ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ)
ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೃದಯ ಭಾಗದಲ್ಲಿದೆ. ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಈ ಕಾಲೇಜು ಪ್ರಮುಖವಾದುದು ಎಂದು ಗುರುತಿಸಿಕೊಂಡಿದೆ. ಇತ್ತೀಚೆಗೆ ನ್ಯಾಕ್ ೩.೬೨ ಅಂಕ ಪಡೆದು ಉತ್ತಮ ಶ್ರೇಣಿಯಲ್ಲಿ ಮಾನ್ಯತೆ ಪಡೆದು, ರಾಜ್ಯದ ಪ್ರಮುಖ ೫ ಸಂಸ್ಥೆಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ದೇಶದ ೧೦೦ ಕಾಲೇಜುಗಳಲ್ಲಿ ಸಂತ ಅಲೋಶಿಯಸ್ ಕಾಲೇಜು ಗುರುತಿಸಿಕೊಂಡಿದೆ.[೧]
ಸಂತ ಅಲೋಶಿಯಸ್ | |
---|---|
ಧ್ಯೇಯ | Lucet et Ardet (Latin) |
ಧ್ಯೇಯ (ಕನ್ನಡ) | ಸ್ಫೂರ್ತಿಗಾಗಿ ಹೊಳೆಯಿರಿ (ಆಂಗ್ಲದಲ್ಲಿ ಧ್ಯೇಯ: Shine to Enkindle) |
ಸ್ಥಾಪನೆ | 1880 |
ಪ್ರಕಾರ | ಖಾಸಗಿ ಸಂಶೋಧನೆ ಲಾಭರಹಿತ ಸಹ-ಶಿಕ್ಷಣ ವಿಶ್ವವಿದ್ಯಾಲಯ |
ಕುಲಪತಿಗಳು | Rev. Fr. Dionysius Vaz SJ |
ಉಪಕುಲಪತಿಗಳು | Rev. Dr. Praveen Martis SJ |
ಪದವಿ ಶಿಕ್ಷಣ | 5436 |
ಸ್ನಾತಕೋತ್ತರ ಶಿಕ್ಷಣ | 1587 |
ಸ್ಥಳ | MSS ರಸ್ತೆ (ಹಿಂದೆ ಲೈಟ್‌ಹೌಸ್ ಬೆಟ್ಟದ ರಸ್ತೆ ಎಂದು ಕರೆಯಲಾಗುತ್ತಿತ್ತು), ಕೋಡಿಯಾಲ್ ಬೈಲ್, ಮಂಗಳೂರು, ಕರ್ನಾಟಕ, ಭಾರತ |
ಆವರಣ | ನಗರ, 37 ಎಕರೆ |
ಅಂತರಜಾಲ ತಾಣ | Official website |
ಕಾಲೇಜಿನ ಚರಿತ್ರೆ
ಬದಲಾಯಿಸಿಸಂತ ಅಲೋಶಿಯಸ್ ಕಾಲೇಜು 1880ರಲ್ಲಿ ಆರಂಭವಾಯಿತು. ಸಂತ ಅಲೋಶಿಯಸ್ ಕಾಲೇಜು ಎಂಬ ಹೆಸರಿನಲ್ಲಿ ಆರಂಭವಾದ ಈ ಸಂಸ್ಥೆಯು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹೀಗೆ ಹಲವು ಸಂಸ್ಥೆಗಳನ್ನು ಹೊಂದಿದೆ. ಈ ಕಾಲೇಜಿಗೆ ೧೩೬ ವರ್ಷಗಳ ಇತಿಹಾಸವಿದೆ. 2007ರಲ್ಲಿ ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರಸ್ತುತ ಈ ಕಾಲೇಜಿನ ಪದವಿ ತರಗತಿಗಳಲ್ಲಿ ೪೦00ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.
ಸಂತ ಅಲೋಶಿಯಸ್ ಕಾಲೇಜು ಈಜುಕೊಳ
ಬದಲಾಯಿಸಿಕಾಲೇಜಿನ ನಿಕಾಯಗಳು(Faculties)
ಬದಲಾಯಿಸಿಸಂತ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಒಟ್ಟು ಆರು ನಿಕಾಯಗಳಿವೆ.
- ಕಲಾ ಅಧ್ಯಯನ ನಿಕಾಯ
- ವಿಜ್ಞಾನ ಅಧ್ಯಯನ ನಿಕಾಯ
- ವಾಣಿಜ್ಯ ಅಧ್ಯಯನ ನಿಕಾಯ
- ವ್ಯವಹಾರ ಅಧ್ಯಯನ ನಿಕಾಯ
- ವಿದ್ಯುನ್ಮಾನ ಅಧ್ಯಯನ ನಿಕಾಯ
- ಸಮಾಜಕಾರ್ಯ ಅಧ್ಯಯನ ನಿಕಾಯ
- ಬಿಸಿಎ, ಗಣಕ ವಿಜ್ಞಾನ ಮತ್ತು ಅನಿಮೇಶನ್ ನಿಕಾಯ
ವಿಭಾಗಗಳು
ಬದಲಾಯಿಸಿಸಂತ ಅಲೋಶಿಯಸ್ ಕಾಲೇಜಿನ ಆರು ನಿಕಾಯಗಳಲ್ಲಿ ಒಟ್ಟು ೨೮ ವಿಭಾಗಗಳಿವೆ.
- ಕಲಾ ಅಧ್ಯಯನ ನಿಕಾಯದಲ್ಲಿ ೧೦ ವಿಭಾಗಗಳಿವೆ.[೨]
- ಕನ್ನಡ ಐಚ್ಛಿಕ
- ಇಂಗ್ಲಿಷ್ ಐಚ್ಛಿಕ
- ಸಂವಹನ ಇಂಗ್ಲಿಷ್
- ಇತಿಹಾಸ
- ಅರ್ಥಶಾಸ್ತ್ರ
- ರಾಜ್ಯಶಾಸ್ತ್ರ
- ಸಮಾಜಶಾಸ್ತ್ರ
- ಮನಶ್ಯಾಸ್ತ್ರ
- ಪತ್ರಿಕೋಧ್ಯಮ
- ಕಂಪ್ಯೂಟರ್ ಅನಿಮೇಶನ್
- ವಿಜ್ಞಾನ ನಿಕಾಯದಲ್ಲಿ ೧೧ ವಿಭಾಗಗಳಿವೆ.
- ಭೌತಶಾಸ್ತ್ರ
- ರಸಾಯನಶಾಸ್ತ್ರ
- ಲೆಕ್ಕಶಾಸ್ತ್ರ
- ಸಂಖ್ಯಾಶಾಸ್ತ್ರ
- ವಿದ್ಯುನ್ಮಾನ
- ಕಂಪ್ಯೂಟರ್ ವಿಜ್ಞಾನ
- ಕಂಪ್ಯೂಟರ್ ಅನಿಮೇಶನ್
- ಮೈಕ್ರಾಬಯಾಲಜಿ
- ಬಯೋಕೆಮಿಸ್ಟ್ರಿ
- ಬಯೋಟೆಕ್ನಾಲಜಿ
- ಜೀವಶಾಸ್ತ್ರ
- ಸಸ್ಯಶಾಸ್ತ್ರ
ಛಾಯಾಂಕಣ
ಬದಲಾಯಿಸಿ-
St Aloysius Chapel
-
St Aloysius Deemed to be University Building
ಉಲ್ಲೇಖಗಳು
ಬದಲಾಯಿಸಿ- ↑ http://www.staloysius.edu.in/web/guest;jsessionid=73AD96591437BD8D01DE48B2908B3F3F[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on 2014-06-13. Retrieved 2015-06-10.