ಸಿದ್ದಗಂಗಾ
ಶ್ರೀ ಸಿದ್ಧಗಂಗಾ ಕ್ಷೇತ್ರವು ತುಮಕೂರು ನಗರದಿಂದ ಸುಮಾರು ಆರು ಕಿ.ಮೀ ದೂರದಲ್ಲಿದೆ. ಊಟ, ವಿದ್ಯೆ ಮತ್ತು ವಸತಿಯ ಉಚಿತ ವ್ಯವಸ್ಥೆ ಇದ್ದು, ಇದೇ ಕಾರಣದಿಂದ ತ್ರಿವಿಧ ದಾಸೋಹದ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ. ಸುಮಾರು ಹತ್ತು ಸಾವಿರ ಮಕ್ಕಳಿಗೆ ತ್ರಿವಿಧ ದಾಸೋಹ ಕಾರ್ಯ ನಡೆಯುತ್ತಿದೆ.ಕರ್ನಾಟಕ ರತ್ನ ಪ್ರಶಸ್ತಿಯನ್ನು ಡಾ||ಶ್ರೀ ಶಿವಕುಮಾರ ಸ್ವಾಮಿಗಳುಗಳವರಿಗೆ ನೀಡಲಾಗಿದೆ.
ಶ್ರೀ ಕ್ಷೇತ್ರದ ಮಠಾಧಿಪತಿಗಳು ಡಾ|ಶ್ರೀ ಶಿವಕುಮಾರ ಸ್ವಾಮಿಗಳು. ಕಿರಿಯ ಸ್ವಾಮೀಜಿ ಶ್ರೀ ಸಿದ್ಧಲಿಂಗಸ್ವಾಮಿಗಳು.
ಕ್ಷೇತ್ರದ ಹಿಂದಿನ ಮಠಾಧಿಪತಿಗಳು: ಶ್ರೀ ಉದ್ದಾನ ಶಿವಯೋಗಿಗಳು. ಇವರು ಎಡೆಯೂರು ಸಿದ್ಧಲಿಂಗೇಶ್ವರರ ಶಿಷ್ಯಪರಂಪರೆಗೆ ಸೇರಿದವರಾಗಿದ್ದಾರೆ.
ಕ್ಷೇತ್ರದ ಪ್ರಮುಖ ದೇವಸ್ಥಾನಗಳು: ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನ, ಶ್ರೀ ಸಿದ್ಧಗಂಗಾ ಮಾತೆ ದೇವಸ್ಥಾನ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಬದಲಾಯಿಸಿ೧೯೬೩ರಲ್ಲಿ ೪೪ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಈ ಕ್ಷೇತ್ರದಲ್ಲಿ ನಡೆದಿತ್ತು. ಖ್ಯಾತ ಸಾಹಿತಿ ರಂ.ಶ್ರೀ.ಮುಗಳಿಯವರು ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮಿಗಳರವರ ಹುಟ್ಟಿದ ಸ್ಥಳ ವೀರಾಪುರವು ಈಗಿನ ರಾಮನಗರ ಜಿಲ್ಲೆಯಲ್ಲಿದೆ.