ಭೌತಶಾಸ್ತ್ರ

ಚಲನೆ

ಭೌತಶಾಸ್ತ್ರವು (ಪುರಾತನ ಗ್ರೀಕ್: φυσική (ἐπιστήμη), ಭಾಷಾಂತರ: physikḗ (epistḗmē), lit. 'ನೈಸರ್ಗಿಕ ಜ್ಞಾನ', φύσις phýsis "ಪ್ರಕೃತಿ") ಪ್ರಕೃತಿಯ ಚಲನೆ, ನಡವಳಿಕೆಗಳನ್ನು ಹಾಗೂ ಬಾಹ್ಯಾಕಾಶ ಮತ್ತು ಕಾಲದ - (ಸಮಯದ) ಮೂಲಕ ಮತ್ತು ಶಕ್ತಿ ಮತ್ತು ಬಲಗಳ ಸಂಬಂಧಿತ ಘಟಕಗಳನ್ನು ಅಧ್ಯಯನ ಮಾಡುತ್ತದೆ. ಭೌತಶಾಸ್ತ್ರವು ಅತ್ಯಂತ ಮೂಲಭೂತ ವೈಜ್ಞಾನಿಕ ವಿಭಾಗಗಳಲ್ಲಿ ಒಂದಾಗಿದೆ ಮತ್ತು ಬ್ರಹ್ಮಾಂಡವು ಹೇಗೆ ವರ್ತಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅದರ ಪ್ರಮುಖ ಗುರಿಯಾಗಿದೆ.

ಭೌತಿಕ ಸಂಗತಿಗಳ ಹಲವಾರು ಉದಾಹರಣೆಗಳು

ಭೌತಶಾಸ್ತ್ರವು ಶೈಕ್ಷಣಿಕ ವಿಭಾಗಗಳಲ್ಲಿ ಒಂದಾಗಿದೆ ಮತ್ತು ಖಗೋಳಶಾಸ್ತ್ರವನ್ನು ಸೇರ್ಪಡೆಗೊಳಿಸುವುದರ ಮೂಲಕ ಬಹುಶಃ ಮತ್ತಷ್ಟು ಹಳೆಯ ಶೈಕ್ಷಣಿಕ ವಿಭಾಗವಾಗಿ ಬಿಂಬಿತವಾಗುತ್ತದೆ. ಕಳೆದ ಎರಡು ಸಹಸ್ರಮಾನಗಳಲ್ಲಿ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತಶಾಸ್ತ್ರದ ಕೆಲವು ಶಾಖೆಗಳು ನೈಸರ್ಗಿಕ ತತ್ತ್ವಶಾಸ್ತ್ರದ ಒಂದು ಭಾಗವಾಗಿದ್ದವು, ಆದರೆ ೧೭ ನೆಯ ಶತಮಾನದ ವೈಜ್ಞಾನಿಕ ಕ್ರಾಂತಿಯ ಸಮಯದಲ್ಲಿ, ಈ ನೈಸರ್ಗಿಕ ವಿಜ್ಞಾನಗಳು ತಮ್ಮದೇ ಆದ ಸ್ವಂತ ಸಂಶೋಧನೆ ಪ್ರಯತ್ನಗಳಾಗಿ ಹೊರಹೊಮ್ಮಿದವು. ಭೌತಶಾಸ್ತ್ರವು ಸಂಶೋಧನೆಯ ಅನೇಕ ಅಂತರಶಾಸ್ತ್ರೀಯ ಕ್ಷೇತ್ರಗಳಾದ ಬಯೋಫಿಸಿಕ್ಸ್ ಮತ್ತು ಕ್ವಾಂಟಮ್ ಕೆಮಿಸ್ಟ್ರಿಗಳ ಜೊತೆ ಛೇದಿಸುತ್ತದೆ ಮತ್ತು ಭೌತಶಾಸ್ತ್ರದ ಗಡಿಗಳನ್ನು ಕಠಿಣವಾಗಿ ವ್ಯಾಖ್ಯಾನಿಸಲು ಸಾದ್ಯವಿಲ್ಲ. ಭೌತಶಾಸ್ತ್ರದಲ್ಲಿನ ಹೊಸ ಪರಿಕಲ್ಪನೆಗಳು ಇತರ ವಿಜ್ಞಾನಗಳು ಅಧ್ಯಯನ ಮಾಡುತ್ತಿರುವ ಮೂಲಭೂತ ಕಾರ್ಯವಿಧಾನಗಳನ್ನು ವಿವರಿಸುತ್ತದೆ.ಭೌತಶಾಸ್ತ್ರವು ಗಣಿತಶಾಸ್ತ್ರ ಮತ್ತು ತತ್ತ್ವಶಾಸ್ತ್ರದಂತಹ ಶೈಕ್ಷಣಿಕ ವಿಭಾಗಗಳಲ್ಲಿ ಹೊಸ ಸಂಶೋಧನಾ ವಿಧಾನಗಳನ್ನು ಸೂಚಿಸುತ್ತವೆ.

ಭೌತಶಾಸ್ತ್ರದಲ್ಲಿನ ಬೆಳವಣಿಗೆಗಳು ಹೊಸ ತಂತ್ರಜ್ಞಾನಗಳಲ್ಲಿ ಪ್ರಗತಿ ಸಾಧಿಸುತ್ತವೆ. ಉದಾಹರಣೆಗೆ, ವಿದ್ಯುತ್ಕಾಂತೀಯತೆ ಮತ್ತು ಪರಮಾಣು ಭೌತಶಾಸ್ತ್ರದ ಗ್ರಹಿಕೆಯಲ್ಲಿನ ಬೆಳವಣಿಗೆಗಳು ನೇರವಾಗಿ ಆಧುನಿಕ-ದಿನ ಸಮಾಜವನ್ನು ರೂಪಾಂತರಗೊಳಿಸಿದ ಹೊಸ ಉತ್ಪನ್ನಗಳ ಅಭಿವೃದ್ಧಿಗೆ ಕಾರಣವಾಯಿತು, ಉದಾಹರಣೆಗೆ ದೂರದರ್ಶನ, ಕಂಪ್ಯೂಟರ್ಗಳು, ಗೃಹಬಳಕೆಯ ವಸ್ತುಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳು; ಥರ್ಮೋಡೈನಾಮಿಕ್ಸ್ ನಲ್ಲಿನ ಬೆಳವಣಿಗೆಗಳು ಕೈಗಾರೀಕರಣದ ಅಭಿವೃದ್ಧಿ; ಮತ್ತು ಯಂತ್ರಶಾಸ್ತ್ರದಲ್ಲಿನ ಬೆಳವಣಿಗೆಗಳು ಕಲನಶಾಸ್ತ್ರದ ಅಭಿವೃದ್ಧಿಯನ್ನು ಪ್ರೇರೇಪಿಸಿವೆ.

ಭೌತಶಾಸ್ತ್ರದ ಉಗಮಸಂಪಾದಿಸಿ

ಪ್ರಾಚೀನ ಖಗೋಳ ಶಾಸ್ತ್ರಸಂಪಾದಿಸಿ

ಖಗೋಳಶಾಸ್ತ್ರವು ಅತ್ಯಂತ ಹಳೆಯ ನೈಸರ್ಗಿಕ ವಿಜ್ಞಾನಗಳಲ್ಲಿ ಒಂದಾಗಿದೆ. ಸುಮೇರಿಯರು, ಪ್ರಾಚೀನ ಈಜಿಪ್ಟಿನವರು ಮತ್ತು ಸಿಂಧೂ ಕಣಿವೆ ನಾಗರಿಕತೆಯಂತಹ ೩೦೦೦ಬಿ ಸಿ ಈ ಗಿಂತಲೂ ಮುಂಚಿನ ನಾಗರೀಕತೆಗಳು ಪೂರ್ವಭಾವಿ ಜ್ಞಾನವನ್ನು ಹೊಂದಿದ್ದವು ಮತ್ತು ಸೂರ್ಯ,ಚಂದ್ರ ಮತ್ತು ನಕ್ಷತ್ರಗಳ ಚಲನೆಗಳ ಮೂಲಭೂತ ತಿಳುವಳಿಕೆಯನ್ನು ಹೊಂದಿತ್ತು. ನಕ್ಷತ್ರಗಳು ಮತ್ತು ಗ್ರಹಗಳನ್ನು ಇಂದಿಗೂ ಪೂಜಿಸಲಾಗುತ್ತದೆ, ದೇವರುಗಳನ್ನು ಪ್ರತಿನಿಧಿಸುತ್ತವೆ ಎಂಬ ನಂಬಿಕೆ ಇದೆ. ನಕ್ಷತ್ರಗಳ ವೀಕ್ಷಣೆಗೆ ಸಂಬಂಧಿಸಿದ ಸ್ಥಾನಗಳಿಗೆ ವಿವರಣೆಗಳು ಹೆಚ್ಚಾಗಿ ಅವೈಜ್ಞಾನಿಕ ಮತ್ತು ಸಾಕ್ಷ್ಯಾಧಾರಗಳಿಲ್ಲವಾದರೂ, ಈ ಮುಂಚಿನ ಅವಲೋಕನಗಳು ನಂತರದ ಖಗೋಳವಿಜ್ಞಾನದ ಅಡಿಪಾಯವನ್ನು ಹಾಕಿದವು, ಏಕೆಂದರೆ ನಕ್ಷತ್ರಗಳು ಆಕಾಶದಲ್ಲಿ ದೊಡ್ಡ ವಲಯಗಳನ್ನು ಹಾದುಹೋಗುವಂತೆ ಕಂಡುಬಂದವು, ಆದರೆ ಗ್ರಹಗಳ ಸ್ಥಾನಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡುಬರಲಿಲ್ಲ.

ಆಸ್ಕರ್ ಅಬೊಯ್ ಪ್ರಕಾರ, ಪಾಶ್ಚಿಮಾತ್ಯ ಖಗೋಳಶಾಸ್ತ್ರದ ಮೂಲಗಳು ಮೆಸೊಪಟ್ಯಾಮಿಯಾದಲ್ಲಿ ಕಂಡುಬರುತ್ತವೆ, ಮತ್ತು ನಿಖರವಾದ ವಿಜ್ಞಾನಗಳಲ್ಲಿನ ಎಲ್ಲಾ ಪಾಶ್ಚಿಮಾತ್ಯ ಪ್ರಯತ್ನಗಳು ಕೊನೆಯಲ್ಲಿ ಬ್ಯಾಬಿಲೋನಿಯಾದ ಖಗೋಳಶಾಸ್ತ್ರದಿಂದ ಬಂದವು. ಈಜಿಪ್ಟ್ ಖಗೋಳಶಾಸ್ತ್ರಜ್ಞರು ನಕ್ಷತ್ರಪುಂಜಗಳ ಜ್ಞಾನ ಮತ್ತು ಆಕಾಶಕಾಯಗಳ ಚಲನೆಗಳನ್ನು ತೋರಿಸಿದ ಸ್ಮಾರಕಗಳನ್ನು ಬಿಟ್ಟು, ಗ್ರೀಕ್ ಕವಿ ಹೋಮರ್ ತನ್ನ ಇಲಿಯಡ್ ಮತ್ತು ಒಡಿಸ್ಸಿಗಳಲ್ಲಿ ಹಲವಾರು ಆಕಾಶ ವಸ್ತುಗಳ ಬಗ್ಗೆ ಬರೆದಿದ್ದಾರೆ; ನಂತರ ಗ್ರೀಕ್ ಖಗೋಳಶಾಸ್ತ್ರಜ್ಞರು ಇವುಗಳಿಗೆ ಹೆಸರುಗಳನ್ನು ಒದಗಿಸಿದರು,ಉತ್ತರ ಗೋಳಾರ್ಧದಿಂದ ಕಾಣುವ ಹೆಚ್ಚಿನ ನಕ್ಷತ್ರಪುಂಜಗಳಿಗೆ ಅವು ಈಗಲೂ ಬಳಸಲ್ಪಟ್ಟಿವೆ.

ಹೆಚ್ಚಿನ ಓದಿಗೆಸಂಪಾದಿಸಿನೈಸರ್ಗಿಕ ವಿಜ್ಞಾನದ ಸಾಮಾನ್ಯ ಉಪವಿಭಾಗಗಳು
ಖಗೋಳಶಾಸ್ತ್ರ | ಜೀವಶಾಸ್ತ್ರ | ರಸಾಯನಶಾಸ್ತ್ರ | ಭೂಶಾಸ್ತ್ರ | ಭೌತಶಾಸ್ತ್ರ