ದುರ್ಗಾದಾಸ್ ಕೆ.ಆರ್.

ಡಾ.ಕೆ.ಆರ್.ದುರ್ಗಾದಾಸ್ ಅವರು ಸಂಶೋಧಕ ಮತ್ತು ವಿಮರ್ಶಕ. ಶಿ‍ಷ್ಟ ಮತ್ತು ಜಾನಪದಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. ಗ್ರಾಮೀಣಾನುಭವಗಳನ್ನು ಮೈಗೂಡಿಸಿಕೊಂಡು ಬೆಳೆದ ಡಾ.ದುರ್ಗಾದಾಸ್ ಅವರು ಜಾನಪದ ಆಳ ಅಗಲಗಳನ್ನು ಚೆನ್ನಾಗಿ ಅರಿತು ಅರ್ಥ ಮಾಡಿಕೊಂಡಿದ್ದಾರೆ. ಇವರು ೦೭ನೇ ಜೂನ್ ೧೯೫೫ರಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ರಾಮಸಾಗರ ದಲ್ಲಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಇವರು ಕಲಾ ನಿಕಾಯಡೀನ್‌ರಾಗಿಯೂ ಹಾಗೂ ಕ.ವಿ.ವಿ.ಯ ಮೌಲ್ಯಮಾಪನ' ವಿಭಾಗದ ಕುಲಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪುಸ್ತಕಗಳು

ಬದಲಾಯಿಸಿ
  • ಭಾರತ ರತ್ನ ಬಾಬಾಸಾಹೇಬ ಅಂಬೇಡ್ಕರ್
  • ಬಯಲಾಟ ಪದಗಳಲ್ಲಿ ಸಂಸ್ಕೃತಿ
  • ಗಿರಿಜಾ ಕಲ್ಯಾಣ (ಸಂಪಾದನೆ)
  • ಬಳ್ಳಾರಿ ಜಿಲ್ಲೆಯ ಬಯಲಾಟಗಳು
  • ಮೂರು ದಲಿತ ಕಮ್ಮಟಗಳು(ಸಂಪಾದನೆ)
  • ಅನುಸಂಧಾನದ ಹೊಸ ಹಾದಿ (ವಿಮರ್ಶೆ)
  • ಬೇವು ಬೆಲ್ಲ (ಸಂಪಾದನೆ)
  • ಸೋರುತಿಹುದು ಮನೆಯ ಮಾಳಿಗೆ (ವಿಮರ್ಶೆ)
  • ಬತ್ತದ ಸೆಲೆ (ಜಾನಪದ ಲೇಖನಗಳು)
  • ಬಯಲಾಟ ಪದ್ಯ ಸಾಹಿತ್ಯ
  • ಉರಿಯುಂಡ ಕರ್ಪುರ(ಸಂಪಾದನೆ)
  • ಅರಿವಿನ ಬೆನ್ನು ಹತ್ತಿ (ವಿಮರ್ಶೆ)
  • ಬಯಲಾಟ ಸಾಹಿತ್ಯ (ಸಂಪುಟಗಳು)
  • ಕಾಳಗದ ಕಥೆಗಳು
  • ಕಲ್ಯಾಣದ ಕಥೆಗಳು
  • ಪುರಾಣದ ಕಥೆಗಳು
  • ಕುಡುತಿನಿ ನರಸಿಂಗರಾಯ ಕೃತ ಬಯಲಾಟಗಳು

ಪುರಸ್ಕಾರಗಳು

ಬದಲಾಯಿಸಿ
  • ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ (೧೯೯೬)
  • ಕನ್ನಡ ಪುಸ್ತಕ ಪ್ರಾಧಿಕಾರ ಪ್ರಶಸ್ತಿ (೧೯೯೬)
  • ಶರಣ ಉರಿಲಿಂಗ ಪೆದ್ದಿ ಪ್ರಶಸ್ತಿ (೨೦೧೦)
  • ಕರ್ನಾಟಕ ರಾಜ್ಯ ಪ್ರಶಸ್ತಿ (೨೦೧೦)