ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.[೧]

ಕನ್ನಡ ಸಾಹಿತ್ಯ ಸಮ್ಮೇಳನ
ಪ್ರಕಾರಕನ್ನಡ ಸಾಹಿತ್ಯ
ಆವರ್ತನ1 ವರ್ಷಕೊಮ್ಮೆ
ಸ್ಥಳ (ಗಳು)ವಿವಿಧ
ಸಕ್ರಿಯ ವರ್ಷಗಳು109
ಉದ್ಘಾಟನೆ1915 (ಬೆಂಗಳೂರು)
ಇತ್ತೀಚಿನ2023 (ಹಾವೇರಿ)
ಮುಂದಿನ2023 (ಮಂಡ್ಯ)
ಪೋಷಕ (ರು)ಕರ್ನಾಟಕ ಸರಕಾರ
ವೆಬ್ಸೈಟ್
Kannada Sahitya Sammelana

ಹಿನ್ನಲೆ

ಬದಲಾಯಿಸಿ

೧೯೧೪ರ ದಿ ಮೈಸೂರು ಎಕಾನಾಮಿಕ್ ಕಾನ್ಫೆರೆನ್ಸ್ (ಮೈಸೂರು ಸಂಪದಭ್ಯುದಯ ಸಮಾಜ) ಸಮ್ಮೆಳನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಪೂರಕವಾದ ಪರಿಷತ್ತನ್ನು ಸ್ಥಾಪಿಸುವ ವಿಚಾರದಲ್ಲಿ ರಾವ್ ಬಹದ್ದೂರ್ ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ. ಎಸ್. ಅಚ್ಯುತರಾವ್ ಅವರುಗಳನ್ನೊಳಗೊಂಡ ಉಪಸಮಿತಿಯನ್ನು ರಚಿಸಲಾಯಿತು. ಈ ಉಪಸಮಿತಿಯು ಅಂದಿನ ವಿವಿಧ ಕನ್ನಡ ನಾಡುಗಳ ಪ್ರಾಜ್ಞರೊಡನೆ ಸಮಾಲೋಚಿಸಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ, ಆ ಸಮ್ಮೇಳನಗಳಲ್ಲಿ ಕೆಲವು ಉದ್ದೇಶ ಸಾಧನಕ್ರಮಗಳನ್ನು ಚಿಂತಿಸುವ ಕುರಿತಾದ ಮಾರ್ಗದರ್ಶನ ಸೂತ್ರಗಳನ್ನು ರೂಪಿಸಿತು.

 1. ಕನ್ನಡ ಭಾಷೆಯಲ್ಲಿ ವ್ಯಾಕರಣ, ಚರಿತ್ರೆ, ನಿಘಂಟು ಬರೆಯಿಸುವುದು,
 2. ನವೀನಶಾಸ್ತ್ರಗಳಿಗೆ ಸಂಬಂಧಪಟ್ಟ ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು.
 3. ತತ್ವಶಾಸ್ತ್ರ, ಪ್ರಕೃತಿವಿಜ್ಞಾನ, ಚರಿತ್ರೆ, ಸಾಹಿತ್ಯ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಕೊಟ್ಟು ಅವುಗಳನ್ನು ಪ್ರಚುರಪಡಿಸುವುದು.
 4. ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂಶಗಳನ್ನೂ ವಿಚಾರಮಾಡಿ ನಿರ್ಣಯಿಸುವುದು.
 5. ಬೆರೆ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು.
 6. ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ, ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ ಸಂಗ್ರಹಿಸಿ, ಅದನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ, ಕನ್ನಡನಾಡಿನ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನೇರ್ಪಡಿಸುವುದು.
 7. ಕರ್ನಾಟಕ ಭಾಷಾಸಂಸ್ಕರಣ, ಕರ್ಣಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತಯೋಗ್ಯವಾದ ಲೇಖನಗಳನ್ನೊಳಕೊಂಡ ಕನ್ನಡದ ಪತ್ರಿಕೆಗಳನ್ನು ಪ್ರಕಟಿಸುವುದು.
 8. ಗ್ರಂಥಕರ್ತರಿಗೆ ಬಿರುದು ಸಂಭಾವನೆ ಕೊಡುವುದು.
 9. ಕರ್ನಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪೂರ್ವ ಪರಿಶೋಧನ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತವೇತನಗಳನ್ನು ಕೊಡುವುದು.
 10. ಕರ್ನಾಟಕ ಭಾಷೋನ್ನತಿಗೂ, ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು.
 11. ಕನ್ನಡ ಮಾತನ್ನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪುಸ್ತಕಭಂಡಾರಗಳನ್ನೂ ಸ್ಥಾಪಿಸುವುದು.
 12. ಕನ್ನಡ ನಾಡುಗಳ ಪ್ರಮುಖರನ್ನು ಸೇರಿಸಿ ಸಭೆಗಳನ್ನೇರ್ಪಡಿಸುವುದು, ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಮಾಡಿಸುವುದು.[೨]

ಈವರೆಗಿನ ಸಮ್ಮೇಳನಗಳ ಪಟ್ಟಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ

ಹೊರ ಕೊಂಡಿಗಳು

ಬದಲಾಯಿಸಿ
 1. ಸಚಿತ್ರ ಸಮ್ಮೇಳನ Archived 2011-02-04 ವೇಬ್ಯಾಕ್ ಮೆಷಿನ್ ನಲ್ಲಿ.
 2. ಬರಗೂರರ ಅಧ್ಯಕ್ಷ ಭಾಷಣ:2 Dec, 2016:[[೧]]
ಸಮ್ಮೇಳನದ ಸಂಖ್ಯೆ ಸಮ್ಮೇಳನ ನಡೆದ ದಿನಾಂಕ, ತಿಂಗಳು ಮತ್ತು ವರ್ಷ ಸ್ಥಳ ಅಧ್ಯಕ್ಷತೆ
೩, ೪, ೫, ೬ ಮೇ ೧೯೧೫ ಬೆಂಗಳೂರು ಎಚ್. ವಿ. ನಂಜುಂಡಯ್ಯ
೬, ೭, ೮ ಮೇ ೧೯೧೬ ಬೆಂಗಳೂರು ಎಚ್. ವಿ. ನಂಜುಂಡಯ್ಯ
೮, ೯, ೧೦ ಜೂನ್ ೧೯೧೭ ಮೈಸೂರು ಎಚ್. ವಿ. ನಂಜುಂಡಯ್ಯ
೧೧, ೧೨, ೧೩ ಮೇ ೧೯೧೮ ಧಾರವಾಡ ಆರ್. ನರಸಿಂಹಾಚಾರ್
೬, ೭, ೮ ಮೇ ೧೯೧೯ ಹಾಸನ ಕರ್ಪೂರ ಶ್ರೀನಿವಾಸರಾವ್
೨೦, ೨೧ ಜೂನ್ ೧೯೨೦ ಹೊಸಪೇಟೆ ರೊದ್ದ ಶ್ರೀನಿವಾಸರಾವ್
೧೯, ೨೦, ೨೧ ಮೇ ೧೯೨೧ ಚಿಕ್ಕಮಗಳೂರು ಕೆ. ಪಿ. ಪುಟ್ಟಣ್ಣ ಚೆಟ್ಟಿ
೧೨, ೧೩ ಮೇ ೧೯೨೨ ದಾವಣಗೆರೆ ಎಂ. ವೆಂಕಟಕೃಷ್ಣಯ್ಯ
೨೧, ೨೨, ೨೩ ಮೇ ೧೯೨೩ ಬಿಜಾಪುರ ಸಿದ್ಧಾಂತಿ ಶಿವಶಂಕರ ಶಾಸ್ತ್ರಿ
೧೦ ೧೬, ೧೭, ೧೮ ಮೇ ೧೯೨೪ ಕೋಲಾರ ಹೊಸಕೋಟೆ ಕೃಷ್ಣಶಾಸ್ತ್ರಿ
೧೧ ೯, ೧೦, ೧೧ ಮೇ ೧೯೨೫ ಬೆಳಗಾವಿ ಬೆನಗಲ್ ರಾಮರಾವ್
೧೨ ೨೨, ೨೩, ೨೪ ಮೇ ೧೯೨೬ ಬಳ್ಳಾರಿ ಫ. ಗು. ಹಳಕಟ್ಟಿ
೧೩ ೧೯, ೨೦, ೨೧ ಮೇ ೧೯೨೭ ಮಂಗಳೂರು ಆರ್. ತಾತಾಚಾರ್ಯ
೧೪ ೧, ೨, ೩ ಜೂನ್ ೧೯೨೮ ಕಲಬುರಗಿ ಬಿ. ಎಂ. ಶ್ರೀಕಂಠಯ್ಯ
೧೫ ೧೨, ೧೩, ೧೪ ಮೇ ೧೯೨೯ ಬೆಳಗಾವಿ ಮಾಸ್ತಿ ವೆಂಕಟೇಶ ಅಯ್ಯಂಗಾರ್
೧೬ ೫, ೬, ೭ ಅಕ್ಟೋಬರ್ ೧೯೩೦ ಮೈಸೂರು ಆಲೂರು ವೆಂಕಟರಾವ್
೧೭ ೨೮, ೨೯, ೩೦ ಡಿಸೆಂಬರ್ ೧೯೩೧ ಕಾರವಾರ ಮುಳಿಯ ತಿಮ್ಮಪ್ಪಯ್ಯ
೧೮ ೨೮, ೨೯, ೩೦ ಡಿಸೆಂಬರ್ ೧೯೩೨ ಮಡಿಕೇರಿ ಡಿ. ವಿ. ಗುಂಡಪ್ಪ
೧೯ ೨೯, ೩೦, ೩೧ ಡಿಸೆಂಬರ್ ೧೯೩೩ ಹುಬ್ಬಳ್ಳಿ ವೈ. ನಾಗೇಶ ಶಾಸ್ತ್ರಿ
೨೦ ೨೮, ೨೯, ೩೦ ಡಿಸೆಂಬರ್ ೧೯೩೪ ರಾಯಚೂರು ಪಂಜೆ ಮಂಗೇಶರಾವ್
೨೧ ೨೬, ೨೭, ೨೮ ಡಿಸೆಂಬರ್ ೧೯೩೫ ಮುಂಬೈ ಎನ್. ಎಸ್. ಸುಬ್ಬರಾವ್
೨೨ ೨೯, ೩೦, ೩೧ ಡಿಸೆಂಬರ್ ೧೯೩೭ ಜಮಖಂಡಿ ಬೆಳ್ಳಾವೆ ವೆಂಕಟನಾರಣಪ್ಪ
೨೩ ೨೯, ೩೦, ೩೧ ಡಿಸೆಂಬರ್ ೧೯೩೮ ಬಳ್ಳಾರಿ ರಂಗನಾಥ ದಿವಾಕರ
೨೪ ೨೫, ೨೬, ೨೭, ೨೮ ಡಿಸೆಂಬರ್ ೧೯೩೯ ಬೆಳಗಾವಿ ಮುದವೀಡು ಕೃಷ್ಣರಾವ್
೨೫ ೨೭, ೨೮, ೨೯ ಡಿಸೆಂಬರ್ ೧೯೪೦ ಧಾರವಾಡ ವೈ. ಚಂದ್ರಶೇಖರ ಶಾಸ್ತ್ರಿ
೨೬ ೨೭, ೨೮, ೨೯ ಡಿಸೆಂಬರ್ ೧೯೪೧ ಹೈದರಾಬಾದ್ ಎ. ಆರ್. ಕೃಷ್ಣಶಾಸ್ತ್ರಿ
೨೭ ೨೬, ೨೭, ೨೮ ಜನವರಿ ೧೯೪೩ ಶಿವಮೊಗ್ಗ ದ. ರಾ. ಬೇಂದ್ರೆ
೨೮ ೨೮, ೨೯, ೩೦ ಡಿಸೆಂಬರ್ ೧೯೪೪ ರಬಕವಿ ಶಿ. ಶಿ. ಬಸವನಾಳ
೨೯ ೨೬, ೨೭, ೨೮ ಡಿಸೆಂಬರ್ ೧೯೪೫ ಮದರಾಸು ಟಿ. ಪಿ. ಕೈಲಾಸಂ
೩೦ ೭, ೮, ೯ ಮೇ ೧೯೪೭ ಹರಪನಹಳ್ಳಿ ಸಿ. ಕೆ. ವೆಂಕಟರಾಮಯ್ಯ
೩೧ ೨೯, ೩೦, ೩೧ ಡಿಸೆಂಬರ್ ೧೯೪೮ ಕಾಸರಗೋಡು ತಿ. ತಾ. ಶರ್ಮ
೩೨ ೫, ೬, ೭ ಮಾರ್ಚ್ ೧೯೪೯ ಕಲಬುರಗಿ ಉತ್ತಂಗಿ ಚನ್ನಪ್ಪ
೩೩ ೨೪, ೨೫, ೨೬ ಮೇ ೧೯೫೦ ಸೊಲ್ಲಾಪುರ ಎಂ. ಆರ್. ಶ್ರೀನಿವಾಸಮೂರ್ತಿ
೩೪ ೨೬, ೨೭, ೨೮ ಡಿಸೆಂಬರ್ ೧೯೫೧ ಮುಂಬೈ ಗೋವಿಂದ ಪೈ
೩೫ ೧೬, ೧೭, ೧೮ ಮೇ ೧೯೫೨ ಬೇಲೂರು ಶಿ. ಚ. ನಂದೀಮಠ
೩೬ ೨೬, ೨೭, ೨೮ ಡಿಸೆಂಬರ್ ೧೯೫೪ ಕುಮಟಾ ವಿ. ಸೀತಾರಾಮಯ್ಯ
೩೭ ೧೦, ೧೧, ೧೨ ಜೂನ್ ೧೯೫೫ ಮೈಸೂರು ಶಿವರಾಮ ಕಾರಂತ
೩೮ ೨೫, ೨೬, ೨೭ ಡಿಸೆಂಬರ್ ೧೯೫೬ ರಾಯಚೂರು ಆದ್ಯ ರಂಗಾಚಾರ್ಯ
೩೯ ೭, ೮, ೯ ಮೇ ೧೯೫೭ ಧಾರವಾಡ ಕುವೆಂಪು
೪೦ ೧೮, ೧೯, ೨೦ ಜನವರಿ ೧೯೫೮ ಬಳ್ಳಾರಿ ವಿ. ಕೃ. ಗೋಕಾಕ
೪೧ ೧೧, ೧೨, ೧೩ ಫೆಬ್ರವರಿ ೧೯೬೦ ಬೀದರ್ ಡಿ. ಎಲ್. ನರಸಿಂಹಾಚಾರ್
೪೨ ೨೭, ೨೮, ೨೯ ಡಿಸೆಂಬರ್ ೧೯೬೦ ಮಣಿಪಾಲ ಅ. ನ. ಕೃಷ್ಣರಾಯ
೪೩ ೨೭, ೨೮, ೨೯ ಡಿಸೆಂಬರ್ ೧೯೬೧ ಗದಗ ಕೆ. ಜಿ. ಕುಂದಣಗಾರ
೪೪ ೨೮, ೨೯, ೩೦ ಡಿಸೆಂಬರ್ ೧೯೬೩ ಸಿದ್ದಗಂಗಾ ರಂ. ಶ್ರೀ. ಮುಗಳಿ
೪೫ ೧೦, ೧೧, ೧೨ ಮೇ ೧೯೬೫ ಕಾರವಾರ ಕಡೆಂಗೋಡ್ಲು ಶಂಕರಭಟ್ಟ
೪೬ ೨೬, ೨೭, ೨೮ ಮೇ ೧೯೬೭ ಶ್ರವಣಬೆಳಗೊಳ ಆ. ನೇ. ಉಪಾಧ್ಯೆ
೪೭ ೨೭, ೨೮, ೨೯ ಡಿಸೆಂಬರ್ ೧೯೭೦ ಬೆಂಗಳೂರು ದೇ. ಜವರೇಗೌಡ
೪೮ ೩೧ ಮೇ, ೧, ೨ ಜೂನ್ ೧೯೭೪ ಮಂಡ್ಯ ಜಯದೇವಿತಾಯಿ ಲಿಗಾಡೆ
೪೯ ೧೧, ೧೨, ೧೩ ಡಿಸೆಂಬರ್ ೧೯೭೬ ಶಿವಮೊಗ್ಗ ಎಸ್. ವಿ. ರಂಗಣ್ಣ
೫೦ ೨೩, ೨೪, ೨೫ ಏಪ್ರಿಲ್ ೧೯೭೮ ದೆಹಲಿ ಜಿ. ಪಿ. ರಾಜರತ್ನಂ
೫೧ ೦೯, ೧೦, ೧೧ ಮಾರ್ಚ್ ೧೯೭೯ ಧರ್ಮಸ್ಥಳ ಗೋಪಾಲಕೃಷ್ಣ ಅಡಿಗ
೫೨ ೭, ೮, ೯, ೧೦ ಫೆಬ್ರವರಿ ೧೯೮೦ ಬೆಳಗಾವಿ ಬಸವರಾಜ ಕಟ್ಟೀಮನಿ
೫೩ ೧೩, ೧೪, ೧೫ ಮಾರ್ಚ್ ೧೯೮೧ ಚಿಕ್ಕಮಗಳೂರು ಪು. ತಿ. ನರಸಿಂಹಾಚಾರ್
೫೪ ೨೭, ೨೮, ೨೯, ೩೦ ನವೆಂಬರ್ ೧೯೮೧ ಮಡಿಕೇರಿ ಶಂ. ಬಾ. ಜೋಶಿ
೫೫ ೨೩, ೨೪, ೨೫, ೨೬ ಡಿಸೆಂಬರ್ ೧೯೮೨ ಸಿರ್ಸಿ ಗೊರೂರು ರಾಮಸ್ವಾಮಿ ಅಯ್ಯಂಗಾರ್
೫೬ ೨೩, ೨೪, ೨೫ ಮಾರ್ಚ್ ೧೯೮೪ ಕೈವಾರ ಎ. ಎನ್. ಮೂರ್ತಿರಾವ್
೫೭ ೫, ೬, ೭ ಏಪ್ರಿಲ್ ೧೯೮೫ ಬೀದರ್ ಹಾ. ಮಾ. ನಾಯಕ
೫೮ ೨೯, ೩೦, ೩೧ ಅಕ್ಟೋಬರ್, ೧ ನವೆಂಬರ್ ೧೯೮೭ ಕಲಬುರಗಿ ಸಿದ್ಧಯ್ಯ ಪುರಾಣಿಕ
೫೯ ೧೬, ೧೭, ೧೮ ಫೆಬ್ರವರಿ ೧೯೯೦ ಹುಬ್ಬಳ್ಳಿ ಆರ್. ಸಿ. ಹಿರೇಮಠ
೬೦ ೨೮, ೨೯, ೩೦ ನವೆಂಬರ್ ೧೯೯೦ ಮೈಸೂರು ಕೆ. ಎಸ್. ನರಸಿಂಹಸ್ವಾಮಿ
೬೧ ೯, ೧೦, ೧೧, ೧೨ ಜನವರಿ ೧೯೯೨ ದಾವಣಗೆರೆ ಜಿ. ಎಸ್. ಶಿವರುದ್ರಪ್ಪ
೬೨ ೫, ೬, ೭ ಫೆಬ್ರವರಿ ೧೯೯೩ ಕೊಪ್ಪಳ ಸಿಂಪಿ ಲಿಂಗಣ್ಣ
೬೩ ೧೧, ೧೨, ೧೩ ಫೆಬ್ರವರಿ ೧೯೯೪ ಮಂಡ್ಯ ಚದುರಂಗ
೬೪ ೩, ೪, ೫ ಜೂನ್ ೧೯೯೫ ಮುಧೋಳ ಎಚ್. ಎಲ್. ನಾಗೇಗೌಡ
೬೫ ೨೧, ೨೨, ೨೩, ೨೪ ಡಿಸೆಂಬರ್ ೧೯೯೬ ಹಾಸನ ಚನ್ನವೀರ ಕಣವಿ
೬೬ ೧೧, ೧೨, ೧೩, ೧೪ ಡಿಸೆಂಬರ್ ೧೯೯೭ ಮಂಗಳೂರು ಕಯ್ಯಾರ ಕಿಞ್ಞಣ್ಣ ರೈ
೬೭ ೧೧, ೧೨, ೧೩, ೧೪ ಫೆಬ್ರವರಿ ೧೯೯೯ ಕನಕಪುರ ಎಸ್. ಎಲ್. ಭೈರಪ್ಪ
೬೮ ೨೪, ೨೫, ೨೬ ಜೂನ್ ೨೦೦೦ ಬಾಗಲಕೋಟೆ ಶಾಂತಾದೇವಿ ಮಾಳವಾಡ
೬೯ ೧೫, ೧೬, ೧೭ ಫೆಬ್ರವರಿ ೨೦೦೨ ತುಮಕೂರು ಯು. ಆರ್. ಅನಂತಮೂರ್ತಿ
೭೦ ೭, ೮, ೯ ಮಾರ್ಚ್ ೨೦೦೩ ಬೆಳಗಾವಿ ಪಾಟೀಲ ಪುಟ್ಟಪ್ಪ
೭೧ ೧೮, ೧೯, ೨೦, ೨೧ ಡಿಸೆಂಬರ್ ೨೦೦೩ ಮೂಡುಬಿದಿರೆ ಕಮಲಾ ಹಂಪನಾ
೭೨ ೨೭, ೨೮, ೨೯ ಜನವರಿ ೨೦೦೬ ಬೀದರ್ ಶಾಂತರಸ ಹೆಂಬೆರಳು
೭೩ ೨೦, ೨೧, ೨೨, ೨೩ ಡಿಸೆಂಬರ್ ೨೦೦೭ ಶಿವಮೊಗ್ಗ ಕೆ. ಎಸ್. ನಿಸಾರ್ ಅಹಮ್ಮದ್
೭೪ ೧೨, ೧೩, ೧೪, ೧೫ ಡಿಸೆಂಬರ್ ೨೦೦೭ ಉಡುಪಿ ಎಲ್. ಎಸ್. ಶೇಷಗಿರಿ ರಾವ್
೭೫ ೪, ೫, ೬ ಫೆಬ್ರವರಿ ೨೦೦೯ ಚಿತ್ರದುರ್ಗ ಎಲ್. ಬಸವರಾಜು
೭೬ ೧೯, ೨೦, ೨೧ ಫೆಬ್ರವರಿ ೨೦೧೦ ಗದಗ ಗೀತಾ ನಾಗಭೂಷಣ
೭೭ ೪, ೫, ೬ ಫೆಬ್ರವರಿ ೨೦೧೧ ಬೆಂಗಳೂರು ಜಿ. ವೆಂಕಟಸುಬ್ಬಯ್ಯ
೭೮ ೯, ೧೦, ೧೧ ಡಿಸೆಂಬರ್ ೨೦೧೧ ಗಂಗಾವತಿ ಸಿ. ಪಿ. ಕೃಷ್ಣಕುಮಾರ್
೭೯ ೯, ೧೦, ೧೧ ಫೆಬ್ರವರಿ ೨೦೧೩ ಬಿಜಾಪುರ ಕೋ. ಚೆನ್ನಬಸಪ್ಪ
೮೦ ೭, ೮, ೯ ಜನವರಿ ೨೦೧೪ ಕೊಡಗು ನಾ. ಡಿಸೋಜಾ
೮೧ ೩೧ ಜನವರಿ, ೧, ೨, ೩ ಫೆಬ್ರವರಿ ೨೦೧೫ ಶ್ರವಣಬೆಳಗೊಳ ಸಿದ್ಧಲಿಂಗಯ್ಯ
೮೨ ೨, ೩, ೪ ಡಿಸೆಂಬರ್ ೨೦೧೬ ರಾಯಚೂರು ಬರಗೂರು ರಾಮಚಂದ್ರಪ್ಪ
೮೩ ೨೪, ೨೫, ೨೬ ನವೆಂಬರ್ ೨೦೧೭ ಮೈಸೂರು ಚಂದ್ರಶೇಖರ ಪಾಟೀಲ
೮೪ ೪, ೫, ೬ ಜನವರಿ ೨೦೧೯ ಧಾರವಾಡ ಚಂದ್ರಶೇಖರ ಕಂಬಾರ
೮೫ ೫, ೬, ೭ ಫೆಬ್ರವರಿ ೨೦೨೦ ಕಲಬುರಗಿ ಎಚ್. ಎಸ್. ವೆಂಕಟೇಶಮೂರ್ತಿ
೮೬ ೬, ೭, ೮ ಜನವರಿ ೨೦೨೩ ಹಾವೇರಿ ದೊಡ್ಡರಂಗೇಗೌಡ (ನಿಯೋಜಿತ ಅಧ್ಯಕ್ಷರು)
೮೭ ನಿಗದಿಸಿಲ್ಲ ಮಂಡ್ಯ ನಿಯೋಜಿಸಿಲ್ಲ