ಗ್ವಾಲಿಯರ್ ಭಾರತದ ಮಧ್ಯ ಪ್ರದೇಶ ರಾಜ್ಯದ ಒಂದು ಪ್ರಮುಖ ನಗರವಾಗಿದೆ ಮತ್ತು ಪ್ರತಿಚುಂಬಕ ನಗರಗಳಲ್ಲಿ ಒಂದಾಗಿದೆ. ಇದು ರಾಜ್ಯದ ರಾಜಧಾನಿ ಭೋಪಾಲ್‍ನಿಂದ ೪೧೪ ಕಿಲೋಮೀಟರ್ ದೂರವಿದೆ. ಗ್ವಾಲಿಯರ್ ಭಾರತದ ಗಿರ್ದ್ ಪ್ರದೇಶದಲ್ಲಿ ಒಂದು ಯೋಜಿತ ಸ್ಥಳವನ್ನು ಹೊಂದಿದೆ. ಈ ಐತಿಹಾಸಿಕ ನಗರ ಮತ್ತು ಅದರ ಕೋಟೆಯನ್ನು ಹಲವಾರು ಐತಿಹಾಸಿಕ್ ಉತ್ತರ ಭಾರತೀಯ ರಾಜ್ಯಗಳು ಆಳಿವೆ. ೧೦ನೇ ಶತಮಾನದಲ್ಲಿ ಕಚ್ಛಪಘಾತರು, ೧೩ನೇ ಶತಮಾನದಲ್ಲಿ ತೋಮರ್‌ರಿಂದ ಇದು ಮೊಘಲ್ ಸಾಮ್ರಾಜ್ಯಕ್ಕೆ ಹೋಯಿತು, ನಂತರ ೧೭೫೪ರಲ್ಲಿ ಮರಾಠರಿಗೆ ಹೋಯಿತು. ೧೮ನೇ ಶತಮಾನದಲ್ಲಿ ಸಿಂದಿಯಾರಿಗೆ ಹೋಯಿತು.[೧]

ಪ್ರವಾಸಿ ತಾಣಗಳು ಸಂಪಾದಿಸಿ

ಗ್ವಾಲಿಯರ್ ಕೋಟೆ ಸಂಪಾದಿಸಿ

 
ಗ್ವಾಲಿಯರ್ ಕೋಟೆಯ ಮುಂಬದಿಯ ನೋಟ
 
ಶಿಲೆಯಲ್ಲಿ ಕೆತ್ತಿದ ತೀರ್ಥಂಕರರ ವಿಗ್ರಹಗಳು.
 
ಕೋಟೆಯಿಂದ ಸಿಂದಿಯಾ ಅರಮನೆಯ ನೋಟ

ಗ್ವಾಲಿಯರ್‌ನ ಹೃದಯಭಾಗದಲ್ಲಿ ತೋಮರ ರಾಜವಂಶದ ಗ್ವಾಲಿಯರ್ ಕೋಟೆಯಿದೆ. ಇದು ಒಂದು ವಿವಿಕ್ತ ಬಂಡೆ ಹೊರಚಾಚಿನ ಮೇಲೆ ನಿಂತಿದೆ. ಗ್ವಾಲಿಯರ್‌ನ ಹಳೆ ಪಟ್ಟಣವು ಕೋಟೆಯ ಪೂರ್ವ ತಳಪಾಯದ ಪಕ್ಕವಿದೆ.

 
ಗ್ವಾಲಿಯರ್ ಕೋಟೆಯಿಂದ ಗುಜರಿ ಮೆಹೆಲ್ ಮತ್ತು ಹತ್ತಿರದ ಪ್ರದೇಶಗಳ ನೋಟ
 • ಗೋಪಾಚಲ ಪರ್ವತವು ಗ್ವಾಲಿಯರ ಕೋಟೆಯ ಇಳಿಜಾರು ಪ್ರದೇಶದಲ್ಲಿ ಪರ್ವತೀಯ ವಲಯದಲ್ಲಿ ಸ್ಥಿತವಾಗಿದೆ. ಗೋಪಾಚಲ ಪರ್ವತವು ಜೈನ ತೀರ್ಥಂಕರರ ಅನನ್ಯ ವಿಗ್ರಹಗಳನ್ನು ಹೊಂದಿದೆ.
 • ಮುನಿಸಿಪಾಲಿಟಿ ವಸ್ತುಸಂಗ್ರಹಾಲಯವು ರಾಣಿ ಲಕ್ಷ್ಮೀಬಾಯಿಯ ಸಮಾಧಿಯಿಂದ ಸ್ವಲ್ಪ ದೂರದಲ್ಲಿ ಸ್ಥಿತವಾಗಿದೆ.
   
  ಗ್ವಾಲಿಯರ್ ಪುರಸಭೆಯ ವಸ್ತುಸಂಗ್ರಹಾಲಯ
 • ಮಾಡರ್ನ್ 5ಡಿ ಮಧ್ಯ ಪ್ರದೇಶದ ಮೊದಲ ಬಹು ಆಯಾಮದ ರಂಗಮಂದಿರವಾಗಿದೆ.
 • ಒಂದು ಔತಣಕೂಟದ ಸಭಾಂಗಣವಾದ ಶ್ಯಾಮ್ ವಾಟಿಕಾ ವಿಶ್ವದ ಅತಿ ದೊಡ್ಡ ಒಳಾಂಗಣ ಭಿತ್ತಿಚಿತ್ರವನ್ನು ಹೊಂದಿದೆ.
 • ೧೫ನೇ ಶತಮನಾದ ಗುಜರಿ ಮೆಹೆಲ್ ರಾಜ ಮಾನ್‍ಸಿಂಗ್ ಟೊಮರ್ ಮತ್ತು ಅವನ ರಾಣಿ ಮೃಗ್‍ನಯನಿಯ ಪ್ರೀತಿಯ ಸ್ಮಾರಕವಾಗಿದೆ.
 • ೯ನೇ ಶತಮಾನದ ಸಾಸ್-ಬಹು ದೇವಾಲಯವು ತನ್ನ ಕಲಾತ್ಮಕ ಮೌಲ್ಯದಿಂದ ಭಕ್ತರ ಜೊತೆಗೆ ಪ್ರವಾಸಿಗಳನ್ನೂ ಆಕರ್ಷಿಸುತ್ತದೆ.
 
ತೇಲಿ ಕಾ ಮಂದಿರ್
 • ತೇಲಿ ಕಾ ಮಂದಿರ್ (ತೆಲಂಗಾಣ ಮಂದಿರ್) - ಸುಮಾರು ೧೦೦ ಅಡಿ ಎತ್ತರದ ರಚನೆಯಾದ ಇದು ತನ್ನ ಅನನ್ಯವಾದ ವಾಸ್ತುಕಲೆಯ ಕಾರಣ ಭಿನ್ನವಾಗಿದೆ.
 • ಕಲ್ಲಿನಲ್ಲಿ ಕೆತ್ತಿದ ಜೈನ ಶಿಲ್ಪಗಳು - ಗ್ವಾಲಿಯರ್ ಕೋಟೆಯಲ್ಲಿ ಗುಹೆಗಳ ಅಥವಾ ಕಲ್ಲಿನಲ್ಲಿ ಕೆತ್ತಿದ ಶಿಲ್ಪಗಳ ಸರಣಿಯಿದೆ. ಇವುಗಳ ಸಂಖ್ಯೆ ಸುಮಾರು ನೂರರಷ್ಟಿದೆ.
 • ಗುರುದ್ವಾರ ದತ್ತ ಬಂದಿ ಚೂಢ್- ಈ ಗುರುದ್ವಾರಾವನ್ನು ಆರನೇ ಸಿಖ್ ಗುರು ಗುರು ಹರ್ ಗೋಬಿಂದ್‍ರ ನೆನಪಿನಲ್ಲಿ ನಿರ್ಮಿಸಲಾಗಿದೆ.

ಜೈ ವಿಲಾಸ್ ಮೆಹೆಲ್ ಸಂಪಾದಿಸಿ

ಇದು ಗ್ವಾಲಿಯರ್‌ನ ಮರಾಠಾ ಅರಸರರಾದ ಸಿಂದಿಯಾಗಳ ವಾಸದ ಅರಮನೆಯಾಗಿದ್ದು ಈಗ ವಸ್ತುಸಂಗ್ರಹಾಲಯವಾಗಿದೆ.

ಐತಿಹಾಸಿಕ ಮಹತ್ವದ ಸಮಾಧಿಗಳು ಮತ್ತು ಛತ್ರಿಗಳು ಸಂಪಾದಿಸಿ

 
ಗೌಸ್ ಮೊಹಮ್ಮದ್ ಸಮಾಧಿ
 • ಸಿಂದಿಯಾಗಳ ಛತ್ರಿಗಳು ನಗರವನ್ನು ಆಳಿದ ಸಿಂದಿಯಾಗಳ ಹೂಳಿದ ಸ್ಥಳವಾಗಿದೆ.
 • ತಾನ್‍ಸೇನ್‍ನ ಸಮಾಧಿ: ಅಕ್ಬರ್‌ನ ನವರತ್ನಗಳಲ್ಲಿ ಒಬ್ಬನಾದ ಸಂಗೀತಗಾರ ತಾನ್‍ಸೇನ್‍ನ ಸಮಾಧಿಯಿದು.[೨]
 • ಘೌಸ್ ಮೊಹಮ್ಮದ್‍ನ ಗೋರಿ.
 • ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಸಮಾಧಿ: ಇದು ಫೂಲ್‍ಬಾಗ್ ಪ್ರದೇಶದಲ್ಲಿದೆ.
 
ಸೂರ್ಯ ದೇವಾಲಯ

ಸೂರ್ಯ ದೇವಾಲಯ ಸಂಪಾದಿಸಿ

ಮೋರಾರ್ ಕಂಟೋನ್ಮೆಂಟ್‌ನಲ್ಲಿ ಸ್ಥಿತವಾಗಿರುವ, ಸೂರ್ಯ ದೇವನಿಗೆ ಸಮರ್ಪಿತವಾದ ಸೂರ್ಯ ದೇವಾಲಯವನ್ನು ಕೊನಾರ್ಕ್‌ನ ಸೂರ್ಯ ದೇವಾಲಯದ ಯಥಾಪ್ರತಿಯಾಗಿ ವಿನ್ಯಾಸಗೊಳಿಸಲಾಗಿದೆ.

ಛಾಯಾಂಕಣ ಸಂಪಾದಿಸಿ

ಉಲ್ಲೇಖಗಳು ಸಂಪಾದಿಸಿ

 1. Lonely Planet. "History of Gwalior - Lonely Planet Travel Information". Archived from the original on 6 July 2015. Retrieved 28 July 2015.
 2. "Navratnas of Akbar (9 Gems) - General Knowledge Today". Gktoday.in. Archived from the original on 2 July 2015. Retrieved 13 June 2017.

ಹೊರಗಿನ ಕೊಂಡಿಗಳು ಸಂಪಾದಿಸಿ