ಶಾಂತಾದೇವಿ ಕಣವಿ
ಶಾಂತಾದೇವಿ ಕಣವಿ ಇವರು ೧೯೩೩ರಲ್ಲಿ ವಿಜಯಪುರದಲ್ಲಿ ಜನಿಸಿದರು. ಧಾರವಾಡದ ಪ್ರಸಿದ್ಧ ಕವಿ ಚನ್ನವೀರ ಕಣವಿ ಇವರ ಪತ್ನಿ
ಸಾಹಿತ್ಯ
ಬದಲಾಯಿಸಿಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ವೈಶಿಷ್ಟ್ಯ. ಸಂಜೆಮಲ್ಲಿಗೆ, ಬಯಲು-ಆಲಯ, ಮರು ವಿಚಾರ, ಜಾತ್ರೆ ಮುಗಿದಿತ್ತು, ಕಳಚಿಬಿದ್ದ ಪೈಜಣ, ನೀಲಿಮಾತೀರ – ಕಥಾಸಂಕಲನಗಳು. ಅಜಗಜಾಂತರ-ಹರಟೆಗಳ ಸಂಗ್ರಹ. ನಿಜಗುಣ ಶಿವಯೋಗಿ-ಮಕ್ಕಳ ಪುಸ್ತಕ ಪ್ರಕಟಿತ. ಬಯಲು-ಆಲಯ ಕಥಾಸಂಕಲನಕ್ಕೆ ೧೯೭೪ರ ಸಾಹಿತ್ಯ ಅಕಾಡಮಿ ಬಹುಮಾನ. ೧೯೮೭ರಲ್ಲಿ ಅಕಾಡಮಿ ಪ್ರಶಸ್ತಿ ಪುರಸ್ಕಾರ. ಹಲವಾರು ಕಥೆಗಳು ಹಿಂದಿ, ಇಂಗ್ಲಿಷ್, ಮಲೆಯಾಳಂಗೂ ಭಾಷಾಂತರದ ಹೆಗ್ಗಳಿಕೆ.
ಕಥಾಸಂಕಲನ
ಬದಲಾಯಿಸಿ- ಸಂಜೆಮಲ್ಲಿಗೆ
- ಬಯಲು—ಆಲಯ
- ಮರುವಿಚಾರ
- ಜಾತ್ರೆ ಮುಗಿದಿತ್ತು
- ಕಳಚಿ ಬಿದ್ದ ಪೈಜಣ
- ನೀಲಿ ಮಾ ತೀರ
- ಗಾಂಧೀ ಮಗಳು
ಲಲಿತ ಪ್ರಬಂಧ
ಬದಲಾಯಿಸಿ- ಅಜಗಜಾಂತರ
ಮಕ್ಕಳ ಸಾಹಿತ್ಯ
ಬದಲಾಯಿಸಿ- ನಿಜಗುಣಿ ಶಿವಯೋಗಿ
ಸಂಪಾದನೆ
ಬದಲಾಯಿಸಿ- ಪ್ರಶಾಂತ
ಪುರಸ್ಕಾರ
ಬದಲಾಯಿಸಿ೧೯೭೪ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಹಾಗು ೧೯೮೭ರಲ್ಲಿ ಗೌರವ ಪ್ರಶಸ್ತಿ ದೊರೆತಿವೆ.
ನಿಧನ
ಬದಲಾಯಿಸಿ೨೨-೦೫-೨೦೨೦ ಶುಕ್ರವಾರದಂದು ಬೆಳಗಾವಿಯಲ್ಲಿ ನಿಧನರಾದರು.