ಬಬಲೇಶ್ವರ
ಬಬಲೇಶ್ವರ ಪಟ್ಟಣವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನಲ್ಲಿದೆ. ಗ್ರಾಮವು ವಿಜಯಪುರ - ಜಮಖಂಡಿ ರಾಜ್ಯ ಹೆದ್ದಾರಿ - 55 ರಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 23 ಕಿ. ಮಿ. ದೂರ ಇದೆ. ಕರ್ನಾಟಕ ಸರ್ಕಾರವು ಫೆಬ್ರುವರಿ 8, 2013ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ಬಬಲೇಶ್ವರ ಪಟ್ಟಣವನ್ನು ಹೊಸ ತಾಲ್ಲೂಕು ಎಂದು ರಚಿಸಿದೆ.[೧][೨]
ಬಬಲೇಶ್ವರ
ಬಬಲೇಶ್ವರ | |
---|---|
village |
ಗ್ರಾಮದಲ್ಲಿ ಬಬಲಿ ಜಾಲಿ ಇರುವುದರಿಂದ ಬಬಲೇಶ್ವರ ಎಂಬ ಹೆಸರು ಬಂದಿದೆ.ಶಾಂತವೀರ ಸ್ವಾಮಿಜಿಗಳ ತಪೋಭೂಮಿಯಾಗಿತ್ತು. ಬಬಲೇಶ್ವರದಲ್ಲಿ ಶಿಕ್ಷಣ, ವ್ಯಾಪಾರ, ಹಣಕಾಸು, ಸಾರಿಗೆ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕಗಳು ಹಾಗೂ ಇತರೆ ಕಚೇರಿಗಳಿವೆ.
ಭೌಗೋಳಿಕ
ಬದಲಾಯಿಸಿಗ್ರಾಮವು ಭೌಗೋಳಿಕವಾಗಿ 16°40'04.2"N ಉತ್ತರ ಅಕ್ಷಾಂಶ ಮತ್ತು 75°34'48.7"E ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಹವಾಮಾನ
ಬದಲಾಯಿಸಿ- ಮಳೆಗಾಲ-ಚಳಿಗಾಲ-ಬೇಸಿಗೆಕಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43°C ವರೆಗೆ(ಮೇನಲ್ಲಿ), ಚಳಿಗಾಲದಲ್ಲಿ ಅತೀ ಕಡಿಮೆ ಅಂದರೆ 8°C ವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆಕಾಲ - 35°C-42°C (ಫೆಬ್ರುವರಿ, ಮಾರ್ಚ, ಏಪ್ರೀಲ್ ಮತ್ತು ಮೇ ತಿಂಗಳು)
- ಚಳಿಗಾಲ - 19°C-28°C (ಅಕ್ಟೂಬರ್, ನವೆಂಬರ್, ಡಿಶೆಂಬರ್ ಮತ್ತು ಜನೇವರಿ ತಿಂಗಳು)
- ಮಳೆಗಾಲ - 18°C-32°C ( ಜೂನ್, ಜೂಲೈ, ಅಗಷ್ಟ್ ಮತ್ತು ಸಪ್ಟೆಂಬರ್ ತಿಂಗಳು)
- ಮಳೆ - ಪ್ರತಿ ವರ್ಷ ಮಳೆಯು 300 - 600 ಮಿಮಿ ಗಳಷ್ಟು ಸುರಿಯುತ್ತದೆ.
- ಗಾಳಿ - ಗಾಳಿಯ ವೇಗ 18 ಕಿಮಿ/ಗಂ (ಜೂನ್), 19 ಕಿಮಿ/ಗಂ (ಜೂಲೈ)ಹಾಗೂ 17 ಕಿಮಿ/ಗಂ (ಅಗಸ್ಟ್)ನಲ್ಲಿ ಬೀಸುತ್ತದೆ.
ಜನಸಂಖ್ಯೆ
ಬದಲಾಯಿಸಿಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 10,645 ಇದೆ. ಅದರಲ್ಲಿ 5,405 ಪುರುಷರು ಮತ್ತು 5,240 ಮಹಿಳೆಯರು ಇದ್ದಾರೆ.
ಸಾಂಸ್ಕೃತಿಕ
ಬದಲಾಯಿಸಿಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ ಹಾಗೂ ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ಕಲೆ ಮತ್ತು ಸಂಸ್ಕೃತಿ
ಬದಲಾಯಿಸಿಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಧರ್ಮ
ಬದಲಾಯಿಸಿಭಾಷೆ
ಬದಲಾಯಿಸಿಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.
ದೇವಾಲಯ
ಬದಲಾಯಿಸಿ- ಶ್ರೀ ಗುರುಪಾದೇಶ್ವರ ಮಠ
- ಶ್ರೀ ಮಹಾಲಕ್ಷ್ಮಿ ದೇವಾಲಯ
- ಶ್ರೀ ದುರ್ಗಾದೇವಿ ದೇವಾಲಯ
- ಶ್ರೀ ಮಲ್ಲಿಕಾರ್ಜುನ ದೇವಾಲಯ
- ಶ್ರೀ ಬಸವೇಶ್ವರ ದೇವಾಲಯ
- ಶ್ರೀ ವೆಂಕಟೇಶ್ವರ ದೇವಾಲಯ
- ಶ್ರೀ ಪಾಂಡುರಂಗ ದೇವಾಲಯ
- ಶ್ರೀ ಹಣಮಂತ ದೇವಾಲಯ
- ಶ್ರೀ ಅಂಬಲ ಮುತ್ತಪ್ಪ ದೇವಾಲಯ
- ಶ್ರೀ ಮಡ್ಡಿ ಯಲ್ಲಮ್ಮದೇವಿ ದೇವಾಲಯ
- ಶ್ರೀ ಭುವನೇಶ್ವರಿ ದೇವಾಲಯ
ಧಾರ್ಮಿಕ ಕೇಂದ್ರಗಳು
ಬದಲಾಯಿಸಿಮಹಾನ್ ತಪಶ್ವಿ ಶ್ರೀ ಗುರುಪಾದೇಶ್ವರ ಮಠವಿದೆ.
ಮಸೀದಿ
ಬದಲಾಯಿಸಿಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ನೀರಾವರಿ
ಬದಲಾಯಿಸಿಗ್ರಾಮದ ಪ್ರತಿಶತ 70 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ(ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಕೃಷಿ
ಬದಲಾಯಿಸಿಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು 75% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ 75% ಭೂಮಿ ನೀರಾವರಿ ಹೊಂದಿದೆ. ಉಳಿದ 15% ಭೂಮಿ ಮಳೆಯನ್ನೇ ಅವಲಂಭಿಸಿದೆ.
ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಮುಳವಾಡ ಏತ ನೀರಾವರಿ ಕಾಲುವೆ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.
ಆರ್ಥಿಕತೆ
ಬದಲಾಯಿಸಿಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.
ಉದ್ಯೋಗ
ಬದಲಾಯಿಸಿಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
ಬೆಳೆ
ಬದಲಾಯಿಸಿಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಸಸ್ಯ
ಬದಲಾಯಿಸಿಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
ಪ್ರಾಣಿ
ಬದಲಾಯಿಸಿತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
ಹಬ್ಬ
ಬದಲಾಯಿಸಿಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಶಿಕ್ಷಣ
ಬದಲಾಯಿಸಿ- ಸರಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಬಬಲೇಶ್ವರ
- ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಬಬಲೇಶ್ವರ
- ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಬಬಲೇಶ್ವರ
- ದಾನಮ್ಮದೇವಿ ಕಿರಿಯ ಪ್ರಾಥಮಿಕ ಶಾಲೆ, ಬಬಲೇಶ್ವರ
- ವಿದ್ಯಾನಿಕೇತನ ಕಿರಿಯ ಪ್ರಾಥಮಿಕ ಶಾಲೆ, ಬಬಲೇಶ್ವರ
- SGSSJ ಕಿರಿಯ ಪ್ರಾಥಮಿಕ ಶಾಲೆ, ಬಬಲೇಶ್ವರ
- ಜಾನಕಿ ಶ್ರೀ ರಾಮ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆ, ಬಬಲೇಶ್ವರ
- ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆ, ಬಬಲೇಶ್ವರ
- ಸರಕಾರಿ ಉರ್ದು ಪ್ರೌಢ ಶಾಲೆ, ಬಬಲೇಶ್ವರ
- ಬಾಪೂಜಿ ಪ್ರೌಢ ಶಾಲೆ, ಬಬಲೇಶ್ವರ
- ಶಾಂತವೀರ ಪ್ರೌಢ ಶಾಲೆ, ಬಬಲೇಶ್ವರ
- ಶಾಂತವೀರ ಪದವಿಪೂರ್ವ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಬಬಲೇಶ್ವರ
- ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ, ಬಬಲೇಶ್ವರ
- ಶಾಂತವೀರ ಕಲಾ ಮಹಾವಿದ್ಯಾಲಯ, ಬಬಲೇಶ್ವರ
- ಡಾ.ಬಿ.ಆರ್.ಅಂಬೇಡ್ಕರ ವಸತಿ ಶಾಲೆ, ಬಬಲೇಶ್ವರ
ರಾಜಕೀಯ
ಬದಲಾಯಿಸಿಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರ ಮತ್ತು ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ.
ಬಬಲೇಶ್ವರ ವಿಧಾನ ಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಬಲೇಶ್ವರ ಮತಕ್ಷೇತ್ರ(2018)ದಲ್ಲಿ 1,06,256 ಪುರುಷರು, 1,02,647 ಮಹಿಳೆಯರು ಸೇರಿ ಒಟ್ಟು 2,08,903 ಮತದಾರರಿದ್ದಾರೆ.
ಕ್ಷೇತ್ರದ ಇತಿಹಾಸ
ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶರಣ ಹರಳಯ್ಯ 63 ಶರಣರೊಂದಿಗೆ ಶೇಗುಣಸಿ ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. ಮಮದಾಪುರದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ. ಬಬಲೇಶ್ವರದ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇ ಪರಂಪರೆಯಿದೆ. ಕಾಖಂಡಕಿಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ ಅರಕೇರಿ ಅಮೋಘ ಸಿದ್ಧೇಶ್ವರ ದೇವಾಲಯ, ಕಂಬಾಗಿ ಮತ್ತು ಹಲಗಣಿ ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ ಬಬಲಾದಿಯ ಗುರು ಚಕ್ರವರ್ತಿ ಸದಾಶಿವ ಮಠ, ಬೆಳ್ಳುಬ್ಬಿಯ ಮಳೇಮಲ್ಲೇಶ್ವರ ದೇವಾಲಯ ಹಾಗೂ ದೇವರ ಗೆಣ್ಣೂರನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ ವಿಜಯಪುರ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ ವಾಸವಾಗಿದೆ.
ಒಂದೆಡೆ ಹೊಳಿ ದಂಡೆ. ಸಮೃದ್ಧಿಯ ಕೃಷಿ ಚಿತ್ರಣ. ಇನ್ನೊಂದೆಡೆ ಎತ್ತರದ ಪ್ರದೇಶ. ಹನಿ ಹನಿ ನೀರಿಗೂ ತತ್ವಾರ. ಮಳೆಯಾಶ್ರಿತ ಬೆಳೆ ಪದ್ಧತಿ. ಕೃಷ್ಣೆ–ಡೋಣಿ ಹರಿಯುವಿಕೆ. ಸಾರವಾಡ ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. ಕೃಷ್ಣಾ ನದಿ ತಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ಈ ಭಾಗದ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿರುವುದು ಇಲ್ಲಿನ ವಿಶೇಷ. ತಿಕೋಟಾ ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಒಟ್ಟಾರೆ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವಿಶಿಷ್ಟ ಭೌಗೋಳಿಕ ನೆಲೆಯನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ.
ಬಬಲೇಶ್ವರ ವಿಧಾನಸಭೆ ಕ್ಷೇತ್ರ 2008ರಲ್ಲಿ ಮರು ವಿಂಗಡಣೆ ಆದ ಬಳಿಕ ಬಬಲೇಶ್ವರ ಎಂದು ನಾಮಕರಣಗೊಂಡಿದೆ. 2008ರ ಮೊದಲು ತಿಕೋಟಾ ವಿಧಾನಸಭೆ ಕ್ಷೇತ್ರವಾಗಿತ್ತು. ನಾಲ್ಕು ಬಾರಿ ಕಾಂಗ್ರೆಸ್‌ನ ಬಿ.ಎಂ.ಪಾಟೀಲರು ಹಾಗೂ ಅವರ ಪುತ್ರ ಎಂ.ಬಿ.ಪಾಟೀಲರು ನಾಲ್ಕು ಬಾರಿ ಆಯ್ಕೆಯಾಗಿ ಅತಿ ಹೆಚ್ಚು ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ವಿಶೇಷವಾಗಿದೆ. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ತಿಕೋಟಾ ವಿಧಾನಸಭಾ ಕ್ಷೇತ್ರ ಬಬಲೇಶ್ವರ ವಿಧಾನಸಭಾ ಕ್ಷೇತ್ರ ದೊಳಗೆ ವಿಲೀನವಾಯಿತು. ಕ್ಷೇತ್ರಕ್ಕೆ ಉಪ ಚುನಾವಣೆ ಸೇರಿದಂತೆ ಒಟ್ಟು 14 ವಿಧಾನಸಭಾ ಚುನಾವಣೆ ನಡೆದಿದ್ದು, ಇದರಲ್ಲಿ ಎಂಟು ಚುನಾವಣೆಗಳಲ್ಲಿ ಇಲ್ಲಿನ ಮತದಾರರು ಬಿ.ಎಂ.ಪಾಟೀಲ ಹಾಗೂ ಎಂ.ಬಿ.ಪಾಟೀಲಗೆ ಹರಸಿದ್ದಾರೆ. ತಂದೆ–ಮಗ ಇಬ್ಬರೂ ಸಚಿವರಾಗಿರುವುದು ಇಲ್ಲಿನ ವಿಶೇಷ.
1994ರಲ್ಲಿ ಜನತಾದಳದಿಂದ ಆಯ್ಕೆಯಾದ ಶಿವಾನಂದ ಪಾಟೀಲರು ಕಾಂಗ್ರೆಸ್‌ನ ಬಿ.ಎಂ.ಪಾಟೀಲ ಅವರ ಪುತ್ರ ಎಂ.ಬಿ.ಪಾಟೀಲರನ್ನು ಸೋಲಿಸಿದ್ದರು. 1999ರಲ್ಲಿ ಕಾಂಗ್ರೆಸ್‌ನ ಎಂ.ಬಿ.ಪಾಟೀಲರನ್ನು ಸೋಲಿಸಿ ಜನತಾದಳದಿಂದ ಆಯ್ಕೆಯಾದ ಶಿವಾನಂದ ಪಾಟೀಲ ಅವರು BJPಯಿಂದ ಸ್ಪರ್ಧಿಸಿ ಗೆದ್ದಿದ್ದರು. ಶಿವಾನಂದ ಪಾಟೀಲ ಅವರು ಬಸವನಬಾಗೇವಾಡಿ ಕ್ಷೇತ್ರಕ್ಕೆ ವಲಸೆ ಹೋದ ಬಳಿಕ ಎಂ.ಬಿ.ಪಾಟೀಲರು ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದಾರೆ. ಇದರಲ್ಲಿ ಎರಡು ಬಾರಿ ಜೆಡಿಎಸ್ ಪಕ್ಷದಿಂದ ಸೋತಿರುವ BJPಯ ವಿಜುಗೌಡ ಪಾಟೀಲರು ಶಿವಾನಂದ ಪಾಟೀಲ ಅವರ ಕಿರಿಯ ಸಹೋದರ ಎಂಬುದು ಗಣನೀಯ.
2008ರಲ್ಲಿ ತಿಕೋಟಾ ವಿಧಾನಸಭಾ ಕ್ಷೇತ್ರವನ್ನು ಬಬಲೇಶ್ವರ ವಿಧಾನಸಭಾ ಕ್ಷೇತ್ರ ಎಂದು ನಾಮಕರಣ ಮಾಡಲಾಯಿತು. ಆಗ ಬಸವನಬಾಗೇವಾಡಿ ಕ್ಷೇತ್ರದಲ್ಲಿದ್ದ ಮಮದಾಪುರ ಹೋಬಳಿಯ 28 ಹಳ್ಳಿಗಳು ಬಬಲೇಶ್ವರ ಕ್ಷೇತ್ರಕ್ಕೆ ಸೇರ್ಪಡೆಯಾದರೆ, ತಿಕೋಟಾ ವ್ಯಾಪ್ತಿಯಲ್ಲಿದ್ದ ಕೆಲ ಹಳ್ಳಿಗಳು ನಾಗಠಾಣ(ಹಳೆಯ ಬಳ್ಳೋಳ್ಳಿ) ಕ್ಷೇತ್ರದ ಪಾಲಾದವು.
ಕ್ಷೇತ್ರದ ವಿಶೇಷತೆ
- ಸ್ವಾತಂತ್ರ್ಯ ಹೋರಾಟಗಾರ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಹಿರಿಯರಾದ ಚೆನ್ನಬಸಪ್ಪ ಅಂಬಲಿಯವರು ಈ ಕ್ಷೇತ್ರದ 1951ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದು ವಿಶೇಶವಾಗಿದೆ.
- ಬಬಲೇಶ್ವರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದರೂ ಕಾಂಗ್ರೆಸ್ಸೇತರ ಪಕ್ಷಗಳೂ ಬಲ್ಯ ಮೆರೆದಿವೆ. 1957ರಿಂದ ನಿರಂತರ ಗೆದ್ದಿದ್ದ ಕಾಂಗ್ರೆಸ್ ಪಕ್ಷ ಮೊದಲ ಸೋಲು ಕಂಡಿದ್ದು 1978ರ ಕಾಂಗ್ರೆಸ್ ಅಭ್ಯರ್ಥಿ ಶಿವರಾಯ ಜಿದ್ದಿ ಅವರನ್ನು ಸೋಲಿಸಿದ ಜನತಾ ಪಕ್ಷದ ಬದುಗೌಡ ಬಾಪುಗೌಡ ಪಾಟೀಲ ಮೊದಲ ಬಾರಿಗೆ ಕಾಂಗ್ರೆಸ್ ರಹಿತ ಶಾಸಕ ಎನಿಸಿದರು.
- 1962ರಲ್ಲಿ ಶಾಸಕರಾಗಿದ್ದ ಬಿ.ಎಂ.ಪಾಟೀಲರನ್ನು 1983 ಚುನಾವಣೆ ಬಳಿಕ 1989ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಬಿ.ಎಂ.ಪಾಟೀಲರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗಳಿಸುವಂತೆ ಮಾಡಿತ್ತು.
- 1991ರಲ್ಲಿ ಬಿ.ಎಂ.ಪಾಟೀಲರು ನಿಧನರಾದಾಗ, ತೆರವಾದ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಎಂ.ಬಿ.ಪಾಟೀಲರು ಸ್ಪರ್ಧಿಸಿ ಆಯ್ಕೆಯಾಗಿದ್ದರು.
- ಶಿವಾನಂದ ಪಾಟೀಲರು ಜನತಾ ಪಕ್ಷ ಮತ್ತು ಭಾರಟಿಯ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು.
- ಬಿ.ಎಂ.ಪಾಟೀಲರು ವೀರಪ್ಪ ಮೊಯ್ಲಿ ಮಂತ್ರಿಮಂಡಳದಲ್ಲಿ ನಾಗರಿಕ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು.
- ಎಂ.ಬಿ.ಪಾಟೀಲರು ಸಿದ್ದರಾಮಯ್ಯನವರ ಮಂತ್ರಿಮಂಡಳದಲ್ಲಿ ನೀರಾವರಿ ಸಚಿವರಾಗಿದ್ದರು.
- ಎಂ.ಬಿ.ಪಾಟೀಲರು ಎಚ್.ಡಿ.ಕುಮಾರಸ್ವಾಮಿ ಸಮ್ಮಿಸ್ರ ಸರ್ಕಾರದ ಮಂತ್ರಿಮಂಡಳದಲ್ಲಿ ಗೃಹ ಸಚಿವರಾಗಿದ್ದರು.
ಜನಪ್ರತಿನಿಧಿಗಳ ವಿವರ
ವರ್ಷ | ವಿಧಾನ ಸಭಾ ಕ್ಷೆತ್ರ | ವಿಜೇತ | ಪಕ್ಷ | ಮತಗಳು | ಉಪಾಂತ ವಿಜೇತ | ಪಕ್ಷ | ಮತಗಳು |
ಬಬಲೇಶ್ವರ ವಿಧಾನಸಭಾ ಕ್ಷೇತ್ರ | ಕರ್ನಾಟಕ ರಾಜ್ಯ | ||||||
2018 | ಬಬಲೇಶ್ವರ ವಿಧಾನ ಸಭಾ ಕ್ಷೇತ್ರ | ಎಂ.ಬಿ.ಪಾಟೀಲ | INC | 98339 | ವಿಜಯಗೌಡ ಪಾಟೀಲ | BJP | 68624 |
2013 | ಬಬಲೇಶ್ವರ ವಿಧಾನ ಸಭಾ ಕ್ಷೇತ್ರ | ಎಂ.ಬಿ.ಪಾಟೀಲ | INC | 62061 | ವಿಜಯಗೌಡ ಪಾಟೀಲ | JDS | 57706 |
2008 | ಬಬಲೇಶ್ವರ ವಿಧಾನ ಸಭಾ ಕ್ಷೇತ್ರ | ಎಂ.ಬಿ.ಪಾಟೀಲ | INC | 55525 | ವಿಜಯಗೌಡ ಪಾಟೀಲ | JDS | 38886 |
ತಿಕೋಟಾ ವಿಧಾನಸಭಾ ಕ್ಷೇತ್ರ | ಕರ್ನಾಟಕ ರಾಜ್ಯ | ||||||
2004 | ತಿಕೋಟಾ ವಿಧಾನ ಸಭಾ ಕ್ಷೇತ್ರ | ಎಂ.ಬಿ.ಪಾಟೀಲ | INC | 48274 | ಎಂ.ಎಸ್.ರುದ್ರಗೌಡರ | JDU | 19040 |
1999 | ತಿಕೋಟಾ ವಿಧಾನ ಸಭಾ ಕ್ಷೇತ್ರ | ಶಿವಾನಂದ ಪಾಟೀಲ | BJP | 49080 | ಎಂ.ಬಿ.ಪಾಟೀಲ | INC | 41649 |
1994 | ತಿಕೋಟಾ ವಿಧಾನ ಸಭಾ ಕ್ಷೇತ್ರ | ಶಿವಾನಂದ ಪಾಟೀಲ | JD | 50679 | ಎಂ.ಬಿ.ಪಾಟೀಲ | INC | 25897 |
1991 | ತಿಕೋಟಾ ವಿಧಾನ ಸಭಾ ಕ್ಷೇತ್ರ(Bypoll) | ಎಂ.ಬಿ.ಪಾಟೀಲ | INC | 32832 | ಶಿವಾನಂದ ಪಾಟೀಲ | JD | 28228 |
1989 | ತಿಕೋಟಾ ವಿಧಾನ ಸಭಾ ಕ್ಷೇತ್ರ | ಬಿ.ಎಂ.ಪಾಟೀಲ | INC | 37832 | ಬಿ.ಆರ್.ಪಾಟೀಲ | JD | 33228 |
1985 | ತಿಕೋಟಾ ವಿಧಾನ ಸಭಾ ಕ್ಷೇತ್ರ | ಬಿ.ಎಂ.ಪಾಟೀಲ | INC | 26829 | ಬಿ.ಆರ್.ಪಾಟೀಲ | JNP | 25914 |
1983 | ತಿಕೋಟಾ ವಿಧಾನ ಸಭಾ ಕ್ಷೇತ್ರ | ಬಿ.ಎಂ.ಪಾಟೀಲ | INC | 27884 | ಬಿ.ಎಮ್.ಕೊತೀಹಾಳ | JNP | 18092 |
1978 | ತಿಕೋಟಾ ವಿಧಾನ ಸಭಾ ಕ್ಷೇತ್ರ | ಬಿ.ಬಿ.ಪಾಟೀಲ | JNP | 21317 | ಎಸ್.ಎ.ಜಿದ್ದಿ | INC | 16899 |
ತಿಕೋಟಾ ವಿಧಾನಸಭಾ ಕ್ಷೇತ್ರ | ಮೈಸೂರು ರಾಜ್ಯ | ||||||
1972 | ತಿಕೋಟಾ ವಿಧಾನ ಸಭಾ ಕ್ಷೇತ್ರ | ಜಿ.ಎನ್.ಪಾಟೀಲ | INC(O) | 22119 | ಎಸ್.ಎ.ಜಿದ್ದಿ | INC | 14156 |
1967 | ತಿಕೋಟಾ ವಿಧಾನ ಸಭಾ ಕ್ಷೇತ್ರ | ಶರಣಯ್ಯ ವಸ್ತ್ರದ | INC | 16329 | ಎನ್.ಕೆ.ಉಪಾಧ್ಯಯ | CPM | 3353 |
1962 | ತಿಕೋಟಾ ವಿಧಾನ ಸಭಾ ಕ್ಷೇತ್ರ | ಬಿ.ಎಂ.ಪಾಟೀಲ | INC | 19957 | ಬಿ.ಜಿ.ಬಿರಾದಾರ | SWA | 4024 |
1957 | ತಿಕೋಟಾ ವಿಧಾನ ಸಭಾ ಕ್ಷೇತ್ರ | ಚೆನ್ನಬಸಪ್ಪ ಅಂಬಲಿ | INC | 12933 | ಡಾ.ಬಸವರಾಜ ನಾಗೂರ | IND | 8262 |
ತಿಕೋಟಾ-ಬೀಳಗಿ ವಿಧಾನಸಭಾ ಕ್ಷೇತ್ರ | ಬಾಂಬೆ ರಾಜ್ಯ | ||||||
1951 | ತಿಕೋಟಾ-ಬೀಳಗಿ ವಿಧಾನ ಸಭಾ ಕ್ಷೇತ್ರ | ಚೆನ್ನಬಸಪ್ಪ ಅಂಬಲಿ | INC | 21042 | ಆರ್.ಎಂ.ಪಾಟೀಲ | KMPP | 9001 |
ಸಾಹಿತ್ಯ
ಬದಲಾಯಿಸಿಗ್ರಾಮದ ಹಿರಿಯರಾದ ಶಂ.ಗು.ಬಿರಾದಾರರವರು ಮಕ್ಕಳ ಸಾಹಿತಿಗಳಾಗಿದ್ದಾರೆ.
ಆರೋಗ್ಯ
ಬದಲಾಯಿಸಿಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ.
ಪಶು ಆಸ್ಪತ್ರೆ
ಬದಲಾಯಿಸಿಗ್ರಾಮದಲ್ಲಿ ಸರಕಾರಿ ಪಶು ಆಸ್ಪತ್ರೆ ಇದೆ.
ಆರಕ್ಷಕ (ಪೋಲಿಸ್) ಠಾಣೆ
ಬದಲಾಯಿಸಿಗ್ರಾಮದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು 40ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.
ವಿದ್ಯುತ್ ಪರಿವರ್ತನಾ ಕೇಂದ್ರ
ಬದಲಾಯಿಸಿ110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ ಮತ್ತು 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರವು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಒದಗಿಸುತ್ತದೆ.
ಬ್ಯಾಂಕಗಳು
ಬದಲಾಯಿಸಿ- ವಿಜಯ ಬ್ಯಾಂಕ, ಬಬಲೇಶ್ವರ
- ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ, ಬಬಲೇಶ್ವರ
- ಡಿ.ಸಿ.ಸಿ. ಬ್ಯಾಂಕ, ಬಬಲೇಶ್ವರ
- ಶ್ರೀ ಶಾಂತವೀರ ವಿವಿಧೋದದ್ಧೇಶಗಳ ಸೌಹಾರ್ದ ಬ್ಯಾಂಕ್, ಬಬಲೇಶ್ವರ
- ಶ್ರೀ ಬೀರೇಶ್ವರ ಕೋ-ಆಪರೇಟಿವ್ ಬ್ಯಾಂಕ, ಬಬಲೇಶ್ವರ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ
ಬದಲಾಯಿಸಿ- ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ, ಬಬಲೇಶ್ವರ
ಕೃಷಿ ಮಾರುಕಟ್ಟೆ
ಬದಲಾಯಿಸಿ- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಬಲೇಶ್ವರ
ರಾಜ್ಯ ಹೆದ್ದಾರಿಗಳು
ಬದಲಾಯಿಸಿರಾಜ್ಯ ಹೆದ್ದಾರಿ - 55 => ಬಬಲೇಶ್ವರ - ಕಂಬಾಗಿ - ಗಲಗಲಿ - ಮುಧೋಳ - ಯಾದವಾಡ - ಯರಗಟ್ಟಿ
ಅಂಚೆ ಕಚೇರಿ ಮತ್ತು ಪಿನಕೋಡ್ ಸಂಕೇತಗಳು
ಬದಲಾಯಿಸಿ- ಬಬಲೇಶ್ವರ - 586113 (ಬೆಳ್ಳುಬ್ಬಿ, ಹೆಬ್ಬಾಳಟ್ಟಿ, ಹೊಕ್ಕುಂಡಿ, ಜೈನಾಪುರ, ಕಾಖಂಡಕಿ, ಕುಮಠೆ, ಮಮದಾಪುರ, ನಾಗರಾಳ, ನಿಡೋಣಿ, ತಿಗಣಿಬಿದರಿ, ಉಪ್ಪಲದಿಣ್ಣಿ, ಯಕ್ಕುಂಡಿ, ಅರ್ಜುಣಗಿ).
ಗ್ರಾಮ ಪಂಚಾಯತಿ
ಬದಲಾಯಿಸಿ- ಗ್ರಾಮ ಪಂಚಾಯತಿ ಕಾರ್ಯಾಲಯ, ಬಬಲೇಶ್ವರ
ಗ್ರಾಮ ಪಂಚಾಯತಿಯು ವ್ಯಾಪ್ತಿಯಲ್ಲಿ ಬಬಲೇಶ್ವರ ಮತ್ತು ಅಡವಿ ಸಂಗಾಪುರ ಗ್ರಾಮಗಳಿವೆ.
ಬಿ.ಎಸ್.ಎನ್.ಎಲ್ ಸಂಕೇತಗಳು
ಬದಲಾಯಿಸಿಭಾರತೀಯ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್)ದ ಮುಖ್ಯ ಕಚೇರಿಯಿದೆ.
- ಬಬಲೇಶ್ವರ - 08355
ಗ್ರಂಥಾಲಯಗಳು / ವಾಚನಾಲಯಗಳು
ಬದಲಾಯಿಸಿ- ಗ್ರಾ.ಪಂ. ಗ್ರಂಥಾಲಯ, ಬಬಲೇಶ್ವರ.
ಮಳೆ ಮಾಪನ ಕೇಂದ್ರ
ಬದಲಾಯಿಸಿ- ಮಳೆ ಮಾಪನ ಕೇಂದ್ರ, ಬಬಲೇಶ್ವರ
ಕಂದಾಯ ಕಚೇರಿ
ಬದಲಾಯಿಸಿ- ಕಂದಾಯ ಕಚೇರಿ, ಬಬಲೇಶ್ವರ
ನೆಮ್ಮದಿ (ಹೋಬಳಿ) ಕೇಂದ್ರ
ಬದಲಾಯಿಸಿ- ನೆಮ್ಮದಿ ಕೇಂದ್ರ, ಬಬಲೇಶ್ವರ
ಉಚಿತ ಪ್ರಸಾದನಿಲಯ
ಬದಲಾಯಿಸಿ- ಮೆಟ್ರಿಕ್ ಪೂರ್ವ ಬಾಲಕರ ಉಚಿತ ಪ್ರಸಾದನಿಲಯ, ಬಬಲೇಶ್ವರ
- ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ, ಬಬಲೇಶ್ವರ
- ಶ್ರೀ ಶಾಂತವೀರ ಬಾಲಕರ ಉಚಿತ ಪ್ರಸಾದನಿಲಯ, ಬಬಲೇಶ್ವರ
ಜಿನುಗು ಕೆರೆ
ಬದಲಾಯಿಸಿ- ಜಿನುಗು ಕೆರೆ, ಬಬಲೇಶ್ವರ
ಸಂರಕ್ಷಿತ ಅರಣ್ಯ ಪ್ರದೇಶ
ಬದಲಾಯಿಸಿಗ್ರಾಮವು ಸಂರಕ್ಷಿತ ಅರಣ್ಯ ಪ್ರದೇಶವನ್ನು ಹೊಂದಿದೆ.
ಹಾಲು ಉತ್ಪಾದಕ ಸಹಕಾರಿ ಸಂಘ
ಬದಲಾಯಿಸಿ- ಹಾಲು ಉತ್ಪಾದಕ ಸಹಕಾರಿ ಸಂಘ, ಬಬಲೇಶ್ವರ
ಕೈಗಾರಿಕಾ ಪ್ರದೇಶ
ಬದಲಾಯಿಸಿ- ಕೈಗಾರಿಕಾ ಪ್ರದೇಶ(ಕೆ.ಎಚ್.ಬಿ), ಬಬಲೇಶ್ವರ
ಸರಕಾರಿ ವಾಹನ ನಿಲ್ದಾಣ
ಬದಲಾಯಿಸಿ- ಸರಕಾರಿ ವಾಹನ ನಿಲ್ದಾಣ, ಬಬಲೇಶ್ವರ
ಸಂತೆ
ಬದಲಾಯಿಸಿಪ್ರತಿ ಶುಕ್ರವಾರದಂದು ಗ್ರಾಮದಲ್ಲಿ ಸಂತೆ ಜರಗುತ್ತದೆ.
ದಿಕ್ಕುಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Village code= 197900 "Census of India : Villages with population 5000 & above". Archived from the original on 8 December 2008. Retrieved 2008-12-18.
{{cite web}}
:|first=
missing|last=
(help); Unknown parameter|deadurl=
ignored (help)CS1 maint: multiple names: authors list (link) - ↑ "Yahoomaps India :". Archived from the original on 18 December 2008. Retrieved 2008-12-18.
{{cite web}}
: Unknown parameter|deadurl=
ignored (help) Babaleshwar, Bijapur, Karnataka