ಮಹಾರಾಜ ಕಾಲೇಜು
ಮಹಾರಾಜ ಕಾಲೇಜು ದಕ್ಷಿಣ ಭಾರತದ ಹಳೆಯ ಮಹಾವಿದ್ಯಾಲಯಗಳಲ್ಲಿ ಒಂದಾಗಿದೆ. ಇದು ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಭಾರತದ ರಾಜ (ನಾಲ್ವಡಿ ಕೃಷ್ಣರಾಜ ಒಡೆಯರು)ರೊಬ್ಬರಿಂದ ಉನ್ನತ ಶಿಕ್ಷಣಕ್ಕಾಗಿ ನಿರ್ಮಿಸಲ್ಪಟ್ಟ ಮೊದಲ ಕಾಲೇಜು. ಮೈಸೂರು ಸಂಸ್ಥಾನ ೧೮೫೩ ರಲ್ಲಿ ಮೈಸೂರಿನ ಮಹಾರಾಜ ಕಾಲೇಜನ್ನು ಆರಂಭಿಸಿತು.
ಧ್ಯೇಯ | 'ಮನುಷ್ಯ ಜಾತಿ ತಾನೊಂದೆ ವಲಂ' |
---|---|
ಪ್ರಕಾರ | ಸರಕಾರಿ ಶಿಕ್ಷಣ ಸಂಸ್ಥೆ |
ಸ್ಥಾಪನೆ | ೧೮೫೩ |
ಕುಲಪತಿಗಳು | ರಾಜ್ಯಪಾಲರು ಕರ್ನಾಟಕ ರಾಜ್ಯ ಸರ್ಕಾರ |
ಉಪ-ಕುಲಪತಿಗಳು | ಪ್ರೊ. ಹೇಮಂತ್ ಕುಮಾರ್ |
ಪ್ರಿನ್ಸಿಪಾಲ್ | ಪ್ರೊ. ಸಿ. ಪಿ. ಸುನೀತ |
ವಿದ್ಯಾರ್ಥಿಗಳು | ೩೦೦೦ |
ಸ್ಥಳ | ಮೈಸೂರು, ಕರ್ನಾಟಕ, ಭಾರತ |
ಮಾನ್ಯತೆಗಳು | ಮೈಸೂರು ವಿಶ್ವವಿದ್ಯಾಲಯ |
ಜಾಲತಾಣ | www |
ಮಹಾರಾಜ ಕಾಲೇಜಿನ ಹುಟ್ಟು-ಬೆಳವಣಿಗೆ
ಬದಲಾಯಿಸಿ- ಮೈಸೂರು ಸಂಸ್ಥಾನ ೧೮೫೩ ರಲ್ಲಿ ಮೈಸೂರಿನ ಮಹಾರಾಜ ಕಾಲೇಜನ್ನು ಆರಂಭಿಸಿತು. ಮೊದಲ ಒಂದೂವರೆ ದಶಕಗಳ ಕಾಲ ಮೈಸೂರಿನ ಮಹಾರಾಜ ಕಾಲೇಜು, ಮದ್ರಾಸ್ ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟಿತ್ತು. ಒಂದರ್ಥದಲ್ಲಿ ಮಹಾರಾಜ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯದ ತಾಯಿಬೇರು. ಭವ್ಯ ಇತಿಹಾಸ, ಶ್ರೇಷ್ಠ ಪರಂಪರೆಯುಳ್ಳ ಈ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯಕ್ಕೂ ಮೊದಲೇ ಹುಟ್ಟಿದ್ದು. ಇದು ಮದ್ರಾಸ್ ವಿಶ್ವವಿದ್ಯಾನಿಲಯದ ಅಂಗ ಕಾಲೇಜುಗಳನ್ನು ಒಂದಾಗಿತ್ತು. ಇದನ್ನು ೧೯೧೬ರಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಲಾಯಿತು. ಇದು ದಕ್ಷಿಣ ಭಾರತದ ಹಳೆಯ ಮಹಾವಿದ್ಯಾಲಯಗಳಲ್ಲಿ ಒಂದಾಗಿದೆ.
- ಇದು ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಭಾರತದ ರಾಜ (ನಾಲ್ವಡಿ ಕೃಷ್ಣರಾಜ ಒಡೆಯರು) ರೊಬ್ಬರಿಂದ ಉನ್ನತ ಶಿಕ್ಷಣಕ್ಕಾಗಿ ನಿರ್ಮಿಸಲ್ಪಟ್ಟ ಮೊದಲ ಕಾಲೇಜು. ಮುಂದೆ ಭಾರತದ ರಾಷ್ಟ್ರಪತಿಯಾದ ಡಾ ಎಸ್ ರಾಧಾಕೃಷ್ಣನ್ ಅವರು ಕಲ್ಕತ್ತಾಕ್ಕೆ ಹೋಗುವ ಮುನ್ನ, ತತ್ವಶಾಸ್ತ್ರವನ್ನು ಇಲ್ಲಿ ಒಂದು ವರ್ಷ ಕಲಿಸಿದರು.
- ಮಹಾರಾಜ ಕಾಲೇಜಿನ ಶಂಕುಸ್ಥಾಪನೆಯನ್ನು ಆಗ ಭಾರತಕ್ಕೆ ಭೇಟಿನೀಡಿದ ರಾಜಕುಮಾರ ಆಲ್ಬರ್ಟ್೧೮೮೯ ರ ನವೆಂಬರ್ ೨೭ರಂದು ಮಾಡಿದ್ದರು. ಮೈಸೂರಿನಲ್ಲಿನ ಬಹಳ ಹಿರಿಯ ಕಾಲೇಜೆಂಬ ಹೆಗ್ಗಳಿಕೆಗೆ ಮಹಾರಾಜ ಕಾಲೇಜು ಭಾಜನವಾಗಿದೆ. ಮೈಸೂರಿನ ಸಾಂಸ್ಕೃತಿಕ ಜೀವನಾಡಿ ಎನಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಶೈಕ್ಷಣಿಕ ಸಾಧನೆಯಲ್ಲಿ ಮಹಾರಾಜ ಕಾಲೇಜು ಮುಂಚೂಣಿಯಲ್ಲಿ ನಿಲ್ಲುತ್ತದೆ.
- ೧೯೧೮ ರಲ್ಲಿ ಮಹಾರಾಜ ಕಾಲೇಜಿನಲ್ಲಿ ಎಂ.ಎ ತರಗತಿಗಳು ಆರಂಭವಾದುವು. ಸುಮಾರು ೧೪೦ ವರ್ಷಗಳಿಂದಲೂ ಜ್ಞಾನದಾಹಿಗಳಿಗೆ ನಿರಂತರ ಜ್ಞಾನದಾಸೋಹವನ್ನು ನೀಡುತ್ತಲೇ ಬಂದಿದೆ. ಮಹಾರಾಜ ಕಾಲೇಜಿನ ವಿದ್ಯಾದೇಗುಲದಲ್ಲಿ ವ್ಯಾಸಂಗ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ಇಡೀ ಪ್ರಪಂಚದ ಮೂಲೆ ಮೂಲೆಯಲ್ಲೂ ವಿವಿಧ ಉನ್ನತ ಹುದ್ದೆಗಳನ್ನು ಮಾಡುತ್ತಾ ನೆಲೆಸಿದ್ದಾರೆ.
ಹಳೆಯ ಬೋಧಕವರ್ಗ
ಬದಲಾಯಿಸಿ- ಪ್ರೊ. ಕಟ್ಟಮಂಚಿ ರಾಮಲಿಂಗರೆಡ್ಡಿ
- ಪ್ರೊ. ವಿ.ಎಲ್. ಡಿಸೋಜಾ,
- ಡಾ ಸರ್ವಪಲ್ಲಿ ರಾಧಾಕೃಷ್ಣನ್.
- ಡಾ. ಕೆ.ವಿ. ಪುಟ್ಟಪ್ಪ
- ಟಿ.ಎಸ್.ವೆಂಕಣ್ಣಯ್ಯ
- ಬಿ.ಎಂ.ಶ್ರೀ,
- ಎ.ಆರ್.ಕೃಷ್ಣಶಾಸ್ತ್ರಿ,
- ಎಸ್. ಶ್ರೀಕಂಠ ಶಾಸ್ತ್ರಿ
- ತ.ಸು.ಶಾಮರಾಯ,
- ದೇ.ಜ.ಗೌ,
- ಡಾ.ಜಿ.ಎಸ್.ಶಿವರುದ್ರಪ್ಪ,
- ಉ.ಕಾ.ಸುಬ್ಬರಾವ್,
- ಎಸ್.ವಿ.ರಂಗಣ್ಣ,
- ಎ.ಎನ್.ಮೂರ್ತಿರಾವ್,
- ಪ್ರೊ. ಹಿರಣ್ಣಯ್ಯ, ಭಾರತೀಯ ಕಲೆ ಮತ್ತು ಸೌಂದರ್ಯಶಾಸ್ತ್ರದಲ್ಲಿ ವಿದ್ವಾಂಸ.
- ಪ್ರೊ. ಡಿ. ನರಸಿಂಹಯ್ಯ.
- ಎಚ್. ಅಣ್ಣೇಗೌಡ.
- ಪ್ರೊ.ಕೆ.ರಾಮದಾಸ್
- ಪಿ.ಕೆ.ರಾಜಶೇಖರ್
ಪ್ರಸಿದ್ಧ ಹಳೆಯ ವಿದ್ಯಾರ್ಥಿಗಳು
ಬದಲಾಯಿಸಿವಿಶೇಷತೆಗಳು
ಬದಲಾಯಿಸಿಮಹಾರಾಜ ಕಾಲೇಜಿನ ವಿಶೇಷತೆಗಳೆಂದರೆ ಅಲ್ಲಿ ಸಿಗಲಿರುವ ಸರ್ಕಾರಿ ಸೌಲಭ್ಯಗಳು ಹಾಗೂ ಪ್ರವೇಶ ದ್ವಾರದಲ್ಲಿರುವ ಮಂದಸ್ಮಿತ ವಾಗ್ದೇವಿಯ ಸುಂದರ ವಿಗ್ರಹ. ಮಹಾರಾಜ ಕಾಲೇಜಿನ ಕನ್ನಡ ಸಂಘ
- ಪಠ್ಯೇತರ ಚಟುವಟಿಕೆಗಳ ವೇದಿಕೆ
- ವಿದ್ಯಾರ್ಥಿನಿಲಯಗಳ ಸೌಲಭ್ಯಗಳು
- ಉಪಹಾರ ಮಂದಿರ
- ಗ್ರಂಥಾಲಯ ಮತ್ತು ವಾಚನಾಲಯ
- ಉಚಿತ ಆರೋಗ್ಯ ಕೇಂದ್ರ
- ಸಹಕಾರ ಸಂಘ
- ಕ್ರೀಡಾ ವ್ಯವಸ್ಥೆ
- ರಾಷ್ಟ್ರೀಯ ಯುವಸೇವಾದಳ [ಎನ್.ಸಿ.ಸಿ]
- ರಾಷ್ಟ್ರೀಯ ಸೇವಾ ಯೋಜನೆ [ಎನ್,ಎಸ್.ಎಸ್]
- ಮಧ್ಯ್ನಾನದ ಉಚಿತ ಲಘು ಉಪಹಾರ
- ವಿದ್ಯಾರ್ಥಿ ವೇತನಗಳು
- ಕಾಲೇಜಿನ ಶಿಸ್ತಿಗೆ ಸಂಬಂಧಿಸಿರುವ ನಿಯಮಗಳು
- ಕಡ್ಡಾಯ ಹಾಜರಾತಿಯ ನಿಯಮಗಳು
- ಶುಲ್ಕವಿವರಣೆ
- ಲೈಂಗಿಕ ದೌರ್ಜನ್ಯ/ಮಾನವ ಹಕ್ಕುಗಳ ಉಲ್ಲಂಘನೆ/ರ್ಯಾಗಿಂಗ್ ಘಟನೆಗಳಿಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಕ್ರಮಗಳು
ಶೈಕ್ಷಣಿಕ ಸಾಧನೆ
ಬದಲಾಯಿಸಿಮಹಾರಾಜ ಕಾಲೇಜು ತನ್ನ ಶೈಕ್ಷಣಿಕ ಸಾಧನೆಯಿಂದ ಬಹುದೊಡ್ಡ ಹೆಸರು ಮಾಡಿ ದೇಶ-ವಿದೇಶಗಳಲೆಲ್ಲಾ ಪ್ರಸಿದ್ದವಾಗಿದೆ. ಇಲ್ಲಿ ವ್ಯಾಸಂಗ ಮಾಡಲು ಇರುವಷ್ಟು ಪಠ್ಯ ವಿಷಯಗಳು ಬೇರ್ಯಾವ ಮೈಸೂರಿನ ವಿದ್ಯಾಸಂಸ್ಥೆಗಳಲ್ಲೂ ಪ್ರಾಯಶಃ ಇಲ್ಲ ಎನ್ನಲಾಗಿದೆ. ಸುಮಾರು ೨೫ಕ್ಕೂ ಹೆಚ್ಚು ಪಠ್ಯ ವಿಷಯಗಳನ್ನು ಇಲ್ಲಿ ಬೋಧಿಸಲಾಗುತ್ತದೆ. ಅವುಗಳಲ್ಲಿ ಬಹಳ ಪ್ರಮುಖವಾದುವುಗಳೆಂದರೆ-
- ಕನ್ನಡ
- ಇಂಗ್ಲಿಷ್
- ಸಂಸ್ಕೃತ
- ಉರ್ದು
- ಹಿಂದಿ
- ಇತಿಹಾಸ
- ಪತ್ರಿಕೋದ್ಯಮ
- ತತ್ವ್ತಶಾಸ್ತ್ರ
- ರಾಜ್ಯಶಾಸ್ತ್ರ
- ಸಮಾಜಶಾಸ್ತ್ರ
- ಅಪರಾಧಶಾಸ್ತ್ರ
- ಸಹಕಾರ
- ಮನಃಶಾಸ್ತ್ರ
- ಭೌಗೋಳಿಕಶಾಸ್ತ್ರ
- ವಾಣಿಜ್ಯಶಾಸ್ತ್ರ[ಬಿ.ಕಾಂ]
- ವ್ಯವಹಾರ ನಿರ್ವಹಣಾಶಾಸ್ತ್ರ[ಬಿ.ಬಿ.ಎಂ]
- ಅರ್ಥಶಾಸ್ತ್ರ
- ಜಾನಪದ
- ಪುರಾತತ್ವ್ತಹಾಗೂ ಉತ್ಖನನಶಾಸ್ತ್ರ
- ಮಾನವಶಾಸ್ತ್ರ
- ಗಣಕ ವಿಜ್ಞಾನ
-ಮೊದಲಾದುವು. ಇವಲ್ಲದೆ ತಮಿಳು. ತೆಲುಗು, ಫ್ರೆಂಚ್, ಪರ್ಷಿಯನ್ ಮುಂತಾದ ಭಾಷೆಗಳನ್ನು ಕಲಿಯಲು ಇಚ್ಛಿಸುವ ವಿದ್ಯಾರ್ಥಿಗಳು ಆ ಭಾಷೆಗಳನ್ನು ತಾವೇ ಸ್ವಂತಕ್ಕೆ ಓದಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಲಿಖಿತ ಪರೀಕ್ಷೆ ಬರೆಯಬಹುದು. ಇತ್ತೀಚೆಗೆ ಮಹಾರಾಜ ಕಾಲೇಜಿನಲ್ಲಿ ಕೆಲವು ಪಠ್ಯವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಬಹುದಾಗಿದೆ. ಈ ಕಾಲೇಜಿನಲ್ಲಿ ಸುಮಾರು ೨೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಪದವಿ ಪರೀಕ್ಷೆಯಲ್ಲಿ ಉನ್ನತ ರ್ಯಾಂಕುಗಳಲ್ಲಿ ಸಿಂಹಪಾಲನ್ನು ಪಡೆಯುತ್ತಿದ್ದಾರೆ
ವಿವಿಧ ಸಮಿತಿಗಳು
ಬದಲಾಯಿಸಿಕಾಲೇಜಿನ ಆಡಳಿತದ ಹಿತದೃಷ್ಠಿಯಿಂದ ಕಾಲೇಜಿನಲ್ಲಿ ಹಲವಾರು ಸಮಿತಿಗಳನ್ನು ಮಾಡಿಕೊಂಡು ಆ ಸಮಿತಿಗಳ ನೆರವು, ಸಹಕಾರದಿಂದ ಆಡಳಿತ ಕೆಲಸವನ್ನು ಸುಗಮ ಮಾಡಿಕೊಳ್ಳಲಾಗುತ್ತದೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ-
- ಪ್ರವೇಶಾತಿ
- ಯೋಜನೆ
- ಶೈಕ್ಷಣಿಕ
- ಶಿಸ್ತುಪಾಲನೆ
- ವಿದ್ಯಾರ್ಥಿ ಕ್ಷೇಮಪಾಲನೆ
- ಪಠ್ಯೇತರ ಚಟುವಟಿಕೆ
- ಕ್ರೀಡೆ
- ವಾರ್ಷಿಕ ಸಂಚಿಕೆ
- ಸ್ಥಾನಿಕಘಟಕ
- ವಾಚನಾಲಯ
- ಪರಿಸರ
- ನ್ಯಾಕ್ ಸಮಿತಿ
- ವೇಳಾಪಟ್ಟಿ
- ಖರೀದಿ
- ಮೂಲಭೂತ ಸೌಕರ್ಯ ಅಭಿವೃದ್ಧಿ
- ಹಾಜರಾತಿ
- ಕಾಲೇಜು ಆಡಳಿತ ಮಂಡಳಿ-ಮುಂತಾದುವು.
ವಿವಿಧ ದತ್ತಿಗಳು ಮತ್ತು ನಗದು ಬಹುಮಾನ
ಬದಲಾಯಿಸಿಮಹಾರಾಜ ಕಾಲೇಜಿನಲ್ಲಿ ಈಗಾಗಾಲೇ ಓದಿದ ಮಹನೀಯರು, ಉದ್ಯೋಗಿಗಳಾಗಿ ನಿವೃತ್ತರಾದವರು ತಮ್ಮ ಹೆಸರು ಅಥವಾ ತಮ್ಮ ತಂದೆ-ತಾಯಿ, ಅತ್ತೆ-ಮಾವ, ತಮಗೆ ಪ್ರಿಯವಾದವರ ಹೆಸರು ತಾವು ಓದಿದ ಕಾಲೇಜಿನಲ್ಲಿ ಉಳಿದಿರಲೆಂಬ ಆಶಯದಿಂದ ಹಲವಾರು ದತ್ತಿಗಳನ್ನು ನಗದು ಬಹುಮಾನವನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಿರುತ್ತಾರೆ. ಠೇವಣಿ ಮಾಡಿದ ಹಣದಲ್ಲಿನ ವಾರ್ಷಿಕ ಬಡ್ಡಿಯನ್ನು ಅವರು ಈಗಾಗಲೇ ನೀಡಿರುವ ಹೆಸರಿನಲ್ಲಿ ದತ್ತಿ, ನಗದು ಬಹುಮಾನ ನೀಡುವುದು ವಾಡಿಕೆ. ಅವುಗಳೆಂದರೆ-
- ಸಂಜೆಮನೆ ಕೃಷ್ಣಮೂರ್ತಿ ವಿದ್ಯಾರ್ಥಿವೇತನ[ಪತ್ರಿಕೋದ್ಯಮ]
- ಡಾ.ಎಚ್.ವಿ.ನಾರಾಯಣ್ ನಗದು ಬಹುಮಾನ
- ಪ್ರೊ.ಜಿ.ಕೆ.ವೆಂಕಣ್ಣಯ್ಯ ಸ್ಮಾರಕ
- ಪ್ರೊ.ಎಸ್.ವಿ.ಕೃಷ್ಣಸ್ವಾಮಿ ಅಯ್ಯಂಗಾರ್ ನಗದು ಬಹುಮಾನ
- ಪ್ರೊ.ಎಸ್.ವಿ.ರಂಗಣ್ಣ ಸ್ಮಾರಕ ನಗದು ಬಹುಮಾನ
- ಶ್ರೀಮತಿ ಸುಬ್ಬಲ್ಷ್ಮಮ್ಮ ಸ್ಮಾರಕ ನಗದು ಬಹುಮಾನ [ಪಠ್ಯೇತರ ಚಟುವಟಿಕೆ]
- ಶ್ರೀಮತಿ ಪದ್ಮಜಾ ಸ್ಮಾರಕ [ಪಠ್ಯೇತರ ಚಟುವಟಿಕೆ]
- ವಿದ್ಯಾರ್ಥಿ ಕ್ಷೇಮಪಾಲನಾ ನಿಧಿ
ಸಾಂಸ್ಕೃತಿಕ ವೇದಿಕೆ
ಬದಲಾಯಿಸಿಇದು ವಿದ್ಯಾರ್ಥಿಗಳಲ್ಲಿನ ಪಠ್ಯೇತರ ಚಟುವಟಿಕೆಗಳನ್ನು ಅನಾವರಣಗೊಳಿಸುವಂತಹುದು. ವರ್ಷಕ್ಕೊಮ್ಮೆ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತೆಗೆಯಲು ಈ ವೇದಿಕೆಯ ವತಿಯಿಂದ 'ಪ್ರತಿಭಾನ್ವೇಷಣೆ' ಎಂಬ ಶೀರ್ಷಿಕೆಯಡಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಹಲವಾರು ಸ್ಪರ್ಧೆಗಳನ್ನು ಇಡಲಾಗುತ್ತದೆ.
ಹೆಸರಾಂತ ಅಧ್ಯಾಪಕರು
ಬದಲಾಯಿಸಿಮಹಾರಾಜ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದವರಲ್ಲಿ ಬಹುತೇಕರು ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ, ಕುಲಪತಿಗಳಾಗಿ ಕರ್ತವ್ಯ ನಿರ್ವಹಿಸಿರುವುದನ್ನು ಕಾಣಬಹುದಾಗಿದೆ. ಅವರುಗಳೆಂದರೆ- ಡಾ.ರಾಧಾಕೃಷ್ಣನ್, ಶ್ರೀ ಕುವೆಂಪು, ಬಿ.ಎಂ.ಶ್ರೀ, ಎ.ಆರ್.ಕೃಷ್ಣಶಾಸ್ತ್ರಿ, ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯ, ದೇ.ಜ.ಗೌ, ಡಾ.ಜಿ.ಎಸ್.ಶಿವರುದ್ರಪ್ಪ, ಉ.ಕಾ.ಸುಬ್ಬರಾವ್, ಎಸ್.ವಿ.ರಂಗಣ್ಣ, ಎ.ಎನ್.ಮೂರ್ತಿರಾವ್, ಪಿ.ಕೆ.ರಾಜಶೇಖರ್ ಮುಂತಾದವರು ಪ್ರಮುಖರಾಗಿದ್ದಾರೆ.
ಆಕರ ಗ್ರಂಥ
ಬದಲಾಯಿಸಿ- ಕನ್ನಡ ವಿಶ್ವಕೋಶ
- ಮೈಸೂರು ವಿಶ್ವವಿದ್ಯಾನಿಲಯದ ಗೆಜೆಟ್
ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ
ಬಾಹ್ಯ ಸಂಪರ್ಕಗಳು
ಬದಲಾಯಿಸಿ- ↑ http://vijaykarnataka.indiatimes.com/state/karnataka/-/articleshow/27860813.cms
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2015-06-14.
- ↑ http://www.mysoredasara.gov.in/kannada-venues/item/137-kannada-venues
- ↑ http://kannada.eenaduindia.com/Sports/Cricket/2015/04/03205928/InterCollege-Cricket-Tournament-Maharaja-team-won.vpf
- ↑ http://www.kannadaprabha.com/districts/mysore/%E0%B2%B9%E0%B2%BE%E0%B2%95%E0%B2%BF-%E0%B2%95%E0%B2%AA%E0%B3%8D-%E0%B2%97%E0%B3%86%E0%B2%A6%E0%B3%8D%E0%B2%A6-%E0%B2%AE%E0%B2%B9%E0%B2%BE%E0%B2%B0%E0%B2%BE%E0%B2%9C-%E0%B2%95%E0%B2%BE%E0%B2%B2%E0%B3%87%E0%B2%9C%E0%B3%81/38443.html
- ↑ https://www.facebook.com/permalink.php?story_fbid=481772738580131&id=382016595222413