ಪುಟ್ಟರಾಜ ಗವಾಯಿ
ಪುಟ್ಟರಾಜ ಗವಾಯಿ | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | ಪುಟ್ಟಯ್ಯ |
ಅಡ್ಡಹೆಸರು | ಪಂಡಿತ (ಪಂ)ಪುಟ್ಟರಾಜ ಗವಾಯಿ, "ಉಭಯ ಗಾನ ವದನಾಚಾರ್ಯ”, “ಗಾನಯೋಗಿ”, “ಕವಿಶಿರೋಮಣಿ”, "ತ್ರಿಭಾಷಾ ಕವಿರತ್ನ" , "ಪುಟ್ಟಯ್ಯಜ್ಜ", "ನಡೆದಾಡುವ ದೇವರು" |
ಮೂಲಸ್ಥಳ | ಗದಗ, ಕರ್ನಾಟಕ, |
ಸಂಗೀತ ಶೈಲಿ | ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ, |
ವೃತ್ತಿ | ಹಿಂದುಸ್ತಾನಿ ಸಂಗೀತ ಸಂಗೀತಗಾರ |
ಸಕ್ರಿಯ ವರ್ಷಗಳು | ೧೯೩೩-೨೦೦೮ |
ಅಧೀಕೃತ ಜಾಲತಾಣ | www.PuttarajGavaiji.com |
ಪಂಚಾಕ್ಷರಿ ಗವಾಯಿ
ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ ಯಾರು ತಿಳಿದಿದ್ದರು? ತಮ್ಮ ಗುರು ಕಲಿತಂತೆಯೇ ಪುಟ್ಟರಾಜರೂ ಸಹ ಸುತ್ತಲಿನ ಪಂಡಿತರಿಂದ ಸಂಗೀತವನ್ನು, ಸಂಗೀತ ವಾದ್ಯ ಗಳನ್ನು ಅಲ್ಲದೆ, ಸಂಸ್ಕೃತ ಹಾಗು ಕನ್ನಡದ ವ್ಯಾಕರಣ ಮೊದಲಾದವ ಸಹ ಕಲಿತರು. ತಮ್ಮೊಂದಿಗೆ ಜೊತೆಯಾಗಿ ಕಲಿಯುತ್ತಿದ್ದ ಇತರ ಬಾಲಕರಿಗೆ ತಾವೇ ಪಾಠ ಹೇಳಿಕೊಡುವಷ್ಟು ಪರಿಣತರಾದರು. ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತಗಳಲ್ಲಿ ಅಲ್ಲದೆ, ಪುಟ್ಟರಾಜರು ತಬಲಾ,ಹಾರ್ಮೋನಿಯಮ್,ಪಿಟೀಲು, ಸಾರಂಗಿ, ಶಹನಾಯಿ ಮೊದಲಾದ ವಾದ್ಯಗಳನ್ನು ನುಡಿಸುವದರಲ್ಲೂ ಸಹ ಪರಿಣತರಾದರು.
ಪೀಠಾಧಿಪತಿ
ಕೇವಲ ೮ ವರ್ಷದ ಬಾಲಕರಾಗಿದ್ದಾಗ ಸಂಗೀತ ಕಲಿಕೆಯ ವಿದ್ಯಾರ್ಥಿಯಾಗಿ ಆಶ್ರಮದ ಮಡಿಲಿಗೆ ಬಿದ್ದ ಪುಟ್ಟರಾಜ ಗವಾಯಿಗಳು ಗುರುಗಳ ಆಶೀರ್ವಾದ, ನಿಷ್ಠೆ-ವಿಶ್ವಾಸ, ಸ್ವತ್ಛಂದ ಮನಸ್ಸಿನೊಂದಿಗೆ ಆಶ್ರಮದ ಪೀಠಾಧಿಪತಿ ಸ್ಥಾನಕ್ಕೇರಿದರು. ೧೯೪೪ರಲ್ಲಿ ವೀರೇಶ್ವರ ಪುಣ್ಯಾಶ್ರಮದ ಭಾರ ಹೊತ್ತ ಪುಟ್ಟರಾಜ ಗವಾಯಿ ಅವರು ತಮ್ಮ ವೈಯಕ್ತಿಕ ಬದುಕನ್ನು ಬದಿಗಿರಿಸಿ ಆಶ್ರಮದ ಅಭಿವೃದ್ಧಿ, ಅಂಧ-ಅನಾಥರ ಕಾಳಜಿಯಲ್ಲಿಯೇ ಶಿವನನ್ನು ಕಂಡರು. 'ಕಾಯಕವೇ ಕೈಲಾಸವಯ್ಯ' ಎಂಬ ಶರಣರ ವಾಣಿಯನ್ನು ಅಕ್ಷರಶಃ ಅನುಷ್ಠಾನಗೊಳಿಸಿದರು.
ದಿನಚರಿ
ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ನಿತ್ಯಕರ್ಮ ಹಾಗೂ ಯೋಗದ ಅನಂತರ ಬಾವಿ ನೀರಿನ ಮಜ್ಜನದೊಂದಿಗೆ ಮಡಿಯಾಗಿ ಪೂಜಾ ಕೋಣೆ ಸೇರಿದರೆ ಸಾಕು ಹೊರಗಿನ ಜಗತ್ತನ್ನೆ ಮರೆಯುತ್ತಿದ್ದರು. ಪೂಜಾ ಕೋಣೆಯಲ್ಲಿ ತ್ರಿಕಾಲ ನಿಷ್ಠರಾಗಿ ನಾಲ್ಕೈದು ಗಂಟೆಗಳವರೆಗೆ ಆರಾಧ್ಯದೈವದಲ್ಲಿ ತನ್ಮಯರಾಗಿ ಪುಟ್ಟರಾಜರು ಕೈಗೊಳ್ಳುತ್ತಿದ್ದ ಇಷ್ಟಲಿಂಗ ಅರ್ಚನೆ. ಇಷ್ಟಲಿಂಗ ಪೂಜೆಯನ್ನು ದಿನದಲ್ಲಿ ಎರಡು ಬಾರಿ ಮಾಡುತ್ತಿದ್ದರು.ಪುಟ್ಟರಾಜರು ಇಷ್ಟಲಿಂಗ ಪೂಜೆ ವಿಷಯದಲ್ಲಿಯೂ ಅಷ್ಟೇ ಖ್ಯಾತರಾಗಿದ್ದರು. ಮಕ್ಕಳಿಗೆ ಪಾಠ , ಇತರರಿಗೆ ಹೇಳಿ ಪುರಾಣ, ಪೌರಾಣಿಕ ನಾಟಕಗಳನ್ನು ಉಕ್ತ ಲೇಖನವಾಗಿಸಲು ಮಾರ್ಗದರ್ಶನ. ಆಶ್ರಮಕ್ಕೆ ಬಂದ ಭಕ್ತಾದಿಗಳ ಕುಶಲೋಪರಿ ವಿಚಾರಣೆ. ಆಶ್ರಮದ ಮಕ್ಕಳ ಆಟ-ಊಟ-ಉಪಚಾರ ಹಾಗೂ ಅನಾರೋಗ್ಯ ಕಾಡಿದರೆ ಮಕ್ಕಳ ದೇಖ್ ರೇಖ್.
ಇಷ್ಟಲಿಂಗ ಪೂಜೆ
ವೀರೇಶ್ವರ ಪುಣ್ಯಾಶ್ರಮದಲ್ಲಿ ಪುಟ್ಟರಾಜ ಗವಾಯಿಗಳು ಪೂಜಾಕಾರ್ಯ ವಿಭೂತಿ, ಗಂಧ, , ಪುಷ್ಪ, ಬಿಲ್ವಪತ್ರಿ,ಬೆಳ್ಳಿಯ ಬೋಗಾಣಿ, ಕರ್ಪೂರ, ರುದ್ರಾಕ್ಷಿ ಮಾಲೆ-ಕಿರೀಟ, ಊದುಬತ್ತಿ, ಪಂಚಾಮೃತ, ಜೋಡು ಗಂಟೆಗಳನ್ನು ಕ್ರಮಬದ್ಧವಾಗಿ ಜೋಡಿಸಿಡಲಾಗುತ್ತಿತ್ತು. ಪದ್ಮಾಸನದಲ್ಲಿನ ಗುರುಗಳ ಮಂತ್ರ ಪಠನ, ಜೋಡುಗಂಟೆಯ ಪೂಜಾಕಾರ್ಯ ನೋಡುವುದೇ ಒಂದು ಭಾಗ್ಯವಾಗಿತ್ತು. ನಿತ್ಯವೂ ಮೂರು ಸಲ ಸುಮಾರು ೪ರಿಂದ ೫ ತಾಸು ರುದ್ರಾಭಿಷೇಕ, ಜಪದೊಂದಿಗೆ ಪೂಜೆ ಮಾಡುತ್ತಿದ್ದ ಪುಟ್ಟರಾಜ ಗವಾಯಿ ಅನಂತರ ಪ್ರಸಾದ ಸೇವಿಸಿ ಹೊರಬರುತ್ತಿದ್ದರು.
ಸಂಗೀತ ರಿಯಾಜ್ ಮತ್ತು ಪಾಠ
ಬೆಳಿಗ್ಗೆ ೪ ಗಂಟೆಗೆ ಎದ್ದು ಪಂಚಾಕ್ಷರಿ ಗವಾಯಿಗಳನ್ನು ನೆನೆಸಿ ರಿಯಾಜ್ ಮಾಡುವದು. ಬೆಳಿಗ್ಗೆ ಹಾಗೂ ಸಂಜೆ ಸುಮಾರು ೪ ತಾಸು ಮಕ್ಕಳಿಗೆ ಸಂಗೀತದ ಪಾಠ.
ಪುಟ್ಟರಾಜ ಗವಾಯಿಗಳ ಕೊಡುಗೆ
ನೂರಾರು ಅಂಧ ಅನಾಥ ವಿಕಲಚೇತನ ಮಕ್ಕಳಿಗೆ ಪುಟ್ಟರಾಜ ಗವಾಯಿಗಳು ಸಂಗೀತಾಭ್ಯಾಸ ನೀಡುತ್ತಿದ್ದರು. ಅಂಧತ್ವದ ಶಾಪವನ್ನು ಗ್ರಹಿಸಿದ್ದ ಗವಾಯಿಗಳು ಅವರಿಗೆ ಸ್ವತಂತ್ರವಾಗಿ ಬದುಕುಸಾಗಿಸಲು ಆತ್ಮ ವಿಶ್ವಾಸ ತುಂಬುವುದಲ್ಲದೆ ಜೀವನೋಪಾಯಕ್ಕಾಗಿ ಸಂಗೀತ ಹಾಗೂ ಪ್ರವಚನ, ಪುರಾಣ ಕಲೆಯನ್ನು ಕಲಿಸುತ್ತಿದ್ದರು. ಆಳವಾಗಿ ಅಧ್ಯಯನ ಮಾಡಿ ಸಾಧನೆಗೈದವರು ಶ್ರೇಷ್ಠ ಗಾಯಕರಾಗಿ ಹೊರಹೊಮ್ಮಿದ್ದಾರೆ, ಸಾಧಾರಣ ಪ್ರತಿಭೆ ಹೊಂದಿದವರು ಹೇಗೋ ಜೀವನ ನಡೆಸಲು ಗುರುಗಳು ಕೃಪೆ ತೋರಿದರು. ಆದರೆ ಪುಟ್ಟರಾಜರಿಗೆ ವೈಯುಕ್ತಿಕ ಕೀರ್ತಿ ಹಾಗೂ ಹಣ ಬೇಕಾಗಿರಲಿಲ್ಲ ತಮ್ಮಂತೆ ಅಸಹಾಯಕ ಸ್ಥಿತಿಯಲ್ಲಿರುವ ಲಕ್ಷಾಂತರ ವಿಕಲಚೇತನರಿಗೆ ತಾವು ಸಂಪಾದಿಸಿದ ವಿದ್ಯೆಯನ್ನು ಧಾರೆ ಎರೆಯಲಾರಂಬಿಸಿದರು. ಇಷ್ಟನ್ನೇ ಸಾಧಿಸಿದ್ದರೆ ಗವಾಯಿಗಳು ಒಬ್ಬ ಶ್ರೇಷ್ಠ ಸಂಗೀತ ಗುರುಗಳಾಗುತ್ತಿದ್ದರು. ಆದರೆ ಲಿಂಗ ಪೂಜಾ ನಿಷ್ಟೆಯಿಂದ ವಿಶೇಷ ಆಧ್ಯಾತ್ಮಿಕ ಶಕ್ತಿಯನ್ನು ಮೈಗೂಡಿಸಿಕೊಂಡರು. ಲಿಂಗಾಯತ ಧರ್ಮದ ಏಕತೆ ಸಾರುವ, ಕರಸ್ಥಲಕೆ ಬಂದು ಚುಳುಕಾದ ಇಷ್ಟಲಿಂಗದ ಶಕ್ತಿಯನ್ನು ಅರಿತುಕೊಂಡು, ಲಿಂಗಪೂಜೆ ಮಾಡುತ್ತಾ ಕಠಿಣ ವೃತ ನಿಯಮಗಳನ್ನು ಎಂತಹ ಸಂದರ್ಭದಲ್ಲಿಯೂ ಪಾಲಿಸಿಕೊಂಡು ಸ್ವತಃ ದೇವರಾದರು.
ಆಡಳಿತದ ಮೇಲುಸ್ತುವಾರಿ
ಆಶ್ರಮದ ದೈನಂದಿನ ಖರ್ಚು-ವೆಚ್ಚ ಸರಿದೂಗಿಸಲು ಹಾನಗಲ್ ಕುಮಾರಸ್ವಾಮಿಗಳು ತಮ್ಮ ಗುರುಗಳಿಗೆ ನೀಡಿದ್ದ ಜೋಳಿಗೆ ಹೆಗಲಿಗೇರಿಸಿ ಊರೂರು ಸಂಚಾರ, ನಿರಂತರ ಪ್ರವಾಸ ಪುಟ್ಟಯ್ಯಜ್ಜನವರ ಬದುಕಾಗಿತ್ತು. ೯೭ ವರ್ಷದ ವಯೋಸಹಜ ಕಾಯಿಲೆಗಳಿಂದ ಅವರು ಬಳಲಿದರೂ ಈ ನಡಾವಳಿಗೆ ಯಾವತ್ತೂ ಚ್ಯುತಿ ಬರಲಿಲ್ಲ. ಗುರು ಪಂಚಾಕ್ಷರಿ ನೀಡಿದ ಮಾರ್ಗ ದಂಡ ಯಾವತ್ತೂ ಕೈಯಲ್ಲಿ ಹಿಡಿದು ಪುಟ್ಟಯ್ಯಜ್ಜ ನಡೆದರೆ ‘ನಡೆದಾಡುವ ದೇವರು’ ಎಂಬುವುದರಲ್ಲಿ ಯಾವುದೇ ಅತಿಶಯೋಕ್ತಿ ಕಾಣುತ್ತಿರಲಿಲ್ಲ.
ಗವಾಯಿಗಳ ವ್ಯಕ್ತಿತ್ವ
ಬಂಗಾರ, ಉಡುಗೆ, ಊಟದ ವಿಷಯಗಳಲ್ಲಿ ಪುಟ್ಟರಾಜರು ಎಂದು ವ್ಯಾಮೋಹಿಗಳಾಗಿರಲಿಲ್ಲ. ಭಕ್ತರ ಸಂತಸದಲ್ಲಿ ಆತ್ಮ ತೃಪ್ತಿಯನ್ನು ಕಾಣುತ್ತಿದ್ದರು. ಪುಟ್ಟರಾಜರು ಸರ್ವಸಂಗ ಪರಿತ್ಯಾಗಿಗಳು, ಸಾಧಕರು ಆದರೆ ರುದ್ರಾಕ್ಷಿ ಸರ , ಮೈತುಂಬ ಬಂಗಾರ, ಕೈತುಂಬ ಚಿನ್ನದ ಉಂಗುರ ಗಳನ್ನು ಧರಿಸಿ ,ಮಗುವಿನ ಮುಗ್ಧನಗುವಿನ ಸಾರ್ಥ್ಯಕ್ಯವು ಗವಾಯಿಗಳ ವ್ಯಕ್ತಿತ್ವದಲ್ಲಿ ಇತ್ತು. ಇಲ್ಲೂ, ಆ ಎಲ್ಲ ಅಲಂಕೃತ ಆಭರಣಗಳು ಪುಟ್ಟರಾಜರಿಗೆ ಬೇಕಿಲ್ಲ. ಅದನ್ನು ಕಂಡು ಸಂಭ್ರಮಿಸುವ ಭಕ್ತರಿಗೆ ಬೇಕಿತ್ತು.ವ್ಯಕ್ತಿಯ ವ್ಯಕ್ತಿತ್ವದ ಆಳವನ್ನು ಅರಿಯುವ ವಿಶಾಲತೆ ಬೇಕು. ಮೇಲೆ ಗೋಚರಿಸುವ ಸಂಗತಿಗಳ ಮೂಲಕ ವ್ಯಕ್ತಿಗಳನ್ನು ಅಳೆಯುವದು ಅಸಾಧ್ಯ ಎಂಬುವುದಕ್ಕೆ ಪುಟ್ಟರಾಜರೆ ಸಾಕ್ಷಿಯಾದರು.
ಸಾಧನೆ
ಸಂಗೀತ ಸಾಹಿತ್ಯ ಹಾಗೂ ಆದ್ಯಾತ್ಮದಲ್ಲಿ ಅವರು ತೋರಿದ ಶ್ರದ್ಧೆ ಅನನ್ಯವಾದುದು. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಯಾವುದಾದರು ಒಂದು ಕ್ಷೇತ್ರದಲ್ಲಿ ಯಶ ಸಾಧಿಸಬಹುದು ಎಂಬ ತಾರ್ಕಿಕ ಲೆಕ್ಕಾಚಾರವನ್ನು ಅಲ್ಲಗಳೆದು ಎಲ್ಲ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದರು. ಸಂಗೀತದ ಎಲ್ಲ ವಾದ್ಯಗಳನ್ನು ಏಕಕಾಲಕ್ಕೆ ನುಡಿಸಿ ಕೇಳುಗರನ್ನು ಬೆರಗುಗೊಳಿಸುತ್ತಿದ್ದರು. ನವ ರಸಗಳನ್ನು ಮೇಳೈಸಿ ಪ್ರವಚನ ನೀಡುತ್ತಾ ಸಂಗೀತ ವಾದ್ಯಗಳನ್ನು ಪ್ರಸಂಗಕ್ಕೆ ತಕ್ಕಂತೆ ಬಳಸಿ ಪ್ರವಚನದ ಮೆರುಗನ್ನು ಹೆಚ್ಚಿಸುತ್ತಿದ್ದರು. ಹಿಂದೂಸ್ತಾನಿ ಹಾಗೂ ಕರ್ನಾಟಕ ಸಮಗೀತದಲ್ಲಿ ಪ್ರಭುತ್ವ ಸಾಧಿಸಿದ ಏಕಮೇವ ದಿಗ್ಗಜರೆನಿಸಿಕೊಂಡರು. ತಮ್ಮ ಗುರು ಪಂಚಾಕ್ಷರಿ ಗವಾಯಿಗಳ ನಿಧನದ ನಂತರ “ಶ್ರೀ ವೀರೇಶ್ವರ ಪುಣ್ಯಾಶ್ರಮ”ವನ್ನು ಮುನ್ನಡೆಯಿಸಿಕೊಂಡು ಹೋದವರು ಪುಟ್ಟರಾಜ ಗವಾಯಿಗಳು. ಸಂಗೀತ ಸಾಧನೆಯಲ್ಲದೆ, ಪುಟ್ಟರಾಜರು ಪುರಾಣರಚನೆ ಹಾಗು ಸುಮಾರು ೩೫ ನಾಟಕಗಳನ್ನೂ ರಚಿಸಿದ್ದಾರೆ.
ಪತ್ರಿಕಾ
೧೯೬೯ ನವೆಂಬರ ೧೦ರಂದು ,“ಪಂಚಾಕ್ಷರವಾಣಿ” ಎನ್ನುವ ಮಾಸಪತ್ರಿಕೆಯನ್ನು ಪ್ರಾರಂಭಿಸಿ ಪತ್ರಿಕಾಪ್ರಪಂಚಕ್ಕೂ ಸಹ ಪುಟ್ಟರಾಜರು ಕಾಲಿಟ್ಟರು.
ವಾದ್ಯಗಳು
‘ಉಭಯ ಗಾಯನ ವಿಶಾರದ’ (ಹಿಂದೂಸ್ತಾನಿ, ಕರ್ನಾಟಕ ಸಂಗೀತ), ‘ಸಕಲ ವಾದ್ಯ ಕಂಠೀರವ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗವಾಯಿಯವರು ಸಾರಂಗಿ, ಪಿಟೀಲು, ವೀಣೆ, ಮೆಂಡೋಲಿಯನ್, ಸರೋದ್, ತಬಲಾ, ಹಾರ್ಮೋನಿಯಂ, ಸಂತೂರ್, ಸಿತಾರ್ ಮತ್ತಿತರ ವಾದ್ಯಗಳನ್ನು ಅತ್ಯಂತ ಸುಶ್ರಾವ್ಯವಾಗಿ, ಲೀಲಾಜಾಲವಾಗಿ ನುಡಿಸುವುದರಲ್ಲಿ ನಿಪುಣರಾಗಿದ್ದರು.
ಸನ್ಮಾನ
ಪುಟ್ಟರಾಜ ಗವಾಯಿಗಳ ಸಾಧನೆ ಹಾಗು ಸಲ್ಲಿಸಿದ ಸೇವೆಗಾಗಿ ಅವರಿಗೆ ಸಂದಿರುವ ಪುರಸ್ಕಾರಗಳು ಅನೇಕ. • ೧೯೫೯ರಲ್ಲಿ ಸುತ್ತೂರು ಮಠದಿಂದ “ಸಾಹಿತ್ಯ ಸಂಗೀತ ಕಲಾಪ್ರವೀಣ” ಪ್ರಶಸ್ತಿ • ೧೯೬೫ರಲ್ಲಿ ಬನವಾಸಿ ವಿರಕ್ತ ಮಠದಿಂದ “ಸಮಾಜ ಸೇವಾ ಧುರೀಣ” ಪ್ರಶಸ್ತಿ • ೧೯೭೦ರಲ್ಲಿ ಶ್ರೀ ಮ.ನಿ.ಪ್ರ. ನೀಲಲೋಚನ ಸ್ವಾಮಿಗಳಿಂದ “ತ್ರಿಭಾಷಾ ಕವಿರತ್ನ ಪ್ರಶಸ್ತಿ” • ೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ • ೧೯೭೬ರಲ್ಲಿ ಮೂರುಸಾವಿರ ಮಠ, ಹುಬ್ಬಳ್ಳಿ ಇವರಿಂದ “ಸಾಹಿತ್ಯ ಸಂಗೀತ ಕಲಾಚಕ್ರವರ್ತಿ” ಪ್ರಶಸ್ತಿ • ೧೯೮೧ರಲ್ಲಿ ಮುರುಘಾಮಠ,ಧಾರವಾಡ ಇವರಿಂದ “ಧರ್ಮಭೂಷಣ” ಪ್ರಶಸ್ತಿ • ೧೯೮೯ರಲ್ಲಿ ಶ್ರೀ ಶಾಂತಲಿಂಗೇಶ್ವರ ಸಂಸ್ಥಾನಮಠ, ಆಷ್ಟಗಿ ಇವರಿಂದ “ಕಲಾಜನಕ” ಪ್ರಶಸ್ತಿ
ಸಂದ ಪ್ರಶಸ್ತಿ, ಪುರಸ್ಕಾರಗಳು
- ೧೯೭೦ರಲ್ಲಿ ರಾಜ್ಯೋತ್ಸವ ಪ್ರಶಸ್ತಿ- 1970
- ೧೯೭೫ರಲ್ಲಿಕರ್ನಾಟಕ ವಿವಿ ಗೌರವ ಡಾಕ್ಟರೇಟ್
- ೧೯೯೮ರಲ್ಲಿರಾಜ್ಯ ಸರ್ಕಾರದ ಕನಕ ಪುರಂದರ ಪ್ರಶಸ್ತಿ
- ೧೯೯೮ರಲ್ಲಿಕನ್ನಡ ವಿವಿಯಿಂದ ‘ನಾಡೋಜ’
- ೧೯೯೯ರಲ್ಲಿಕೇಂದ್ರ ಸಾಹಿತ್ಯ ನಾಟಕ ಅಕಾಡೆಮಿ ಪ್ರಶಸ್ತಿ
- ೨೦೦೨ರಲ್ಲಿ‘ಬಸವಶ್ರೀ’ ಪ್ರಶಸ್ತಿ
- ೨೦೦೦ರಲ್ಲಿಕೇಂದ್ರ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಇಲಾಖೆ ಪ್ರಶಸ್ತಿ
- ೧೯೯೩ರಲ್ಲಿದಸರಾ ಸಂಗೀತ ವಿದ್ವಾನ್ ಪ್ರಶಸ್ತಿ
- ೧೯೯೧ರಲ್ಲಿಶಿಕ್ಷಣ ಇಲಾಖೆಯ ಪ್ರಶಸ್ತಿ
- ೧೯೬೧ರಲ್ಲಿ ಹಿಂದಿಯಲ್ಲಿ ‘ಬಸವಪುರಾಣ’ ರಚಿಸಿದ ಪುಟ್ಟರಾಜರಿಗೆ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಸತ್ಕಾರ
- ೨೦೦೭ರಲ್ಲಿ ಮಧ್ಯಪ್ರದೇಶ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಕಾಳಿದಾಸ ಸಮ್ಮಾನ್
- [೨೦೧೦] ರಲ್ಲಿ ಪದ್ಮಭೂಷಣ ಪ್ರಶಸ್ತಿ
ತುಲಾಭಾರ
ಪುಟ್ಟರಾಜರು ತುಲಾಭಾರಗಳ ಚಕ್ರವರ್ತಿಗಳು. ಪುಟ್ಟರಾಜರು ತುಲಾಭಾರಗಳ ಚಕ್ರವರ್ತಿಗಳು. ರಾಜ್ಯ ಹಾಗು ಹೊರ ರಾಜ್ಯ ಮತ್ತು ಉತ್ತದ ಕರ್ನಾಟಕದ ಬಹುತೇಕ ಗ್ರಾಮಮಗಳ ಎಲ್ಲಾ ವರ್ಗದ ಭಕ್ತಸಮೂಹ ಒಟ್ಟು ೨೨೮೦ಕ್ಕೂ ಅಧಿಕ ತುಲಾಭಾರಗಳು ನಡೆದಿದ್ದು, ಆ ಮೂಲಕ ಬಂದ ಹಣವೆಲ್ಲ ಅಂಧ, ಅನಾಥ, ಅಂಗವಿಕಲ ವಿದ್ಯಾರ್ಥಿಗಳ ವಸತಿ, ಊಟ ಮತ್ತಿತರ ಸೌಲಭ್ಯಕ್ಕಾಗಿ ವ್ಯಯಿಸಿರುವುದು ವಿಶೇಷ. ಪುಟ್ಟರಾಜರಿಗೆ ಸಂದ ತುಲಾಭಾರ ಗಿನ್ನೆಸ್ ದಾಖಲೆಗಳ ಪುಸ್ತಕ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ.
ಅಪೂರ್ಣ ತುಲಾಭಾರ
ಪೂರ್ವ ನಿಗದಿಯಂತೆ ಶ್ರೀಗಳ ೯೭ನೇ ಜನ್ಮದಿನದ ಅಂಗವಾಗಿ ಅದ್ದೂರಿ ಸುವರ್ಣ ತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈಗಾಗಲೇ ಸುವರ್ಣ ತುಲಾಭಾರ ನಡೆಸಲು ಅಗತ್ಯ ಸಿದ್ಧತೆಗಳು ಶುರುವಾಗಿದೆ. ನಾಡು ಕಂಡರಿಯದ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶ್ರೀಗಳಿಗೆ ಗುರುವಂದನೆ ಸಲ್ಲಿಸಲಾಗುವುದು ಎಂದು ಸಚಿವರು ಹೇಳಿದ್ದರು .[೧]
ಶಿಷ್ಯ ವೃಂದ
ಪಂಡಿತ್ ಬಸವರಾಜ್ ರಾಜಗುರು, ಪಂಡಿತ್ ಫಕ್ಕಿರೇಶ ಅಗಡಿ, ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತಿಕಟ್ಟಿ, ಎಂ.ವೆಂಕಟೇಶ ಕುಮಾರ್, ಬಸವರಾಜ್ ಗೋನಾಳ, ಡಿ.ಕುಮಾರದಾಸ್, ಫಕೀರೇಶ ಕಣವಿ, ಶಿವರಾಜ್ ಗವಾಯಿ, ಸಿದ್ಧರಾಮ ಗವಾಯಿ ಕೋರವಾರ್, ಶ್ರೀ.ಮತ್ತು ಶ್ರೀಮತಿ ಬಿ.ಎಸ್. ಮಠ ದಂಪತಿ,ಶಿವಬಸಯ್ಯ ಚರಂತಿಮಠ ಕಾಡಶೆಟ್ಟಿಹಳ್ಳಿ ಮತ್ತಿತರರು ಪುಣ್ಯಾಶ್ರಮದಲ್ಲಿಯೇ ಅಭ್ಯಾಸ ಮಾಡಿ ಖ್ಯಾತಿಗೆ ಒಳಗಾದವರಲ್ಲಿ ಪ್ರಮುಖರು.
ವರನಟನಿಗೆ ಪುಟ್ಟರಾಜ ಗವಾಯಿಗಳ ಪಾಠ
ಕನ್ನಡದ ಮೇರು ನಟ, ನಟ ಸಾರ್ವಭೌಮ ಡಾ.ರಾಜಕುಮಾರ ಅವರಿಗೆ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಮೂರು ತಿಂಗಳು ಇದ್ದು ಸಂಗೀತ ಅಭ್ಯಾಸ ಮಾಡಿದ್ದಾರೆ.ಅಂಧ ಅನಾಥ ಮಕ್ಕಳ ಪಾಲಿಗೆ ಬೆಳಕಾಗಿ ಅವರ ಬದುಕಿನಲ್ಲಿ ಹೊಸ ಬಾಷ್ಯ ಬರೆದ ಪುಟ್ಟರಾಜ ಗವಾಯಿಗಳ ಬಗ್ಗೆ ರಾಜ್‌ರಿಗೆ ವಿಶೇಷ ಭಕ್ತಿ ಇತ್ತು. ನಾಡಿನಲ್ಲಿ ಸ್ಮರಣೀಯ ಸೇವೆಯಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳ ನೆರವಿಗೆಗಾಗಿ ವರನಟ ೧೯೮೨ರಲ್ಲಿ ಗದುಗಿನಲ್ಲಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಪವಿತ್ರ ಸ್ಥಳವಾದ ಪುಣ್ಯಾಶ್ರದಲ್ಲಿ ಅಂಧರಿಂದ ಪ್ರತಿಧ್ವನಿಸುತ್ತಿದ್ದ ಸಂಗೀತದ ಸ್ವರಗಳು ಕಂಡು ಆಶ್ಚರ್ಯಚಕಿತರಾದ ಡಾ.ರಾಜ್ ಅವರು ವೀರೇಶ್ವರ ಪುಣ್ಯಾಶ್ರಮದಲ್ಲಿ ೩ ತಿಂಗಳುಕಾಲ ಉಳಿದುಕೊಂಡು ಪೂಜ್ಯರಿಂದ ಸಂಗೀತ ಅಭ್ಯಾಸ ಮಾಡಿದ್ದನ್ನು ಪುಣ್ಯಾಶ್ರಮದ ಭಕ್ತರು ಇಂದಿಗೂ ಮೆಲುಕು ಹಾಕುತ್ತಾರೆ. ಶ್ರೀಮಠದ ಬಗ್ಗೆ ರಾಜ್‌ಗೆ ಇದ್ದ ಅಭಿಮಾನದ ಕಾರಣದಿಂದ ಮುಂದೆ ‘ಗಾನಯೋಗಿ ಪಂಡಿತ ಪಂಚಾಕ್ಷರ ಗವಾಯಿ’ ಹೆಸರಿನಲ್ಲಿ ನಿರ್ಮಾಣವಾದ ಕನ್ನಡ ಚಲನಚಿತ್ರದಲ್ಲಿ ಗಾಯಕರಾಗಿ ‘ಗಾನಯೋಗಿ ಗುರುವೇ’ ಎನ್ನುವ ಗೀತೆಯನ್ನು ಹಾಡುವ ಮೂಲಕ ‘ಸಾವಿರದ ಶರಣು...’ ಗವಾಯಿಗಳಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಾಜ್ ತಮ್ಮ ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹಾಡಿದ ‘ಗಾನಯೋಗಿ ಗುರುವೇ’ ಗೀತೆ ಇವತ್ತಿಗೂ ಜನಮಾನಸದಲ್ಲಿ ಉಳಿದಿದ್ದು, ಗದುಗಿನ ತುಂಬಾ ಯಾವುದೇ ಸ್ಥಳದಲ್ಲೂ ಶುಕ್ರವಾರ ಈ ಹಾಡು ಮಾರ್ಧನಿಸುತ್ತಿತ್ತು.[೨]
ಲಿಂಗೈಕ್ಯ
೧೭-೦೯-೨೦೧೦ ರಂದು ಮದ್ಯಾಹ್ನಪುಟ್ಟರಾಜ ಗವಾಯಿಯವರು ಲಿಂಗೈಕ್ಯರಾದರು.
ಕರ್ನಾಟಕ ರತ್ನ
ಡಾ.ಪಂಡಿತ ಪುಟ್ಟರಾಜ ಗವಾಯಿಗಳಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವುದೂ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ವೀರೇಶ್ವರ ಪುಣ್ಯಾಶ್ರಮದ ಭಕ್ತರು ಈ ಹಿಂದೆಯೇ ಸರಕಾರದ ಮುಂದಿಟ್ಟಿದ್ದರು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸರಕಾರ ಬದ್ಧವಾಗಿದೆ ಎಂದು ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಸಿ.ಎಂ.ಉದಾಸಿ ಜಂಟಿಯಾಗಿ ತಿಳಿಸಿದ್ದಾರೆ.[೩]
ಭಾರತ ರತ್ನ ಪ್ರಶಸ್ತಿ ನೀಡಲು ಮನವಿ
ಭಾರತ ರತ್ನ ಪ್ರಶಸ್ತಿ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಮನವಿ [ಪುಟ್ಟರಾಜರಿಗೆ ಭಾರತ ರತ್ನ ಪ್ರಶಸ್ತಿಗೆ ಶಿಫಾರಸು: ಸಿಎಂ]
ವೀರೇಶ್ವರ ಆಶ್ರಮದಲ್ಲಿ ಚಿಕಿತ್ಸೆ
ಗವಾಯಿಗಳಿಗ ವೀರೇಶ್ವರ ಆಶ್ರಮದಲ್ಲಿ ಚಿಕಿತ್ಸೆ, ಗದಗ, ಬೆಳಗಾವಿಯಲ್ಲಿ ವೈದ್ಯಕೀಯ ಚಿಕಿತ್ಸೆ ಫಲಿಸದೇ ಅವರನ್ನು ಗದುಗಿಗೆ ಕರೆ ತರುವ ವ್ಯವಸ್ಥೆಯಾಗಿತ್ತು.ಆಶ್ರಮಕ್ಕೆ ಕಾಲಿಟ್ಟ ಕೂಡಲೇ ಪುಟ್ಟರಾಜ ಗವಾಯಿಗಳು ಚೇತರಿಸಿಕೊಂಡು ವೈದ್ಯರಿಗೆ ಅಚ್ಚರಿ ಮೂಡಿಸಿದರು. ಪ್ರತಿದಿನ ಹಗಲು ರಾತ್ರಿ ಭಕ್ತರು ಪೂಜ್ಯರ ದರ್ಶನ ಮಾಡಿದರು. ಐದು ದಿನಗಳ ಕಾಲ ಭಕ್ತರಿಗೆ ಮುಕ್ತ ದರ್ಶನ ನೀಡುವ ಇಚ್ಚಾ ಶಕ್ತಿ ಅವರಲ್ಲಿತ್ತೆಂದು ತೋರುತ್ತದೆ. ಕಳೆದ ಹಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಸೋಮವಾರ ತೀವ್ರ ಅನಾರೋಗ್ಯ ಕ್ಕೆ ಒಳಗಾದ ಅವರನ್ನು ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಅವರ ಅಶಯದಂತೆ ಗದಗಿನ ವೀರೇಶ್ವರ ಆಶ್ರಮಕ್ಕೆ ಕರೆದುಕೊಂಡು ಬರಲಾಗಿತ್ತು. ಆಸ್ಪತ್ರೆ ಯಲ್ಲಿ ದೇಹತ್ಯಾಗ ಮಾಡುವ ಮನಸ್ಸಿಲ್ಲದೆ ತಾವು ಕಟ್ಟಿ ಬೆಳೆಸಿದ ಆಶ್ರಮದಲ್ಲಿ ನಿಶ್ಚಿಂತೆಯಿಂದ ದೇಹ ಬಿಟ್ಟರು. ವೀರೇಶ್ವರ ಪುಣ್ಯಾಶ್ರಮದಲ್ಲಿ ಗವಾಯಿಗಳಿಗೆ ಪಾರ್ಥಿವ ಶರೀರಕ್ಕೆ ಧಾರ್ಮಿಕ ವಿಧಿ-ವಿಧಾನಗಳ ಅನುಸಾರವಾಗಿ ಪೂಜೆ ನೆರವೇರಿಸಿದ ನಂತರ ಭಕ್ತರ ದರ್ಶನಕ್ಕಾಗಿ ಕೆ.ಎಚ್.ಪಾಟೀಲ ಕ್ರೀಡಾಂಗಣದಲ್ಲಿ ಇಡಲಾಯಿತು. ಹಾವೇರಿ, ಧಾರವಾಡ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ ಮತ್ತಿತರ ಕಡೆಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ಗುರುವಿನ ದರ್ಶನ ಪಡೆದರು. ಕರ್ನಾಟಕದ ಇತಿಹಾಸದಲ್ಲಿ ಇಷ್ಟೊಂದು ಜನ ಸೇರಿದ ಉದಾಹರಣೆಗಳಿಲ್ಲವಂತೆ. ಯಾವುದೆ ರೀತಿಯ ಗಲಾಟೆ ಇಲ್ಲದೆ ಗದಗ ಭಕ್ತರು ನೆರದಿದ್ದ ಜನರಿಗೆ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿದರು. ದಾನಿಗಳ ಈ ಸ್ವಯಂ ಪ್ರೇರಿತ ಸೇವೆಯಲ್ಲಿ ಗವಾಯಿಗಳ ಸಾಧನೆ ಇದೆ, ಆಧುನಿಕ ಪವಾಡವಿದೆ. ಲಕ್ಷ ದುಡಿದವರು ಐವತ್ತು ಸಾವಿರ ರೂಪಾ ಖರ್ಚು ಮಾಡಿದರೆ ಹತ್ತು ರೂಪಾ ದುಡಿದವರು ಐದು ರೂಪಾ ಖರ್ಚು ಮಾಡಿ ತಮ್ಮ ಭಕ್ತಿ ಮೆರೆದರು. ಒಂದು ರೂಪಾಯಿಗೆ ಜಗಳವಾಡುವ ಆಟೋದವರು ಪುಕ್ಕಟೆಯಾಗಿ ಜನರನ್ನು ಕರೆತಂದರು. ಹಣಕೊಟ್ಟರೂ ಸೇರದ ಜನ ಅಪಾರ ಸಂಖ್ಯೆಯಲ್ಲಿ ನೆರೆದು ರಾಜಕಾರಣಿಗಳನ್ನು ಬೆಚ್ಚಿಬಿಳಿಸಿದರು.
ಅಹೋರಾತ್ರಿ ಶಿಷ್ಯರ ಗಾಯನ
ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯ ಎಂ.ವೆಂಕಟೇಶ ಕುಮಾರ, ನರಸಿಂಹ ವಡವಾಟು ಸೇರಿದಂತೆ ರಾಷ್ಟ್ರ- ಅಂತರರಾಷ್ಟ್ರೀಯ ಖ್ಯಾತಿ ಹೊಂದಿರುವ ಕಲಾವಿದರು ಅಹೋರಾತ್ರಿ ಗಾಯನ ಮಾಡುವುದರೊಂದಿಗೆ ಗುರುವಿಗೆ ಅಂತಿಮ ನಮನ ಸಲ್ಲಿಸಿದರು.
ಅಂತಿಮ ನಮನ
ಗವಾಯಿಗಳ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ನೆರೆದ ಭಕ್ತ ಜನ,ಗದಗ ಸಪ್ಟಂಬರ್ ೧೮,೨೦೧೦ ಗವಾಯಿಗಳ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಗದಗಿಗೆ ಬಂದಿದ್ದರು. ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಪಂ! ಪುಟ್ಟರಾಜ ಗವಾಯಿ ಅವರಿಗೆ ಅಂತಿಮ ನಮನ ಸಲ್ಲಿಸಿದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಟ್ಟರಾಜ ಗವಾಯಿ ಅವರು ಅಂಧ ಹಾಗೂ ಅನಾಥರ ಕಣ್ಮಣಿ ಆಗಿದ್ದರು ಎಂದರು. ಗವಾಯಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರಕ್ಕಾಗಿ ಸುಮಾರು ೪೫೦ ಮಂದಿ ಸ್ವಾಮೀಜಿಗಳು ಪಂಚಾಕ್ಷರಿ ಗವಾಯಿ ಅವರ ಗದ್ದುಗೆ ಸಮೀಪದಲ್ಲಿಯೇ ವೀರಶೈವ ಧಾರ್ಮಿಕ ವಿಧಿವಿಧಾನಗಳ ಮೂಲಕ ಸಮಾಧಿಯ ಸಿದ್ದತೆ ನಡೆಸಿದ್ದರು. ಸಮಾಧಿಯ ಶುದ್ದೀಕರಣ, ಪೂಜೆಗೆ ಆಕಳ ಹಾಲು, ಮೊಸರನ್ನು ಬಳಸಲಾಗಿತ್ತು. ವೀರಶೈವ ಧರ್ಮದ ಅನುಸಾರವಾಗಿ ರುದ್ರಾ ಭಿಷೇಕ ಪಾದೋದಕ ಪ್ರಸಾದಗಳ ಮೂಲಕ ಗವಾಯಿ ಅವರ ಅಂತ್ಯಸಂಸ್ಕಾರವನ್ನು ಸಕಲ ಸರಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. [೪] ಚಿರನಿದ್ರೆಗೆ ಜಾರಿದ ಸಂಗೀತ ಸಾಮ್ರಾಟ ಪಂಡಿತ ಪುಟ್ಟರಾಜ ಗವಾಯಿ ಅವರ ಪಾರ್ಥಿವ ಶರೀರವನ್ನು ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಇರುವ ಪಂಡಿತ ಪಂಚಾಕ್ಷರ ಗವಾಯಿಗಳ ಗದ್ದುಗೆಯ ಪಕ್ಕದಲ್ಲಿಯೇ ಸಕಲ ಧಾರ್ಮಿಕ ವಿಧಿವಿಧಾನ ಹಾಗೂ ಸರಕಾರಿ ಗೌರವಗಳೊಂದಿಗೆ ಶನಿವಾರ ಸಂಜೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.[೫]
ಸರ್ಕಾರಿ ರಜೆ ಘೋಷಣೆ
ಪುಟ್ಟರಾಜರ ಅಂತ್ಯಕ್ರಿಯೆ ಹಿನ್ನಲೆಯಲ್ಲಿ ಸೆ. 18ರಂದು ಶನಿವಾರ ಗದಗ ಜಿಲ್ಲೆಯಾದ್ಯಂತ ಶಾಲಾ, ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿತ್ತು. ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಿಗೆ ರಜಾ ಘೋಷಿಸಲಾಗಿತ್ತು.ರಾಜ್ಯಾದ್ಯಂತ ಸರಕಾರಿ ರಜಾ : ಪುಟ್ಟರಾಜರ ಗೌರವಾರ್ಥವಾಗಿ ಇಂದು ರಾಜ್ಯಾದ್ಯಂತ ಶಾಲಾ, ಕಾಲೇಜು, ಕಚೇರಿಗಳಿಗೆ ರಾಜ್ಯ ಸರಕಾರ ಗೌರವ ಘೋಷಿಸಿದೆ.
ಶ್ರೀಗಳ ಭವಿಷ್ಯವಾಣಿ
ಪುಟ್ಟರಾಜ ಗವಾಯಿಯವರ ಪ್ರತಿಯೊಂದು ಮಾತೂ ‘ದಿವ್ಯವಾಣಿ’ಯಂತೆಯೇ ಭಕ್ತರಿಗೆ ಕಂಗೊಳಿಸುತ್ತಿತ್ತು. ಮಿತಭಾಷಿಗಳಾಗಿದ್ದ ಶ್ರೀಗಳ ಪ್ರತಿ ಉವಾಚ ಭಕ್ತರಿಗೆ ಮಾರ್ಗದರ್ಶನ ನೀಡುತ್ತಿತ್ತು. ಅವರ ಬಾಯಿಂದ ಹೊರಬಿದ್ದ ಪ್ರತಿಯೊಂದು ನುಡಿಮುತ್ತೂ ಕೇಳಗರನ್ನು ಮಂತ್ರಮುಗ್ಧ ರನ್ನಾಗಿಸುತ್ತಿತ್ತು. ಅಷ್ಟೇ ಅಲ್ಲ, ಅನೇಕ ಬಾರಿ ಅವರ ನುಡಿ ಕಠೋರವೂ, ನಿತ್ಯಸತ್ಯವೂ ಆಗಿರುತ್ತಿದ್ದುದು ವಿಶೇಷ.ಅವರ ಭವಿಷ್ಯವಾಣಿಯಂತೂ ನಿಖರವಾಗಿ ಮೂಡಿ ಬರುತ್ತಿತ್ತು. ಅದು ೨೦೦೮ರ ಮೇ ತಿಂಗಳು. ರಾಜ್ಯದಾದ್ಯಂತ ಇನ್ನೇನು ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು ನಡೆಯಬೇಕಿದ್ದವು. ಪ್ರಚಾರ ಕಾರ್ಯವೂ ಭರದಿಂದ ಸಾಗಿತ್ತು. ಗದುಗಿನ ಉಸುಗಿನಕಟ್ಟಿಯ ಗಂಜಿಬಸವೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಸಮಾರಂಭ ಸಂಜೆ ನೆರವೇರಿದ್ದರೆ, ದಿವ್ಯಸಾನ್ನಿಧ್ಯ ವಹಿಸಿದ್ದ ಪಂಡಿತ್ ಪುಟ್ಟರಾಜ ಕವಿ ಗವಾಯಿಯವರ ಆಶೀರ್ವಚನ ಆಲಿಸಲೆಂದೇ ನೆರೆದ ಸಾವಿರಾರು ಭಕ್ತರು ಕಿವಿಯರಳಿಸಿ ನಿಂತಿದ್ದರು. ‘ಇನ್ನೇನು ಚುನಾವಣೆ ಬರಲಿದೆ. ಭಾರತೀಯ ಜನತಾ ಪಕ್ಷ ಈ ಬಾರಿ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ.ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಶ್ರೀಗಳು ಸರ್ರನೆ ನುಡಿದರು.ಈ ಸುದ್ದಿ ಗದಗ ಜಿಲ್ಲೆಯಾದ್ಯಂತ ಮಿಂಚಿನಂತೆ ಸಂಚರಿಸಿತು. ಬಿಜೆಪಿ ಸ್ಫರ್ಧಾಳುಗಳ ಆಸೆ ಗರಿಗೆದರಿತು. ಶ್ರೀಗಳ ಭವಿಷ್ಯವಾಣಿಯ ಬಗ್ಗೆ ಮೊದಲೇ ಅರಿತಿದ್ದ ವಿರೋಧ ಪಕ್ಷದ ಮುಖಂಡರು, ‘ಶ್ರೀಗಳು ಆ ರೀತಿ ಹೇಳಿಲ್ಲ’ ಎಂದೇ ಸಾಧಿಸಿದರಲ್ಲದೆ, ವೀರೇಶ್ವರ ಪುಣ್ಯಾಶ್ರಮಕ್ಕೆ ತೆರಳಿ, ‘ನಾನು ಆ ರೀತಿ ಭವಿಷ್ಯ ಹೇಳಿಲ್ಲ ಎಂಬ ಒಂದು ಹೇಳಿಕೆಯನ್ನು ದಯವಿಟ್ಟು ನೀಡಿ’ ಎಂದು ಶ್ರೀಗಳಲ್ಲಿ ಗೋಗರೆದರು. ‘ನಾನು ಏನು ಹೇಳಿದ್ದೇನೆ ಎಂಬುದೇ ನನಗೆ ಅರಿಯದು. ಆ ಕ್ಷಣದಲ್ಲಿ ಏನಾದರೂ ಹೇಳಿದ್ದರೆ ಅದು ಶ್ರೀ ಕುಮಾರೇಶನ ಅನುಗ್ರಹ. ಅದನ್ನು ಇಲ್ಲ ಎಂದು ಹೇಳಲಾಗುವುದಿಲ್ಲ’ ಎಂದು ನಯವಾಗಿ ತಿರಸ್ಕರಿಸಿದರು.ಕೆಲವೇ ದಿನಗಳ ಅಂತರದಲ್ಲಿ ಚುನಾವಣೆ ನಡೆದು ಫಲಿತಾಂಶ ಹೊರಬಿತ್ತು. ಬಿಜೆಪಿ ಅಧಿಕಾರಕ್ಕೆ ಬಂದು, ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದರು.[೬]
ಪುಟ್ಟರಾಜ ಗವಾಯಿ ಸ್ಮಾರಕ
ಪುಟ್ಟರಾಜರ ಕಂಚಿನ ಪುತ್ಥಳಿ ೬ ಅಕ್ಟೋಬರ್ ೨೦೧೦ -ಪುಟ್ಟರಾಜರ ಕಂಚಿನ ಪುತ್ಥಳಿ ವಾಹನಕ್ಕೆ ಪೂಜೆ ಗದಗ: ಗುಜರಾತ್ ರಾಜ್ಯದ ಅಹಮದಾಬಾದ್‌ನಲ್ಲಿ ರೂಪ ತಳೆದ ಗುಜರಾತ್ ರಾಜ್ಯದ ಅಹಮದಾಬಾದ್ ನಿವಾಸಿ ಜಾಸು(ಕಂಚಿನ ಮಹಿಳೆ ಎಂದೇ ಪ್ರಖ್ಯಾತಿ ) ಶಿಲ್ಪಿಯವರಿಂದ ನಿರ್ಮಿಸಿದ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ೧೫ ಅಡಿ ಎತ್ತರದ ೧.೫೦ ಟನ್ ಭಾರದ ಕಂಚಿನ ಪುತ್ಥಳಿ ಹೊತ್ತು ತಂದ ವಾಹನ ನಗರದ ವೀರೇಶ್ವರ ಪುಣ್ಯಾಶ್ರಮಕ್ಕೆ ಆಗಮಿಸಿತು.ವಾಹನಕ್ಕೆ ಪೂಜೆ ಸಲ್ಲಿಸಿ ಬರ ಮಾಡಿಕೊಂಡರು. ಗವಾಯಿಗಳು ಲಿಂಗೈಕ್ಯರಾದ ನಂತರ ಕೇವಲ ೨೦ ದಿನಗಳಲ್ಲಿ ಪುತ್ಥಳಿಯನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ ಎನ್ನುವುದೇ ಅವರ ಪ್ರೌಢಿ ಮೆಗೆ ಸಾಕ್ಷಿಯಾಗಿದೆ. ಪುತ್ಥಳಿ ನಿರ್ಮಾಣಕ್ಕೆ ತಗುಲಿರುವ ವೆಚ್ಚ ೧೯ ಲಕ್ಷ ರೂಪಾಯಿಗಳು. ೯ ಅಕ್ಟೋಬರ್ ೨೦೧೦ - ಪಂಡಿತ ಪುಟ್ಟರಾಜರ ೧೫ ಅಡಿಯ ಕಂಚಿನ ಪುತ್ಥಳಿಯನ್ನು ೯ ಅಕ್ಟೋಬರ್ ೨೦೧೦ರ ಮಧ್ಯಾನ್ಹ ೧೨.೧೫ಕ್ಕೆ ಗದಗದ ಭೂಮರಡ್ಡಿ ವೃತ್ತದ ಸಮೀಪ ಅನಾವರಣಗೊಂಡಿದೆ. ಖಾದಿ ವಸ್ತ್ರ ಧರಿಸಿ, ತಲೆಯ ಮೇಲೆ ಪೇಟ ತೊಟ್ಟು, ಕೈಯಲ್ಲೊಂದು ಕೋಲು ಹಿಡಿದು ಸ್ಥಿತಪ್ರಜ್ಞೆಯಲ್ಲಿ ನಿಂತಿರುವ ಭಂಗಿಯಲ್ಲಿ ಮೂಡಿರುವ ಗವಾಯಿ, ಜಗತ್ತಿನ ಶಾಂತಿ ಹಾಗೂ ನೆಮ್ಮದಿಗೆ ಕಣ್ಮುಚ್ಚಿ ಧ್ಯಾನಿಸುವಂತೆ ಕಾಣುತ್ತಾರೆ. [೭]
ಪವಾಡ
ಪುಟ್ಟರಾಜ ಗವಾಯಿಗಳು ಬದುಕಿದ್ದಾಗ ಅನೇಕ ಪವಾಡಗಳನ್ನು ಮಾಡಿದ್ದರು ಎಂದು ಅವರ ಶಿಷ್ಯವೃಂದದವರು ನೆನಪು ಮಾಡಿಕೊಳ್ಳುತ್ತಾರೆ. ಅದರಂತೆ ಕಂಚಿನ ಪುತ್ಥಳಿ ನಿರ್ಮಾಣ ಜಾಗದಲ್ಲೂ ಕೂಡ ಘಟಿಸಿರುವ ವಿಸ್ಮಯವನ್ನು ಕಂಡು ಎಲ್ಲರೂ ‘ಗವಾಯಿ ಜೀವಂತವಿದ್ದಾರೆ, ನಮ್ಮನ್ನು ಬಿಟ್ಟು ಹೋಗಿಲ್ಲ’ ಎಂದರು. ಗವಾಯಿಗಳನ್ನು ಬೇರೆ ಊರಿನ ಜನರು ಆಮಂತ್ರಿಸಿದರೆ “ನಿಮ್ಮೂರಿನಲ್ಲಿ ಬಾವಿ ನೀರು ಇರಬೇಕು. ಬಿಲ್ವಪತ್ರಿ ಹಾಗೂ ಬನ್ನಿಪತ್ರಿ ಇದ್ದರೆ ಮಾತ್ರ ಬರುತ್ತೇನೆ” ಎನ್ನುತ್ತಿದ್ದರಂತೆ. ಏಕೆಂದರೆ ಗವಾಯಿ ಬಿಲ್ಪಪತ್ರಿ ಹಾಗೂ ಬನ್ನಿಪತ್ರಿ ಇಲ್ಲದೆ ಶಿವಪೂಜೆ- ಇಷ್ಟಲಿಂಗ ಪೂಜೆ ಮಾಡುತ್ತಿರಲಿಲ್ಲ. ಬಾವಿ ನೀರು ಬಿಟ್ಟು ಬೇರೆ ಯಾವ ನೀರನ್ನು ಕುಡಿಯುತ್ತಿರಲಿಲ್ಲ.ಈಗ ಕಂಚಿನ ಪುತ್ಥಳಿ ಸ್ಥಾಪನೆಯಾಗಿರುವ ಜಾಗದಲ್ಲೂ ಬನ್ನಿಪತ್ರಿ, ಬಿಲ್ವಪತ್ರಿ ಗಿಡವಿದೆ. ಬಾವಿ ಇದೆ. ಇದರಿಂದ ಗವಾಯಿ ಗದುಗನ್ನು ಬಿಟ್ಟು ಹೋಗಿಲ್ಲ ಎನ್ನುತ್ತಾರೆ ಅವರ ಅಸಂಖ್ಯಾತ ಶಿಷ್ಯವೃಂದ.
ಮಾರ್ಗ ನಾಮಕರಣ
ಪೂಜ್ಯರ ಕಂಚಿನ ಪುತ್ಥಳಿ ಸ್ಥಾಪನಾ ಸ್ಥಳದಿಂದ ಭೂಮರಡ್ಡಿ ವೃತ್ತದ ಮಾರ್ಗವಾಗಿ ವೀರೇಶ್ವರ ಲೈಬ್ರರಿ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ರಾಚೋಟೇಶ್ವರ ದೇವಸ್ಥಾನದವರೆಗಿನ ಪ್ರಮುಖ ರಸ್ತೆಗೆ ಪದ್ಮಭೂಷಣ ಡಾ| ಪಂ.ಪುಟ್ಟರಾಜರ ಮಾರ್ಗವೆಂದು ನಾಮಕರಣ ಮಾಡಿ ನಾಮಫಲಕ ಅಳವಡಿಸುವಂತೆ ಗದಗ ಜನತೆ ಮನವಿಯಲ್ಲಿ ಆಗ್ರಹಿಸಿದರು.
ಪುಟ್ಟರಾಜ ಗವಾಯಿ ಸ್ಮಾರಕ ಭವನ
ಗವಾಯಿಗಳ ಸ್ಮಾರಕ ನಿರ್ಮಾಣಕ್ಕೆ ೫ ಕೋಟಿ ರೂಗಳು. 'ಪುಟ್ಟರಾಜ ಗವಾಯಿ ಸ್ಮಾರಕ ಭವನ' ನಿರ್ಮಾಣ ಮಾಡುವುದಾಗಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ[೮]
ಹುಟ್ಟೂರಲ್ಲಿ ಪುಟ್ಟಯ್ಯನಿಗೊಂದು ಶಾಶ್ವತ ನೆಲೆ
ಪುಟ್ಟರಾಜ ಗವಾಯಿಗಳ ಹುಟ್ಟೂರು ಹಾವೇರಿ ತಾಲೂಕು ದೇವಗಿರಿ ಜನತೆ ಗ್ರಾಮದ ಗಿರಿ ಮಲ್ಲೇಶ್ವರನ ಸನ್ನಿಧಿಯಲ್ಲಿ 'ಪುಟ್ಟಯ್ಯ'ನಿಗೊಂದು ಶಾಶ್ವತ ನೆಲೆ ಕಲ್ಪಿಸುವತ್ತ ಮುನ್ನಡೆದಿದ್ದಾರೆ.[೯]
ಪುಟ್ಟರಾಜರ ಮೂರ್ತಿ
ಪುಟ್ಟರಾಜರ ಮೂರ್ತಿ ಪ್ರತಿಷ್ಠಾಪನೆ ಗೊಳ್ಳಲಿರುವ ಪತ್ರೀವನ ಗ್ರಾಮದ ಜನತೆ ಮುನ್ನಡೆದಿದ್ದಾರೆ. ಹಾಗೂ ೧ ಕೋ.ರೂ. ವೆಚ್ಚದ ಸುಂದರ ಸಾಂಸ್ಕೃತಿಕ ಭವನ ಮತ್ತು ಶ್ವೇತ ವರ್ಣದ ಶಿಲೆಯಲ್ಲಿ ಪುಟ್ಟರಾಜ ಗವಾಯಿಗಳ ದೇವಸ್ಥಾನ ನಿರ್ಮಿಸುವ ದೃಢ ಸಂಕಲ್ಪ ಗ್ರಾಮಸ್ಥರು ಹೊಂದಿ ದ್ದಾರೆ.
ದೇವಗಿರಿಯಲ್ಲಿ ಪತ್ರೀವನ
'ಪುಟ್ಟಯ್ಯಜ್ಜ'ನ ಹೆಸರನ್ನು ನೆಪವಾಗಿಸುವ ಭವನವಾಗದೆ ಆತನ ಕನಸಿನ ಸಾಮ್ರಾಜ್ಯವನ್ನು ನನಸಾಗಿಸುವ ಸುಪ್ರಸಿದ್ಧ ಸಂಗೀತಶಾಲೆ ಜೊತೆಗೆ ಧಾರ್ಮಿಕ, ಸಾಮಾಜಿಕ ಹಾಗೂ ಆಧ್ಯಾತ್ಮಕ ಕೇಂದ್ರವಾಗಿ, ಪ್ರವಾಸಿಗರನ್ನು ಆಕಸುವ ಸುಂದರ ಯಾತ್ರಾ ಸ್ಥಳವಾಗಿ ಹೊರಹೊಮ್ಮಬೇಕು ಎನ್ನುವ ಉದ್ಧೇಶ ಹೊಂದಲಾಗಿದೆ ಎನ್ನುವುದು. ಈಗಾಗಲೆ ನಾಲ್ಕುಏಕರೆ ವಿಶಾಲವಾದ ಜಾಗದಲ್ಲಿ ಪತ್ರಿಗಿಡ ಹಾಗೂ ಬನ್ನಿಗಿಡ ಜೊತೆಗೆ ವಿವಿಧ ಬಗೆಯ ಹೂಗಿಡಗಳನ್ನು ಬೆಳಸಲಾಗಿದ್ದು ಈ ಪವಿತ್ರ ವನದಲ್ಲಿ ಪುಟ್ಟಯ್ಯಜ್ಜನ ಪುತ್ಥಳಿ ಪ್ರತಿಷ್ಠಾಪಿಸುವ ಹಾಗೂ ಸಾಂಸ್ಕೃತಿಕ ಭವನದಮುಂಭಾಗ ಸುಂದರಸಂಗೀತ ಕಾರಂಜಿ ನಿರ್ಮಿಸುವ ರೂಪರೇಷೆ ಯೋಜಿಸಲಾಗಿದೆ.
ದೇವಗಿರಿಯ ಗ್ರಾಮಸ್ಥರ ಕನಸು ನನಸಾಗಲಿಲ್ಲ
ಪುಟ್ಟಯ್ಯಜ್ಜ ತನ್ನ ಹೆಸರಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಧ ಮಕ್ಕಳ ಸಂಗೀತ ಶಾಲೆ ಹಾಗೂ ಧಾರ್ಮಿಕ ಭವನವನ್ನು ಉದ್ಘಾಟಿಸಲಿಲ್ಲವಲ್ಲ ಎಂಬ ಶಾಶ್ವತ ಕೊರಗು ದೇವಗಿರಿಯ ಗ್ರಾಮಸ್ಥರನ್ನು ಬಾಧಿಸುತ್ತಿದೆ. ದೇವಗಿರಿಯ ಸಂಗೀತ ಸಾಮ್ರಾಟನ ಸ್ಮರಣಿಕೆಗಳಾದ ಸಂಗೀತ ವಾದ್ಯಗಳು ತಮ್ಮ ತಾಯಿಯ ಊರಾದ ದೇವಗಿರಿಯೊಂದಿಗಿನ ತಮ್ಮ ನಂಟನ್ನು ಮಾತ್ರ ಪುಟ್ಟರಾಜರು ಬಿಡಲೇ ಇಲ್ಲ. ಪ್ರತಿವರ್ಷ ಬಂದು, ನಾಲ್ಕಾರು ದಿನ ತಮ್ಮ ಶಿಷ್ಯ ಹಾಗೂ ಸಂಬಂಧಿ ಶಿವಮೂರ್ತಯ್ಯ ಶಾಸ್ತ್ರಿಗಳ ಮನೆಯಲ್ಲಿ ತಂಗಿ ಹೋಗುತ್ತಿದ್ದರು. ಪುಟ್ಟರಾಜ ಗವಾಯಿಗಳು ವಯಸ್ಸಾಗಿ ದ್ದರಿಂದ ನಾಲ್ಕೈದು ವರ್ಷಗಳಿಂದ ಬರಲು ಸಾಧ್ಯವಾಗಿರಲಿಲ್ಲ. ಸಂಗೀತ ಸಾಮ್ರಾಟನ ಸ್ಮರಣಿಕೆಗಳಾದ ಸಂಗೀತ ವಾದ್ಯಗಳು ದೇವಗಿರಿಯ ಗ್ರಾಮದಲ್ಲಿವೆ. ಪುಟ್ಟರಾಜ ಗವಾಯಿ ಸ್ಮಾರಕ ದೇವಗಿರಿಯ ಗ್ರಾಮದಲ್ಲಿ ಸುಂದರವಾದ ಪತ್ರೀವನದ ವಿಹಂಗಮ ನೋಟ ಪುಟ್ಟರಾಜರ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿರುವ ಪತ್ರೀವನ ಸಂಗೀತ ಸಾಮ್ರಾಟನ ಸ್ಮರಣಿಕೆಗಳಾದ ಸಂಗೀತ ವಾದ್ಯಗಳು ಸುಂದರ ಹಾಗೂ ಪವಿತ್ರವಾದ ಪತ್ರೀವನದ ಮೇಲೆತ್ತರದಲ್ಲಿದೆ ಗಿರಿ ಮಲ್ಲೇಶ್ವರನ ಸನ್ನಿಧಿ
ಸಂಗೀತ ಮ್ಯೂಜಿಯಂ ಗದಗ
ಗದಗನಲ್ಲಿ ದೇಶದಲ್ಲಿಯೇ ಅತ್ಯಂತ ದೊಡ್ಡದಾದ ಸಂಗೀತ ಮ್ಯೂಜಿಯಂ ಸ್ಥಾಪನೆ ಮಾಡಬೇಕು ಎನ್ನುವುದು ಮುಖ್ಯ ಮಂತ್ರಿ ಆಶೆ. ಮ್ಯೂಜಿಯಂನಲ್ಲಿ ಪುಟ್ಟರಾಜ ಗವಾಯಿಗಳು ಬಳಸಿದ ಪರಿಕಗಳೊಟ್ಟಿಗೆ ಸಂಗೀತದ ಎಲ್ಲಾ ಸಾಧನಗನ್ನು ನೋಡುವ ಅವಕಾಶ ಕಲ್ಪಿಸುವದಾಗಿ ಹೇಳಿದರು. ಹಾಗೂ ಸಂಗೀತ ಮ್ಯೂಜಿಯಂಗೆ ಡಾ. ಪಂಡಿತ ಪುಟ್ಟರಾಜರ ಹೆಸರಿಡುವ ಚಿಂತನೆ.
ಪುಟ್ಟರಾಜ ಗವಾಯಿ ಚಿತ್ರ ಗ್ಯಾಲರಿ
- ಯೋಗ ಅಭ್ಯಾಸದಲ್ಲಿ ಪುಟ್ಟರಾಜ ಗವಾಯಿ
ಹಾರ್ಮೋನಿಯಂ ನುಡಿಸುತ್ತಿರುವ ಪುಟ್ಟರಾಜ ಗವಾಯಿ • ಮಾಂಡೋಲಿಯ ನುಡಿಸುತ್ತಿರುವ ಪುಟ್ಟರಾಜ ಗವಾಯಿ • ವಾಯಲಿನ್ ನುಡಿಸುತ್ತಿರುವ ಪುಟ್ಟರಾಜ ಗವಾಯಿ • ಪುಟ್ಟರಾಜ ಗವಾಯಿ ಉಪಯೋಗಿಸಿದ ವಾದ್ಯಗಳು, ಗದಗ • ಪುಟ್ಟರಾಜ ಗವಾಯಿ • ಪುಟ್ಟರಾಜ ಗವಾಯಿ • ಪುಟ್ಟರಾಜ ಗವಾಯಿ • ಪುಟ್ಟರಾಜ ಗವಾಯಿಗಳ ತೈಲ ಚಿತ್ರ ವೀರೇಶ್ವರ ಪುಣ್ಯಾಶ್ರಮ, ಗದಗ • ಪುಟ್ಟರಾಜ ಗವಾಯಿಗಳ ತೈಲ ಚಿತ್ರ ವೀರೇಶ್ವರ ಪುಣ್ಯಾಶ್ರಮ, ಗದಗ • ಪುಟ್ಟರಾಜ ಗವಾಯಿಗಳು ಲಿಂಗ ಪೂಜೆಯಲ್ಲಿ • ಪುಟ್ಟರಾಜ ಗವಾಯಿ ಪೋಟೊಗಳು, ವೀರೇಶ್ವರ ಪುಣ್ಯಾಶ್ರಮ, ಗದಗ • ಪುಟ್ಟರಾಜ ಗವಾಯಿ ಪೋಟೊಗಳ ಪ್ಲೆಕ್ಸ್ ಚಿತ್ರ, ವೀರೇಶ್ವರ ಪುಣ್ಯಾಶ್ರಮ, ಗದಗ • ಪುಟ್ಟರಾಜ ಗವಾಯಿ ಪೋಟೊಗಳು, ವೀರೇಶ್ವರ ಪುಣ್ಯಾಶ್ರಮ, ಗದಗ ಇತ್ತೀಚಿನ ವರ್ಷಗಳಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳ ಪಟ್ಟಿ ಇಂತಿದೆ. ಹೆಸರು ಸೇವೆ ಸಲ್ಲಿಸಿದ ವರ್ಷಗಳು ಹುಟ್ಟಿದ ಊರು ಪೂರ್ವಾಶ್ರಮದ ಹೆಸರು ಪಂಚಾಕ್ಷರಿ ಗವಾಯಿಗಳು ೧೯೧೪-೧೯೪೪ ಕಾಡಶೆಟ್ಟಿಹಳ್ಳಿ ವೀರೇಶ್ವರ ಪುಣ್ಯಾಶ್ರಮ
ಪುಟ್ಟರಾಜ ಗವಾಯಿಗಳು ೧೯೪೪-೨೦೧೦ ವೆಂಕಟಾಪುರ ವೀರೇಶ್ವರ ಪುಣ್ಯಾಶ್ರಮ
ಕಲ್ಲಯ್ಯಜ್ಜನವರು ೨೦೧೦- ಕಲ್ಲೂರು ವೀರೇಶ್ವರ ಪುಣ್ಯಾಶ್ರಮ
ವೀ•ಚ•ಸಂ ವೀರೇಶ್ವರ ಪುಣ್ಯಾಶ್ರಮ
ವೀ•ಚ•ಸಂ ಕರ್ನಾಟಕ ಸಂಗೀತ
ವೀ•ಚ•ಸಂ ಹಿಂದುಸ್ತಾನಿ ಸಂಗೀತ
ಹೊರಗಿನ ಸಂಪರ್ಕಗಳು
ಗಾನ ನಿಲ್ಲಿಸಿದ ಗಾನ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಯು-ಟ್ಯುಬನಲ್ಲಿ ಪುಟ್ಟರಾಜರ ವಿಡಿಯೊ ಯು-ಟ್ಯುಬನಲ್ಲಿ ಪುಟ್ಟರಾಜರ ವಿಡಿಯೊ ನ್ಯೂಸ್ -೯ ಹುಟ್ಟೂರಲ್ಲಿ ಪುಟ್ಟಯ್ಯನಿಗೊಂದು ಶಾಶ್ವತ ನೆಲೆ 'ಗದುಗಿನ ನಡೆದಾಡುವ ದೇವರು' -ಪುಟ್ಟರಾಜ .. Thousands Mourn Music Doyen Puttaraj Gavai's Passing ಗಾಯನ ಮುಗಿಸಿದ ಗವಾಯಿ -ಸಂಪದಲ್ಲಿ ಗಾಯನ ಮುಗಿಸಿದ ಗವಾಯಿ-ಪ್ರಜಾವಾಣಿ ‘ಸಕಲ ವಾದ್ಯ ಕಂಠೀರವ’ ನಿಂತ ಹಾಡು, ಅನಾಥ ಆಶ್ರಮ ಕೃತಿಗಳು ಊರುಗೋಲು ಕಣ್ಮರೆಯಾಯ್ತು... ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಲಿಂಗೈಕ್ಯ ಪುಟ್ಟರಾಜರ ಗೂಗಲ್ ನ್ಯುಸ್ ಪುಟ್ಟರಾಜರ ವಿಡಿಯೊ ಕರ್ನಾಟಕ ಸಂಗೀತದ ಬಗ್ಗೆ... ವರ್ಗಗಳು: • ಭಾರತದ ಸಂಗೀತಗಾರರು • ಶಾಸ್ತ್ರೀಯ ಸಂಗೀತಗಾರರು • ಹಿಂದುಸ್ತಾನಿ ಸಂಗೀತ • ಸಂಗೀತ • ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು • ಬಸವಶ್ರೀ ಪ್ರಶಸ್ತಿ ಪುರಸ್ಕೃತರು • ಕರ್ನಾಟಕ ವಿವಿ ಗೌರವ ಡಾಕ್ಟರೇಟ್ ಪುರಸ್ಕೃತರು • ಸಾಹಿತ್ಯ ಸಂಗೀತ ಕಲಾಪ್ರವೀಣ ಪ್ರಶಸ್ತಿ ಪುರಸ್ಕೃತರು • ಸಮಾಜ ಸೇವಾ ಧುರೀಣ ಪ್ರಶಸ್ತಿ ಪುರಸ್ಕೃತರು • ತ್ರಿಭಾಷಾ ಕವಿರತ್ನ ಪ್ರಶಸ್ತಿ ಪುರಸ್ಕೃತರು • ಸಾಹಿತ್ಯ ಸಂಗೀತ ಕಲಾಚಕ್ರವರ್ತಿ ಪ್ರಶಸ್ತಿ ಪುರಸ್ಕೃತರು • ಧರ್ಮಭೂಷಣ ಪ್ರಶಸ್ತಿ ಪುರಸ್ಕೃತರು • ಕಲಾಜನಕ ಪ್ರಶಸ್ತಿ ಪುರಸ್ಕೃತರು • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಗಳು • ಕನಕ ಪುರಂದರ ಪ್ರಶಸ್ತಿ ಪುರಸ್ಕೃತರು • ನಾಡೋಜ ಪ್ರಶಸ್ತಿ ಪುರಸ್ಕೃತರು • ಕೇಂದ್ರ ಸಾಹಿತ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು • ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಇಲಾಖೆ ಪ್ರಶಸ್ತಿ ಪುರಸ್ಕೃತರು • ದಸರಾ ಸಂಗೀತ ವಿದ್ವಾನ್ ಪ್ರಶಸ್ತಿ ಪುರಸ್ಕೃತರು • ಶಿಕ್ಷಣ ಇಲಾಖೆಯ ಪ್ರಶಸ್ತಿ ಪುರಸ್ಕೃತರು • ಕಾಳಿದಾಸ್ ಸಮ್ಮಾನ್ ಪುರಸ್ಕೃತರು • ಗಿನ್ನೆಸ್ ದಾಖಲೆಗಳು • ಲಿಮ್ಕಾ ದಾಖಲೆಗಳು • ೧೯೧೪ ಜನನ • ೨೦೧೦ ನಿಧನ
ಶಿಕ್ಶಣ
ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ ಯಾರು ತಿಳಿದಿದ್ದರು? ತಮ್ಮ ಗುರು ಕಲಿತಂತೆಯೇ ಪುಟ್ಟರಾಜರೂ ಸಹ ಸುತ್ತಲಿನ ಪಂಡಿತರಿಂದ ಸಂಗೀತವನ್ನು, ಸಂಗೀತ ವಾದ್ಯ ಗಳನ್ನು ಅಲ್ಲದೆ, ಸಂಸ್ಕೃತ ಹಾಗು ಕನ್ನಡದ ವ್ಯಾಕರಣ ಮೊದಲಾದವುಗಲನ್ನೂ ಸಹ ಕಲಿತರು. ತಮ್ಮೊಂದಿಗೆ ಜೊತೆಯಾಗಿ ಕಲಿಯುತ್ತಿದ್ದ ಇತರ ಬಾಲಕರಿಗೆ ತಾವೇ ಪಾಠ ಹೇಳಿಕೊಡುವಷ್ಟು ಪರಿಣತರಾದರು. ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತಗಳಲ್ಲಿ ಅಲ್ಲದೆ, ಪುಟ್ಟರಾಜರು ತಬಲಾ,ಹಾರ್ಮೋನಿಯಮ್,ಪಿಟೀಲು, ಸಾರಂಗಿ, ಶಹನಾಯಿ ಮೊದಲಾದ ವಾದ್ಯಗಳನ್ನು ನುಡಿಸುವದರಲ್ಲೂ ಸಹ ಪರಿಣತರಾದರು.
ಸಂಚಾಲಕ
ಕೇವಲ ೮ ವರ್ಷದ ಬಾಲಕರಾಗಿದ್ದಾಗ ಸಂಗೀತ ಕಲಿಕೆಯ ವಿದ್ಯಾರ್ಥಿಯಾಗಿ ಆಶ್ರಮದ ಮಡಿಲಿಗೆ ಬಿದ್ದ ಪುಟ್ಟರಾಜ ಗವಾಯಿಗಳು ಗುರುಗಳ ಆಶೀರ್ವಾದ, ನಿಷ್ಠೆ-ವಿಶ್ವಾಸ, ಸ್ವತ್ಛಂದ ಮನಸ್ಸಿನೊಂದಿಗೆ ಆಶ್ರಮದ ಸಂಚಾಲಕ . ೧೯೪೪ರಲ್ಲಿ ವೀರೇಶ್ವರ ಪುಣ್ಯಾಶ್ರಮದ ಭಾರ ಹೊತ್ತ ಪುಟ್ಟರಾಜ ಗವಾಯಿ ಅವರು ತಮ್ಮ ವೈಯಕ್ತಿಕ ಬದುಕನ್ನು ಬದಿಗಿರಿಸಿ ಆಶ್ರಮದ ಅಭಿವೃದ್ಧಿ, ಅಂಧ-ಅನಾಥರ ಕಾಳಜಿಯಲ್ಲಿಯೇ ಶಿವನನ್ನು ಕಂಡರು. 'ಕಾಯಕವೇ ಕೈಲಾಸವಯ್ಯ' ಎಂಬ ಶರಣರ ವಾಣಿಯನ್ನು ಅಕ್ಷರಶಃ ಅನುಷ್ಠಾನಗೊಳಿಸಿದರು.
ದಿನಚರಿ
ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ನಿತ್ಯಕರ್ಮ ಹಾಗೂ ಯೋಗದ ಅನಂತರ ಬಾವಿ ನೀರಿನ ಮಜ್ಜನದೊಂದಿಗೆ ಮಡಿಯಾಗಿ ಪೂಜಾ ಕೋಣೆ ಸೇರಿದರೆ ಸಾಕು ಹೊರಗಿನ ಜಗತ್ತನ್ನೆ ಮರೆಯುತ್ತಿದ್ದರು. ಪೂಜಾ ಕೋಣೆಯಲ್ಲಿ ತ್ರಿಕಾಲ ನಿಷ್ಠರಾಗಿ ನಾಲ್ಕೈದು ಗಂಟೆಗಳವರೆಗೆ ಆರಾಧ್ಯದೈವದಲ್ಲಿ ತನ್ಮಯರಾಗಿ ಪುಟ್ಟರಾಜರು ಕೈಗೊಳ್ಳುತ್ತಿದ್ದ ಇಷ್ಟಲಿಂಗ ಅರ್ಚನೆ. ಇಷ್ಟಲಿಂಗ ಪೂಜೆಯನ್ನು ದಿನದಲ್ಲಿ ಎರಡು ಬಾರಿ ಮಾಡುತ್ತಿದ್ದರು.ಪುಟ್ಟರಾಜರು ಇಷ್ಟಲಿಂಗ ಪೂಜೆ ವಿಷಯದಲ್ಲಿಯೂ ಅಷ್ಟೇ ಖ್ಯಾತರಾಗಿದ್ದರು. ಮಕ್ಕಳಿಗೆ ಪಾಠ , ಇತರರಿಗೆ ಹೇಳಿ ಪುರಾಣ, ಪೌರಾಣಿಕ ನಾಟಕಗಳನ್ನು ಉಕ್ತ ಲೇಖನವಾಗಿಸಲು ಮಾರ್ಗದರ್ಶನ. ಆಶ್ರಮಕ್ಕೆ ಬಂದ ಭಕ್ತಾದಿಗಳ ಕುಶಲೋಪರಿ ವಿಚಾರಣೆ. ಆಶ್ರಮದ ಮಕ್ಕಳ ಆಟ-ಊಟ-ಉಪಚಾರ ಹಾಗೂ ಅನಾರೋಗ್ಯ ಕಾಡಿದರೆ ಮಕ್ಕಳ ದೇಖ್ ರೇಖ್.
ಇಷ್ಟಲಿಂಗ ಪೂಜೆ
ವಿಭೂತಿ, ಕುಂಕುಮ, ಪುಷ್ಪ, ಬಿಲ್ವಪತ್ರಿ, ಗಂಧ, ಬೆಳ್ಳಿಯ ಬೋಗಾಣಿ, ಕರ್ಪೂರ, ರುದ್ರಾಕ್ಷಿ ಮಾಲೆ-ಕಿರೀಟ, ಊದುಬತ್ತಿ, ಪಂಚಾಮೃತ, ಜೋಡು ಗಂಟೆಗಳನ್ನು ಕ್ರಮಬದ್ಧವಾಗಿ ಜೋಡಿಸಿಡಲಾಗುತ್ತಿತ್ತು. ಪದ್ಮಾಸನದಲ್ಲಿನ ಗುರುಗಳ ಮಂತ್ರ ಪಠನ, ಜೋಡುಗಂಟೆಯ ಪೂಜಾಕಾರ್ಯ ನೋಡುವುದೇ ಒಂದು ಭಾಗ್ಯವಾಗಿತ್ತು. ನಿತ್ಯವೂ ಮೂರು ಸಲ ಸುಮಾರು ೪ರಿಂದ ೫ ತಾಸು ರುದ್ರಾಭಿಷೇಕ, ಜಪದೊಂದಿಗೆ ಪೂಜೆ ಮಾಡುತ್ತಿದ್ದ ಪುಟ್ಟರಾಜ ಗವಾಯಿ ಅನಂತರ ಪ್ರಸಾದ ಸೇವಿಸಿ ಹೊರಬರುತ್ತಿದ್ದರು.
ಸಂಗೀತ ರಿಯಾಜ್ ಮತ್ತು ಪಾಠ
ಬೆಳಿಗ್ಗೆ ೪ ಗಂಟೇಕ ಎದ್ದು ಪಂಚಾಕ್ಷರಿ ಗವಾಯಿಗಳನ್ನು ನೆನೆಸಿ ರಿಯಾಜ್ ಮಾಡುವದು. ಬೆಳಿಗ್ಗೆ ಹಾಗೂ ಸಂಜೆ ಸುಮಾರು ೪ ತಾಸು ಮಕ್ಕಳಿಗೆ ಸಂಗೀತಗದ ಪಾಠ.
ಪುಟ್ಟರಾಜ ಗವಾಯಿಗಳ ಕೊಡುಗೆ
ನೂರಾರು ಅಂಧ ಅನಾಥ ವಿಕಲಚೇತನ ಮಕ್ಕಳಿಗೆ ಪುಟ್ಟರಾಜ ಗವಾಯಿಗಳು ಸಂಗೀತಾಭ್ಯಾಸ ನೀಡುತ್ತಿದ್ದರು. ಅಂಧತ್ವದ ಶಾಪವನ್ನು ಗ್ರಹಿಸಿದ್ದ ಗವಾಯಿಗಳು ಅವರಿಗೆ ಸ್ವತಂತ್ರವಾಗಿ ಬದುಕುಸಾಗಿಸಲು ಆತ್ಮ ವಿಶ್ವಾಸ ತುಂಬುವುದಲ್ಲದೆ ಜೀವನೋಪಾಯಕ್ಕಾಗಿ ಸಂಗೀತ ಹಾಗೂ ಪ್ರವಚನ, ಪುರಾಣ ಕಲೆಯನ್ನು ಕಲಿಸುತ್ತಿದ್ದರು. ಆಳವಾಗಿ ಅಧ್ಯಯನ ಮಾಡಿ ಸಾಧನೆಗೈದವರು ಶ್ರೇಷ್ಠ ಗಾಯಕರಾಗಿ ಹೊರಹೊಮ್ಮಿದ್ದಾರೆ, ಸಾಧಾರಣ ಪ್ರತಿಭೆ ಹೊಂದಿದವರು ಹೇಗೋ ಜೀವನ ನಡೆಸಲು ಗುರುಗಳು ಕೃಪೆ ತೋರಿದರು. ಆದರೆ ಪುಟ್ಟರಾಜರಿಗೆ ವೈಯುಕ್ತಿಕ ಕೀರ್ತಿ ಹಾಗೂ ಹಣ ಬೇಕಾಗಿರಲಿಲ್ಲ ತಮ್ಮಂತೆ ಅಸಹಾಯಕ ಸ್ಥಿತಿಯಲ್ಲಿರುವ ಲಕ್ಷಾಂತರ ವಿಕಲಚೇತನರಿಗೆ ತಾವು ಸಂಪಾದಿಸಿದ ವಿದ್ಯೆಯನ್ನು ಧಾರೆ ಎರೆಯಲಾರಂಬಿಸಿದರು. ಇಷ್ಟನ್ನೇ ಸಾಧಿಸಿದ್ದರೆ ಗವಾಯಿಗಳು ಒಬ್ಬ ಶ್ರೇಷ್ಠ ಸಂಗೀತ ಗುರುಗಳಾಗುತ್ತಿದ್ದರು. ಆದರೆ ಲಿಂಗ ಪೂಜಾ ನಿಷ್ಠೆಂದ ವಿಶೇಷ ಆಧ್ಯಾತ್ಮಿಕ ಶಕ್ತಿಯನ್ನು ಮೈಗೂಡಿಸಿಕೊಂಡರು. ಲಿಂಗಾಯತ ಧರ್ಮದ ಏಕತೆ ಸಾರುವ, ಕರಸ್ಥಲಕೆ ಬಂದು ಚುಳುಕಾದ ಇಷ್ಟಲಿಂಗದ ಶಕ್ತಿಯನ್ನು ಅರಿತುಕೊಂಡು, ಲಿಂಗಪೂಜೆ ಮಾಡುತ್ತಾ ಕಠಿಣ ವೃತ ನಿಯಮಗಳನ್ನು ಎಂತಹ ಸಂದರ್ಭದಲ್ಲಯೂ ಪಾಲಿಸಿಕೊಂಡು ಸ್ವತಃ ದೇವರಾದರು.
ಆಡಳಿತದ ಮೇಲುಸ್ತುವಾರಿ
ಆಶ್ರಮದ ದೈನಂದಿನ ಖರ್ಚು-ವೆಚ್ಚ ಸರಿದೂಗಿಸಲು ಹಾನಗಲ್ ಕುಮಾರಸ್ವಾಮಿಗಳು ತಮ್ಮ ಗುರುಗಳಿಗೆ ನೀಡಿದ್ದ ಜೋಳಿಗೆ ಹೆಗಲಿಗೇರಿಸಿ ಊರೂರು ಸಂಚಾರ, ನಿರಂತರ ಪ್ರವಾಸ ಪುಟ್ಟಯ್ಯಜ್ಜನವರ ಬದುಕಾಗಿತ್ತು. ೯೭ ವರ್ಷದ ವಯೋಸಹಜ ಕಾಯಿಲೆಗಳಿಂದ ಅವರು ಬಳಲಿದರೂ ಈ ನಡಾವಳಿಗೆ ಯಾವತ್ತೂ ಚ್ಯುತಿ ಬರಲಿಲ್ಲ. ಗುರು ಪಂಚಾಕ್ಷರಿ ನೀಡಿದ ಮಾರ್ಗ ದಂಡ ಯಾವತ್ತೂ ಕೈಯಲ್ಲಿ ಹಿಡಿದು ಪುಟ್ಟಯ್ಯಜ್ಜ ನಡೆದರೆ ‘ನಡೆದಾಡುವ ದೇವರು’ ಎಂಬುವುದರಲ್ಲಿ ಯಾವುದೇ ಅತಿಶಯೋಕ್ತಿ ಕಾಣುತ್ತಿರಲಿಲ್ಲ.
ಗವಾಯಿಗಳ ವ್ಯಕ್ತಿತ್ವ
ಬಂಗಾರ, ಉಡುಗೆ, ಊಟದ ವಿಷಯಗಳಲ್ಲಿ ಪುಟ್ಟರಾಜರು ಎಂದು ವ್ಯಾಮೋಹಿಗಳಾಗಿರಲಿಲ್ಲ. ಭಕ್ತರ ಸಂತಸದಲ್ಲಿ ಆತ್ಮ ತೃಪ್ತಿಯನ್ನು ಕಾಣುತ್ತಿದ್ದರು. ಪುಟ್ಟರಾಜರು ಸರ್ವಸಂಗ ಪರಿತ್ಯಾಗಿಗಳು, ಸಾಧಕರು ಆದರೆ ರುದ್ರಾಕ್ಷಿ ಸರ , ಮೈತುಂಬ ಬಂಗಾರ, ಕೈತುಂಬ ಚಿನ್ನದ ಉಂಗುರಗಳನ್ನು ಧರಿಸಿ ,ಮಗುವಿನ ಮುಗ್ಧನಗುವಿನ ಸಾರ್ಥ್ಯಕ್ಯವನ್ನು ಗವಾಗಳ ವ್ಯಕ್ತಿತ್ವದಲ್ಲಿ ಇಲ್ಲು.ಆ ಎಲ್ಲ ಅಲಂಕೃತ ಆಭರಣಗಳು ಪುಟ್ಟರಾಜರಿಗೆ ಬೇಕಿಲ್ಲ. ಅದನ್ನು ಕಂಡು ಸಂಭ್ರಮಿಸುವ ಭಕ್ತರಿಗೆ ಬೇಕಿತ್ತು.ವ್ಯಕ್ತಿಯ ವ್ಯಕ್ತಿತ್ವದ ಆಳವನ್ನು ಅರಿಯುವ ವಿಶಾಲತೆ ಬೇಕು. ಮೇಲೆ ಗೋಚರಿಸುವ ಸಂಗತಿಗಳ ಮೂಲಕ ವ್ಯಕ್ತಿಗಳನ್ನು ಅಳೆಯುವದು ಅಸಾಧ್ಯ ಎಂಬುವದಕ್ಕೆ ಪುಟ್ಟರಾಜರೆ ಸಾಕ್ಷಿಯಾದರು.
ರಚನೆಗಳು
ಸಂಗೀತ ಸಾಹಿತ್ಯ ಹಾಗೂ ಆದ್ಯಾತ್ಮದಲ್ಲಿ ಅವರು ತೋರಿದ ಶ್ರದ್ಧೆ ಅನನ್ಯವಾದುದು. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಯಾವುದಾದರು ಒಂದು ಕ್ಷೇತ್ರದಲ್ಲಿ ಯಶ ಸಾಧಿಸಬಹುದು ಎಂಬ ಲೆಕ್ಕಾಚಾರವನ್ನು ಅಲ್ಲಗಳೆದು ಎಲ್ಲ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದರು. ಸಂಗೀತದ ಎಲ್ಲ ವಾದ್ಯಗಳನ್ನು ಏಕಕಾಲಕ್ಕೆ ನುಡಿಸಿ ಕೇಳುಗರನ್ನು ಬೆರಗುಗೊಳಿಸುತ್ತಿದ್ದರು. ನವ ರಸಗಳನ್ನು ಮೇಳೈಸಿ ಪ್ರವಚನ ನೀಡುತ್ತಾ ಸಂಗೀತ ವಾದ್ಯಗಳನ್ನು ಪ್ರಸಂಗಕ್ಕೆ ತಕ್ಕಂತೆ ಬಳಸಿ ಪ್ರವಚನದ ಮೆರುಗನ್ನು ಹೆಚ್ಚಿಸುತ್ತಿದ್ದರು. ಹಿಂದೂಸ್ತಾನಿ ಹಾಗೂ ಕರ್ನಾಟಕಿ ಸಮಗೀತದಲ್ಲಿ ಪ್ರಭುತ್ವ ಸಾಧಿಸಿದ ಏಕಮೇವ ದಿಗ್ಗಜರೆನಿಸಿಕೊಂಡರು. ತಮ್ಮ ಪಂಚಾಕ್ಷರಿ ಗವಾಯಿಗಳ ನಿಧನದ ನಂತರ “ಶ್ರೀ ವೀರೇಶ್ವರ ಪುಣ್ಯಾಶ್ರಮ”ವನ್ನು ಮುನ್ನಡೆಯಿಸಿಕೊಂಡು ಹೋದವರು ಪುಟ್ಟರಾಜ ಗವಾಯಿಗಳು. ಸಂಗೀತ ಸಾಧನೆಯಲ್ಲದೆ, ಪುಟ್ಟರಾಜರು ಪುರಾಣರಚನೆ ಹಾಗು ಸುಮಾರು ೩೫ ನಾಟಕಗಳನ್ನೂ ರಚಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಇಂತಿವೆ:
- ಸೊಲ್ಲಾಪುರದ ಸಿದ್ದರಾಮೇಶ
- ಸತಿ ಸುಕನ್ಯಾ
- ರಾಜಶೇಖರ ವಿಳಾಸ
- ಶ್ರೀಕೃಷ್ಣ ಗಾರುಡಿಗ
- ನವಯುಗದೆಡೆಗೆ
- ರತ್ನಹಾರ
- ಘೂಷ್ಮಾ
- ಸವತಿ ಮತ್ಸರ
- ನಲ್ಲೂರು ನಂಬೆಕ್ಕ
- ಅಸ್ಪ್ರಷ್ಯೋದ್ಧಾರ
- ದೇವರ ದುಡ್ಡು
ಕನ್ನಡದಲ್ಲಿ ರಚಿಸಿದ ಪ್ರಮುಖ ಪುರಾಣಗಳು
- ಕಲಬುರ್ಗಿ ಶರಣಬಸವೇಶ್ವರ ಪುರಾಣ
- ಶಿವಲಿಂಗೇಶ್ವರ ಪುರಾಣ
- ಅಂಕಲಗಿ ಅಡವಿ ಸಿದ್ಧೇಶ್ವರ ಪುರಾಣ
- ಚೆನ್ನಬಸವ ಸ್ವಾಮೀಜಿ ಪುರಾಣ
- ಹಾವೇರಿ ಶಿವಬಸವ ಸ್ವಾಮಿ ಪುರಾಣ
- ಅಕ್ಕಮಹಾದೇವಿ ಪುರಾಣ
- ಗಂಜೀಗಟ್ಟಿ ಚರಮೂರ್ತೇಶ್ವರ ಪುರಾಣ
- ಯೋಗಿರಾಜ ಪುರಾಣ
- ತ್ರಿಷಷ್ಠಿ ಪುರಾತನರ ಪುರಾಣ
- ಗುಳೇದ ಗಾದಿಲಿಂಗೇಶ್ವರ ಪುರಾಣ
- ಗುರುಸಿದ್ದೇಶ್ವರ ಪುರಾಣ
- ವೀರಭದ್ರೇಶ್ವರ ಪುರಾಣ
- ಮುಂಡರಗಿ ಅನ್ನದಾನೇಶ್ವರ ಪುರಾಣ
- ಹೇಮರೆಡ್ಡಿ ಮಲ್ಲಮ್ಮ ಪುರಾಣ
- ಗುಡ್ಡಾಪೂರ ದಾನಮ್ಮದೇವಿ ಪುರಾಣ
- ಚಿಕೇನಕೊಪ್ಪದ ಚೆನ್ನವೀರ ಶರಣರ ಪುರಾಣ
- ನಾಲ್ವತವಾಡ ವೀರೇಶ್ವರ ಶರಣರ ಪುರಾಣ
ಹಿಂದಿಯಲ್ಲಿ ರಚಿಸಿದ ಕೃತಿಗಳು
- ಬಸವೇಶ್ವರ ಪುರಾಣ
- ಸಿದ್ಧಲಿಂಗ ವಿಜಯ ಪುರಾಣ
- ಸಿದ್ಧಾಂತ ಶಿಖಾಮಣಿ
- ಕುಮಾರ ಮಹಾ ಶಿವಯೋಗಿ
- ಗುರು ಪಂಚಾಕ್ಷರ ಶಿವಯೋಗಿ ಚರಿತ್ರೆ
ಸಂಸ್ಕೃತದಲ್ಲಿ ರಚಿಸಿದ ಕೃತಿಗಳು
ಸಂಗೀತ ಕೃತಿಗಳು
ಪ್ರಮುಖ ನಾಟಕಗಳು
- ನೆಲ್ಲೂರು ನೆಂಬಕ್ಕ
- ಶಿವಶರಣ ಚೆನ್ನಯ್ಯ
- ಶ್ರೀ ಭಗವಾನ್ ಬಸವೇಶ್ವರ
- ಶ್ರೀ ಗುರು ದರ್ಶನ
- ಹಾನಗಲ್ಲ ಕುಮಾರೇಶ್ವರ ಮಹಾತ್ಮೆ
- ಶಿವಯೋಗಿ ಸಿದ್ಧರಾಮೇಶ್ವರ
- ಶಿವಶರಣ ಮೋಳಗಿ ಮಾರಯ್ಯ
- ಶಿರಹಟ್ಟಿ ಶ್ರೀ ಫಕೀರೇಶ್ವರ ಮಹಾತ್ಮೆ
- ಶಿವಶರಣೆ ಉಡತಡಿ ಅಕ್ಕಮಹಾದೇವಿ
- ದೇವರದುಡ್ಡು
- ಸತಿ ಸುಕನ್ಯ
- ದಾನವೀರ ಶಿರಸಂಗಿ
- ಲಿಂಗರಾಜರು
- ಮಿಂಚು
- ಸವತಿ ಮಾತ್ಸರ್ಯ
- ಶ್ರೀ ರಾಜಶೇಖರ ವಿಲಾಸ
- ಮಹಾರತಿ ಭೀಷ್ಮ
- ಕೊಟ್ಟೂರು ಬಸವೇಶ್ವರ
- ಸ್ತ್ರೀ ಪ್ರೇಮ
- ಮಗನ ಪ್ರೇಮ
- ಶ್ರೀ ಕೃಷ್ಣ ಗಾರುಡಿ
- ಅಪ್ರಕಟಿತ ನಾಟಕ
- ಗೂಷ್ಮಾದೇವಿ
ಬ್ರೇಲ್ ಲಿಪಿಯ ಕೃತಿ
ಹಿಂದಿ ಕೃತಿಗಳು
ಇತರ ಕೃತಿಗಳು
- ಚಂಪೂ ಕಾವ್ಯ
- ಅಷ್ಟಾವರಣ ಕಥಾ ಕೀರ್ತನ ಮಾಲಿಕೆ
- ಹಾನಗಲ್ಲ ಶ್ರೀ ಕುಮಾರ ಶಿವಯೋಗಿ
- ತತ್ವ ಬೋಧಾಮೃತ
- ಕದರಿ ರೇಮಯ್ಯ
- ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ನಾಮಾವಳಿ
- ಶ್ರೀ ಪಂಚಾಕ್ಷರಿ ಗವಾಯಿ
- ಪ್ರಸಾದ ಮಹಿಮೆ
- ಶ್ರೀ ಗುರುವಚನ ಪ್ರಭ
- ಭಾವ ಮಂದಾಕಿನಿ
- ವ್ಯಾಖ್ಯಾನ ರತ್ನ ಮಾಲಿಕೆ
- ಗುರು ವಚನ ಪ್ರಭ
ಪತ್ರಿಕಾ
೧೯೬೯ ನವೆಂಬರ ೧೦ರಂದು “ಪಂಚಾಕ್ಷರವಾಣಿ” ಎನ್ನುವ ಮಾಸಪತ್ರಿಕೆಯನ್ನು ಪ್ರಾರಂಭಿಸಿ ಪತ್ರಿಕಾಪ್ರಪಂಚಕ್ಕೂ ಸಹ ಪುಟ್ಟರಾಜರು ಕಾಲಿಟ್ಟರು.
ವಾದ್ಯಗಳು
‘ಉಭಯ ಗಾಯನ ವಿಶಾರದ’ (ಹಿಂದೂಸ್ತಾನಿ, ಕರ್ನಾಟಕ ಸಂಗೀತ), ‘ಸಕಲ ವಾದ್ಯ ಕಂಠೀರವ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗವಾಯಿಯವರು ಸಾರಂಗಿ, ಪಿಟೀಲು, ವೀಣೆ, ಮೆಂಡೋಲಿಯನ್, ಸರೋದ್, ತಬಲಾ, ಹಾರ್ಮೋನಿಯಂ, ಸಂತೂರ್, ಸಿತಾರ್ ಮತ್ತಿತರ ವಾದ್ಯಗಳನ್ನು ಅತ್ಯಂತ ಸುಶ್ರಾವ್ಯವಾಗಿ, ಲೀಲಾಜಾಲವಾಗಿ ನುಡಿಸುವುದರಲ್ಲಿ ನಿಪುಣರಾಗಿದ್ದರು.
ಸನ್ಮಾನ
ಪುಟ್ಟರಾಜ ಗವಾಯಿಗಳ ಸಾಧನೆ ಹಾಗು ಸಲ್ಲಿಸಿದ ಸೇವೆಗಾಗಿ ಅವರಿಗೆ ಸಂದಿರುವ ಪುರಸ್ಕಾರಗಳು ಅನೇಕ.
- ೧೯೫೯ರಲ್ಲಿ ಸುತ್ತೂರು ಮಠದಿಂದ “ಸಾಹಿತ್ಯ ಸಂಗೀತ ಕಲಾಪ್ರವೀಣ” ಪ್ರಶಸ್ತಿ
- ೧೯೬೫ರಲ್ಲಿ ಬನವಾಸಿ ವಿರಕ್ತ ಮಠದಿಂದ “ಸಮಾಜ ಸೇವಾ ಧುರೀಣ” ಪ್ರಶಸ್ತಿ
- ೧೯೭೦ರಲ್ಲಿ ಶ್ರೀ ಮ.ನಿ.ಪ್ರ. ನೀಲಲೋಚನ ಸ್ವಾಮಿಗಳಿಂದ “ತ್ರಿಭಾಷಾ ಕವಿರತ್ನ ಪ್ರಶಸ್ತಿ”
- ೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ
- ೧೯೭೬ರಲ್ಲಿ ಮೂರುಸಾವಿರ ಮಠ, ಹುಬ್ಬಳ್ಳಿ ಇವರಿಂದ “ಸಾಹಿತ್ಯ ಸಂಗೀತ ಕಲಾಚಕ್ರವರ್ತಿ” ಪ್ರಶಸ್ತಿ
- ೧೯೮೧ರಲ್ಲಿ ಮುರುಘಾಮಠ,ಧಾರವಾಡ ಇವರಿಂದ “ಧರ್ಮಭೂಷಣ” ಪ್ರಶಸ್ತಿ
- ೧೯೮೯ರಲ್ಲಿ ಶ್ರೀ ಶಾಂತಲಿಂಗೇಶ್ವರ ಸಂಸ್ಥಾನಮಠ, ಆಷ್ಟಗಿ ಇವರಿಂದ “ಕಲಾಜನಕ” ಪ್ರಶಸ್ತಿ
ಸಂದ ಪ್ರಶಸ್ತಿ, ಪುರಸ್ಕಾರಗಳು
- ೧೯೭೦ರಲ್ಲಿ ರಾಜ್ಯೋತ್ಸವ ಪ್ರಶಸ್ತಿ- 1970
- ೧೯೭೫ರಲ್ಲಿಕರ್ನಾಟಕ ವಿವಿ ಗೌರವ ಡಾಕ್ಟರೇಟ್
- ೧೯೯೮ರಲ್ಲಿರಾಜ್ಯ ಸರ್ಕಾರದ ಕನಕ ಪುರಂದರ ಪ್ರಶಸ್ತಿ
- ೧೯೯೮ರಲ್ಲಿಕನ್ನಡ ವಿವಿಯಿಂದ ‘ನಾಡೋಜ’
- ೧೯೯೯ರಲ್ಲಿಕೇಂದ್ರ ಸಾಹಿತ್ಯ ನಾಟಕ ಅಕಾಡೆಮಿ ಪ್ರಶಸ್ತಿ
- ೨೦೦೨ರಲ್ಲಿ‘ಬಸವಶ್ರೀ’ ಪ್ರಶಸ್ತಿ
- ೨೦೦೦ರಲ್ಲಿಕೇಂದ್ರ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಇಲಾಖೆ ಪ್ರಶಸ್ತಿ
- ೧೯೯೩ರಲ್ಲಿದಸರಾ ಸಂಗೀತ ವಿದ್ವಾನ್ ಪ್ರಶಸ್ತಿ
- ೧೯೯೧ರಲ್ಲಿಶಿಕ್ಷಣ ಇಲಾಖೆಯ ಪ್ರಶಸ್ತಿ
- ೧೯೬೧ರಲ್ಲಿ ಹಿಂದಿಯಲ್ಲಿ ‘ಬಸವಪುರಾಣ’ ರಚಿಸಿದ ಪುಟ್ಟರಾಜರಿಗೆ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಸತ್ಕಾರ
- ಮಧ್ಯಪ್ರದೇಶ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಕಾಳಿದಾಸ್ ಸಮ್ಮಾನ್
- ೨೦೧೦ ರಲ್ಲಿ ಪದ್ಮಭೂಷಣ ಪ್ರಶಸ್ತಿ
ತುಲಾಭಾರ
ಪುಟ್ಟರಾಜರು ತುಲಾಭಾರಗಳ ಚಕ್ರವರ್ತಿಗಳು. ರಾಜ್ಯ ಹಾಗು ಹೊರ ರಾಜ್ಯ ಮತ್ತು ಉತ್ತರ ಕರ್ನಾಟಕದ ಬಹುತೇಕ ಗ್ರಾಮಮಗಳ ಎಲ್ಲಾ ವರ್ಗದ ಭಕ್ತಸಮೂಹ ಒಟ್ಟು ೨೨೮೦ಕ್ಕೂ ಅಧಿಕ ತುಲಾಭಾರಗಳು ನಡೆದಿದ್ದು, ಆ ಮೂಲಕ ಬಂದ ಹಣವನೆಲ್ಲ ಅಂಧ, ಅನಾಥ, ಅಂಗವಿಕಲ ವಿದ್ಯಾರ್ಥಿಗಳ ವಸತಿ, ಊಟ ಮತ್ತಿತರ ಸೌಲಭ್ಯಕ್ಕಾಗಿ ವ್ಯಯಿಸಿರುವುದು ವಿಶೇಷ. ಪುಟ್ಟರಾಜರಿಗೆ ಸಂದ ತುಲಾಭಾರ ಗಿನ್ನೆಸ್ ದಾಖಲೆಗಳ ಪುಸ್ತಕ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ.
ಅಪೂರ್ಣ ತುಲಾಭಾರ
ಪೂರ್ವ ನಿಗದಿಯಂತೆ ಶ್ರೀಗಳ ೯೭ನೇ ಜನ್ಮದಿನದ ಅಂಗವಾಗಿ ಅದ್ದೂರಿ ಸುವರ್ಣ ತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈಗಾಗಲೇ ಸುವರ್ಣ ತುಲಾಭಾರ ನಡೆಸಲು ಅಗತ್ಯ ಸಿದ್ಧತೆಗಳು ಶುರುವಾಗಿದೆ. ನಾಡು ಕಂಡರಿಯದ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶ್ರೀಗಳಿಗೆ ಗುರುವಂದನೆ ಸಲ್ಲಿಸಲಾಗುವುದು ಎಂದು ಸಚಿವರು ಹೇಳಿದ್ದರು .
ಶಿಷ್ಯ ವೃಂದ
ಪಂಡಿತ್ ಬಸವರಾಜ್ ರಾಜಗುರು, ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತಿಕಟ್ಟಿ, ಪಂ.ರಾಜಗುರು ಗುರುಸ್ವಾಮಿ ಕಲಿಕೇರಿ ಎಂ.ವೆಂಕಟೇಶ ಕುಮಾರ್, ಬಸವರಾಜ್ ಗೋನಾಳ, ಡಿ.ಕುಮಾರದಾಸ್, ಫಕೀರೇಶ ಕಣವಿ, ಶಿವರಾಜ್ ಗವಾಯಿ, ಸಿದ್ಧರಾಮ ಗವಾಯಿ ಕೋರವಾರ್, ಪಂ. ಬಿ.ಎಸ್. ಮಠ ಪಂ.ಚನ್ನವೀರ ಶಾಸ್ತ್ರಿ ಹಿರೇಮಠ ಕಡಣಿ, ಪುಣ್ಯಾಶ್ರಮದಲ್ಲಿಯೇ ಅಭ್ಯಾಸ ಮಾಡಿ ಖ್ಯಾತಿಗೆ ಒಳಗಾದವರಲ್ಲಿ ಪ್ರಮುಖರು
ವರನಟನಿಗೆ ಪುಟ್ಟರಾಜ ಗವಾಯಿಗಳ ಪಾಠ
ಕನ್ನಡದ ಮೇರು ನಟ, ನಟ ಸಾರ್ವಭೌಮ ಡಾ.ರಾಜಕುಮಾರ ಅವರಿಗೆ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಮೂರು ತಿಂಗಳು ಇದ್ದು ಸಂಗೀತ ಅಭ್ಯಾಸ ಮಾಡಿದ್ದಾರೆ.ಅಂಧ ಅನಾಥ ಮಕ್ಕಳ ಪಾಲಿಗೆ ಬೆಳಕಾಗಿ ಅವರ ಬದುಕಿನಲ್ಲಿ ಹೊಸ ಬಾಷ್ಯ ಬರೆದ ಪುಟ್ಟರಾಜ ಗವಾಯಿಗಳ ಬಗ್ಗೆ ರಾಜ್‌ರಿಗೆ ವಿಶೇಷ ಭಕ್ತಿ ಇತ್ತು. ನಾಡಿನಲ್ಲಿ ಸ್ಮರಣೀಯ ಸೇವೆಯಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳ ನೆರವಿಗೆಗಾಗಿ ವರನಟ ೧೯೮೨ರಲ್ಲಿ ಗದುಗಿನಲ್ಲಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಪವಿತ್ರ ಸ್ಥಳವಾದ ಪುಣ್ಯಾಶ್ರದಲ್ಲಿ ಅಂಧರಿಂದ ಪ್ರತಿಧ್ವನಿಸುತ್ತಿದ್ದ ಸಂಗೀತದ ಸ್ವರಗಳು ಕಂಡು ಆಶ್ಚರ್ಯಚಕಿತರಾದ ಡಾ.ರಾಜ್ ಅವರು ವೀರೇಶ್ವರ ಪುಣ್ಯಾಶ್ರಮದಲ್ಲಿ ೩ ತಿಂಗಳುಕಾಲ ಉಳಿದುಕೊಂಡು ಪೂಜ್ಯರಿಂದ ಸಂಗೀತ ಅಭ್ಯಾಸ ಮಾಡಿದ್ದನ್ನು ಪುಣ್ಯಾಶ್ರಮದ ಭಕ್ತರು ಇಂದಿಗೂ ಮೆಲುಕು ಹಾಕುತ್ತಾರೆ. ಶ್ರೀಮಠದ ಬಗ್ಗೆ ರಾಜ್‌ಗೆ ಇದ್ದ ಅಭಿಮಾನದ ಕಾರಣದಿಂದ ಮುಂದೆ ‘ಗಾನಯೋಗಿ ಪಂಡಿತ ಪಂಚಾಕ್ಷರ ಗವಾಯಿ’ ಹೆಸರಿನಲ್ಲಿ ನಿರ್ಮಾಣವಾದ ಕನ್ನಡ ಚಲನಚಿತ್ರದಲ್ಲಿ ಗಾಯಕರಾಗಿ ‘ಗಾನಯೋಗಿ ಗುರುವೇ’ ಎನ್ನುವ ಗೀತೆಯನ್ನು ಹಾಡುವ ಮೂಲಕ ‘ಸಾವಿರದ ಶರಣು...’ ಗವಾಯಿಗಳಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಾಜ್ ತಮ್ಮ ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹಾಡಿದ ‘ಗಾನಯೋಗಿ ಗುರುವೇ’ ಗೀತೆ ಇವತ್ತಿಗೂ ಜನಮಾನಸದಲ್ಲಿ ಉಳಿದಿದ್ದು, ಗದುಗಿನ ತುಂಬಾ ಯಾವುದೇ ಸ್ಥಳದಲ್ಲೂ ಶುಕ್ರವಾರ ಈ ಹಾಡು ಮಾರ್ಧನಿಸುತ್ತಿತ್ತು.[೧] Archived 2010-09-23 ವೇಬ್ಯಾಕ್ ಮೆಷಿನ್ ನಲ್ಲಿ.
ಲಿಂಗೈಕ್ಯ
೧೭-೦೯-೨೦೧೦ ರಂದು ಮದ್ಯಾಹ್ನ ಪುಟ್ಟರಾಜ ಗವಾಯಿಯವರು ಲಿಂಗೈಕ್ಯರಾದರು.
ವೀರೇಶ್ವರ ಆಶ್ರಮದಲ್ಲಿ ಚಿಕಿತ್ಸೆ
ಬೆಳಗಾವಿಯಲ್ಲಿ ವೈದ್ಯಕೀಯ ಚಿಕಿತ್ಸೆ ಫಲಿಸದೇ ಅವರನ್ನು ಗದುಗಿಗೆ ಕರೆ ತರುವ ವ್ಯವಸ್ಥೆಯಾಗಿತ್ತು.ಆಶ್ರಮಕ್ಕೆ ಕಾಲಿಟ್ಟ ಕೂಡಲೇ ಪುಟ್ಟರಾಜ ಗವಾಗಳು ಚೇತರಿಸಿಕೊಂಡು ವೈದ್ಯರಿಗೆ ಅಚ್ಚರಿ ಮೂಡಿಸಿದರು. ಪ್ರತಿದಿನ ಹಗಲು ರಾತ್ರಿ ಭಕ್ತರು ಪೂಜ್ಯರ ದರ್ಶನ ಮಾಡಿದರು. ಐದು ದಿನಗಳ ಕಾಲ ಭಕ್ತರಿಗೆ ಮುಕ್ತ ದರ್ಶನ ನೀಡುವ ಇಚ್ಚಾ ಶಕ್ತಿ ಅವರಲ್ಲಿತ್ತೆಂದು ತೋರುತ್ತದೆ. ಕಳೆದ ಹಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಸೋಮವಾರ ತೀವ್ರ ಅನಾರೋಗ್ಯಕ್ಕೆ ಒಳಗಾದ ಅವರನ್ನು ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಅವರ ಅಶಯದಂತೆ ಗದಗಿನ ವೀರೇಶ್ವರ ಆಶ್ರಮಕ್ಕೆ ಕರೆದುಕೊಂಡು ಬರಲಾಗಿತ್ತು. ಆಸ್ಪತ್ರೆ ಯಲ್ಲಿ ದೇಹತ್ಯಾಗ ಮಾಡುವ ಮನಸ್ಸಿಲ್ಲದೆ ತಾವು ಕಟ್ಟಿ ಬೆಳೆಸಿದ ಆಶ್ರಮದಲ್ಲಿ ನಿಶ್ಚಿಂತೆಯಿಂದ ದೇಹ ಬಿಟ್ಟರು.
ಕೆ.ಎಚ್.ಪಾಟೀಲ ಕ್ರೀಡಾಂಗಣದಲ್ಲಿ ದರ್ಶನ
ವೀರೇಶ್ವರ ಪುಣ್ಯಾಶ್ರಮದಲ್ಲಿ ಗವಾಯಿಗಳಿಗೆ ಪಾರ್ಥಿವ ಶರೀರಕ್ಕೆ ಧಾರ್ಮಿಕ ವಿಧಿ-ವಿಧಾನಗಳ ಅನುಸಾರವಾಗಿ ಪೂಜೆ ನೆರವೇರಿಸಿದ ನಂತರ ಭಕ್ತರ ದರ್ಶನಕ್ಕಾಗಿ ಕೆ.ಎಚ್.ಪಾಟೀಲ ಕ್ರೀಡಾಂಗಣದಲ್ಲಿ ಇಡಲಾಯಿತು. ಹಾವೇರಿ, ಧಾರವಾಡ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ ಮತ್ತಿತರ ಕಡೆಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ಗುರುವಿನ ದರ್ಶನ ಪಡೆದರು. ಕರ್ನಾಟಕದ ಇತಿಹಾಸದಲ್ಲಿ ಇಷ್ಟೊಂದು ಜನ ಸೇರಿದ ಉದಾಹರಣೆಗಳಿಲ್ಲವಂತೆ. ಯಾವುದೆ ರೀತಿಯ ಗಲಾಟೆ ಇಲ್ಲದೆ ಗದಗ ಭಕ್ತರು ನೆರದಿದ್ದ ಜನರಿಗೆ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿದರು. ದಾನಿಗಳ ಈ ಸ್ವಯಂ ಪ್ರೇರಿತ ಸೇವೆಯಲ್ಲಿ ಗವಾಗಳ ಸಾಧನೆ ಇದೆ, ಆಧುನಿಕ ಪವಾಡವಿದೆ. ಲಕ್ಷ ದುಡಿದವರು ಐವತ್ತು ಸಾವಿರ ರೂಪಾ ಖರ್ಚು ಮಾಡಿದರೆ ಹತ್ತು ರೂಪಾ ದುಡಿದವರು ಐದು ರೂಪಾ ಖರ್ಚು ಮಾಡಿ ತಮ್ಮ ಭಕ್ತಿ ಮೆರೆದರು. ಒಂದು ರೂಪಾಯಿಗೆ ಜಗಳವಾಡುವ ಆಟೋದವರು ಪುಕ್ಕಟೆಯಾಗಿ ಜನರನ್ನು ಕರೆತಂದರು. ಹಣಕೊಟ್ಟರೂ ಸೇರದ ಜನ ಅಪಾರ ಸಂಖ್ಯೆಯಲ್ಲಿ ನೆರೆದು ರಾಜಕಾರಣಿಗಳನ್ನು ಬೆಚ್ಚಿಬಿಳಿಸಿದರು.
ಅಹೋರಾತ್ರಿ ಶಿಷ್ಯರ ಗಾಯನ
ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯ ಎಂ.ವೆಂಕಟೇಶ ಕುಮಾರ, ನರಸಿಂಹ ವಡವಾಟು ಸೇರಿದಂತೆ ರಾಷ್ಟ್ರ- ಅಂತರರಾಷ್ಟ್ರೀಯ ಖ್ಯಾತಿ ಹೊಂದಿರುವ ಕಲಾವಿದರು ಅಹೋರಾತ್ರಿ ಗಾಯನ ಮಾಡುವುದರೊಂದಿಗೆ ಗುರುವಿಗೆ ಅಂತಿಮ ನಮನ ಸಲ್ಲಿಸಿದರು.
ಅಂತಿಮ ನಮನ
ಗವಾಯಿಗಳ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಗದಗಿಗೆ ಬಂದಿದ್ದರು. ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಪಂ! ಪುಟ್ಟರಾಜ ಗವಾಯಿ ಅವರಿಗೆ ಅಂತಿಮ ನಮನ ಸಲ್ಲಿಸಿದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಟ್ಟರಾಜ ಗವಾಯಿ ಅವರು ಅಂಧ ಹಾಗೂ ಅನಾಥರ ಕಣ್ಮಣಿ ಆಗಿದ್ದರು ಎಂದರು. ಗವಾಯಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರಕ್ಕಾಗಿ ಸುಮಾರು ೪೫೦ ಮಂದಿ ಸ್ವಾಮೀಜಿಗಳು ಪಂಚಾಕ್ಷರಿ ಗವಾಯಿ ಅವರ ಗದ್ದುಗೆ ಸಮೀಪದಲ್ಲಿಯೇ ವೀರಶೈವ ಧಾರ್ಮಿಕ ವಿಧಿವಿಧಾನಗಳ ಮೂಲಕ ಸಮಾಧಿಯ ಸಿದ್ದತೆ ನಡೆಸಿದ್ದರು. ಸಮಾಧಿಯ ಶುದ್ದೀಕರಣ, ಪೂಜೆಗೆ ಆಕಳ ಹಾಲು, ಮೊಸರನ್ನು ಬಳಸಲಾಗಿತ್ತು. ವೀರಶೈವ ಧರ್ಮದ ಅನುಸಾರವಾಗಿ ರುದ್ರಾ ಭಿಷೇಕ ಪಾದೋದಕ ಪ್ರಸಾದಗಳ ಮೂಲಕ ಗವಾಯಿ ಅವರ ಅಂತ್ಯಸಂಸ್ಕಾರವನ್ನು ಸಕಲ ಸರಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. [೨][ಶಾಶ್ವತವಾಗಿ ಮಡಿದ ಕೊಂಡಿ] ಚಿರನಿದ್ರೆಗೆ ಜಾರಿದ ಸಂಗೀತ ಸಾಮ್ರಾಟ ಪಂಡಿತ ಪುಟ್ಟರಾಜ ಗವಾಯಿ ಅವರ ಪಾರ್ಥಿವ ಶರೀರವನ್ನು ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಇರುವ ಪಂಡಿತ ಪಂಚಾಕ್ಷರ ಗವಾಯಿಗಳ ಗದ್ದುಗೆಯ ಪಕ್ಕದಲ್ಲಿಯೇ ಸಕಲ ಧಾರ್ಮಿಕ ವಿಧಿವಿಧಾನ ಹಾಗೂ ಸರಕಾರಿ ಗೌರವಗಳೊಂದಿಗೆ ಶನಿವಾರ ಸಂಜೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.[೩]
ದೇವಗಿರಿ
ತಮ್ಮ ತಾಯಿಯ ಊರಾದ ದೇವಗಿರಿಯೊಂದಿಗಿನ ತಮ್ಮ ನಂಟನ್ನು ಮಾತ್ರ ಪುಟ್ಟರಾಜರು ಬಿಡಲೇ ಇಲ್ಲ. ಪ್ರತಿವರ್ಷ ಬಂದು, ನಾಲ್ಕಾರು ದಿನ ತಮ್ಮ ಶಿಷ್ಯ ಹಾಗೂ ಸಂಬಂಧಿ ಶಿವಮೂರ್ತಯ್ಯ ಶಾಸ್ತ್ರಿಗಳ ಮನೆಯಲ್ಲಿ ತಂಗಿ ಹೋಗುತ್ತಿದ್ದರು. ಪುಟ್ಟರಾಜ ಗವಾಯಿಗಳು ವಯಸ್ಸಾಗಿದ್ದರಿಂದ ನಾಲ್ಕೈದು ವರ್ಷಗಳಿಂದ ಬರಲು ಸಾಧ್ಯವಾಗಿರಲಿಲ್ಲ. ಸಂಗೀತ ಸಾಮ್ರಾಟನ ಸ್ಮರಣಿಕೆಗಳಾದ ಸಂಗೀತ ವಾದ್ಯಗಳು ದೇವಗಿರಿಯ ಗ್ರಾಮದಲ್ಲಿವೆ.
-
ಸುಂದರವಾದ ಪತ್ರೀವನದ ವಿಹಂಗಮ ನೋಟ
-
ಪುಟ್ಟರಾಜರ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿರುವ ಪತ್ರೀವನ
-
ಸಂಗೀತ ಸಾಮ್ರಾಟನ ಸ್ಮರಣಿಕೆಗಳಾದ ಸಂಗೀತ ವಾದ್ಯಗಳು
-
ಸುಂದರ ಹಾಗೂ ಪವಿತ್ರವಾದ ಪತ್ರೀವನದ ಮೇಲೆತ್ತರದಲ್ಲಿದೆ ಗಿರಿ ಮಲ್ಲೇಶ್ವರನ ಸನ್ನಿಧಿ
ಚಿತ್ರ ಗ್ಯಾಲರಿ
ಪುಟ್ಟರಾಜ ಗವಾಯಿ ಚಿತ್ರ ಗ್ಯಾಲರಿ
-
ಪುಟ್ಟರಾಜ ಗವಾಯಿ
-
ಪುಟ್ಟರಾಜ ಗವಾಯಿ
ಇತ್ತೀಚಿನ ವರ್ಷಗಳಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳ ಪಟ್ಟಿ ಇಂತಿದೆ.
ಹೆಸರು | ಸೇವೆ ಸಲ್ಲಿಸಿದ ವರ್ಷಗಳು | ಹುಟ್ಟಿದ ಊರು | ಪೂರ್ವಾಶ್ರಮದ ಹೆಸರು |
---|---|---|---|
ಪಂಚಾಕ್ಷರಿ ಗವಾಯಿಗಳು | ೧೯೧೪-೧೯೪೪ | ಕಾಡಶೆಟ್ಟಿಹಳ್ಳಿ | ವೀರೇಶ್ವರ ಪುಣ್ಯಾಶ್ರಮ |
ಪುಟ್ಟರಾಜ ಗವಾಯಿಗಳು | ೧೯೪೪-೨೦೧೦ | ವೆಂಕಟಾಪುರ | ವೀರೇಶ್ವರ ಪುಣ್ಯಾಶ್ರಮ |
ಕಲ್ಲಯ್ಯಜ್ಜನವರು | ೨೦೧೦- | ಕಲ್ಲೂರು | ವೀರೇಶ್ವರ ಪುಣ್ಯಾಶ್ರಮ |
ಹೊರಗಿನ ಸಂಪರ್ಕಗಳು
ಗಾನ ನಿಲ್ಲಿಸಿದ ಗಾನ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಯು-ಟ್ಯುಬನಲ್ಲಿ ಪುಟ್ಟರಾಜರ ವಿಡಿಯೊ ಯು-ಟ್ಯುಬನಲ್ಲಿ ಪುಟ್ಟರಾಜರ ವಿಡಿಯೊ ನ್ಯೂಸ್ -೯ ಹುಟ್ಟೂರಲ್ಲಿ ಪುಟ್ಟಯ್ಯನಿಗೊಂದು ಶಾಶ್ವತ ನೆಲೆ Archived 2011-09-18 ವೇಬ್ಯಾಕ್ ಮೆಷಿನ್ ನಲ್ಲಿ. 'ಗದುಗಿನ ನಡೆದಾಡುವ ದೇವರು' -ಪುಟ್ಟರಾಜ .. Archived 2010-09-23 ವೇಬ್ಯಾಕ್ ಮೆಷಿನ್ ನಲ್ಲಿ. Thousands Mourn Music Doyen Puttaraj Gavai's Passing Archived 2011-07-08 ವೇಬ್ಯಾಕ್ ಮೆಷಿನ್ ನಲ್ಲಿ. ಗಾಯನ ಮುಗಿಸಿದ ಗವಾಯಿ -ಸಂಪದಲ್ಲಿ Archived 2010-09-23 ವೇಬ್ಯಾಕ್ ಮೆಷಿನ್ ನಲ್ಲಿ. ಗಾಯನ ಮುಗಿಸಿದ ಗವಾಯಿ-ಪ್ರಜಾವಾಣಿ Archived 2010-09-23 ವೇಬ್ಯಾಕ್ ಮೆಷಿನ್ ನಲ್ಲಿ. ‘ಸಕಲ ವಾದ್ಯ ಕಂಠೀರವ’ Archived 2010-09-23 ವೇಬ್ಯಾಕ್ ಮೆಷಿನ್ ನಲ್ಲಿ. ನಿಂತ ಹಾಡು, ಅನಾಥ ಆಶ್ರಮ Archived 2010-09-23 ವೇಬ್ಯಾಕ್ ಮೆಷಿನ್ ನಲ್ಲಿ. ಕೃತಿಗಳು[ಶಾಶ್ವತವಾಗಿ ಮಡಿದ ಕೊಂಡಿ] ಊರುಗೋಲು ಕಣ್ಮರೆಯಾಯ್ತು... Archived 2010-09-23 ವೇಬ್ಯಾಕ್ ಮೆಷಿನ್ ನಲ್ಲಿ. ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಲಿಂಗೈಕ್ಯ ಪುಟ್ಟರಾಜರ ಗೂಗಲ್ ನ್ಯುಸ್ ಪುಟ್ಟರಾಜರ ವಿಡಿಯೊ