ಪ್ರಾಧ್ಯಾಪಕ
ಪ್ರಾಧ್ಯಾಪಕ ಪದವು ಬಹುತೇಕ ದೇಶಗಳಲ್ಲಿ ವಿಶ್ವವಿದ್ಯಾಲಯಗಳು ಮತ್ತು ಇತರ ಉಚ್ಚ ಮಾಧ್ಯಮಿಕ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿ ಒಂದು ಶೈಕ್ಷಣಿಕ ದರ್ಜೆಯಾಗಿದೆ. ಪ್ರಾಧ್ಯಾಪಕನೆಂದರೆ ಬೋಧಿಸುವ ವ್ಯಕ್ತಿ ಎಂಬ ಅರ್ಥ ಕೊಡುತ್ತದೆ. ಇವನು ಸಾಮಾನ್ಯವಾಗಿ ಕಲೆಗಳು ಅಥವಾ ವಿಜ್ಞಾನಗಳಲ್ಲಿ ನಿಪುಣನಾಗಿರುತ್ತಾನೆ, ಸರ್ವೋಚ್ಚ ಶ್ರೇಣಿಯ ಶಿಕ್ಷಕ.[೧]
ಪ್ರಾಧ್ಯಾಪಕರು ಮೂಲಭೂತ ಸಂಶೋಧನೆಯನ್ನು ನಡೆಸುತ್ತಾರೆ ಮತ್ತು ಸಾಮಾನ್ಯವಾಗಿ ತಮ್ಮ ಪರಿಣಿತಿಯ ಕ್ಷೇತ್ರಗಳಲ್ಲಿ ಸ್ನಾತಕಪೂರ್ವ, ವೃತ್ತಿಪರ ಹಾಗೂ ಸ್ನಾತಕೋತ್ತರ ಪಾಠಸರಣಿಗಳನ್ನು ಬೋಧಿಸುತ್ತಾರೆ. ಉನ್ನತಾಧ್ಯಯನ ವಿಭಾಗಗಳಿರುವ ವಿಶ್ವವಿದ್ಯಾಲಯಗಳಲ್ಲಿ, ಪ್ರಾಧ್ಯಾಪಕರು ಮಹಾಪ್ರಬಂಧ ಅಥವಾ ಪ್ರೌಢಪ್ರಬಂಧಕ್ಕಾಗಿ ಸಂಶೋಧನೆ ನಡೆಸುತ್ತಿರುವ ಸ್ನಾತಕ ವಿದ್ಯಾರ್ಥಿಗಳಿಗೆ ಸಲಹಾಕಾರರಾಗಿರಬಹುದು ಮತ್ತು ಮೇಲ್ವಿಚಾರಣೆ ಮಾಡಬಹುದು. ಅನೇಕ ವಿಶ್ವವಿದ್ಯಾಲಯಗಳಲ್ಲಿ, ಪೂರ್ಣ ಪ್ರಾಧ್ಯಾಪಕರು ಹಿರಿಯ ವ್ಯವಸ್ಥಾಪಕ ಪಾತ್ರಗಳನ್ನು ವಹಿಸಿಕೊಳ್ಳುತ್ತಾರೆ, ಉದಾಹರಣೆಗೆ ವಿಭಾಗಗಳು, ಸಂಶೋಧನಾ ತಂಡಗಳು ಹಾಗೂ ಸಂಸ್ಥೆಗಳ ನೇತೃತ್ವವಹಿಸುವುದು, ಮತ್ತು ಅಧ್ಯಕ್ಷ, ಪ್ರಾಂಶುಪಾಲ ಅಥವಾ ಕುಲಪತಿಯಂತಹ ಪಾತ್ರಗಳನ್ನು ತುಂಬುವುದು.
ಉಲ್ಲೇಖಗಳು
ಬದಲಾಯಿಸಿ- ↑ Harper, Douglas. "Professor". Online Etymology Dictionary. Retrieved 2007-07-28.