ಡಾ.ಧರಣಿದೇವಿ ಮಾಲಗತ್ತಿ ಅವರು ಕವಿಯಾಗಿ, ಮಹಿಳಾಪರ ಸಾಹಿತಿಯಾಗಿ, ಪೊಲೀಸ್ ಇಲಾಖೆಯಲ್ಲಿ ಡಿ.ವೈ.ಎಸ್.ಪಿಯಾಗಿ ಕರ್ತವ್ಯ ನಿರ್ವಹಿಸುತ್ತಾ, ಅದರೊಂದಿಗೆ ಸಾಹಿತ್ಯಿಕ ಸೃಜನಶೀಲತೆಯನ್ನು ಮೈಗೂಡಿಸಿಕೊಂಡು, ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಒಳ್ಳೆಯ ವಿಚಾರ ಪೂರ್ಣ ಕೃತಿಗಳನ್ನು ನೀಡಿ ಸಾಹಿತ್ಯ ವಲಯವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಇವರು ಹಲವಾರು ಕಥಾಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.[೧] ಪ್ರಸ್ತುತ ಇವರು ಭಾರತೀಯ ಪೋಲಿಸ್ ಐ.ಪಿ.ಎಸ್ ಇಲಾಖೆಯಲ್ಲಿ ಐ.ಪಿ.ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ.ಧರಣಿದೇವಿ ಮಾಲಗತ್ತಿ
ಜನನಧರಣಿದೇವಿ
೧೯೬೭
ಬಂಟ್ವಾಳ ತಾಲ್ಲೂಕಿನ 'ಮಂಚಿ' ಎಂಬ ಗ್ರಾಮ, ಕರ್ನಾಟಕ, ಭಾರತ
ವೃತ್ತಿಕವಿ, ಸಂಶೋಧಕಿ, ಸಾಹಿತ್ಯ ವಿಮರ್ಶಕಿ, ಚಿಂತಕಿ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸMA, M.com, Ph.D
ಪ್ರಮುಖ ಪ್ರಶಸ್ತಿ(ಗಳು)ದೇಜಗೌ ಸಾಹಿತ್ಯ ಪ್ರಶಸ್ತಿ - ೨೦೧೨, ಧಾರವಾಡದ ದತ್ತಿ ಬಹುಮಾನ - ೨೦೦೫, ಗೋರೂರು ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಎಚ್.ನರಸಿಂಹಯ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿ.

ಧರಣಿದೇವಿ ಅವರ ಸಂಕ್ಷಿಪ್ತ ಪರಿಚಯಸಂಪಾದಿಸಿ

 • ಡಾ.ಧರಣಿದೇವಿ ಮಾಲಗತ್ತಿ ಅವರು ಜೂನ್ ೧, ೧೯೬೭ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ 'ಮಂಚಿ' ಎಂಬ ಗ್ರಾಮದಲ್ಲಿ ಜನಿಸಿದವರು. ತಂದೆ ಪಿ.ದೂಮಣ್ಣ ರೈ ಶಾಲಾ ಮುಖ್ಯೋಪಧ್ಯಾಯರು. ತಾಯಿ ದೇವಕಿ ರೈ. ಈ ದಂಪತಿಗಳಿಗೆ ಒಟ್ಟು ಐದು ಜನ ಮಕ್ಕಳು. ಅವರಲ್ಲಿ ಧರಣಿದೇವಿ ಅವರು ಮೂರನೆ ಮಗಳು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಬಂಟ್ವಾಳದಲ್ಲಿ ಪೂರೈಸಿದರು.
 • ಉನ್ನತ ಶಿಕ್ಷಣಕ್ಕೆ ಮೈಸೂರಿಗೆ ಬಂದು, ಬಿ.ಬಿ.ಎಂ, ಎಂ.ಕಾಂ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ, ನಿರ್ವಹಣಾಶಾಸ್ತ್ರ ವಿಭಾಗದಲ್ಲಿ ಡಾಕ್ಟರೇಟ್ ಪದವಿಯನ್ನು ಮೈಸೂರು ವಿಶ್ವ ವಿದ್ಯಾನಿಲಯದಿಂದ ಪಡೆದು, ಆ ನಂತರದ ದಿನಗಳಲ್ಲಿ ಮಂಗಳೂರು ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಗೌರವ ಉಪನ್ಯಾಸಕರಾಗಿ ಒಂದು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಪತಿ ಡಾ.ಅರವಿಂದ ಮಾಲಗತ್ತಿ, ಮಕ್ಕಳು ದಕ್ಷ ಮತ್ತು ಯಕ್ಷ.
 • ಧರಣಿದೇವಿ ಅವರು ಬೋಧನೆಯೊಂದಿಗೆ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳು ನಡೆಸುವ "ಐ.ಎ.ಎಸ್ ಹಾಗೂ ಕೆ.ಎ.ಎಸ್" ಹುದ್ದೆಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ೨೦೦೬ರಿಂದ ಪೊಲೀಸ್ ಇಲಾಖೆಯಲ್ಲಿ ಡಿ.ವೈ.ಎಸ್.ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
 • ಅವರೇ ಹೇಳುವಂತೆ- "ಇದೊಂದು ಸಮಾಜಸೇವೆ. ಈ ಹುದ್ದೆಯಿಂದ ಜನಸಾಮಾನ್ಯರನ್ನೂ ಅತ್ಯಂತ ಸಮೀಪದಿಂದ ನೋಡಿ, ಅವರ ಕಷ್ಟ-ಸುಖಗಳಲ್ಲಿ ಸಮಭಾಗಿಯಾಗಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದೇನೆ." ಪ್ರಸ್ತುತ ಮೈಸೂರಿನಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕರಾಗಿ (ಎ.ಎಸ್.ಪಿ)/ಪೋಲಿಸ್ ಸೂಪರಿಟೆಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ವೃತ್ತಿ ಜೀವನ/ಸೇವಾನುಭವಗಳುಸಂಪಾದಿಸಿ

 1. ಬಿ.ಬಿ.ಎಂ ಮತ್ತು ಎಂ.ಕಾಂ ವಿಭಾಗದಲ್ಲಿ ೧೩ ವರ್ಷಗಳ ಕಾಲ ಉಪನ್ಯಾಸಕರಾಗಿದ್ದರು.
 2. ಸಂಶೋಧನಾ ಸಹಾಯಕಿಯಾಗಿ - ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ- ೧೯೯೦-೧೯೯೩
 3. ಉಪನ್ಯಾಸಕರು - ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು - ೧೯೯೧-೧೯೯೩
 4. ಉಪನ್ಯಾಸಕರು - ಸೈಂಟ್ ಅಲೋಸಿಯಸ್ ಕಾಲೇಜು ಮಂಗಳೂರು- ೧೯೯೩-೧೯೯೪
 5. ಉಪನ್ಯಾಸಕರು - ಮಹಾರಾಜಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು - ೧೯೯೭
 6. ಉಪನ್ಯಾಸಕರು - ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾನಿಲಯ ಮೈಸೂರು - ೧೯೯೮-೨೦೦೬
 7. ಡಿವೈಎಸ್ ಪಿ ಹುದ್ದೆ - ಕರ್ನಾಟಕ ರಾಜ್ಯ ಪೋಲಿಸ್-ಕೆ.ಪಿ.ಎಸ್.ಸಿ ಪರೀಕ್ಷೆಯ ಮೂಲಕ -೨೦೦೬
 8. ಕೊಳ್ಳೆಗಾಲದಲ್ಲಿ ಡಿವೈಎಸ್ ಪಿಯಾಗಿ ಹಾಗೂ ಐ.ಜಿ.ಪಿ ದಕ್ಷಿಣ ವಲಯದ ಕಛೇರಿಯ ಇಲಾಖಾ ವಿಚಾರಣೆಯ ಡಿವೈಎಸ್ ಪಿಯಾಗಿ ಕರ್ತವ್ಯ ನಿರ್ವಹಣೆ - ೨೦೦೮
 9. ೨೦೧೨ ರ ಆಗಸ್ಟ್ ನಲ್ಲಿ ಸೂಪರಿಟೆಂಡೆಂಟ್ ಆಫ್ ಪೋಲಿಸ್ ಆಗಿ ಬಡ್ತಿ ಹೊಂದಿ ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕರಾಗಿ (ಎ.ಎಸ್.ಪಿ) ಕರ್ತವ್ಯ ನಿರ್ವಹಣೆ.

ಬರಹ/ಕೃತಿಗಳುಸಂಪಾದಿಸಿ

ಇದುವರೆವಿಗೆ ಧರಣಿದೇವಿ ಅವರು ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ಅವುಗಳೆಂದರೆ-

ಅಂಕಣ ಸಾಹಿತ್ಯ ಕೃತಿಗಳುಸಂಪಾದಿಸಿ

 1. ದಟ್ಟ ಧರಣಿ - ೨೦೦೫
 2. ಮಾನಿಷಾದ - ೨೦೦೯
 3. ಇಳೆಯ ಕಣ್ಣು - ೨೦೧೦
 4. ದಹರಾಕಾಶ - ೨೦೧೨

ಕವನ ಸಂಕಲನಸಂಪಾದಿಸಿ

 1. ಬ್ರೆಡ್ ಜಾಮ್ - ೧೯೯೪
 2. ಈವುರಿವ ದಿವ - ೨೦೦೪

ಸ್ತ್ರೀವಾದ ಕೃತಿಸಂಪಾದಿಸಿ

 1. ಸ್ತ್ರೀವಾದ ಮತ್ತು ಭಾರತೀಯತೆ - ೧೯೯೮
 2. ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದ - ೨೦೧೦

ವಿಚಾರ ವಿಮರ್ಶೆಸಂಪಾದಿಸಿ

 1. ಸಾಹಿತ್ಯ ವಾಣಿಜ್ಯ ಮತ್ತು ಮಹಿಳಾ ಪ್ರಜ್ಞೆ - ೨೦೦೪

ಸಂಶೋಧನಾತ್ಮಕ ಕೃತಿಸಂಪಾದಿಸಿ

 • ಡಾ.ಬಿ.ಆರ್.ಅಂಬೇಡ್ಕರ್ ಆನ್ ವುಮೆನ್ ಇಮ್ಯಾಜಿನೇಷನ್ - ೨೦೦೫

ಸಂಪಾದನೆಸಂಪಾದಿಸಿ

 • ವಾಟ್ ಗಾಂಧಿ ಸೇಸ್ ಅಬೌಟ್ ಅಂಬೇಡ್ಕರ್ - ೨೦೦೦

ಅನುವಾದಸಂಪಾದಿಸಿ

 • ಗೌರ್ಮೆಂಟ್ ಬ್ರಾಹ್ಮಣ - ಆಂಗ್ಲಭಾಷೆಗೆ - ೨೦೦೬

ಸಂಶೋಧನಾ ಮಹಾಪ್ರಬಂಧಸಂಪಾದಿಸಿ

 • ಇಂಟಿಕೆಸೀಸ್ ಆಫ್ ಮಾರ್ಕೆಟಿಂಗ್ ಆಫ್ ಫುಡ್ ಆಂಡ್ ಬೆವರೇಜಿಸ್

ವಯಸ್ಕರ ಶಿಕ್ಷಣ ಕೃತಿಸಂಪಾದಿಸಿ

 • ತುಳುನಾಡ ಸಿರಿ

ಅಭಿನಂದನಾ ಗ್ರಂಥಸಂಪಾದಿಸಿ

 • ಧರಣಿ ಹೆಜ್ಜೆಯ ಸದ್ದು

ಮಹಾಕಾವ್ಯಸಂಪಾದಿಸಿ

 • ಇಳಾಭಾರತಂ -ದಿನಾಂಕ:೩೦-೧೦-೨೦೧೪ ರಂದು ಡಾ.ಎಸ್.ಎಲ್.ಭೈರಪ್ಪ ಅವರಿಂದ ಈ ಕೃತಿ ಲೋಕಾರ್ಪಣವಾಯಿತು. ಈ ಕೃತಿ ನಿರ್ಮಾಣಕ್ಕೆ ೧ ದಶಕಗಳಾಗಿದೆ.[೨]

ಇತರೆ ಅನುಭವಸಂಪಾದಿಸಿ

 1. ಅಂಕಣ ಬರಹ- ಪ್ರಜಾವಾಣಿ - ೨೦೦೪-೨೦೦೫
 2. ಅಂಕಣ ಬರಹ - ಉದಯವಾಣಿ - ೨೦೦೯-೨೦೧೧
 3. ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಮಂಡನೆ - ೨೦೧೧
 4. ಸಂಪಾದಕರು - ಸಾಹಿತ್ಯ ಸಂಗಾತಿ ( ತ್ರೈಮಾಸಿಕ ಪತ್ರಿಕೆ) - ೧೯೯೨-೧೯೯೪

ಪ್ರಶಸ್ತಿ/ ಗೌರವ ಪುರಸ್ಕಾರಗಳುಸಂಪಾದಿಸಿ

 1. ದೇಜಗೌ ಸಾಹಿತ್ಯ ಪ್ರಶಸ್ತಿ - ೨೦೧೨
 2. ಧಾರವಾಡದ ದತ್ತಿ ಬಹುಮಾನ - ೨೦೦೫
 3. ಬೆಂಗಳೂರಿನ ದತ್ತಿ ಬಹುಮಾನ - ೨೦೦೯
 4. ಗೊರೂರು ಪ್ರಶಸ್ತಿ - ಸ್ತ್ರೀವಾದ ಮತ್ತು ಭಾರತೀಯತೆ-
 5. ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ -ಸ್ತ್ರೀವಾದ ಮತ್ತು ಭಾರತೀಯತೆ
 6. ಮಾಣಿಕಬಾಯಿ ಪಾಟೀಲ ಪ್ರಶಸ್ತಿ -ಸ್ತ್ರೀವಾದ ಮತ್ತು ಭಾರತೀಯತೆ
 7. ನೀಲಗಂಗಾ ದತ್ತಿ ಬಹುಮಾನ -ಸ್ತ್ರೀವಾದ ಮತ್ತು ಭಾರತೀಯತೆ
 8. ಗೀತಾದೇಸಾಯಿ ದತ್ತಿ ಬಹುಮಾನ -ಸ್ತ್ರೀವಾದ ಮತ್ತು ಭಾರತೀಯತೆ
 9. ಎಚ್.ನರಸಿಂಹಯ್ಯ ಪ್ರಶಸ್ತಿ - ಸಾಹಿತ್ಯ ವಾಣಿಜ್ಯ ಮತ್ತು ಮಹಿಳಾ ಪ್ರಜ್ಞೆ
 10. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ಈವುರಿವ ದಿವ
 11. ಸಾಹಿತ್ಯ ದಂಪತಿ ಪ್ರಶಸ್ತಿ -ಸಮಗ್ರ ಸಾಹಿತ್ಯಕ್ಕೆ
 12. ಗೆಳೆಯರ ಗುಂಪು ಪ್ರಶಸ್ತಿ - ಇಳಾಭಾರತಂ ಮಹಾಕಾವ್ಯ
 13. ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ[೩]

ಪೂರಕ ಮಾಹಿತಿಸಂಪಾದಿಸಿ

 • ಪ್ರಜಾವಾಣಿ ಮೆಟ್ರೊ ಲೇಖನ ಡಾ.ಧರಣಿದೇವಿ ಮಾಲಗತ್ತಿ ಅವರಿಗೆ ೨೦೧೧-೧೨ನೇ ಸಾಲಿನ "ದೇಜಗೌ ಸಾಹಿತ್ಯ ಪ್ರಶಸ್ತಿ" ಪ್ರದಾನ -ಬಸವರಾಜ ನಾಗವ್ವನವರ್
 • ಬ್ರೆಡ್ ಜಾಮ್ - ಡಾ.ಧರಣಿದೇವಿ ಮಾಲಗತ್ತಿ
 • ಧರಣಿ ಹೆಜ್ಜೆಯ ಸದ್ದು -ಸಂ.ಕವಿತಾ ರೈ

ಉಲ್ಲೇಖಗಳುಸಂಪಾದಿಸಿ

[೪][೫][೬][೭][೮][೯]

ಬಾಹ್ಯಕೊಂಡಿಗಳುಸಂಪಾದಿಸಿ

 1. http://kannada.oneindia.com/literature/articles/2004/220304kathe-results.html
 2. http://mupadhyahiri.blogspot.in/search/label/%E0%B2%A7%E0%B2%B0%E0%B2%A3%E0%B2%BF%E0%B2%A6%E0%B3%87%E0%B2%B5%E0%B2%BF%20%E0%B2%AE%E0%B2%BE%E0%B2%B2%E0%B2%97%E0%B2%A4%E0%B3%8D%E0%B2%A4%E0%B2%BF
 3. http://kannadamma.net/?p=120041
 4. ಭಾವನಾತ್ಮಕ ಬಂಧನದಲ್ಲಿ ಮಹಿಳೆ: ಡಾ. ಧರಣಿದೇವಿ
 5. http://www.kannadaprabha.com/districts/mysore/%E0%B2%AD%E0%B2%BE%E0%B2%B5%E0%B2%A8%E0%B2%BE%E0%B2%A4%E0%B3%8D%E0%B2%AE%E0%B2%95-%E0%B2%AC%E0%B2%82%E0%B2%A7%E0%B2%A8%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%AE%E0%B2%B9%E0%B2%BF%E0%B2%B3%E0%B3%86-%E0%B2%A1%E0%B2%BE-%E0%B2%A7%E0%B2%B0%E0%B2%A3%E0%B2%BF%E0%B2%A6%E0%B3%87%E0%B2%B5%E0%B2%BF/175276.html
 6. http://pvhome.yodasoft.com/article/%E0%B2%AE%E0%B2%95%E0%B3%8D%E0%B2%95%E0%B2%B3-%E0%B2%95%E0%B2%B2%E0%B2%BF%E0%B2%95%E0%B3%86%E0%B2%97%E0%B3%86-%E0%B2%A8%E0%B2%BF%E0%B2%B0%E0%B3%8D%E0%B2%AC%E0%B2%82%E0%B2%A7-%E0%B2%AC%E0%B3%87%E0%B2%A1-%E0%B2%A7%E0%B2%B0%E0%B2%A3%E0%B2%BF%E0%B2%A6%E0%B3%87%E0%B2%B5%E0%B2%BF
 7. http://www.newskannada.com/karavaliinner.php?news=rs&nid=10370
 8. http://www.newskannada.com/karavaliinner.php?news=rs&nid=9328
 9. http://www.newskannada.com/karavaliinner.php?news=rs&nid=9076