ವಿ.ಸಿ.ಐರಸಂಗ
ವ್ಹಿ. ಸಿ. ಐರಸ೦ಗ ಇವರು ಧಾರವಾಡದಲ್ಲಿರುವ ಕವಿಗಳು ಜನ್ಮ ಸ್ಟಳ:ಧಾರವಾಡ
ಧಾರವಾಡದ ಏಲಕ್ಕಿ ಶೆಟ್ಟರ ಕಾಲನಿಯಲ್ಲಿ ತಮ್ಮ ಮಗಳೊಂದಿಗೆ ವಾಸವಿರುವ ವಿ ಸಿ ಐರಸಂಗರು ಆಕಾಶವಾಣಿಯ ಭಾವಸಂಗಮದ ಹಾಡುಗಳ ಮೂಲಕ ನಾಡಿನ ಬಹುಪಾಲು ಶೋತೃಗಳಿಗೆ ಚಿರಪರಿಚಿತವಿದ್ದು, ಸ್ಥಳೀಯರಿಂದ ‘ಐರಸಂಗ ಕಾಕಾ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಅವರ ಬದುಕು ಕೂಡ ಸರಳ, ಸುಂದರ. ತಾವು ಬರೆದ ಕವನಸಂಕಲಗಳನ್ನು ಜೋಳಿಗೆಯಲ್ಲಿ ಹಾಕಿಕೊಂಡು, ಧಾರವಾಡದ ಅತ್ತಿಕೊಳ್ಳದ ದಿನ್ನೆ ಹತ್ತಿ, ಶ್ರೀರಾಮನಗರದ ಏರುಗಳಲ್ಲಿ ಸೈಕಲ್ ದೂಡಿಕೊಂಡು, ಒಬ್ಬ ಸಾಮಾನ್ಯ ಮನುಷ್ಯನಂತೆ ಅವರು ನಡೆದುಕೊಂಡು ಹೋಗುತ್ತಿದ್ದರೆ ನಮ್ಮೊಳಗಿನ ಕವಿಯೊಬ್ಬರು ಯಾವುದೇ ಹಮ್ಮು ಬಿಮ್ಮು ಬಿಗುಮಾನಗಳಿಲ್ಲದೆ, ನಡೆದುಕೊಂಡು ಹೋಗುತ್ತಿದ್ದಾರಲ್ಲಾ ಎನ್ನುವ ಆತ್ಮೀಯತೆಯಿಂದ ಜನರು ಅವರನ್ನು ದಿಟ್ಟಿಸುತ್ತಾ ನಿಲ್ಲುತ್ತಾರೆ.
ಐರಸಂಗರ ಕಾವ್ಯಗಳಿಗಿಂತ ಇಷ್ಟವಾಗುವುದು ಅವರ ಜೀವನ ಪ್ರೀತಿ. ಮತ್ತು ಅವರೊಂದಿಗಿರುವ ಹಳೆಯ ಅಟ್ಲಾಸ್ ಸೈಕಲ್. ಅವರು ಎಲ್ಲಿಗೆ ಹೊರಟರೂ, ಹೆಗಲಿಗೊಂದು ಜೋಳಿಗೆ ಇರುತ್ತದೆ. ಜೋಳಿಗೆಯಲ್ಲಿ ಅವರೇ ಬರೆದು, ಮುದ್ರಿಸಿ, ಹೊರತಂದಿರುವ ಪುಸ್ತಕಗಳು. ಮಾರುತಿ ಪ್ರಕಾಶನ ಸಂಸ್ಥೆ ಅವರೇ ಹುಟ್ಟುಹಾಕಿದ್ದು. ‘ನಾನು ಕವಿತೆ ಬರೆಯಲು ತೊಡಗಿ ಇಂದಿಗೆ ಹತ್ತಿರ ಹತ್ತಿರ ಅರವತ್ತು ವರ್ಷವಾಯಿತು. ಮೂವತ್ತೆರಡು ಕವನ ಸಂಕಲನ ಹೊರತಂದಿದ್ದೇನೆ, ನಾಲ್ಕು ಮುದ್ರಣಗೊಳ್ಳಲು ಬಾಕಿ ಇವೆ. ಎಲ್ಲವೂ ಸೇರಿದರೆ ಎರಡು ಸಾವಿರದ ಐದುನೂರು ಕವನಗಳನ್ನು ದಾಟಬಹುದು’ ಎಂದು ನಮ್ರವಾಗಿ ಉತ್ತರಿಸುವ ಅವರ ಮನಗೆ ಯಾವಾಗ ಹೋದರೂ ನಾಲ್ಕು ಪುಸ್ತಕಗಳು ಸಿಗುವುದು ಖಾತ್ರಿ.
ಅವರು ಭಾರತೀಯ ರೈಲು ವಿಭಾಗದಲ್ಲಿ ಸೇವೆ ಸಲ್ಲಿಸಿದವರು ರೇಲು ವಿಭಾಗದಲ್ಲಿ ಸೇವೆಸಲ್ಲಿಸುತ್ತಿದ್ದಾಗ ಧಾರವಾಡದ ಶ್ರೀ ಶಂಕರ B ಕೆಲಗೇರಿ ಅವರ ಆಪ್ತ ಮಿತ್ರರಾಗಿದ್ದರು .
ಹುಬ್ಬಳ್ಳಿಧಾರವಾಡ (ತಾಳ:ಕಹರವಾ)
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |