾಸ್) - ಬೀಳಗಿ(ಕ್ರಾಸ್) - ವಿಜಯಪುರ - ಸಿಂದಗಿ - ಜೇವರ್ಗಿ - ಗುಲಬುರ್ಗಾ - ಹುಮನಾಬಾದ - ಬೀದರ್.

ರಾಜ್ಯ ಹೆದ್ದಾರಿ - ೧೨೪ => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.

ಸರಕಾರಿ ವಾಹನ ನಿಲ್ದಾಣ

ಬದಲಾಯಿಸಿ

ಗ್ರಂಥಾಲಯಗಳು / ವಾಚನಾಲಯಗಳು

ಬದಲಾಯಿಸಿ

ನೇಕಾರರ ಸಹಕಾರ ಸಂಘ

ಬದಲಾಯಿಸಿ

ಗ್ರಾಮದಲ್ಲಿ ನೇಕಾರರ ಸಹಕಾರ ಸಂಘವಿದೆ.

ಉಲ್ಲೇಖಗಳು

ಬದಲಾಯಿಸಿ
  1. lokadarshan.news/news/view/-Vijayapura--The-government-urges-the-government-to-declare-the-Basavanabagewadi--Kolhara-and-Nidagundi-taluks-as-drough/ವಿಜಯಪುರ--ಬಸವನಬಾಗೇವಾಡಿ--ಕೊಲ್ಹಾರ--ನಿಡಗುಂದಿ-ತಾಲೂಕುಗಳು--ಬರಪೀಡಿತ-ತಾಲೂಕುಗಳೆಂದು-ಘೋಷಿಸಲು-ಸರಕಾರಕ್ಕೆ-ಆಗ್ರಹ
  2. https://vijaykarnataka.com/news/vijayapura/-/articleshow/53353757.cms
  3. https://pipanews.com/korti-kolhara-bridge-is-attracting-attention-what-is-special-about-it-korthi-kolhar-bridge-between-vijayapura-and-bagalkot-in-national-highway-218-news18-kannada-pipa-news/
"https://kn.wikipedia.org/w/index.php?title=ಕೋಲ್ಹಾರ&oldid=1178749" ಇಂದ ಪಡೆಯಲ್ಪಟ್ಟಿದೆ