ಬಿ.ಎಂ.ಪಾಟೀಲ
ಬಿ.ಎಂ.ಪಾಟೀಲ(ಬಸನಗೌಡ ಮಲ್ಲನಗೌಡ ಪಾಟೀಲ)ರು ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಬಿ.ಎಲ್.ಡಿ.ಈ.ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಉದ್ಯಮಿಗಳು ಹಾಗೂ ರಾಜಕೀಯ ಧುರೀಣರು.
ಬಿ.ಎಂ.ಪಾಟೀಲ(ಬಸನಗೌಡ ಮಲ್ಲನಗೌಡ ಪಾಟೀಲ) | |
---|---|
ಜನನ | 1ನೇ ನವೆಂಬರ್, 1931 ತೊರವಿ, ವಿಜಯಪುರ, ಕರ್ನಾಟಕ |
ವೃತ್ತಿ | ರಾಜಕೀಯ |
ರಾಷ್ಟ್ರೀಯತೆ | ಭಾರತೀಯ |
ಜನನ
ಬದಲಾಯಿಸಿಬಿ.ಎಂ.ಪಾಟೀಲರು 1ನೇ ನವೆಂಬರ್, 1931ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ತೊರವಿ ಗ್ರಾಮದಲ್ಲಿ ಜನಿಸಿದರು.
ಶಿಕ್ಷಣ
ಬದಲಾಯಿಸಿ- ಬೆಳಗಾವಿಯ ಪ್ರತಿಷ್ಟಿತ ಲಿಂಗರಾಜ ಮಹಾವಿದ್ಯಾಲಯದಿಂದ ಬಿ.ಎಸ್ಸಿ. ಪದವಿ ಹೊಂದಿದ್ದರು.
ರಾಜಕೀಯ
ಬದಲಾಯಿಸಿ- 1962ರಲ್ಲಿ ಬಿ.ಎಂ.ಪಾಟೀಲರು ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ವಿಧಾನ ಸಭೆಯ ಸದಸ್ಯರಾಗಿ ಆಯ್ಕೆಯಾದರು.
- 1962ರಲ್ಲಿ ಶಾಸಕರಾಗಿದ್ದ ಬಿ.ಎಂ.ಪಾಟೀಲರನ್ನು 1983 ಚುನಾವಣೆ ಬಳಿಕ 1989ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಬಿ.ಎಂ.ಪಾಟೀಲರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗಳಿಸುವಂತೆ ಮಾಡಿತ್ತು.
- 1967 - 1971ವರೆಗೆ ಬಿ.ಎಂ.ಪಾಟೀಲರು ವಿರೇಂದ್ರ ಪಾಟೀಲ ಮಂತ್ರಿಮಂಡಳದಲ್ಲಿ ನಾಗರಿಕ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು.
- 1976 - 1982ವರೆಗೆ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು.
- ಎಐಸಿಸಿ, ಕೆಪಿಸಿಸಿ ಸಮಿತಿಯ ಸದಸ್ಯರಾಗಿದ್ದರು.
- ವಿಜಯಪುರದ ಪತಿಷ್ಟಿತ ಶಿಕ್ಷಣ ಸಂಸ್ಥೆಯಾದ ಬಿ.ಎಲ್.ಡಿ.ಈ. ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು.
ಸಚಿವರು
ಬದಲಾಯಿಸಿ- 1967 - 1971ವರೆಗೆ ಬಿ.ಎಂ.ಪಾಟೀಲರು ವಿರೇಂದ್ರ ಪಾಟೀಲ ಮಂತ್ರಿಮಂಡಳದಲ್ಲಿ ನಾಗರಿಕ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು.
ನಿಧನ
ಬದಲಾಯಿಸಿಬಿ.ಎಂ.ಪಾಟೀಲರು 27ನೇ ಜುಲೈ 1990ರಲ್ಲಿ ನಿಧನರಾದರು.
ಉಲ್ಲೇಖಗಳು
ಬದಲಾಯಿಸಿ