ಸುಕನ್ಯಾ ಮಾರುತಿ ಇವರು ೧೯೫೬ ಮಾರ್ಚ್ ೧ರಂದು ಬಳ್ಳಾರಿ ಜಿಲ್ಲೆಯ ಕೊಟ್ಟೂರು ಗ್ರಾಮದಲ್ಲಿ ಜನಿಸಿದರು. ಕನ್ನಡದಲ್ಲಿ ಎಂ.ಎ, ಪದವಿ ಪಡೆದ ಸುಕನ್ಯಾ ಧಾರವಾಡದಲ್ಲಿ ಪ್ರಾಧ್ಯಾಪಿಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಂಡಾಯ ಸಾಹಿತ್ಯ–ಸಂಘಟನೆ,ಮಹಿಳಾ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯೆಯಾಗಿ ಕೆಲಸ ನಿರ್ವಹಿಸಿರುವ ಅವರು ಗೋಕಾಕ್ ಚಳುವಳಿ, ದಲಿತ ಬಂಡಾಯ ಚಳುವಳಿ,ಕುಲಕಸುಬು ದೇಶೀಕಲೆಗಳ ಅಭಿವೃದ್ಧಿಗಾಗಿ ಸಂಸ್ಕೃತಿ ಸಂಗ್ರಾಮ ಪ್ರತಿಷ್ಥಾನದ ಸ್ಠಾಪನೆ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು. ಇವರ ಸಾಹಿತ್ಯ ಸಾಧನೆಗಳಿಗೆ ಅಖಿಲಭಾರತದ ದಲಿತ ಸಾಹಿತ್ಯ ಸಮ್ಮೇಳನದ ಗೌರವ ಪ್ರಶಸ್ತಿ,ಅಂಬೇಡ್ಕರ್ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.

  • ಪರಿಸರದಲ್ಲಿ
  • ಪಂಚಾಗ್ನಿ ಮಧ್ಯೆ
  • ನಾನು ನನ್ನವರು
  • ತಾಜಮಹಲಿನ ಹಾಡು
  • ಬಿಂಬದೊಳಗಣ ಮಾತು

ಸಂಪಾದನೆ

ಬದಲಾಯಿಸಿ
  • ಸಂಸ್ಕೃತಿ
  • ಪ್ರಣಯಿನಿ
  • ಪ್ರಶಾಂತ