ರಾಜೀವ ದೇಶಪಾಂಡೆ
ರಾಜೀವ ದೇಶಪಾಂಡೆಇವರು ೧೯೫೭ ಸಪ್ಟಂಬರ ೨೦ರಂದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಜನಿಸಿದರು.ತಂದೆ ಎಲ್.ಎಮ್.ದೇಶಪಾಂಡೆ ಪೋಲೀಸ್ ಅಧೀಕ್ಷಕರು;ತಾಯಿ ಊರ್ಮಿಳಾ ಸಾಹಿತ್ಯ ಓದುವದರಲ್ಲಿ ಹಾಗು ರಚಿಸುವದರಲ್ಲಿ ಆಸಕ್ತರು.
ರಾಜೀವ ದೇಶಪಾಂಡೆಯವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ ಸಂಪಾದಿಸಿದ ಬಳಿಕ ಬಾಗಿಲುಕೋಟೆಯ ಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾರೆ.
ರಾಬಿನ್ ಕುಕ್ ಬರೆದ ಆಂಗ್ಲ ಭಾಷೆಯ “ ದ ಬ್ರೇನ್” ಕಾದಂಬರಿಯನ್ನು ಇವರು ಮಸ್ತಿಷ್ಕ ಎಂಬ ಹೆಸರಿನಲ್ಲಿ ಅನುವಾದಿಸಿದ್ದು, ಅದು ಕರ್ಮವೀರ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ಇವರ ಸ್ವತಂತ್ರ ಕೃತಿ "ಫಾಲ್ಟ ಝೋನ್"ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ.
ಡಾ| ಆರ್. ಜೆ.ಗಲಗಲಿಯವರ ಆಂಗ್ಲ ಕೃತಿಯನ್ನು ಕನ್ನಡದಲ್ಲಿ `ಅಂತಃಸ್ಫೂರ್ತಿಯ ಅನುಭವಗಳು/ ಎಂದು ಅನುವಾದಿಸಿದ್ದಾರೆ.