ಗದಗ

ಕರ್ನಾಟಕದಲ್ಲಿರುವ ಅವಳಿ ಪಟ್ಟಣಗಳು
(ಗದಗ್ ಇಂದ ಪುನರ್ನಿರ್ದೇಶಿತ)

ಟೆಂಪ್ಲೇಟು:Infobox ಜಿಲ್ಲೆ 'ಗದಗ ಕರ್ನಾಟಕದ ಒಂದು ಜಿಲ್ಲೆ. ಗದಗ ಪಟ್ಟಣ ಈ ಜಿಲ್ಲೆಯ ಕೇಂದ್ರ. ಕೆಲವು ವರ್ಷಗಳ ಹಿಂದಿನವರೆಗೂ ಗದಗ, ಧಾರವಾಡ ಜಿಲ್ಲೆಯ ಭಾಗವಾಗಿದ್ದಿತು. ಈ ಜಿಲ್ಲೆಯ ಜನಸಂಖ್ಯೆ ಸುಮಾರು ೧೦ ಲಕ್ಷ.[][][][][][][]

ಇತಿವೃತ್ತ

ಬದಲಾಯಿಸಿ
 
Gadag style Ornate pillars at Sarasvati Temple, Trikuteshwara temple (complex) at Gadag
 
Saraswati temple at Trikuteshwara temple complex Gadag, Karnataka
  • ಗದಗ ಜಿಲ್ಲೆಯು ಪುರಾತನ ಕವಿಗಳಿಗೆ ಪ್ರಸಿದ್ಧ. ಕುಮಾರವ್ಯಾಸ, ಪಂಪ, ಲಕ್ಷ್ಮೀಶ ಮೂಲತಃ ಗದಗದವರು. ಆಧುನಿಕ ಕವಿಗಳಾದ ಆಲೂರು ವೆಂಕಟರಾಯ, ಚೆನ್ನವೀರ ಕಣವಿ ಕೂಡ ಇದೇ ಜಿಲ್ಲೆಗೆ ಸೇರಿದವರು. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ರಾಗಿ, ಬೇಳೆಗಳು, ನೆಲಗಡಲೆ, ಸೂರ್ಯಕಾಂತಿ, ಹತ್ತಿ, ಈರುಳ್ಳಿ ಮತ್ತು ಮೆಣಸಿನಕಾಯಿ. ಧಾರ್ಮಿಕ ಪ್ರಾಮುಖ್ಯತೆಯುಳ್ಳ ಇಲ್ಲಿನ ಎರಡು ಮುಖ್ಯ ದೇವಸ್ಥಾನಗಳೆ೦ದರೆ ತ್ರಿಕೂಟೇಶ್ವರ ದೇವಾಲಯ ಮತ್ತು ವೀರನಾರಾಯಣನ ದೇವಸ್ಥಾನ.
  • ಗದಗ ಪಟ್ಟಣದಲ್ಲಿ ಎರಡು ಮುಖ್ಯ ಜೈನ ದೇವಾಲಯಗಳು ಸಹ ಇದ್ದು ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾವೀರನಿಗೆ ಅರ್ಪಿತವಾಗಿವೆ.ಇದರ ಜೊತೆಗೆ ಇತಿಹಾಸ ಪ್ರಸಿದ್ಧ ಲಕ್ಕುಂಡಿ ದೇವಾಲಯಗಲಿರುವುದೂ ಗದಗ ಜಿಲ್ಲೆಯಲ್ಲಿಯೇ. ಗದಗ ಪಟ್ಟಣದಲ್ಲಿ ಅತೀ ಹೆಚ್ಚಿನ ಮುದ್ರಣಾಲಯಗಳಿದ್ದವು. ಮುದ್ರಣಾಲಯಗಒಂದು ಕಾಲದಲ್ಲಿ ಗದಗ ಶಹರದಲ್ಲಿ ಎಲ್ಲೇ ನಿಂತು ಕಲ್ಲು ತೂರಿದರೂ ಅದು ಯಾವದಾದರೊಂದು ಪ್ರಿಂಟಿಂಗ್ ಪ್ರೆಸ್ ಗೆ ಹೋಗಿ ಬೀಳುತ್ತದೆಂಬ ಪ್ರತೀತಿ ಇತ್ತು.ಅಷ್ಟೊಂದು ಮುದ್ರಣಾಲಯಗಳು ಗದಗನಲ್ಲಿದ್ದವು. ಮುದ್ರಣ ಕ್ಷೇತ್ರದಲ್ಲಿ ಕರ್ನಾಟಕದಲ್ಲೇ ಗದಗನ್ನು ಮೀರಿಸಿದವರಿರಲಿಲ್ಲ. ಗದಗ ಪಟ್ಟಣ ಬದನೇಕಾಯಿ ಬಜಿ,ಒಗ್ಗರಣೆ ಗಿರ್ಮಿಟ್ ಮತ್ತು ಮೆಣಸಿನಕಾಯಿ ಮಿರ್ಚಿಗೆ ತುಂಬ ಖ್ಯಾತಿಪಡೆದುಕೊಂಡಿದೆ.
  • ಭೀಷ್ಮ ಕೆರೆ ಇಲ್ಲಿನ ಅತ್ಯಂತ ದೊಡ್ಡದಾದ ಮತ್ತು ಪುರಾತನ ಕೆರೆಯಾಗಿದೆ. ಗದಗ ಪುರಾತನ ಕಾಲದಲ್ಲಿ "ಕೃತಪುರ" ಎಂದು ಖ್ಯಾತಿಗಳಿಸಿತ್ತು. ಭಾರತ ರತ್ನ ಭೀಮಸೇನ ಜೋಶಿ ಇಲ್ಲಿಯವರೇ. ಗದುಗಿನ ಅನೇಕ ಜನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.

ಗದಗ ಮತ್ತು ಬೆಟಗೇರಿ ಅವಳಿ ನಗರಗಳು

ಬದಲಾಯಿಸಿ

ಗದಗ ಜಿಲ್ಲೆಯ ಗದಗ ತಾಲೂಕಿನ ಕಣಗಿನಹಾಳದಲ್ಲಿ ಸನ್ ೧೯೦೫ ಇಸವಿಯಲ್ಲಿ ಏಷ್ಯಾ ಖಂಡದಲ್ಲೇ ಪ್ರಪ್ರಥಮ ಬಾರಿಗೆ ಸ್ಥಾಪನೆಯಾದ ಸಹಕಾರ ಸಂಘವಿದೆ. ಗದಗಿನ ಮೂಲ ಹೆಸರುಗಳು ಕೃತುಕ, ಕೃತುಪುರ, ಕರಡುಗು ನಂತರ ಗಲದುಗು , ಗದುಗು ಮತ್ತು ಈಗ ಗದಗ ಎಂದು ಕರೆಯಲಾಗುತ್ತದೆ. ಕಪ್ಪತ ಗುಡ್ಡ ಸಹ ಇದರ ಸುತ್ತಮುತ್ತಲಲ್ಲೇ ಇವೆ.

 
ನಕಾಶೆ
 
ಗದಗ ಜಿಲ್ಲೆ

ಗದಗ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ ನದಿಗಳೆಂದರೆ ಮಲಪ್ರಭಾ ಮತ್ತು ತುಂಗಭದ್ರಾ. ಗದಗ ಪಟ್ಟಣ ಬೆಂಗಳೂರಿನಿಂದ ೪೩೧ ಕಿಮೀ ದೂರದಲ್ಲಿದ್ದು ಧಾರವಾಡದಿಂದ ೮೦ ಕಿಮೀ ದೂರದಲ್ಲಿದೆ. ಗದಗ ಕರ್ನಾಟಕದ ೨೯ ನೇ ಜಿಲ್ಲೆ ಆಗಿರುತ್ತದೆ.

ತಾಲೂಕುಗಳು

ಬದಲಾಯಿಸಿ
 
ಗದಗ ಜಿಲ್ಲೆಯಲ್ಲಿರುವ ತಾಲೂಕುಗಳು

ಗದಗ ಜಿಲ್ಲೆಯಲ್ಲಿರುವ ತಾಲೂಕುಗಳು

ಪ್ರಮುಖ ವ್ಯಕ್ತಿಗಳು

ಬದಲಾಯಿಸಿ
 
ಪಂಚಾಕ್ಷರಿ ಗವಾಯಿಗಳು

ಚಾರಿತ್ರಿಕ ಘಟನೆಗಳು

ಬದಲಾಯಿಸಿ
೨೦೦೦- ಸಿದ್ದಲಿಂಗನಗರ ಬಡಾವಣೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾರಂಭ
ಸಾಂಸ್ಕೃತಿಕ ಹಾಗು ಸಾಮಾಜಿಕ ಚಾರಿತ್ರಿಕ ಘಟನೆಗಳು
ವರ್ಷ ಘಟನೆ
೧೮೮೪ ಗದಗ - ಹೊಟಗಿ ರೈಲು ಹಳಿ
೧೯೧೪ ಶ್ರೀ ವೀರೇಶ್ವರ ಪುಣ್ಯಾಶ್ರಮ (ಸಂಚಾರಿ ಪಾಠ ಶಾಲೆ)
೧೯೧೪ ಶ್ರೀ ಕುಮಾರೇಶ್ವರ ಕೃಪಾ ಕಟಾಕ್ಷ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ
೧೯೪೩ ಕೃಷಿ ಮಾರುಕಟ್ಟೆ ಪ್ರಾರಂಭ
೧೯೪೭ ಶ್ರೀ ವಸಂತ ನಾಟ್ಯಕಲಾ ಸಂಘ
೧೯೫೮ ಜೆ.ಟಿ.ಕಾಲೇಜ- ಮಸಾರಿ ಆರಂಭ
೧೯೭೯ ಶ್ರೀ. ಡಿ. ಜಿ ಎಮ್. ಆಯುರ್ವೇದ ಕಾಲೇಜ ಆರಂಭ
೧೯೮೯ ಶ್ರೀ.ಮ.ನಿ.ಪ್ರ.ಪ್ರಭುಮಹಾಸ್ವಾಮಿಗಳವರು ಬೂದೀಶ್ವರ ಮಟ್ಟ್ ಹೊಸಹಳ್ಳಿ ಲಿಂಗೈಕ್ಯ (ನವೆಂಬರ್-೩೦)
೧೯೯೭ ಗದಗ ಜಿಲ್ಲೆಯ ರಚನೆ (ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩ ಕರ್ನಾಟಕ ಸರ್ಕಾರ ಆಗಸ್ಟ್ ೨ ೧೯೯೭ರಂದು ಬೆಂಗಳೂರಿನಲ್ಲಿ ಹೊರಡಿಸಿದ ಒಂದು ಪ್ರಕಟಣೆಯ ಭಾಗವಾಗಿತ್ತು ಮತ್ತು ಇದು ಕರ್ನಾಟಕದಲ್ಲಿ ಏಳು ಹೊಸ ಜಿಲ್ಲೆಗಳ ರಚನೆಯಾಗುವಲ್ಲಿ ಪರಿಣಮಿಸಿತು.
೧೯೯೭ ತೊಂಟದಾರ್ಯ ತಾಂತ್ರಿಕ ವಿದ್ಯಾಲಯ ಆರಂಭ
೨೦೦೧ ಭು ದಾಕಲೆಗಳ ಗಣಕೀಕರಣ ವ್ಯವಸ್ಠೆ (೨೯-೦೯-೨೦೦೯ ಪೂರ್ಣ)
೨೦೦೫ ಗದಗ ಹೊಸ ಬಸ್ ನಿಲ್ದಾಣ (ಅಕ್ಟೋಬರ್ ೩೦- ೨೦೦೫)
೨೦೦೭ ಮೀಟರ್ ಗೇಜ್ ರೈಲು ಸಂಚಾರದ ಕೊನೆಯ ಕೊಂಡಿಯಾಗಿ ಉಳಿದುಕೊಂಡಿದ್ದ ಬಾಗಲಕೋಟೆ- ಗದಗ ಪ್ಯಾಸೆಂಜರ್ ರೈಲು ಈದಿನ ತನ್ನ ಕೊನೆಯ ಸಂಚಾರದೊಂದಿಗೆ ಇತಿಹಾಸದ ಪುಟ ಸೇರಿತು.ಸಂಜೆ ೫.೪೫ ಕ್ಕೆ ಗದುಗಿಗೆ ಹೋಗುವ ರೈಲಿಗೆ ಪೂಜೆ ನೆರವೇರಿಸಿದ ರೈಲ್ವೆ ಸಿಬ್ಬಂದಿ ಆರತಿ ಮಾಡುವ ಮೂಲಕ ಕೊನೆಯ ಗಾಡಿಗೆ ಹೃದಯಸ್ಪರ್ಶಿ ವಿದಾಯ ಹೇಳಿದರು.
೨೦೦೭ ಶ್ರೀ ಕುಮಾರೇಶ್ವರ ಕೃಪಾ ಕಟಾಕ್ಷ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘಕ್ಕೆ - ಕೆ. ಹಿರಣ್ಣಯ್ಯ ನಾಟಕ ಅಕಾಡೆಮಿ ಪ್ರಶಸ್ತಿ
೨೦೦೯ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ)ಯು ಮಾಡುತ್ತಿರುವ ವೈದ್ಯಕೀಯ, ಸಾಮಾಜಿಕ, ಸಾಂಸ್ಕೃತಿಕ, ಮಾನವೀಯ ಕಾರ್ಯಗಳನ್ನು ರಾಜ್ಯ ಐಎಂಎ ಗುರುತಿಸಿ ರಾಜ್ಯದ ಅತ್ಯುತ್ತಮ ಶಾಖೆ
೨೦೦೯ ಜಿಲ್ಲೆಯಾದ್ಯಂತ ಆರು ದಿನಗಳಿಂದ ಸುರಿಯುತ್ತಿರುವ ಮಳೆ
೨೦೧೦ ಅಖಿಲ ಭಾರತ ೭೬ನೇ ಕನ್ನಡ ಸಾಹಿತ್ಯ ಸಮ್ಮೇಳನ (ಫೆಬ್ರುವರಿ ೧೯ರಿಂದ ೨೧ರವರೆಗೆ), ೭೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೀತಾ ನಾಗಭೂಷಣ.
೨೦೧೦ ಪಂಡಿತ ಪುಟ್ಟರಾಜ ಗವಾಯಿಗಳು ನಿಧನ (೧೭ ಸೆಪ್ಟೆಂಬರ್ )
೨೦೧೧ ಪಶು ವೈದ್ಯಕಿಯ ಕಾಲೇಜು ಆರಂಭ.
೨೦೧೨ ವೈದ್ಯಕಿಯ ಕಾಲೇಜು ಆರಂಭ.


೨೦೧೬ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ

ಕೈಗಾರಿಕೆ

ಬದಲಾಯಿಸಿ

ಗದಗಿನ ಬಹಳ ಮುಖ್ಯವಾದ ಕೈಗಾರಿಕೆ ಗದಗ ಪ್ರಿಂಟಿಂಗ್ ಪ್ರೆಸ್ ಹಾಗು ಸುಮಾರು ೧೦೦ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿವೆ. ಸಂಕೇಶ್ವರ, ಶಾಬಾದಿಮಠ , ಹೊಂಬಾಳಿ, ವಿದ್ಯಾವಿಕಾಸ, ವಿದ್ಯಾನಿಧಿ, ಪಾರು ಪ್ರಕಾಶನ ಮುಂತಾದ ಪ್ರಸಿದ್ಧ ಪ್ರಿಂಟಿಂಗ್ ಪ್ರೆಸ್ ಗಳು ಇವೆ. ಕೈಮಗ್ಗ ಹಾಗೂ ಬಣ್ಣ ಬಣ್ಣದ ಆಕರ್ಷಕ ಸೀರೆಗಳನ್ನು ನೇಯುವ ಹತ್ತಾರು ಮಂದಿ ನೇಕಾರರು ಇಲ್ಲಿದ್ದಾರೆ ಇದು ಗದಗ ಮತ್ತು ಬೆಟಗೇರಿಯ ಇನ್ನೊಂದು ಆಕರ್ಷಣೆ.

ಪವನ ವಿದ್ಯುತ್

ಬದಲಾಯಿಸಿ

ಗದಗ ಜಿಲ್ಲೆಯ ೪೦&೫೦ ಕಿಮೀ ಉದ್ದಗಲದ ಕೃಷಿಭೂಮಿಯು ಹೆಚ್ಚು ಗಾಳಿ ಬೀಸುವ ಪ್ರದೇಶವೆಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ.ಆರ್ ಇ.ಡಿ.ಎಲ್) ಗುರುತಿಸಿದೆ. ಪವನ ವಿದ್ಯುತ್ ಶಕ್ತಿ ಉತ್ಪಾದನೆಗೆ ಯೋಗ್ಯ ಸ್ಥಳಗಳೆಂದೂ ಈ ಸಂಸ್ಥೆ ಪಟ್ಟಿ ಮಾಡಿದೆ.

ಗಂಗಾಪೂರ ಸಕ್ಕರೆ ಕಾರ್ಖಾನೆ

ಬದಲಾಯಿಸಿ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಗಂಗಾಪೂರ ಗ್ರಾಮದಲ್ಲಿ ಮಾಜಿ ಸಚಿವ ಎಸ್ . ಎಸ್. ಪಾಟೀಲ್[ಪಾಟೀಲ] ಇವರ ನೇತೃತ್ವದಲ್ಲಿ ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ಎಂದು ರೈತರ ಸಹಕಾರದೊಂದಿಗೆ ಕಾರ್ಖಾನೆ ಸ್ಥಾಪಿಸಿದ್ದು ಇರುತ್ತದೆ. ನಂತರ ಕೆಲವು ಆಡಳಿತಾತ್ಮಕ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ ಸದರಿ ಕಾರ್ಖಾನೆಯನ್ನು ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಒಡತನದ ಸಂಸ್ಥೆಗೆ ೩೦ ವರ್ಷಗಳ ಗುತ್ತಿಗೆ ಆಧಾರದಲ್ಲಿ ಕೊಟ್ಟಿದ್ದು ಇಂದು ಅದು ವಿಜಯ ನಗರ ಸಕ್ಕರೆ ಕಾರ್ಖಾನೆ ನಿಗಮ ನಿಯಮಿತ, ಗಂಗಾಪೂರ ಎಂಬ ಹೆಸರಿನಲ್ಲಿ ನಡೆಯುತ್ತಿದೆ. ಇದು ಗದಗ ಜಿಲ್ಲೆಯಲ್ಲಿಯೇ ಬೃಹತ್ ಕೈಗಾರಿಕ ಪ್ರದೇಶವಾಗಿದ್ದು ಸಾವಿರಾರು ಉದ್ಯೋಗವನ್ನು ಒದಗಿಸಿದೆ. ಸಕ್ಕರೆ ತಯಾರಿಕೆ ಜೊತೆಗೆ ತ್ಯಾಜ್ಯಗಳನ್ನು ಉಪಯೋಗಿಸಿಕೊಂಡು ಸ್ಪಿರಿಟ್ ಮತ್ತು ಗೊಬ್ಬರ ತಯಾರಿಕ ಘಟಕಗಳನ್ನು ಸ್ಥಾಪಿಸಲಾಗಿದೆ.. . . ಅಮಸೂ(ಅಂಗಂ)

ಧಾರ್ಮಿಕ

ಬದಲಾಯಿಸಿ
 
ಸರಸ್ವತಿ ದೇವಾಲಯ

ಧಾರ್ಮಿಕ ಪ್ರಾಮುಖ್ಯತೆಯುಳ್ಳ ಇಲ್ಲಿನ ಎರಡು ಮುಖ್ಯ ದೇವಸ್ಥಾನಗಳೆ೦ದರೆ ತ್ರಿಕೂಟೇಶ್ವರ ದೇವಾಲಯ ಮತ್ತು ವೀರನಾರಾಯಣನ ದೇವಸ್ಥಾನ. ಗದಗ ಪಟ್ಟಣದಲ್ಲಿ ಎರಡು ಮುಖ್ಯ ಜೈನ ದೇವಾಲಯಗಳು ಸಹ ಇದ್ದು ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾವೀರನಿಗೆ ಅರ್ಪಿತವಾಗಿವೆ.ಶ್ರೀ ತೊಂಟದಾರ್ಯ ಮಠ ಕೂಡ ಇಲ್ಲಿನ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಲಿದೆ.

ಶೈಕ್ಷಣಿಕ

ಬದಲಾಯಿಸಿ

ಗದಗ ಪಟ್ಟಣ ಅನೇಕ ವಿದ್ಯಾಲಯ, ಮಹಾವಿದ್ಯಾಲಯಗಳಿವೆ. ಒಂದು ಆಯುರ್ವೇದ ಮತ್ತು ತಾಂತ್ರಿಕ ವಿದ್ಯಾಲಯಗಳಿವೆ.

ಪ್ರಮುಖ ವಿದ್ಯಾಸಂಸ್ಥೆಗಳು

ಬದಲಾಯಿಸಿ
  • ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ,ಗದಗ (ಸರ್ಕಾರಿ)
  • ಸರಕಾರಿ ಪ್ರಥಮ ದಜೆ೯ ಕಾಲೇಜು, ಮುಂಡರಗಿ.
  • ಸರಕಾರಿ ಪ್ರಥಮ ದಜೆ೯ ಕಾಲೇಜು, ಗದಗ.
  • ಸರಕಾರಿ ಪ್ರಥಮ ದಜೆ೯ ಕಾಲೇಜು, ಹುಲಕೋಟಿ.
  • ಸರಕಾರಿ ಪ್ರಥಮ ದಜೆ೯ ಕಾಲೇಜು,ರೋಣ.
  • ಸರಕಾರಿ ಪ್ರಥಮ ದಜೆ೯ ಕಾಲೇಜು, ಗಜೇಂದ್ರಗಡ.
  • ಸರಕಾರಿ ಪ್ರಥಮ ದಜೆ೯ ಕಾಲೇಜು, ನರಗುಂದ.
  • ಸರಕಾರಿ ಪ್ರಥಮ ದಜೆ೯ ಕಾಲೇಜು, ಶಿರಹಟ್ಟಿ.
  • ಸರಕಾರಿ ಪ್ರಥಮ ದಜೆ೯ ಕಾಲೇಜು, ನರೇಗಲ್ಲ.
  • ಶ್ರೀ ಅನ್ನದಾನೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ನರೇಗಲ್ಲ.
  • ಕೆ. ಎಸ್. ಎಸ್, ಕಾಲೇಜು, ನರೇಗಲ್ಲ
  • ಸರಕಾರಿ ಪ್ರಥಮ ದಜೆ೯ ಕಾಲೇಜು, ಮುಳಗುಂದ.
  • ಸರ್ಕಾರಿ ಪದವಿ ಪೂರ್ವ ಕಾಲೇಜು,ಗದಗ : ಇತ್ತೀಚೆಗೆ ಈ ಕಾಲೇಜು,ಮುಳಗುಂದ ರಸ್ತೆಯಲ್ಲಿರುವ ನೂತನ ಕಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕೆ ಎಲ್ ಇ ಕಾಲೇಜು.ಗದಗ

ದಿನ ಪತ್ರಿಕೆ

ಬದಲಾಯಿಸಿ
  • 'ನವೋದಯ' ದಿನಪತ್ರಿಕೆ
  • 'ನಾಗರಿಕ' ದಿನಪತ್ರಿಕೆ
  • 'ಕೌರವ' ದಿನಪತ್ರಿಕೆ
  • 'ಕಿತ್ತೂರ ಕರ್ನಾಟಕ' ದಿನಪತ್ರಿಕೆ

ಶಿಲ್ಪಕಲೆ

ಬದಲಾಯಿಸಿ

ಗದಗ ಜಿಲ್ಲೆ ಶಿಲ್ಪಕಲೆಯ ಬೀಡೂ ಹೌದು. ಗದುಗಿನ ವೀರನಾರಾಯಣ, ತ್ರಿಕುಟೇಶ್ವರ ಹಾಗೂ ಸೋಮನಾಥ, ಸರಸ್ವತಿ ದೇವಾಲಯಗಳು ಪ್ರಸಿದ್ಧಿ ಪಡೆದಿವೆ. ಕ್ರಿ.ಪೂ. ೯೫೦ ರಲ್ಲಿ ಪದ್ಮಬ್ಬರಸಿ ಕಟ್ಟಿಸಿದ ನರೇಗಲ್ಲದ ನಾರಾಯಣ ದೇವಾಲಯ, ರಾಷ್ಟ್ರಕೂಟರು ಕಟ್ಟಿಸಿದ ಜೈನ ದೇವಾಲಯ ಗಳಲ್ಲಿಯೇ ಅತಿ ದೊಡ್ಡದು ಆಗಿದೆ. ಶ್ರೀ ಅನ್ನದಾನೇಶ್ವ್ಹರ ಮಠ ಪ್ರಸಿದ್ಢವಾಗಿವೆ. ಲಕ್ಕುಂಡಿ ನೂರೊಂದು ಗುಡಿಗಳು ಆಕರ್ಷಣೀಯ. ಇಲ್ಲಿನ ಸೂರ್ಯ ದೇವಾಲಯ, ಬ್ರಹ್ಮ ಜೀನಾಲಯ ಗಮನ ಸೆಳೆಯುತ್ತವೆ. ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯ ರಾಷ್ಟ್ರೀಯ ಸಂರಕ್ಷಣಾ ಸ್ಮಾರಕವಾಗಿ ರೂಪುಗೊಂಡಿದೆ. ಜಿಲ್ಲೆಯಲ್ಲಿ ಶಿಲ್ಪಕಲೆಗೆ ಜೀವ ತುಂಬಿದವರು ರಾಜವಂಶಸ್ಥರು. ಅನೇಕ ರಾಜಮಹಾರಾಜರು ಈ ಭಾಗದಲ್ಲಿ ಆಳಿದ್ದರೆಂಬುದು ಗಮನಾರ್ಹ. ಇನ್ನು ಜಿಲ್ಲೆಯಲ್ಲಿ ೫೦೦ಕ್ಕೂ ಹೆಚ್ಚು ಶಾಸನಗಳಿವೆ.

ಸಾಂಸ್ಕೃತಿಕ

ಬದಲಾಯಿಸಿ
 
ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು

ಪರಂಪರೆ

ಬದಲಾಯಿಸಿ
  • ನಮ್ಮೂರ ಜಾತ್ರೆ: ಇಲ್ಲಿ ನಡೆಯುವ ವಾರ್ಷಿಕ ಶ್ರೀ ತೊಂಟದಾರ್ಯ ಮಠದ ಜಾತ್ರೆ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತದೆ. ಹಾಗೂ ಈ ಜಾತ್ರೆ ೧ ತಿ೦ಗಳವರೆಗೆ ನಡೆಯುತ್ತದೆ. ಮುಖ್ಯ ಭಾಷೆ ಕನ್ನಡ

ಸಂಗೀತ ಮತ್ತು ಕಲೆ

ಬದಲಾಯಿಸಿ

ವಾಯಲಿನ್:

  • ಶ್ರೀ ನಾರಾಯನ ಹಿರೆಕೊಲಚೆ

ವೊಕಲ್ :

  • ಶ್ರೀ ರವೀಂದ್ರ ಜಕಾತಿ

ವೃತ್ತಿರಂಗಭೂಮಿ ಕಂಪನಿಗಳು

ಬದಲಾಯಿಸಿ

ಜಾನಪದ ಕಲೆ

ಬದಲಾಯಿಸಿ

ಸ್ವತಂತ್ರ ಹೋರಾಟಗಾರರು ಮತ್ತು ಗಾಂಧೀವಾದಿಗಳು

ಬದಲಾಯಿಸಿ

ಪ್ರಮುಖ ಬೆಳೆಗಳು

ಬದಲಾಯಿಸಿ

ಜೋಳ, ಸಜ್ಜೆ, ಸೇಂಗಾ, ಸೂರ್ಯಪಾನ, ಉಳ್ಳಾಗಡ್ಡಿ(ಈರುಳ್ಳೆ). ಪ್ರಮುಖ ಆಹಾರ ಧಾನ್ಯ ಜೋಳ.ಜೊತೆಗೆ ಗೋಧಿ, ಬೇಳೆಕಾಳುಗಳು.

ಸೇವಂತಿಗೆ ಮತ್ತಿತರ ಹೂ ಬೆಳೆ

ಬದಲಾಯಿಸಿ

ಹೂವಿನ ಕಣಜ : ಜಮೀನಿನಲ್ಲಿ ಸೇವಂತಿಗೆ, ಮಲ್ಲಿಗೆ, ಸುಗಂಧರಾಜ, ಗುಲಾಬಿ, ಚೆಂಡು ಹೂ ಬೆಳೆದಿದ್ದಾರೆ. ವಿಶೇಷವಾಗಿ ಸೇವಂತಿಗೆ ಹೂವನ್ನೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. (ವಿಶೇಷವಾಗಿ ದಸರಾ, ದೀಪಾವಳಿಗೆ ಹೂವಿಗೆ ಬೇಡಿಕೆ)

ಹವಾಮಾನ

ಬದಲಾಯಿಸಿ
  • ಬೆಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ౪೧.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿವರೆಗೆ (ಡಿಸೆಂಬರನಲ್ಲಿ) ಉಷ್ಣತೆ ಇರುತ್ತದೆ. ಬೆಸಿಗೆ - ೩೦ °C-೩೯ °C , ಚಳಿಗಾಲ - ೧೮ °C-೨೮ °C
  • ಮಳೆ - ಪ್ರತಿ ವರ್ಷ ಮಳೆ ಸರಾಸರಿ ೧೬.೬ ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ) ಇರುತ್ತದೆ.
ಗದಗದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Source: [೧]

ಸಮೀಪದ ಸ್ಥಳಗಳು

ಬದಲಾಯಿಸಿ

ಪ್ರಮುಖ ರಾಜಕಾರಣಿಗಳು ಕೆ. ಹೆಚ್. ಪಾಟೀಲ , ಡಿ. ಆರ್. ಪಾಟೀಲ, ಹೆಚ್.ಕೆ.ಪಾಟೀಲ-ಮಾಜಿ ಸಚಿವರು, ಶ್ರೀಶೈಲಪ್ಪ ವಿ. ಬಿದರೂರ

ಪ್ರವಾಸ

ಬದಲಾಯಿಸಿ

ಪ್ರವಾಸ ಮಾರ್ಗ ೧

ಬದಲಾಯಿಸಿ

ಗದಗದಿಂದ ಪ್ರವಾಸ ಪ್ರಾರಂಭವಾಗಿ ಲಕ್ಕುಂಡಿ, ಗದುಗಿನ ತ್ರಿಕೂಟೇಶ್ವರ ,ವೀರನಾರಾಯಣ ದೇವಸ್ಥಾನ, ವೀರೇಶ್ವರ ಪುಣ್ಯಾಶ್ರಮ, ಸಾಯಿಬಾಬಾ ಮಂದಿರ , ರಾಮಕೃಷ್ಣಾಶ್ರಮ, ಜಿಲ್ಲಾ ಆಡಳಿತ ಭವನ ನಂತರ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ, ನವಲಗುಂದ ನಾಗಲಿಂಗಮಠ, ಇಟಗಿಯ ಭೀಮಾಂಬಿಕಾ ದೇವಸ್ಥಾನ, ಸೂಡಿ ಹಾಗೂ ಕಾಲಕಾಲೇಶ್ವರ ದೇವಸ್ಥಾನ ಮತ್ತು ಕುಕನೂರ ಬಳಿಯ ಇಟಗಿ ಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ. ಪ್ರವಾಸಕ್ಕೆ ಅಂದಾಜು ೧೯೫ ಕಿ.ಮೀಗಳು.

ಪ್ರವಾಸ ಮಾರ್ಗ ೨

ಬದಲಾಯಿಸಿ

ಗದಗದಿಂದ ಪ್ರವಾಸ ಪ್ರಾರಂಭವಾಗಿ ಲಕ್ಕುಂಡಿ, ಗದುಗಿನ ತ್ರಿಕೂಟೇಶ್ವರ , ವೀರನಾರಾಯಣ ದೇವಸ್ಥಾನ , ವೀರೇಶ್ವರ ಪುಣ್ಯಾಶ್ರಮ, ಸಾಯಿಬಾಬಾ ಮಂದಿರ , ರಾಮಕೃಷ್ಟಾಶ್ರಮ, ಜಿಲ್ಲಾ ಆಡಳಿತ ಭವನ ನಂತರ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ , ಮುಳಗುಂದ ದಾವುಲಮಲಿಕ ದರ್ಗಾ, ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ, ಜೈನ್ ಬಸದಿ, ಮಾಗಡಿ ಪಕ್ಷಿಧಾಮ(ಗದುಗಿನ ಪಕ್ಷಿಕಾಶಿ), ಶಿರಹಟ್ಟಿ ಫಕೀರೇಶ್ವರ ಮಠ, ವೆಂಕಟಾಪುರದ ವೆಂಕಟೇಶ ದೇವಸ್ಥಾನ ಹಾಗೂ ಡಂಬಳದ ದೊಡ್ಡ ಬಸಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ. ಪ್ರವಾಸಕ್ಕೆ ಅಂದಾಜು ೧೬೫ ಕಿ.ಮೀಗಳು.

ರಸ್ತೆ ಸಾರಿಗೆ

ಬದಲಾಯಿಸಿ

ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ. ಗದಗ ಪಟ್ಟಣ ಸಾರಿಗೆ ಮತ್ತು ರೈಲು ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ. ಗದಗದಿಂದ ಮುಂಬಯಿ, ಪೂನಾ, ಹೈದರಾಬಾದ, ತಿರುಪತಿ,ಬೆಂಗಳೂರು, ಮೈಸೂರಗಳಿಗೆ ಐಷಾರಾಮಿ ಬಸ್ಸುಗಳಿವೆ, ಹಾಗು ಹೈದರಾಬಾದ, ತಿರುಪತಿ,ಬೆಂಗಳೂರ , ಮುಂಬಯಿ ರೈಲುಗಳು ಓಡುತ್ತವೆ.

ವಿಮಾನ ನಿಲ್ದಾಣ ಹಾಗೂ ಬಂದರು

ಬದಲಾಯಿಸಿ

ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಕಾರವಾರ ಬಂದರು ಗದಗ ಹತ್ತಿರದಲ್ಲಿವೆ.ಹುಬ್ಬಳ್ಳಿ ವಿಮಾನ ನಿಲ್ದಾಣ ಗದಗ ಪಟ್ಟಣದಿಂದ ೫೮ ಕಿ.ಮೀ ಮತ್ತು ಕಾರವಾರ ಬಂದರು ೨೩೫ ಕಿ.ಮೀ ದೂರದಲ್ಲಿವೆ.

ಹೆದ್ದಾರಿ

ಬದಲಾಯಿಸಿ

ರಾಷ್ಟ್ರೀಯ ಹೆದ್ದಾರಿ ೬೩: ನಗರದ ಹೃದಯ ಭಾಗದಲ್ಲಿ ಹಾಯ್ದು ಹೋಗುವ ರಸ್ತೆಗೆ ಇನ್ನೂ ಹೆಸರಿಡಲಾಗಿಲ್ಲ.

ಕ್ರೀಡಾಂಗಣ

ಬದಲಾಯಿಸಿ

ಜಿಲ್ಲಾ ಕ್ರೀಡಾಂಗಣ : ಕೆ. ಹೆಚ್. ಪಾಟೀಲ‍‍‍ ಕ್ರೀಡಾಂಗಣ

ನಗರ ಆಡಳಿತ

ಬದಲಾಯಿಸಿ

ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಪದ್ಧತಿ Archived 2009-09-26 ವೇಬ್ಯಾಕ್ ಮೆಷಿನ್ ನಲ್ಲಿ. ವಾರ್ಡ್ ಗಳು ನಗರದಲ್ಲಿ ಒಟ್ಟು ೩೫ ವಾರ್ಡ್ ಗಳು ಇರುತ್ತವೆ.

ಗದಗನ ಪ್ರಮುಖ ಬಡಾವಣೆಗಳು ಹೊಸ ಬಡಾವಣೆಗಳು, ಮಸಾರಿ ,ಸಿದ್ದಲಿಂಗ ನಗರ , ವಿರೇಶ್ವರ ನಗರ ಊರಿನ ಸರ್ವತೋಮುಖ ಬೆಳವಣಿಗೆಯಾಗಿದೆ.

ಸಿನಿಮಾ ಚಿತ್ರ ಮಂದಿರಗಳು ನಗರದಲ್ಲಿ ೬ ಸುಂದರ ಚಿತ್ರ ಮಂದಿರಗಳು ಇರುತ್ತವೆ, ಅವುಗಳು ಮಹಾಲಕ್ಷ್ಮಿ, ಶ್ರೀ ಕೃಷ್ಣ, ಚಿತ್ರಾ, ಕರ್ನಾಟಕ, ವೆಂಕಟೇಶ, ಮತ್ತು ಶಾಂತಿ ಚಿತ್ರ ಮಂದಿರಗಳು.

ಖಾದ್ಯ ಗದಗ ಪಟ್ಟಣ ಬದನೇಕಾಯಿ ಬಜಿ,ಒಗ್ಗರಣೆ ಗಿರ್ಮಿಟ್ ಮತ್ತು ಮೆಣಸಿನಕಾಯಿ ಮಿರ್ಚಿಗೆ(ಮಿರ್ಚಿ ಭಜಿ) ತುಂಬ ಪ್ರಸಿದ್ಧ.

ಚಿತ್ರ ಗ್ಯಾಲರಿ

ಬದಲಾಯಿಸಿ

ಪುರಾತನ ದೇವಾಲಯಗಳು


ಹಿಂದು ದೇವಾಲಯಗಳು

ಮುಸ್ಲಿಮ್ ದೇವಾಲಯಗಳು

ಕ್ರೈಸ್ತ ದೇವಾಲಯಗಳು

ಗದಗ ಜಿಲ್ಲೆಯ ದೇವಾಲಯಗಳು

ಲಕ್ಕುಂಡಿ ದೇವಾಲಯಳು


ಸೂಡಿ ದೇವಾಲಯಳು


ಡಂಬಳ ದೇವಾಲಯಳು


ಪ್ರಮುಖ ವ್ಯಕ್ತಿಗಳು


ಗದಗ ಕಾಲೇಜಗಳು

ಪ್ರಮುಖ ಸ್ಥಳ


ದೇವಾಲಯಳು ಗದಗ ಜಿಲ್ಲೆ


ಲಕ್ಷ್ಮೇಶ್ವರ ದೇವಾಲಯಳು

ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ

ಮಾಗಡಿ ಪಕ್ಷಿಧಾಮ

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "In search of Indian records of Supernovae" (PDF). Retrieved 2009-03-12.
  2. "Kalyani Chalukyan & chanakya temples". Retrieved 2009-03-12.
  3. "CHAPTER 9. THE CALUKYAS AND THE KALACURYAS OF KALYANI. HISTORY – ANCIENT PERIOD, Chalukya" (PDF). Retrieved 10 March 2009.
  4. "Karnataka News : Process on to identify land for Gadag airport: Sriramulu". The Hindu. 2008-08-16. Archived from the original on 2013-11-13. Retrieved 2012-11-07.
  5. "Gadag" Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ. www.nkpost.kar.nic.in. Retrieved September 9, 2012
  6. Parvathi Menon "A movement for music" Frontline, frontlineonnet.com. Volume 22, Issue 12, June 4–17, 2005. Retrieved September 9, 2012
  7. "Shri Ganayogi Panchakshara Gawai". Archived from the original on 27 July 2011. Retrieved 6 December 2010. {{cite web}}: Unknown parameter |deadurl= ignored (help)
"https://kn.wikipedia.org/w/index.php?title=ಗದಗ&oldid=1245585" ಇಂದ ಪಡೆಯಲ್ಪಟ್ಟಿದೆ