ಹನುಮಾಕ್ಷಿ ಗೋಗಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಹನುಮಾಕ್ಷಿ ಗೋಗಿ ಇವರು ೧೯೫೫ ಜೂನ ೧ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೈಚಬಾಳ ಗ್ರಾಮದಲ್ಲಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಅದೇ ವಿಶ್ವ ವಿದ್ಯಾಲಯದಿಂದ ಶಾಸನ ಶಾಸ್ತ್ರದಲ್ಲಿಯೂ ಅವರು ಪ್ರಥಮ ಶ್ರೇಣಿಯೊಂದಿಗೆ ಪ್ರಥಮ ಸ್ಥಾನವನ್ನೂ ಪಡೆದುಕೊಂಡರು.
ಸದ್ಯ ಕರ್ನಾಟಕ ರಾಜ್ಯ ಸರಕಾರದ ಸಹಕಾರ ಇಲಾಖೆಯ ಸೇವೆಯಲ್ಲಿದ್ದಾರೆ. ಹುಬ್ಬಳ್ಳಿಯಲ್ಲಿ ನೆಲೆಸಿರುವ ಇವರು, ಲೇಖಕಿ, ಸಂಶೋಧಕಿ ಹಾಗೂ ಪ್ರಕಾಶಕಿಯಾಗಿದ್ದಾರೆ. ಮಹಿಳಾ ಸಾಹಿತ್ಯಿಕಾ ಎನ್ನುವ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ಅದರ ಮೂಲಕ ಅನೇಕ ಲೇಖಕಿಯರ ಸಾಹಿತ್ಯದ ವಿವಿಧ ಪ್ರಕಾರದ ೪೯ ಕೃತಿಗಳನ್ನು ಪ್ರಕಟಗೊಳಿಸಿದ್ದಾರೆ.
ಕೃತಿಗಳು
ಬದಲಾಯಿಸಿ- ವ್ಯಾಸಂಗ (೧೯೮೩)
- ಮುದ್ನೂರು ಮತ್ತು ಯಡ್ರಾಮಿ ಶಾಸನಗಳು (೧೯೯೩) (ಡಾ. ಬಿ. ಆರ್. ಹಿರೇಮಠ ಜೊತೆಯಲ್ಲಿ)
- ಸುರಪುರ ತಾಲೂಕಿನ ಶಾಸನಗಳು (೧೯೯೪)
- ಕಲಬುರ್ಗಿ ಜಿಲ್ಲೆಯ ಶಾಸನಗಳು (೧೯೯೫)
- ಕರ್ನಾಟಕ ಭಾರತಿ ಸೂಚಿ (೨೦೦೨)
- ಅನುಶಾಸನ (೨೦೦೨)
- ಉಪ್ಪಾರ ಹಣತೆ (೨೦೦೨)
- ಬೀದರ ಜಿಲ್ಲೆಯ ಶಾಸನಗಳು (೨೦೦೫)
- ಕಾಳಾಮುಖ ಮತ್ತು ಪಾಶುಪತ ದೇವಾಲಯಗಳು (೨೦೦೭) (ಅನುವಾದ ಕೃತಿ)
- ಲಕ್ಕುಂಡಿ ಶಾಸನಗಳು (೨೦೦೮)
- ಡಂಬಳ: ಸಾಂಸ್ಕೃತಿಕ ಅಧ್ಯಯನ (೨೦೦೮) (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ)
- ಜಗದ್ಗುರು ತೋಂಟದಾರ್ಯ ಮಠದ ದಾಖಲು ಸಾಹಿತ್ಯ (೨೦೦೯) (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ)
- ನವಿಲುಗುಂದ ಸಿರಿ (ಶತಮಾನೋತ್ಸವ ಸ್ಮರಣ ಸಂಚಿಕೆ) (೨೦೦೯)
- ಅಣ್ಣಯ್ಯ ತಮ್ಮಯ್ಯಗಳ ಪುರಾಣ (೨೦೧೦) (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ)
- ಚೈತನ್ಯಶೀಲೆ (ಸರೋಜಿನಿ ಚವಲಾರ ಅವರ ಸಂಭಾವನಾ ಗ್ರಂಥ) (೨೦೧೧)
- ಹುಬ್ಬಳ್ಳಿ ತಾಲೂಕಿನ ಶಾಸನಗಳು (೨೦೧೩)
- ಡಾ.ಆರ್.ಎನ್.ಗುರವ ಸಂಪ್ರಬಂಧಗಳು (೨೦೧೪)
- ರಾಜಮನೆತನದ ಚರಿತ್ರೆಗಳು (೨೦೧೪)
- ಲಕ್ಷ್ಮೇಶ್ವರದ ಶಾಸನಗಳು (೨೦೧೫)
- ದಂಡಿನ ದಾರಿ (೨೦೧೬)
- ಜಿನಸಮಯ (೨೦೧೭)
- ಯಾದಗಿರಿ ಜಿಲ್ಲೆಯ ಶಾಸನಗಳು (೨೦೧೯)
ಪುರಸ್ಕಾರಗಳು
ಬದಲಾಯಿಸಿ- ೧೯೯೧ - ಆಡಳಿತಾತ್ಮಕ ಸೇವೆಗೆ ಸನ್ಮಾನ.೪ನೆಯ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ನರಗುಂದ
- ೧೯೯೫ - ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ, ಬೆಂಗಳೂರು.
- ೧೯೯೬ - 'ಕಲ್ಬುರ್ಗಿ ಜಿಲ್ಲೆಯ ಶಾಸನಗಳು' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಬೆಂಗಳೂರು.
- ೨೦೦೪ - ಮಾತೋಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ.
- ೨೦೦೫ - ಡಾ. ಜ. ಚ. ನಿ. ಪ್ರಶಸ್ತಿ, ರಾಜೂರು.
- ೨೦೦೫ - ಬಾಲಕೃಷ್ಣ ಪ್ರಶಸ್ತಿ, ನರೇಗಲ್ಲ.
- ೨೦೦೫ - ಲೇಪಾಕ್ಷಸ್ವಾಮಿ ಪ್ರಶಸ್ತಿ, ಬೆಂಗಳೂರು.
- ೨೦೦೬ - ಡಾ. ಶೈಲಜ ಉಡಚಣ ಪ್ರಶಸ್ತಿ, ಕಲಬುರ್ಗಿ.
- ೨೦೦೬ - ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ, ಬೆಂಗಳೂರು.
- ೨೦೦೭- ಡಾ. ದ. ರಾ. ಬೇಂದ್ರೆ ಪ್ರಶಸ್ತಿ, ಅಡ್ನೂರು.
- ೨೦೦೯ - ಡಾ. ಬಾ. ರಾ. ಗೋಪಾಲ ಪ್ರಶಸ್ತಿ, ಇತಿಹಾಸ ಅಕ್ಯಾಡಮಿ, ಬೆಂಗಳೂರು.
- ೨೦೧೪ - ಉತ್ತರ ಕರ್ನಾಟಕ ಲೇಖಕಿಯರ ಸಂಘದಿಂದ ಇನ್ಫೋಸಿಸ್ ಫೌಂಡೇಶನ್ ಪ್ರಶಸ್ತಿ
- ೨೦೧೪ - ಚಂದ್ರಗಿರಿ ಮಹೋತ್ಸವ ಸಮಿತಿ ವತಿಯಿಂದ ಶಾಸನ ಸಾಹಿತ್ಯ ಪ್ರಶಸ್ತಿ
- ೨೦೧೫ - ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ೨೦೧೨ರ ಗೌರವ ಪ್ರಶಸ್ತಿ
- ೨೦೧೫ - ಕರ್ನಾಟಕ ಲೇಖಕಿಯರ ಸಂಘದಿಂದ ಪುಸ್ತಕಕ್ಕೆ ಜಯಮ್ಮ ಕರಿಯಣ್ಣ ದತ್ತಿ ಬಹುಮಾನ
- ೨೦೧೫ - ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನದಲ್ಲಿ ಲೋಪಾಮುದ್ರಾ ಪ್ರಶಸ್ತಿ
- ೨೦೧೫ - ಜಗದ್ಗುರು ತೋಂಟದಾರ್ಯ ಮಠದಿಂದ ಸನ್ಮಾನ
- ೨೦೧೫ - ಕಸಾಪದಿಂದ ಟಿ.ಗಿರಿಜಮ್ಮ ಸಾಹಿತ್ಯ ಪ್ರಶಸ್ತಿ
- ೨೦೧೬ - ಮಲ್ಲೆಪುರಂ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ
- ೨೦೧೬ - ಬೇಲೂರು ಬಸವಕಲ್ಯಾಣದ ಉರಿಲಿಂಗ ಪೆದ್ದಿ ಸಾಹಿತ್ಯ ಪ್ರಶಸ್ತಿ
- ೨೦೧೬ - ಮನಸೂರ ಮಠದಿಂದ 'ಹುಬ್ಬಳ್ಳಿ ತಾಲೂಕಿನ ಶಾಸನಗಳು' ಕೃತಿಗೆ ಕನಕ ಪ್ರಶಸ್ತಿ
- ೨೦೧೭ - ಕಸಾಪ. ಟಿ ಗಿರಿಜಮ್ಮ ಸಾಹಿತ್ಯ ಪ್ರಶಸ್ತಿ
- ೨೦೧೭ - ಧಾರವಾಡ ಜಿಲ್ಲಾ ಆಡಳಿತದಿಂದ ದೇವರಾಜ ಅರಸು ಪ್ರಶಸ್ತಿ
- ೨೦೧೭ - ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ೨೦೧೭ - ಸುರ್ವೆ ಪ್ರತಿಷ್ಠಾನದಿಂದ ಕರ್ನಾಟಕ ರತ್ನ ಪ್ರಶಸ್ತಿ
- ೨೦೧೭ - ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ (ಎನ್.ಎಂ.ಕೆಆರ್.ವಿ ಕಾಲೇಜು)
- ೨೦೧೮ - ಗಣಕರಂಗ ಧಾರವಾಡದಿಂದ ಸಾಹಿತ್ಯ ಪ್ರಶಸ್ತಿ
- ೨೦೧೮ - ವಾಲ್ಮೀಕಿ ಸಂಘ, ಚಿಕ್ಕಮಲ್ಲಿಗವಾಡದಿಂದ ವಾಲ್ಮೀಕಿ ಪ್ರಶಸ್ತಿ
ಉಲ್ಲೇಖಗಳು
ಬದಲಾಯಿಸಿ