ಅರವಿಂದ ಮಾಲಗತ್ತಿ

ಭಾರತೀಯ ಕವಿ, ಲೇಖಕ

ಡಾ. ಅರವಿಂದ ಮಾಲಗತ್ತಿ []- ಕನ್ನಡದ ಸಾಹಿತ್ಯದಲ್ಲಿ ಒಂದು ಗಮನಾರ್ಹ ಹೆಸರು. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಹೆಸರು ಮಾಡಿದವರು. ಕಾವ್ಯದ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತರಾದ ಇವರು ನಂತರ ಕವನ, ಕಾದಂಬರಿ, ಕಥೆ, ನಾಟಕ, ಸಂಶೋಧನೆ, ಸಂಪಾದನೆ, ಆತ್ಮಕಥೆ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ೬೫ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ[][] ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ ಜಾನಪದ. ಗಾಯಕರಾಗಿ ಹಾಡಿ, ನಟರಾಗಿ ಅಪರೂಪಕ್ಕೆ ನಟಿಸಿದ್ದೂ ಇದೆ.

ಅರವಿಂದ ಮಾಲಗತ್ತಿ
ಪ್ರೊ. ಮಾಲಗತ್ತಿ, ೨೦೨೦ರಲ್ಲಿ
ಜನನಅರವಿಂದ ಮಾಲಗತ್ತಿ
೧೯೫೬
ಮುದ್ದೇ ಬಿಹಾಳ, ಕರ್ನಾಟಕ, ಭಾರತ
ವೃತ್ತಿಕವಿ, ಸಂಶೋಧಕ, ಸಾಹಿತ್ಯ ವಿಮರ್ಶಕ, ಚಿಂತಕ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸMA, Ph.D
ಪ್ರಮುಖ ಪ್ರಶಸ್ತಿ(ಗಳು)ದೇವರಾಜ್ ಬಹದ್ದೂರ್ ಪ್ರಶಸ್ತಿ, ನರಸಿಂಹಯ್ಯ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಶ್ರೀ ಕೃಷ್ಣ ಆಲನಹಳ್ಳಿ ಪ್ರಶಸ್ತಿ ಸಂಕ್ರಮಣ ಪ್ರಶಸ್ತಿ , ಜಿ.ಶಂ.ಪ ಜಾನಪದ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಮುಂತಾದುವು

ಅರವಿಂದ ಮಾಲಗತ್ತಿ ಅವರ ಕೆಲವು ಕೃತಿಗಳು ಹಾಗೂ ಕೆಲವು ಬಿಡಿ ಬಿಡಿಯಾದ ಭಾಗಗಳು ಇಂಗ್ಲಿಷ್, ಹಿಂದಿ, ಮಲೆಯಾಳಂ, ಮರಾಠಿ, ತಮಿಳು, ಬೆಂಗಾಲಿ ಭಾಷೆಗೆ ಅನುವಾದಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ ಡಾ.ಅರವಿಂದ ಮಾಲಗತ್ತಿ ಅವರ ಬಗ್ಗೆ ಈಗಾಗಲೇ ಸಾಕ್ಷ್ಯಚಿತ್ರವನ್ನು ತಯಾರಿಸಿದೆ.[]

ಜೀವನ

ಡಾ.ಅರವಿಂದ ಮಾಲಗತ್ತಿಯವರು ೦೧-೦೮- ೧೯೫೬ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ. ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿದರು. ಇವರ ಪತ್ನೀ ಧರಣಿದೇವಿ ಮಾಲಗತ್ತಿ ಮಕ್ಕಳು ದಕ್ಷ ಮತ್ತು ಯಕ್ಷ. ಪ್ರಸ್ತುತ ಇವರು ಮೈಸೂರು ವಿಶ್ವವಿದ್ಯಾಲಯಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ.[]

ಸಂಶೋಧನೆ ಮತ್ತು ಬೋಧನಾನುಭವ

  1. ಸಂಶೋಧನಾನುಭವ -೧೯೮೦ ರಿಂದ- ೧೯೮೩, ಯು.ಜಿ.ಸಿ ಶಿಷ್ಯವೇತನ, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ[]
  2. ಉಪನ್ಯಾಸಕರಾಗಿ - ೧೯೮೩ ರಿಂದ ೧೯೮೭ರವರೆಗೆ ಸರಕಾರಿ ಮಹಾವಿದ್ಯಾಲಯ, ಮಂಗಳೂರು
  3. ಪ್ರವಾಚಕರಾಗಿ - ೧೯೮೭ ರಿಂದ ೧೯೯೪ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು.
  4. ಪ್ರಾಧ್ಯಾಪಕರಾಗಿ - ೧೯೯೪ ರಿಂದ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮಾನಸಗಂಗೋತ್ರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕೃತಿಗಳು

ಕವನ ಸಂಕಲನಗಳು

  1. ಮೂಕನಿಗೆ ಬಾಯಿ ಬಂದಾಗ - ೧೯೮೨
  2. ಕಪ್ಪು ಕಾವ್ಯ - ೧೯೮೫
  3. ಮೂರನೇ ಕಣ್ಣು - ೧೯೯೬
  4. ನಾದ ನಿನಾದ - ೧೯೯೯
  5. ಅನೀಲ ಆರಾಧನಾ (ಸಂಯುಕ್ತ ಕಾವ್ಯ)- ೨೦೦೨
  6. ಸಿಲಿಕಾನ್ ಸಿಟಿ ಮತ್ತು ಕೋಗಿಲೆ - ೨೦೦೩
  7. ಚಂಡಾಲ ಸ್ವರ್ಗಾರೋಹಣಂ - ೨೦೦೩
  8. ಆಯ್ದಕವಿತೆಗಳು - ೨೦೦೪
  9. ವಿಶ್ವತೋಮುಖ - ೨೦೧೦
  10. ಹೂ ಬಲುಭಾರ - ೨೦೧೦
  11. ಸಹಸ್ರಾಕ್ಷಿ - ೨೦೧೨
  12. ಅನೀಲ ಆರಾಧನ (ಸಂಯುಕ್ತ ಕಾವ್ಯ)-೨೦೦೨
  13. ಮಾ ಕಾವ್ಯ (ಕಾವ್ಯ ಸಮಗ್ರ) - ೨೦೧೩
  14. ರೂ ನಿಷೇಧ ಚಕ್ರಕಾವ್ಯ - ೨೦೧೭

ಕಥಾಸಂಕಲನಗಳು

  • ಮುಗಿಯದ ಕಥೆಗಳು - ೨೦೦೦

ಕಾದಂಬರಿ

  • ಕಾರ್ಯ -೧೯೮೮

ನಾಟಕಗಳು

  1. ಮಸ್ತಕಾಭಿಷೇಕ - ೧೯೮೪
  2. ಸಮುದ್ರದೊಳಗಣ ಉಪ್ಪು - ೧೯೯೯
  3. ಮಚುಬದ ಮುಖ - ೨೦೧೫
  4. ಹೊಸ ಬ್ರಾಹ್ಮಣ ಸನ್ಯಾಸಿ - ೨೦೧೭

ಪ್ರವಾಸ ಕಥನ

  • ಚೀನಾದ ಧರಣಿಯಲ್ಲಿ - ೨೦೧೧

ಆತ್ಮ ಕಥನ

  • ಗೌರ್ಮೆಂಟ್ ಬ್ರಾಹ್ಮಣ [][][](ಈ ಕೃತಿ ಈಗಾಗಲೇ ಚಲನಚಿತ್ರ [೧೦]ವಾಗಿದೆ) -೧೯೯೪

ಸಂಶೋಧನಾತ್ಮಕ ವಿಮರ್ಶೆಗಳು

  1. ಕನ್ನಡ ಸಾಹಿತ್ಯ ಮತ್ತು ದಲಿತಯುಗ
  2. ದಲಿತ ಪ್ರಜ್ಞೆ: ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ
  3. ಸಾಂಸ್ಕೃತಿಕ ದಂಗೆ
  4. ಬೆಂಕಿ ಬೆಳದಿಂಗಳು
  5. ದಲಿತ ಸಾಹಿತ್ಯ ಪ್ರವೇಶಿಕೆ
  6. ಅಂತರ್ಜಾತಿಯ ವಿವಾಹ ಎಷ್ಟು ಪ್ರಗತಿಪರ
  7. ಪೂನಾಪ್ಯಾಕ್ಟ್ ಮತ್ತು ದಲಿತರೆತ್ತ ಸಾಗಬೇಕು
  8. ಭೀಮ ನಡೆಯಬೇಕು
  9. ಸಾಹಿತ್ಯ ಸಾಕ್ಷಿ
  10. ದಲಿತ ಸಾಹಿತ್ಯ ಪರ್ವ
  11. ದಲಿತ ಸಾಹಿತ್ಯ
  12. ಸಾಹಿತ್ಯ ಕಾರಣ
  13. ದಲಿತ ಮಾರ್ಗ
  14. ಮೌಢ್ಯ ನಿಷೇಧದ ಗುದ್ದಾಟಗಳು
  15. ಚುಟುಕು ಚಿಂತನ
  16. ದಲಿತ ಸಾಹಿತ್ಯ ಯಾನ

ಜಾನಪದ ಕೃತಿಗಳು

  1. ಆಣೀ ಪೀಣಿ -೧೯೮೨
  2. ಜಾನಪದ ವ್ಯಾಸಂಗ -೧೯೮೫
  3. ಜಾನಪದ ಶೋಧ - ೧೯೮೦
  4. ತುಳುವರ ಆಟಿಕಳಂಜ ಅಂತರ್ ದೃಷ್ಟಿಯ ಸಂಶೋಧನೆ -೧೯೯೩
  5. ಭೂತಾರಾಧನೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆ - ೧೯೯೧
  6. ಪುರಾಣ ಜಾನಪದ ಮತ್ತು ದೇಶಿವಾದ -೧೯೯೮

ಸಹಬರವಣಿಗೆ

  1. ಕೊರಗ ಜನಾಂಗ ಒಂದು ವಿಶ್ಲೇಷಣಾತ್ಮಕ ಅಧ್ಯಯನ -೧೯೯೧

ವಯಸ್ಕರ ಶಿಕ್ಷಣ ಕೃತಿ

  1. ಜನಪದ ಆಟಗಳು -೧೯೯೩
  2. ತಾಳಿಕೋಟೆ ದ್ಯಾಮವ್ವ - ೧೯೯೫

ಪಿಎಚ್.ಡಿ ಮಹಾಪ್ರಬಂಧ

  • ಉತ್ತರ ಕರ್ನಾಟಕದ ಜನಪದ ಆಟಗಳು

ಸಂಪಾದಿತ ಕೃತಿಗಳು

  1. ನಾಲ್ಕು ದಲಿತೀಯ ಕಾದಂಬರಿಗಳು
  2. ಅಂಬೇಡ್ಕರ್ ವಿಚಾರಧಾರೆ
  3. ಅಂಬೇಡ್ಕರ್ ವಾದ-ಸಂವಾದ
  4. ಗೋಮಾಳದಿಂದ ಗಂಗೋತ್ರಿಗೆ
  5. ದಲಿತ ಸಾಹಿತ್ಯ ನೆಲೆ- ಹಿನ್ನೆಲೆ
  6. ಕನ್ನಡ ಗ್ರಂಥೋದ್ಯಮ
  7. ಜಾನಪದ ಸೈದ್ಧಾಂತಿಕ ಪ್ರಜ್ಞೆ ಮತ್ತು ದೇಶಿವಾದ
  8. ಜಾನಪದ ಮೂಲತತ್ವ್ತಗಳು
  9. ಕಾದಂಬರಿಗಳ ವಿಮರ್ಶೆ
  10. ಮಲೆಯ ಮಹದೇಶ್ವರ

ಸಹ ಸಂಪಾದನೆ

  1. ಸಮಾವೇಶ
  2. ಬೇವು ಬೆಲ್ಲ

ವಿಶ್ವಕೋಶ ಹಾಗೂ ಬೃಹತ್ ಗ್ರಂಥಗಳ ಪ್ರಧಾನ ಸಂಪಾದಕರಾಗಿ

  1. ಕನ್ನಡ ವಿಶ್ವಕೋಶ ೧೪ ಸಂಪುಟಗಳು : ಸಿ.ಡಿ.ರೂಪದಲ್ಲಿ
  2. ಕನ್ನಡ ವಿಷಯ ವಿಶ್ವಕೋಶ : ಕರ್ನಾಟಕ (ಪರೊಷ್ಕೃತ)
  3. ಕನ್ನಡ ವಿಷಯ ವಿಶ್ವಕೋಶ : ಜಾನಪದ ಸಂಪುಟ
  4. ಕನ್ನಡ ವಿಷಯ ವಿಶ್ವಕೋಶ :ಪ್ರಾಣಿವಿಜ್ಞಾನ
  5. ಎಫಿಗ್ರಫಿಯಾ ಕರ್ನಾಟಕ : ೧೨ ಸಂಪುಟಗಳು
  6. ಕುವೆಂಪು ಕೃತಿ ವಿಮರ್ಶೆ
  7. ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ : ೬ ಸಂಪುಟಗಳು

ನಿರ್ವಹಿಸಿರುವ ಜವಾಬ್ದಾರಿ ಹುದ್ದೆಗಳು

  1. ಕನ್ನಡ ವಿಭಾಗದ ಮುಖ್ಯಸ್ಥರಾಗಿ - ೦೨-೧೧-೧೯೯೨ ರಿಂದ ೦೩-೦೪-೧೯೯೪ರವರೆಗೆ- ಮಂಗಳೂರು ವಿಶ್ವವಿದ್ಯಾನಿಲಯ
  2. ಪ್ರಸರಾಂಗದ ನಿರ್ದೇಶಕರಾಗಿ - ೨೮-೦೮-೧೯೯೫ ರಿಂದ ೨೦೦೦ದವರೆಗೆ - ಮೈಸೂರು ವಿಶ್ವವಿದ್ಯಾನಿಲಯ
  3. ನಿರ್ದೇಶಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ- ೦೩-೦೧-೨೦೦೦ ದಿಂದ ೦೧-೦೧-೨೦೦೧ರವರೆಗೆ ಮತ್ತು ೧೫-೦೪-೨೦೦೪ರಿಂದ ೦೧-೦೬-೨೦೦೬ರವರೆಗೆ ಎರಡು ಬಾರಿ ನಿರ್ದೇಶಕರಾದ ಹಿರಿಮೆ.
  4. ಗೌರವ ನಿರ್ದೇಶಕ - ೨೦೦೭ ರಿಂದ ೨೦೦೮ರವರೆಗೆ- ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ವಸ್ತುಸಂಗ್ರಹಾಲಯ.
  5. ಪುಸ್ತಕ ಸಗಟು ಖರೀದಿ ಸಮಿತಿ ಸದಸ್ಯ - ೧೯೯೧ ರಿಂದ ೧೯೯೩ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
  6. ಜನಪ್ರಿಯ ಪುಸ್ತಕ ಮಾಲಿಕೆ ಪ್ರಕಟಣಾ ಸಮಿತಿ ಸದಸ್ಯ, ೧೯೯೧ ರಿಂದ ೧೯೯೩ರವರೆಗೆ- ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
  7. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ - ೧೯೯೧ ರಿಂದ ೧೯೯೫ -ಕರ್ನಾಟಕ ಸರ್ಕಾರ, ಬೆಂಗಳೂರು
  8. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ- ೧೯೯೮ ರಿಂದ ೨೦೦೦ -ಕರ್ನಾಟಕ ಸರ್ಕಾರ, ಬೆಂಗಳೂರು
  9. ಕನ್ನಡ ಸಾಹಿತ್ಯ ಪರಿಷತ್ ಸದಸ್ಯ, ಕಾರ್ಯಕಾರಿ ಸಮಿತಿ- ೧೯೯೮ ರಿಂದ ೨೦೦೩ರವರೆಗೆ -ಕರ್ನಾಟಕ ಸರ್ಕಾರ, ಬೆಂಗಳೂರು
  10. ಸರಸ್ವತಿ ಸಮ್ಮಾನ್ ಪ್ರಶಸ್ತಿಯ, ಚೈನ್ ಪರಿಷತ್ ಕಮಿಟಿ ಸದಸ್ಯ- ೨೦೦೪ರಲ್ಲಿ- ಬಿರ್ಲಾ ಫೌಂಡೇಶನ್ ದೆಹಲಿ
  11. ಪಠ್ಯ ಪುಸ್ತಕ ಸಮಿತಿ ಸದಸ್ಯ- ೧೯೯೫ ರಿಂದ ೧೯೯೬, ಪಿ.ಯು.ಸಿ ಮಂಡಳಿ ಬೆಂಗಳೂರು
  12. ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯರು - ೨೦೧೩ರಲ್ಲಿ -ದೆಹಲಿ
  13. ಚಲನಚಿತ್ರ ಪರಿಶೀಲನ ಮತ್ತು ಆಯ್ಕೆ ಸಮಿತಿ ಸದಸ್ಯರು - ೧೯೯೭ ರಿಂದ ೨೦೦೦ದವರೆಗೆ- ಬೆಂಗಳೂರು ದೂರದರ್ಶನ ಕೇಂದ್ರ
  14. ವಿಜಾಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ - ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ೨೫, ೨೬ ನವೆಂಬರ್-೨೦೦೬[೧೧]
  15. ಮೈಸೂರು ದಸರಾ ಕವಿಗೋಷ್ಠಿ ಅಧ್ಯಕ್ಷತೆ - ೨೦೦೫
  16. ರಾಜ್ಯ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ -೨೦೧೦ - ಬೀದರ್ನಲ್ಲಿ ನಡೆದ ಎರಡನೇ ಸಮ್ಮೇಳನ[೧೨][೧೩]
  17. ಗೋಕಾಕ್ ಚಳುವಳಿಯಲ್ಲಿ ಕನ್ನಡ ಹೋರಾಟಕ್ಕಾಗಿ ಬೆಳಗಾವಿ ಹಿಂಡಲಗಾ ಬಂದಿಖಾನೆಯಲ್ಲಿ ವಾಸ- ಏಪ್ರಿಲ್ ೧೯೮೩
  18. ಅಮೆರಿಕಾ 'ನಾವಿಕ' ಸಮ್ಮೇಳನದಲ್ಲಿ ಅತಿಥಿಯಾಗಿ ಉಪನ್ಯಾಸ -೨೦೧೦ -ನಾರ್ತ್ ಅಮೆರಿಕಾ ವಿಶ್ವ ಕನ್ನಡ ಸಮಾವೇಶ, ಲಾಸ್ ಎಂಜಲೀಸ್, ಕ್ಯಾಲಿಪೋರ್ನಿಯಾ
  19. ಚೀನಾದ ಹ್ವಾಂಗ್ ಹುಯ್ ವಿಶ್ವವಿದ್ಯಾನಿಲಯಕ್ಕೆ ಭೇಟಿ - ೨೦೧೧ - ಮೈಸೂರು ವಿಶ್ವವಿದ್ಯಾನಿಲಯದ ಸೈಕ್ಷಣಿಕ ವಿನಿಮಯ ಒಪ್ಪಂದದ ಸಮಿತಿಯ ಸದಸ್ಯರಾಗಿ
  20. ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ - ೨೦೧೭
  21. ಪ್ರಸ್ತುತ ಕನ್ನಡ ಪ್ರಾಧ್ಯಾಪಕರಾಗಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪತ್ರಿಕೆಯ ವಲಯದಲ್ಲಿ ನಿರ್ವಹಿಸಿರುವ ಜವಾಬ್ದಾರಿ ಹುದ್ದೆಗಳು

  1. 'ಸಾಹಿತ್ಯ ಸಂಗಾತಿ' ಪತ್ರಿಕೆಯ ಸಂಪಾದರು- ೧೯೯೮ರಿಂದ ೧೯೯೫ರವರೆಗೆ
  2. 'ಫೋಕ್ಲೋರ್ ನ್ಯೂಸ್ ಲೆಟರ್' ಸಂಪಾದಕ ಬಳಗದ ಸದಸ್ಯರು- ಮಂಗಳೂರು ವಿಶ್ವವಿದ್ಯಾನಿಲಯ ಆವರಣದಿಂದ
  3. 'ವಿದ್ಯಾರ್ಥಿ ಭಾರತಿ ಪತ್ರಿಕೆ'-ದ್ವೈಮಾಸಿಕ -ಸಂಪಾದಕ ಸಮಿತಿ ಸದಸ್ಯರು ಕರ್ನಾಟಕ ವಿಶ್ವವಿದ್ಯಾನಿಲಯ- ಧಾರವಾಡ
  4. 'ವಿಶ್ವಸಂಪದ'-ಮಾಸ ಪತ್ರಿಕೆ - ಸಂಪಾದಕ ಸಮಿತಿ ಸದಸ್ಯರು-೧೯೯೯ರಿಂದ ೨೦೦೦ದವರೆಗೆ -ಮೈಸೂರು ವಿಶ್ವವಿದ್ಯಾನಿಲಯ
  5. 'ಪ್ರಬುದ್ಧ ಕರ್ನಾಟಕ' ತ್ರೈಮಾಸಿಕ- ಸಂಪಾದಕ ಸಮಿತಿ ಅಧ್ಯಕ್ಷರು-೧೯೯೯ರಿಂದ ೨೦೦೦ದವರೆಗೆ -ಮೈಸೂರು ವಿಶ್ವವಿದ್ಯಾನಿಲಯ
  6. 'ಮಾನವಿಕ ಕರ್ನಾಟಕ' ತ್ರೈಮಾಸಿಕ, ಸಂಪಾದಕ ಸಮಿತಿ ಅಧ್ಯಕ್ಷರು-೨೦೦೮ರಿಂದ ೨೦೧೦ರವರೆಗೆ -ಮೈಸೂರು ವಿಶ್ವವಿದ್ಯಾನಿಲಯ

ಮಾಲಗತ್ತಿ ಅವರ ಸಾಹಿತ್ಯ ಕುರಿತ ಕೃತಿಗಳು

  1. 'ಕಾರ್ಯ' ವಿಮರ್ಶಾಲೋಕ(ಕಾರ್ಯ ಕಾದಂಬರಿಯ ವಿಮರ್ಶೆಯ ಲೇಖನಗಳು) -೧೯೮೯ ಮತ್ತು ದಲಿತಜ್ಞ - (ಸಾಹಿತ್ಯ ವಿಚಾರ ಸಂಕಿರಣ ಲೇಖನಗಳು)-೨೦೦೦ ಸಂ.ಅರ್ಜುನಗೋಳಸಂಗಿ
  2. ನೋವು ಹೆತ್ತ ಪ್ರೀತಿ -(ಗೌರ್ಮೆಂಟ್ ಬ್ರಾಹ್ಮಣ ಕೃತಿಯ ವಿಮರ್ಶಾ ಲೇಖನಗಳ ಸಂಕಲನ) -೨೦೦೨- ಸಂ.ಅಪ್ಪಗೆರೆ ಸೋಮಶೇಖರ್, ಡಾ.ಮಲ್ಲಿಗೆಹಳ್ಳಿ ನರೇಂದ್ರಕುಮಾರ್
  3. ಪ್ರೊ. ಅರವಿಂದ ಮಾಲಗತ್ತಿ ಅವರ ಮಾರ್ಗ- ಸಾಹಿತ್ಯ -೨೦೦೬- ಡಾ.ಕೆ.ಕೇಶವಶರ್ಮ
  4. ಪ್ರೊ. ಅರವಿಂದ ಮಾಲಗತ್ತಿ ಅವರ ಸಾಹಿತ್ಯ -ಚಿಂತನೆ - ೨೦೦೫ಡಾ.ಶಂಕರೇಗೌಡ (ಪಿಎಚ್.ಡಿ ಮಹಾಪ್ರಬಂಧ)
  5. ಪ್ರೊ. ಅರವಿಂದ ಮಾಲಗತ್ತಿ ಅವರ ಕಾವ್ಯಾನುಸಂಧಾನ - ೨೦೦೬ - ಡಾ.ಕುಶಾಲ ಬರಗೂರು
  6. ಶಾರದೆ ಕುಣಿಸಿದ ಕವಿ - ಡಾ. ಅರವಿಂದ ಮಾಲಗತ್ತಿ - ೨೦೦೭- ಎಚ್ಚೆಸ್ಕೆ
  7. ಪಗಡೆಯ ಕೌದಿಯಲಿ ದೀಪಗಳು ಬೆಳಗಿ - ೨೦೦೯ - (ಅಮಾ ಸಾಹಿತ್ಯದ ಸ್ತ್ರೀವಾದಿ ಅಧ್ಯಯನ)-ಡಾ.ಎಸ್.ಡಿ ಶಶಿಕಲಾ
  8. ಕಾವ್ಯ ಮಂಥನ -ಸಂ.ಅರ್ಜುನಗೋಳಸಂಗಿ
  9. ಮಾಲಗತ್ತಿ ಮಾತು ಮಥನ - ೨೦೧೦ -(ಪ್ರಶ್ನೋತ್ತರ ಮಾಲಿಕೆಯ ಕೃತಿ)-ಜಿ.ಎಸ್.ಭಟ್ಟ
  10. ವಾದ ವಾಗ್ವಾದ ಸಂವಾದ - ೨೦೦೯ -(ಸಂದರ್ಶನ ಹಾಗೂ ಸಂವಾದಗಳು) ಸಂ.ಬಿಸ್ಲೇಹಳ್ಳಿ ಪ್ರಭು

ಪ್ರಶಸ್ತಿ ಪುರಸ್ಕಾರಗಳು

  1. ದೇವರಾಜ್ ಬಹದ್ದೂರ್ ಪ್ರಶಸ್ತಿ- ಮೂಕನಿಗೆ ಬಾಯಿ ಬಂದಾಗ ಕವನ ಸಂಕಲನಕ್ಕೆ - ಕರ್ನಾಟಕ ಸರ್ಕಾರ-ಶಿಕ್ಷಣ ಇಲಾಖೆ -೧೯೮೭
  2. ನರಸಿಂಹಯ್ಯ ಪುರಸ್ಕಾರ -ಕಪ್ಪುಕಾವ್ಯ ಕೃತಿಗೆ -ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು -೧೯೮೭
  3. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ- ಗೌರ್ಮೆಂಟ್ ಬ್ರಾಹ್ಮಣ ಆತ್ಮಕಥನ ಕೃತಿಗೆ -೧೯೯೬
  4. ಶ್ರೀ ಕೃಷ್ಣ ಆಲನಹಳ್ಳಿ ಪ್ರಶಸ್ತಿ- ಶದ್ರ ಪತ್ರಿಕೆಯಲ್ಲಿ ಪ್ರಕಟವಾದ -ಅಹಿಂಸಾ ಚಪ್ಲಿಯ ಐಯಪ್ಪ ಕಥೆಗೆ -೧೯೯೬ರಲ್ಲಿ
  5. ಸಂಕ್ರಮಣ ಪ್ರಶಸ್ತಿ -ಗೋದಾನ ಮತ್ತು ಜೀತ ಕಥೆಗೆ-೧೯೮೫ರಲ್ಲಿ
  6. ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ - ಸಮಾಜ ಕಲ್ಯಾಣ ಇಲಾಖೆ- ಕರ್ನಾಟಕ ಸರ್ಕಾರ
  7. ಪಿಎಚ್.ಡಿ ಮಹಾಪ್ರಬಂಧಕ್ಕೆ ಬಂಗಾರದ ಪದಕ- ಕರ್ನಾಟಕ ವಿಶ್ವವಿದ್ಯಾನಿಲಯ- ಧಾರವಾಡ- ೧೯೮೭ರಲ್ಲಿ
  8. ಕರ್ನಾಟಕ ಜಾನಪದ ಟ್ರಸ್ಟ್ ಮೊದಲ ಬಹುಮಾನ ವಸಂತೋತ್ಸವ ಹೋಳಿ ಮತ್ತು....ಲೇಖನಕ್ಕೆ -೧೯೮೭ರಲ್ಲಿ
  9. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಸಮಗ್ರ ಸಾಹಿತ್ಯಕ್ಕೆ-೨೦೦೨
  10. ಜಿ.ಶಂ.ಪ ಜಾನಪದ ಪ್ರಶಸ್ತಿ- ಕನ್ನಡ ಸಾಹಿತ್ಯ ಪರಿಷತ್,ಮಂಡ್ಯ-೨೦೦೩ರಲ್ಲಿ

ಸ್ವೀಕರಿಸದ ಘೋಷಿತ ಪ್ರಶಸ್ತಿಗಳು

  1. ಹಿಂದಿ ಮಾರ್ತಾಂಡ್ ಪ್ರಶಸ್ತಿ -೨೦೦೪ ಭಾರತೀಯ ಪರಿಷದ್ ಪ್ರಮಾಣ್ ಇಲಹಬಾದ್
  2. ಇಂಟರ್ ನ್ಯಾಷಿನಲ್ ಲೀಡರ್ ಶಿಫ್ ಅವಾರ್ಡ್ - ೧೯೯೮ - ಅಮೆರಿಕನ್ ಬಯಾಗ್ರಫಿಕಲ್ ಇನ್ಷ್ಟಿಟ್ಯೂಟ್ ಯು.ಎಸ್.ಎ
  3. ಶಿಕ್ಷಣ ರತ್ನ ಪ್ರಶಸ್ತಿ - ೨೦೦೭ -ನವದೆಹಲಿ, ಇಂಡಿಯಾ - ಇಂಟರ್ ನ್ಯಾಷನಲ್ ಫ್ರೆಂಡ್ ಶಿಫ್ ಸೊಸೈಟಿ
  4. ರಾಷ್ಟ್ರೀಯ ಗೌರವ ಪ್ರಶಸ್ತಿ - ೨೦೦೯ -ನವದೆಹಲಿ, ಇಂಡಿಯಾ - ಇಂಟರ್ ನ್ಯಾಷನಲ್ ಫ್ರೆಂಡ್ ಶಿಫ್ ಸೊಸೈಟಿ
  5. ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ ಪ್ರಶಸ್ತಿ - ೨೦೦೯ - ನವದೆಹಲಿ, ಇಂಟರ್ ನ್ಯಾಷನಲ್ ಪಬ್ಲಿಷಿಂಗ್ ಹೌಸ್
  6. ಟ್ವೆಂಟಿಟೆನ್ ನ್ಯಾಷನಲ್ ಅಕಾಡೆಮಿ ಅವಾರ್ಡ್ ಫಾರ್ ಲಿಟರೇಚರ್ - ೨೦೧೦ ಅಕಾಡೆಮಿ ಆಫ್ ಬೆಂಗಾಲಿ ಪೊಯೆಟ್ರಿ

ಆಕರ ಗ್ರಂಥ

  • ಗೌರ್ಮೆಂಟ್ ಬ್ರಾಹ್ಮಣ (ಆತ್ಮಕಥನ)- ಡಾ.ಅರವಿಂದ ಮಾಲಗತ್ತಿ
  • ಮೂಕನಿಗೆ ಬಾಯಿ ಬಂದಾಗ - ಡಾ.ಅರವಿಂದ ಮಾಲಗತ್ತಿ

ಉಲ್ಲೇಖಗಳು

  1. "Republikslot: Daftar 10 Situs Judi Slot Dan Casino Online Terbaik". Archived from the original on 2016-03-05. Retrieved 2015-08-10.
  2. https://plus.google Archived 2015-06-21 ವೇಬ್ಯಾಕ್ ಮೆಷಿನ್ ನಲ್ಲಿ.. com/110335545443162356965
  3. "ಆರ್ಕೈವ್ ನಕಲು". Archived from the original on 2015-03-17. Retrieved 2015-08-12.
  4. https://www.youtube.com/watch?v=0HzH5 TueKk4
  5. http://mysoreuniversity.org/dr-aravinda-malagatti/ index. html
  6. "Muraleedhara upadhya hiriadka: ಹುಸಿ ಬಿತ್ತುವ ಸಂಶೋಧಕರ ಬಾಯ್ಮುಚ್ಚಿಸಿ: ಮಾಲಗತ್ತಿ". 8 June 2013.
  7. "Aravind Malagatti: Government Brahmana AutoBiography".
  8. Kundu, Manujendra (2008). "Reviewed work: Government Brahmana, Aravind Malagatti, Dharani Devi Malagatti, Janet Vucinich, N. Subramanya". Social Scientist. 36 (7/8): 66–69. JSTOR 27644290.
  9. http://kanaja.in/ebook/index.php/e-book/2017-10-11-07-52-56
  10. http://www. prajavani.net/ news/article/ 2013/02/18/151929. html
  11. "ಆರ್ಕೈವ್ ನಕಲು". Archived from the original on 2016-06-02. Retrieved 2015-08-15.
  12. "ಆರ್ಕೈವ್ ನಕಲು". Archived from the original on 2016-03-04. Retrieved 2015-08-19.
  13. "Malagati prominent dalit writer in Kannada : CPK". 30 October 2011.