ಜಯಲಕ್ಷ್ಮಿ ಸೀತಾಪುರ

ಭಾರತೀಯ ಜಾನಪದ ವಿದ್ವಾಂಸೆ, ಲೇಖಕಿ

ಡಾ. ಟಿ. ಜಯಲಕ್ಷ್ಮಿ (ಹುಟ್ಟು: ೨೩ ಸೆಪ್ಟೆಂಬರ್, ೧೯೫೪), ಜಯಲಕ್ಷ್ಮಿ ಸೀತಾಪುರ (ಆಂಗ್ಲ:Jayalakshmi Seethapura) ಎಂದೇ ಹೆಸರಾದ, ಕನ್ನಡ ಭಾಷೆಯ ಪ್ರಮುಖ ಜಾನಪದ ವಿದ್ವಾಂಸರು.[] ಜನಪದ ಸಾಹಿತ್ಯ, ಜನಪದ ವೈದ್ಯಪದ್ಧತಿ, ಜನಪದ ಆಚರಣೆಗಳ ಕುರಿತ ವೈಜ್ಞಾನಿಕ ಸಂಶೋಧನೆ ಅವರ ಕಾರ್ಯಕ್ಷೇತ್ರ. ಅವರ ಸೇವೆಯನ್ನು ಪರಿಗಣಿಸಿ, ಕರ್ನಾಟಕ ಜಾನಪದ ಅಕಾಡೆಮಿಯು ೨೦೧೬ನೇ ಸಾಲಿನ ಪ್ರತಿಷ್ಠಿತ ಜೀಶಂಪ ಪ್ರಶಸ್ತಿ ನೀಡಿದೆ.[]

ಜಯಲಕ್ಷ್ಮಿ ಸೀತಾಪುರ
ಜನನವಿಶಾಲಾಕ್ಷಿ
ಸೆಪ್ಟೆಂಬರ್ ೨೩, ೧೯೫೪
ಸೀತಾಪುರ, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ
ವೃತ್ತಿ
  • ಪ್ರಾಧ್ಯಾಪಕಿ
  • ಲೇಖಕಿ
  • ಸಂಶೋಧಕಿ
  • ಜಾನಪದ ವಿಜ್ಞಾನಿ
ಭಾಷೆಕನ್ನಡ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾಲಯ
ಪ್ರಕಾರ/ಶೈಲಿ
  • ಜನಪದ ಸಾಹಿತ್ಯ
  • ಜಾಗತೀಕರಣ-ಜಾನಪದ
  • ಜಾನಪದ ಸಂಶೋಧನೆ
ಪ್ರಮುಖ ಪ್ರಶಸ್ತಿ(ಗಳು)ಜಾನಪದ ಅಕಾಡೆಮಿ ಪ್ರಶಸ್ತಿ

ವೈಯಕ್ತಿಕ ಜೀವನ - ವೃತ್ತಿ

ಬದಲಾಯಿಸಿ

ಜಯಲಕ್ಷ್ಮಿ ಹುಟ್ಟಿದ್ದು ಮಂಡ್ಯ ಜಿಲ್ಲೆಯ, ಪಾಂಡವಪುರ ತಾಲ್ಲೂಕಿನ ಸೀತಾಪುರ ಎಂಬ ಊರಿನಲ್ಲಿ. ಹುಟ್ಟುಹೆಸರು ವಿಶಾಲಾಕ್ಷಿ. ಗರಡಿಮನೆಯಲ್ಲಿ ಪಳಗುತ್ತಲೇ ಬಾಲ್ಯ ಕಳೆದ ಜಯಲಕ್ಷ್ಮಿ ಉನ್ನತ ಶಿಕ್ಷಣಕ್ಕೆಂದು ಊರು ಬಿಟ್ಟು ಹೊರಬಂದ ಮೊದಲ ಹೆಣ್ಣುಮಗಳಾಗಿದ್ದರು. ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿದ್ದರು.

ಜೀಶಂಪ, ಪಿ. ಆರ್. ತಿಪ್ಪೇಸ್ವಾಮಿ ಮುಂತಾದವರ ಸ್ಫೂರ್ತಿಯಿಂದ ಜಾನಪದದ ಸೇವೆಗೆ ನಿಂತ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕರಾಗಿ ಸೇರಿದರು.

ಲೇಖಕಿಯಾಗಿ

ಬದಲಾಯಿಸಿ

ಜಯಲಕ್ಷ್ಮಿ ಅವರು ಬರೆದಿರುವ ಜಾನಪದ ಸಂಬಂಧೀ ಕೃತಿಗಳು ಕನ್ನಡದ ಮಟ್ಟಿಗೆ ಗುರುತಾಗುವಂಥವು.[] ನಮ್ಮ ಸುತ್ತಿನ ಜನಪದ ಕಥನಗೀತೆಗಳು ಕೃತಿಯನ್ನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಕಟಿಸಿದೆ.[] ಹಲವಾರು ಕೃತಿಗಳು ಮರೆಯಲ್ಲಿದ್ದ ಜಾನಪದ ಸೂಕ್ಷ್ಮಗಳನ್ನು ಮುನ್ನೆಲೆಗೆ ತಂದಿವೆ.

ವಿಮರ್ಶೆ
  • ನೋ
ಕಾವ್ಯ
  • ನಮ್ಮ ಸುತ್ತಿನ ಜನಪದ ಕಥನಗೀತೆಗಳು
  • ಎದೆ ಕದವ ತಟ್ಟಲೇ
  • ಹಕ್ಕಿ ಹಾರ್ಯಾವೆ ಗಿಡದಾಗ[]
ನಾಟಕ
  • ಒಗಟನ್ನು ಬಿಡಿಸಿ
  • ತಬ್ಬಿಬ್ಬು
  • ಬೆಳಗು ಬೆರಗು
ಸಂಶೋಧನೆ
  • ಶೋಧ
  • ಕನ್ನಡ ಜಾನಪದ
  • ಕನ್ನಡದಲ್ಲಿ ಐತಿಹಾಸಿಕ ಜನಪದ ಲಾವಣಿಗಳು
  • ಕನ್ನಡ ಸಮಗ್ರ ಗಾದೆಗಳು (ಸಂ. 3 & 4)
  • ಐದು ಜಾನಪದ ಪ್ರಬಂಧಗಳು
  • ಜನಪದ ಒಕ್ಕಲು
  • ಕಲ್ಯಾಣವೆನ್ನಿ ಜನರೆಲ್ಲ[]
  • ಜಾನಪದ ಹಟ್ಟಿ
ವಿಶ್ಲೇಷಣೆ
  • ಜನಪದ ಸಾಹಿತ್ಯದಲ್ಲಿ ಹಾಸ್ಯ
  • ಜಾನಪದ ಹಬ್ಬ
  • ಜಾನಪದ ತರಂಗ
ಜೀವನಚರಿತ್ರೆ
  • ದಿಟ್ಟ ಸಾಧಕ

ಮುಂತಾದವು

ಪುರಸ್ಕಾರಗಳು

ಬದಲಾಯಿಸಿ
  • ೨೦೧೭ - ಪಾಂಡವಪುರ ತಾಲೂಕಿನ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ []
  • ೨೦೧೬ - ಜೀಶಂಪ ಪ್ರಶಸ್ತಿ - ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ []
  • ಮಂಡ್ಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
  • ಮುದ್ದುಮಾದಪ್ಪ ಪುರಸ್ಕಾರ[]
  • ಜಾನಪದ ಲೋಕ ಪ್ರಶಸ್ತಿ

ಜಯಲಕ್ಷ್ಮಿ ಸೀತಾಪುರ ರಸ್ತೆ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಹೃದಯಾಘಾತದಿಂದ ೧೬ ಜೂನ್ ೨೦೨೪ರಂದು ಸಾವನ್ನಪ್ಪಿದರು. ಅವರಿಗೆ ೭೦ ವರ್ಷ ವಯಸ್ಸಾಗಿತ್ತು.

ಇವನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಸಂಸ್ಕೃತಿ ಉಳಿಯಬೇಕಾದರೆ ಹಿರಿಯರ ಸರಳತೆ ಅನುಸರಿಸಬೇಕು:ಡಾ. ಜಯಲಕ್ಷ್ಮಿ ಸೀತಾಪುರ". City Today. 7 October 2017. Retrieved 7 April 2021.[ಶಾಶ್ವತವಾಗಿ ಮಡಿದ ಕೊಂಡಿ]
  2. "Janapada Academy Awards to be given away tomorrow". The Hindu. 9 January 2016. Retrieved 7 April 2021.
  3. ೩.೦ ೩.೧ "ಲೇಖಕಿ ಜಯಲಕ್ಷ್ಮಿ ಸೀತಾಪುರ". ಬುಕ್ ಬ್ರಹ್ಮ. Retrieved 7 April 2021.
  4. "Namma Suttina Janapada Kathanageethegalu". www.sapnaonline.com. Retrieved 7 April 2021.[ಶಾಶ್ವತವಾಗಿ ಮಡಿದ ಕೊಂಡಿ]
  5. "RIEMysore catalogue". RIEMysore. Retrieved 7 April 2021.[ಶಾಶ್ವತವಾಗಿ ಮಡಿದ ಕೊಂಡಿ]
  6. "Jayalakshmi Seethapura". www.marymartin.com. Archived from the original on 15 ನವೆಂಬರ್ 2017. Retrieved 7 April 2021.
  7. "ಪಾಂಡವಪುರ ಕನ್ನಡ ಸಾಹಿತ್ಯ ಸಮ್ಮೇಳನ" [Pandavapura Kannada Sahitya Sammelana] (in Kannada). www.prajavani. Jun 23, 2017. Retrieved 7 April 2021.{{cite web}}: CS1 maint: unrecognized language (link)
  8. "ಜಾನಪದ ಪ್ರಶಸ್ತಿ ಪ್ರಕಟ" [Janapada Awards announced]. Kannada Prabha. Retrieved 7 April 2021.