ಮಧ್ಯ ಪ್ರದೇಶ

. ಭಾರತದ ಒಂದು ರಾಜ್ಯ
(ಮಧ್ಯಪ್ರದೇಶ ಇಂದ ಪುನರ್ನಿರ್ದೇಶಿತ)

ಮಧ್ಯ ಪ್ರದೇಶ ಹೆಸರು ಸೂಚಿಸುವಂತೆ ಮಧ್ಯ ಭಾರತದಲ್ಲಿರುವ ಒಂದು ರಾಜ್ಯ. ಮಧ್ಯ ಪ್ರದೇಶದ ಒಟ್ಟು ವಿಸ್ತೀರ್ಣ ೩೦೮,೨೫೨ ಚ. ಕೀ.(೧೧೯,೦೧೭ ಚ.ಮೈಲಿ) ಇದರ ರಾಜಧಾನಿ ಭೋಪಾಲ. ನವೆಂಬರ್ ೧, ೨೦೦೦ದಲ್ಲಿ ಮಧ್ಯ ಪ್ರದೇಶದಿಂದ ಛತ್ತೀಸ್‍ಘಡವನ್ನು ರಚಿಸುವ ಮೊದಲು, ಕಳೆದ ಶತಮಾನದ ಕೊನೆಯವರೆಗೂ ಇದು ಭಾರತದಲ್ಲಿಯೇ ಅತ್ಯಂತ ದೊಡ್ಡ ರಾಜ್ಯವಾಗಿತ್ತು. ಈಗ ರಾಜಾಸ್ಥಾನ್ಆ ಮನ್ನಣೆಗೆ ಪಾತ್ರವಾಗಿದೆ. ಮಧ್ಯ ಪ್ರದೇಶದ ಕೆಲವು ಕ್ಷೇತ್ರಗಳ ಬಗ್ಗೆ ಪುರಾಣದಲ್ಲಿ ಉಲ್ಲೇಖವಿದೆ. ಮಧ್ಯ ಪ್ರದೇಶದ ರ್ಯಾಸೇನ್ ಜಿಲ್ಲೆಯಲ್ಲಿರುವ ಭೀಮ್ ಬೆಟ್ಕಾ ಗುಹೆಯಲ್ಲಿ ಒಂದು ಲಕ್ಷ ವರ್ಷಕ್ಕೂ ಹಿಂದೆ ಮಾನವ ವಸತೀತ್ತೆಂದು ಸ್ಥಳೀಯರು ನಂಬುತ್ತಾರೆ. ಇಲ್ಲಿರುವ ಅಪೂರ್ವ ಗುಹಾಚಿತ್ರಗಳು ೩೦ ಆವಿರವರ್ಷಕ್ಕೂ ಹಿಂದಿನವು.

{{{state_name}}}
Map of India with the location of {{{state_name}}} highlighted.
Map of India with the location of {{{state_name}}} highlighted.
ರಾಜಧಾನಿ
 - ಸ್ಥಾನ
ಭೋಪಾಲ
 - ೨೩.೧೭° N ೭೭.೨೧° E
ಅತಿ ದೊಡ್ಡ ನಗರ ಇಂದೋರ್
ಜನಸಂಖ್ಯೆ (೨೦೦೧)
 - ಸಾಂದ್ರತೆ
೬೦,೩೮೫,೧೧೮ (೭th)
 - ೧೯೬/km²
ವಿಸ್ತೀರ್ಣ
 - ಜಿಲ್ಲೆಗಳು
೩೦೮,೧೪೪ km² (೨nd)
 - ೪೮
ಸಮಯ ವಲಯ IST (UTC+5:30)
ಸ್ಥಾಪನೆ
 - [[ {{{state_name}}} ರಾಜ್ಯದ ರಾಜ್ಯಪಾಲರು|ರಾಜ್ಯಪಾಲ]]
 - [[{{{state_name}}} ರಾಜ್ಯದ ಮುಖ್ಯಮಂತ್ರಿಗಳು|ಮುಖ್ಯ ಮಂತ್ರಿ]]
 - ಶಾಸನಸಭೆ (ಸ್ಥಾನಗಳು)
ನವೆಂಬರ್ ೧, ೧೯೫೬
 - ಆನಂದಿಬೇನ್ ಪಟೇಲ್
 - ಕಮಲ್ ನಾಥ್
 - Unicameral (೨೩೧)
ಅಧಿಕೃತ ಭಾಷೆ(ಗಳು) ಹಿಂದಿ
Abbreviation (ISO) IN-MP
ಅಂತರ್ಜಾಲ ತಾಣ: www.mp.nic.in

{{{state_name}}} ರಾಜ್ಯದ ಮುದ್ರೆ

ವಿಭಾಗಗಳು

ಬದಲಾಯಿಸಿ

ಮಧ್ಯ ಪ್ರದೇಶ ರಾಜ್ಯದಲ್ಲಿ ಒಟ್ಟು ೪೫ ಜಿಲ್ಲೆಗಳಿದ್ದು ಅವುಗಳನ್ನು ೮ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಆ ಎಂಟು ವಿಭಾಗಗಳೆಂದರೆ :

೧. ಭೂಪಾಲ್ : ಭೂಪಾಲ್, ರ್ಯಾಸೆನ್,ರಾಜ್ ಗರ್, ಸೆಹೋರ್, ಮತ್ತು ವಿದಿಶಾ ಜಿಲ್ಲೆಗಳು.

೨. ಗ್ವಾಲಿಯರ್ : ಅಶೋಕನಗರ, ಧಾತಿಯಾ, ಗುಣಾ, ಗ್ವಾಲಿಯರ್, ಮತ್ತು ಶಿವಪುರಿ ಜಿಲ್ಲೆಗಳು.

೩. ಇಂದೋರ್ : ಬಾರ್ವಾನಿ, ಬುರ್ಹಾನ್ ಪುರ್, ಧಾರ್, ಇಂದೋರ್, ಝುಬುವಾ,ಖಾಂಡ್ವಾ, ಆಲಿರಾಜ್ ಪುರ್, ಮತ್ತು ಖಾರ್ಗೋಣೆ ಜಿಲ್ಲೆಗಳು.

೪. ಜಬಲ್ಪುರ್: ಬಾಲ್ ಘಾಟ್, ಛಿಂದ್ ವಾರಾ, ಜಬಲ್ ಪುರ್, ಕಟ್ನಿ, ಮಾಂಡ್ಲಾ, ನರಸಿಂಗ್ ಪುರ್,ಮತ್ತು ಸಿಯೋನಿ ಜಿಲ್ಲೆಗಳು.

೫. ರೇವಾ : ರೇವಾ, ಸತ್ನಾ, ಸೀಧೀ, ಮತ್ತು ಸಿಂಗ್ರೌಲಿ ಜಿಲ್ಲೆಗಳು.

೬. ಸಗರಂದ್ : ಛತ್ತರ್ ಪುರ್, ದಾಮೋಹ್, ಪನ್ನಾ, ಸಾಗರ್, ಮತ್ತು ಟಿಕಮ್ ಗರ್ ಜಿಲ್ಲೆಗಳು.

೭. ಉಜ್ಜಯಿನಿ : ದೇವಾಸ್, ಮಂದ ಸೌರ್, ನೀಮಚ್, ರತ್ಲಾಂ, ಶಾಜಾಪುರ್, ಮತ್ತು ಉಜ್ಜಯಿನಿ ಜಿಲ್ಲೆಗಳು.

೮. ಶಹಡೋಲ್ : ಶಾಹ್ ದೋಲ್, ಅನುಪ್ಪುರ್, ಡಿಂಡೋರಿ, ಮತ್ತು ಉಮಾರಿಯಾ ಜಿಲ್ಲೆಗಳು.

'ಹಿಂದಿ' ಮಧ್ಯಪ್ರದೇಶದ ಪ್ರಮುಖ ಭಾಷೆ. ಆ ಭಾಷೆಯ ಜನಪದ ರೂಪಗಳೂ ಇಲ್ಲಿ ಪ್ರಚಲಿತವಾಗಿವೆ. ಮಾಲ್ವಾದ ಮಾಲ್ವಿ, ನಿಮಾರ್ ನ ನಿಮಾಡಿ, ಬುಂದೇಲ್ ಖಂಡ್ಬುಂದೇಲಿ, ಬಾಗೇಲ್ ಖಂಡ್ ನ ಬಾಗೇಲಿ ಮತ್ತು ಅವಧಿ-ಇವೆಲ್ಲಾ ಹಿಂದಿ ಭಾಷೆಯ ರೂಪಾಂತರಗಳು.ಭಿಲೋಡಿ (ಭಿಲ್ ಭಾಷೆ), ಗೊಂಡಿ, ಕೋರ್ಕು, ಕಾಲ್ಟೋ (ನಿಹಾಲಿ)- ಇವು ಮಧ್ಯಪ್ರದೇಶದ ಕೆಲವು 'ಆದಿವಾಸಿ ಭಾಷೆಗಳು'. ಮಧ್ಯ ಪ್ರದೇಶದ ಹಲವು ಭಾಗಗಳಲ್ಲಿ ಎರಡು ಶತಮಾನಕ್ಕೂ ಹೆಚ್ಚು ಕಾಲ ಮರಾಠರು ಆಡಳಿತ ನಡೆಸಿದ್ದ ಕಾರಣ 'ಮರಾಠಿ' ಮಾತಾಡುವ ಜನ ಹೆಚ್ಚಾಗಿದ್ದಾರೆ. ಭೂಪಾಲ್ ನ ಆಸುಪಾಸಿನಲ್ಲೂ 'ಆಫ್ಘಾನಿಸ್ತಾನ', ಮತ್ತು 'ವಾಯವ್ಯ ಪಾಕಿಸ್ತಾನ'ದಿಂದ ವಲಸೆಬಂದು ನೆಲೆಸಿರುವ ಸಾಕಷ್ಟು ಬುಡಕಟ್ಟಿನ ಜನರಿದ್ದಾರೆ. ಅವರು, ’ಸರ್ಯಾಕಿ’ ಮತ್ತು ’ಪಾಶ್ತೋ’ ಭಾಷೆಯನ್ನು ಆಡುತ್ತಾರೆ.

ಉಜ್ಜೈನಿ ನಗರದ ವೈಶಿಷ್ಟ್ಯತೆಗಳು

ಬದಲಾಯಿಸಿ

ಮಧ್ಯಪ್ರದೇಶದ 'ಉಜ್ಜಯನಿ'ಯಲ್ಲಿ ಪ್ರಸಿದ್ಧ ಸಂಸ್ಕೃತ ಕವಿ, 'ಕಾಳಿದಾಸ'ನು ಜೀವಿಸಿದ್ದನೆಂಬ (ಕ್ರಿ.ಶ ೩೭೫ ರಿಂದ ೪೧೫ ರವರೆಗೆ) ಪ್ರತೀತಿಯಿದೆ. ಪುರಾಣಕಾಲದಲ್ಲಿ ಈ ನಗರಕ್ಕೆ ಆವಂತಿಕಾನಗರವೆಂದು ಹೆಸರಿತ್ತು. ಈ ನಗರಕ್ಕೆ, ಆವಂತಿ, ಆವಂತಿಕಾಪುರಿ, ಆವಂತಿಕಾ, ಕುಶಸ್ತಲಿ, ಭಾಗಾವತಿ, ಕುಮುದ್ವತಿ, ಹಿರಣ್ಯಾವತಿ,ವಿಶಾಲಾ, ಎಂಬೆಲ್ಲಾ ಹೆಸರುಗಳಿದ್ದವು. ಇಲ್ಲಿಯೇ 'ಕೃಷ್ಣ-ಬಲರಾಮ'ರು ಶಿಕ್ಷಣ ಪಡೆದ 'ಸಂದೀಪನಿ ಮಹರ್ಷಿಯ ಆಶ್ರಮ'ವೂ ಇದೆ. 'ಶಿಪ್ರಾನದಿ'ಯ ದಂಡೆಯಮೇಲಿರುವ ಉಜ್ಜೈನ್ ನಲ್ಲಿ ಮಹಾಕಾಲೇಶ್ವರ್ ಮಂದಿರವಿದೆ. ಈಶ್ವರ ಪ್ರತಿರೂಪವಾದ ಇಲ್ಲಿ ಅರ್ಚಿಸಲಾಗುತ್ತದೆ. ಭಾರತದಲ್ಲಿ ಪ್ರಖ್ಯಾತವಾಗಿರುವ ೧೨ ಜ್ಯೋತಿರ್ಲಿಂಗಗಳಲ್ಲಿ 'ಸ್ವಯಂಭು'ವಾಗಿರುವ ಈ ಶಿವಲಿಂಗ ಹೆಚ್ಚು ಶಕ್ತಿಶಾಲಿಯೆಂದು ಭಕ್ತರು ನಂಬಿದ್ದಾರೆ. ಕಾಳಿದಾಸನು ತನ್ನ ಕಾವ್ಯಗಳಲ್ಲಿ ವರ್ಣಿಸಿ ಪ್ರಶಂಸಿರುವುದು ಕಂಡುಬರುತ್ತದೆ. ಈ ಶಿವಲಿಂಗದ ವೈಶಿಷ್ಟ್ಯವೆಂದರೆ, ದಕ್ಷಿಣದಕಡೆ ಮುಖಮಾಡಿಕೊಂಡಿರುವುದು. ಅದೂ ಅಲ್ಲದೆ ಶಿವನ ವಾಹನವಾದ ನಂದಿಯ ವಿಗ್ರಹವೂ ದಕ್ಷಿಣದಿಕ್ಕಿಗಿದೆ. ಅದ್ದರಿಂದ ಈ ಲಿಂಗಕ್ಕೆ 'ದಕ್ಷಿಣಾಮೂರ್ತಿ'ಯೆಂದು ಹೆಸರುಬರಲು ಕಾರಣವಾಯಿತು. ಮಹಾಕಾಲನ ಮಂದಿರ ೫ ಅಂತಸ್ತಿನ ಭವ್ಯ ಮಂದಿರವಾಗಿದ್ದು ವಿಶಾಲ ಪ್ರಾಂಗಣ ಸರೋವರವನ್ನು ಹೊಂದಿದೆ. ನೆಲಾಂತಸ್ತಿನಿಂದ ಕೆಳಭಾಗದ ಲಿಂಗಕ್ಕೆ ಸದಾಕಾಲವೂ ನೀರು ಮತ್ತು ಹಾಲಿನ ಅಭಿಷೇಕ ಮಾಡುತ್ತಿರುತ್ತಾರೆ. ಲಿಂಗದ ಸುತ್ತಲೂ ಸತತವಾಗಿ ಅಗೋಚರ ಕಿರಣಗಳು ಬರುವುದರಿಂದ ಇದರ ಎದುರಿಗೆ ೩ ನಿಮಿಷವೂ ನಿಲ್ಲಲು ಆಗುವುದಿಲ್ಲ. ಪ್ರತಿ ದೀಪಾವಳಿಯ ದಿನ 'ದೀಪೋತ್ಸವ' ಅದ್ಧೂರಿಯಾಗಿ ನಡೆಯುತ್ತದೆ. ೩ ನೆಯ ಅಂತಸ್ತಿನಲ್ಲಿರುವ 'ನಾಗಚಂದ್ರೇಶ್ವರ ಮಂದಿರ' ನಾಗರಪಂಚಮಿಯ ದಿನ ಮಾತ್ರವೇ ಭಕ್ತರಿಗೆ ತೆರೆದಿರುತ್ತದೆ. ಭಕ್ತಗಣವೇ ಸ್ವತಃ ತಮ್ಮ ಕೈನಿಂದ ಅರ್ಚನೆ ಮಾಡಿ ನಮಸ್ಕರಿಸಬಹುದು.ಉಜ್ಜಯನಿಯ ಹರಿಸಿದ್ಧಿಮಂದಿರ್, ೫೨ ಶಕ್ತಿ ಪೀಠಗಳಲ್ಲೊಂದಾಗಿದೆ. 'ಗರುಡಪುರಾಣ'ದಲ್ಲಿ ಭಾರತದ ೭ ಪವಿತ್ರ ಕ್ಷೇತ್ರಗಳಲ್ಲಿ ಒಂದೆಂದು ಗುರುತಿಸಲಾಗಿತ್ತು.(ಅಯೋಧ್ಯೆ, ಮಥುರಾ, ಕಾಶಿ, ಕಾಂಚಿ, ಆವಂತಿಕಾ, ಪುರಿ, ದ್ವಾರಾವತಿ) ಏಪ್ರಿಲ್ ನಿಂದ ಜೂನ್ ವರೆಗೆ ಬೇಸಿಗೆ ಕಾಲ, ೪೫ ಡಿಗ್ರಿ ಉಷ್ಣತೆ ಯಿದ್ದು ಪ್ರವಾಸಕ್ಕೆ ಅನುಕೂಲವಿಲ್ಲ. ಮಳೆಗಾಲ,ಜೂನ್ ನಿಂದ ಸೆಪ್ಟೆಂಬರ್ ವರೆಗೆ, ನವೆಂಬರ್-ಫೆಬ್ರವರಿ ವರೆಗೆ ಚಳಿಗಾಲ, ಹಗಲಿನ ವೇಳೆ, ೨೦ ಡಿಗ್ರಿ ಉಷ್ಣತೆ, ರಾತ್ರಿ ಸೊನ್ನೆ ಡಿಗ್ರಿ ಇರುತ್ತದೆ. ಹಾಗಾಗಿ ಅಲ್ಲಿಗೆ ಭೆಟ್ಟಿಕೊಡಲು ಅತ್ಯುತ್ತಮ ವಾದ ಸಮಯವೆಂದರೆ, ಅಕ್ಟೋಬರ್ ನಿಂದ ಜನವರಿಯವರೆಗೆ,

ಪ್ರತಿ ೧೨ ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಯುತ್ತದೆ

ಬದಲಾಯಿಸಿ

ಆಗ ಲಕ್ಷಾಂತರ ಭಕ್ತಾದಿಗಳು ದೇಶವಿದೇಶಗಳಿಂದ ಬಂದು, ಇಲ್ಲಿನ ಪವಿತ್ರ ನದಿಯಲ್ಲಿ ಸ್ನಾನಮಾಡಿ,ಪುನೀತರಾಗುತ್ತಾರೆ. 'ನಾಗಾಸಾಧುಗಳು' ಹಾಗೂ 'ಅಘೋರಿ'ಗಳು ಇಲ್ಲಿ ನೆರೆದಿರುತ್ತಾರೆ. ನದಿಯ ಇಕ್ಕೆಲೆಗಳಲ್ಲಿ ಕಣ್ಣು ಹಾಯಿಸಿದ ಕಡೆಗಳಲ್ಲೆಲ್ಲಾ ದೇವಾಲಯಗಳ ಸಮೂಹವೇ ಗೋಚರಿಸುತ್ತದೆ. ಈ ನಗರದಲ್ಲಿ ಸಮಯವನ್ನು ಕರಾರುವಾಕ್ಕಾಗಿ ತಿಳಿಸುವ ಸಾಧನಗಳಿರುವುದರಿಂದ ಭಾರತದ ಗ್ರೀನ್ ವಿಚ್ ಎಂದು ಪ್ರಸಿದ್ದಿಯಾಗಿದೆ. 'ಜಂತರ್ ಮಂತರ್' ಎಂಬ ತಾಣದಲ್ಲಿ ಸಮಯವನ್ನು ನಿಖರವಾಗಿ ಮಾಪಿಸಲಾಗುತ್ತದೆ. ಇದೇ ತರಹದ 'ಜಂತರ್ ಮಂತರ್' ಗಳು ದೇಶದ ದೆಹಲಿ, ಜಯಪುರ್, ವಾರಾಣಾಸಿ, ಗಳಲ್ಲಿವೆ. ಜೈಪುರದ ರಾಜ ಈ ತರಹದ ವೀಕ್ಷಣಾಲಯವನ್ನು ನಿರ್ಮಿಸಿದ. 'ಖಗೋಳ ಶಾಸ್ತ್ರ'ದ ಬಗ್ಗೆ ಅರಿಯಲು ಬಯಸುವವರಿಗೆ, ಅಂತರಿಕ್ಷ, ಸೂರ್ಯ ಕಿರಣ, ಚಂದ್ರಬಿಂಬ, ನಕ್ಷತ್ರಗಳ ಚಲನೆ ಮುಂತಾದ ಗತಿವಿಧಿಗಳ ಬಗ್ಗೆ ತಿಳಿಸಲು ಅನೇಕ ಸಾಧನಗಳು ಕಣ್ಣಿಗೆ ಗೋಚರಿಸುತ್ತವೆ. ಇವುಗಳಿಂದ ಸಮಯದ ಪರಿಕಲ್ಪನೆಯನ್ನು ತಿಳಿಯಲು ಅನುಕೂಲ.

ಸಾಹಿತ್ಯ

ಬದಲಾಯಿಸಿ

ಮಹಾ ಜ್ಯೋತಿಷಿ, 'ವರಾಹ ಮಿಹಿರ' ಸಹಿತ ಉಜ್ಜಯಿನಿಯಲ್ಲಿ ವಾಸಿಸಿದ್ದರು. ಧಾರಾದ ರಾಜ 'ಭೋಜರಾಜನ ಆಸ್ಥಾನ'ದಲ್ಲಿ ಕವಿಗಳಿಗೆ ವಿಶೇಷ ಮನ್ನಣೆಯನ್ನು ಕೊಟ್ಟು ಆಶ್ರಯವನ್ನು ಕೊಡಲಾಗಿತ್ತು. ರಾಜಾ ಭೋಜ ಸ್ವತಃ ಒಬ್ಬ ಶ್ರೇಷ್ಟ ಕವಿಯಾಗಿದ್ದರು. ಹಲವಾರು ಕೃತಿಗಳನ್ನು ರಚಿಸಿದ್ದಾರೆ. 'ಧಾರ ನಗರ'ದಲ್ಲಿ ಭೋಜರಾಜರು ನಿರ್ಮಿಸಿದ 'ಸಂಸ್ಕೃತ ಪಾಠಶಾಲೆ' ಇಂದಿಗೂ ಇದೆ. ಶಾಲೆಯ ಗೋಡೆಗಳ ಮೇಲೆ ಸಂಸ್ಕೃತ ಭಾಷೆಯಲ್ಲಿ ಕೆತ್ತಿದ ಹಲವಾರು ಶ್ಲೋಕಗಳಿವೆ. ಮಧ್ಯಪ್ರದೇಶ ಇನ್ನೂ ಹಲವಾರು ಖ್ಯಾತ ಪಂಡಿತರಿಗೆ ತವರುಮನೆ. ಅವರುಗಳಲ್ಲಿ ಪ್ರಮುಖರು, 'ಧನಪಾಲ', 'ಭರ್ತುಹರಿ', 'ಆಶಾಧಾರ', 'ಮನತುಂಗ', 'ಬ್ರಹ್ಮಗುಪ್ತ', 'ಭಾಸ್ಕರಾಚಾರ್ಯ', ಮುಂತಾದವರು. 'ಚಂದ್ರಗುಪ್ತ ವಿಕ್ರಮಾದಿತ್ಯ ಮಹಾರಾಜ' ನ ಕಾಲದಲ್ಲಿ, 'ಧನ್ವಂತರಿ', 'ಕ್ಷಪಣಕ' (ಸಿದ್ಧಸೇನ) 'ಅಮರ ಸಿಂಹ', 'ಸಂಕು', 'ವೇತಾಲಭಟ್ಟ', 'ಘಟಕರ್ಪರ', 'ಕಾಳಿದಾಸ', 'ವರಾಹಮಿಹಿರ', ಮತ್ತು 'ವರರುಚಿ' ಎಂಬ ನವರತ್ನಗಳಿದ್ದರು. 'ಆಧುನಿಕ ಕಾಲದ ಕೆಲವು ಹೆಸರಾಂತ ಕವಿಗಳು', 'ಮಾಖನ್ ಲಾಲ್', 'ಚತುರ್ವೇದಿ', 'ಶರದ್ ಜೋಶಿ', 'ಗಜಾನನ', 'ಮಾಧವ ಮುಕ್ತಿ', 'ಬೊಧ' ಮತ್ತು 'ವಿನೋದ್ ಕುಮಾರ್', 'ಶುಕ್ಲಾ' ಮುಂತಾದವರು.

ನೃತ್ಯ-ಸಂಗೀತ

ಬದಲಾಯಿಸಿ

'ಮಧ್ಯ ಪ್ರದೇಶ' ಆದಿವಾಸಿಗಳ ರಾಜ್ಯ. ಯಾವುದೇ ಪರಕೀಯ ಆಚಾರ, ಸಂಸ್ಕೃತಿಗಳ ಸೋಂಕುತಾಗದೆ ಶತಮಾನಗಳ ಕಾಲದಿಂದಲೂ ತನ್ನ ದೇಶಿ ಸಂಕೃತಿಯ ಸ್ವಂತಿಕೆಯನ್ನು ಮಧ್ಯ ಪ್ರದೇಶ, ಕಾಪಾಡಿಕೊಂಡು ಬಂದಿದೆ. ಈ ಪ್ರದೇಶದ ಹಬ್ಬ ಹರಿದಿನಗಳಲ್ಲಿ ಮತ್ತು ಜಾತ್ರೆಗಳಲ್ಲಿ ಪುರಾತನಕಾಲದ ಅಪೂರ್ವ ಹಾಡು-ಕುಣಿಗಳಲ್ಲಿ ಶತಮಾನದ ಸಂಪ್ರದಯದ ಛಾಯೆಯನ್ನು ಕಾಣಬಹುದು. ಕರ್ಮಾ ನೃತ್ಯ'ಮಧ್ಯ ಪ್ರದೇಶ' ದ, ವಾಯವ್ಯ ಭಾಗದಲ್ಲಿ ನೆಲೆಸಿರುವ ಗೊಂಡ ಜನಸಮುದಾಯ, ಹಾಗೂ ಒರಾಂವ್ ಪಂಗಡ ಗಳ ಕುಣಿತ,'ಮಧ್ಯ ಪ್ರದೇಶ'ದ 'ಅತಿಪ್ರಾಚೀನ ಆದಿವಾಸಿ ನೃತ್ಯ ಪ್ರಕಾರ'ವೆಂದು ಪರಿಗಣಿಸಲ್ಪಟ್ಟಿದೆ. ದೇಶದ ಇತರೆ ಭಾಗಗಳಲ್ಲಿ ಇದರ ಭಿನ್ನ ರೂಪಗಳನ್ನು ಕಾಣಬಹುದು. ಈ ನೃತ್ಯಗಳನ್ನು ನಾವು ಹೆಚ್ಚಾಗಿ ಶರತ್ಕಾಲದ ಆರಂಭದಲ್ಲಿ ಇಲ್ಲವೇ ಮಳೆಗಾಲದ ಕೊನೆಯಲ್ಲಿ ಪ್ರದರ್ಶನಗೊಳ್ಳುವುದನ್ನು ಕಾಣಬಹುದು.

ಅರಣ್ಯ ಸಂಪತ್ತು

ಬದಲಾಯಿಸಿ

'ಮಧ್ಯಪ್ರದೇಶ,' ಅಪಾರ ಪ್ರಾಕೃತಿಕ ನಿಸರ್ಗ ಸಂಪನ್ನು ಹೊಂದಿದ ರಾಜ್ಯವಾಗಿದೆ. ಭಾರತದ ೧೨.೪ % ಪ್ರತಿಶತ್ ಅರಣ್ಯ ಇರುವುದು ಈ ರಾಜ್ಯದಲ್ಲೇ. ರಾಜ್ಯದ ೩೧ % ಪ್ರತಿಶತ್, (೯೫,೨೨೧ ಚ.ಕೀ.ಮೀ) ಭಾಗ ಅರಣ್ಯಗಳು ಆಕ್ರಮಿಸಿವೆ. ಮಧ್ಯ, ಪೂರ್ವ, ಮತ್ತು ದಕ್ಷಿಣ ಭಾಗಗಳಲ್ಲಿ ದಟ್ಟ ಅಡವಿಗಳಿದ್ದರೆ, ಉತ್ತರ ಮತ್ತು ಈಶಾನ್ಯ ಭೂಭಾಗಗಳಲ್ಲಿ, ಕುರುಚಲು ಗಿಡಗಳ ಪ್ರದೇಶಗಳಿವೆ.

ರಾಷ್ಟ್ರೀಯ ಉದ್ಯಾನಗಳು

ಬದಲಾಯಿಸಿ

ಒಟ್ಟು ೯ ರಾಷ್ಟ್ರೀಯ ಉದ್ಯಾನಗಳಿವೆ. ಭಾಂದವ್ ಘರ್, ಕಾನ್ಹಾ, ಸತ್ಪುರಾ, ಸಂಜಯ್, ಮಾಧವ್, ವನ್ ವಿಹಾರ್, ಮಾಂಡ್ಲಾ, ಪನ್ನಾ ಮತ್ತು ಪೆಂಚ್ ರಾಷ್ಟ್ರೀಯ ಉದ್ಯಾನಗಳು. ಇವಲ್ಲದೆ ಹಲವಾರು ಪ್ರಾಕೃತಿಕ ಸಂರಕ್ಷಣಾ ತಾಣಗಳಿವೆ. ಮಂಡ್ಲಾ ರಾಷ್ತ್ರೀಯ ಉದ್ಯಾನ ಸಸ್ಯ ಪಳೆಯುಳಿಕೆಗಳಿಗೆ ಸುಪ್ರಸಿದ್ಧವಾಗಿದೆ.

ತೆಂಡು ಎಲೆಗಳ ಕೈಗಾರಿಕೆ

ಬದಲಾಯಿಸಿ

'ಬೀಡಿ ಉದ್ಯಮ'ಕ್ಕೆ ಇವು ಅತ್ಯವಶ್ಯಕ. 'ತೆಂಡು ಎಲೆಗಳು' ಮಧ್ಯಪ್ರದೇಶದ ಅಡವಿಗಳಲ್ಲಿ ವಿಪುಲ ಮಾತ್ರದಲ್ಲಿ ದೊರೆಯುವುದರಿಂದ 'ಬೀಡಿ ಕೈಗಾರಿಕೆ' ಮಂಚೂಣಿಯಲ್ಲಿದೆ.

ಮಧ್ಯಪ್ರದೇಶದ ಖಾದ್ಯಗಳು

ಬದಲಾಯಿಸಿ

ವಿಶಾಲವಾದ ರಾಜ್ಯಗಳಲ್ಲಿ ಒಂದಾದ 'ಮಧ್ಯಪ್ರದೇಶ'ದ ಖಾದ್ಯಗಳು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬದಲಾಗುತ್ತವೆ. ಗೋಧಿ ಮತ್ತು ಮಾಂಸಾಹಾರದ ಖಾದ್ಯಗಳು ಉತ್ತರ ಹಾಗೂ ಪಶ್ಚಿಮಭಾಗದ ಮಧ್ಯಪ್ರದೇಶದಲ್ಲಿ ಹೆಚ್ಚು ಬಳಕೆಯಲ್ಲಿದೆ. ದಕ್ಷಿಣ ಹಾಗೂ ಪೂರ್ವ ಭಾಗಗಳಲ್ಲಿ ಅಕ್ಕಿ ಮತ್ತು ಮೀನಿನ ಆಹಾರಗಳು ಹೆಚ್ಚು ಪ್ರಚಲಿತದಲ್ಲಿವೆ. ಹಾಲು ಮತ್ತು ಹಾಲಿನ ಖಾದ್ಯಗಳು ಗ್ವಾಲಿಯರ್ ಮತ್ತು ಇಂದೂರ್ ನಗರಗಳಲ್ಲಿ ಹೆಚ್ಚು ತಯಾರಿಸಲ್ಪಡುತ್ತವೆ. ಮಾಳ್ವ ಪ್ರದೇಶದ ಅಡುಗೆಯಲ್ಲಿ ಸಸ್ಯಾಹಾರಕ್ಕೆ ಹೆಚ್ಚು ಪ್ರಾಶಸ್ತ್ಯಕೊಡುತ್ತಾರೆ. ಇಲ್ಲಿನ ಖಾದ್ಯಗಳಲ್ಲಿ ರಾಜಾಸ್ತಾನಿ ಮತ್ತು ಗುಜರಾತ್ ರಾಜ್ಯದ ಖಾದ್ಯಗಳ ಶೈಲಿಯ ಮಿಶ್ರಣವಿದೆ. ಜೋಳದೆ ತೆನೆ, ಮತ್ತು ಹಾಲಿನಿಂದ ಸಿದ್ಧವಾದ ಆಹಾರಪದಾರ್ಥಗಳಲ್ಲಿ ಅತಿ ಹೆಸರುವಾಸಿಯಾದ, 'ಭುಟ್ಟೇಕಿ ಕೀಸ್', 'ಗೋಧಿ ಹುಡ್', ಮತ್ತು ಮೊಸರಿನಲ್ಲಿ ತಯಾರಾದ 'ಚಕ್ಕೀ ಕಿ ಶಾಕ್' ಈ ಪ್ರದೇಶದ ಸ್ವಾದಿಷ್ಟ ತಿನಸುಗಳಲ್ಲಿ ಪ್ರಮುಖವಾಗಿ ಪರಿಗಣಿಸಲ್ಪಟ್ಟಿವೆ. ಸಿಹಿತಿಂಡಿಗಳ ಪಟ್ಟಿ ಹೀಗಿದೆ.

  • ಮಾವ ಭಾಟಿ,
  • ಖೋಪ್ರಾ ಪಾಕ್,
  • ಶ್ರೀ ಖಂಡ್,
  • ಮಾಲ್ ಪುವಾ,

ಭೂಪಾಲ್ ನಲ್ಲಿ ಮಾಂಸ ಮತ್ತು ಮೀನಿನಿಂದ ತಯಾರಾದ ಖಾದ್ಯಗಳು ಹೆಚ್ಚು ಬೇಡಿಕೆಯಲ್ಲಿವೆ.

  • ರೋಗನ್ ಜೋಶ್,
  • ಭೋಪಾಲೀ ಮುರ್ಗ್ ರೆಜಾಲಾ,
  • ಪನೀರ್ ರೆಜಾಲಾ,
  • ಗೋಷ್ಟ್ ಕೂರ್ಮಾ,
  • ಮುರ್ಗ್ ಹರಾ ಮಸಾಲಾ ಭತ್,
  • ಮುರ್ಗ್ ನಿಜಾಮೀ ಕೂರ್ಮಾ,
  • ಖೀಮಾ,
  • ಬಿರ್ಯಾನಿ
  • ಪಿಲಾಫ್,(ಪುಲಾವ್)
  • ಶಮ್ಮಿ ಕಬಾಬ್,
  • ಸೀಖ್ ಕಬಾಬ್ ಇತ್ಯಾದಿ.

ಬಾಫ್ಲಾ ರೊಟ್ಟಿ

ಬದಲಾಯಿಸಿ

'ದಾಲ್' ಜೊತೆಗೆ ಬಡಿಸಿಕೊಂಡು ಮೆಲ್ಲುವ 'ರೊಟ್ಟಿ' ಇಲ್ಲಿನ ವಿಶೇಷ ಊಟಗಳಲ್ಲೊಂದು.

'ಸುಲ್ಸಿ' ಎಂಬ ಬಗೆಯ ಮದ್ಯ

ಬದಲಾಯಿಸಿ

'ಮಹುವಾ ಮರದ ಹೂವು'ಗಳಿಂದ ತಯಾರಾಗುವ ಮದ್ಯವನ್ನು 'ಖರ್ಜೂರ' ಹಣ್ಣಿನಿಂದ ತಯಾರಿಸುತ್ತಾರೆ. 'ಪಾನಪ್ರಿಯ'ರಿಗೆ ಇದೊಂದು ಮುದಕೊಡುವ ಪೇಯವಾಗಿದೆ.

ರಸ್ತೆಬದಿಯ ಗಾಡಿಗಳಲ್ಲಿ ತಂದು ಮಾರುವ ಖಾದ್ಯಗಳು

ಬದಲಾಯಿಸಿ

'ಇಂದೂರ್ ನಗರ'ದಲ್ಲಿ ಇಂತಹ ಖಾದ್ಯಗಳನ್ನು ಮಾರುವ ಗಾಡಿಗಳು ಎಲ್ಲೆಡೆ ಲಭ್ಯವಿವೆ. ಈ ನಗರದ 'ಸರಾಫಾ ಬಜಾರ್', 'ಛಪ್ಪನ್ ದೂಕಾನ್',ಮುಂತಾದ ರಸ್ತೆಗಳಲ್ಲಿ 'ಪೋಹಾ ಜಿಲೇಬಿ', 'ಭುಟ್ಟೇ ಕೀ ಕೀಸ್', ಮುಂತಾದ ರುಚಿರುಚಿಯಾದ ಖಾದ್ಯಗಳು ಉಪಲಬ್ಧವಿವೆ.

ಸರ್ಕಾರ ಮತ್ತು ರಾಜಕೀಯ

ಬದಲಾಯಿಸಿ
  • ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಗಳು
  • ಮಧ್ಯಪ್ರದೇಶ 230 ಸ್ಥಾನಗಳುಳ್ಳ ರಾಜ್ಯ ಶಾಸನ ಸಭೆಯನ್ನು ಹೊಂದಿದೆ. ರಾಜ್ಯವು 40 ಸದಸ್ಯರನ್ನು ಭಾರತ ಸಂಸತ್ತಿಗೆ ಕಳುಹಿಸುತ್ತದೆ: 29 ಲೋಕಸಭೆಗೆ (ಕೆಳಮನೆ) ಮತ್ತು 11 ರಾಜ್ಯಸಭೆಗೆ (ಮೇಲ್ಮನೆ) ಆಯ್ಕೆ ಮಾಡಲಾಗುತ್ತದೆ. ರಾಜ್ಯದ ಸಂವಿಧಾನಾತ್ಮಕ ಮುಖ್ಯಸ್ಥರು ಭಾರತದ ಅಧ್ಯಕ್ಷರಿಂದ ನೇಮಕಗೊಂಡ ರಾಜ್ಯಪಾಲರಾಗಿದ್ದಾರೆ. ಮರಣದಂಡನೆ ಅಧಿಕಾರಗಳು ಮುಖ್ಯಮಂತ್ರಿಯೊಂದಿಗೆ ಇವೆ, ಅವರು ರಾಜ್ಯ ಶಾಸನಸಭೆಯ ಚುನಾಯಿತ ನಾಯಕರಾಗಿದ್ದಾರೆ. ಡಿಸೆಂಬರ್ 2018 ರ ಹೊತ್ತಿಗೆ, ಪ್ರಸ್ತುತ ಗವರ್ನರ್ ಅನಂದಿಬೆನ್ ಪಟೇಲ್ ಆಗಿದ್ದಾರೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ (ಐಎನ್ಸಿ)ಯ ಕಮಲ್ ನಾಥ್ ೧೭-೮-೨೦೧೮ರಿಂದ ಮುಖ್ಯಮಂತ್ರಿ ಆಗಿದ್ದಾರೆ.
  • ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ನೆರೆಯ ರಾಜ್ಯಗಳಂತೆ, ಸಣ್ಣ ಅಥವಾ ಪ್ರಾದೇಶಿಕ ಪಕ್ಷಗಳು ರಾಜ್ಯ ಚುನಾವಣೆಯಲ್ಲಿ ಹೆಚ್ಚು ಯಶಸ್ಸನ್ನು ಗಳಿಸಿಲ್ಲ. ನವೆಂಬರ್ 2018 ರ ರಾಜ್ಯ ಚುನಾವಣೆಯಲ್ಲಿ, ಬಿಜೆಪಿಯನ್ನು ಸೋಲಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 114 ಸ್ಥಾನಗಳನ್ನು ಹೊಂದಿರುವ ಏಕೈಕ ಅತಿದೊಡ್ಡ ಪಕ್ಷವಾಯಿತು. ಬಿಜೆಪಿ 109 ಸ್ಥಾನಗಳನ್ನು ಗೆದ್ದಿದೆ. ಬಹುಜನ ಸಮಾಜ ಪಕ್ಷವು ರಾಜ್ಯ ಶಾಸನಸಭೆಯಲ್ಲಿನ ಮೂರನೇ ಪ್ರಮುಖ ಪಕ್ಷವಾಗಿದ್ದು, 2 ಸೀಟುಗಳನ್ನುಪಡೆದಿದ್ದು ಇತರರು 5 ಸ್ಥಾನಗಳನ್ನು ಗೆದ್ದಿದ್ದಾರೆ.[][]
  • ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು; ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್ ನಾಥ್ ರಾಜೀನಾಮೆ

ಮಧ್ಯ ಪ್ರದೇಶದ ಜಿಲ್ಲೆಗಳು

ಬದಲಾಯಿಸಿ
  1. https://timesofindia.indiatimes.com/elections/assembly-elections/madhya-pradesh/results
  2. https://kannada.oneindia.com/ ವಿಧಾನಸಭೆ ಚುನಾವಣೆ ಫಲಿತಾಂಶ 2018