ಯಾದಗಿರಿ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ೩೦ನೇ ಜಿಲ್ಲೆಯಾಗಿ 'ಯಾದಗಿರಿ' ಏಪ್ರಿಲ್ ೧೦, ೨೦೧೦ ರಂದು ಅಸ್ತಿತ್ವಕ್ಕೆ ಬಂತು. ಶಹಾಪುರ ಮತ್ತು ಸುರಪುರ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ರಚನೆ ಮಾಡಲಾಗಿದೆ.

ಯಾದಗಿರಿ

ಯಾದಗಿರಿ
city
ಸರ್ಕಾರ
 • ಜಿಲ್ಲಾಧಿಕಾರಿsnehal r altitude = ೩೮೯
ಜನಸಂಖ್ಯೆ
 (೨೦೦೧)
 • ಒಟ್ಟು೫೮೮೦೨
ಯಾದಗಿರಿ ಜಿಲ್ಲೆಯ ಕೆಲ ಹಳ್ಳಿಗಳಿರುವ ನಕ್ಷೆ
ಯಾದಗಿರಿ ಜಿಲ್ಲೆಯ ತಾಲೂಕು ಮತ್ತು ಹೋಬಳಿಗಳು

ಹಿನ್ನಲೆ ಸಂಪಾದಿಸಿ

ಆಗಸ್ಟ ೨೭, ೨೦೦೮ ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗುಲ್ಬರ್ಗ ಜಿಲ್ಲೆಯನ್ನು ವಿಭಜಿಸಿ ಯಾದಗಿರಿ ಪಟ್ಟಣವನ್ನು ಕೇಂದ್ರವಾಗಿಸಿಕೊಂಡು ಹೊಸ ಜಿಲ್ಲೆ ರಚಿಸಲು ಅಂತಿಮ ನಿರ್ಣಯ ಕೈಗೊಂಡು, ಈ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ.ಡಿಸೆಂಬರ ೨೩ ೨೦೦೯ ವಿಧಾನಸಭೆಯಲ್ಲಿ ಅಧಿಕೃತ ಜಿಲ್ಲೆಯಾಗಿ ಘೋಷಿಸಲಾಯಿತು.

ಯಾದಗಿರಿ ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿತ್ತು. ಯಾದಗಿರಿ ತಾಲೂಕಿನ ಉತ್ತರದಲ್ಲಿ ಸೇಡಂ, ವಾಯುವ್ಯದಲ್ಲಿ ಚಿತ್ತಾಪುರ, ಪಶ್ಚಿಮದಲ್ಲಿ ಶಹಾಪುರ ಮತ್ತು ಪೂರ್ವದಲ್ಲಿ ಆಂಧ್ರ ಪ್ರದೇಶದ ಮಹಬೂಬನಗರದ ಮಖ್ತಲ್ ತಾಲೂಕುಗಳಿವೆ.


ಯಾದಗಿರಿ ಜಿಲ್ಲೆಯ ತಾಲ್ಲೂಕುಗಳು ಸಂಪಾದಿಸಿ

ಯಾದಗಿರಿ ಸಂಪಾದಿಸಿ

ಯಾದಗಿರಿ ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಒಂದು ಜಿಲ್ಲಾ ಕೇಂದ್ರ. ಯಾದಗಿರಿ ತಾಲೂಕಿನ ಉತ್ತರದಲ್ಲಿ ಸೇಡಂ, ವಾಯುವ್ಯದಲ್ಲಿ ಚಿತ್ತಾಪುರ, ಪಶ್ಚಿಮದಲ್ಲಿ ಶಹಾಪುರ ಮತ್ತು ಪೂರ್ವದಲ್ಲಿ ಆಂಧ್ರ ಪ್ರದೇಶದ ಮಹಬೂಬನಗರದ ಮಖ್ತಲ್ ತಾಲೂಕುಗಳಿವೆ.

ರೈಲು ಸಾರಿಗೆ ಸಂಪಾದಿಸಿ

 
ಯಾದಗಿರಿ ಕೋಟೆಯ ಮೇಲಿಂದ ಪಟ್ಟಣದ ಒಂದು ನೋಟ

ಯಾದಗಿರಿಯ ರೈಲ್ವೆ ವ್ಯವಸ್ಥೆಯು |ಭಾರತೀಯ ರೈಲ್ವೆಯ] ದಕ್ಷಿಣ ಮಧ್ಯ ರೈಲ್ವೆ ವಲಯದ ಅಡಿಯಲ್ಲಿ ಬರುತ್ತದೆ. ಯಾದಗರಿ ಸಿಟಿ ರೈಲು ನಿಲ್ದಾಣವು (ಭಾರತೀಯ ರೈಲ್ವೆ) ಮೂಲಕ ದೇಶದ ಉಳಿದ ಭಾಗಗಳ ಜೊತೆ ಸಂಪರ್ಕ ಹೊಂದಿದೆ. ಯಾದಗಿರಿಯು ರೇಲ್ವೆಯ ಮೂಲಕ ಭಾರತ ಹಾಗೂ ಕರ್ನಾಟಕದ ಬಹುತೇಕ ಸ್ಥಳಗಳ ಜೊತೆ ಸಂಪರ್ಕ ಹೊಂದಿದೆ. ಯಾದಿಗಿರಿ ಜಿಲ್ಲೆಯಲ್ಲಿ ಒಂದು ವಿಶಾಲವಾದ ಬೆಟ್ಟವಿದೆ. ಅದು ದೊಡ್ಡ ಕಲ್ಲುಗಳಿಂದ ಕಟ್ಟಿರುವ ಕೋಟೆಗಳಿಂದ ಕೂಡಿದೆ. ಆ ಬೆಟ್ಟದಲ್ಲಿ ದೇವಿಯ ದೇವಸ್ಥಾನವಿದೆ. ಅದರ ವಿಶೇಷತೆಯನ್ನು ಮಹಾನವಮಿಯ ಹಬ್ಬದಂದು ವಿಶೇಷವಾಗಿ ನೋಡಬಹುದು.

ವಿಶೇಷತೆಗಳು ಸಂಪಾದಿಸಿ

1.ದಬ್ ದಬಿ ಪಾಲ್ಸ್ ಗುರುಮಿಠ್ಕಲ್ 2.ಶುಗರ್ ಪ್ಯಾಕ್ಟ್ರಿ ವಡಿಗೇರಾ 3.ಬಸವಸಾಗರ ಜಲಾಶಯ/ನಾರಾಯಣಪೂರ 4.ಗೋಗಿ ಯುರೆನಿಯಂ ನಿಕ್ಷೇಪ ಶಹಾಪುರ 5.ಗವಿಸಿದ್ದೇಶ್ವರ ದೇವಸ್ಥಾನ ಚಿಂತನಳ್ಳಿ

ಭೂ ಸಾರಿಗೆ ಸಂಪಾದಿಸಿ

ಯಾದಗಿರಿ ಜಿಲ್ಲೆಯಿಂದ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಲು ಬಸ್ಸುಗಳ ವ್ಯವಸ್ಥೆ ಇದೆ.

ಉಲ್ಲೇಖ ಸಂಪಾದಿಸಿ

http://www.prajavani.net/Content/Dec242009/state20091223162263.asp?section=updatenews Archived 2009-12-28 ವೇಬ್ಯಾಕ್ ಮೆಷಿನ್ ನಲ್ಲಿ. http://kannada.webdunia.com/newsworld/news/regional/0809/26/1080926045_1.htm

"https://kn.wikipedia.org/w/index.php?title=ಯಾದಗಿರಿ&oldid=1114453" ಇಂದ ಪಡೆಯಲ್ಪಟ್ಟಿದೆ