ಮಾಸ್ತಕಟ್ಟಿ ಇದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಒಂದು ಗ್ರಾಮ, ಈ ಊರಿನ ಮೊದಲ ಹೆಸರು ಬಾಗಪೂರ ಎಂದು ಹೇಳುತ್ತಾರೆ. ಆದರೆ ಆ ಬಾಗಪೂರದಿಂದ ಜನ ಸ್ಥಳಾಂತರ ಹೊಂದಿ ಬಾಗಲಪೂರದ ದಕ್ಷಿಣ ದಿಕ್ಕಿಗೆ ಸುಮಾರು ಎರಡು ಕಿಮೀ ದೂರದಲ್ಲಿ ಬಂದು ನೆಲೆ ನಿಂತಿತ್ತಾರೆ ಎಂದು ತಿಳಿಯುತ್ತದೆ.ಈ ಊರಿಗೆ ಮಾಸ್ತಕಟ್ಟಿ ಎಂದು ಶಾಲಾ ದಾಖಲಾತಿಯಲ್ಲಿದೆ,ಮಾಸಕಟ್ಟಿ, ಮಾಸಗಟ್ಟಿ , ಎಂದು ಜನರ ಉಚ್ಚಾರಣೆಯಿಂದ ಬರುತ್ತವೆ, ಇನ್ನೂ ಮಾಸ್ತಿಕಟ್ಟೆ ಎಂದು ಮತದಾರರ ಪಟ್ಟಿಯಲ್ಲಿದೆ, ಇನ್ನೂ ಮುಂದುವರೆದು ನೋಡುವುದಾದರೆ ಗೂಗಲ್ ಮ್ಯಾಪ್ ನಲ್ಲಿ ಮಸ್ತ್ಕಟ್ಟಿ (mastkatti) ಎಂದು ಬರುತ್ತದೆ.

ಪ್ರಮುಖ ಘಟನೆಗಳು

ಬದಲಾಯಿಸಿ
  • ಬಾಗಪೂರ ಎಂಬ ಇತಿಹಾಸ ಹೊಂದಿರುವ ಈ ಊರು ಈಗಿನ ಮಾಸ್ತಕಟ್ಟಿ ಗ್ರಾಮದ ಉತ್ತರ ದಿಕ್ಕಿಗೆ ಸುಮಾರು ಎರಡು ಕಿಮೀ ದೂರದಲ್ಲಿದೆ ಮಲ್ಲಪ್ಪ ಐಯ್ಯನಕೊಂಡಿ ಎಂಬುವರು ಇಂದಿನ ಹೊಲ (ಗದ್ದೆ) ಅಂದಿನ ಬಾಗಲಪೂರ ಇದ್ದ ಸ್ಥಳವಾಗಿದೆ.ಇಲ್ಲಿ ರಾಜರ ಕಾಲದಲ್ಲಿ ಆಹಾರ ಅಥವಾ ಮದ್ದು ಗುಂಡು ಸಂಗ್ರಹಿಸುವ ಹುಡೇವು (ಊಡೆ) ಅದು ಕಾರಣಾಂತರಗಳಿಂದ ಸಂಪೂರ್ಣ ನೆಲಸಮಾಗಿದೆ.ಇಲ್ಲಿಯೇ ಮಾಸ್ತಕಟ್ಟಿ ಗ್ರಾಮದ ಇಂದಿನ ಹನುಮಂತ ದೇವರ ಮೂರ್ತಿ ಬಾಗಪೂರ ಎಂಬ ಗ್ರಾಮದಿಂದ ತರಲಾಗಿದೆ ಎಂದು ಐತಿಹ್ಯಗಳಿವೆ.2000 ಇಸವಿ ಕಾಲದಲ್ಲಿ ಇಲ್ಲಿ ಊಡೆ ಮತ್ತು ಹನುಮಂತ ದೇವರ ದೇವಸ್ಥಾನ ತಳಹದಿ ಇದ್ದು ಇಂದು ಅದು ನೆಲಸಮವಾಗಿದೆ.
"https://kn.wikipedia.org/w/index.php?title=೨೦೦೦&oldid=1247664" ಇಂದ ಪಡೆಯಲ್ಪಟ್ಟಿದೆ