ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ[೧] ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಚಟುವಟಿಕೆಗಳನ್ನೇಲ್ಲ ಕೇಂದ್ರೀಕರಿಸುವ ದೃಷ್ಟಿಯಿಂದ ೧೯೬೬ ರಲ್ಲಿ ರೂಪುಗೊಂಡ ಸಂಸ್ಥೆ. ಇದರ ಮೊದಲ ಹೆಸರು "ಕನ್ನಡ ಅಧ್ಯಯನ ಸಂಸ್ಥೆ"(ಐ.ಕೆ.ಎಸ್). ೧೯೯೪ ರಲ್ಲಿ ಕುವೆಂಪು ಅವರ ಗೌರವಾರ್ಥವಾಗಿ "ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ" ಎಂದು ಪುನರ್ ನಾಮಕರಣ ಮಾಡಲಾಯಿತು[೨]. ಇದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆರಂಭವಾದ ಮೊದಲನೆ ಸಂಸ್ಥೆ (ಇನ್ ಸ್ಟಿಟ್ಯೂಟ್)ಯಾಗಿದೆ. ತನ್ನ ಸ್ವರೂಪ ವ್ಯಾಪ್ತಿಯಲ್ಲಿ ಭಾರತೀಯ ಭಾಷೆಯೊಂದರ ಅಧ್ಯಯನಕ್ಕೆ ಈ ಸಂಸ್ಥೆ ವಿಶಿಷ್ಟವಾಗಿದೆ.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕಟ್ಟಡ

ಇತಿವೃತ್ತಸಂಪಾದಿಸಿ

ಶಿಕ್ಷಣದ ಎಲ್ಲ ಹಂತಗಳಲ್ಲಿಯೂ ಶಿಕ್ಷಣ ಮಾಧ್ಯಮವಾಗಿ ಆಡಳಿತದ ಎಲ್ಲ ಸ್ತರಗಳಲ್ಲಿಯೂ ಆಡಳಿತ ಭಾಷೆಯಾಗಿ, ಕನ್ನಡ ನಾಡಿನ ಜನಜೀವನದಲ್ಲಿ ಪ್ರಥಮ ಭಾಷೆಯಾಗಿ, ಕನ್ನಡಕ್ಕೆ ಗೌರವದ ಸ್ಥಾನಮಾನಗಳು ಲಭಿಸಬೇಕೆಂಬ ಸಂಕ್ರಮಣ ಕಾಲದಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಆರಂಭವಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಹಾಗೂ ಕನ್ನಡ ಭಾಷಾಸಾಹಿತ್ಯಗಳ ಚಟುವಟಿಕೆಗಳ ಚರಿತ್ರೆಯಲ್ಲಿ ಈ ಅಧ್ಯಯನ ಸಂಸ್ಥೆ ಅಸ್ತಿತ್ವಕ್ಕೆ ಬಂದದ್ದು ಮಹತ್ವ್ತಪೂರ್ಣವಾದ, ಪರಿಣಾಮಕಾರಿಯಾದ ಘಟನೆ.

ಉದ್ದೇಶ/ ಆಶಯಗಳುಸಂಪಾದಿಸಿ

ಬೋದನೆ, ಸಂಶೋಧನೆ[೩],[೪] ಸಂಪಾದನೆಗಳೊಂದಿಗೆ ಬೇರೆ ಭಾಷೆಗಳಿಂದ ಬಗೆ ಬಗೆಯ ಗ್ರಂಥಗಳನ್ನು ಕನ್ನಡಕ್ಕೆ ತರಬೇಕು. ಕನ್ನಡದ ಶ್ರೇಷ್ಠ ಕೃತಿಗಳನ್ನು ಇತರ ಭಾಷೆಗಳವರಿಗೆ ಪರಿಚಯಿಸಬೇಕು. ಇನ್ನೂ ಬೆಳಕಿಗೆ ಬಾರದ ಪ್ರಾಚೀನ ಗ್ರಂಥಗಳನ್ನು ಶಾಸ್ತ್ರೀಯ ವಾಗಿ ಪ್ರಕಟಿಸಬೇಕು. ಜಾನಪದ ವಿಷಯವನ್ನು ಅಧ್ಯಯನದ ವ್ಯಾಪ್ರಿಗೆ ಒಳಪಡಿಸಬೇಕು. ಭಾರತೀಯ ಸಾಹಿತ್ಯ ಹಿನ್ನೆಲೆಯಲ್ಲಿ ಕನ್ನಡದ ವಲಯವನ್ನು ವಿಸ್ತೃತಗೊಳಿಸಬೇಕು. ಕನ್ನಡ ಭಾಷೆಯನ್ನು ಆಧುನಿಕ ಕಾಲಕ್ಕೆ ಅನುಗುಣವಾಗಿ ಬಲಪಡಿಸಬೇಕು ಇವೇ ಮೊದಲಾದ ಉದ್ದೇಶ, ಆಶಯಗಳಿಗೆ ಅನುಗುಣವಾಗಿ ನಾನಾ ಕಡೆ ಹಂಚಿಹೋಗಿರುವ ಕನ್ನಡ ಶಕ್ತಿಗಳನ್ನೇಲ್ಲ ಒಂದೆಡೆ ಸೇರಿಸುವ ಸಲುವಾಗಿ ಈ ಸಂಸ್ಥೆ ರೂಪುಗೊಂಡಿದೆ.

ಯೋಜನೆಗಳುಸಂಪಾದಿಸಿ

 1. ಕನ್ನಡ ವಿಶ್ವಕೋಶ ಮತ್ತು ವಿಷಯ ವಿಶ್ವಕೋಶ ಯೋಜನೆ
 2. ಎಫಿಗ್ರಾಫಿಯ ಕರ್ನಾಟಕ
 3. ಹರಿದಾಸ ಸಾಹಿತ್ಯ ಯೋಜನೆ
 4. ಕನ್ನಡ ಸಾಹಿತ್ಯ ಚರಿತ್ರೆ ಯೋಜನೆ
 5. ಜಾನಪದ ಸಂಶೋಧನೆ
 6. ಜಾನಪದ ವಸ್ತು ಸಂಗ್ರಹಾಲಯ - ಇತ್ಯಾದಿ

ಭೌತಿಕ ಸ್ವರೂಪ/ರಚನೆಸಂಪಾದಿಸಿ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಅಪರೂಪವಾದ ಕಟ್ಟಡವನ್ನು ಹೊಂದಿದೆ. ಎರಡು ಅಂತಸ್ತಿನ ಈ ಕಟ್ಟಡದಲ್ಲಿ ಒಟ್ಟು ೪೦ ಕೊಠಡಿಗಳಿವೆ. ಸಂಸ್ಥೆಯೊಳಗೆ ಸುಸಜ್ಜಿತ ಗ್ರಂಥಾಲಯವಿದೆ. ಇಲ್ಲಿ ಸುಮಾರು ೪೫೦೦೦ಗ್ರಂಥಗಳಿವೆ. ಬಗೆ ಬಗೆಯ ಭಾಷೆಗಳಾದ ಇಂಗ್ಲೀಷ್, ಹಿಂದಿ, ತೆಲುಗು, ತಮಿಳು, ಮಲೆಯಾಳಂ, ಮರಾಠಿ ಮೊದಲಾದ ಭಾಷೆಗಳಲ್ಲಿನ ವಿಶ್ವಕೋಶಗಳು ಇಲ್ಲಿವೆ.ಸಭೆ ಸಮಾರಂಬಗಳನ್ನು ನಡೆಸಲು ವಿಭಿನ್ನ ಸ್ವರೂಪದ ನಾಲ್ಕು ವಿಶಿಷ್ಟ ಬಗೆಯ ಸಂರಚನಾ ಕೊಠಡಿಗಳಿವೆ. ಸುಮಾರು ೫೦ ಆಸನ ಗಳಿರುವ ಸಮಿತಿ ಕೊಠಡಿ, ನೂರೈವತ್ತು ಆಸನಗಳಿರುವ ಸಭಾಂಗಣ, ಇನ್ನೂರು ಆಸನಗಳಿರುವ ಬಿ.ಎಂ.ಶ್ರೀ ಸಭಾಂಗಣ, ನೂರು ಆಸನಗಳ ಸಭಾಮನೆ ಇವೆ. ಇವುಗಳಲ್ಲಿ ವಿಚಾರಸಂಕಿರಣ, ವಿಚಾರಗೋಷ್ಠಿ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ, ವಿವಿಧ ಶಿಬಿರ, ಕಾರ್ಯಾಗಾರಗಳು ನಡೆಯುತ್ತವೆ.

ವಿವಿಧ ಶಾಖೆಗಳುಸಂಪಾದಿಸಿ

 1. ಬೋದನಾಂಗಗಳು
 2. ಸಂಶೋಧನಾ ಸೌಲಭ್ಯಗಳು
 3. ಗಣಕ ಶಾಖೆ
 4. ಸಂಪಾದನಾ ವಿಭಾಗ
 5. ಭಾಷಾಂತರ ಮತ್ತು ಪಠ್ಯ ಪುಸ್ತಕ ವಿಭಾಗ
 6. ಸುಸಜ್ಜಿತ ಗ್ರಂಥಾಲಯ
 7. ಹಸ್ತಪ್ರತಿ ವಿಭಾಗ

ಪ್ರಕಟಣೆಗಳುಸಂಪಾದಿಸಿ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಇಲ್ಲಿಯವರೆಗೆ ಒಟ್ಟು ೫೮೦ ಕೃತಿಗಳು ಪ್ರಕಟವಾಗಿವೆ.

 1. ಅನುವಾದಿತ ಕೃತಿಗಳು ೨೪೦,
 2. ಸಂಪಾದಿತ ಕೃತಿಗಳು ೧೪೫,
 3. ಜಾನಪದಕ್ಕೆ ಸಂಬಂಧಿಸಿದ ಕೃತಿಗಳು ೧೦೦,
 4. ದಾಸಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳು ೨೫,
 5. ಇಂಗ್ಲೀಷ್ ಕೃತಿಗಳು ೨೦,
 6. ಇತರ ಪ್ರಕಟಣೆಗಳು ೫೦.

ನಿರ್ದೇಶಕರ ಪಟ್ಟಿಸಂಪಾದಿಸಿ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಇಲ್ಲಿಯವರೆಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಪ್ರಾಧ್ಯಾಪಕರ ಪಟ್ಟಿ ಹೀಗಿವೆ-

 1. ಪ್ರೊ.ದೇ.ಜವರೇಗೌಡ - ೧೯೬೬ - ೧೯೬೯ ರವರೆಗೆ
 2. ಪ್ರೊ.ಹಾ.ಮಾ.ನಾಯಕ್ - ೧೯೬೯ - ೧೯೮೪ ರವರೆಗೆ
 3. ಪ್ರೊ.ಎಚ್.ತಿಪ್ಪೇರುದ್ರಸ್ವಾಮಿ - ೧೯೮೪ - ೧೯೮೭ ರವರೆಗೆ
 4. ಪ್ರೊ.ಜೀ.ಶಂ.ಪರಮಶಿವಯ್ಯ - ೧೯೮೭ - ೧೯೮೯ ರವರೆಗೆ
 5. ಪ್ರೊ.ಸಿ.ಪಿ.ಕೃಷ್ಣಕುಮಾರ್ - ೧೯೮೯ - ೧೯೯೧ ರವರೆಗೆ
 6. ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರೀ - ೧೯೯೧ - ೧೯೯೩ ರವರೆಗೆ
 7. ಪ್ರೊ.ಎಚ್.ಎಂ.ಚನ್ನಯ್ಯ - ೧೯೯೩ - ೧೯೯೫ ರವರೆಗೆ
 8. ಪ್ರೊ.ಕೆಂಪೇಗೌಡ - ೧೯೯೫ - ೧೯೯೭ ರವರೆಗೆ
 9. ಪ್ರೊ.ಡಿ.ಕೆ.ರಾಜೇಂದ್ರ - ೧೯೯೭ - ೧೯೯೯ ರವರೆಗೆ
 10. ಪ್ರೊ.ಸಿ.ಪಿ.ಸಿದ್ದಾಶ್ರಮ - ೧೯೯೯ - ೨೦೦೧ ರವರೆಗೆ
 11. ಪ್ರೊ.ಅರವಿಂದ ಮಾಲಗತ್ತಿ - ೨೦೦೧ - ೨೦೦೨, ರವರೆಗೆ
 12. ಪ್ರೊ.ಡಿ.ಕೆ.ರಾಜೇಂದ್ರ - ೧-೧-೨೦೦೨ - ೧೨-೪ ೨೦೦೨ ರವರೆಗೆ
 13. ಪ್ರೊ.ಸಿ.ಪಿ.ಸಿದ್ದಾಶ್ರಮ - ೧೩-೪- ೨೦೦೨ - ೧೪-೪-೨೦೦೪ ರವರೆಗೆ
 14. ಪ್ರೊ.ಅರವಿಂದ ಮಾಲಗತ್ತಿ - ೧೫-೪- ೨೦೦೪ - ೨೦೦೬ ರವರೆಗೆ
 15. ಪ್ರೊ.ಹಿ.ಶಿ.ರಾಮಚಂದ್ರೇಗೌಡ - ೨೦೦೬ - ೨೦೦೮ ರವರೆಗೆ
 16. ಪ್ರೊ.ಅಂಬಳಿಕೆ ಹಿರಿಯಣ್ಣ - ೨೦೦೮ - ೨೦೧೦ ರವರೆಗೆ
 17. ಪ್ರೊ.ಗಂಗಾನಾಯಕ್ - ೨೦೧೦-೨೦೧೨ ರವರೆಗೆ
 18. ಪ್ರೊ.ನೀಲಗಿರಿ ತಳವಾರ್ - ೨೦೧೨ - ೨೦೧೪ ರವರೆಗೆ
 19. ಪ್ರೊ.ಆರ್.ರಾಮಕೃಷ್ಣ - ೨೦೧೪ - ೨೦೧೬ ರವರೆಗೆ
 20. ಪ್ರೊ. ಪ್ರೀತಿ ಶುಭಚಂದ್ರ[೫] - ೨೦೧೬ -

ಉಲ್ಲೇಖಗಳುಸಂಪಾದಿಸಿ

 1. "ವಿಕಿಮ್ಯಾಪಿಯದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ". wikimapia.
 2. "ಕನ್ನಡ ಅಧ್ಯಯನ ಸಂಸ್ಥೆಗೆ ಕುವೆಂಪು ಹೆಸರು". Informindia.com.
 3. https://plus.google.com/108221823480302422224/posts/6MHtRckxcgk
 4. http://kannadadindimavedike.blogspot.in/
 5. "Preethi Shubhachandra:The first female director of Kuvempu Istitute of Kannada Studies". Vijayakarnataka.