ಶಿರಹಟ್ಟಿ

ಗದಗ ಜಿಲ್ಲೆಯ ತಾಲೂಕುಗಳಲ್ಲೊಂದು

ಶಿರಹಟ್ಟಿ - ಗದಗ ಜಿಲ್ಲೆಯ ತಾಲೂಕುಗಳಲ್ಲೊಂದು. ತಾಲೂಕಿನ ಪುಲಿಗೆರೆಯಲ್ಲಿ ಖ್ಯಾತ ಹಳಗನ್ನಡ ಕವಿ ಆದಯ್ಯನು ಜೀವಿಸಿದ್ದನು. ಇಲ್ಲಿಯ ಸೋಮನಾಥ ದೇವಸ್ಥಾನ ಹೆಸರುವಾಸಿ. ಆಗಿನ ಪುಲಿಗೆರೆಯೇ ಈಗಿನ ಲಕ್ಷ್ಮೇಶ್ವರ. ಶಿರಹಟ್ಟಿಯ ಲಕ್ಷ್ಮೇಶ್ವರದಲ್ಲಿ ಸೋಮನಾಥ ದೇವಸ್ಥಾನ ಸೇರಿದಂತೆ ಮಹತ್ವದ ಸ್ಥಳಗಳಿವೆ.

ಶಿರಹಟ್ಟಿ

ಶಿರಹಟ್ಟಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಗದಗ
ನಿರ್ದೇಶಾಂಕಗಳು 15.23° N 75.58° E
ವಿಸ್ತಾರ
 - ಎತ್ತರ
 km²
 - 659 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೧೬೨೦೮
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೮೨ ೧೨೦
 - +೯೧ (೦) ೮೪೮೭
 - ಕೆಎ-೨೬
ಅಂತರ್ಜಾಲ ತಾಣ: ಶಿರಹಟ್ಟಿ ಪಟ್ಟಣ ಪಂಚಾಯತಿ http://www.shirahattitown.gov.in/ ಶಿರಹಟ್ಟಿ ಪಟ್ಟಣ ಪಂಚಾಯತಿ

ಇತಿಹಾಸ

ಬದಲಾಯಿಸಿ

ಇತಿಹಾಸದಲ್ಲಿ ಶರಹಪೂರ ಎಂದು ದಾಖಲಾಗಿರುವ ಶಿರಹಟ್ಟಿಯಲ್ಲಿ ಶಿಥಿಲಕೋಟಿ ಇಂದಿಗೂ ಕಾಣಬಹುದಾಗಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕೇಂದ್ರವಾಗಿ ಶಿರಹಟ್ಟಿಯ ಫಕ್ಕಿರೇಶ್ವರ ಮಠ ಪ್ರಸಿದ್ಧಿ ಪಡೆದಿದೆ. ೩೦೦ ವರ್ಷಗಳ ಪ್ರಾಚಿನ ಇತಿಹಾಸ ಹೊಂದಿದ ಅವ್ವ ಲಿಂಗವ್ವನ ಸಮಾಧಿ ಇರುವ ಅವ್ವ ಲಿಂಗವ್ವನ ಮಠವೂ ಶಿರಹಟ್ಟಿಯಲ್ಲಿದೆ.

ಸುತ್ತ ಮುತ್ತ

ಬದಲಾಯಿಸಿ

ಮಾಗಡಿ ಕೆರೆ-ಪಕ್ಷಿವಲಸೆಧಾಮ ಶಿರಹಟ್ಟಿಯಿಂದ ೮ಕಿ.ಮೀ ದೂರದಲ್ಲಿದೆ. ೩೫ ಹೆಕ್ಟೇರ್ ಜಾಗೆಯಲ್ಲಿ ಈ ಕೆರೆ ವ್ಯಾಪಿಸಿದ್ದು, ಸುಮಾರು ೧೩೦ ಜಾತಿಯ ೫೦೦೦ ಪಕ್ಷಿಗಳು ಪ್ರತಿವರ್ಷ ವಲಸೆ ಬರುತ್ತವೆ. ಇಲ್ಲಿ ಪ್ರಮುಖವಾಗಿ ಗೀರು ತಲೆಯ ಬಾತುಕೋಳಿಗಳು ಹೆಚ್ಚು. ಇದು ಅಕ್ಟೋಬರ್ ದಿಂದ ಫೆಬ್ರುವರಿಯವರೆಗೆ ಪಕ್ಷಿಗಳು ತುಂಬಿರುತ್ತವೆ. ಉತ್ತರ ಕರ್ನಾಟಕದ ಸಹ್ಯಾದ್ರಿ ಎನಿಸಿರುವ ಕಪ್ಪತಗುಡ್ಡದ ಸರಹದ್ದು ಹೊಂದಿದೆ.

ಉಲ್ಲೇಖಗಳು

ಬದಲಾಯಿಸಿ