ಮಂಡ್ಯ

ಭಾರತದಲ್ಲಿನ ಕರ್ನಾಟಕದ ಒಂದು ಜಿಲ್ಲೆ

ಮಂಡ್ಯ ಕರ್ನಾಟಕದ ಒಂದು ಜಿಲ್ಲೆ - ಮಂಡ್ಯ ಜಿಲ್ಲೆಯ ಜಿಲ್ಲಾ ಕೇಂದ್ರಸ್ಥಳ ಮಂಡ್ಯ ನಗರ. ಮಂಡ್ಯವು ಮೈಸೂರು ಮತ್ತು ಬೆಂಗಳೂರು ನಗರಗಳ ನಡುವೆ ಇದೆ. ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ.

ಮಂಡ್ಯ

ಮಂಡ್ಯ
city
ಸರ್ಕಾರ
 • Deputy Commissionerಡಾ. ಗೋಪಾಲಕೃಷ್ಣ (ಭಾ. ಆ. ಸೇ.)
ಜನಸಂಖ್ಯೆ
 (೨೦೦೧)
 • ಒಟ್ಟು೧೩೧೨೧೧
ಜಾಲತಾಣwww.mandya.nic.in/

ಮಂಡ್ಯ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೮೫೦ ಚ. ಕಿಮೀ. ೨೦೧೧ ರ ಜನಗಣತಿಯಂತೆ ಇಲ್ಲಿನ ಮಂದಿಎಣಿಕೆ ೧೭,೬೧,೭೧೮(೮೮೭೩೦೭ ಗಂಡಸರು, ೮೭೪೪೧೧ ಹೆಂಗಸರು). ಇಲ್ಲಿಯ ಮಂದಿ ಪ್ರಮುಖ ಕಸುಬು ಆರಂಬ. ಜಿಲ್ಲೆಯ ಪ್ರಮುಖ ಬೆಳೆ ಕಬ್ಬು ಹಾಗೂ ಭತ್ತ. ಮಂಡ್ಯ ನಗರವು ೭೬° ೧೯' ಮತ್ತು ೭೭° ೨೦' ಪೂರ್ವ ರೇಖಾಂಶ ಮತ್ತು ೧೨° ೧೩' ಮತ್ತು ೧೩° ೦೪' ಉತ್ತರ ಅಕ್ಷಾಂಶಗಳಲ್ಲಿ ವಿಸ್ತರಿಸಿದೆ.

ಜಿಲ್ಲೆಯ ಸಂಕ್ಷಿಪ್ತ ಪರಿಚಯ ಸಂಪಾದಿಸಿ

 
ಜಿಲ್ಲಾಧಿಕಾರಿ ಕಾರ್ಯಾಲಯ, ಮಂಡ್ಯ

ಮಂಡ್ಯ ಜಿಲ್ಲೆಯು 1939ರಲ್ಲಿ ರೂಪುಗೊಂಡಿತು. ಪ್ರಸ್ತುತ ಉತ್ತರಕ್ಕೆ ಹಾಸನ ಮತ್ತು ತುಮಕೂರು ಜಿಲ್ಲೆಗಳಿಂದ, ಪೂರ್ವಕ್ಕೆ ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳಿಂದ ಮತ್ತು ಪಶ್ಚಿಮದಲ್ಲಿ ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ ಸುತ್ತುವರಿದಿದೆ. ಮಂಡ್ಯ ಜಿಲ್ಲೆ 7 ತಾಲ್ಲೂಕುಗಳನ್ನು ಒಳಗೊಂಡಿದೆ.

ಜಿಲ್ಲೆಯ ಒಟ್ಟು ಭೌಗೋಳಿಕ ಪ್ರದೇಶವು 4,98,244 ಹೆಕ್ಟೇರ್ ಆಗಿದೆ. ಅದರಲ್ಲಿ 2,53,067 ಹೆಕ್ಟೇರ್ಗಳು ಬಿತ್ತನೆಯ ಪ್ರದೇಶವನ್ನು ರೂಪಿಸುತ್ತವೆ. ಜಿಲ್ಲೆಯ ಒಟ್ಟು ಭೂ ಪ್ರದೇಶದ ಅರ್ಧಕ್ಕಿಂತಲೂ ಹೆಚ್ಚು ಕೃಷಿಗೆ ಬಳಕೆಯಾಗುತ್ತಿದೆ. 94,779 ಹೆಕ್ಟೇರ್ ಭೂಮಿ ನೀರಾವರಿಗೊಳಪಟ್ಟಿದೆ. 19.25 ಲಕ್ಷದ ಒಟ್ಟು ಜನಸಂಖ್ಯೆಯೊಂದಿಗೆ ಸುಮಾರು 5 ಲಕ್ಷ ಜನರನ್ನು ಕೃಷಿ ವಲಯದಲ್ಲಿ ಕೆಲಸಕ್ಕೆ ತೊಡಗಿದ್ದಾರೆ. ಹೆಚ್ಚು ಕನ್ನಡವನ್ನು ಮಾತನಾಡುವ ಜಿಲ್ಲೆಯಾಗಿದೆ.

ಉನ್ನತ ಶಿಕ್ಷಣ ಸಂಪಾದಿಸಿ

 • ಮಂಡ್ಯ ವಿಶ್ವವಿದ್ಯಾಲಯ
 • ಸರ್ ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ತೂಬಿನಕೆರೆ - ಮೈಸೂರು ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ
 • ಪಿ. ಇ. ಎಸ್. ಶಿಕ್ಷಣ ಸಂಸ್ಥೆಗಳು:
 1. ಪದವಿ ಕಾಲೇಜು
 2. ಇಂಜಿನಿಯರಿಂಗ್ ಕಾಲೇಜು
 3. ಶಂಕರಗೌಡ ಬಿ. ಎಡ್. ಕಾಲೇಜು
 4. ಎಂ. ಕಾಂ. ಮತ್ತು ಎಂ. ಬಿ. ಎ. ಕಾಲೇಜು
 • ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) - ಮಂಡ್ಯ ವೈದ್ಯಕೀಯ ಕಾಲೇಜು
 • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಉನ್ನತ ಕೇಂದ್ರ - ಹೊಳಲು ಸರ್ಕಲ್
 • ಕೃಷಿ ವಿಶ್ವವಿದ್ಯಾಲಯ ಬೆಂಗಳೂರು,

ಕೃಷಿ ಮಹಾವಿದ್ಯಾಲಯ, V C ಫಾರ್ಮ್,ಮಂಡ್ಯ.

 • ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹೊರ ಆವರಣ ಕೇಂದ್ರ ಬಿ.ಹೊಸೂರು ಕಾಲೋನಿ ಮಂಡ್ಯ *ಭಾರತೀ ಕಾಲೇಜು ಭಾರತೀ ನಗರ (ಕೆ. ಎಮ್ ದೊಡ್ಡಿ ) ಭಾರತೀ ಪಾರ್ಮಸಿ ಕಾಲೇಜು, ಜಿ ಮಾದೇಗೌಡ ತಾಂತ್ರಿಕ ಕಾಲೇಜು ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜು ಕೆ. ಎಮ್ ದೊಡ್ಡಿ ಹೆಚ್. ಕೆ ವೀರಣ್ಣಗೌಡ ಕಾಲೇಜು ಮದ್ದೂರು ಶಾಂತಿ ಕಾಲೇಜು ಮಳವಳ್ಳಿ

ನೋಡಬಹುದಾದ ಜಾಗಗಳು ಸಂಪಾದಿಸಿ

 1. ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಬೃಂದಾವನ ಉದ್ಯಾನ
 2. ಟಿಪ್ಪೂ ಅರಮನೆ, ಕೋಟೆಗಳು, ಗುಡಿಗಳು, ಸಂಗಮ
 3. ರಂಗನತಿಟ್ಟು
 4. ಕರಿಘಟ್ಟ
 1. ಕುಂತಿಬೆಟ್ಟ
 2. ಮೇಲುಕೋಟೆ
 1. ನಾಗಮಂಗಲ ಚನ್ನಕೇಶವಸ್ವಾಮಿ ಗುಡಿ
 2. ಬಿಂಡಿಗನವಿಲೆ ಗರುಡಸ್ವಾಮಿ ಗುಡಿ
 3. ಆದಿ ಚುಂಚನಗಿರಿ
 1. ಶಿವಪುರದ ಸತ್ಯಗ್ರಹ ಸೌಧ, ಮದ್ದೂರು
 2. ಅರೆತಿಪ್ಪೂರು, ಶ್ರವಣಪ್ಪನ ಬೆಟ್ಟ
 3. ಕೊಕ್ಕರೆ ಬೆಳ್ಳೂರು
 4. ಸೋಮನಳ್ಳಮ್ಮನ ಗುಡಿ
 5. ಹನುಮಂತನಗರ ಆತ್ಮಲಿಂಗೇಶ್ವರ ಗುಡಿ
 6. ಓದಪ್ಪನ ಗುಡಿ,ನಗರಕೆರೆ-ವೈದ್ಯನಾಥಪುರ
 7. ನಂಬಿನಾಯಕನಹಳ್ಳಿ ಪಟ್ಟಲದಮ್ಮನ ಗುಡಿ
 1. ಶಿವನ ಸಮುದ್ರ ಜಲಪಾತ (ಗಗನ ಚುಕ್ಕಿ ಮತ್ತು ಭರಚುಕ್ಕಿ)
 2. ಸೋಮನಾಥಪುರ
 3. ಮುತ್ತತ್ತಿ
 4. ಬೆಂಕಿ ಫಾಲ್ಸ್ ಗಾಣಾಳು,ಹಲಗೂರು
 5. ಭೀಮೇಶ್ವರಿ
 1. ಬಸರಾಳು ಮಾಧವರಾಯ ದೇವಸ್ಥಾನ
 2. ಕೆರಗೋಡು ಪಂಚಲಿಂಗೇಶ್ವರನ ಗುಡಿ

ತಾಲ್ಲೂಕುಗಳು ಸಂಪಾದಿಸಿ

ಪ್ರಮುಖ ವ್ಯಕ್ತಿಗಳು ಸಂಪಾದಿಸಿ

ಹೊಳೆ/ನದಿಗಳು ಸಂಪಾದಿಸಿ

ಆರಂಬ ಸಂಪಾದಿಸಿ

ಮಂಡ್ಯ ಜಿಲ್ಲೆಗೆ ಪ್ರಮುಖ ನೀರು ಸರಬರಾಜಿನ ಆಗರ. ಕಾವೇರಿ ಹೊಳೆ, ಕೃಷ್ಣರಾಜಸಾಗರ ಅಣೆಕಟ್ಟಿನ ಮೂಲಕ. ಇಲ್ಲಿನ ಇತರ ಮುಖ್ಯ ಹೊಳೆಗಳೆಂದರೆ ಹೇಮಾವತಿ, ಲೋಕಪಾವನಿ, ಲಕ್ಷ್ಮಣತೀರ್ಥ ಮತ್ತು ಶಿಂಷಾ. ಇಲ್ಲಿ ಬೆಳೆಯಲ್ಪಡುವ ಬೆಳೆಗಳಲ್ಲಿ ಮುಖ್ಯವಾದವು ಕಬ್ಬು, ಬತ್ತ, ರಾಗಿ, ತೆಂಗು, ಅವರೆ, ಅಲಸಂದೆ, ಹುಚ್ಚೆಳ್ಳು, ವಾಣಿಜ್ಯ ಬೆಳೆ ಹಿಪ್ಪುನೇರಳೆ, ಮುಂತಾದವು. ಸಕ್ಕರೆ ಉತ್ಪಾದನೆಯ ಕಾರಣ ಮಂಡ್ಯ "ಸಕ್ಕರೆಯ ಜಿಲ್ಲೆ ", "ಮಧುರ ಮಂಡ್ಯ" ಎನಿಸಿಕೊಂಡಿದೆ.

ಬಾಹ್ಯ ಅಂತರಜಾಲ ತಾಣಗಳು ಸಂಪಾದಿಸಿ

"https://kn.wikipedia.org/w/index.php?title=ಮಂಡ್ಯ&oldid=1169327" ಇಂದ ಪಡೆಯಲ್ಪಟ್ಟಿದೆ