ತಿಕೋಟಾ
ತಿಕೋಟಾ ಪಟ್ಟಣವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೨೦ ಕಿ. ಮಿ. ದೂರದಲ್ಲಿದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ ವಿಜಯಪುರ ತಾಲ್ಲೂಕಿನ ತಿಕೋಟಾ ನಗರವನ್ನು ಹೊಸ ತಾಲ್ಲೂಕೆಂದು ರಚಿಸಿದೆ.[೧][೨]
ತಿಕೋಟಾ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಬಿಜಾಪುರ |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
೧೨೦೦ km² - 770 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೧೨) - ಸಾಂದ್ರತೆ |
೧೫೦೦೦ - ೫೦/ಚದರ ಕಿ.ಮಿ. |
ಚರಿತ್ರೆಸಂಪಾದಿಸಿ
ತಿಕೋಟಾದಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆಯ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್. ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಪೋಲಿಸ್ ಠಾಣೆ, ಅಂಚೆ ಕಚೇರಿ, ಎಸ್.ಬಿ.ಐ. ಬ್ಯಾಂಕ್ ಹಾಗೂ ಇತರೆ ಕಚೇರಿಗಳಿವೆ.
ವಿಜಯಪುರ ಜಿಲ್ಲೆ ಎಂದೊಡನೆ ಥಟ್ಟನೆ ನೆನಪಿಗೆ ಬರುವುದು ಬರಗಾಲ ಮತ್ತು ಸುಡು ಸುಡು ಬಿಸಿಲು. ವಿದೇಶಕ್ಕೆ ರಫ್ತಾಗುವ ಬೀಜರಹಿತ ದ್ರಾಕ್ಷಿ, ದಾಳಿಂಬೆ, ಬಾಳೆ, ಬಾರೆ ಹಣ್ಣುಗಳ ಖ್ಯಾತಿಯ ತಿಕೋಟಾ ಸಿಗುತ್ತದೆ. ಇಲ್ಲಿ ನಡೆಯುವ ಹಾಜಿ ಮಸ್ತಾನ್ ಉರುಸ್ ಭಾವೈಕ್ಯದ ಪ್ರತೀಕವಾಗಿದೆ.
ಏಷ್ಯಾದಲ್ಲಿಯೇ ಪ್ರಪ್ರಥಮ ಸರ್ಕಸ್ ಕಂಪೆನಿ ಪ್ರಾರಂಭಿಸಿದ ವಿಷ್ಣುಪಂತ ಛತ್ರೆ ಹಾಗೂ ಕಾಶೀನಾಥ ಛತ್ರೆ, ಚೌಡಕಿ ಪದದ ಗೌರವ್ವ ಮಾದರ ಮುಂತಾ ದವರು ತಿಕೋಟಾದ ಹೆಮ್ಮೆಯ ಮಕ್ಕಳು. ಕಪ್ಪು ಕಲ್ಲಿನ ತಾಜಮಹಲ್ ಎಂದು ಕರೆಯಿಸಿಕೊಳ್ಳುವ ಇಬ್ರಾಹಿಂ ರೋಜಾದ ಶಿಲ್ಪಿ ಮಲೀಕ್ ಸಂದಲನ ಸಮಾಧಿ ಹೊಂದಿದ ಈ ಗ್ರಾಮ ಹಲವು ವೈಶಿಷ್ಟ್ಯಗಳಿಂದ ಕೂಡಿದೆ.
ಏಷ್ಯಾದಲ್ಲಿಯೇ ಮೊದಲ ಸರ್ಕಸ್ ಕಂಪನಿ ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿರುವ ತಿಕೋಟಾ ಗ್ರಾಮದ ವಿಷ್ಣುಪಂತ ಛತ್ರೆಯವರು ಭೂಗಂಧರ್ವರ ಎಲ್ಲ ವಿಕ್ಷಿಪ್ತತೆಯನ್ನು ಒಪ್ಪಿಕೊಂಡು, ಸಹಿಸಿಕೊಂಡು ಅವರನ್ನು ಕಟ್ಟಿಕೊಂಡು ದೇಶ-ವಿದೇಶಗಳನ್ನು ತಿರುಗಿದರು. ಅವರ ಸಂಗೀತಕ್ಕೆ ಮಾರು ಹೋಗಿದ್ದ ವಿಷ್ಣುಪಂತ ಛತ್ರೆ ತಮ್ಮ ಸರ್ಕಸ್ ಕಂಪನಿಯಲ್ಲಿನ ಅನೇಕ ಹುಲಿಗಳೊಂದಿಗೆ ಭೂಗಂಧರ್ವರನ್ನೂ ಸಂಗೀತ ಲೋಕದ ಹುಲಿಯೆಂದೇ ಭಾವಿಸಿ ಪೋಷಿಸಿದರು. ಭೂಗಂಧರ್ವರು ಧೃಪದ ಗಾಯನದಲ್ಲಿ ನಿಷ್ಣಾತರಾಗಿದ್ದರು. ನಾಲ್ವರು ಗಂಧರ್ವರಲ್ಲಿ ಇವರೊಬ್ಬರೇ ಹೆಚ್ಚಾಗಿ ಧೃಪದ ಹಾಡಿದವರು. ಛತ್ರೆಯವರು ಇವರಿಂದ ಕಲಿತು ಕರ್ನಾಟಕದ ಏಕೈಕ ಧೃಪದ ಗಾಯಕ ಎನಿಸಿದರು.
ಮಹಾರಾಷ್ಟ್ರದ ಕುರುಂದವಾಡ ಸಂಸ್ಥಾನದಲ್ಲಿ ತಿಕೋಟಾ ತಾಲ್ಲೂಕು ಕೇಂದ್ರವಾಗಿತ್ತು. ಈಗ ಹೋಬಳಿ ಕೇಂದ್ರ ವಾಗಿದೆ. ಹೀಗೆ ಹಲವು ವಿಶೇಷಗಳ ಈ ಊರಿನಲ್ಲಿ ಪ್ರತಿವರ್ಷ ಜರುಗುವ ಹಾಜಿ ಮಸ್ತಾನ್ ಉರುಸ್ ಹಿಂದೂ-ಮುಸ್ಲಿಮರ ಭಾವೈಕ್ಯದ ಪ್ರತೀಕವಾಗಿದೆ. ಈ ವರ್ಷ ಸೆ.12ರಿಂದ ಮೂರು ದಿನ ಉರುಸ್ ಜರುಗಲಿದೆ.
ಜಾತ್ರೆ ನಿಮಿತ್ತ 20 ದಿನಗಳವರೆಗೆ ಎಲ್ಲ ಜಾತಿಯವರು ರೋಜಾ (ಹಗಲು ಉಪವಾಸ) ವ್ರತ ಮಾಡುತ್ತಾರೆ. ಉರುಸ್ (ಪುಣ್ಯತಿಥಿ) ನ ಮೊದಲ ದಿನ ಸಂದಲ್ (ಗಂಧ) ಹೊರಡುವುದು ಬ್ರಾಹ್ಮಣರಾದ ರಾಮರಾವ್ ದೇಸಾಯಿ ಅವರ ಮನೆಯಿಂದ. ಮರುದಿನ ನೈವೇದ್ಯದ ಜೊತೆ ಗಲೀಫ್ (ವಸ್ತ್ರ) ಬರುವುದು ಲಿಂಗಾಯತರಾದ ಡಾ. ಮಲ್ಲನಗೌಡ ಪಾಟೀಲರ ಮನೆಯಿಂದ.
ಮೂರು ದಿನಗಳ ಕಾಲ ಕುಸ್ತಿ, ಬಯಲಾಟ, ನಾಟಕ ಕಾರ್ಯಕ್ರಮಗಳು ಇರುತ್ತವೆ. ಬಹು ಸಂಖ್ಯೆಯಲ್ಲಿ ಹಿಂದೂ–ಮುಸ್ಲಿಮರು ಪಾಲ್ಗೊಂಡು ಸಂಭ್ರಮದಿಂದ ಜಾತ್ರೆಗೆ ಮೆರುಗು ತರುತ್ತಾರೆ. ಇಲ್ಲಿ ಜಾತಿ, ಮತ, ಪಂಥ, ಪಂಗಡಗಳ ಸೋಂಕಿಲ್ಲ. ಮೇಲು-ಕೀಳೆಂಬ ಭೇದ-ಭಾವವಿಲ್ಲ. ಭಕ್ತಿ-ಶ್ರದ್ಧೆಯಿಂದ ಒಂದಾಗಿ ಆರಾಧಿಸುತ್ತಾರೆ.
ಹಾಜಿ ಮಸ್ತಾನ್ ಸ್ವಧರ್ಮದ ಬಗ್ಗೆ ಪ್ರೀತಿ ಮತ್ತು ಪರಧರ್ಮಗಳ ಬಗ್ಗೆ ಗೌರವವಿದ್ದ ಇಸ್ಲಾಂ ಧರ್ಮದ ಸೂಫಿ ಸಂತನಾಗಿದ್ದ. ಸಾಧನೆಯ ಬಲದಿಂದ ಸಿದ್ಧ ಪುರುಷನಾಗಿದ್ದ. ‘ಲೋಕವೇ ನನ್ನ ಮನೆ ಮನು ಕುಲವೇ ನನ್ನ ಕುಟುಂಬ’ ಎಂಬ ವಿಶಾಲ ತತ್ವದಿಂದ ಎಲ್ಲರ ಕಲ್ಯಾಣ ವನ್ನೇ ಬಯಸಿದ ಸಂತ ಶ್ರೇಷ್ಠನಾಗಿದ್ದ.
ಇಸ್ಲಾಂ ಧರ್ಮದ ಪಂಚಸೂತ್ರಗಳಲ್ಲಿ ಕೊನೆಯದಾದ ಹಜ್ ಯಾತ್ರೆ ಇಂದಿನ ವೈಜ್ಞಾನಿಕ ಯುಗದಲ್ಲಿ ಸುಲಭವೆನಿಸಿರ ಬಹುದು. ಆದರೆ ಹಿಂದಿನ ಕಾಲದಲ್ಲಿ ಸಾಮಾನ್ಯರಿಗೆ ಅಸಾಧ್ಯವಾದ ಕೆಲಸ. ಅದು ಹಾಜಿ ಮಸ್ತಾನ್ ಅವರಂಥ ಆಧ್ಯಾತ್ಮಿಕ ಸಾಧಕರಿಗೆ ಮಾತ್ರ ಸಾಧ್ಯ ವಾಗುತ್ತಿತ್ತು. ತಮ್ಮ ಯೋಗ ಸಾಧನೆ ಯಿಂದ ಹಜ್ ಯಾತ್ರೆ ಮಾಡಿ ಬಂದ ಕೀರ್ತಿ ಇವರಿಗಿದೆ ಎಂಬುದು ಪ್ರತೀತಿ.
ಬಡಕಲ್ಲ ಸಾಹೇಬರ ಸಮಾಧಿ ಪಕ್ಕದಲ್ಲಿದೆ. ದಿಗಂಬರರಾಗಿದ್ದ ಇವರ ನಿಜನಾಮ ಸಂಗೀನ್ ಶಾ ವಲಿ. ಇವರ ಶಿಷ್ಯ ನೂರಜಿ ಸಾಬ್ ಬಡಕಲ್ಲನಿಂದಾಗಿ ‘ಬಡಕಲ್ಲ ಸಾಹೇಬ’ ಆಗಿದೆ. ಏಳು ನದಿಗಳ ನೀರನ್ನು ಒಂದೇ ದಿನದಲ್ಲಿ ತಂದು ಇಲ್ಲಿ ಚಾವಣಿ ಕಟ್ಟಬೇಕೆಂಬ ಐತಿಹ್ಯವಿದೆ. ಅದಿನ್ನೂ ಕೈಗೂಡಿಲ್ಲ.
ಹಾಜಿಮಸ್ತಾನ್ ದರ್ಗಾ ಕಟ್ಟಿಸಿ ದವರು ಹಿಂದೂಗಳಾದ ಪೀರಶೆಟ್ಟಿ ಮನೆತನದವರು. ಜಾತ್ರೆಯಿಂದ ಪ್ರಥಮ ಗಂಧ (ಸಂದಲ) ಏರಿಸುವ ಗೌರವದ ಸ್ಥಾನ ಅವರಿಗಿದೆ. ಮೊದಲು ಬಡಕಲ್ಲ ಸಾಹೇಬರ ದರ್ಗಾಕ್ಕೆ ಹೋಗಿ ನಂತರ ಹಾಜಿ ಮಸ್ತಾನ ದರ್ಗಾಕ್ಕೆ ಹೋಗು ವುದು ಪರಂಪರೆಯಾಗಿ ಮುಂದು ವರಿದಿದೆ. ಜಾತ್ರೆಗೆ ಬರುವ ಲಕ್ಷಾಂತರ ಜನರಿಗಾಗಿ ದರ್ಗಾದ ಹಿಂಬದಿ ಇರುವ ಕೆರೆಗೆ ಕೃಷ್ಣಾ ನದಿಯಿಂದ ನೀರು ತುಂಬಿಸಲಾಗಿದೆ.
ಭೌಗೋಳಿಕಸಂಪಾದಿಸಿ
ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಹವಾಮಾನಸಂಪಾದಿಸಿ
- ಮಳೆಗಾಲ-ಚಳಿಗಾಲ-ಬೇಸಿಗೆಕಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43°C ವರೆಗೆ(ಮೇನಲ್ಲಿ), ಚಳಿಗಾಲದಲ್ಲಿ ಅತೀ ಕಡಿಮೆ ಅಂದರೆ 8°C ವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆಕಾಲ - 35°C-42°C (ಫೆಬ್ರುವರಿ, ಮಾರ್ಚ, ಏಪ್ರೀಲ್ ಮತ್ತು ಮೇ ತಿಂಗಳು)
- ಚಳಿಗಾಲ - 19°C-28°C (ಅಕ್ಟೂಬರ್, ನವೆಂಬರ್, ಡಿಶೆಂಬರ್ ಮತ್ತು ಜನೇವರಿ ತಿಂಗಳು)
- ಮಳೆಗಾಲ - 18°C-32°C ( ಜೂನ್, ಜೂಲೈ, ಅಗಷ್ಟ್ ಮತ್ತು ಸಪ್ಟೆಂಬರ್ ತಿಂಗಳು)
- ಮಳೆ - ಪ್ರತಿ ವರ್ಷ ಮಳೆಯು 300 - 600 ಮಿಮಿ ಗಳಷ್ಟು ಸುರಿಯುತ್ತದೆ.
- ಗಾಳಿ - ಗಾಳಿಯ ವೇಗ 18 ಕಿಮಿ/ಗಂ (ಜೂನ್), 19 ಕಿಮಿ/ಗಂ (ಜೂಲೈ)ಹಾಗೂ 17 ಕಿಮಿ/ಗಂ (ಅಗಸ್ಟ್)ನಲ್ಲಿ ಬೀಸುತ್ತದೆ.
ಜನಸಂಖ್ಯೆಸಂಪಾದಿಸಿ
ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 11,984 ಇದೆ. ಅದರಲ್ಲಿ 6,111 ಪುರುಷರು ಮತ್ತು 5,873 ಮಹಿಳೆಯರು ಇದ್ದಾರೆ.
ಸಾಂಸ್ಕೃತಿಕಸಂಪಾದಿಸಿ
ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ಕಲೆ ಮತ್ತು ಸಂಸ್ಕೃತಿಸಂಪಾದಿಸಿ
ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಧರ್ಮಸಂಪಾದಿಸಿ
ಭಾಷೆಸಂಪಾದಿಸಿ
ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.
ದೇವಾಲಯಸಂಪಾದಿಸಿ
- ಶ್ರೀ ಮಹಾಲಕ್ಷ್ಮಿ ದೇವಾಲಯ
- ಶ್ರೀ ದುರ್ಗಾದೇವಿ ದೇವಾಲಯ
- ಶ್ರೀ ಮಲ್ಲಿಕಾರ್ಜುನ ದೇವಾಲಯ
- ಶ್ರೀ ಬಸವೇಶ್ವರ ದೇವಾಲಯ
- ಶ್ರೀ ವೆಂಕಟೇಶ್ವರ ದೇವಾಲಯ
- ಶ್ರೀ ಪಾಂಡುರಂಗ ದೇವಾಲಯ
- ಶ್ರೀ ಹಣಮಂತ ದೇವಾಲಯ
ಮಸೀದಿಸಂಪಾದಿಸಿ
ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
- ಶ್ರೀ ಹಜರತ್ ಹಾಜಿಮಸ್ತಾನ ದರ್ಗಾ
- ಶ್ರೀ ಬಡಕಲ್ ಖಾಜಾ ದರ್ಗಾ
ನೀರಾವರಿಸಂಪಾದಿಸಿ
ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಕಾಲುವೆಸಂಪಾದಿಸಿ
ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ತುಬಚಿ-ಬಬಲೇಶ್ವರ ಏತ ನೀರಾವರಿ ಕಾಲುವೆ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.
ಕೃಷಿ ಮತ್ತು ತೋಟಗಾರಿಕೆಸಂಪಾದಿಸಿ
ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.
ಆರ್ಥಿಕತೆಸಂಪಾದಿಸಿ
ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.
ಉದ್ಯೋಗಸಂಪಾದಿಸಿ
ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
ಬೆಳೆಸಂಪಾದಿಸಿ
ಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಸಸ್ಯಸಂಪಾದಿಸಿ
ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
ಪ್ರಾಣಿಸಂಪಾದಿಸಿ
ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
ಹಬ್ಬಸಂಪಾದಿಸಿ
ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಶಿಕ್ಷಣಸಂಪಾದಿಸಿ
- ಕೊಲ್ಹಾರ ಕಿರಿಯ ಪ್ರಾಥಮಿಕ ಶಾಲೆ, ತಿಕೋಟಾ
- ಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆ, ತಿಕೋಟಾ
- ಶಿವಲಕ್ಷ್ಮಿ ಕಿರಿಯ ಪ್ರಾಥಮಿಕ ಶಾಲೆ, ತಿಕೋಟಾ
- ಸಿದ್ದಿವಿನಾಯಕ ಕಿರಿಯ ಪ್ರಾಥಮಿಕ ಶಾಲೆ, ತಿಕೋಟಾ
- ಸ್ವಾಮಿ ವಿವೇಕಾನಂದ ಕಿರಿಯಪ್ರಾಥಮಿಕ ಶಾಲೆ, ತಿಕೋಟಾ
- ಗಜಾನನ ಹಿರಿಯ ಪ್ರಾಥಮಿಕ ಶಾಲೆ, ತಿಕೋಟಾ
- ಮಲಿಕ್ ಸಂದಲ್ ಹಿರಿಯ ಪ್ರಾಥಮಿಕ ಶಾಲೆ, ತಿಕೋಟಾ
- ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ತಿಕೋಟಾ
- ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ತಿಕೋಟಾ
- ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ತಿಕೋಟಾ
- ಬಿ.ಎಲ್.ಡಿ.ಈ.ಎ ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ತಿಕೋಟಾ
- ಬಿ.ಎಲ್.ಡಿ.ಈ.ಎ ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ತಿಕೋಟಾ
- ಮುರಾರ್ಜಿ ದೇಸಾಯಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ತಿಕೋಟಾ
- ಮಲಿಕ್ ಸಂದಲ್ ಉರ್ದು ಪ್ರೌಢ ಶಾಲೆ, ತಿಕೋಟಾ
- ಬಿ.ಎಲ್.ಡಿ.ಈ.ಎ ಸಂಸ್ಥೆಯ ಎ.ಬಿ.ಜತ್ತಿ ಪ್ರೌಢ ಶಾಲೆ, ತಿಕೋಟಾ
- ಬಿ.ಎಲ್.ಡಿ.ಈ.ಎ ಸಂಸ್ಥೆಯ ಎ.ಬಿ.ಜತ್ತಿ ಪದವಿಪೂರ್ವ ಮಹಾವಿದ್ಯಾಲಯ, ತಿಕೋಟಾ
- ಬಿ.ಎಲ್.ಡಿ.ಈ.ಎ ಸಂಸ್ಥೆಯ ನ್ಯೂ ಕಲಾ ಮಹಾವಿದ್ಯಾಲಯ, ತಿಕೋಟಾ
- ಆದರ್ಶ ಪ್ಯಾರಾ ವೈದ್ಯಕೀಯ ಮಹಾವಿದ್ಯಾಲಯ, ತಿಕೋಟಾ
- ಶ್ರೀ ವಿನಾಯಕ ಕೈಗಾರಿಕಾ ತರಬೇತಿ ಕೇಂದ್ರ, ತಿಕೋಟಾ
ಆರೋಗ್ಯಸಂಪಾದಿಸಿ
ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ.
ಪಶು ಆಸ್ಪತ್ರೆಸಂಪಾದಿಸಿ
- ಪಶು ಆಸ್ಪತ್ರೆ, ತಿಕೋಟಾ
ಆರಕ್ಷಕ (ಪೋಲಿಸ್) ಠಾಣೆಸಂಪಾದಿಸಿ
ಗ್ರಾಮದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು ೫೦ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.
ನೆಮ್ಮದಿ ಕೇಂದ್ರಸಂಪಾದಿಸಿ
ಗ್ರಾಮದಲ್ಲಿ ನೆಮ್ಮದಿ ಕೇಂದ್ರವಿದೆ.
ಮಳೆ ಮಾಪನ ಕೇಂದ್ರಸಂಪಾದಿಸಿ
- ಮಳೆ ಮಾಪನ ಕೇಂದ್ರ, ತಿಕೋಟಾ
ಬ್ಯಾಂಕಗಳುಸಂಪಾದಿಸಿ
- ಐಸಿಐಸಿಐ ಬ್ಯಾಂಕ್, ತಿಕೋಟಾ
- ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ತಿಕೋಟಾ
- ಡಿ.ಸಿ.ಸಿ.ಬ್ಯಾಂಕ, ತಿಕೋಟಾ
ಸಾಕ್ಷರತೆಸಂಪಾದಿಸಿ
ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.
ರಾಜಕೀಯಸಂಪಾದಿಸಿ
ಗ್ರಾಮವು ಬಬಲೇಶ್ವರ ವಿಧಾನಸಭಾ ಕ್ಷೇತ್ರ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
ಪಟ್ಟಣ ಪಂಚಾಯತಿಸಂಪಾದಿಸಿ
- ಪಟ್ಟಣ ಪಂಚಾಯತಿ ಕಾರ್ಯಾಲಯ, ತಿಕೋಟಾ
ನೆಮ್ಮದಿ (ಹೋಬಳಿ) ಕೇಂದ್ರಸಂಪಾದಿಸಿ
- ನೆಮ್ಮದಿ (ಹೋಬಳಿ) ಕೇಂದ್ರ, ತಿಕೋಟಾ
ಕಂದಾಯ ಕಚೇರಿಸಂಪಾದಿಸಿ
- ಕಂದಾಯ ಕಚೇರಿ, ತಿಕೋಟಾ
ದೂರವಾಣಿ ವಿನಿಮಯ ಕೇಂದ್ರಸಂಪಾದಿಸಿ
- ದೂರವಾಣಿ ವಿನಿಮಯ ಕೇಂದ್ರ(ಬಿ.ಎಸ್.ಎನ್.ಎಲ್), ತಿಕೋಟಾ
ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಸಂಪಾದಿಸಿ
- ತಿಕೋಟಾ - 586130 (ಧನ್ಯಾಳ, ಧನರಗಿ, ದಾಶ್ಯಾಳ, ಹೊನವಾಡ, ಕೊಟ್ಯಾಳ, ಮಲಕನದೇವರಹಟ್ಟಿ, ತಾಜಪುರ ಪಿ.ಎಮ್., ಟಕ್ಕಳಕಿ).
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಸಂಪಾದಿಸಿ
- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ತಿಕೋಟಾ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಸಂಪಾದಿಸಿ
- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ತಿಕೋಟಾ
ರೈತ ಸಂಪರ್ಕ ಕೇಂದ್ರಸಂಪಾದಿಸಿ
- ರೈತ ಸಂಪರ್ಕ ಕೇಂದ್ರ, ತಿಕೋಟಾ
ವಿದ್ಯುತ್ ಪರಿವರ್ತನಾ ಕೇಂದ್ರಸಂಪಾದಿಸಿ
- 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ತಿಕೋಟಾ
ರಾಜ್ಯ ಹೆದ್ದಾರಿಗಳುಸಂಪಾದಿಸಿ
ಸರಕಾರಿ ವಾಹನ ನಿಲ್ದಾಣಸಂಪಾದಿಸಿ
- ಸರಕಾರಿ ವಾಹನ ನಿಲ್ದಾಣ, ತಿಕೋಟಾ
- ↑ Village code= 192000 "Census of India : Villages with population 5000 & above". Registrar General & Census Commissioner, India. Retrieved 2008-12-18.
- ↑ "Yahoomaps India :". Retrieved 2008-12-18. Tikota, Bijapur, Karnataka