ಧಾರವಾಡ

ಭಾರತದ ಕರ್ನಾಟಕ ರಾಜ್ಯದ ನಗರ

ಧಾರವಾಡ ಕರ್ನಾಟಕ ರಾಜ್ಯದ ಒಂದು ನಗರ; ಧಾರವಾಡ ನಗರ ಧಾರವಾಡ ಜಿಲ್ಲೆಯ ಕೇಂದ್ರಸ್ಥಳ. ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇ ಅತಿ ದೊಡ್ಡ ನಗರ ಎಂದರೆ ಧಾರವಾಡ ನಗರ, ಹುಬ್ಬಳ್ಳಿ ವಾಣಿಜ್ಯ ನಗರವಾದರೆ ಧಾರವಾಡ ಶೈಕ್ಷಣಿಕ ಜಿಲ್ಲೆ, ಧಾರವಾಡ ಅತಿ ತಂಪು ವಾತಾವರಣ ಹೊಂದಿರುವ ನಗರ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಆಕಾಶವಾಣಿ, ಕಾನೂನು ವಿಶ್ವವಿದ್ಯಾಲಯ, ಹೈಕೋರ್ಟ್, ನೈರುತ್ಯ ರೈಲ್ವೆ ಘಟಕ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಐ ಐ ಟಿ ,ಮುಂತಾದವುಗಳ ಆಗರ ಧಾರವಾಡ, ಧಾರವಾಡ’ದ ಮೂಲ ರೂಪ ‘ದಾರವಾಡ’. ಬಹಳಷ್ಟು ಚರ್ಚಿತವಾಗಿರುವ ಧಾರವಾಡ ಗ್ರಾಮದ ನಿಪ್ಪತ್ತಿಯು ಸಹ ವ್ಯಕ್ತಿನಾಮದ್ದಾಗಿರುವ ಸಾಧ್ಯತೆ ಹೆಚ್ಚಿದೆ. ಧಾರವಾಡ ಜಿಲ್ಲಾ ಗೆಝೆಟಿಯರ್‍ದಲ್ಲಿ ವಿಜಯನಗರದ ರಾಮರಾಜನ ಕಾಲದ ಧಾರರಾವ್ ಎಂಬುವನು ೧೪೦೩ರಲ್ಲಿ ಕೋಟೆ ಕಟ್ಟಿಸಿದ್ದರ ನಿಮಿತ್ತ ಈ ಊರಿಗೆ ಧಾರವಾಡ ಎಂಬ ಹೆಸರು ಬಂದಿತೆಂದು ತಿಳಿಸುತ್ತದೆ. ಆದರೆ ಕ್ರಿ.ಶ.೧೧೧೭ ಧಾರವಾಡ ಶಾಸನದಲ್ಲಿಯೇ ‘ದಾರವಾಡ’ ಎಂಬ ಹೆಸರು ಬಳಕೆಗೊಂಡಿದೆ

ಧಾರವಾಡ
ಧಾರವಾರ
ಪೇಢ ನಗರಿ, ಹುಬ್ಬಳ್ಳಿ-ಧಾರವಾಡ ನಗರ, ಧಾರನಗರಿ, ವಿದ್ಯಾ ಕಾಶಿ, ಸಾಂಸ್ಕೃತಿಕ ನಗರಿ, Karnataka India mandya dharwad......Schoolಕರ್ನಾಟಕದ ಶಿಕ್ಷಣ ಕೇಂದ್ರ, ಕರ್ನಾಟಕದ ಆಕ್ಸ್‌ಫರ್ಡ್
ಮೇಲಿನಿಂದ ಪ್ರದಕ್ಷಿಣಾಕಾರವಾಗಿ : ಕರ್ನಾಟಕ ವಿಶ್ವವಿದ್ಯಾಲಯದ ಗಡಿಯಾರ ಗೋಪುರ, ಧಾರವಾಡ, SDM ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಮಂಜುಶ್ರೀ ಬ್ಲಾಕ್), SDM ಆಸ್ಪತ್ರೆ ಒಳರೋಗಿಗಳ ಬ್ಲಾಕ್, ಕರ್ನಾಟಕ ಕಾಲೇಜು, ಕರ್ನಾಟಕ ವಿಜ್ಞಾನ ಕೃಷಿ ವಿಶ್ವವಿದ್ಯಾಲಯ, IIIT ಧಾರವಾಡ
ಧಾರವಾಡ is located in Karnataka
ಧಾರವಾಡ
ಧಾರವಾಡ
ಧಾರವಾಡ is located in India
ಧಾರವಾಡ
ಧಾರವಾಡ
Coordinates: 15°27′30″N 75°00′30″E / 15.458333°N 75.008333°E / 15.458333; 75.008333
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಧಾರವಾಡ ಜಿಲ್ಲೆ
ತಾಲ್ಲೂಕುಧಾರವಾಡ
Government
 • Typeಮಹಾನಗರ ಪಾಲಿಕೆ
 • Bodyಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
ಭಾಷೆ
 • ಅಧಿಕೃತಕನ್ನಡ
Time zoneUTC+೫:೩೦ (IST)
ಪಿನ್ ಕೋಡ್
580 xxx
ದೂರವಾಣಿ ಕೋಡ್೦೮೨೪
Vehicle registrationಕೆಎ 25, ಕೆಎ 63
Websitewww.dharwad.nic.in

ಇತಿವೃತ್ತ ಬದಲಾಯಿಸಿ

 • ಇದಕ್ಕೆ ಸಹಾಯಕವಾಗಿ ಕ್ರಿ.ಶ.೧೧೨೫ ನರೇಂದ್ರ ಮತ್ತು ೧೧೪೮ ಧಾರವಾಡ ಶಾಸನಗಳಲ್ಲೂ ಕ್ರಮವಾಗಿ ದಾರವಾಡ ಮತ್ತು ಧಾರವಾಡ ಬಳಕೆಗೊಂಡಿವೆ. ಅಲ್ಲದೆ ೧೪೦೩ರಲ್ಲಿ ರಾಮರಾಯ ವಿಜಯನಗರವನ್ನು ಆಳುತ್ತಿರಲಿಲ್ಲ. ಇವೆಲ್ಲ ಕಾರಣಗಳಿಂದ ಈ ವಾದವನ್ನು ಒಪ್ಪಲಿಕ್ಕಾಗದು.

ಡಾ. ಪಿ.ಬಿ. ದೇಸಾಯಿ ಧಾರವಾಡ ಪದವು ಸಂಸ್ಕೃತದ ‘ದ್ವಾರ’ದಿಂದ ‘ದಾರ’ ಮತ್ತು ‘ವಾಟ’ ದಿಂದ ‘ವಾಡ’ ಬಂದಿದೆ ಎನ್ನುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ವಾದವನ್ನು ಒಪ್ಪುವುದಿಲ್ಲ. ಸಾಮಾನ್ಯವಾಗಿ ಊರ ಹೆಸರನ್ನು ಇಷ್ಟರಮಟ್ಟಿಗೆ ಸಂಸ್ಕೃತ ಭೂಯಿಷ್ಠವಾಗಿ ಇಡುವುದು ಅಸಂಭವ.

 • ಅಲ್ಲದೆ ಅಲ್ಲಿ ಸುಂಕವನ್ನು ಆಕರಿಸಲಾಗುತ್ತಿತ್ತು ಎಂಬ ಕಾರಣಕ್ಕೆ ಇದೊಂದೇ ಪ್ರದೇಶದ ಮೂಲಕ ಎರಡು ವಿಶಾಲ ಪ್ರದೇಶಗಳ ಸುಂಕವನ್ನು ಆಕರಿಸಲಾಗುತ್ತಿತ್ತೆಂದಲ್ಲ. ಸುಂಕ ಸಂಗ್ರಹ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿತ್ತು ಎಂಬ ಡಾ. ಕಲಬುರ್ಗಿ ಅವರ ವಿಚಾರಗಳನ್ನು ಒಪ್ಪುವಂತಹದ್ದೆ.
 • ಡಾ. ಎಂ.ಎಂ. ಕಲಬುರ್ಗಿ ಅವರು ಧಾರವಾಡ ಪದದ ಪೂರ್ವಪದದ ಅಂತ್ಯ ‘ರ’ ಕಾರವುಳ್ಳ ಈ ಪದವು ಜನಾಂಗಿ ಸೂಚಿಯಾಗಿದೆ ಎಂದು ತಿಳಿಸುತ್ತಾ ದಾಯರ, ದಾರರ, ದಾವರ ಇವುಗಳಲ್ಲಿ ಒಂದರ ಸವೆದ ರೂಪ ‘ದಾರ’ ಎಂದು ತಿಳಿಸುತ್ತಾರೆ. ಹೀಗಾಗಿ ದಾಯರು, ದಾರರು, ದಾವರು ಇವುಗಳಲ್ಲಿ ಒಂದು ಜನಾಂಗದ ನೆಲೆ ಆಗಿರಬಹುದೆನ್ನುತ್ತಾರೆ. ಇನ್ನು ಉತ್ತರ ಪದ ‘ವಾಡ’ ದ್ರಾವಿಡದ ‘ಬಾಡ’ದಿಂದ ಬಂದಿರುವ ಸಾಧ್ಯತೆಯನ್ನು ತಿಳಿಸುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವ ದಾಯರ, ದಾರರ, ದಾವರ ಎನ್ನುವ ಜನಾಂಗಗಳಿದ್ದವು ಎನ್ನುವುದರ ಬಗ್ಗೆ ನಮಗೆ ಯಾವುದೇ ರೀತಿಯ ಕುರುಹುಗಳಿಲ್ಲ. ಹೀಗಾಗಿ ಧಾರವಾಡದ ಮೂಲ ತಿಳಿಸುವ ಅವರ ಜನಾಂಗ ನಿಷ್ಠೆ ಅಭಿಪ್ರಾಯ ಸರಿಯೆನಿಸುವುದಿಲ್ಲ. ಆದ್ದರಿಂದ ಧಾರವಾಡ ಗ್ರಾಮನಾಮದ ನಿಷ್ಪತ್ತಿಯನ್ನು ಜನಾಂಗವಾಚಿಗಿಂತ ವ್ಯಕ್ತಿವಾಚಿಯಲ್ಲಿ ಹುಡಕಲು ಆಧಾರ ಒಂದು ದೊರೆಯುತ್ತದೆ.
 • ‘ಸಾಮಾನ್ಯವಾಗಿ ಇಂದಿಗೂ ಜನಬಳಕೆಯಲ್ಲಿ ಮೇಲೆ, ಮ್ಯಾಲೆ ಎಂಬ ಪದಬಳಕೆಯುಂಟು. ಮೇಲೆ ಗ್ರಾಂಥಿಕವಾದರೆ, ಮ್ಯಾಲೆ ಮೌಖಿಕವಾದದು. ಅದರಂತೆ ದೇರಣ್ಣ> ದ್ಯಾವಣ್ಣ, ದೇಮಪ್ಪ> ದ್ಯಾಮಪ್ಪ ನಾಮಗಳ ಬಳಕೆಯುಂಟು, ಇಂಥ ಯಾವುದೋ ವ್ಯಕ್ತಿಯೋರ್ವನ ಹೆಸರೇ ಧಾರವಾಡ ಗ್ರಾಮಕ್ಕೆ ಆದಿಯಾಗಿರಬೇಕು. ಇದಕ್ಕೆ ಸಹಾಯಕವಾಗಿ ಸುಮಾರು 9ನೇ ಶತಮಾನದ ಧಾರವಾಡದ ಒಂದು ವೀರಗಲ್ಲು ಶಾಸನದಲ್ಲಿ ದೇರಣ್ಣ ಎಂಬ ವ್ಯಕ್ತಿಯ ಉಲ್ಲೇಖ ಕಂಡುಬರುತ್ತದೆ. ಪ್ರಾಯಶಃ ಆತನೇ ವೀರಮರಣ ಹೊಂದಿದ ವ್ಯಕ್ತಿಯಾಗಿರಬೇಕು. ಶಾಸನ ಅಧಿಕ ತ್ರುಟಿತವಿದೆ. ಆ ದೇರಣ್ಣ ಹೆಸರು ಧಾರವಾಡದ ಮೂಲ ನಿಷ್ಪತ್ತಿಯಾಗಿರಬೇಕು. ಅಂದರೆ ಧಾರವಾಡ ಪದದ ನಿರ್ದಿಷ್ಟ ಪದವಾಗಿರಬೇಕು.
 • ಇನ್ನು ವಾರ್ಗಿಕ ಡಾ. ಎಂ.ಎಂ. ಕಲಬುರ್ಗಿಯವರು ತಿಳಿಸುವಂತೆ ಬಾಡದಿಂದಲೇ ಬಂದಿರಬೇಕು. ದೇರಣ್ಣಬಾಡ> ದ್ಯಾರಣ್ಣಬಾಡ> ದಾರನಬಾಡ> ದಾರವಾಡ> ಧಾರವಾಡ ಆಗಿರುವ ಸಾಧ್ಯತೆ ಹೆಚ್ಚಾಗಿದೆ’. ಭಾಷಾ ಹಿನ್ನೆಲೆಯಲ್ಲಿ ಇದು ಸರಿಯಾದ ಕ್ರಮವಾಗಿದೆ. ಇನ್ನು ಧಾರವಾಡವನ್ನು ಸಂಸ್ಕೃತಿ ನೆಲೆಯಲ್ಲಿ ತುಂತುಪುರಿ, ಧಾರಾನಗರಿ ಎಂದು ಹೆಸರಿಸಿದ್ದುಂಟು. ಮುಸ್ಲಿಂ ಆಡಳಿತ ಕಾಲದಲ್ಲಿ ‘ನಸ್ರತಾಬಾದ್’, ಬ್ರಿಟಿಷರ ಆಡಳಿತದಲ್ಲಿ ‘ಧಾರವಾರ’ ಎಂದು ಕರೆಸಿಕೊಂಡಿತ್ತು ಈಗ ಮತ್ತೆ ಧಾರವಾಡ ಆಗಿದೆ. ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವಂತೆ ಗ್ರಾಮನಾಮದ ಪೂರ್ವಪದದ ಅಂತ್ಯದಲ್ಲಿ ಲಾ.ಳ.ಬ್ಬೆ.ಕ್ಕ ಇವು ಬಂದಿದ್ದರೆ ಅವು ಸ್ತ್ರೀವಾಚಿ ಸ್ಥಳನಾಮಗಳಾಗಿರುತ್ತವೆ.

ಚರಿತ್ರೆ ಬದಲಾಯಿಸಿ

 • ಪುರಾಣ ಕಾಲದಲ್ಲಿ ಪಾಂಡವರು ಹಾನಗಲ್ ನಲ್ಲಿ ವಾಸ್ತವ್ಯ ಹೂಡಿದ್ದರು ಎಂಬಲ್ಲಿಂದ ಧಾರವಾಡದ ಚರಿತ್ರೆ ಪ್ರಾರಂಭವಾಗುತ್ತದೆ. ತಾಮ್ರ ಶಾಸನಗಳ ಪ್ರಕಾರ ಧಾರವಾಡವು ಬನವಾಸಿ ಯ ಕದಂಬರ ಆಳ್ವಿಕೆ ಒಳಪಟ್ಟಿತ್ತು ಎಂದು ತಿಳಿದು ಬರುತ್ತದೆ.ಅನಂತರದ ಚರಿತ್ರೆಯಂತೆ ಕ್ರಿ.ಶ. ಏಳನೆಯ ಶತಮಾನದಲ್ಲಿ ಚಾಲುಕ್ಯ ರು, ಕ್ರಿ.ಶ. ಒಂಭತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟ ರು, ಹನ್ನೆರಡನೆಯ ಶತಮಾನದಲ್ಲಿ ದೇವಗಿರಿಯ ಯಾದವರು ಆಳ್ವಿಕೆ ಮಾಡಿದರು.೧೨ ನೇ ಶತಮಾನದ ವರೆಗೆ ಧಾರವಾಡ ಜಿಲ್ಲೆ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದಿತು. ನಂತರ ವಿಜಯನಗರ ಸಾಮ್ರಾಜ್ಯದ ಭಾಗವಾಯಿತು.
 • ವಿಜಯನಗರ ಸಾಮ್ರಾಜ್ಯದ ಪತನದ ನಂತರ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಕೈ ಸೇರಿದ ಮೇಲೆ ಧಾರವಾಡ ಜಿಲ್ಲೆಯ ಪ್ರಾಮುಖ್ಯತೆ ಹೆಚ್ಚಿತು. ಇದಕ್ಕೆ ಮುಖ್ಯ ಕಾರಣ ಆದಿಲ್ ಶಾಹಿ ಸುಲ್ತಾನರು ಇಲ್ಲಿ ಕಟ್ಟಿಸಿದ ಕೋಟೆ -ಮಣ್ಣಕಿಲ್ಲೆ- ಇದಕ್ಕೆ ಆಗಿನ ಕಾಲದಲ್ಲಿ ನಜರತಾಬಾದ್ ಎಂಬ ಹೆಸರಿತ್ತು. ಆದಿಲ್ ಶಾಹಿ ಸುಲ್ತಾನರ ನಂತರ ಧಾರವಾಡ ಜಿಲ್ಲೆ ಸ್ವಲ್ಪ ಕಾಲ ಮುಘಲ್ ಸಾಮ್ರಾಜ್ಯದ ಕೈಯಲ್ಲಿದ್ದು ನಂತರ ಅನುಕ್ರಮವಾಗಿ ಮರಾಠರು, ಹೈದರ್ ಅಲಿ ಮತ್ತು ಟೀಪು ಸುಲ್ತಾನ್ ಹಾಗೂ ಬ್ರಿಟಿಷರ ಕೈ ಸೇರಿತು. ಮುಂಬಯಿ ಸರ್ಕಾರದ ಆಡಳಿತದಲ್ಲಿದ್ದ ಧಾರವಾಡ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು.
 • ಕರ್ನಾಟಕದಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿ ಸಂಘಟನೆ ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತುಸ್ಥಾಪಿಸಿ, ರಾಜ್ಯಾದಂತ್ಯ ಕರ್ನಾಟಕ ಏಕೀಕರಣ ಹೋರಾಟದ ಪರವಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿದವರು ಅನ್ನದಾನಯ್ಯ ಪುರಾಣಿಕ. ಹುಬ್ಬಳ್ಳಿಯಲ್ಲಿ ಕರ್ನಾಟಕ ಏಕೀಕರಣದ ಕುರಿತು ಅಂತಿಮ ತೀರ್ಮಾನ ಮಾಡಲು ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕೆ.ಪಿ.ಸಿ.ಸಿ ಸಭೆ ನೆಡೆಯುವಾಗ, ಇವರು ನೆಡೆಸಿದ ಬೃಹತ್ ವಿದ್ಯಾರ್ಥಿ ಮೆರವಣಿಗೆ, ಕೆಪಿಸಿಸಿ ಸಭೆಯು ಕರ್ನಾಟಕ ಏಕೀಕರಣದ ಪರವಾಗಿ ನಿರ್ಧಾರ ಮಾಡಲು ಪ್ರಮುಖ ಕಾರಣವಾಗಿತ್ತು.

ತಾಲೂಕುಗಳು ಬದಲಾಯಿಸಿ

ಧಾರವಾಡ ಜಿಲ್ಲೆಯು 8 ಕಂದಾಯ ತಾಲೂಕುಗಳನ್ನು ಹೊಂದಿದೆ

 • ಧಾರವಾಡ ತಾಲೂಕು
 • ಅಳ್ನಾವರ ತಾಲೂಕು
 • ಹುಬ್ಬಳ್ಳಿ ಗ್ರಾಮೀಣ ತಾಲೂಕು
 • ಹುಬ್ಬಳ್ಳಿ ಶಹರ ತಾಲೂಕು
 • ಕುಂದಗೋಳ ತಾಲೂಕು
 • ನವಲಗುಂದ ತಾಲೂಕು
 • ಅಣ್ಣಿಗೇರಿ ತಾಲೂಕು
 • ಕಲಘಟಗಿ ತಾಲೂಕು

ಪ್ರಮುಖ ವ್ಯಕ್ತಿಗಳು ಬದಲಾಯಿಸಿ

ಕರ್ನಾಟಕಕ್ಕೆ ಧಾರವಾಡ ಜಿಲ್ಲೆಯ ಪ್ರಮುಖ ಕೊಡುಗೆ ಇಲ್ಲಿ ಹುಟ್ಟಿ ಬೆಳೆದಿರುವ ಅನೇಕ ಸಂಗೀತಗಾರರು ಮತ್ತು ಸಾಹಿತಿಗಳು. ಧಾರವಾಡದ ಕೆಲವು ಪ್ರಮುಖ ಗಣ್ಯ ವ್ಯಕ್ತಿಗಳನ್ನು ಕೆಳಗೆ ಕಾಣಿಸಲಾಗಿದೆ. ಧಾರವಾಡದ ಮುರುಘಾ ಮಠ ಮತ್ತು ಲಿಂ.ಮೃತ್ಯುಂಜಯ ಸ್ವಾಮಿಗಳು ಹಾಗೂ ದಿ. ಮಹಾಂತಪ್ಪಗಳು ವಿಶ್ವ ಪ್ರಸಿದ್ಧ. ಇಲ್ಲಿದ್ದು ವಿದ್ಯಾಭ್ಯಾಸ ಮಾಡಿದವರಲ್ಲಿ ಹಲವಾರು ಜನರು ಗಣ್ಯವ್ಯಕ್ತಿಗಳು, ಸಾಹಿತಿಗಳು, ಅಧಿಕಾರಿಗಳು ಆಗಿದ್ದಾರೆ. ಸಂಗೀತ-ಕಲೆ-ಶಿಕ್ಷಣ-ಭಕ್ತಿಯ ನಿರಂತರ ದಾಸೋಹ ಈ ಮಠದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ನಡೆಯುತ್ತಿರುವುದು ಇಲ್ಲಿ ವಿಶೇಷವಾಗಿದೆ.

ಸಂಗೀತಗಾರರು ಬದಲಾಯಿಸಿ

ಹಿಂದುಸ್ತಾನಿ ಸಂಗೀತ ಪದ್ಧತಿ ಧಾರವಾಡದಲ್ಲಿ ಆಳವಾಗಿ ಬೇರೂರಿದೆ. ಧಾರವಾಡದಿಂದ ಅನೇಕ ಗಣ್ಯ ಹಿಂದುಸ್ತಾನಿ ಸಂಗೀತಗಾರರು ಬೆಳಕಿಗೆ ಬಂದಿದ್ದಾರೆ.

ಸಾಹಿತಿಗಳು ಬದಲಾಯಿಸಿ

ಕನ್ನಡ ಸಾಹಿತ್ಯಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಧಾರವಾಡ. ಧಾರವಾಡ ಜಿಲ್ಲೆಯಲ್ಲಿ ಜನಿಸಿದ ಅಥವಾ ನೆಲೆಸಿದ ಮಹತ್ವದ ಸಾಹಿತಿಗಳ ಹೆಸರುಗಳನ್ನು ಇಲ್ಲಿ ಕೊಡಲಾಗುತ್ತಿದೆ:

ಶಿಕ್ಷಣ ತಜ್ಞರು ಬದಲಾಯಿಸಿ

ಮೂಲತಃ ಬೆಳಗಾವಿ ಜಿಲ್ಲೆಯವರಾದ ಶ್ರೀ ಡಿ.ಸಿ. ಪಾವಟೆಯವರು ಗಣಿತ ಶಾಸ್ತ್ರದಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ Rangler ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಇವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು.

 • ನಡಕಟ್ಟಿ
 • ಶಿವಶಂಕರ ಹಿರೇಮಠ

ಕಂಪ್ಯೂಟರ್ ವಿಜ್ಞಾನ ಉದ್ಯಮಿಗಳು ಬದಲಾಯಿಸಿ

 • ಉಮೇಶ ವೈದ್ಯಮಠ

ಸಾಮಾಜಿಕ ಕಾರ್ಯಕರ್ತರು ಬದಲಾಯಿಸಿ

 • ಶ್ರೀ ಬಿ ಡಿ ಹಿರೇಮಠ (ಸಾಮಾಜಿಕ ಚಟುವಟಿಕೆಗಳು,ಹೈಕೋರ್ಟ್)
 • ಶ್ರೀ ಹರ್ಷವರ್ಧನ್ ಶೀಲವಂತ್ (ಪರಿಸರವಾದಿ)
 • ಶ್ರೀ ಕಿರಣ್ ಹಿರೇಮಠ (ಸಾಮಾಜಿಕ ಚಟುವಟಿಕೆಗಳು)
 • ಶ್ರೀ ದತ್ತ ಕುಲಕರ್ಣಿ (ಸಾಮಾಜಿಕ ಚಟುವಟಿಕೆಗಳು, ಐ ಐ ಟಿ)
 • ಶ್ರೀ ಬಸವರಾಜ ಎಚ್ ಕೊರವರ (ಸಾಮಾಜಿಕ ಚಟುವಟಿಕೆಗಳು, ಜನಜಾಗೃತಿ ಸಂಘ)

ಕಲಾಕಾರರು ಬದಲಾಯಿಸಿ

ಧಾರವಾಡದಲ್ಲಿ ಬೆಳೆದ ಸಿನೆಮಾ ತಾರೆಯರು ದಾಮಿನಿ, ಸುರೇಶ ಹೆಬ್ಳೀಕರ್ ಲೀನಾ ಚಂದಾವರ್ಕರ ಮತ್ತು ಮಮತಾ ಕುಲಕರ್ಣಿ. 'ಕುಂಚ ಬ್ರಹ್ಮ' ಹಾಲಭಾವಿಯವರು ಪ್ರಸಿದ್ಧ ಕಲಾವಿದರಾಗಿದ್ದಾರೆ.

'ರಂಗಭೂಮಿ ಕಲಾವಿದರು'

 • ಎನ್ ಬಸವರಾಜ (ಗುಡಗೇರಿ) ಗುಬ್ಬಿವಿರಣ್ಣ ಪ್ರಶಸ್ತಿ ವಿಜೇತ
 • ಎಮ್.ಎಸ್.ಕೊಟ್ರೇಶ್ (ಪ್ರಸ್ತುತ ಕನ್ನಡ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ.)
 • ಶ್ರೀಮತಿ. ನಾಗರತ್ನಮ್ಮ. ಹೊಸಮನಿ
 • ಯಶವಂತ ಸರದೆಶಪಾಂಡೆ (ಆಲ್ ದಿ ಬೆಸ್ಟ್ ಪ್ರಸಿಧಿ)
 • ಮಾಲತಿ ಸರದೆಶಪಾಂಡೆ ‍
 • ಶ್ರೀಕೃಷ್ಣ ಸಂಪಗಾಂವಕರ್
 • ಅವಿನಾಶ್ ಕಾಮತ್ (ಪ್ರಸ್ತುತ ಮುಂಬಯಿ ಕನ್ನಡ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ.)
 • ಬಸವರಾಜ ಮನಸೂರ

ಚಿತ್ರ ಕಲಾವಿದರಲ್ಲಿ ಪ್ರಮುಖರು-

 • ಎಂ ಆರ್ ಬಾಳಿಕಾಯಿ
 • ಸಿ ಡಿ ಜೆಟ್ಟೆಣ್ಣವರ
 • ಎಂ ಜೆ ಬಂಗ್ಲೇವಾಲೇ
 • ಶೇಖರ ಬಳ್ಳಾರಿ.
 • ಸತೀಶ ಪೂಜಾರಿ
 • ಶಂಕರ್ ಕೆ ವಿ.
 • ವಿಜಯಲಕ್ಶ್ಮಿ ಯಾವಗಲ್
 • ಸುನಿಲ್ ಪುರಾನಿಕ್

ಜನಸಂಖ್ಯೆ ಬದಲಾಯಿಸಿ

೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೧೮,೪೭,೦೨೩ ಆಗಿದ್ದು, ಇದರಲ್ಲಿ ಪುರುಷರು ೯,೩೭,೨೦೬ ಮತ್ತು ಮಹಿಳೆಯರು ೯,೦೯,೮೧೭ ಆಗಿದೆ. ಜಿಲ್ಲೆಯ ವಿಸ್ತೀರ್ಣ ೪೨೬೦ ಕಿ.ಮೀ ವಿಸ್ತೀರ್ಣ ಹೊಂದಿದ್ದು ಜನಸಾಂದ್ರತೆ ೪೩೪ ಪ್ರತೀ ಕಿ.ಮೀ,ಗೆ ಇರುತ್ತದೆ.

ಚಾರಿತ್ರಿಕ ಘಟನೆಗಳು ಬದಲಾಯಿಸಿ

ಧಾರವಾಡ ನಗರದ ಕೆಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಾರಿತ್ರಿಕ ಘಟನೆಗಳು ಇಂತಿವೆ:

ರಾಜಕೀಯ ಬದಲಾಯಿಸಿ

 
ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ

ಧಾರವಾಡ ಜಿಲ್ಲೆಯಲ್ಲಿ ಒಟ್ಟು ೭ ವಿಧಾನಸಭಾ ಕ್ಷೇತ್ರಗಳಿವೆ.

 • ಧಾರವಾಡ (ಇಂದಿನ ಶಾಸಕರು :ಅಮೃತ ದೇಸಾಯಿ )
 • ಹುಬ್ಬಳ್ಳಿ -ಧಾರವಾಡ ಪಶ್ಛಿಮ (ಇಂದಿನ ಶಾಸಕರು: ಅರವಿಂದ ಬೆಲ್ಲದ)
 • ಹುಬ್ಬಳ್ಳಿ -ಧಾರವಾಡ ಮಧ್ಯ (ಇಂದಿನ ಶಾಸಕರು: ಜಗದೀಶ ಶೆಟ್ಟರ್)
 • ಹುಬ್ಬಳ್ಳಿ -ಧಾರವಾಡ ಪೂರ್ವ (ಇಂದಿನ ಶಾಸಕರು:ಪ್ರಸಾದ ಅಬ್ಬಯ್ಯ )
 • ಕಲಘಟಗಿ (ಇಂದಿನ ಶಾಸಕರು: ಸಿ.ಎಂ. ನಿಂಬಣ್ಣವರ )
 • ಕುಂದಗೋಳ (ಇಂದಿನ ಶಾಸಕರು: ಕುಸುಮಾ ಶಿವಳ್ಳಿ )
 • ನವಲಗುಂದ (ಇಂದಿನ ಶಾಸಕರು: ಶಂಕರ ಪಾಟೀಲ ಮುನೇನಕೊಪ್ಪ)-

ವಿಧಾನ ಪರಿಷತ್ತ ಸದಸ್ಯರು.

 • ಬಸವರಾಜ ಹೊರಟ್ಟಿ ( ಶಿಕ್ಷಕರ ಕ್ಷೇತ್ರ )
 • ಶ್ರೀನಿವಾಸ ಮಾನೆ. (ಸ್ಥಳಿಯ ಸಂಸ್ಠೆ)
 • ಪ್ರದೀಪ ಶೆಟ್ಟರ್
 • ಎಸ್.ವಿ. ಸಂಕನೂರ

ಧಾರವಾಡ ಜಿಲ್ಲೆಯವರೆ ಆದ ಶ್ರೀ ಸೋಮಪ್ಪ ರಾಯಪ್ಪ ಬೊಮ್ಮಾಯಿಯವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡ ಧಾರವಾಡ ಜಿಲ್ಲೆಯವರೇ.

ಇವನ್ನೂ ನೋಡಿ ಬದಲಾಯಿಸಿ

ಮಂದಿರಗಳು ಬದಲಾಯಿಸಿ

 • ಭಗವಾನ್ ಸರಹುನಾಥ್ ಮಂದಿರ, ನುಗ್ಗಿಕೇರಿ (Lord Sarahunaath Temple)
 • ಭಗವಾನ್ ಸರಹುನಾಥ್ ಮಂದಿರ, ಮದಿಹಾಳ (Lord Sarahunaath Temple)

ಬಾಹ್ಯ ಸಂಪರ್ಕಗಳು ಬದಲಾಯಿಸಿ

"https://kn.wikipedia.org/w/index.php?title=ಧಾರವಾಡ&oldid=1196413" ಇಂದ ಪಡೆಯಲ್ಪಟ್ಟಿದೆ