ಉತ್ತಂಗಿ ಚನ್ನಪ್ಪ
ಚನ್ನಪ್ಪ ಉತ್ತಂಗಿ : -(೨೮ ಅಕ್ಟೋಬರ್, ೧೮೮೧-೨೮ ಆಗಸ್ಟ್, ೧೯೬೨) 'ತಿರುಳ್ಗನ್ನಡದ ತಿರುಕ' ಎಂದು ಕರೆಯಿಸಿಕೊಂಡ ಉತ್ತಂಗಿಯವರು, 'ಸರ್ವಜ್ಞನ ವಚನ'ಗಳ ಸಂಪಾದನೆಗಾಗಿ ಖ್ಯಾತರಾಗಿದ್ದಾರೆ. ಸರ್ವಜ್ಞನ ಪದಗಳನ್ನು ಪ್ರಸಿದ್ಧಿಪಡಿಸಿದ ಕೀರ್ತಿ, ರೆವರೆಂಡ್ ಫಾದರ್. ಉತ್ತಂಗಿ ಚನ್ನಪ್ಪನವರಿಗೆ, ಸಲ್ಲುತ್ತದೆ. ಇದಕ್ಕಾಗಿ ಅವರು ತಮ್ಮ ಜೀವನದ ಅಮೂಲ್ಯ ಸಮಯವನ್ನು ಕಳೆದರು. ಅವರ ಪ್ರಯತ್ನದಿಂದಾಗಿ ಅದು, ಎಲ್ಲರ ಮನೆಮಾತಾಗಿದೆ. ೧, ೯೨೮ ವಚನಗಳ ಪುಸ್ತಕವನ್ನು ಪ್ರಕಟಿಸಲು ಸುಮಾರು ೯ ವರ್ಷಗಳೇ ಹಿಡಿದವು. ಕ್ರೈಸ್ತಧರ್ಮಕ್ಕೆ ಸೇರಿದ ಉತ್ತಂಗಿಯವರು, ಕನ್ನಡದ ಸೇವೆಯನ್ನು ದೇವರ ಕೆಲಸವೆಂದೇ ತಿಳಿದಿದ್ದರು. ಬಾಸೆಲ್ ಮಿಶನ್ ನ, ರೆವ. ಫಾ. ಕಿಟ್ಟೆಲ್ ರಂತಹ ಹಲವಾರು ಮತಪ್ರಚಾರಕರೂ ಕನ್ನಡಭಾಷೆಗೆ ಸೇವೆಸಲ್ಲಿಸಿರುವ ವಿಚಾರ ಎಲ್ಲರಿಗೂ ತಿಳಿದ ಸಂಗತಿ.
ಬಾಲ್ಯ
ಬದಲಾಯಿಸಿಉತ್ತಂಗಿ ಚನ್ನಪ್ಪನವರು, ಚನ್ನಪ್ಪ ದಾನಿಯೇಲಪ್ಪ ಉತ್ತಂಗಿಯವರು ೧೮೮೧ ಅಕ್ಟೋಬರ ೨೮ ರಂದು ಜನಿಸಿದರು.ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ, ಉತ್ತಂಗಿ ಗ್ರಾಮದ, ಗೌಡರ ಮನೆತನದಲ್ಲಿ, ೨೮, ಅಕ್ಟೋಬರ್, ೧೮೮೧ ರಲ್ಲಿ ಜನಿಸಿದರು. ತಂದೆ, ದಾನಿಯೇಲಪ್ಪನವರು. ಅಣ್ಣ ಚನ್ನಪ್ಪ ಗೌಡರು. ಚನ್ನಪ್ಪನವರ ಅಜ್ಜನಿಗೆ, ಲಗ್ನವಾಗಿ ೨೫ ವರ್ಷಗಳಾದಮೇಲೆ ಒಂದು ಗಂಡು ಶಿಶುವಿನ ಜನನವಾಯಿತು. ಆ ಮಗುವೇ ದಾನಿ ಯೇಲಪ್ಪ. ಅವರ ಪೂರ್ವಜರು ಕ್ರಿಸ್ತಧರ್ಮವನ್ನು ಸ್ವೀಕರಿಸಿ ಅನೇಕ ದಶಕಗಳೇ ಆಗಿದ್ದವು. ಚನ್ನಪ್ಪನವರು, ಮೂರನೆಯ ತಲೆಮಾರಿನ ಕ್ರಿಶ್ಚಿಯನ್ನರು. ಗದಗ ಮತ್ತು ಬೆಟಗೇರಿಗಳ, "ಕೈಸ್ತ ಅನಾಥಾಶ್ರಮಗಳ" ಮೇಲ್ವಿಚಾರಣೆ ಯ ಜವಾಬ್ದಾರಿ ಇವರ ಮನೆತನಕ್ಕೆ ಬಂದಿತ್ತು. ಬಾಲ್ಯದಲ್ಲಿ ಇವರು ಅಷ್ಟೇನೂ ಬುದ್ಧಿವಂತರಾಗಿರಲಿಲ್ಲ. ಜ್ಞಾಪಕ ಶಕ್ತಿಯೂ ಕಡಿಮೆ. ಶಾಲೆಯ ಎಲ್ಲಾ ಬಾಲಕರಿಗಿಂತ ಅಭ್ಯಾಸದಲ್ಲಿ, ಹಿಂದೆ. ಗಣಿತ ಅವರಿಗೆ ಬಹಳ ತಲೆನೋವಿನ ವಿಷಯ. ಮೆಟ್ರಿಕ್ ಪರೀಕ್ಷೆಗ ಕುಳಿತುಕೊಳ್ಳಲಿಲ್ಲ. ತಮ್ಮ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದರು. ಅವರ ಒಂದು ಮೆಚ್ಚುವಗುಣವೆಂದರೆ, ಅವರಿಗಿದ್ದ ಚಿಕಿತ್ಸಾತ್ಮಕ ಬುದ್ಧಿ. ತಮಗೆ ಒಪ್ಪಿಗೆಯಾಗದೆ ಯಾವುದನ್ನು ಕಣ್ಣುಮುಚ್ಚಿಕೊಂಡು ನಂಬುವ ಸ್ವಭಾವವಲ್ಲ.ದಾನಿಯೇಲಪ್ಪನವರಿಗೆ ಬಹುಕಾಲ ಮಕ್ಕಳೇ ಆಗದಿದ್ದಾಗ ಅವರ ಹಾಗೂ ಅವರ ಮಡದಿಯ ಪ್ರಾರ್ಥನೆಯ ಬಲದಿಂದ ಹುಟ್ಟಿದ ಕೂಸಿಗೆ ಅಜ್ಜನಾದ ಚನ್ನಪ್ಪನವರ ಹೆಸರನ್ನೇ ಇಟ್ಟರು. ತಂದೆ ಪ್ರಾಥಮಿಕ ಶಾಲಾಶಿಕ್ಷಕರಾಗಿ ಅನಂತರ ಅನಾಥ ಬಾಲಿಕೆಯರ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿದರು. ಅಲ್ಲಿರುವ ಮಕ್ಕಳನ್ನು ಅತ್ಯಂತ ಆತ್ಮೀಯತೆಯಿಂದ ನೋಡಿಕೊಂಡವರು. ಉತ್ತಮ ಶಿಕ್ಷಕರಾದ ಅವರು ಒಳ್ಳೆಯ ಬಡಗಿಯೂ ಆಗಿದ್ದರು. ಯಂತ್ರಕಲಾ ಕೌಶಲ್ಯವನ್ನು ಪಡೆದ ವಿಜ್ಞಾನಪ್ರಯೋಗಪ್ರಿಯರಾಗಿದ್ದರು. ತಾಯಿಯು ಮಹಾ ಕ್ರಿಸ್ತಭಕ್ತೆಯಾಗಿದ್ದರು. ತನ್ನ ಮೊದಲ ಮಗ ಚನ್ನಪ್ಪನವರಲ್ಲಿ ಕ್ರಿಸ್ತಭಕ್ತಿ ಮೂಡಲು ಕಾರಣರಾದವರು. ಚನ್ನಪ್ಪನವರಲ್ಲಿ ಬಾಲ್ಯದಿಂದಲೂ ಕ್ರಿಸ್ತಭಕ್ತಿ ತಾಯಿಯಿಂದ ಬಳುವಳಿಯಾಗಿ ಬಂದಿದೆ ಎಂದು ಹೇಳಲಾಗಿದೆ, ತಂದೆಯಿಂದ ಯಂತ್ರಗಳ ಬಗ್ಗೆ ಬಹಳ ಆಸಕ್ತಿ ಬೆಳೆಯಿತು. ಮನೆಯಲ್ಲಿದ್ದ ದೊಡ್ಡ ಗಡಿಯಾರದ ಪೆಂಡುಲಂಗೆ ಕೈ ಗಡಿಯಾರವನ್ನು ತಗುಲಿ ಹಾಕಿದರೆ ಎರಡು ಗಡಿಯಾರಗಳು ತೋರಿಸುವ ಕಾಲ ಒಂದೇ ಇರಬಲ್ಲುದೆ ಎಂಬುದು ಚನ್ನಪ್ಪನವರ ಕುತೂಹಲವಾಗಿತ್ತು. ತಂದೆ ಮನೆಯಲ್ಲಿಲ್ಲದಿದ್ದಾಗ ಚಿಕ್ಕ ಗಡಿಯಾರವನ್ನು ದೊಡ್ಡ ಗಡಿಯಾರದ ಪೆಂಡುಲಂ ಮೇಲೆ ಇಟ್ಟು ಎರಡೂ ಗಡಿಯಾಗಳಲ್ಲಿ ಪರೀಕ್ಷಿಸುತ್ತ ಯಾವುದೇ ವೈತ್ಯಾಸವಿಲ್ಲದ್ದನ್ನು ಕಂಡುಕೊಂಡವರು. ಅಷ್ಟೇ ಅಲ್ಲ ಆ ಕಾಲಕ್ಕೆ ಆಗಲೇ ಬಂದಿದ್ದ ಉಗಿಬಂಡಿಯನ್ನು ನೋಡಿ ಹಬೆಯ ಶಕ್ತಿಯನ್ನು ಪರೀಕ್ಷಿಸುವ ಪ್ರಯೋಗವನ್ನು ಮನೆಯಲ್ಲಿಯೇ ಮಾಡಿ ಸಮಾಧಾನ ಪಟ್ಟುಕೊಂಡವರು ಬಹುಶ: ಈ ಯಂತ್ರ ಜ್ಞಾನದ ಮೇಲಿರುವ ತೀರ್ವವಾದ ಆಸಕ್ತಿಯೇ ಇರಬಹುದಾಗಿದೆ, ಪ್ರೇಮಗಳ ಕಾರಣವಾಗಿಯೇ ಅವರ ಮನಸ್ಸು ಓದಿನಲ್ಲಿ ಅಷ್ಟೊಂದು ಆಸಕ್ತಿ ಮೂಡಿಸಲಿಲ್ಲ.
ವಿದ್ಯಾಭ್ಯಾಸ
ಬದಲಾಯಿಸಿಉತ್ತಂಗಿಯವರೇ ಈ ಬಗ್ಗೆ ತಮಗೆ ಆ ಸಂದರ್ಭದಲ್ಲಿ ಜ್ಞಾಪಕಶಕ್ತಿ ಕಡಿಮೆ ಎಂದು ಹೇಳಿಕೊಂಡಿದ್ದಾರೆ, ಆದರೆ ಇದು ಜ್ಞಾಪಕಶಕ್ತಿ ಕೊರತೆಗಿಂತ ಅವರಲ್ಲಿದ್ದ ಯಂತ್ರಜ್ಞಾನದ ಮೇಲಿನ ಪ್ರೇಮವನ್ನು ಸೂಚಿಸುತ್ತದೆ. ತಂದೆ ದಾನಿಯೇಲಪ್ಪನವರಿಗೆ ತನ್ನ ಮಗ ಯಂತ್ರಜ್ಞಾನಿಯಾಗುವುದರಲ್ಲಿ ಆಸಕ್ತಿಯಿರುವ ಹಾಗೆ ತೋರುವುದಿಲ್ಲ. ಅವರಿಗೆ ಮಗ ಓದಲಿ ಬುದ್ಧಿವಂತನಾಗಿ ಅಧಿಕಾರ ಪಡೆಯಲಿ ಎಂದು ಆಸೆಯಿದ್ದಿರಬೇಕು. ಓದಿನಲ್ಲಿ ಹೆಚ್ಚು ಆಸಕ್ತಿ ತೋರದ ಮಗನನ್ನು ಆಗಾಗ ಹೊಡೆದದ್ದು ಉಂಟು. ಯಂತ್ರಗಳ ಬಗೆಗೆ ಒಲವು ಪಡೆದ ಚನ್ನಪ್ಪನವರು ಕನ್ನಡ ಐದನೆಯ ವರ್ಗ ತೇರ್ಗಡೆಯಾದಾಗ ಅವರಿನ್ನೂ ಹತ್ತು ವರ್ಷಮಾತ್ರ. ತಂದೆ ದಾನಿಯೇಲಪ್ಪನವರು ಮಗನಿಗೆ ಇಂಗ್ಲಿಷ್ ಕಲಿಸಲು ಬಯಸಿದರು. ಆಗಿನ ಕಾಲದಲ್ಲಿ ಕ್ರೈಸ್ತ ಬಾಲಕರಿಗೆ ಇಂಗೀಷ್ ಕಲಿಸುವುದು ಒಳ್ಳೆಯದಲ್ಲ.ಆದ್ದರಿಂದ ಅವರು ಹಾಳಾಗುತ್ತಾರೆಂಬ ಒಂದು ನಂಬಿಕೆ .ಆದರೆ ರೆ.ಝಿಗ್ಲರ್ , ರೆವನೆಂಡ್ ಅರ್ನೆಸ್ಟ್ ಮತ್ತು ರೆ. ಹರ್ಮನ್ ರಿಫೆ ಇವರುಗಳು ಈ ನಂಬಿಕೆ ತಪ್ಪೆಂದು ವಾದಿಸಿ ಕ್ರೈಸ್ತ ಯುವಕರೂ ಇಂಗ್ಲೀಷ್ ಕಲಿಯುವ ಸೌಲಭ್ಯವನ್ನು ಉಂಟುಮಾಡಿದರು. ಚನ್ನಪ್ಪನವರು ತಾಯಿಯವರು ಇಚ್ಛಿಸಿದಂತೆ ಮಂಗಳೂರಿಗೆ ಹೋಗಿ, ದೈವಜ್ಞಾನ ಶಾಲೆಗೆ ಸೇರಿಕೊಂಡರು. ಕ್ರೈಸ್ತ ಧರ್ಮದ ಉಪದೇಶಗಳನ್ನು ಈ ಶಾಲೆಯಲ್ಲಿ ಬೋಧಿಸಲಾಗುತ್ತಿತ್ತು. ಅಲ್ಲಿನ ವಿದಾರ್ಥಿಗಳಿಗೆ ಕೊಡುತ್ತಿದ್ದ ಸಮವಸ್ತ್ರಗಳು, ಮುಂಗೈ ತೋಳಿನವು. ಕ್ರೈಸ್ತಧರ್ಮೋಪದೇಶಕರು, ಅವನ್ನು ಪರದೇಶದಿಂದ ತರಿಸಿ ಹಂಚುತ್ತಿದರು. ಆದರೆ ಚನ್ನಪ್ಪನವರು ಖಾದಿ ಅಂಗಿಯನ್ನು ಉಡಲು ಇಷ್ಟಪಡುತ್ತಿದ್ದರು. ನಿಷ್ಠದೇಶಾಭಿಮಾನಿಯದ ಅವರು, ತಮ್ಮ ಜೀವಮಾನವೆಲ್ಲಾ ಖಾದಿಬಟ್ಟೆಯಲ್ಲೇ ಕಳೆದರು. ಅವರ ಹಿರಿಯ ಅಧಿಕಾರಿಗಳಿಂದ ವಿರೋಧವನ್ನು ಸಹಿಸಬೇಕಾಗಿಬಂತು. ನಿಷ್ಠದೇಶಾಭಿಮಾನಿಯಾದ ಉತ್ತಂಗಿಯವರು, ತಮ್ಮ ಹಠವನ್ನು ಬಿಡಲಿಲ್ಲ. ಖಾದಿಬಟ್ಟೆಗಳು ಸೋವಿಯಾಗಿದ್ದು, ತಮಗೆ ಖರೀದಿಸಲು ಸುಲಭವೆಂದು ವಾದಿಸಿದರು. ನಿಜಕ್ಕೂ ಮಿತವ್ಯಯದಿಂದಾಗಿ ಅವರ ಗೆಳೆಯರೂ ಖಾದಿಯನ್ನೇ ಇಷ್ಟಪಟ್ಟರು. ಮುಂದೆ ಸರ್ವಾನುಮತದಿಂದಾಗಿ ಧರ್ಮೋಪದೇಶಕರಿಗೆಲ್ಲಾ ಖಾದಿಯೇ ಸಮವಸ್ತ್ರವಾಯಿತು. ೧೯೦೪ ರಲ್ಲಿ ಕೊನೆಯ ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ಪಾಸಾದರು. ಧಾರವಾಡಕ್ಕೆ ವಾಪಸ್ ಹೋದರು. ಅಲ್ಲಿ ಅವರಿಗೆ ಉಪನ್ಯಾಸಕರ ಹುದ್ದೆ ಸಿಕ್ಕಿತು. ಚನ್ನಪ್ಪನವರು ಒಬ್ಬ ಸ್ವತ್ರಂತ್ರವಾಗಿ ಯೋಚಿಸುವ ವ್ಯಕ್ತಿಯಾಗಿದ್ದರು. ಶಾಲೆಯಲ್ಲಿ ಓದುತ್ತಿದ್ದಾಗಲೇ ಬಾಸೆಲ್ ಮಿಶನ್ ನ ಕೆಲವು ಗೆಳೆಯರ ಸಹಕಾರದಿಂದ ಒಂದು ಪತ್ರಿಕೆಯನ್ನು ಪ್ರಕಟಿಸಿದರು. ಬಾಸೆಲ್ ಮಿಶನ್ ನವರಿಗೆ ಇದು ಸರಿಬೀಳಲಿಲ್ಲ. ಕೂಡಲೆ ಅವರು ತಮ್ಮ ಮಿಶನ್ ನ ವಿಯಾರ್ಥಿಗಳ್ಯಾರೂ ಅದನ್ನು ಓದಕೂಡದೆಂದು ಆಜ್ಞಾಪಿಸಿದರು. ಸತ್ಯಕ್ಕಾಗಿ ಪ್ರತಿಭಟಿಸುವ ಚನ್ನಪ್ಪವವರ ಸ್ವಭಾವದಿಂದ ಧರ್ಮಶಿಕ್ಷಣ ಸಂಸ್ಥೆಯವರು ಅವರನ್ನು ಹೊರಗೆ ಹಾಕುವವರೆಗೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಧರ್ಯಶಾಲಿಯಾದ ಉತ್ತಂಗಿಯವರನ್ನು ಎದುರುಹಾಕಿಕೊಳ್ಳಲೂ ಆಡಳಿತವರ್ಗವೂ ಇಷ್ಟಪಡಲಿಲ್ಲ. 1897 ರಿಂದ 1900ರ ವರೆಗೆ ಮೂರು ವರುಷಗಳ ಕಾಲ ರಿಷ್ ಅವರು ಬೀರಿದ ಪ್ರಭಾವ ಚನ್ನಪ್ಪನವರಲ್ಲಿ ಅಪೂರ್ವವಾದ ರೀತಿಯಲ್ಲಿ ವಿಚಾರಶಕ್ತಿಯನ್ನು ಬೆಳೆಸಿತು. ರಿಷ್ ಅವರ ಸತತ ಪ್ರಯತ್ನ , ಪ್ರಭಾವ ಹಾಗೂ ಶ್ರಮಗಳ ಕಾರಣಕ್ಕಾಗಿ ಚನ್ನಪ್ಪನವರಿಗೆ ಬಾಸೆಲ್ ಮಿಷನ್ ಹೈಸ್ಕೂಲಿನ ಇಂಗ್ಲೀಷ್ ನಾಲ್ಕನೆಯ ವರ್ಗಕ್ಕೆ ಪ್ರವೇಶ ದೊರೆಯಿತು. ಮೊದಲಿನಿಂದಲೂ ಓದಿನಲ್ಲಿ ಆಸಕ್ತಿ ಅಷ್ಟಕ್ಕಷ್ಟೆ ಚನ್ನಪ್ಪ ಉತ್ತಂಗಿ ಅವರಿಗೆ ಇಲ್ಲಿ ಇಂಗ್ಲೀಷ್ ಶಾಲೆಗೆ ಸೇರುತ್ತಿದ್ದರಂತೆ ಪಾಠಕ್ರಮದಲ್ಲಿ ವಿಶೇಷ ಬದಲಾವಣೆಗಳಿದ್ದವು. ಒಂದೊಂದು ವಿಷಯಕ್ಕೆ ಇಬ್ಬೊಬ್ಬಪ್ರತ್ಯೇಕ ಅಧ್ಯಾಪಕರು. ಚನ್ನಪ್ಪನವರಿಗೆ ಈ ವಿಧಾನಕ್ಕೆ ಒಗ್ಗಿಕೊಳ್ಳುವುದರ ಜೊತೆಗೆ ಮತ್ತೂ ಒಂದು ಕಷ್ಟ ತೋರಿತು. ಚಿಕ್ಕಂದಿನಲ್ಲಿ ತಂದೆಯಿಂದ ಕಲಿಯುತ್ತಿದ್ದರು. ತಾಯಿ ಕ್ರಿಸ್ತನ ಬಗ್ಗೆ ಹೇಳುತ್ತಿದ್ದಳು. ಸ್ಟೂಡೆಂಟ್ಸ್ ಹೋಮ್ ಸೇರಿದಾಗ ರೆ. ರಿಷ್ರಂಥ ಪ್ರೀತಿಯ ಗುರುಗಳಿದ್ದರು.ಇಲ್ಲಿ ಕಲಿಯುವಾಗ ಭೂಮಿತಿಯ ತರಗತಿಯಲ್ಲಿ ದೊಡ್ಡ ಸಮಸ್ಯೆಯೇ ಹುಟ್ಟಿಕೊಂಡಿತು. ಒಮ್ಮೆ ಭೂಮಿಯ ಪ್ರತ್ಯಕ್ಚ ಪ್ರಮಾಣಗಳನ್ನು ಕುರಿತು ಗುರು ಹೇಳಿದರು." ಬಿಂದುವಿಗೆ ಪರಿಮಾಣವಿಲ್ಲ, ಸರಳರೇಖೆಗೆ ಉದ್ದಳತೆಯುಂಟಲ್ಲದೆ ಅಗಳತೆಯಲ್ಲ ಆದರೆ ಬಿಂದುವಿಗೆ ಪರಿಮಾಣವುಂಟು. ಅಗಳತೆಯಿಲ್ಲದೆ ಸರಳರೇಖೆಯನ್ನು ಬರೆಯಲು ಬರುವಂತಿಲ್ಲ" ಎಂದರು ಚನ್ನಪ್ಪ .
ವಿಶಾಲಮನಸ್ಸಿನ ಮತೋಪದೇಶ
ಬದಲಾಯಿಸಿರೆವರೆಂಡ್ ಫಾದರ್. ಉತ್ತಂಗಿ ಚನ್ನಪ್ಪನವರು, ಕ್ರೈಸ್ತಧರ್ಮದ ಉಪದೇಶಕರಾಗಿಯೂ, ತಮ್ಮ ಬೋಧನಕ್ರಮದಲ್ಲಿ ದೇಸಿ ಪದ್ಧತಿಯನ್ನು ಅಳವಡಿಸಿಕೊಂಡರು. ಮತಗಳೆಲ್ಲದರಲ್ಲೂ, ಅವರಿಗೆ ಗೌರವ ಮತ್ತು ಶ್ರದ್ಧೆ. ಪ್ರತಿಯೊಂದು ಮತದ ಒಳ್ಳೆಯ ಅಂಶಗಳನ್ನೂ ಗುರುತಿಸಿ, ಸಮಯಬಂದಾಗ ತಮ್ಮ ನಿರೂಪಣೆಯಲ್ಲಿ ಉದಾಹರಿಸುತ್ತಿದ್ದ ಅವರ ವೈಖರಿಯನ್ನು ಅನೇಕರು ಸಹಿಸಲಿಲ್ಲ. ಮೇಲಿನ ಅಧಿಕಾರಿಗಳಿಂದ ಪುನಃ ಪ್ರತಿಭಟನೆ ಬಂತು. ಕೆಲವು ವಿದೇಶಿ ಮತಬೋಧಕರು, ಚನ್ನಪ್ಪನವರಿಗೆ ಕ್ರೈತಧರ್ಮದಲ್ಲಿ ನಂಬಿಕೆ ಇಲ್ಲವೆಂದು ಆಡಿಕೊಂಡರು. ನಾವು ಮುಗ್ಧಜನರಿಗೆ ಅವರ ಧರ್ಮದಲ್ಲಿಇರುವ ಸತ್ಯಾಂಶಗಳನ್ನು ತಿಳಿಸಿಕೊಟ್ಟಮೇಲೆಯೂ ಅವರು ಸ್ವಧರ್ಮದಲ್ಲಿ ಶಾಂತಿಯನ್ನು ಕಾಣದೆ, ಹೋದರೆ, ಕೈಸ್ತಧರ್ಮವನ್ನು ಸ್ವೀಕರಿಸಲಿ. ಮಾನಸಿಕವಾಗಿ ಅವರು ಸಿದ್ಧರಾದರೆ ಮಾತ್ರ ನಿಜವಾದ ಧರ್ಮಾಂತರ ; ಇಲ್ಲವಾದರೆ, ಸ್ಥಳಾಂತರವಷ್ಟೇ. ಚನ್ನಪ್ಪನವರು ಬಸವಣ್ಣ, ಅವರ ಅನುಭವಮಂಟಪ, ಶರಣರುಗಳ ಬಗ್ಗೆ ಪೂಜ್ಯಭಾವವನ್ನು ಇಟ್ಟುಕೊಂಡು , ಅವರಿಗೆ ಗೌರವಕೊಡುತ್ತಿದ್ದರು. ಕೊನೆಗೆ, ಮತೋಪದೇಶಕರು ಒಂದು ಸಾರಿ, ಸಿಟ್ಟಿಗೆದ್ದು, ಒಂದು ಆಜ್ಞಾಪತ್ರವನ್ನು ಜಾರಿಗೊಳಿಸಿ, ಅವರನ್ನು ಮಿಶನ್ ನಿಂದ ವಜಾಮಾಡಲು ಆಜ್ಞೆಯನ್ನು ಜಾರಿಗೊಳಿಸಿದ್ದರು. ಈ ಸಂಧರ್ಬದಲ್ಲಿ, ಕೆ. ಬಿ. ಲೂಥಿ ಎಂಬ ಅಧಿಕಾರಿಯರಿಗೆ ಕೊಟ್ಟ, ಲಿಖಿತರೂಪದ ಜವಾಬು ಹೀಗಿದ್ದಿತು. " ಕ್ರೈಸ್ತಧರ್ಮದ ಸತ್ಯಗಳನ್ನು ಸಾರಿಹೇಳುವುದೊಂದೇ ನಮ್ಮ ಗುರಿ. ಅದನ್ನು ಕಾರ್ಯರೂಪಕ್ಕೆ ತರಲು ವಿದೇಶಿಯರಾದ ತಮಗೆ ಎಷ್ಟು ಉಪದೇಶ ಸ್ವಾತಂತ್ರವಿದೆಯೊ, ನನಗೂ ಅಷ್ಟೆ ಇದೆ. ನಾನೂ ಬಾಸೆಲ್ ಮಿಶನ್ ನ ಆಜ್ಞಾಕಾರಿ ಭಕ್ತ". ನನಗೂ ಜವಾಬ್ದಾರಿ ಏನು ಎಂಬುದು ತಿಳಿದಿದೆ ", ಮತ್ತೆ ಯಾರೂ ಅವರನ್ನು ಕೆಣಕಲು ಬರಲಿಲ್ಲ. ಬಾಲ್ಯದಿಂದ ತಮಗೆ ಜ್ಞಾಪಕಶಕ್ತಿ ಕಡಿಮೆ ಎಂದುಕೊಳ್ಳುತ್ತಿದ್ದಾಗ ಅವರ ತಾಯಿ ಎಷ್ಟೋ ಸಲ ಏಕಾಂತದಲ್ಲಿ ಕುಳಿತು ದೇವರಲ್ಲಿ ಬುದ್ಧಿ ಕೊಡೆಂದು ಪ್ರಾರ್ಥಿಸಿದರು. ಒಬ್ಬೊಬ್ಬರಿಗೆ ಒಂದೊಂದು ಕೊಠಡಿ ಕೊಡುವ ವ್ಯವಸ್ಥೆ ಅಲ್ಲಿದ್ದು ತಾವಿದ್ದ ವಿದ್ಯಾರ್ಥಿನಿಲಯದ ಬಾಗಿಲು ಚಿಲಕಗಳು ಹಳೆಯದಾಗಿದ್ದು ಸಡಿಲಗೊಂಡಿದ್ದವು. ಅದೂ ಅವರಿಗೆ ವರವಾಗಿ ಪರಿಣಮಿಸಿತು. ಒಳಗೆ ಕುಳಿತು ಹೊರಗಿನಿಂದ ಚಿಲಕ ಹಾಕಿ ಕೋಣೆಯೊಳಗೆ ಕುಳಿತು ಏಕಾಂತದಲ್ಲಿ ಆಳವಾಗಿ ಅಧ್ಯಯನ ನಡೆಸಲು ಪ್ರಾರಂಭಿಸಿದರು. ಹೀಗಾಗಿ ಇವರ ಅಧ್ಯಯನ ಅತ್ಯಂತ ಖಚಿತವು ಶಾಸ್ತಬಧ್ದವೂ ಆಗುತ್ತಾ ನಡೆಯಿತು. ಹೊರಗಿನಿಂದ ಚಿಲಕ ಹಾಕಿಕೊಂಡು ಒಳಗೆಯೇ ಕುಳಿತು ಹೀಗೆ ಎಷ್ಟೋ ಕಾಲ ಇವರು ಅದ್ಯಯನ ನಡೆಸುತ್ತಿದ್ದರು. ಹೀಗೂ ತನ್ನ ಸಹಪಾಠಿಯೊಬ್ಬರ ಗಮನಕ್ಕೆ ಬಂದು ಪ್ರಾಧ್ಯಾಪಕರವರೆಗೂ ಈ ಸುಧ್ದಿ ಹೋಗಿ ಚನ್ನಪ್ಪನವರ ಮೇಲೆ ಮೊದಲಿನಿಂದ ಅಸಹನೆಗೊಂಡಿದ್ದ ಗುರುವೊಬ್ಬರು ಕೋಣೆಯೊಳಕ್ಕೆ ಇದ್ದಕ್ಕಿದ್ದಂತೆ ನುಗ್ಗಿ ಒಳಗೆ ಬಂದು " ಒಳಗೆ ಕುಳಿತು ಏನು ನಡೆಸುತಿದ್ದಿ ?" ಎಂದು ಅನುಮಾನಿಸುತ್ತಿದ್ದಂತೆ ಚನ್ನಪ್ಪನವರು ಓದುತ್ತಿದ್ದ ಜಾನ್ ಲಾಕ್ ನ ಗ್ರಂಥದ ಕಡೆ ನೋಡಿ " ಈ ಗ್ರಂಥದೊಳಗಿನ ವಿಷಯ ನಿನಗೆ ತಿಳಿಯುತ್ತದೆಯೋ ? ಎಂದು ಗಡುಸಾಗಿ ಪ್ರಶ್ನಿಸಿದ್ದೂ ಉಂಟು ಮಹಾಅಭಿಮಾನಿಶಾಲಿಗಳಾದ ಚನ್ನಪ್ಪನವರು ಅಷ್ಟೇ ದೃಢವಾಗಿ " ನನಗೆ ತಿಳಿಯದಿದ್ರೆ ತನ್ನನ್ನು ಕೇಳುತ್ತೇನೆ" ಎಂದದಿದ್ದರು. ಈ ಘಟನೆಯನ್ನು ಉತ್ತಂಗಿ ಚನ್ನಪ್ಪನವರು ತಾವೇ ಉಲ್ಲೇಖಿಸಿದ್ದಾರೆ ಎಲ್ಲಿಯೋ ಗುರುಗಳ ಹೆಸರನ್ನು ಹೇಳಲು ಹೋಗಿಲ್ಲ. ಗುರುಗಳನ್ನು ಅವಮಾನಿಸಲು ಹೋಗಲಿಲ್ಲ. ಅದಕ್ಕೆ ಬದಲಾಗಿ ತಮ್ಮ ನಿಲುವನ್ನು ಖಚಿತ ಪಡಿಸಿದ್ದಾರೆ. ಜಾನ್ ಲಾಕ್ ನಂತ ಅತ್ಯಂತ ಕಠಿಣವೆನ್ನುವಂತೆ ತೋರುವ ತತ್ವಜ್ಞಾನಿಯ ಗ್ರಂಥಗಳನ್ನು ಓದಿ ಅರಗಿಸಿಕೊಳ್ಳುವ ಅವರ ಬುಧ್ದಿ ಮತ್ತೆ ಹಿಡಿದುದನ್ನು ಕೊನೆಯ ವರೆಗೂ ಸಾಧಿಸುವ ಮಾನಸಿಕ ಶಕ್ತಿ ಇವುಗಳು ಅಪೂರ್ವವಾದುವು.
ಕ್ರೈಸ್ತಧರ್ಮದ ನಂಟು
ಬದಲಾಯಿಸಿಕ್ರೈಸ್ತ ಧರ್ಮದ ಬಗ್ಗೆ ಅಧ್ಯಯನ ನಾಸ್ತಿಕವಾದಿಗಳ ಅಧ್ಯಯನವಾಗದೆ ಪೂರ್ಣವಾಗುವುದಿಲ್ಲ ಎಂಬುದನ್ನು ತಿಳಿದಿದ್ದರೂ ತವುಲನಿಕವಾದ ದೃಷ್ಟಿ ಇವರಿಗೆ ಸಹಜವಾಗಿ ಪ್ರಾಪ್ತವಾದದ್ದರಿಂದಲೇ ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಇವರು ವಿಶ್ವದ ಧರ್ಮಗಳನ್ನು ಎಲ್ಲ ಅಷ್ಟೇ ಪ್ರೀತಿ ಅಭಿಮಾನಗಳಿಂದ ಅಭ್ಯಸಿಸಿದರು. ಪಂಪನ ಪೂರ್ವಜರು ಬ್ರಾಹ್ಮಣರು ಆದರೆ ಪಂಪನ ತಂದೆ ಹಾಗು ಪಂಪ ಜೈನರು ಎರಡು ಧರ್ಮಗಳ ತಿರುಳು ಅವನ ಕಾವ್ಯಗಳಲ್ಲಿ ಫಲಿಸಿದೆ. ಚನ್ನಪ್ಪನರ ಮೂಲಜರು ಲಿಂಗಾಯಿತರು ತಾತ ಪಾರುಪತ್ತೆದಾರ ಚನ್ನಪ್ಪ ಕೂಡ ಪಂಚ ಸಾಲಿ ಲಿಂಗಾಯಿತರು ಗಂಡ ಮಕ್ಕಳಾಗಲಿಲ್ಲ ಎಂದು ವ್ಯಥೆ ಮೊದಲ ಹೆಂಡತಿ ಮಲ್ಲವ್ವನಿಗೆ ಎರಡು ಹೆಣ್ಣುಮಕ್ಕಳಾದವು . ಗಂಡು ಮಕ್ಕಳಾಗಳಿಲ್ಲಾಗಲಿಲ್ಲ. ಎರಡನೇಯವಳನ್ನು ಮದುವೆಯಾದರು ಆಕೆಗೂ ಮಕ್ಕಳಾಗಲಿಲ್ಲ. ಅದೇ ಚಿಂತೆಯಲ್ಲಿ ಆಕೆ ಪ್ರಾಣ ಕಳೆದುಕೊಂಡಳು ವ್ಯತಿತರಾಗಿ ಚನ್ನಪ್ಪ ಊರುಬಿಟ್ಟು ಪಕ್ಕದೂರಲ್ಲಿ ಜೀತದ ಆಳಾಗಿ ದುಡಿದರು. ಚನ್ನಪ್ಪನವರ ಮನಸ್ಸು ಧರ್ಮಗ್ರಂಥಗಳ ಕಡೆ ಹೊರಳಿತು. ಇವರ ಚಿಂತೆಯನ್ನು ತಿಳಿದ ಪಾದ್ರಿಯೊಬ್ಬರು ಬೈಬಲ್ಲಿನ ಹೊಸ ಒಡಂಬಡಿಕೆ ಪ್ರತಿಯನ್ನು ಕೊಟ್ಟರು. ಅವರಲ್ಲಿ ಆಸಕ್ತಿ ಹುಟ್ಟಿದ ಚನ್ನಪ್ಪ ಅದರ ಓದಿನಲ್ಲಿ ಮುಳುಗಿದರು. ಅದರಲ್ಲಿ ನಂಬಿಕೆ ಹುಟ್ಟಿತು. ಈ ಗ್ರಂಥದ ಬಗ್ಗೆ ತನ್ನ ಗಂಡನಿಗೆ ಉಂಟಾದ ಅಭಿಮಾನ ಅದೇನೆಂದು ಕೇಳಿದಳು ಕ್ರೈಸ್ತ ಧರ್ಮದ ಗ್ರಂಥ ಈಗ ನಾನದೇ ಧರ್ಮ ನಂಬಿದ್ದೇನೆ ಕ್ರಿಶ್ಚಿಯನ್ ಆಗುತ್ತೇನೆ. ನೀ ಇಷ್ಟಪಟ್ಟರೆ ಬಾ ಇಲ್ಲದಿದ್ದರೆ ಬಿಡು ಎಂದು ಬಿಟ್ಟರು. ತಾಯ ಬಳಿ ಹೋದ ಆಕೆ ಗಂಡನನ್ನು ಹಿಂಬಳಿಸಲು ನಿಷ್ಚಯಿಸಿ ಬಂದಳು ಇಬ್ಬರು ದಾರವಾಡಕ್ಕೆ ಬಂದು ಕ್ರಿಶ್ಚಿಯನ್ ರಾಗಲು ಬಯಸಿದರು. ಪಾದ್ರಿಗಳು ಇವರ ಶ್ರಧ್ಧೆಯನ್ನು ಅನುಮಾನಿಸಿದಾಗ ಅಲ್ಲಿ ಸೇವೆಯಲ್ಲಿ ನಿಂತು ಬಿಟ್ಟರು ಅವರ ತಾತ ಕ್ರೈಸ್ತರಾದದ್ದು ಹಾಗೆ. ಅವರು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಉತ್ತಂಗಿಯ ಪಾರು ಪತ್ತೆಗಾರರಾಗಿದ್ದುದರಿಂದ ಅವರಿಗೂ ಹಾಗೂ ಅವರ ಮಗ ದಾನಿ ಏಲಪ್ಪ ಮತ್ತೆ ಅವರ ಮಗ ಚನ್ನಪ್ಪ ಇವರೆಲ್ಲರ ಹೆಸರಿನ ಜೊತೆ ಉತ್ತಂಗಿ ಸೇರಿ ಅವರು ಉತ್ತಂಗಿ ಮನೆತನದವರೆಂದು ಖ್ಯಾತರಾದವರು ತಾತ ಲಿಂಗಾಯಿತರಾಗಿದ್ದವರು ಕ್ರೈಸ್ತನಾದ ಮಕ್ಕಳು ಮೊಮ್ಮಕ್ಕಳು ಕ್ರೈಸ್ತರಾದರು. ಆದರೆ ಕ್ರೈಸ್ತರಾದ ಚನ್ನಪ್ಪನವರ ಮನಸ್ಸು ವೀರಶೈವ ಧರ್ಮ ಹಾಗೂ ಸಾಹಿತ್ಯಗಳ ಬಗ್ಗೆ ಹೊರಳಿದ್ದು ಆಶ್ಚರ್ಯಕರವಾಗಿತ್ತು. ಪ್ರಥಮ ದರ್ಜೆಯಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಿದ್ದಂತೆ ಈ ಸಂಸ್ಥೆಯಿಂದ ಹೇಗೂ ಪಾರಾಗಿ ಕಲ್ಕತ್ತದಲ್ಲಿ ನೆಲೆಸುವ ಇವರ ಯೋಚನೆ ಅಲ್ಲಿನ ಬಿಷಪ್ ನಿಧನರಾದುದರಿಂದ ಮಣ್ಣು ಪಾಲಾಯಿತು. 27 ನೇ ವಯಸ್ಸಿನಲ್ಲಿ ಸುಭಕ್ತವ್ವಲನ್ನು ಮದುವೆಯಾದರು. ಹತ್ತು ಮಕ್ಕಳು ಹುಟ್ಟಿದರು. ಹುಟ್ಟಿದವರಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಎರಡು ಗಂಡು ಮಕ್ಕಳು ತೀರಿಕೊಂಡರು. ಅನಾಥ ಗಂಡುಮಕ್ಕಳ ಶಾಲೆಯ ಮುಖ್ಯಸ್ಥರಾಗಿದ್ದಾಗ ಅಲ್ಲಿನ ಮಕ್ಕಳನ್ನು ಸ್ವಂತ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಂಡರು. ದಡ್ಡರಾದವರನ್ನು ಕರೆದು ಖಾಸಗಿಯಾಗಿ ಪಾಠ ಹೇಳಿಕೊಟ್ಟು ಅವರ ಕೀಳರಿಮೆಯನ್ನು ದೂರ ಮಾಡುತ್ತಿದ್ದರು. ಭೋದನೆ ಬದುಕಿನ ನಿರ್ಧಾರವಾಗಿತ್ತು. ಅವರ ಭೋದನೆಯ ವಿಧಾನ ಅಪೂರ್ವವಾದ್ದು. ಕ್ರೈಸ್ತ ಧರ್ಮವು ನಾಗರಪಂಚಮಿ ಹಬ್ಬವೊ ಎಂಬ ಚರ್ಚಾಗೋಷ್ಠಿಯಲ್ಲಿ ಇವರು ಮಂಡಿಸಿದ ಪ್ರಬಂದವಂತೂ ಭಾಷೆ ಭಾವ ಶೈಲಿ ವಿವೇಚನಾ ರೀತಿ ಈ ದೃಷ್ಠಿಗಳಿಂದಾಗಿವೆ. ದೇಶೀಯ ಸಂತರು ಶರಣರು ಇಂತವರ ಕಥೆಗಳನ್ನು ಪ್ರಸಂಗಗಳನ್ನು ಬಳಸಿಕೊಂಡು ಭೋದಿಸುತ್ತಿದ್ದ ರೀತಿ ಪಂಡಿತ ಪಾಮರರೆಲ್ಲರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಚನ್ನಪ್ಪರು ಹುಟ್ಟು ಹೋರಾಟಗಾರರು ಅನ್ಯಾಯದ ವಿರುಧ್ಧ ಎಂದೂ ಅವರು ನಿರ್ಭಿತರಾಗಿ ಪ್ರತಿಭಟಿಸುತ್ತಿದ್ದರು. ಅಲ್ಲಿಯವರೆಗೆ ಕ್ರೈಸ್ತ ದೈವಜ್ಞಾನ ಶಾಲೆಯಲ್ಲಿ ಪ್ರಥಮ ದರ್ಜೆ ಪಡೆದವರಿಗೆ 17 ರುಪಾಯಿಗಳು ವೇತನ ನೀಡುತ್ತಿದ್ದರು. ಧರ್ಮಪ್ರಚಾರಕರಾದಾಗ ಧರ್ಮಪ್ರಚಾರಕರಲ್ಲಿ ಈ ವ್ಯತ್ಯಾಸ ಬೇಡವೆಂದು ಹೋರಾಡಿ ಗೆದ್ದರು. ಈ ಕ್ರಮವನ್ನು ವಿರೋಧಿಸಿದರು ಚೆನ್ನಪ್ಪ ಸ್ವಯಂ ಪ್ರತಿಯೊಬ್ಬರು ವೇತನ ಪಡೆದು ಅದಅಅರಲ್ಲಿ ಶೇಖಡ 2 ರಷ್ಟನ್ನು ಸಂತೋಷದಿಂದ ವಂತಿಗೆಯಾಗಿ ನೀಡುವ ಅವಕಾಶವನ್ನು ಹೋರಾಡಿ ಪಡೆದೇ ಪಡೆದರು. ಈ ಕಾರಣಗಳಿಂದಾಗಿ ರೆ ಲೂಥಿಯಂಥವರು ಚನ್ನಪ್ಪನವರ ಸ್ವತಂತ್ರ ವಿಚಾರ ಶಕ್ತಿಯನ್ನು ಅವಿಧೇಯ ಎಂದು ಸಾಕಷ್ಟು ತೊಂದರೆಗೆ ಗುರಿಮಾಡಿದ್ದೂ ಇದೆ. ಚನ್ನಪ್ಪನವರು ಯಾವುದಕ್ಕೂ ಅಂಜಲಿಲ್ಲ. ಕೆಲಸ ಹೋಗುವುದಾದರೂ ಸಿದ್ಧವಾಗಿದ್ದರು. ಅವರು ಧರ್ಮ ಪ್ರಚಾರದ ಕಾರ್ಯವನ್ನು ಆತ್ಮತೃಪ್ತಿಯಿಂದ ಮಾಡಿದರು.
೧೯೫೦ ರಲ್ಲಿ ಉತ್ತಂಗಿಯವರು, ಇನ್ನೊಬ್ಬ ವಿದ್ವಾಂಸ, ಎಸ್.ಎಸ್.ಭೂಸನೂರಮಠ ರ ಜೊತೆಗೆ, " ಮೋಳಿಗೆ ಮಾರಯ್ಯ",ರಾಣಿ ಮಹಾದೇವಿಯರು, ವಚನಗಳ ಸಂಪಾದನೆಯ ಹೊಣೆಯನ್ನು ಹೊತ್ತುಕೊಂಡರು. ಒಬ್ಬ ಬರೆಯುವವನನ್ನು ನೇಮಿಸಿಕೊಂಡು ಪ್ರತಿತಿಂಗಳೂ ಅವನಿಗೆ ಸಂಬಳದ ವ್ಯವಸ್ಥೆಮಾಡಿದರು. ಪ್ರತಿದಿನವೂ ಸುಮಾರು ೬ ಗಂಟೆ ಕೆಲಸ, ೧೮ ತಿಂಗಳು ಹಿಡಿಯಿತು. ವಚನಗ್ರಂಥದ ಕೈಬರಹ ಪ್ರತಿಗಳ ಸಂಪೂರ್ಣಸಂಗ್ರಹಣ, ಶುದ್ಧೀಕರಣ, ಮತ್ತು ಸಂಯೋಜನೆ, ಹೀಗೆ ೩ ದೃಷ್ಟಿಕೋನಗಳನ್ನಿಟ್ಟುಕೊಂಡು ಅವರು ಸಿದ್ಧಪಡಿಸಿದರು. ತಮ್ಮ ವಿರಾಮಸಮಯವನ್ನೆಲ್ಲಾ ಕನ್ನಡ ಸಾಹಿತ್ಯದ ಹಲವು ಹಳೆಯ ಗ್ರಂಥಗಳ ಸಂಪಾದನೆಗಾಗಿ ಕಳೆದರು. ವಿಮರ್ಶಾತ್ಮಕ ಸಂಶೋಧನೆ ಅವರ, ವಿಶೇಷ ಒಲವುಗಳಲ್ಲೊಂದಾಗಿತ್ತು. ಜಯದೇವಿತಾಯಿ ಲಿಗಾಡೆಯವರ ಆದೇಶದಂತೆ, ರೆ. ಫಾದರ್ ಚನ್ನಪ್ಪನವರು, ಸಿದ್ಧರಾಮ ಸಾಹಿತ್ಯವನ್ನು ಸಂಗ್ರಹಿಸಿ ವಿಮರ್ಶಾತ್ಮಕ ಮುನ್ನುಡಿಯನ್ನು ಬರೆಯುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಅದಕ್ಕಾಗಿ ತಿಂಗಳಿಗೆ ೧೦೦ ರೂಪಯಿ ಗೌರವಧನವನ್ನು ಸ್ವೀಕರಿಸಲು ಒಪ್ಪಿಕೊಂಡರು. ಅದರೆ, ಕಾಯಿಲೆ ಬಿದ್ದರು. ತಾಯಿಯವರು ಹಣಕಳಿಸಿದಾಗ ಸ್ವೀಕರಿಸದೇ ಬಲವಂತದಿಂದ ಒಪ್ಪಿಸಬೇಕಾಯಿತು. ನಾಡಿನುದ್ದಕ್ಕೂ ತಿರುಗಾಡಿ, ಸುಮಾರು ೨೦ ಕೈಬರಹಗಳ ಪ್ರತಿಗಳನ್ನು ಸಂಗ್ರಹಿಸಿದರು. ಒಟ್ಟು ೨,೦೦೦ ವಚನಗಳು. ಅವರಿಗೆ ತತ್ವಶಾಸ್ತ್ರ, ಪ್ರಿಯ. ವಿದೇಶಿ ಮತ್ತು ಭಾರತೀಯ. ಉಪನಿಷತ್ತು, ಭಗವದ್ಗೀತೆ, ಮುಂತಾದ ಉದ್ಗ್ರಂಥಗಳನ್ನು ಓದಿದರು. ಆ ಸಮಯದಲ್ಲಿ ತಂದೆ ತೀರಿಕೊಂಡರು. ತಾವು ಕೂಡ ಭಯಂಕರೋಗಕ್ಕೆ ತುತ್ತಾದರು. ೬ ವರ್ಷಗಳ ಬಳಿಕ ಗುಣವಾಯಿತು. ಹಸ್ತಪ್ರತಿ ಸಿದ್ಧವಾಯಿತು. ಆದರೆ ಅಚ್ಚುಮಾಡಲು ಹಣವಿಲ್ಲ. ಸುದೀರ್ಘಮುನ್ನುಡಿ ಬರೆದರು. ಧಾರವಾಡದ ಕರ್ನಾಟಕ ಪ್ರಿಂಟಿಂಗ್ ಪ್ರೆಸ್,ನ ಮಾಲೀಕ,ಯಶವಂತರಾವ್ ಜಥಾರರು, ಪುಸ್ತಕವನ್ನು ಪ್ರಕಟಿಸಲು ಒಪ್ಪಿದರು. ಮೊದಲು ೫೦೦ ರೂಪಾಯಿ ಸಾಲಮಾಡಬೇಕಾಯಿತು. ಆ ಸಮಯಕ್ಕೆ ಅವರಿಗೆ ಹಾವೇರಿಗೆ ವರ್ಗವಾಯಿತು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ಬಂತು. ಚನ್ನಪ್ಪನವರ ಸಾಹಿತ್ಯಕೃಷಿಯನ್ನು ಅಭಿನಂದಿಸಿ ಅಲ್ಲಿನ ಹಿರಿಯ ಸಾಹಿತಿಗಳು ತಮ್ಮ ಕೈಲಾದ ಸಹಾಯಮಾಡುವುದಾಗಿ ಭರವಸೆಕೊಟ್ಟರು. ಗರೂಡ ಸದಾಶಿವರಾಯರು, ತಮ್ಮ ನಾಟಕ ಪ್ರದರ್ಶನದ ಒಂದು ಪ್ರದರ್ಶನದ, ೩೦೦ ರೂಪಾಯಿ ಹಣವನ್ನು ಕಾಣಿಕೆಯಾಗಿ ತಂದುಕೊಟ್ಟರು. ಉಳಿದ ಮೊತ್ತವನ್ನು ಹೇಗೋ ಹೊಂದಿಸಿ, ರೆ. ಫಾದರ್ ಉಚ್ಚಂಗಿಯವರು, ಋಣಮುಕ್ತರಾಗಿ, ಧಾರವಾಡದಿಂದ ಹಾವೇರಿಗೆ ಹೋದರು.
ಪ್ರಶಸ್ತಿಗಳು ಮತ್ತು ಗೌರವ
ಬದಲಾಯಿಸಿ೧೯೪೯ ರಲಿ, ಕಲ್ಬುರ್ಗಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರೆ. ಫಾದರ್ ಉತ್ತಂಗಿ ಬಸಪ್ಪನವರು,ಆಯ್ಕೆಯಾಗಿದ್ದರು. ಚರ್ಚಿನ ಭರತೀಕರಣದ ಬಗ್ಗೆ ತೀವ್ರವಾಗಿ ಹೋರಾಡಿದರು. ತಮ್ಮ ಹೆಂಡತಿ ೨೫ ವರ್ಷಗಳ ಕಾಲ ತೀವ್ರವಾಗಿ ಅಸ್ವಸ್ಥರಾಗಿದ್ದು ಹಾಸಿಗೆ ಹಿಡಿದಿದ್ದರು. ಅದನ್ನು ತಲೆಗೆ ಹಾಕಿಕೊಳ್ಳದೆ, ಶ್ರದ್ಧೆಯಿಂದ ಕೆಲಸಮಾಡಿದರು. ಚನ್ನಪ್ಪನವರು ಹಾಸ್ಯಪ್ರಿಯರು ಕೂಡ. ತೀಕ್ಷ್ಣಮತಿತ್ವ, ವಿಮರ್ಷನಾತ್ಮಕ ದೃಷ್ಟಿಕೋನ, ಹೊಸ-ವಿಷಯಗಳನ್ನು ತಿಳಿಯುವ ಕುತೂಹಲ, ಉಜ್ವಲರಾಷ್ಟ್ರಪ್ರೇಮ, ಸಮಾಜದ ಹಿತಚಿಂತನೆಗಳು , ಅವರನ್ನು ತಮ್ಮ ಕೆಲಸ ಸಾಧನೆಯ ಯಶಸ್ಸಿನಲ್ಲಿ ಮೇಲೆತ್ತಲು ಬಹಳ ಮಹತ್ವದ ಪಾತ್ರವನ್ನು ವಹಿಸಿದ್ದವು. ೩೩ ವರ್ಷ ಸತತವಾಗಿ ದುಡಿದರು. ಕೊನೆ-ಕೊನೆಯಲ್ಲಿ ಆರೋಗ್ಯ ಚೆನ್ನಾಗಿರಲಿಲ್ಲ. ಜೀವನದ ಸಂಕಷ್ಟಮರೆತು ತಮ್ಮನ್ನು ಕನ್ನಡ ಸಾಹಿತ್ಯಕ್ಕೆ, ಮುಡುಪಾಗಿಟ್ಟರು. ಬಾಸೆಲ್ ಚರ್ಚಿನ ಭಾರತೀಕರಣ,ಮತ್ತು ಭಾರತದ ಸ್ವಾತಂತ್ರ್ಯ, ಇವರ ಕನಸುಗಳು. ಅವರ ಜೀವಿತದ ಸಮಯದಲ್ಲೇ ಈ ಎರಡೂ ಕನಸುಗಳು ನನಸಾದವು. ಕಾಲಕಳೆದಂತೆ, ಕಡೆಗೊಂದು ದಿನ, ಮಿತ್ರ ಕೊನೆಸಗ್ರ, ರವರು ನೋಡುತ್ತಿದ್ದಂತೆ, "ಹೇ ಪ್ರೇಮಸ್ವರೂಪಿ " ಎಂದು ದೇವರನ್ನು ಸ್ಮರಿಸಿ, ಕಣ್ಣುಮುಚ್ಚಿದರು.
ರೆವರೆಂಡ್ ಫಾದರ್, ಉತ್ತಂಗಿ ಚನ್ನಪ್ಪನವರ ಪ್ರಕಟಣೆಗಳು :
ಬದಲಾಯಿಸಿ೧. ಸರ್ವಜ್ಞ. ೨. ಸಿದ್ಧರಾಮ ಸಾಹಿತ್ಯ ಸಂಗ್ರಹ, ಬಸವೇಷ್ವರ. ೩. ಆತ್ಮ ಚರಿತ್ರೆ. ೪. ಕ್ರೈಸ್ತ, ವೀರಶೈವಧರ್ಮದ ಒಟ್ಟು ೧೬ ಪುಸ್ತಕಗಳನ್ನು ಬರೆದರು. ೫. ಕ್ರೈಸ್ತಧರ್ಮದ ಹಿರಿಯರನ್ನು ಕುರಿತ ಪುಸ್ತಕ.
ಇವರ ಇತರ ಸಂಶೋಧನಾ ಕೃತಿಗಳು ಇಂತಿವೆ:
ಬದಲಾಯಿಸಿ- ಸಿದ್ಧರಾಮ ಸಾಹಿತ್ಯ ಸಂಗ್ರಹ
- ಮೋಳಿಗೆ ಮಾರಯ್ಯನ ವಚನಗಳು
- ರಾಣಿ ಮಹಾದೇವಿಯ ವಚನಗಳು
- ಆರಯ್ಯನ ವಚನಗಳು
- Heart of Lingayat Religion
ಉತ್ತಂಗಿ ಚನ್ನಪ್ಪನವರಿಗೆ ದೇವರಾಜ ಬಹಾದ್ದೂರ ಪ್ರಶಸ್ತಿ ಲಭಿಸಿದೆ. ಉತ್ತಂಗಿ ಚನ್ನಪ್ಪನವರು ೧೯೪೯ರಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
-ಸದಾಶಿವ ಒಡೆಯರ, ಪ್ರೊ. ಎಲ್. ಎಸ್. ಎಸ್, ಶೇಷಗಿರಿರಾಯರ ಕಿರು ಪುಸ್ತಕಗಳಿಂದ. ೧೯೭೬.