ಆದಯ್ಯ ೧೧ನೇ ಶತಮಾನದ ಉತ್ತರಾರ್ಧ ಮತ್ತು ೧೨ನೇ ಶತಮಾನದಲ್ಲಿದ್ದ ಸೌರಾಷ್ಟ್ರ ಪ್ರಾಂತ್ಯದಲ್ಲಿದ್ದ ಹಿರಿಯ ಶಿವಶರಣರು, ವಚನಕಾರರು. ಜೇಡರದಾಸಿಮಯ್ಯ ಮತ್ತು ಗುರುಬಸವಣ್ಣನವರ ಸಮಕಾಲೀನರು. ಇವರ ವಚನಗಳಲ್ಲಿ ಅಂದು ಪ್ರಚಲಿತ-ಅಪ್ರಚಲಿತರಾಗಿದ್ದ ವಚನಕಾರರೆಲ್ಲರ ಹೆಸರು ಉಲ್ಲೇಖ ಗೊಂಡಿರುವುದನ್ನು ಪರಿಶೀಲಿಸಬಹುದಾಗಿದೆ. ಈ ಶರಣರ ಪುಣ್ಯಸ್ತ್ರೀಯ ಹೆಸರು ಪದ್ಮಾವತಿ. ಇವರ ವಚನಗಳ ಅಂಕಿತ ಸೌರಾಷ್ಟ್ರ ಸೋಮೇಶ್ವರ.[]

ಆದಯ್ಯ
ಜನನ೧೧೬೫
ಸೌರಾಷ್ಟ್ರಪ್ರಾಂತ್ಯ (ಗುಜರಾತ್)
ಅಂಕಿತನಾಮಸೌರಾಷ್ಟ್ರಸೋಮೇಶ್ವರ
ಸಂಗಾತಿ(ಗಳು)ಪದ್ಮಾವತಿ

ಬಸವಣ್ಣನವರ ಭಕ್ತಿಸ್ಥಲ, ಮಡಿವಾಳ ಮಾಚಯ್ಯನ ಮಹೇಶ್ವರಸ್ಥಲ
ಘಟ್ಟವಾಳ ಮುದ್ದಣ್ಣನ ಪ್ರಸಾದಿಸ್ಥಲ, ಚನ್ನಬಸವಣ್ಣನ ಪ್ರಾಣಲಿಂಗಿಸ್ಥಲ
ಪ್ರಭುವಿಮ ಶರಣಸ್ಥಲ, ಸೊಡ್ಡಳಬಾಚಾರಸರ ಐಕ್ಯಸ್ಥಲ
ಅಜಗಣ್ಣನ ಆರೂಢ, ನಿಜಗುಣನ ಬೆರಗು
ಅನಿಮಿಷನ ನಿಶ್ಚಲ, ಮಹದೇವಿಯಕ್ಕನ ಜ್ಞಾನ,
ನಿಂಬಿಯಕ್ಕನ ನಿಶ್ಚಯ, ಮುಕ್ತಾಯಕ್ಕನ ಅಕ್ಕರೆ
ಸತ್ಯಕ್ಕನ ಯುಕ್ತಿ, ಅಲ್ಲಾಳಿಯಕ್ಕನ ಸಮತೆ
ರಾವಣಸಿದ್ದಯ್ಯ ದೇವರ ನಿಷ್ಠೆ, ಸಿದ್ಧರಾಮಯ್ಯತಂದೆಗಳ ಮಹಿಮೆ
ಮರುಳ ಸಿದ್ಧದೇವರ ಅದೃಷ್ಟ ಪ್ರಸಾದನಿಷ್ಠೆ
ಏಕೋರಾಮಯ್ಯಗಳ ಆಚಾರನಿಷ್ಠೆ
ಪಂಡಿತಾರಾಧ್ಯರ ಸ್ವಯಂಪಾಕ
ಮುಗ್ಧಸಂಗಯ್ಯ, ಮೈದುನ ರಾಮಣ್ಣ, ಬೇಡರಕಣ್ಣಪ್ಪ
ಕೋಳೂರ ಕೊಡಗೂಸು, ತಿರುನೀಲನಕ್ಕರು
ರುದ್ರಪಶುಪತಿಗಳು, ದೀಪದ ಕಲಿಯಾರಮುಗ್ಧಭಕ್ತಿ
ನಿಮ್ಮೊಳೆನಗೆಂದಪ್ಪುದೊ ಸೌರಾಷ್ಟ್ರ ಸೋಮೇಶ್ವರ

ಉಲ್ಲೇಖಗಳು

ಬದಲಾಯಿಸಿ
  1. "Adayya (ಆದಯ್ಯ)". lingayatreligion.com.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಆದಯ್ಯ&oldid=1146533" ಇಂದ ಪಡೆಯಲ್ಪಟ್ಟಿದೆ