ಡಿ.ಎಲ್.ನರಸಿಂಹಾಚಾರ್

ಡಿ.ಎಲ್.ನರಸಿಂಹಾಚಾರ್ (ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ಯ ) ಇವರು ೧೯೦೬ರಲ್ಲಿ ಚಿಕ್ಕನಾಯ್ಕನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಶ್ಯಾಮಯ್ಯಂಗಾರ್. ೧೯೨೯ರಲ್ಲಿ ಎಂ.ಎ. (ಕನ್ನಡ)ದಲ್ಲಿ ಚಿನ್ನದ ಪದಕ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಕನ್ನಡವಲ್ಲದೆ ತಮಿಳು, ತೆಲುಗು, ಸಂಸ್ಕೃತ ಹಾಗು ಇಂಗ್ಲಿಷ್ ಭಾಷೆಗಳಲ್ಲಿ ಅಪಾರ ಪ್ರಭುತ್ವ ಪಡೆದಿದ್ದು ‘ಚಲಿಸುವ ವಿಶ್ವಕೋಶ’ ಎಂದು ಕರೆಯಿಸಿಕೊಳ್ಳುತ್ತಿದ್ದರು.ಕನ್ನಡ ನಾಡಿನ ತಮ್ಮ ಕಾಲದ ಪ್ರಸಿದ್ದ ವಿದ್ವಾಂಸರಲ್ಲಿ ಅಗ್ರಗಣ್ಯರೆನಿಸಿ, ಕನ್ನಡ ಭಾಷೆ ಸಾಹಿತ್ಯಗಳ ಸಂಶೋಧನೆ ಕ್ಷೇತ್ರದಲ್ಲಿ ಮೌಲಿಕವೂ ಮಾರ್ಗದರ್ಶಕವೂ ಆದ ಹಲವಾರು ಕೆಲಸಗಳನ್ನು ಮಾಡಿ ಕೀರ್ತಿಶಾಲಿಗಳಾದರು. ಡಿ.ಎಲ್. ನರಸಿಂಹಾಚಾರ್ಯರು ಇವರ ಪೂರ್ತಿ ಹೆಸರು ದೊಡ್ಡ ಬೆಲೆ ಲಕ್ಷ್ಮೀನರಸಿಂಹಾಚಾರ್ ಎಂದು. ವ್ಯವಹಾರ ಸೌಲಭ್ಯಕ್ಕೆ ತಮ್ಮ ಕಾಲದವರಿಗೆ ಡಿ.ಎಲ್.ಎನ್ ಆಗಿದ್ದರು ಇವರು 27-10-1906ರಂದು ಚಿಕ್ಕನಾಯಕನ ಹಳ್ಳಿಯಲ್ಲಿ ತಮ್ಮ ತಾಯಿಯ ತಂದೆ ಅಣ್ಣಾಸ್ವಾಮಿ ಅಯ್ಯಂಗಾರ್ಯರ ಮನೆಯಲ್ಲಿ ಹುಟ್ಟಿದರು. ಇವರ ಬಾಲ್ಯದ ವಿದ್ಯಾಭ್ಯಾಸವನ್ನು ಸಬ್‍ರಿಜಿಸ್ಟ್ರರ್ ಕಛೇರಿಯಲ್ಲಿ ಗುಮಾಸ್ತೆಯಾಗಿದ್ದ ತಂದೆ ಶ್ಯಾಮಯ್ಯಂಗಾರ್ಯರ ಕಾಲ ಕಾಲದ ವರ್ಗಾವಣೆ ಕಾರಣವಾಗಿ ಪಾವಗಡ, ಮಧುಗಿರಿ,ಶಿರಾ, ತುಮಕೂರು ಹೀಗೆ ಬೇರೆ ಬೇರೆ ಕಡೆಗಳಲ್ಲಿ ನಡೆಯಿತು. ಬಳಿಕ ಉನ್ನತ ವ್ಯಾಸಂಗ ಬೆಂಗಳೂರು, ಮೈಸೂರುಗಳಲ್ಲಿ ಸಾಗಿತು. ಡಿ.ಎಲ್.ಎನ್. ಸುಸಂಸ್ಕೃತ ವಾತಾವರಣದಲ್ಲಿ ಹುಟ್ಟಿ ಬೆಳೆದವರು. ಅನಂತರ ಅವರ ವಿದ್ಯಾಸಾಧನೆಯಲ್ಲಿ ಇದರಿಂದ ತುಂಬ ಸಹಾಯವಾಯಿತು. ತಂದೆಯ ತಂದೆ ದೊಡ್ಡಬೆಲೆ ಕೃಷ್ಣಮಾಚಾರ್ಯರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು. ತಾಯಿಯ ತಂದೆ ಸರ್ಕಾರಿ ಉದ್ಯೋಗದಲ್ಲಿ ಇದ್ದರು. ಭಾರತದ ವಚನದಲ್ಲಿ ಹೆಸರಾದವರು. ಅಜ್ಜನ ಸೊಗಸಾದ ಭಾರತವಾಚನ ಮೊಮ್ಮಗನ ಸಾಹಿತ್ಯ ಅಭಿರುಚಿಗೆ ಅಂಕುರಾರ್ಪಣ ಮಾಡಿತು. ಹೀಗಾಗಿ ಡಿ.ಎಲ್.ಎನ್ 12ರ ಬಾಲ್ಯದಲ್ಲಿಯೇ ಜೈಮಿನಿ ಭಾರತ ಓದಿದರು. ಅದರ ಬಹುಭಾಗವನ್ನು ಬಾಯಿಪಾಠ ಮಾಡಿದರು. ಆಗಲೇ ರಾಜಶೇಖರ ವಿಳಾಸ ಮೊದಲಾದ ಪ್ರೌಢ ಶಾಲೆಯಲ್ಲಿ ಓದು ಸಾಗಿಸಿದಾಗ 4ನೇಯ ಪಾರಂಗೆ ಬರುವ ಹೊತ್ತಿಗೆ ಅವರ ಪದ್ಯಸಾರ 2 ಪುಟಗಳು , ಗಧಾಯುದ್ದ, ಛದೋಂಬಂಧಿ ಓದಿಕೊಂಡಿದ್ದರು. ಹಸ್ತಪ್ರತಿಗಳನ್ನು ಓದುವ ಕುತೂಹಲವು ಕಣ್ಣು ತೆರೆಯುತಿತ್ತು. ತಮಗೆ ತುಮಕೂರಿನ ನಲ್ಲಪ್ಪ ಎಂಬುವರ ಮನೆಯಲ್ಲಿ ದೊರೆತ ಮೈಸೂರು ಇತಿಹಾಸವಿದ್ದ ಹಸ್ತಪ್ರತಿಯನ್ನು ಓದಿ, ಅಗಲೇ ಅದನ್ನು ಇಂಗ್ಲೀಷ್‍ಗೆ ಭಾಷಾಂತರಿಸುವ ಸಾಹಸ ಮಾಡಿದರು. ಮುಂದೆ ಆ ಕಾಗದ ಹಸ್ತಪ್ರತಿಯೂ, ಭಾಷಾಂತರವೂ ಇತಿಹಾಸತಜ್ಞ ಎಂ ಎಚ್ ಕೃಷ್ಣರ ಕೈ ಸೇರಿತು.

ಶಿಕ್ಷಣ

ಬದಲಾಯಿಸಿ

ಡಿ.ಎಲ್. ಎನ್. ತುಮಕೂರು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಶಾಲೆ ಪತ್ರಿಕೆ ಸೂಲ್ ಪೊಕ್‍ನಲ್ಲಿ ಅವರ ಮೊದಲ ಕನ್ನಡ ಬರಹ ದೊಡ್ಡ ಮನುಷ್ಯನು ಯಾರು? ಪ್ರಕಟವಾಯಿತು. ಅಲ್ಲಿಯೇ ದ ಸ್ಟೋರಿ ಆಫ್ ಎ ಕಾಟನ್ ಸೀನ್ ಎಂಬ ಇಂಗ್ಲೀಷ್ ಬರಹವೂ ಬೆಳಕು ಕಂಡಿತು. ಖಾಸಗಿಯಾಗಿ ಅವರು ಸಂಸೃತವನ್ನು ಕಲಿಕೆ ರಘುವಂಶ ಚಂಪೂ ರಾಮಾಯಣಗಳನ್ನು ಓದಿಕೊಂಡರು. ಗೆಳೆಯರ ಮೂಲಕ ಇಂಗ್ಲೀಷ್ ಕಾದಂಬರಿ ರುಚಿಯು ಹತ್ತಿತು. ನಾಗವರ್ಮನ ಕಾವ್ಯಾಲೋಕದ ಪ್ರತಿಯೊಂದನ್ನು ಅವರ 1922ರಲ್ಲಿ ತಮ್ಮ ಹದಿನಾರರ ಹರೆಯದಲ್ಲಿಯೇ ತಮ್ಮಲ್ಲಿ ಸಂಗ್ರಹಿಸಿಟ್ಟುಕೊಂಡರು ನೋಡಿದರೆ ಮುಂದೆ ಅವರು ವಿಖ್ಯಾತ ಹಳಗನ್ನಡ ವಿದ್ವಾಂಸರಾಗಿ ಬೆಳೆಯಲು ಮೆಟ್ಟಿಲುಗಳು ಸಿದ್ದವಾಗುತ್ತದ್ದದು ವಿದಿತವಾತ್ತದೆ 1924ರಲ್ಲಿ ಅವರು ಎಂಟ್ರೆನ್ಸ ವಿದ್ಯಾರ್ಥಿಯಾಗಿದ್ದಾಗ ಮೊದಲ ಸಲ ಆಚಾರ್ಯ ಬಿ.ಎಂ.ಶ್ರೀ ಅವರ ಸ್ಟೊರಿ ಪ್ರೊಮ್ ಎನ್ಯಡ್ ಎಂಬ ಪುಸ್ತಕದ ಮೇಲಿನ ಉಪನ್ಯಾಸವನ್ನು ಕೇಳಿ ವಿಸ್ಮಯಗೊಂಡರು ಅವರತ್ತ ಆಕರ್ಷಿತರಾದರು.

ವೃತ್ತಿ ಜೀವನ

ಬದಲಾಯಿಸಿ

ಮುಂದೆ ಡಿ.ಎಲ್.ಎನ್. ಉನ್ನತ ವ್ಯಾಸಂಗಕ್ಕೆ ಬೆಂಗಳೂರು ಸೆಂಟ್ರಲ್ ಕಾಲೇಜು ಸೇರಿದರು 1927 ಹೆಚ್ಚು ಅಂಕಗಳಿಸಿಯೂ ವಿಜ್ಞಾನ ವಿಭಾಗದಲ್ಲಿ ಮುಂದುವರಿಯಲು ಸ್ಥಾನ ದೊರೆಯದೆ, ಭಾಷೆ, ಭೌತ ಮತ್ತು ರಸಾಯನ ಶಾಸ್ತ್ರಗಳನ್ನೊಳಗೊಂಡ ಆಟ್ರ್ಸ್ ವಿಭಾಗದಲ್ಲಿ ಸೇರಿ, 1927ರಲ್ಲಿ ತಮ್ಮ ಬಿಎ ಪರೀಕ್ಷೆ ಮುಗಿಸಿದರು. ಆಗ ಅವರಿಗೆ ಕನ್ನಡದಲ್ಲಿ ಹೆಚ್ಚು ಅಂಕಗಳನ್ನು ಪಡೆದುದರಿಂದ ಕೇಣಿ ಸಿದ್ದಪ್ಪನವರ ಚಿನ್ನದ ಪದಕ ಮತ್ತು ಭಾಸ್ಕರಮ್ಮಾಳ್ ಬಹುಮಾನ ದೊರೆತವು. ಬಿ.ಎ ಎರಡನೇ ವರ್ಷದಲ್ಲಿ ಇರುವಾಗ ಅವರು ಬರೆದ ಓದಿದ ಕರ್ನಾಟಕ ಸಾಹಿತ್ಯದಲ್ಲಿ ಪ್ರಕೃತಿ ವರ್ಣನೆ ಎಂಬ ಸುರ್ದೀಘವು ಪ್ರೌಡವು ಆದ ಪ್ರಬಂಧ ಅನಂತರದಲ್ಲಿ ಕನ್ನಡ ಸಾಹಿತ್ಯ ಪರಿಷತ್ವತ್ರಿಕೆಯಲ್ಲಿ (13-3-1928) ಪ್ರಕಟವಾಯಿತು. ಅವರಿಗೆ ನರಸಿಂಹಾಚಾರ್ಯರು ಬೆಳೆಸಿಕೊಡಿದ್ದ ವ್ಯಾಸಂಗ ಪ್ರಿಯತೆಯ, ಸಂಶೋದನಾಸಕ್ತಿ ಹಳೆಗನ್ನಡ ಭಾಷೆಯ ಸಾಹಿತ್ಯಗಳ ಪ್ರೌಡಿಮೆಗೆ ಈ ಬರಹ ಕನ್ನಡಿ ಹಿಡಿಯುತ್ತದೆ: ಅಲ್ಲದೆ ಅವರು ಮುಂದೆ ಸಾಗಲಿದ್ದ ದಾರಿಯನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ತರುಣರಿಗೆ ಸಹಜವಾಗಿರುವಂತೆ ಇವರಲ್ಲಿಯು ಪದ್ಯರಚನೆಯು ಆಕಾಂಕ್ಷೆ ಇಣುಕಿತ್ತು. ಒಂದೆರಡನ್ನು ಬರೆದಿದ್ದರು ಆದರೆ ಅವು ಗುರುಗಳ ಮನಸ್ಸಿಗೆ ಬರಲಿಲ್ಲ ಎಂದು ತೋರಿದಾಗ ಆ ಹವ್ಯಾಸವನ್ನು ಕೈ ಬಿಟ್ಟರು ಆದಕ್ಕಾಗಿ ಮುಂದೆ ಎಂದು ವಿಷಾದ ಪಡಿಸಲಿಲ್ಲ.

ಅದು ಹೊಸಗನ್ನಡ ನವೋದಯ ಎಳೆಬಿಸಿಲಿನ ಕಾಲ 1927ರಲ್ಲಿ ಮೈಸೂರು ಮಹರಾಜ ಕಾಲೇಜಿನಲ್ಲಿ ಶ್ರೀ ಅವರ ಪ್ರಯತ್ನದ ಫಲವಾಗಿ ಕನ್ನಡ ಎಂ.ಎ ಆರಂಭವಾಯಿತು. ಮೈಸೂರಿಗೆ ತಾಯಿಯೊಂದಿಗೆ ಆಕಸ್ಮಿಕವಾಗಿ ಬಂದಿದ್ದ ಡಿಎಲ್‍ಎನ್ ಅವರು ನೌಕರಿಗೆ ಸೇರುವ ತಮ್ಮ ಅಪೇಕ್ಷೆಯನ್ನು ಹಿಂದಿಕ್ಕಿ ಕನ್ನಡ ಎಂ.ಎ ತರಗತಿಗೆ ಸೇರಿಕೊಂಡರು. ಬಾಡಿಗೆ ಕೊಠಡಿಯ ವಾಸ, ಬಡ ವಿದ್ಯಾರ್ಥಿಗಳ ಸಲುವಾಗಿ ಇದ್ದ ವಿಶ್ವವಿದ್ಯಾನಿಲಯದ ಹೋಟಲು ಊಟ ಹೀಗೆ ಎರಡು ವರ್ಷದ ವ್ಯಾಸಂಗದ ಬಳಿಕ ಅವರು 1929ರಲ್ಲಿ ಪ್ರಥಮ ದರ್ಜೆ, ಪ್ರಥಮ ಸ್ಥಾನದೊಂದಿಗೆ ಕನ್ನಡ ಪದವಿಯಲ್ಲಿ ಉತ್ತೀರ್ಣರಾದರು. ಅಂದು ಅವರಿಗೆ ವಿದ್ಯಾಗುರುಗಳಾಗಿದ್ದರು. ಎಂದರೆ, ಬಿ,ಎಂ,ಶ್ರೀಕಂಠಯ್ಯ, ಟಿ,ಎಸ್ ವೆಂಕಣ್ಣಯ್ಯ, ಟಿ.ಎನ್ ಸುಬ್ಬರಾಯ ಶಾಸ್ತ್ರಿ, ಆರ್.ಅನಂತಕೃಷ್ಣಶರ್ಮ, ಸಿ.ಆರ್.ನರಸಿಂಹಶಾಸ್ತ್ರಿ ಮತ್ತು ಡಿ.ಶ್ರೀನಿವಾಸ್‍ಚಾರಯ್ಯ. ಎ.ಆರ್ ಕೃಷ್ಣಶಾಸ್ತ್ರಿಗಳು ಕೇಲವು ಕಾಲ ಅಧ್ಯಾಪಕರಾಗಿದ್ದರು. ಸಹಪಾಠಿಗಳಾಗಿದ್ದವರು ಎಂದರೆ ಕೆ.ವಿ.ಪುಟ್ಟಪ್ಪ(ಕುವೆಂಪು), ಡಿ.ಕೆ. ಬೀಮಸೇನರಾವ್, ಎನ್ ಅನಂತರಂಗಾಚಾರ್ಯ, ಕೆ ವೆಂಕಟರಾಮಪ್ಪ, ಎಂ ನಾಗೇಶಾಚಾರ್, ಬಿ.ನಂಜುಂಡಯ್ಯ ಬಿ.ಎಸ್.ವೆಂಕಟರಾಮಯ್ಯ ಮತ್ತು ಎಂ.ಎ.ಆಳಸಿಂಗಾಚಾರ್ಯ.ಡಿ.ಎಲ್.ಎನ್. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅದೇ ತಾನೆ ಆರಂಭವಾಗಿದ್ದ ಕನ್ನಡ ಎಂ.ಎ ಪದವಿಯ ಮೊದಲ ತಂಡದ ಒದವೀಧರರಲ್ಲಿ ಮೊದಲ ದರ್ಜೆ, ಮೊದಲ ಸ್ಥಾನವನ್ನು ಪಡೆದು ಉತ್ತೀರ್ಣರಾಗಿ ವಿಶ್ವವಿದ್ಯಾನಿಲಯದ ಮೊದಲನೇ ಉಪಕುಲಪತಿಗಳಾದ (ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲನೇ ಅಧ್ಯಕ್ಷರೂ ಆದರು) ಎಚ್.ವಿ.ನಜುಂಡಯ್ಯನವರ ಸ್ವರ್ಣಪದಕವನ್ನು ಗಳಿಸಿದುದು ಒಂದು ಯೋಗಾಯೋಗವೆನ್ನಬಹುದು. ಅದೇ ವರ್ಷವಷ್ಟೇ (1929) ವಿಶ್ವವಿದ್ಯಾನಿಲಯ ಕನ್ನಡಕ್ಕೆ ಪ್ರಪ್ರಥಮವಾಗಿ ಸಂಶೋಧನ ವೇತನದ ಅವಕಾಸವನ್ನು ಕಲ್ಪಿಸಿತ್ತು: ಅದನ್ನು ಪಡೆದುಕೊಂಡು ಕನ್ನಡದ ಮೊದಲ ಸಂಶೋಧನ ವಿಧ್ಯಾರ್ಥಿಯಾಗುವ ಭಾಗ್ಯವನ್ನೂ ಅವರು ತಮ್ಮದಾಗಿ ಮಾಡಿಕೊಂಡರು. ಹೀಗೆ ದೊರೆತ ಅವಕಾಶವನ್ನು ಬಳಸಿಕೊಂಡು, ಅವರು ‘ವೀರಶೈವ ಸಾಹಿತ್ಯದ ಆರಂಭಕಾಲ’ವನ್ನು ಕುರಿತು ಅಭ್ಯಾಸಮಾಡಿ, ನಿಯಮಿತ ಅವಧಿಗಿಂತ ಮುಂಚೆಯೇ ತಮ್ಮ ನಿಬಂಧವನ್ನು ವಿಶ್ವವಿದ್ಯಾಲಯಕ್ಕೆ ಒಪಿಸಿದರು. ಅದರ ಕೆಲವು ಭಾಗ ‘ಕೆಲವರು ವಚನಕಾರರು’ ಎಂಬ ಹೆಸರಿನಿಂದ ‘ಪ್ರಬುದ್ಧ ಕರ್ನಾಟಕ’ ಪತ್ರಿಕೆಯಲ್ಲಿ (19-1,4) ಈಚೆಗೆ ಪ್ರಕಟವಾಯಿತು. ಡಿ.ಎಲ್.ನರಸಿಂಹಾಚಾರ್ಯರು 1930 ರಲ್ಲಿ ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನಾ ಸಂಸ್ಥೆಯಲ್ಲಿ ರೆಸಿಡೆಂಟ್ ಕನ್ನಡ ಪಂಡಿತರಾಗಿ ಕೆಲಸಕ್ಕೆ ನೇಮಕವಾದಾಗಿನಂದಿನಿಂದ ಅವರ ವೃತ್ತಿ ಜೀವನ ಮೊದಲಾಯಿತು. ಆಗ ಅರವ ಸಂಬಳ 80 ರೂಪಾಯಿ. ಈ ಕೆಲಸದ ಜೊತೆಗೆ 25 ರೂ ಸಂಭಾವನೆ ಪಡೆದು ಮಹರಾಜ ಕಾಲೇಜಿನಲ್ಲಿ ಒಪ್ಪೋತ್ತಿನ ಉಪನ್ಯಾಸಕರಾಗಿಯೂ ಪಾಠ ಹೇಳುತ್ತಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೂ, ಈ ಅವಧಿಯಲ್ಲಿಯೂ ಅವರು ಪ್ರಚೀನ ಕನ್ನಡದ ಗ್ರಂಥಗಳನ್ನು, ಅವು ಮುದ್ರಿತವಿರಲೀ ಅಥವಾ ಹಸ್ತಪ್ರತಿಗಳ ರೂಪದಲ್ಲಿರಲಿ ಸಾಕಷ್ಟು ಮಟ್ಟಿಗೆ ವ್ಯಾಸಂಗ ಮಾಡಿದರು. ರೈಸ್ ಅವರ ಕಾಲದಿಂದ ಸಜ್ಜಾಗುತ್ತಾ ಬಂದಿದ್ದ ಪ್ರಾಚ್ಯ ವಿದ್ಯಾ ಸಂಶೋಧನಾ ಸಂಸ್ಥೆಯ ಗ್ರಂಥ ಭಂಢಾರದ ಪೂರ್ಣ ಪ್ರಯೋಜನವನ್ನು ಪಡೆದುಕೊಂಡರು. ಇಲ್ಲಿ ಪಚಿಡಿತರಾಗಿದ್ದ ಅವಧಿಯಲ್ಲಿ `ಸಕಲವೈದ್ಯ ಸಂಹಿತಸಾರಾರ್ಣವ’ ಎಂಬ ವೈದ್ಯ ಗ್ರಂಥವನ್ನೂ, `ಕುಮಾರವ್ಯಾಸ ಭಾರತ’ದ ಭೀಷ್ಮ ಪರ್ವವನ್ನೂ ಅಚ್ಚುಕಟ್ಟಾಗಿ ಸಂಪಾದಿಸಿದರು. 1932ರಲ್ಲಿ ಶ್ರೀಯವರು ಮಹಾರಾಜ ಕಾಲೇಜಿನಲ್ಲಿಯೇ ಪೂರ್ಣಕಾಲದ ಉಪನ್ಯಾಸಕರಾಗಿ ನೇಮಕಗೊಂಡರು. ಆಗ್ಗೆ ಅವರ ಸಂಬಳ ತಿಂಗಳಿಗೆ 120 ರೂ. ಇದಾದ 7 ವರ್ಷಗಳ ಮೇಲೆ, 1939ರಲ್ಲಿ ಮೈಸೂರಿನಲ್ಲಿಯೇ ಇಂಟರ್ ಮೀಡಿಯೆಟ್ ಕಾಲೆಜಿಗೆ ಈಗಿನ ಯುವರಾಜ ಕಾಲೆಜಿಗೆ ಕನ್ನಡ ಉಪನ್ಯಾಸಕರಾಗಿ ಬಂದರು. 1941ರಲ್ಲಿ ಮತ್ತೆ ಮಹರಾಜ ಕಾಲೇಜಿಗೆ ಬಂದು ಬಳಿಕ 1945ರಲ್ಲಿ ಉಪನ್ಯಾಸಕರೆನಿಸಿ ಬೆಂಗಳೂರು ಸೆಚಿಟ್ರಲ್ ಕಾಲ್ಭೆಜಿಗೆ ಹೊದರು ಮೂರು ವರ್ಷದ ಮೇಲೆ 1954ರ ವರೆಗೆ ಅಲ್ಲಿದ್ದು ಆ ವರ್ಷ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಕನ್ನಡ ನಿಘಂಟಿನ ಫ್ರಧಾನ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡು ಬೆಂಗಳೂರಿಗೆ ತೆರಳಿದರು. ಅಲ್ಲಿ ಎರಡು ವರ್ಷಗಳಿದ್ದು 1956ರಲ್ಲಿ ಪ್ರಾಧ್ಯಾಪಕ ವೃತ್ತಿಗೆ ಬಡ್ತಿ ಪಡೆದು ಅಲ್ಲಿಂದ ಮಹಾರಾಜ ಕಾಲೇಜಿಗೆ ಮರಳಿದವರು 31-3-1962ರಲ್ಲಿ ಅಧ್ಯಾಪಕ ವೃತ್ತಿಯಿಂದ ನಿವೃತ್ತರಾದರು. ಆದರೆ ತಮ್ಮ ವೃತ್ತಿಜೀವನದ ಉದ್ದಕ್ಕೆ ನಡೆಸಿಕೊಂಡು ಬಂದಿದ್ದ ಅಧ್ಯಯನ ಸಂಶೋದನೆ ಮತ್ತು ಲೇಖನ ಕಾರ್ಯಗಳಿಂದ ಅವರು ನಿವೃತ್ತರಾಗಲಿಲ್ಲ ಅವರು ಇನ್ನು ಚುರುಕು ಗೊಳಿಸಿದರು 1963ರಿಂದ ಸುಮಾರು 6 ವರ್ಷ ಕಾಲ ವಿಶ್ವವಿದ್ಯಾನಿಲಯ ಧನಸಹಾಯ ಅಯೋಗದ ಸಂಶೋಧಕ ವಿದ್ವಾಂಸರಾಗಿ ಕನ್ನಡ ಗ್ರಂಥ ಸಂಪಾಧನೆ 1964 ಹಾಗೂ ಪಂಪ ಭಾರತ ದೀಪಕ 1971 ಎಂಬ ಎರಡು ಶ್ರೇಷ್ಠಗ್ರಂಥಗಳನ್ನು ರಚಿಸಿದರು 1956 ತಮ್ಮ ಬದುಕಿನ ಕೊನೆಯವರೆಗೂ 7-5-1971 ಈ ಕಾರ್ಯವನ್ನು ಅವರು ನಿಷ್ಠೆ, ಶದ್ಧೆಯಿಂದ ನಿರ್ವಹಿಸಿದರು.

ವ್ಯಕ್ತಿತ್ವ

ಬದಲಾಯಿಸಿ

ಡಿ.ಎಲ್.ಎನ್. ನ ಪುರುಷಾಕೃತಿ ಹೇಳುವಂತೆ ನೋಟಕ್ಕೆ ಎತ್ತರದ ಆಳು ಆ ಎತ್ತರಕ್ಕೆ ತಕ್ಕಂತೆ ದೊಡ್ಡ ದೇಹ ಬಣ್ಣ ಎಣ್ಣೆಗೆಂಪು ತುಂಬಿಕೊಂಡ ಮೈ ಮಾಟವಾದ ಮೈಗೆ ಒಪ್ಪುವ ಮುಗುಳುನಗೆಯ ಮುದ್ದುಮುಖ ವಿನಯ ವಿದ್ವತ್ತುಳ ಭಾರಕ್ಕೂ ಎನ್ನುವಂತೆ ಬಿಲ್ಲಿನಂತೆ ಸ್ಡಲ್ಪ ಬಗ್ಗಿದ ಬೆನ್ನು ತೋರ ಹೆಜ್ಜೆಗಳ ಮಂದ ನಡಿಗೆ. ತಡೆದು ತಡೆದು ಆಡುತ್ತಿರುವಂತೆ ಕಂಡರು ದೃಡವಾಗಿ ಹೊರಡುವ ಸ್ವಷ್ಟೋಕ್ತಿ. ಮಾತಿನ ಮರ್ಮವನ್ನು ಕೇಳುವವರಿಗೆ ಮನವರಿಕೆ ಮಾಡಬೇಕು ಎಂದು ಹವಣಿಸಿದಾಗ ತಲೆತಗ್ಗಿ ಕಣ್ಣು ಆರೆ ಮುಚ್ಚಿ ಬುದ್ದಿ ಆಳಕ್ಕೆ ಇಳಿಯುತಿರುವಂತೆ ತೋರುವ ಒಳನೋಟ ಶೂನ್ಯದತ್ತ ಹಾಯುವ ತುಂಬು ಹಸ್ತದ ಬಲಗೈ ಬೀಸು ಏರಿಳಿಯುವ ಉಸಿರಿನ ಹಾಸು ಒಟ್ಟು ನೋಟದಲ್ಲಿ ಒಂದು ಭವ್ಯಾಕೃತಿ. ಕಿವಿಗೊಟ್ಟು ಆಲಿಸಬೆಕಾದ ಅಧಿಕಾರವಾಣಿವೇಷವೊ? ಮಾಟವಾಗಿ ತಿದ್ದಿದ ಕ್ರಾಪನ್ನು ಒಳಗಡಗಿಸಿದ ದಪ್ಪವಾದ ಜರಿಪೇಟ ಮುಚ್ಚುಕೋಟು ಸೊಗಸಾಗಿ ಉಟ್ಟ ಶುಭ್ರವೊ ನವುರೊ ಆದ ಕಚ್ಚೆಪಂಚೆ ಇದು 40-50 ಹರೆಯದಲ್ಲಿ ಡಿ.ಎಲ್.ಎನ್ ಅವರ ನಿಲುವು.

ಸಾಹಿತ್ಯ ಕೊಡುಗೆ

ಬದಲಾಯಿಸಿ

ಡಿ.ಎಲ್.ಆನ್,ನರಸಿಂಹಚಾರ್ಯರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 70-80 ಸಂಶೋಧನಾ ಮತ್ತು ಸಮಿಕ್ಷಾ ಲೇಖನಗಳನ್ನು ಬರೆದು ನಾಡಿನ ವಿದ್ವತ್ ಪತ್ರಿಕೆ ಗಳಲ್ಲಿ ಪ್ರಕಟಿಸಿದರು. ಇವುಗಳಲ್ಲಿ ಬಹುಪಾಲು ಕನ್ನಡ ಭಾಷೆ ಸಾಹಿತ್ಯಗಳ ಪ್ರಮುಖವೂ ಜಟಿಲವೂ ಆದ ಸಮಸ್ಯೆಗಳನ್ನೂ, ಸಂಗತಿಗಳನ್ನೂ ಕುರಿತಿವೆ ಅವರು ಬರೆದ ಸಮೀಕ್ಷಾ ಲೇಖನಗಳಲ್ಲಿ ಏನಾದರು ಹೋಸ ಸಂಗತಿಗಳು ಇದ್ದೆ ಇರುತ್ತಿದ್ದವು. ಬರವಣಿಗೆಯಲ್ಲಿ ಹಿತಮಿತ ಎಂಬುವುದು ಅರಿವಿಟ್ಟುಕೊಂಡ ಧ್ಯೇಯವಾಗಿದ್ದರಿಂದ ಒಮ್ಮೆ ಬರೆದಿರುವುದನ್ನು ಮತ್ತೆ ಬೇರೆ ರೂಪದಲ್ಲಿ, ಸಂಧರ್ಭದಲ್ಲಿ ಬರೆಯುದಾಗಲಿ ಆ ಕುರಿತು ಚರ್ಚಿಸುವುದಾಗಲಿ ಅವರಿಗೆ ಸೇರುತ್ತಿರಲಿಲ್ಲ ಒಂದು ಬರಹದಲ್ಲಿ ಒಂದಕಿಂತ ಹೆಚ್ಚು ಸಮಸ್ಯೆಗಳಿಗೆ ಪರಿಹಾರ ಕಾಣಿಸುವುದು ಅವರ ಸಾಮಾನ್ಯ ರೀತಿಯಾಗಿತ್ತು ಔಚಿತ್ಯವನ್ನು ಹಿಡಿದು ಮಾತುಗಳ ಬಳಕೆ ವಿಷಯಾಂತರವಾಗದಂತೆ ಉದ್ದೇಶಿತ ವಿಷಯದ ನಿರೂಪಣೆ ತರ್ಕ ಶುದ್ದವಾಗಿ ವಸ್ತುವಿನ ಪ್ರತಿಪಾದನೆ ಏರಿಳಿತಗಳಿಗೆ ಅವಕಾಶ ಕೊಡದೆ ಸಮಗತಿಯಲ್ಲಿ ಸಾಗುವ ಸಹಜಶೈಲಿ ,ರಾಗದ್ವೇಷ, ವಿರಹಿತವಾದ ಮನೋಧರ್ಮ ಮುಂತಾದವುಗಳಿಂದ ಅವರ ಬಹುಪಾಲು ಎಲ್ಲ ಬರಹಗಳ ಒಂದು ಕಲಾಕೃತಿಯಂತೆ ರೂಪತಳೆದು ವಾಚಕರ ಪರಿಶೀಲನೆಗೆ ಸಿದ್ದವಾಗುತ್ತಿದ್ದವು. ಅವರ ಬಿಡಿಬರಹಗಳಲ್ಲಿ ಸಿದ್ದರಾಮಚರಿತೆ, ಸುಕುಮಾರ ಚರಿತೆಗಳ ಪಿಠೀಕೆಗಳನ್ನು ಅಗ್ಗಳ ದೇವ ಪೋನ್ನನ ಭುವನೈಕ ರಾಮಾಭುದಯ ಜನ್ನನೂ, ವಾದಿರಾಜ ಮುಂತಾದ ಕವಿಕಾವ್ಯ ವಿಚಾರಗಳನ್ನೂ ಕುಮಾರವ್ಯಾಸನ ದೃಷ್ಟಿಯಲ್ಲಿ ಕರ್ಣ ಕಣ್ಮರೆಯಾದ ಕನ್ನಡ ಮಹರಾಷ್ಟ್ರದ ಮೂಲ ಮರಳಿ ಮಣ್ಣಿಗೆ ಈ ಕೆಲವು ವಿಮರ್ಷೆಗಳನ್ನು ಛಂದಸ್ಸು ಗ್ರಂಥ ಸಂಪಾದನೆಗಳನ್ನು ಕುರಿತ ಮಾನಸೋಲ್ಲಾಸದಲ್ಲಿ ಛಂದಸ್ಸು ,ಕುಮುದೇಂದು ರಾಮಾಯಣದ ಪರಿಷ್ಕರಣ ವಿಚಾರ, ಬಸವಣ್ಣನವರ ಕೆಲವು ವಚನಗಳ ಪಾಠ ಎಂಬುವುದು ಕನ್ನಡದಲ್ಲಿ ಶಬ್ದ ರಚನೆ ಹಾಗೂ ಪೊರಸು ಬಾದುಬೆ ಕಾಳಸೆ ಡಂಗಹಾಕು ಮದನಾವತಾರ ಬರಡಗಿ ಪಂಛಿಗಾಸು: ಗುಯ್ಯಲ್ ಮೇಕೆ ಈಜೆಲ್ ಇತ್ಯಾದಿ ಶಬ್ದಾರ್ಥ ವಿಚಾರದ ಭಾಷಾಶಾಸ್ತ್ರ ಸಂಬಂಧವಾದವನ್ನು ಲಕ್ಷ್ಮಿಶನ ಕಾಲ ಅಭೀನವ ಪಂಪ ಸಾಹಿತ್ಯ ಚರಿತ್ರೆಯ ಸ್ವರೂಪದ ಇತ್ಯಾದಿ ಸಂಕೀರ್ಣ ಬರಹವನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಪ್ರಾಚಿನ ಮತ್ತು ಮದ್ಯಕಾಲೀನ ಸಾಹಿತ್ಯ ವಿಶೇಷವಾಗಿ ಡಿ.ಲ್.ಎನ್ ಅವರ ವಿಹಾರ ಕ್ಷೇತ್ರವಾಗಿತ್ತು. ಆಕ್ಷೇತ್ರದ ಸಾಹಿತ್ಯ ಕೃತಿಗಳ ವಿಮರ್ಶೆ ಮತ್ತು ಚರಿತ್ರೆ ಛಂದಸ್ಸು ಗ್ರಂಥ ಸಂಪಾದನೆ ಶಬ್ದಾರ್ಥ ವಿಚಾರ ಇವು ಆವರಿಗೆ ಪ್ರಿಯವಾದ ವಿಚಾರಗಳಾಗಿದ್ದವು. ಅವರು ಸ್ವತಂತ್ರವಾಗಿಯೂ ಬೇರೆ ವಿದ್ವಾಂಸರೊಂದಿಗೆ ಸೇರಿ ಸಂಪಾದಿಸಿರುವ ಗ್ರಂಥಗಳೆಲ್ಲ ಬಹುಮಟ್ಟಿಗೆ ಶಾಸ್ತ್ರಿಯವಾದ ಗ್ರಂಥ ಸಂಪಾದನೆಯ ನಿಯಮಗಳಿಗೆ ಅನುಸಾರವಾಗಿ ಸಂಪಾದಿತವಾಗಿವೆಯಲ್ಲವೇ ವಿದ್ವತ್ ಪೂರ್ಣದ ಪೀಠಿಕೆ ಟಿಪ್ಪಣಿಗಳು ಶಬ್ದಕೋಶ ಮೋದಲಾದ ಸಹಾಯಕ ಸಾಮಾಗ್ರಿಗಳನ್ನು ಒಳಗೊಂಡಿದೆ. ಉಳಿದ ಗ್ರಂಥಗಳು ಕವಿಕಾವ್ಯ, ವಿಚಾರ, ಶಬ್ದಾರ್ಥವಿಚಾರ, ಗ್ರಂಥ ಸಂಪಾದನೆ ಹಾಗೂ ವ್ಯಾಖ್ಯಾನ ಕ್ಷೇತ್ರಗಳಿಗೆ ಸಂಬಂಧಿಸಿವೆ.

ಕೃತಿ ಮಾಲಿಕೆಗಳು

ಬದಲಾಯಿಸಿ
  1. ಸಕಲವೈದ್ಯ ಸಂಹಿತಾಸಾರಾರ್ಣವ 1932: ಕಳಲೆ ವೀರರಾಜೇಂದ್ರನ ಸುಮಾರು 1729 ವೈದ್ಯಗ್ರಂಥದ ಮೊದಲ ಭಾಗವಿದು. ವ್ಯಾದಿಗಳ ಸ್ವರೂಪ ಪರೀಕ್ಷೆ, ನಿದಾನಗಳನ್ನು ಕುರಿತಿದೆ ಪ್ರಸ್ತಾವನೆಯಲ್ಲಿ ಸಂಪಾದಕರು ಕವಿ ವಿಚಾರವನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ.
  2. ಕರ್ನಾಟಕ ಮಹಾಭಾರತ ಭೀಷ್ಮ ಪರ್ವ 1933: ಹೊಸ ರೀತಿಯಲ್ಲಿ ಶುದ್ದವಾಗಿ ಸಂಪಾದಿಸಿರುವ ಕುಮಾರ ವ್ಯಾಸಭಾರತದ ಯುದ್ದ ಚಂಪಕದಲ್ಲಿ ಮೊದಲನೆಯದು ಆಧಾರ ಪ್ರತಿಯ ಆಯ್ಕೆ ಪಾಠ ನಿರ್ಣಯ ಮುಂತಾದವುಗಳಲ್ಲಿ ಗ್ರಂಥ ಸಂಪಾದನೆಯ ತತ್ವಗಳನ್ನು ಲಕ್ಷಿಸಿದೆ. ಈ ಮೊದಲೇ ಡಿಎಲ್‍ಎನ್ ಅವರು ಟಿ.ಎಸ್. ವೆಂಕಣ್ಣಯ್ಯ ತೀ. ನಂ. ಶ್ರೀ ಯವರೊಂದಿಗೆ ಭಿಷ್ಮ ಪರ್ವದ ಒಂದು ಸಂಗ್ರಹ ಸಿದ್ಧಪಡಿಸಿದ್ದಾರೆ.
  3. ಪಂಪರಾಮಯಣ ಸಂಗ್ರಹ 1936: ನಾಗ ಚಂದ್ರನ 1100 ಪಂಪ ರಾಮಾಯಣದ ಸಂಗ್ರಹ ಸಾಮಾನ್ಯ ವಾಚಕರು ವಿದ್ಯಾರ್ಥಿಗಳಿಗಾಗಿ ಸಿದ್ದ ಮಾಡಿದ್ದು ಮೈಸೂರು ವಿವಿಯ ಅತ್ಯುತ್ತಮ ಕಾವ್ಯ ಸಂಗ್ರಹಗಳಲ್ಲಿ ಇದು ಒಂದು ಪೀಠಿಕೆಯಲ್ಲಿ ಕವಿಯ ಇತಿವೃತ್ತ ಜೈನ ರಾಮಾಯಾಣಗಳು, ವಿಮಲಸೂರಿ ,ನಾಗಚಂದ್ರರ ರಾವಣ ಪಾತ್ರದ ವಿಮರ್ಶೆ ಕಥಾಸರಣಿಯಲ್ಲಿ ಮಾರ್ಪಾಡುಗಳು ಈ ವಿಸ್ತಾರದ ಕಾವ್ಯ ವಿಮರ್ಶೆ ತುಂಬ ವಿರಳವಾಗಿತ್ತು.
  4. ವಡ್ಡರಾಧನೆ 1949 ಪ್ರಾಚಿನ ಕನ್ನಡ ಗಧ್ಯಗ್ರಂಥ ಇದನ್ನು ಗುರುತಿಸಿ ಸುಮಾರು 8 ಪ್ರತಿಗಳ ಆಧಾರದ ಮೇಲೆ ಶಾಸ್ತ್ರೀಯವಾಗಿ ಸಂಪಾದಿಸಿದ ಪ್ರಸಿದ್ದಿ ತಂದ ಕೀತಿ‌‌ ಡಿ,ಎಲ್,ಎನ್ ಅವರಿಗೆ ಸೇರಿದೆ. ಇಲ್ಲಿ ಉಪಸರ್ಗಗಳನ್ನು ಕುರಿತ 19 ಕಥೆಗಳು ಸರಳವೂ ರೋಚಕವೂ ಆದ ದೇಶಿಯ ಶೈಲಿಯಲ್ಲಿ ನಿರೂಪಿತವಾಗಿದ್ದೂ, ಕನ್ನಡ ಗದ್ಯ ಸಾಹಿತ್ಯದಲ್ಲಿ ಇದಕ್ಕೆ ವಿಶಿಷ್ಟ ಸ್ಥಾನವಿದೆ. ಸಂಪಾದಕರು 1970 ಪರಿಷ್ಕರಣದಲ್ಲಿ ಕವಿಕೃತಿ ಸಂಬಧವಾದ ವಿಸ್ತಾರವಾದ ಪೀಠಿಕೆ ಬರೆದಿದ್ದಾರೆ. ಈಚೆಗೆ ಈ ಕೃತಿಯ ಕರ್ತ ಆಕರ ವಸ್ತು ಭಾಷೆ ಶೈಲಿಗಳ ವಿಷಯದಲ್ಲಿ ಹೆಚ್ಚಿನ ಶೋಧನೆ ನಡೆಯುತ್ತಿದೆ.
  5. ಸಿದ್ದರಾಮ ಚರಿತ್ರೆಯ ಸಂಗ್ರಹ 1951: ವೆಂಕಣ್ಣಯ್ಯನವರೊಂದಿಗೆ ಸೇರಿ ಸಂಪಾದಿಸಿದ ರಾಘವಾಂಕನ ಸಿದ್ದರಾಮ ಚಾರಿತ್ರೆಯ ಸಂಗ್ರಹ. ವಿಸ್ತಾರವಾದ ಪೀಠಿಕೆಯಲ್ಲಿ ಕವಿಯ ಇತಿವೃತ್ತ, ಸಿದ್ದರಾಮನ ಐತಿಹಾಸಿಕ........ ಕತೆ ಮತ್ತು ಮೂರ್ತಿ ಸ್ವರೂಪ, ಕಥಾಸಾರ, ಕಥೆಯ ಮೂಲ ಮತ್ತು ಬೆಳವಣಿಗೆ, ಕೃತಿ ವಿಮರ್ಷೆ, ಸಿದ್ಧರಾಮನ ಲಿಂಗವಂತಿಕೆಯ ಸಮಸ್ಯೆ ಇವೆಲ್ಲ ನಿರೂಪಿತವಾಗಿವೆ. ಉಪಯುಕ್ತ ಶಬ್ದಕೋಶ, ಟಿಪ್ಪಣಿಗಳಿವೆ.
  6. `ಶಬ್ದಮಣಿ ದರ್ಪಣಂ' ( 1959 ): ಕೇಶೀರಾಜನ ( ಸುಮಾರು 1260 ) ಈ ಖ್ಯಾತ ಹಳೆಗನ್ನಡ ವ್ಯಾಕರಣವನ್ನು ಎರಡು ಓಲೆಯ, ಎರಡು ಮುದ್ರಿತ ಪ್ರತಿಗಳ ಆಧಾರದ ಮೇಲೆ ಹೊಸದಾಗಿ ಸಂಪಾದಿಸಲಾಗಿದೆ. ಈಗ ಸಿದ್ಧವಾಗಿರುವ ಪರಿಷ್ಕರಣಗಳಲ್ಲೆಲ್ಲ ಇದೇ ಹೆಚ್ಚು ಪ್ರಮಾಣಭೂತವಾದದ್ದು. ಇದರ ಪ್ರಸ್ತಾವನೆಯಲ್ಲಿ ಸೂತ್ರ, ವೃತ್ತಿ ಮತ್ತು ಪ್ರಯೋಗಗಳಿಗೆ ಸಂಬಂಧಿಸಿದ ಪಾಠಸಮಸ್ಯೆಗಳನ್ನು, ಮೂಲ ಪಾಠ ನಿರ್ಣಯ, ಪ್ರಯೋಗಗಳ ಆಕರ, ಕೇಶೀರಾಜನ ವ್ಯಕ್ತಿತ್ವ ವನ್ನು ವಿವೇಚಿಸಿದೆ. ಈಚೆಗೆ ಈ ಪರಿಷ್ಕರಣ ಹಲವು ಮುದ್ರಣಗಳನ್ನು ಕಂಡಿದೆ.
  7. ` ಸಿದ್ಧರಾಮ ಚಾರಿತ್ರ್ಯ'(1941): ರಾಘವಾಂಕನ ಕೃತಿಯನ್ನು ಡಿ. ಎಲ್. ಎನ್. ಅವರು ವೆಂಕಣ್ನಯ್ಯ ಅವರೊಂದಿಗೆ ಸೇರಿ ಸಂಪಾದಿಸಿದ್ದಾರೆ. ನಾಲ್ಕು ಪ್ರತಿಗಳ ಸಹಾಯದಿಂದ ಶ್ರಮ ಸಾಧ್ಯವಾದ ಈ ಪರಿಷ್ಕರಣ ಸಿದ್ಧವಾಗಿದ್ದು, ಹೆಚ್ಚಿನ ಜವಾಬ್ದಾರಿಯನ್ನು ಬಿ.ಎಲ್.ಎನ್ ಅವರು ನಿರ್ವಹಿಸಿದ್ದಾರೆ. ಕವಿಯ ಇತಿವೃತ್ತ ಮುಂತಾಗಿ ಅನೇಕ ವಿಷಯಗಳನ್ನು ತಳಸ್ಪರ್ಷಿಯಾಗಿ ವಿವೇಚಿಸಿ, ಪೀಠಿಕೆಯನ್ನು ಡಿ. ಎಲ್. ಎನ್ ಅವರೇ ಬರೆದಿದ್ದಾರೆ.
  8. `ಸುಕುಮಾರ ಚರಿತಂ'(1954): ಶಾಂತಿನಾಥ ಕವಿಯ(ಸು. 1060) ಈ ಕೃತಿಯನ್ನು ಡಿ. ಎಲ್. ಎನ್, ತ.ರ.ಶ್ಯಾಮರಾವ್ ಅವರೊಂದಿಗೆ ಸೇರಿ ಸಂಪಾದಿಸಿದ್ದಾರೆ. 2. ಹಸ್ತ ಪ್ರತಿಗಳನ್ನಾಧರಿಸಿ ಸಿದ್ಧವಾಗಿರುವ ಈ ಕೃತಿ ಅಸಮರ್ಪಕ ಹಸ್ತಪ್ರತಿಳ ದೆಸೆಯಿಂದಾಗಿ ತಕ್ಕಮಟ್ಟಿಗೆ ಮಾತ್ರ ಸಂಪಾದಿತವಾಗುವುದು ಸಾಧ್ಯವಾಗಿದೆ. ಕವಿಯ ಇತಿವೃತ್ತ, ಕಥಾಸಾರ, ಕಥೆಯ ಮೂಲ ಹಾಗೂ `ವಡ್ಢಾರಾಧನೆ'ಯೊಂದಿಗೆ. ತುಲನೆ, ಕೃತಿ ವಿಮರ್ಷೆ, ಕನ್ನಡದ ಇತರ ಸುಕುಮಾರ ಚರಿತೆಗಳು, ಭಾಷೆ-ಶೈಲಿ-ಚಂದಸ್ಸುಗಳು, ಗ್ರಂಥಪಾಠ ಇವು ಪೀಠಿಕೆಯಲ್ಲಿ ಯಥಾ ಕ್ರಮದಲ್ಲಿ ನಿರೂಪಿತವಾಗಿದೆ. ಕವಿಕೃತಿ ಪರಿಚಯಕ್ಕೆ ನೆರವಗುವ ಪರಿಶಿಷ್ಟ ಶಬ್ಧಕೋಶಗಳೂ ಸೇರಿವೆ.
  9. `ಗೋವಿನ ಹಾಡು'(1960): ಮೈಸೂರು ಸಂಸ್ಥಾನದ ವಯಸ್ಕರ ಶಿಕ್ಷಣ ಸಮಿತಿಗಾಗಿ ಸಿದ್ಧಮಾಡದ ಈ ಜನಪ್ರಿಯ ಕಥನ ಗೀತೆಯನ್ನು ಪ್ರಚಲಿತ ಪೇಟೆ ಮುದ್ರಣದ ಜೊತೆಗೆ 2 ಕೈಬರಹದ ಪ್ರತಿಗಳ ಸಹಾಯದಿಂದ ಮೊದಲ ಸಲ ಶುದ್ಧವಾಗಿ ಸಂಪಾದಿಸಿ ಪ್ರಕಟಿಸಿದೆ.
  10. `ಹಂಪೆಯ ಹರಿಹರ'(1939): ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸ ಮಾಲೆಯ ಕಿರುಹೊತ್ತಿಗೆ, ಹರಿಹರನ ಜೀವನ, ವ್ಯಕ್ತಿತ್ವ ಕೃತಿಗಳನ್ನು ಪರಿಚಯಿಸುವ ಸೊಗಸಾದ ಸರಳ ನಿರೂಪಣೆ ಇಲ್ಲಿಯದು.
  11. `ಶಬ್ಧವಿಹಾರ' (1956): ಪ್ರಾಚೀನ ಕನ್ನಡ ಕಾವ್ಯಗಳಲ್ಲಿಯ ಕೆಲವು ಸಮಸ್ಯಾತ್ಮಕ ಶಬ್ಧಗಳ ಅರ್ಥವನ್ನೂ ನಿಷ್ಪತ್ತಿಗಳನ್ನೂ ಚರ್ಚಿಸಿ ನಿರ್ಣಯಿಸುವ ವಿದ್ವತ್ಪೂರ್ಣ ಲೇಖನ ಸಂಗ್ರಹ. ಈ ಬಗೆಯ ಪುಸ್ತಕಗಳಲ್ಲಿ ಇದೇ ಮೊದಲನೆಯದೆಂದು ತೋರುತ್ತದೆ.
  12. `ಕನ್ನಡ ಗ್ರಂಥ ಸಂಪಾದನೆ'(1964): ಪಾಶ್ಚಾತ್ಯ ವಿದ್ವಾಂಸರು ವ್ಯವಸ್ಥೆಗೊಳಿಸಿರುವ ಗ್ರಂಥಸಂಪಾದನೆಯ ತತ್ವವನ್ನು ಕನ್ನಡದ ಪ್ರಾಚೀನ ಮಧ್ಯಕಾಲೀನ ಕೃತಿಗಳಿಗೆ ಅನ್ವಯಿಸಿ, ಗ್ರಂಥಗಳನ್ನು ಸಂಪಾದಿಸುವ ರೀತಿ ನೀತಿಗಳನ್ನು ಸವಿಸ್ಥಾರವಾಗಿ, ಸೋದಾಹರಣವಾಗಿ ವಿವರಿಸುವ ಗ್ರಂಥ. ಕನ್ನಡದಲ್ಲಿ ಇದು ಮೊದಲ ಪ್ರಯತ್ನ; ಇತರ ಆಧುನಿಕ ಭಾರತೀಯ ಭಾಷೆಗಳಲ್ಲಿಯೂ ಇಂತಹ ಗ್ರಂಥ ರಚಿತವಾಗಿಲ್ಲ ಎನ್ನುತ್ತಾರೆ. ಡಿ.ಎಲ್.ಎನ್. ಅವರಿಗೆ ಖ್ಯಾತಿ ತಂದ ಈ ರಚನೆ ಅವರ ವಿದ್ವತ್ತಿಗೂ ಕೈಗನ್ನಡಿಯಾಗಿದೆ. ಶಾಸ್ತ್ರ ವಿಷಯವಾಗಿ ಗ್ರಂಥಸಂಪಾದನೆಯನ್ನು ಅಭ್ಯಾಸ ಮಾಡಬೇಕೆನ್ನುವವರಿಗೆ, ಈ ಕಾಲದ ಕನ್ನಡ ಗ್ರಂಥ ಸಂಪಾದದಕರಿಗೆ ಈ ಗ್ರಂಥ ಒಂದು ಕೈಪಿಡಿ.
  13. `ಪಂಪಭಾರತ ದೀಪಿಕೆ'(1971): ಪಂಪ ಕವಿಯ( 941) `ವಿಕ್ರಮಾರ್ಜುನ ವಿಜಯ'ಕ್ಕೆ ಮೊದಲ ಬಾರಿಗೆ ಬರೆಯಲಾದ ಸವಿಸ್ಥರ ವ್ಯಾಖ್ಯಾನ ಗ್ರಂಥ. ಈ ವ್ಯಾಖ್ಯಾನ ಪ್ರತಿಪದಾರ್ಥ ಸಹಿತವಾಗಿ ವ್ಯಾಕರಣ, ಛಂದಸ್ಸು, ಪೂರ್ವಕಥಾ ವೃತ್ತಾಂತ, ಶಬ್ಧಾರ್ಥ ನಿರ್ಣಯ, ಆಕರ ಗ್ರಂಥಗಳು ಮುಂತಾದ ಅನೇಕ ವಿಷಯಗಳನ್ನು ಒಳಗೊಂಡು ನಿರೂಪಿತವಾಗಿವೆ. ಅಲ್ಲದೆ ಅಲ್ಲಲ್ಲಿ ಗ್ರಂಥ ಪಾಠದ ಸಯುಕ್ತಿಕ ಪರಿಷ್ಕರಣ ಕಾರ್ಯವೂ ನಡೆದಿದೆ. ಡಿ. ಎಲ್. ಎನ್. ಅವರ ಭಾಷಾ ಪಾಂಡಿತ್ಯವನ್ನು ನಿದರ್ಶಿಸುವ ಕೃತಿಯಿದು.
  14. 'ಪೀಠಿಕೆಗಳು ಮತ್ತು ಲೇಖನಗಳು '(1971): ಡಿ. ಎಲ್. ಎನ್. ಅವರ ಸಂಪಾದಿತ ಗ್ರಂಥಗಳ ಪೀಠಿಕೆಗಳು, `ಹಂಪೆಯ ಹರಿಹರ', `ಶಬ್ಧವಿಹಾರ'ಗಳಂತಹ ಕಿರುಹೊತ್ತಗೆಗಳ ಬರಹಗಳು, ಮುನ್ನುಡಿಗಳು, ಗ್ರಂಥ ವಿಮರ್ಷೆಗಳು, ಸಂಶೋಧನಾ ಮತ್ತು ಸಾಮಾನ್ಯ ಲೇಖನಗಳು ಇವೆಲ್ಲಾ ಇಲ್ಲಿ ಒಗ್ಗೂಡಿವೆ. ಪೀಠಿಕೆಗಳು, ಕವಿಕಾವ್ಯ ವಿಚಾರ, ವಿಮರ್ಷೆ, ಛಂದಸ್ಸು, ಗ್ರಂಥ ಸಂಪಾದನೆ, ಕನ್ನಡ ನಿರುಕ್ತ, ಸಂಕೀರ್ಣ ಎಂಬ ವಿಭಾಗಗಳಲ್ಲಿ ಹೀಗೆ ಸೇರಿರುವ ಒಟ್ಟು ಬರಹಗಳ ಸಂಖ್ಯೆ 91, ಪುಟಗಳು 1100, ಕನ್ನಡ ಭಾಷೆ ಸಾಹಿತ್ಯಗಳ ಪ್ರೌಢ ವಿದ್ಯಾರ್ಥಿಗಳಿಗೆ, ವಿದ್ವಾಂಸರಿಗೆ, ಸಮಾನವಾಗಿ ಬೇಕಾಗಿರುವ ಆಕರವಿದು. ಅಲ್ಲದೆ ಸಂಶೋಧಕರಿಗೆ ಮಾದರಿಯಾಗುವ ಒಚಿದು ಮಾರ್ಗದರ್ಶಕ ಗ್ರಂಥಗಳಾಗಿವೆ.

ಆಯ್ದ ಲೇಖನಗಳು

ಬದಲಾಯಿಸಿ

ಡಿ. ಎಲ್ ನರಸಿಂಹಾಚಾರ್ಯರು ಸಮರ್ಥ ಹಾಗೂ ಶ್ರದ್ಧಾವಂತ ಅಧ್ಯಾಪಕರು. ಶ್ರೇಷ್ಟ ದರ್ಜೆಯ ಹಾಗೂ ಬಹುಮುಖ ವ್ಯಾಸಂಗದ ವಿದ್ವಾಂಸರು. ಅವರು ಸುಮಾರು 40 ವರ್ಷಗಳಿಗೂ ಹೆಚ್ಚುಕಾಲ ಕನ್ನಡ ಭಾಷೆ ಸಾಹಿತ್ಯಗಳ ಅಭಿವೃದ್ಧಿಗೆ ತಮ್ಮ ಶಕ್ತಿ ಸರ್ವಸ್ವವನ್ನೂ ವಿನಿಯೋಗಿಸಿದರು. ಅದನ್ನು ತಮ್ಮ ಬದುಕಿನ ದೀಕ್ಷೆಯನ್ನಾಗಿ ಅರ್ಪಿಸಿ, ಮೊದಲು ಅವುಗಳಲ್ಲಿ ತಾವು ಪ್ರೌಡಿಮೆಯನ್ನು ಗಳಿಸಿಕೊಂದರು. ಆ ಗಳಿಕೆಯ ಫಲವನ್ನು ಚಿಂತನ, ವಿಚಾರ ವಿಮರ್ಷೆ, ಸಿದ್ದಾಂತಗಳ ರೂಪದಲ್ಲಿ ಹಲವಾರು ವರ್ಷಗಳವರೆಗೆ ವಿದ್ಯಾರ್ಥಿಗಳಿಗೆ ಅಧ್ಯಾಪನ ಮೂಲಕ, ವಾಚಕರಿಗೆ ಬರಹಗಳ ಮೂಲಕ ಶ್ರೋತೃಗಳಿಗೆ ಉಪನ್ಯಾಸಗಳ ಮೂಲಕ ಹಂಚಿದರು. ಪೌರ್ವಾತ್ಯ ಹಾಗೂ ಪಾಶ್ಚಾತ್ಯ ಸಾಹಿತ್ಯಗಳ ಅಧ್ಯಯನದಿಂದ ಪಕ್ವಗೊಂಡ ಅವರ ಸಾಹಿತ್ಯ ಜ್ಞಾನ ತರ್ಕ ಶುದ್ಧವಾದ ವಿಮರ್ಶೆಯ ರೀತಿ ಸಮಯಕ್ಕೆ ಒದಗುವ ಹಾಗೆ ಸಂಗತಿ ಸಂದರ್ಭಗಳನ್ನೂ ಬಳಕೆಗೆ ನೀಡುತ್ತಿದ್ದ ಜ್ಞಾಪಕಶಕ್ತಿ ಇವೆಲ್ಲಾ ವಿದ್ವಾಂಸರ ಶ್ರೇಣಿಯಲ್ಲಿ ಅವರನ್ನು ಎತ್ತರದಲ್ಲಿ ನಿಲ್ಲುವಂತೆ ಮಾಡಿದ್ದವು ಭಾಷೆ ವ್ಯಾಕರಣ ನಿಘಂಟು ಗ್ರಂಥಸಂಪಾದನೆ ಛಂದಸ್ಸು ಸಾಹಿತ್ಯ ಚರಿತ್ರೆ ಪ್ರಾಚೀನ ಸಾಹಿತ್ಯ ಕೃತಿ ವಿಮರ್ಶೆ ಇವನ್ನು ತಮ್ಮ ಕಾರ್ಯಕ್ಷೇತ್ರದ ಪ್ರಮುಖ ವಿಷಯಗಳನ್ನಾಗಿ ಹಿಡಿದು ಆ ಒಂದರಲ್ಲಿಯೂ ಗಾಢ ಅವಿರಾಮಶೀಲ ಸಂಶೋಧನಗಳ ಮೂಲಕ ಕನ್ನಡ ವಿದ್ವತ್ತಿನ ಸೀಮೆಯನ್ನು ವಿಸ್ತರಿಸಿದರು ಪರಿಷ್ಕರಿಸಿದರು ಕನ್ನಡ ಭಾಷೆಸಾಹಿತ್ಯಗಳ ಮೂಲಾಧಾರಗಳನ್ನು ಕಟ್ಟಿದರು ಗಟ್ಟಿ ಮಾಡಿದರು. ಅವರ ಬೆಲೆಯುಳ್ಳ ಕೊಡುಗೆಗಳು ನಿರಂತರ ಅಧ್ಯಾಪನಗಳು ವ್ಶೆಜ್ಞಾನಿಕ ದೃಷ್ಟಿಯ ಅನುಸಂಧಾನ ಸಂಶೋಧನ ಕೌಶಲಗಳ ಫಲವಾಗಿ ಮೂಡಿಬಂದವಾದ್ದರಿಂದ ತಾಳಿ ಬಾಳತಕ್ಕವಾಗಿವೆ ಜ್ಞಾನೋಪಾಸನೆಯೇ ಜೀವಿತ ಸಾರ್ಥಕ್ಯವಾದ್ದರಿಂದ ಭಾಷೋಜ್ಜೀವನವೇ ಜೀವನಧ್ಯೇಯವಾದ್ದರಿಂದ ಅವರ ನ್ಮಡಿಯಲ್ಲಿ ಕೃತಿಯಲ್ಲಿ ಶೂದ್ಧ ಅಭಿರುಚಿ ಪ್ರತಿಭಾನ್ವಿತ ಬುದ್ದಿವೈಶದ್ಯ ಗಾಢ ಸಂಶೋಧನಾ ಸಾಮರ್ಥ್ಯ ನಷ್ಕಷ್ಟ ವಿಚಾರಧಾರೆ ಪ್ರಖರ ವಿಶ್ಲೇಷಕ ಪಟ್ಟುತ್ವ ವಸ್ತುನಿಷ್ಠೆಯ ಛಲ ಚಿರಕಾಲಿಕವಾದ ಸತ್ವ ಈ ಗುಣಗಳೆಲ್ಲಾ ಮಿಗಿಲಾಗಿ ಪ್ರತಿಫಲಿಸಿ ತೋರಿತ್ತಿರುವುದು. ಡಿ.ಎಲ್.ಎನ್ ಎಂದರೆ ಪಾಂಡಿತ್ಯ. ಡಿ.ಎಲ್.ಎನ್ ಕನ್ನಡ ಬಲ್ಲವರೆಲ್ಲೆಲ್ಲಾ ಈಗ ರೂಢಿಯ ಭಾವನೆಯಾಗಿದೆ ಎಂಬುದಾಗಿ ಅವರ ಆಪ್ತಮಿತ್ರರೂ ವಿಖ್ಯಾತ ಕನ್ನಡ ವಿದ್ವಾಂಸರು ಆಗಿದ್ದ ಪ್ರೊ. ತೀ.ನಂ.ಶ್ರೀಕಂಠಯ್ಯನವರು ಈಗ ಸುಮಾರು 25 ವರ್ಷಗಳ ಹಿಂದೆ ಆಡಿದ ಪ್ರಶಸ್ತಿಯ ಮಾತಿನಲ್ಲಿ ಯಾವ ಅತಿಶಯೋಕ್ತಿ ಇಲ್ಲವೆಂದೂ ಅದು ನ್ಯಾಯವಾಗಿಯೇ ಸಂದ ಮೆಚ್ಚು ಮಾತೆಂದೂ ಆ ಕಾಲವನ್ನೂ ಆ ಇಬ್ಬರು ಘನ ವಿದ್ವಾಂಸರನ್ನೂ ಬಲ್ಲವರೆಲ್ಲಾ ಸುಲಭವಾಗ ತಿಳಿಯಬಲ್ಲರು.

ಪುರಸ್ಕಾರ

ಬದಲಾಯಿಸಿ

ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ಯರು ೧೯೭೧ ಮೇ ೭ರಂದು ನಿಧನರಾದರು.