ಜಮಖಂಡಿ - ಬಾಗಲಕೋಟೆ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಈ ಪಟ್ಟಣ್ಣಕ್ಕೆ ಜಮಖಂಡಿ ಎಂಬ ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಾಚೀನ ದೇವಾಲಯ ಜಂಬುಕೇಶ್ವರ ಗುಡಿಗೂ ಈ ಪಟ್ಟಣದ ಹೆಸರಿಗೂ ನಂಟಿದೆ. ಈ ಗುಡಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. ೧೯೩೭ ರಲ್ಲಿ ಜಮಖಂಡಿಯಲ್ಲಿ ೨೨ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು..

ಜಮಖಂಡಿ
India-locator-map-blank.svg
Red pog.svg
ಜಮಖಂಡಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬಾಗಲಕೋಟೆ
ನಿರ್ದೇಶಾಂಕಗಳು 16.504741° N 75.291882° E
ವಿಸ್ತಾರ 12.6 km²
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೫೭೮೮೭
 - ೪,೫೯೪.೨೧ /ಕಿಮಿ2 (೧೧,೮೯೯ /ಚದರ ಮಿ)/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 587301
 - +೯೧ (೦) ೮೩೫೩
 - ಕೆಎ-೪೮/೨೯

ಭೂಗೋಳಸಂಪಾದಿಸಿ

ಭೌಗೋಳಿಕದಲ್ಲಿ ೧೫*x ೫೦ ಮತ್ತು ೧೭*x ೨೮ ಉತ್ತರ ಅಕ್ಷಾಂಶ ಮತ್ತು ೭೪*x ೫೪ ಮತ್ತು ೭೬*x ೨೮ ಪಶ್ಚಿಮ ರೇಖಾಂಶದಲ್ಲಿ ಬರುತ್ತದೆ.

ಜನಸಂಖ್ಯೆ ಸಂಪಾದಿಸಿ

೨೦೦೧ ರ ಜನಗಣತಿಯ ಪ್ರಕಾರ ಜಮಖಂಡಿ ಪಟ್ಟಣದ ಜನಸಂಖ್ಯೆ ೫೭.೮೮೭ ಇಲ್ಲಿನ ಸಾಕ್ಷರತೆ ಪ್ರಮಾಣ ೬೦%. ಪುರುಷರಲ್ಲಿ ೬೭%, ಮಹಿಳೆಯರಲ್ಲಿ ೫೨% ರಷ್ಟು ಸಾಕ್ಷರ ಪ್ರಮಾಣ ಇದೆ.

ಇತಿಹಾಸಸಂಪಾದಿಸಿ

ಟೀಪು ಸುಲ್ತಾನ್ ನನ್ನು ಯುದ್ಧದಲ್ಲಿ ಸೋಲಿಸಿ ಜಮಖಂಡಿ ಸಂಸ್ಥಾನವು ಪ್ರಸಿದ್ಧಿಗೆ ಬಂತು.ಹಾಗೆಯೆ ಕಿತ್ತೂರು ಚೆನ್ನಮ್ಮಳನ್ನು ಸೋಲಿಸಿದಾಗ "ನಿನ್ನ್ ರಾಜ್ಯದಲ್ಲಿ ಕತ್ತೆಗಳು ಮೇಯಲಿ" ಎಂದು ಅವಳು ಶಾಪವನ್ನು ನೀಡಿದಳಂತೆ. ಅದರಂತೆ ಈಗಲೂ ಜಮಖಂಡಿಯಲ್ಲಿ ಕತ್ತೆಗಳು ಹೆಚ್ಚಾಗಿ ಕಂಡುಬರುತ್ತವೆ.

ಸ್ವಾತಂತ್ರ್ಯ ಪೂರ್ವದಲ್ಲಿ ಗ್ವಾಲಿಯರ್, ಮೈಸೂರು, ಹೈದರಾಬಾದ್, ಇಂದೋರ್, ಬರೋಡಾ, ಕೊಲ್ಹಾಪೂರ, ಸಂಡೂರು ಸಂಸ್ಥಾನಗಳು ಸೇರಿದಂತೆ ಒಟ್ಟು ೪೬೫ ಸಂಸ್ಥಾನಗಳು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದವು. ಹರಿಭಟ್ ಬಾಬಾ ಪಟವರ್ಧನ ಮಹಾರಾಜರು ಸಂಸ್ಸ್ಥಾನದ ಪೂರ್ವಜರಾಗಿದ್ದರು.೧೬೫೫ ರಿಂದ ಸ್ವಾತಂತ್ರ್ಯ ಬಂದು ಭಾರತದ ಒಕ್ಕೂಟದಲ್ಲಿ ಒಂದಾಗುವವರೆಗೆ ಈ ಸಂಸ್ಥಾನ ಆಡಳಿತ ನಡೆಸಿತು. ೧೯೨೩ ರಲ್ಲಿ ತನ್ನದೇ ಆದ ಜಮಖಂಡಿ ಸ್ಟೇಟ್ ಲೆಜಿಸ್ಲೇಟಿವ್ ಅಸೆಂಬ್ಲಿ ಎಂಬ ಶಾಸನಸಭೆ ಹೊಂದಿ ಪ್ರಜೆಗಳಿಗೆ ಮೂಲಸೌಕರ್ಯ ಒದಗಿಸಿ ಮಾದರಿಯಾಗಿತ್ತು. ೧೯೧೨ ರಷ್ಟು ಹಿಂದೆಯೇ ಅವರು ತಮ್ಮ ರಾಮತೀರ್ಥ ಅರಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದರು. ೧೯೩೯ರಲ್ಲಿ ರಷ್ಯನ್ ಎಂಜಿನ್ ನಿಂದ ಚಲಿಸುವ ಬೀಸುವ ಗಿರಣಿ ಹಾಗು ನೀರೆತ್ತುವ ಪಂಪ್ ಸೆಟ್ ಅಳವಡಿಸಿಕೊಂಡಿದ್ದರು. ನಗರದ ರೆಸ್ತೆಗಳು + ಆಕಾರದ ರಚನೆಯಾಗಿರುವುದರಿಂದ ಇದಕ್ಕೆ "ಪಗಡಿ ಪಟ್ಟಿ ಬಜಾರ್" ಎಂದು ಕರೆಯುತ್ತಿದ್ದರು. ಪಟವರ್ಧನ ಮಹಾರಾಜರು ಮೇಲ್ಜಾತಿ(ಬ್ರಾಹ್ಮಣ)ಗೆ ಸೇರಿದ್ದರೂ ಎಲ್ಲ ಜಾತಿಯವರಿಗೆ ಅರಮನೆಯಲ್ಲಿ ಔತಣಕೂಟವನ್ನು ಏರ್ಪಡಿಸುತ್ತಿದ್ದರು. ಆ ಕಾಲದಲ್ಲೇ ಸಿವಿಲ್ ಹಾಸ್ಪಿಟಲ್, ಮುನ್ಸಿಪಾಲಿಟಿ, ಹೈಸ್ಕೂಲ್, ಕಾಲೇಜುಗಳನ್ನು ಸ್ಥಾಪಿಸಿದ್ದರು. ಕೃಷಿಗಾಗಿ ಕೆರೆ-ಕಟ್ಟೆ ಕಟ್ಟಿಸಿದ್ದಾರೆ. ಕ್ರೀಡೆಯನ್ನು ಉತ್ತೇಜಿಸಲು ಪೋಲೋ ಮೈದಾನ, ಈಜುಕೊಳ,ಕುಸ್ತಿ ಕಣ ನಿರ್ಮಿಸಿದ್ದರು. ಸ್ವತ: ಮಹಾರಾಜರು ಟೆನಿಸ್ ಪ್ರಿಯರಾಗಿದ್ದ ಕಾರಣ ಪುರುಷ ಹಾಗು ಮಹಿಳೆಯರಿಗಾಗಿ ಪ್ರತ್ಯೇಕ ಟೆನಿಸ್ ಕೋರ್ಟ ನಿರ್ಮಾಣ ಮಾಡಿದರು. ಸ್ವಾತಂತ್ರ್ಯಾನಂತರ ಏಕೀಕರಣವು ಹಲವು ಸಂಸ್ಥಾನಿಕರ ಅಸಹಕಾರದಿಂದ ನೆನೆಗುದಿಗೆ ಬಿದ್ದಿತ್ತು. ಸಂಸ್ಥಾನಿಕರ ಆಂತರಿಕ ಕಚ್ಚಾಟ ಮತ್ತೊಮ್ಮೆ ಭಾರತವನ್ನು ಪರಕೀಯರ ಆಡಳಿತಕ್ಕೆ ದೂಡಬಹುದೆಂಬುದನ್ನು ದೇಶದ ಸಂಸ್ಥಾನಿಕರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ ಪಟವರ್ಧನರು ತಾವು ಭಾರತದೊಂದಿಗೆ ಮೊಟ್ಟ ಮೊದಲಿಗೆ ವಿಲೀನವಾಗುವುದರೊಂದಿಗೆ ಮುನ್ನುಡಿಯನ್ನು ಬರೆದರು. ಆ ಸಂದರ್ಭದಲ್ಲಿ ತಮ್ಮ ಜೊತೆಗಿನ ಇತರ ಸಂಸ್ಥಾನಿಕರನ್ನು ಎದುರು ಹಾಕಿಕೊಂಡೂ ಕೂಡ ಭವ್ಯ ಭಾರತದ ಕನಸನ್ನು ಕಂಡವರಲ್ಲಿ ಮೊದಲಿಗರಾಗಿದ್ದರು.

ಧಾರ್ಮಿಕಸಂಪಾದಿಸಿ

"ದಾರ್ಮೀಕವಾಗಿ ಎಲ್ಲಾ ತಾಲುಕಿನ ಜನರು ಸಹೊದರ ಮನೊಭಾವ ಹೊಂದಿದ್ದಾರೆ"

ಬಾಲಕರ ಪದವಿ ಪೂರ್ವ ಕಾಲೇಜು ಜಮಖಂಡಿ

ಪ್ರಮುಖ ವಿದ್ಯಾಸಂಸ್ಥೆಗಳುಸಂಪಾದಿಸಿ

ಬಿ.ಎಲ್.ಡಿ.ಇ. ಸಂಸ್ಥೆ, ಜಮಖಂಡಿ (ನ್ಯಾಕ್ 'ಎ' ಗ್ರೇಡ್ ಮಾನ್ಯತೆ)

 • ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ,ಜಮಖಂಡಿ
 • ಬಾಲಕರ ಸರಕಾರಿ ಪರಸುರಾಮ ಭಾವು.ಪದವಿ ಪೂರ್ವ ಕಾಲೇಜ,ಜಮಖಂಡಿ
 • ನವಚೇತನ ಕಂಪ್ಯೂಟರ ಶಿಕ್ಷಣ ಸಂಸ್ಥೆ ಜಮಖಂಡಿ

ಶ್ರೀ ವೆಂಕಟೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ, ಜಮಖಂಡಿ ' ತುಂಗಳ ವಿಜ್ಞಾನ ವಿದ್ಯಾಲಯ ಪಟವರ್ದನ ಮಹಾರಾಜರ ಪಿ ಬಿ ಹಾಯಸ್ಕೂಲ

ಬಾಲಿಕೆಯರ ಸರಕಾರಿ ಪ.ಪೂ.ಕಾಲೇಜ,ಜಮಖಂಡಿಸಂಪಾದಿಸಿ

 • ಸರಕಾರಿ ಪ.ಪೂ.ಕಾಲೇಜ,ಹುನ್ನೂರು
 • ಬಿ.ಎಲ್.ಡಿ.ಇ.ಸಂಸ್ಠೆಯ, ವಾಣಿಜ್ಯ, ಬಿ.ಏಚ್.ಎಸ್, ಕಲೆ ಮತ್ತು ಟಿ.ಜಿ.ಪಿ ವಿಜ್ಞಾನ ಕಾಲೇಜು,ಜಮಖಂಡಿ
 • ಸರಕಾರಿ ಪ್ರಥಮ ದರ್ಜೆ ಕಾಲೇಜು ಹುನ್ನೂರ

ಪತ್ರಿಕೆ ಗಳು ಸಂಪಾದಿಸಿ

 • ಅನ್ಯಾಯಕ್ಕೆ ಶಿಕ್ಷೆ.
 • ಪರಿಸರ ವಾಣಿ.
 • ಜೈ ಜಂಬುಕೇಶ್ವರ ವಾಣಿ.
 • ಬಿರುಗಾಳಿ.
 • ಬಂತು ಬಿರುಗಾಳಿ.
 • ನ್ಯಾಯದ ಕನ್ನಡಿ.
 • ಭ್ರಷ್ಟರ ಭೇಟೆ.
 • ಕ್ರೈಂ ಫೈಲ್.
 • ದೂತ ಸಮರ.
 • ಹಿಪ್ಪರಗಿ ದರ್ಶನ.
 • ಉದಯಕಾಲ.
 • ಜೈ ಜಮಖಂಡಿ
 • ಜನಮತರಂಗ

ಪರಂಪರೆಸಂಪಾದಿಸಿ

 • ನಮ್ಮೂರ ಜಾತ್ರೆ
 • ೨೫ ವರ್ಷಕ್ಕೆ ವಮಿ ನಡಿಯುವ ಜಾತ್ರಿ
 • ಜಮಖಂಡಿ ತಾಲೂಕಿನ ಒಂದು ಚಿಕ್ಕ ಹಳ್ಳಿ ಮೈಗೂರ ರಲ್ಲಿ ಪ್ರತಿ ಹುಣ್ಣಿಮೆಯ ದಿನ ಶ್ರೀ ಶಿವಾನಂದ ಮಠದಲ್ಲಿ ಶರಣ ತತ್ವ ಚಿಂತನ ಗೋಷ್ಠಿ ನಡೆಯುತ್ತದೆ...

ಭಾಷೆಸಂಪಾದಿಸಿ

ಮುಖ್ಯ ಭಾಷೆ ಕನ್ನಡ

ಸಂಗೀತ ಮತ್ತು ಕಲೆ

'ಸ್ವತಂತ್ರ ಹೋರಾಟಗಾರರು ಮತ್ತು ಗಾಂಧೀವಾದಿಗಳು

ಪ್ರಮುಖ ಬೆಳೆಗಳುಸಂಪಾದಿಸಿ

ಕಬು, ಅರಿ‍‍ಶಿಣ, ಜೋಳ, ಸಜ್ಜೆ, ಸೇಂಗಾ, ಸೂರ್ಯಪಾನ, ಉಳ್ಳಾಗಡ್ಡಿ(ಈರುಳ್ಳೆ). ಪ್ರಮುಖ ಆಹಾರ ಧಾನ್ಯ ಜೋಳ.ಜೊತೆಗೆ ಗೋಧಿ, ಬೇಳೆಕಾಳುಗಳು.

ಹವಾಮಾನಸಂಪಾದಿಸಿ

 • ಬೆಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ಡಿಗ್ರಿವರೆಗೆ (ಡಿಸೆಂಬರನಲ್ಲಿ) ಉಷ್ಣತೆ ಇರುತ್ತದೆ. ಬೆಸಿಗೆ - °C-೩೯°C , ಚಳಿಗಾಲ - °C-°C
 • ಮಳೆ - ಪ್ರತಿ ವರ್ಷ ಮಳೆ ಸರಾಸರಿ ಮಿಮಿ ಗಳಸ್ಟು ಆಗಿರುತ್ತದೆ. ಕಬ್ಬು ಹೆಚ್ಚು ಬೇಳೆಯುತ್ತಾರೆ.
 • ಗಾಳಿ -ಗಾಳಿ ವೇಗ ಕಿಮಿ/ಗಂ (ಜೂನ), ಕಿಮಿ/ಗಂ (ಜುಲೈ)ಹಾಗೂ ಕಿಮಿ/ಗಂ (ಅಗಸ್ಟ) ಇರುತ್ತದೆ.

ಸಮೀಪದ ಸ್ಥಳಗಳುಸಂಪಾದಿಸಿ

ಜಮಖಂಡಿಯಿಂದ 8ಕಿಲೋಮೀಟರ್ ದೂರದಲ್ಲಿ ಸೂಕ್ಷೇತ್ರ kadakol ಗ್ರಾಮದಲ್ಲಿ ಹೆಬ್ಬಿ ಬಸವೇಶ್ವರ ಮತ್ತು ಗುಬ್ಬೇಶ್ವರ ದೇವಸ್ಥಾನ ಪ್ರಸಿದ್ಧಿಯನ್ನು ಹೊಂದಿವೆ ಜಮಖಂಡಿಯಿಂದ 12 ಕಿಲೋಮೀಟರ ಸುಕ್ಷೇತ್ರ ಮರೇಗುದ್ದಿ ಶ್ರೀ ಅಡವಿಸಿದ್ದೇಶ್ವರ ಮಠ ಇದೆ. & ಜಮಖಂಡಿಯಿಂದ ೨೫ ಕಿಲೊಮೀಟರ ದೂರ ಹೋದರೆ ಹಳಿಂಗಳಿ ಎಂಬ ಐತಿಹಾಸಿಕ ಸ್ಥಳವಿದೆ. ಅಲ್ಲಿ ಪ್ರಾಚಿನ ಕಾಲದ ಜೈನ ಮುನಿಗಳ ೭೦೦ ಮುನಿಗಳ ಸಮಾಧಿ ಸ್ಥಳಗಳಿವೆ.ಮರೇಗುದ್ದಿ ನಂತರ ಕೊಣ್ಣೂರ ಇರುವುದು ಅಲ್ಲಿ " ಶ್ರೀ ಕರಿಸಿದ್ದೇಶ್ವರ " ಎಂಬ ದೇವರು ಪ್ರಸಿದ್ಡನಾಗಿದ್ದಾನೆ.ಕಲ್ಹಳ್ಳಿ ಶ್ರೀ ವೇಂಕಟೇಶ್ವರ ಐತಿಹಾಸಿಕ ಪ್ರಭಾವಿ ದೇವಸ್ಥಾನ ಇದೆ.(೧೦ ಕಿ.ಮಿ) ಕಡಪಟ್ಟಿ ಶ್ರೀ ಬಸವೇಶ್ವರ ದೇವಸ್ಥಾನ ಇದೆ.ಸಮಿಪ ಹಿಪ್ಪರಗಿಯ ಕೃಷ್ಣಾ ತಿರದ ದಡದಲ್ಲಿ ಪ್ರಾಚಿನ ಕಾಲದ ಆಧ್ಯಾತ್ಮಿಕ ಸಂಗಮೇಶ್ವರ ದೇವಸ್ಥಾನ ಪ್ರಸಿಧ್ದಿ ಇರುತ್ತದೆ ಚಿಕ್ಕಪಡಸಲಗಿ ಶ್ರಮಭಿಂದು ಸಾಗರ ಇದೆ.ಮಧುರಖಂಡಿಯಲ್ಲಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಪ್ರಸಿದ್ದಿ ಹೊಂದಿದೆ.ಸಜ್ಜಿ ಹನುಮಂತನ ದೇವಸ್ಥಾನ ಪ್ರಸಿದ್ದಿ ಹೊಂದಿದೆ ಕುಂಚನೂರ.ಮಾಹಾದೇವ ದೆವಸ್ಥಾನ ಪ್ರಸಿದ್ದಿ ಹೊಂದಿದೆ.ಜಮಖಂಡಿಯಿಂದ 15km ದೂರದಲ್ಲಿ ಶ್ರೀ ಶಿವಾನಂದ ಮಠ ಮೈಗೂರ ಪ್ರಸಿದ್ದಿ ಹೊಂದಿದೆ ಜಮಖಂಡಿ ಯಿಂದ ೧೪km ದೂರದಲ್ಲಿ ಕೊಲ್ಹಾಪುರ ಪ್ರಸಿದ್ಧಿ ಶ್ರೀ ಮುತ್ತೂರು ಮಹಾಲಕ್ಷ್ಮೀ ದೇವಸ್ಥಾನ ಇದೆ..

ವರ್ಷ ಹೆಸರು ಪಕ್ಷ
೨೦೦೪
೧೯೯೯
೧೯೯೪
೧೯೮೯
೧೯೮೫
೧೯೮೩
೧೯೭೮ ()
೧೯೭೨
೧೯೬೭ ()
೧೯೬೨
೧೯೫೭

ಪ್ರಮುಖ ರಾಜಕಾರಣಿಗಳು ರಾಜು

ಪ್ರವಾಸಸಂಪಾದಿಸಿ

ಇಲ್ಲಿ ಪ್ರಸಿದ್ದವಾದ ಜಮಖಂಡಿ ಅರಮನೆ ಇರುತ್ತದೆ. ಇದರ ಸುತ್ತಮುತ್ತಲು ವಿಶಾಲವಾದ ಐತಿಹಾಸಿಕ ಪ್ರದೇಶಗಳು ದೊರೆಯುತ್ತವೆ.

ಐತಿಹಾಸಿಕ ಕೇಂದ್ರ ಬಿಂದುವಾಗಿ ಕಟ್ಟೆ ಕೆರೆ ಇಲ್ಲಿ ನಿರ್ಮಿಸಲಾಗಿದೆ ಅಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವಿದೆ

ರಸ್ತೆ ಸಾರಿಗೆಸಂಪಾದಿಸಿ

ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ

ಜಮಖ೦ಡಿ ಪಟ್ಟಣ ಸಾರಿಗೆ ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ. ಜಿಲ್ಲೆಯಲ್ಲಿ ಎರಡನೆ ಅತೀ ಹೆಚ್ಚು ಬಸ್ಗಳನ್ನು ಹೊಂದಿರುವುದು ಜಮಖಂಡಿ ಘಟಕ.

ವಿಮಾನ ನಿಲ್ದಾಣ ಹಾಗೂ ಬಂದರುಸಂಪಾದಿಸಿ

ನಗರಕ್ಕೆ ಹತ್ತಿರವಾದ ಕಾರವಾರ ಹಾಗೂ ಗೋವಾ ಬಂದರುಗಳಿವೆ.ಹುಬ್ಬಳಿ ವಿಮಾನ ನಿಲ್ದಾಣ

ಹೆದ್ದಾರಿಸಂಪಾದಿಸಿ

ಜಮಖಂಡಿಯಿಂದ ಬಿಜಾಪೂರವರೆಗೆ ಸುಮಾರು ೬೨ ಕಿಮಿ ಹೆದ್ದಾರಿ ಇದೆ

ಕ್ರೀಡಾಂಗಣಸಂಪಾದಿಸಿ

ಐತಿಹಾಸಿಕ ಪೊಲೊ ಮೈದಾನ

ಕ್ರೀಡಾ ಪ್ರತಿಭೆಗಳು ಮತ್ತು ಸಾಧನೆಗಳು ಹುನ್ನೂರ ಗ್ರಾಮದ "ಶ್ರೀಧರ ನಿಂಗಪ್ಪ ಸವನೂರ" ಸೈಕ್ಲಿಂಗದಲ್ಲಿ ಮಾಡಿದ ಸಾಧನೆಗೆ ಕರ್ನಾಟಕ ಸರಕಾರವು ರಾಜ್ಯದ ಪ್ರತಷ್ಟಿತ ಪ್ರಶಸ್ತಿ ಆದ ಏಕಲವ್ಯ ಪ್ರಶಸ್ತಿ ಯನ್ನು ನೀಡಿ ಗೌರವಿಸಿದೆ.

ಹುನ್ನೂರ ಗ್ರಾಮದ ಖೋ ಖೋ ತಂಡವು ರಾಷ್ಟ್ರ ಮಟ್ಟದಲ್ಲಿನ ಖೋ ಖೋ ಪಂದ್ಯಾವಳಿ ಸ್ಪರ್ಧಿಸಿರುತ್ತಾರೆ.

ನಗರ ಆಡಳಿತಸಂಪಾದಿಸಿ

ವಾರ್ಡ್ ಗಳು ನಗರದಲ್ಲಿ ಒಟ್ಟು [32] ವಾರ್ಡ್ ಗಳು ಇರುತ್ತವೆ.

ಜಮಖ೦ಡಿಯ ಪ್ರಮುಖ ಬಡಾವಣೆಗಳು

ಸಿನಿಮಾ ಚಿತ್ರ ಮಂದಿರಗಳುಸಂಪಾದಿಸಿ

 • ವಸಂತ
 • ಶ್ರೀನಿವಾಸ
 • ಸುವರ್ಣ

ಸಾಂಸ್ಕೃತಿಕಸಂಪಾದಿಸಿ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ,ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ಜಮಖಂಡಿಯ ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯಗಳಿಗೆ, ಪರದೇಶಗಳಿಗೆ ರಫ್ತು ಆಗುತ್ತವೆ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. 'ಜವಾರಿ' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ,, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರುಗಳು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಯೋಜನೆಗಳುಸಂಪಾದಿಸಿ

[[[ಚಿತ್ರ:http://www.jamkhanditown.gov.in/sites/jamkhanditown.gov.in/files/ram.JPG Archived 2013-12-16 at the Wayback Machine.]]]== ಚಿತ್ರ ಗ್ಯಾಲರಿ == ಟೆಂಪ್ಲೇಟು:ಜಮಖ೦ಡಿ ಚಿತ್ರ ಗ್ಯಾಲರಿ

{{ =

Jamakhandi Website : https://rameshhalagond8.wixsite.com/rpskills

ಬಾಹ್ಯ ಸಂಪರ್ಕಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

ಖಾಸಗಿ ಬಸ್ ನಿಲ್ದಾಣದ
"https://kn.wikipedia.org/w/index.php?title=ಜಮಖಂಡಿ&oldid=1098173" ಇಂದ ಪಡೆಯಲ್ಪಟ್ಟಿದೆ