ಜಿ. ಎಸ್. ಆಮೂರ
ಡಾ. ಗುರುರಾಜ ಶ್ಯಾಮಾಚಾರ ಆಮೂರ(೦೮-೦೫-೧೯೨೫-೨೮-೦೯-೨೦೨೦), ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ. ಇವರ "ಭುವನದ ಭಾಗ್ಯ" ಎಂಬ ಕೃತಿಗೆ ೧೯೯೬ ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಅಧ್ಯಾಪಕರಾಗಿದ್ದಾಗಲೇ ‘ಕಾಮಿಡಿಯ ಪರಿಕಲ್ಪನೆ’ಎಂಬ ಮಹಾಪ್ರಬಂಧ ಬರೆದು ಪಿ.ಎಚ್.ಡಿ. ಪಡೆದರು.ಕಳೆದ ಐದು ದಶಕಗಳಿಂದಲೂ ವಿಮರ್ಶಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಡಾ.ಅಮೂರ ಅವರು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದಾರೆ.ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಏ(ಗೌರವ) ಪದವಿ ಪಡೆದರು. ಆ ಬಳಿಕ ಕುಮಟಾಹಾಗುಗದಗ ಹಾಗು ಔರಂಗಾಬಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ೧೬ ವರ್ಷ ಸೇವೆ ಸಲ್ಲಿಸಿದರು.
ಜಿ. ಎಸ್. ಆಮೂರ | |
---|---|
ಚಿತ್ರ | [[File:|200px]] |
ಜನನದ ದಿನಾಂಕ | ೮ ಮೇ 1925 |
ಹುಟ್ಟಿದ ಸ್ಥಳ | ಧಾರವಾಡ |
ಸಾವಿನ ದಿನಾಂಕ | ೨೮ ಸೆಪ್ಟೆಂಬರ್ 2020 |
ವೃತ್ತಿ | ಕವಿ, ಲೇಖಕ, literary critic |
ರಾಷ್ಟ್ರೀಯತೆ | ಬ್ರಿಟಿಷ್ ರಾಜ್, ಭಾರತ |
ಮಾತನಾಡುವ ಅಥವಾ ಬರೆಯುವ ಭಾಷೆಗಳು | ಕನ್ನಡ |
ಪೌರತ್ವ | ಬ್ರಿಟಿಷ್ ರಾಜ್, ಭಾರತ |
ದೊರೆತ ಪ್ರಶಸ್ತಿ | ಸಾಹಿತ್ಯ ಅಕಾಡೆಮಿ ಪ್ರಶಸ್ತಿ |
ಲಿಂಗ | ಪುರುಷ |
ಕರ್ನಾಟಕ ವಿಶ್ವವಿದ್ಯಾಲಯ |
ಸಾಹಿತ್ಯ ವಿಮರ್ಶಕರಸಾಲಿನಲ್ಲಿ ಅಮೂರರದು, ವಿಶಿಷ್ಟ ವ್ಯಕ್ತಿತ್ವ
ಬದಲಾಯಿಸಿಆಧುನಿಕ ಕನ್ನಡಸಾಹಿತ್ಯ ವಿಮರ್ಶಕರಲ್ಲಿ ಅತಿ ಅಗ್ರಮಾನ್ಯರಲ್ಲೊಬ್ಬರೆಂದು ಪರಿಗಣಿಸಲ್ಪಟ್ಟಿರುವ ಡಾ.ಅಮೂರರವರು, ಕರ್ನಾಟಕ ರಾಜ್ಯಸರ್ಕಾರಪ್ರದಾನಮಾಡುವ, ಪಂಪ ಪ್ರಶಸ್ತಿವಿಜೇತರು. ಕನ್ನಡ ಹಾಗೂ ಇಂಗ್ಲೀಷ್ ಸಾಹಿತ್ಯಪ್ರಾಕಾರಗಳಲ್ಲಿ ಪ್ರಕಾಂಡ ಪಂಡಿತರೆಂದು ಪರಿಗಳಿಸಲ್ಪಟ್ಟಿರುವ ಡಾ. ಅಮೂರರು, ಕನ್ನಡ ಸಾಹಿತ್ಯವನ್ನು ಇಂಗ್ಲೀಷ್ ಓದುಗರಿಗೆ ಪರಿಚಯಿಸಿದ್ದಾರೆ. ಇಂಗ್ಲೀಷ್ ಹೇಳಿಕೊಡುವ ಭಾಷೆಯಾದರೆ, ಬರೆಯುವುದು, ಕೃತಿರಚನೆಗಳು ಸಾಮಾನ್ಯವಾಗಿ ಕನ್ನಡಭಾಷೆಯಲ್ಲಿ. ಧಾರವಾಡ, ಔರಂಗಬಾದ್ ; ಹೀಗೆ ಹೋದಡೆಯೆಲ್ಲಾ ಅಪಾರ ಶಿಷ್ಯರನ್ನು ಗಳಿಸಿದ್ದಾರೆ. ವಿಮರ್ಶೆಯ ಜೊತೆಗೆ, ಸತತ ಓದು, ಬರವಣಿಗೆ, ತಮ್ಮ ಅಧ್ಯಾಪನ ಕಾರ್ಯ, ಆಡಳಿತಕಾರ್ಯಗಳ ಜೊತೆಗೆ ಎಲ್ಲವನ್ನು ಸರಿತೂಗಿಸಿಕೊಂಡು ತಾವೂ ಬೆಳೆದು, ತಮ್ಮ ಅಪಾರ ಶಿಷ್ಯವೃಂದಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು.
ಜನನ, ಬಾಲ್ಯ ಹಾಗೂ ವಿದ್ಯಾಭ್ಯಾಸ
ಬದಲಾಯಿಸಿಶ್ರೀ ಗುರುರಾಜ ಶ್ಯಾಮಾಚಾರ ಆಮೂರರವರು ೧೯೨೫ರ ಮೇ ೮, ರಂದು ತಮ್ಮ ತಾಯಿ, ಗಂಗೂಬಾಯಿಯವರ ತವರುಮನೆಯಾದ, ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ತಂದೆ, ಶ್ಯಾಮಾಚಾರ್ಯ,ಶಿರಹಟ್ಟಿ ತಾಲೂಕಿನ ಸೂರಣಗಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಜುರುಕುಬುದ್ಧಿಯಬಾಲಕ, ಅಮೂರ ಪರಿಶ್ರಮಿ, ಸತತವಾಗಿ ಕಲಿಯಲು ಆಸಕ್ತ. ಅಮೂರರನ್ನು ವಿದ್ಯಾರ್ಜನೆಗೆ ಹುರಿದುಂಬಿಸುವಲ್ಲಿ, ಅವರ ಮನೆಯ ಪರಿಸರವೂ ಪೂರಕವಾಗಿತ್ತು. ಅಮೂರರಿಗೆ ಇಬ್ಬರು ಸಹೋದರಿಯರು, ಮತ್ತು ಇಬ್ಬರು ಸಹೋದರರ ಪರಿವಾರದಲ್ಲಿ ಗುರುರಾಜರೇ ಹಿರಿಯರು. ಇವರು ಸೂರಣಗಿಕರ್ಜಗಿ, ಹಾಗೂ ಹಾವೇರಿಯಲ್ಲಿ ಪ್ರಾಥಮಿಕ ಹಾಗು ಮಾಧ್ಯಮಿಕ ಶಾಲಾ ಶಿಕ್ಷಣ ಮುಗಿಸಿ, ೧೯೪೩ ರಲ್ಲಿ ಮುಂಬಯಿನಲ್ಲಿ ಮೆಟ್ರಿಕ್ ಪರೀಕ್ಷೆ ಪಾಸ್ ಮಾಡಿದರು. ೧೯೪೭ ರಲ್ಲಿ, ಬಿ.ಎ. ಆನರ್ಸ್ ಇಂಗ್ಲೀಷ್ ವಿಷಯದಲ್ಲಿ ಮಾಡಿ ಮುಗಿಸಿದರು. ೧೯೪೯ ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ, ಎಮ್. ಎ. ಪದವಿಗಳಿಸಿ, ಗದಗ್ ನ, ತೋಂಟದಾರ್ಯ ಕಾಲೇಜ್ ನಲ್ಲಿ, ಇಂಗ್ಲೀಷ್ ಅಧ್ಯಾಪಕರಾಗಿ ಸೇವೆಸಲ್ಲಿಸಿದರು. ತಮ್ಮ ಅಧ್ಯಾಪನದ ಕಾರ್ಯವೂ ಜೊತೆಯಲ್ಲೇ ಸಾಗಿತ್ತು. ಲೇಖನ ಕಾರ್ಯವೂ ತಡೆಯಿಲ್ಲದೆ ನಡೆದಿತ್ತು. " ದ ಕಾನ್ಸೆಪ್ಟ್ ಆಫ್ ಕಾಮಿಡಿ," ಎಂಬ ವಿಷಯವನ್ನು ಕುರಿತು, "ಮಹಾಪ್ರಬಂಧ" ರಚಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ೧೯೬೧ ರಲ್ಲಿ ಡಾಕ್ಟಾರೇಟ್ ಕೊಟ್ಟು ಗೌರವಿಸಿತು. ೧೯೭೨ ರಲ್ಲಿ ಅವರು ಫುಲ್ ಬ್ರೈಟ್ ಸ್ಕಾಲರ್ಶಿಪ್ ಗಳಿಸಿ ಅಮೆರಿಕದ ಮೇಲ್ ಹಾಗೂ ಕ್ಯಾಲಿಫೋರ್ನಿಯ ವಿಶ್ವವಿಧ್ಯಾಲಯಗಳಲ್ಲಿ ಟಿ. ಎಸ್. ಎಲಿಯಟ್ ನ ಮೇಲೆ, ಪೋಸ್ಟ್ ಡಾಕ್ಟೊರಲ್ ಸಂಶೋಧನೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡುಬಂದರು. ೧೯೭೩ ರಲ್ಲಿ ಬ್ರಿಟಿಶ್ ಕೌನ್ಸಿಲ್ ನ ಆಮಂತ್ರಣದಿಂದಾಗಿ, ಇಂಗ್ಲೆಂಡಿಗೆ ಭೇಟಿಕೊಟ್ಟರು. ಗುರುರಾಜರು, ಮದುವೆಯಾಗಿ ೪ ಮಕ್ಕಳ ತಂದೆಯಾಗಿದ್ದಾರೆ. ಒಂದು ಹೆಣ್ಣುಮಗು, ಉಳಿದ ೩ ಗಂಡು ಮಕ್ಕಳು. ಗದಗ್ ನ ಕಾಲೇಜ್ ನಲ್ಲಿ ಕೆಲವರ್ಷ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ. ಡಾ. ಅಮೂರ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ರೀಡರ್ ಆಗಿ ನೇಮಕಗೊಂಡರು. ಇಲ್ಲೂ ತಮ್ಮ ಅಧ್ಯಾಪನದ ಜೊತೆಗೆ, ಓದು ಬರಹ ಅವರಿಗೆ ಮುದಕೊಟ್ಟಿತ್ತು. ೧೯೮೫ ರಲ್ಲಿ, ಅಮೂರ, ಔರಂಗಬಾದ್ ವಿಶ್ವವಿದ್ಯಾಲಯ ದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ ಮತ್ತು ವಿಭಾಗ ಪ್ರಮುಖರೆಂದು ನೇಮಕಗೊಂಡರು. ೧೯೮೮ ರಲ್ಲಿ ನಿವೃತ್ತರಾಗುವವರೆಗೂ ಔರಂಗಾಬಾದ್ ನಲ್ಲಿ ಕಳೆದ ದಿನಗಳು ಅವಿಸ್ಮರಣೀಯವೆಂದು ನೆನೆಸಿಕೊಳ್ಳುತ್ತಾರೆ.
ಡಾ.ಅಮೂರ ಅವರು, ಮಾರ್ಗದರ್ಶನ ಮಾಡಿದ ವಿದ್ಯಾರ್ಥಿಗಳು
ಬದಲಾಯಿಸಿನಿವೃತ್ತ ಜೀವನ ಧಾರವಾಡದಲ್ಲಿ
ಬದಲಾಯಿಸಿಡಾ. ಅಮೂರರು ಹರೆಯದ ಯುವಕರ ತರಹ ಅತ್ಯಂತ ಉತ್ಸಾಹಿ, ಓದುಗರಾಗಿದ್ದಾರೆ. ಕೃತಿಸಂಪಾದನೆ. ನಿಯತಕಾಲಿಕೆಗಳಿಗೆ ಸ್ಪಂದನೆ, ಪತ್ರಿಕೆಗಳಿಗೆ ಬರೆಯುವುದು, ಇತ್ಯಾದಿ. ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ.
ಸಂಪಾದಿಸಿದ ಕೃತಿಗಳು
ಬದಲಾಯಿಸಿ- ೧. ಶ್ರೀರಂಗ (ಸಮಗ್ರ ಕೃತಿಗಳು).
- ೨. ಹುಯಿಲುಗೋಳ ನಾರಾಯಣರಾಯರ (ಸಮಗ್ರ ಕೃತಿಗಳು).
ಸಾಹಿತ್ಯ ಕೃತಿಗಳು
ಬದಲಾಯಿಸಿ- ಆಧುನಿಕ ಕನ್ನಡ ವಿಮರ್ಶೆ.
- ಮಹಾಕವಿ ಮಿಲ್ಟನ್
- ಕೃತಿಪರೀಕ್ಷೆ.
- ಅ.ನ.ಕೃಷ್ಣರಾಯ
- ಭುವನದ ಭಾಗ್ಯ
- ವ್ಯವಸಾಯ
- ಅರ್ಥಲೋಕ
- ಕನ್ನಡ ಕಥನ ಸಾಹಿತ್ಯ
- ಕಾದಂಬರಿ
- ಸಾತ್ವಿಕ ಪಥ
- ಕಾದಂಬರಿ ಸ್ವರೂಪ
- ದ.ರಾ.ಬೇಂದ್ರೆ
- ಅಮೃತವಾಹಿನಿ
- ಶಾಂತಿನಾಥ ದೇಸಾಯಿ
- ಬೇಂದ್ರೆ ಕಾವ್ಯದ ಪ್ರತಿಮಾಲೋಕ
- ಕಥನ ಶಾಸ್ತ್ರ
- ಸೀಮೊಲ್ಲಂಘನ
- ಸಮಕಾಲೀನ ಕಥೆ ಕಾದಂಬರಿ,
- ಸಣ್ಣಕತೆ.
- ಕನ್ನಡ ಕಾದಂಬರಿಯ ಬೆಳವಣಿಗೆ,
- ಆಧುನಿಕ ಕನ್ನಡ ಸಾಹಿತ್ಯದ ವಿರಾಟಪುರುಷ
- Adya Rangachar
- A Critical spectrum
- Images and Impressions
- A.N.Krishnarao
- The Concept of Comedy
- Poetics of T.S.Eliot
- Essays on modern Kannada literature
ಆತ್ಮಚರಿತ್ರೆ
ಬದಲಾಯಿಸಿ- ನೀರ ಮೇಲಣ ಗುಳ್ಳೆ
ಪ್ರಶಸ್ತಿಗಳು
ಬದಲಾಯಿಸಿ- ಭುವನದ ಭಾಗ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೯೬)
- ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ (ಕೊಲ್ಕತ್ತಾ)
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೯)
- ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ,ಅ.ನ.ಕೃ.ಪ್ರಶಸ್ತಿ ಮುಂತಾದ ಎಂಟು ಪುರಸ್ಕಾರಗಳು
- ಪಂಪ ಪ್ರಶಸ್ತಿ
- ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನವು ನೀಡುವ ಡಾ.ಬೆಟಗೇರಿ ಕೃಷ್ಣಶರ್ಮ ವಿಮರ್ಶಾ ಪ್ರಶಸ್ತಿ.೨೦೧೬(೧೬-೪-೨೦೧೬ ರಂದು ಧಾರವಾಡದಲ್ಲಿ ಪ್ರಶಸ್ತಿ ಪ್ರದಾನ; ‘ಹಿರಿಯ ಕವಿ, ಡಾ.ಚೆನ್ನವೀರ ಕಣವಿ ಅಧ್ಯಕ್ಷ ತೆಯ ಆಯ್ಕೆ ಸಮಿತಿ ಯಲ್ಲಿ ಎಚ್.ಎಸ್. ವೆಂಕಟೇಶಮೂರ್ತಿ ಹಾಗೂ ಪ್ರೊ.ಶಾಂತಾ ಇಮ್ರಾಪುರ)[೧]
- ನೃಪತುಂಗ ಪ್ರಶಸ್ತಿ - 2020[೨]
೯೦ ರ ಹರೆಯದಲ್ಲಿ ಅಮೂರ
ಬದಲಾಯಿಸಿ- prajavani, 05-03-015, ಕನ್ನಡ ವಿಮರ್ಶೆಯ ಹಿರೀಕ ತೊಂಬತ್ತರ ಆಮೂರ Archived 2015-05-04 ವೇಬ್ಯಾಕ್ ಮೆಷಿನ್ ನಲ್ಲಿ.
ನಿಧನ
ಬದಲಾಯಿಸಿಡಾ. ಆಮೂರ ಅವರು ವಯೋಸಹಜ ಖಾಯಿಲೆಯಿಂದ ೨೮ ಸೆಪ್ಟೆಂಬರ್ ೨೦೨೦ ರಂದು ನಿಧನರಾದರು. <ref> "Eminent Writer and Sahitya Akademi Awardee GS Amur Dies At 95". NDTV. 28 Sep 2020. Retrieved 28 Sep 2020.[ಶಾಶ್ವತವಾಗಿ ಮಡಿದ ಕೊಂಡಿ]
ಉಲ್ಲೇಖಗಳು
ಬದಲಾಯಿಸಿ- ↑ www.prajavani.net/article/ಆಮೂರರಿಗೆ-ವಿಮರ್ಶಾ-ಪ್ರಶಸ್ತಿ
- ↑ "ಜಿ. ಎಸ್. ಆಮೂರಗೆ 'ನೃಪತುಂಗ ಪ್ರಶಸ್ತಿ'" (in Kannada). Prajavani.com. 10 September 2020. Retrieved 10 September 2020.
{{cite web}}
: CS1 maint: unrecognized language (link)