ಇಂದು ಕನ್ನಡ ಮಹಿಳಾ ಸಾಹಿತ್ಯವು ಎರಡು ಸವಾಲುಗಳನ್ನು ಎದುರಿಸುತ್ತಲಿದೆ. ಪುರುಷರಷ್ಟು ಮುಕ್ತ ಗಂಭೀರವಾಗಿ ಬರೆಯದಿರುವುದು ಮತ್ತು ಪುರುಷರಂತೆ ಧಾವಿಸಿ ಪ್ರಕಾಶನ ಅವಕಾಶನಗಳನ್ನು ದೊರಕಿಸಿಕೊಳ್ಳದಿರುವುದು. ಈ ಎರಡೂ ನೆಲೆಗಳಲ್ಲಿ ಮಹಿಳೆಗೆ 'ಸಾಹಿತ್ಯಿಕ ನ್ಯಾಯ' ದೊರಕಿಸಿ ಕೊಡುವುದಕ್ಕಾಗಿ ಅಸ್ತಿತ್ವಕ್ಕೆ ಬಂದಿದೆ ಮಹಿಳಾ ಸಾಹಿತ್ಯಿಕಾ. ಮಹಿಳಾ ಸಾಹಿತ್ಯವನ್ನು ಕುರಿತು ಅಧ್ಯಯನ ನಡೆಸುವುದು, ಪ್ರಕಟಿಸುವುದು ಮಾತ್ರ ಈ ಸಂಸ್ಥೆಯ ಗುರಿಯಾಗಿದೆ. ಮಹಿಳೆಯ ಸಾಹಿತ್ಯಿಕ ಸಮಸ್ಯೆಗಳೂ ಅನೇಕ, ಸಾಮಾಜಿಕ ಸಮಸ್ಯೆಗಳೂ ಅನೇಕ. ಇವರು ಆಗಾಗ ಸೇರಿ ನಡೆಸುವ 'ಚಿಂತನ ಗೋಷ್ಟಿ'ಗಳಿಂದ ಕಳೆದುಕೊಂಡ ಹಳೆಯ ದಾರಿಗಳನ್ನು ಹುಡುಕಬಹುದು, ಹೊಸ ದಾರಿಗಳನ್ನು ಹುಟ್ಟಿಸಬಹುದು. ಈ ದೃಷ್ಟಿಯಿಂದಲೂ ಬರಹಗಾರ್ತಿಯರನ್ನು ಸಂಘಟಿಸಿ, ಸಮಾಲೋಚನೆ ಕಮ್ಮಟಗಳನ್ನು ಏರ್ಪಡಿಸಿ, ಫಲಿತಗಳನ್ನು ಪ್ರಕಟಿಸುವುದು ಈ ಸಂಸ್ಥೆಯ ಇನ್ನೊಂದು ಉದ್ದೇಶವಾಗಿದೆ.ಆರ್ಥಿಕವಾಗಿ 'ಲಾಭವಿಲ್ಲ- ನಷ್ಟವಿಲ್ಲ' ಈ ತತ್ವದ ನೆಲೆಗಟ್ಟಿನ ಮೇಲೆ ಇದು ರಚಿತಗೊಂಡಿದೆ."'ಮಹಿಳಾ ಸಾಹಿತ್ಯಿಕಾ ಪ್ರಕಾಶನ ಸಂಸ್ಥೆಯನ್ನು ಶ್ರೀಮತಿ ಹನುಮಾಕ್ಷಿ ಗೋಗಿಅವರು ಪ್ರಾರಂಭಿಸಿ,ಅದರ ಮೂಲಕ ಅವರು ಅನೇಕ ಲೇಖಕಿಯರ ಕೃತಿಗಳನ್ನು ಪ್ರಕಟಗೊಳಿಸಿದ್ದಾರೆ.ಇಲ್ಲಿಯವರೆಗೆ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಒಟ್ಟು ೩೮ ಕೃತಿಗಳು ಪ್ರಕಟಗೊಂಡಿವೆ.

 • ೧. ಧುಮ್ಮಸು (ಕಾದಂಬರಿ)ಗೀತಾ ನಾಗಭೂಷಣ ೧೯೯೪ ರೂ ೪೫
 • ೨. ದಾಹತೀರ (ಕವನ)ಮಾಲತಿ ಪಟ್ಟಣಶೆಟ್ಟಿ ೧೯೯೪ ರೂ ೨೫
 • ೩. ನನ್ನಂಥವರು (ಕವನ)ಶೈಲಜಾ ಉಡಚಣ ೧೯೯೫ ರೂ ೨೫
 • ೪. ಪ್ರವಾಹ (ಕಥೆ)ಭಾಗೀರಥಿ ಹೆಗ್ಗಡೆ ೧೯೯೫ ರೂ ೩೫
 • ೫. ನನ್ನೊಳಗಿನ ಕವಿತೆ (ಕವನ)ವಿದ್ಯಾ ಕುಂದರಗಿ ೧೯೯೫ ರೂ ೩೦
 • ೬. ಸುರಪುರ ತಾಲೂಕಿನ ಶಾಸನಗಳು(ಸಂಶೋಧನೆ)ಹನುಮಾಕ್ಷಿ ಗೋಗಿ ೧೯೯೫ ರೂ ೨೦೦
 • ೭. ವಾಸ್ತವ (ಕಥೆ)ಗಂಗಾ ಪಾದೇಕಲ್ಲ ೧೯೯೬ ರೂ ೩೫
 • ೮. ಸಾರಸರಸ್ವತಿ(ಜೀವನ-ಬರೆಹ)ವಿಜಯಾ ದಬ್ಬೆ ೧೯೯೬ ರೂ ೭೫
 • ೯. ಥೇರಿಗಾಥಾ(ಪಾಲಿ ಕವನ-ಅನುವಾದ)ಮಧು ವೆಂಕಾರೆಡ್ಡಿ ೧೯೯೬ ರೂ ೧೧೦
 • ೧೦. ಬಿಡುಗಡೆಯ ಸಡಗರ(ಹಾಸ್ಯ)ಗುರುದೇವಿ ಹುಲೆಪ್ಪನವರಮಠ ೧೯೯೬ ರೂ ೨೫
 • ೧೧. ಮಕ್ಕಳ ಶಿಕ್ಷಣ ಚಿಂತನೆಗಳು(ಪ್ರಬಂಧ)ಲಲಿತಾಂಬಾ ವೃಷಭೇಂದ್ರಸ್ವಾಮಿ ೧೯೯೭ ರೂ ೪೦
 • ೧೨. ಕರಗದೀ ಕಾರಿರುಳು (ಕವನ)ಕುಸುಮ ಕರಾಳೆ ೧೯೯೭ ರೂ ೨೮
 • ೧೩. ಗಾಂಧೀ ಮಗಳು (ಕಥೆ)ಶಾಂತಾದೇವಿ ಕಣವಿ ೧೯೯೭ ರೂ ೩೦
 • ೧೪. ದಿಗಂತದಾಚೆ(ಮರಾಠಿ ಪ್ರಬಂಧ-ಅನುವಾದ)ಸರಸ್ವತಿ ರಿಸಬೂಡ ೧೯೯೭ ರೂ ೩೦
 • ೧೫. ಪಾಂಚಾಲಿ ಮತ್ತು ಇತರ ನಾಟಕಗಳು(ನಾಟಕ)ವಿಜಯಾ ಸುಬ್ಬರಾಜ ೧೯೯೮ ರೂ ೭೦
 • ೧೬. ಪ್ರಲೋಭನೆ(ವಿಮರ್ಶೆ)ಮಣಿಮಾಲಿನಿ ವಿ.ಕೆ. ೧೯೯೮ ರೂ ೩೫
 • ೧೭. ಶೈಲಜಾ ಸಮಗ್ರ ಕಾವ್ಯ(ಕಾವ್ಯ)ಶೈಲಜಾ ಉಡಚಣ ೧೯೯೮ ರೂ ೨೦೦
 • ೧೮. ಒಂದು ಕನಸಿನ ಪಯಣ(ಪ್ರವಾಸ)ನೇಮಿಚಂದ್ರ ೧೯೯೯ ರೂ ೧೨೦
 • ೧೯. ಹೊಸಿಲಾಚೆ ಹೊಸಹೆಜ್ಜೆ(ಕವನ)ಗೀತಾ ವಸಂತ ೧೯೯೯ ರೂ ೨೦
 • ೨೦. ಅವಳ ಸೂರ್ಯ(ಇಂಗ್ಲಿಷ ಕಥೆ-ಅನುವಾದ)ಉಮಾ ರಾವ್ ೨೦೦೦ ರೂ ೫೦
 • ೨೧. ನೆನಪಿನಲ್ಲಿ ನಿಂತವರು(ವ್ಯಕ್ತಿ ಚಿತ್ರಗಳು)ಜ್ಯೋತ್ಸ್ನಾ ಕಾಮತ ೨೦೦೦ ರೂ ೭೫
 • ೨೨. ಶಾಂತಾದೇವಿ ಮಾಳವಾಡ ಸಮಗ್ರ ಕಥೆಗಳು(ಕಥೆಗಳು)ಶಾಂತಾದೇವಿ ಮಾಳವಾಡ ೨೦೦೦ ರೂ ೧೦೦
 • ೨೩. ನಮ್ಮದೇ ದನಿಯೆತ್ತಿ ಎಂದು ಹಾಡೇವೋ(ಕವನ)ಕೆ.ಸರೋಜಾ ೨೦೦೧ ರೂ ೫೦
 • ೨೪. ಕಡಲಾಚೆಯ ಕಥೆಗಳು (ಕಥೆ)ಲತಾ ಗುತ್ತಿ ೨೦೦೧ ರೂ ೫೦
 • ೨೫. ಕರ್ನಾಟಕ ಭಾರತಿ ಸೂಚಿ-ಹನುಮಾಕ್ಷಿ ಗೋಗಿ ೨೦೦೨ ರೂ ೫೦
 • ೨೬. ಅನುಶಾಸನ (ಸಂಶೋಧನೆ)ಹನುಮಾಕ್ಷಿ ಗೋಗಿ ೨೦೦೨ ರೂ ೧೫೦
 • ೨೭. ಕಲ್ಲ ಖಣಿಯಾಗು ಕರಕೀ ಬೇರಾಗು(ಕಾದಂಬರಿ)ದಮಯಂತೀ ನರೇಗಲ್ಲ ೨೦೦೩ ರೂ ೭೦
 • ೨೮. ಶ್ರಾವಣದ ಮಾತುಗಳು(ಕವನ)ಗಂಗಾ ಸ್ವಾಮಿ ೨೦೦೩ ರೂ ೨೫
 • ೨೯. ಬಾಳು ಸೊಗಸಾದರೂ(ಮರಾಠಿ ಆತ್ಮಚರಿತ್ರೆ-ಅನುವಾದ)ಉಮಾ ಕುಲಕರ್ಣಿ ೨೦೦೪
 • ೩೦. ಹಾಯ್ ಹೈ ಹೀಲ್ಸ್ (ಹಾಸ್ಯ)ಶೈಲಾ ಛಬ್ಬಿ ೨೦೦೫ ರೂ ೫೦
 • ೩೧. ಮುನ್ನುಡಿ ಬೆನ್ನುಡಿಗಳ ನಡುವೆ(ಸಮಗ್ರ ಕಾವ್ಯ)ಪ್ರತಿಭಾ ನಂದಕುಮಾರ ೨೦೦೬ ರೂ ೩೦೦
 • ೩೨. ಅವರು ಪುರಾವೆಗಳನ್ನು ಕೇಳುತ್ತಾರೆ(ಕವನ)ಪ್ರತಿಭಾ ನಂದಕುಮಾರ ೨೦೦೬ ರೂ ೮೦
 • ೩೩. ಕುಣಿಸಲು ನೀನು(ಕಥೆ)ಸುಮಿತ್ರಾ ಹಲವಾಯಿ ೨೦೦೬ ರೂ ೫೦
 • ೩೪. ಲಕ್ಕುಂಡಿಯ ಶಾಸನಗಳು(ಸಂಶೋಧನೆ)ಹನುಮಾಕ್ಷಿ ಗೋಗಿ ೨೦೦೮ ರೂ ೨೦೦
 • ೩೫. ಮುಸುಕಿನೊಳಗಿನ ಗುದ್ದು(ಕಥೆ)ಸೀತಾ ಛಪ್ಪರ ೨೦೦೮ ರೂ ೫೦
 • ೩೬. ನಾರಾಯಣ ಗುರುವೆಂಬ ನಕ್ಷತ್ರ (ಜೀವನ ಚರಿತ್ರೆ)ಕಮಲಾ ಹೆಮ್ಮಿಗೆ ೨೦೦೯ ರೂ ೭೫
 • ೩೭. ಬಿಸಿಲು ಬೆಳದಿಂಗಳು (ಕವನ)ಕುಸುಮ ಕರಾಳೆ ೨೦೦೯ ರೂ ೩೫
 • ೩೮. ಶರಣ ದರ್ಶನ(ವಿಮರ್ಶೆ)ಗುರುದೇವಿ ಹುಲೆಪ್ಪನವರಮಠ ೨೦೧೦ ರೂ ೬೦