ಛತ್ತೀಸ್‌ಘಡ್

ಭಾರತದ ರಾಜ್ಯ
(ಛತ್ತೀಸ್‍ಘಡ್ ಇಂದ ಪುನರ್ನಿರ್ದೇಶಿತ)
ಛತ್ತೀಸ್‍ಘಡ್
  • ಹೆಸರು= ಛತ್ತೀಸ್‍ಘಡ್| छत्तीसगढ़
  • ವಿಧ = ರಾಜ್ಯ
  • ನಕ್ಷೆ =
    ಚತ್ತಿಸ್‍ಗಡ

  • ಭಾರತದಲ್ಲಿ ಛತ್ತೀಸ್‍ಘಡ್‍ನ ಸ್ಥಳ
  • ದೇಶ = ಭಾರತ  ಭಾರತ
  • ಸ್ಥಾಪನೆ =ರಾಜ್ಯ
  • ಸ್ಥಾಪನೆ = ೧ ನವೆಂಬರ್ ೨೦೦೦
  • ಜಿಲ್ಲೆ = ೨೭ (೯ ಹೊಸ ಜಿಲ್ಲೆ)
  • ನಗರ ಹೆಸರು= ರಾಜಧಾನಿ ರಾಯ್ಪುರ್
  • ಶ್ರೇಣಿ = ಅತಿ ದೊಡ್ಡ ನಗರ
  • ಉನ್ನತ ಅಧಿಕಾರ = ರಾಜ್ಯಪಾಲ
  • ಅಧಿಕಾರಿಯ ಹೆಸರು = ಆನಂದಿ ಬೆನ್ ಪಟೇಲ್
  • ನಾಯಕ = ಮುಖ್ಯ ಮಂತ್ರಿ
  • ನಾಯಕನ ಹೆಸರು = ಭೂಪೇಶ್ ಬಾಗೇಲ್
  • ರಾಜಕೀಯ ಪಕ್ಷ= ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
  • ಚುನಾಯಿತ ಸಭೆ = ವಿಧಾನ ಮಂಡಲ
  • ಸಭೆ ವಿಧ = ಏಕಸಭೆ (೯೦ ಸ್ಥಾನಗಳು)
  • ಸಂಸತ್ ಪ್ರಾತಿನಿಧ್ಯ ರಾಜ್ಯಸಭಾ= 5
  • ಸಂಸತ್‍ ಲೋಕಸಭೆ =11
  • ಸಬೆಯ ಅವಧಿ = ೫ (ವರ್ಷ ೨೦೧೦)
  • ನ್ಯಾಯಾಂಗ = ಉಚ್ಚ ನ್ಯಾಯಾಲಯ
  • ಸ್ಥಾನ = ಛತ್ತೀಸ್‍ಘಡ್ ಉಚ್ಚ ನ್ಯಾಯಾಲಯ
  • ಮಾಪನ = Metric
  • ವಿಸ್ತೀರ್ಣ_km2 = 135194
  • ವಿಸ್ತೀರ್ಣ ಶ್ರೇಣಿ = 10th
  • ಒಟ್ಟು ಜನಸಂಖ್ಯೆ = 25540196
  • ಒಟ್ಟು ಜನಸಂಖ್ಯೆ = ೨೦೧೧
  • ಒಟ್ಟು ಜನಸಂಖ್ಯೆ ಶ್ರೇಣಿ = 16th
  • ಒಟ್ಟು ಜನಸಂಖ್ಯೆ ಸಾಂದ್ರತೆ_km2 = auto
  • ಕಾಲ = IST
  • ಸಮಯ= +05:30
.
ಛತ್ತೀಸ್ಗಢ ರಾಜ್ಯ ಮತ್ತು ಜಿಲ್ಲೆಗಳ ನಕ್ಷೆ
  • ರಾಯ್ಪುರ್ ಈ ರಾಜ್ಯದ ರಾಜಧಾನಿಯಾಗಿದೆ. ಇದು ಭಾರತದ ಹತ್ತನೆಯ ಅತಿ ದೊಡ್ಡ ರಾಜ್ಯವಾಗಿದ್ದು ಇದರ ವಿಸ್ತೀರ್ಣ ೫೨,೧೯೯ ಚದರ ಮೈಲಿಗಳಾಗಿದೆ (೧೩೫,೧೯೪ km²). ಛತ್ತೀಸ್‍ಘಡಿನ ಗಡಿಗಳು ಹೀಗಿವೆ; ವಾಯುವ್ಯದಲ್ಲಿ ಮಧ್ಯ ಪ್ರದೇಶ, ಪಶ್ಚಿಮದಲ್ಲಿ ಮಹಾರಾಷ್ಟ್ರ, ದಕ್ಷಿಣಕ್ಕೆ ತೆಲಂಗಾಣ, ಪೂರ್ವಕ್ಕೆ ಒಡಿಶಾ, ಈಶಾನ್ಯಕ್ಕೆ ಝಾರ್ಖಂಡ್ ಮತ್ತ್ತು ಉತ್ತರಕ್ಕೆ ಉತ್ತರ ಪ್ರದೇಶ.
  • {೦)ಛತ್ತೀಸ್ ಘರೀ ಭಾಷೆ{/0}, ಯು ಪೂರ್ವಭಾಗದ ಹಿಂದಿಯ ಒಂದು ಪ್ರಕಾರವಾಗಿದ್ದು, ಈ ರಾಜ್ಯದ ಪ್ರಮುಖ ಭಾಷೆಯಾಗಿದೆ ಹಾಗೂ ಹಿಂದಿ ಭಾಷೆಯೊಡನೆ ಈ ರಾಜ್ಯದ ಅಧಿಕೃತ ರಾಜ್ಯಭಾಷೆಯಾಗಿ ಸ್ಥಾನ ಪಡೆದಿದೆ. ಹಲವಾರು ಬುಡಕಟ್ಟಿನ ಹಾಗೂ ಕೆಲವು ದ್ರಾವಿಡ ಭಾಷಾ ಪ್ರಭಾವಿತ ಭಾಷಾ ರೂಪಗಳೂ ಅಥವಾ ಭಾಷೆಗಳೂ ಛತ್ತೀಸ್ ಘಡ್ ನ ವಿವಿಧ ಭಾಗಗಳಲ್ಲಿ ಮಾತನಾಡಲ್ಪಡುತ್ತವೆ.
  • ಛತ್ತೀಸ್ ಘಡ್ ಮೂಲತಃ ಒಂದು ಗ್ರಾಮೀಣ ರಾಜ್ಯವೇ ಆಗಿದ್ದು ನಗರಪ್ರದೇಶಗಳಲ್ಲಿ ಕೇವಲ ೨೦% ಜನರು ವಾಸಿಸುತ್ತಿದ್ದಾರೆ. ಛತ್ತೀಸ್ ಘಡ್ ನ ೨೦೦೪ನೆಯ ಇಸವಿಯ ರಾಜ್ಯದ ಗೃಹ ಉತ್ಪನ್ನವು ಒಟ್ಟಾರೆ ೧೨ ಬಿಲಿಯನ್ ಯು.ಎಸ್.ಡಾಲರ್ ಗಳಷ್ಟು ಎಂದು ಇಂದಿನ ಮೌಲ್ಯಗಳ ಆಧಾರದ ಮೇಲೆ ಅಂದಾಜಿಸಲಾಗಿದೆ. ವಿಭಾಗವಾದನಂತರ, ಈ ಖನಿಜ-ಶ್ರೀಮಂತ ರಾಜ್ಯವು ಹಳೆಯ ಮಧ್ಯಪ್ರದೇಶವು ಉತ್ಪಾದಿಸುತ್ತಿದ್ದ ಅದಿರಿನ ೩೦%ದಷ್ಟನ್ನು ಉತ್ಪಾದಿಸುತ್ತದೆ.
  • ಈ ರಾಜ್ಯದ ಹಣಕಾಸು ವ್ಯವಸ್ಥೆಗೆ ಭಿಲಾಯ್ ಉಕ್ಕಿನ ಕಾರ್ಖಾನಿಯ ಅಸ್ಥಿತ್ವ, ೆಸ್.ಇ.ಸಿ. ರೈಲ್ವೇ ವಿಭಾಗ, , BALCO ಅಲ್ಯುಮಿನಿಯಂ ಕಾರ್ಖಾನೆ (ಕೊರ್ಬಾ), ಮತ್ತು ನ್ಯಾಷನಲ್ ಪವರ್ ಥರ್ಮಲ್ ಕಾರ್ಪೊರೇಷನ್ (NTPC) ನ ಕೊರ್ಬಾ ಮತ್ತು ಸಿಪಾಟ್ (ಬಿಲಾಸ್ ಪುರ್) ವಿಭಾಗಗಳು ಹಾಗೂ ಸೌತ್ ಈಸ್ಟ್ರನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (SECL) ಗಳು ಸುಭದ್ರತೆಯನ್ನು ಒದಗಿಸಿವೆ.
  • ಕೊರ್ಬಾ ಮತ್ತು ಬಿಲಾಸ್ ಪುರ್ ಈ ರಾಜ್ಯದ ಶಕ್ತಿ ಕೇಂದ್ರಗಳಾಗಿದ್ದು, ಈ ಸ್ಥಳಗಳಿಂದ ಭಾರತದ ಇತರ ರಾಜ್ಯಗಳಿಗೆ ವಿದ್ಯುತ್ತನ್ನು ಸರಬರಾಜು ಮಾಡಲಾಗುತ್ತದೆ. ಛತ್ತೀಸ್ ಘಡ್ ನ ದಕ್ಷಿಣ ಪ್ರದೇಶದಲ್ಲಿ ಕಬ್ಬಿಣದ ಅದಿರು ಲಭ್ಯವಿದ್ದು ಎನ್.ಎಂ.ಡಿ.ಸಿ.ಯು ಅದಿರು ಉತ್ಖನನಕಾರ್ಯದಲ್ಲಿ ತೊಡಗಿದ್ದು ಭಾರತದ ಕಬ್ಬಿಣದ ಬೇಡಿಕೆಗಳನ್ನು ಪೂರೈಸುವುದೇ ಅಲ್ಲದೆ ಇತರ ದೇಶಗಳಿಗೂ ಕಬ್ಬಿಣವನ್ನು ರಫ್ತು ಮಾಡುತ್ತಿದೆ. ಎನ್.ಎಂ.ಡಿ.ಸಿ. ದಾಂತೇವಾಡಾ ಜಿಲ್ಲೆಯಲ್ಲಿದೆ. ಇತ್ತೀಚೆಗೆ ಇಎಸ್ ಎಸ್ ಎ ಆರ್ ಪೈಪ್ ಲೈನುಗಳ ಮೂಲಕ ಕಬ್ಬಿಣವನ್ನು ವಿಶಾಖಪಟ್ಟಣಕ್ಕೆ ರವಾನೆ ಮಾಡಲಾರಂಭಿಸಿದೆ. ಇತ್ತೀಚೆಗೆ ಮೂರು ಹೊಸ ಶಕ್ತಿ ಉತ್ಪಾದನಾ ಕಾರ್ಖಾನೆಗಳನ್ನು ಸುರಾಜೂರ್ ಜಿಲ್ಲೆಯ ಭೈಯಾತಾನ್ ಮತ್ತು ಪ್ರೇಮ್ ನಗರ್ ಗಳಲ್ಲಿ ಆರಂಭಿಸಲು ಆಲೋಚಿಸಲಾಗಿದೆ. ಈ ಶಕ್ತಿ ಉತ್ಪಾದನಾ ಕೇಂದ್ರಗಳನ್ನು ಆರಂಭಿಸಲು ಹಲವಾರು ಖಾಸಗಿ ಕಂಪನಿಗಳು ಒಂದೊಂದಾಗಿ ಹಾಗೂ ಒಟ್ಟಾಗಿ ಛತ್ತೀಸ್ ಘಡ್ ಸರ್ಕಾರದೊಡನೆ ಮುಂಕರಾರು ಪತ್ರಕ್ಕೆ ಸಹಿ ಹಾಕಿವೆ.
  • ಈ ರಾಜ್ಯವು ಜತ್ರೋಫಾ ಗಿಡಗಳನ್ನು ನೆಟ್ಟು ತನ್ಮೂಲಕ ಜೈವಿಕ ಇಂಧನವನ್ನು ಹೊಂದಿ ೨೦೧೫ರ ವೇಳೆಗೆ ಸ್ವಾವಲಂಬಿಯಾಗುವಂತಹ ಒಂದು ಆಶಾಪೂರಿತ ಯೋಜನೆಯನ್ನೂ ಹಮ್ಮಿಕೊಳ್ಳುತ್ತಲಿದೆ.
ಚಿತ್ರ:Seal of Chhattisgarh.png
Logo- Chattis Gad

ಹೆಸರಿನ ಮೂಲ

ಬದಲಾಯಿಸಿ

ಈ ರಾಜ್ಯಕ್ಕೆ ಛತ್ತೀಸ್ ಘಡ್ ಎಂದು ಹೆಸರು ಬರಲು ಕಾರಣ ಅದರಲ್ಲಿ ಅಡಕವಾಗಿರುವ ರಾಜರುಗಳು ಆಳುತ್ತಿದ್ದ ರಾಜ್ಯಗಳ ಸಂಖ್ಯೆ ೩೬ ಆಗಿದುವುದು!(ಛತ್ತೀಸ್ ಎಂದರೆ "೩೬", ಮತ್ತು ಘಡ್ ಎಂದರೆ "ಕೋಟೆ"). ಆ ಮೂವತ್ತಾರು ಯಾವುವೆಂದರೆ : ೧- ರತನ್ ಪುರ್, ೨- ವಿಜಯ್ ಪುರ್, ೩- ಖರೌಂಡ್, ೪- ಮಾರೋ, ೫- ಕೌಟ್ ಘಡ್, ೬- ನವಾಘಡ್, ೭- ಸೋಂಧಿ, ೮- ಔಖರ್, ೯- ಪದರ್ ಭಟ್ಟ, ೧೦- ಸೆಮ್ರಿಯಾ, ೧೧- ಚಂಪಾ, ೧೨- ಲಾಫಾ, ೧೩- ಛುರಿ, ೧೪- ಕೆಂಡ, ೧೫- ಮಾಟಿನ್, ೧೬- ಅಪರೋರಾ, ೧೭- ಪೆಂಡ್ರಾ, ೧೮- ಕುಕುಟಿ-ಖಂಡ್ರಿ, ೧೯- ರಾಜ್ ಪುರ್, ೨೦- ಪಟಾನ್, ೨೧- ಸಿಮಗಾ, ೨೨- ಸಿಂಗಾರ್ ಪುರ್, ೨೩- ಲವನ್, ೨೪- ಒಮೇರಾ, ೨೫- ದುರ್ಗ್, ೨೬- ಸರಧಾ, ೨೭- ಸಿರಸಾ, ೨೮- ಮೆನ್ ಹದಿ, ೨೯- ಖಲ್ಲಾರಿ, ೩೦- ಸಿರ್ ಪುರ್, ೩೧- ಫಿಗೇಶ್ವರ್, ೩೨- ರಾಜಿಮ್, ೩೩- ಇಂಘನ್ ಘಡ್, ೩೪- ಸುವರ್ಮರ್, ೩೫- ತೆಂಗನ್ ಘಡ್ ಮತ್ತು ೩೬- ಅಕಾಲ್ ತಾರಾ.[]

ಭೌಗೋಳಿಕತೆ

ಬದಲಾಯಿಸಿ

ಈ ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗಗಳು ಬೆಟ್ಟಗುಡ್ಡಗಳಿಂದ ಕೂಡಿದ್ದು, ಮಧ್ಯಭಾಗವು ಫಲವತ್ತಾದ ಸಮತಟ್ಟುಪ್ರದೇಶವಾಗಿದೆ. ರಾಜ್ಯದ ೪೪% ಭಾಗವು ಕಾಡುಗಳಿಂದ ಆವೃತವಾಗಿದೆ.

ರಾಜ್ಯದ ಉತ್ತರಭಾಗವು ನಹತ್ತರವಾದ ಸಿಂಧು-ಗಂಗಾ ಸಮತಟ್ಟುಪ್ರದೇಶದ ತುದಿಯಲ್ಲಿದೆ: ರೈಹಾಂಡ್ ನದಿಎಂಬ ಗಂಗಾನದಿಯ ಉಪನದಿಯು ಈ ಸ್ಥಳದಲ್ಲಿ ಹರಿಯುತ್ತದೆ. ಸತ್ಪುರ ಬೆಟ್ಟಗಳ ಪೂರ್ವದ ತುದಿ ಮತ್ತು and the ಛೋಟಾ ನಾಗ್ ಪುರ್ ಪ್ರಸ್ಥಭೂಮಿಯ ಪಶ್ಚಿಮ ತುದಿಗಳು ಪೂರ್ವ-ಪಶ್ಚಿಮ ಭಾಗದಲ್ಲಿ ಬೆಟ್ಟಗಳ ಸರಮಾಲೆಯನ್ನೇ ಉಂಟುಮಾಡಿ ಮಹಾನದಿ ನದಿಯ ಪ್ರಾಂತ್ಯವನ್ನು ಸಿಂಧು-ಗಂಗಾ ಸಮತಟ್ಟು ಪ್ರದೇಶದಿಂದ ಬೇರ್ಪಡಿಸುತ್ತದೆ.

ರಾಜ್ಯದ ಮಧ್ಯಭಾಗವು ಮಹಾನದಿ ಮತ್ತು ಅದರ ಉಪನದಿಗಳ ಮೇಲ್ದಂಡೆಯಲ್ಲಿದ್ದು, ಬಹಳ ಫಲವತ್ತಾದ ಈ ಪ್ರದೇಶದಲ್ಲಿ ಬತ್ತದ ಕೃಷಿ ಹುಲುಸಾಗಿ ನಡೆಯುತ್ತದೆ. ಮಹಾನದಿಯ ಮೇಲ್ದಂಡೆಯು ನರ್ಮದಾನದಿಯ ಮೇಲ್ದಂಡೆಯಿಂದ ಪಶ್ಚಿಮದ ಭಾಗದಲ್ಲಿ ಮಾಯ್ಕಲ್ ಬೆಟ್ಟಗಳಿಂದ (ಈ ಬೆಟ್ಟಗಳೂ ಸತ್ಪುರ ಬೆಟ್ಟಗಳ ಸಾಲಿನವೇ)ಬೇರ್ಪಡಿಸಲ್ಪಟ್ಟಿದೆ ಹಾಗೂ ಪೂರ್ವದ ಒಡಿಶಾದ ಸಮತಲ ಪ್ರದೇಶಗಳು ಬೆಟ್ಟಗಳ ಸಾಲುಗಳಿಂದ ಬೇರ್ಪಡಿಸಲ್ಪಟ್ಟಿವೆ. ರಾಜ್ಯದ ದಕ್ಷಿಣಭಾಗವು ಡೆಕನ್ ಪ್ರಸ್ಥಭೂಮಿಯಲ್ಲಿದ್ದು ಗೋದಾವರಿ ನದಿ ಮತ್ತು ಅದರ ಉಪನದಿಯಾದ ಇಂದ್ರಾವತಿ ನದಿಗಳು ಈ ಪ್ರದೇಶಕ್ಕೆ ನೀರೆರೆಯುತ್ತವೆ.

ಮಹಾನದಿಯು ಈ ರಾಜ್ಯದ ಪ್ರಮುಖ ನದಿಯಾಗಿದೆ. ಇತರ ಮುಖ್ಯ ನದಿಗಳೆಂದರೆ ಹಸ್ದೋ (ಮಹಾನದಿಯ ಉಪನದಿ), ರಿಹಾಂದ್, ಇಂದ್ರಾವತಿ, ಜೋಂಕ್ ಮತ್ತು ಅರ್ಪಾ ಇದು ಮಧ್ಯಪ್ರದೇಶದ ಪೂರ್ವಭಾಗದಲ್ಲಿದೆ. ಮಾವೋವಾದಿಗಳ ದಂಗೆಯು ಈ ರಾಜ್ಯದಲ್ಲಿನ ಅಸ್ಥಿರತೆಗೆ ಮೂಲಕಾರಣವಾಗಿದೆ; ಇತ್ತೀಚೆಗೆ ಆ ದಂಗೆಕೋರರು ಮುತ್ತಿಗೆ ಹಾಕಿ ನಲವತ್ತು ಪೊಲೀಸರನ್ನು ಕೊಂದರು.

ಸಾರಿಗೆ ವ್ಯವಸ್ಥೆ

ಬದಲಾಯಿಸಿ

ರಾಜ್ಯದ ರೈಲು ಸಂಪರ್ಕವು ಭಾರತೀಯ ರೈಲ್ವೇಯ ಆಗ್ನೇಯಮಧ್ಯ ರೈಲ್ವೇ ವಲಯದ ಪ್ರಮುಖ ವಲಯಕೇಂದ್ರವಾದ ಬಿಲಾಸ್ ಪುರ್ ನ ಸುತ್ತಮುತ್ತ ಕೇಂದ್ರಿತವಾಗಿದೆ. ಮತ್ತೊಂದು ಪ್ರಮುಖ ರೈಲ್ವೇ ಕೂಡುದಾಣವೆಂದರೆ ರಾಯ್ ಪುರ್; ಇದಲ್ಲದೆ ದುರ್ಗ್ ಕೂಡುದಾಣವೂ ಒಂದು ಮುಖ್ಯ ನಿಲ್ದಾಣವಾಗಿದ್ದು ಅಲ್ಲಿಂದ ದೂರದೂರಕ್ಕೆ ಸಾಗುವ ಹಲವಾರು ಟ್ರೈನುಗಳು ಹೊರಡುತ್ತವೆ. ಈ ಮೂರೂ ಕೂಡುದಾಣಗಳು ಭಾರತದ ಪ್ರಮುಖ ನಗರಗಳಿಗೆ ಉತ್ತಮವಾದ ಸಂಪರ್ಕವನ್ನು ಹೊಂದಿವೆ.

ರಸ್ತೆಸಾರಿಗೆ ಸೌಲಭ್ಯಗಳು ಸಹ ರಾಜ್ಯದಲ್ಲಿ ನಿಧಾನವಾಗಿ ಉತ್ತಮಗೊಳ್ಳುತ್ತಿವೆ. ಹೆದ್ದಾರಿ ೬ (ಮುಂಬೈಯಿಂದ ಕೋಲ್ಕತ್ತಾಗೆ) ಈ ರಾಜ್ಯದ ಮೂಲಕ ಹಾದುಹೋಗುತ್ತದೆ. ಅಲ್ಲದೆ ಈ ರಾಜ್ಯದಲ್ಲಿ ಹೆದ್ದಾರಿ ೪೩ ಸಹ ಇದ್ದು, ಇದು ರಾಯ್ ಪುರ್ ನಿಂದ ಶುರುವಾಗಿ ವಿಶಾಖಪಟ್ಟಣವನ್ನು ತಲುಪುತ್ತದೆ. ಹೆದ್ದಾರಿ೧೬ ಹೈದರಾಬಾದ್ ನಲ್ಲಿ ಆರಂಭವಾಗಿ ದಾಂತೇವಾಡಾ ಜಿಲ್ಲೆಯ ಭೂಪಾಲ್‌ಪಟ್ನಮ್ ನಲ್ಲಿ ಕೊನೆಗೊಳ್ಳುತ್ತದೆ. ಹೆದ್ದಾರಿ ೭೮ ಕತ್ನಿ (MP) ಯಲ್ಲಿ ಆರಂಭವಾಗಿ ends at ಗುಮ್ಲಾ (ಝಾರ್ಖಂಡ್)ನಲ್ಲಿ ಕೊನೆಗೊಳ್ಳುವುದಾಗಿದ್ದು ಕೊರಿಯಾ, ಸೂರಜ್ ಪುರ್, ಸರ್ಗುಜಾ, ಜಶ್ ಪುರ್ ಜಿಲ್ಲೆಗಳನ್ನು ಹಾದು ಹೋಗುತ್ತದೆ. ಈ ರಾಜ್ಯದಲ್ಲಿ ಒಟ್ಟು ೧೧ ರಾಷ್ಟ್ರೀಯ ಹೆದ್ದಾರಿಗಳಿವೆ (೨,೨೨೫ ಕಿಲೋಮೀಟರ್ ಗಳು).

ಈ ರಾಜ್ಯದಲ್ಲಿನ ವೈಮಾನಿಕ ಸೌಲಭ್ಯಗಳು ಕಡಿಮೆ. ವ್ಯಾವಹಾರಿಕವಾಗಿ ನಡೆಸುತ್ತಿರುವ ಏಕೈಕ ವಿಮಾನನಿಲ್ದಾಣವು ರಾಜಧಾನಿಯಾದ ರಾಯ್ ಪುರ್ ನಲ್ಲಿದೆ. ಇತ್ತೀಚೆಗೆ ರಾಯ್ ಪುರ್ ನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹವಾದ ಇಳಿಮುಖ ಕಂಡುಬಂದಿದೆ. ರಾಯ್ ಪುರ್ ದೇಶದ ಪ್ರಮುಖ ಮಗರಗಳೊಡನೆ ಸಂಪರ್ಕವನ್ನು ಹೊಂದಿದೆ. ಅವು ಯಾವುವೆಂದರೆ: ದೆಹಲಿ (ದಿನಕ್ಕೆ ೩ ಫ್ಲೈಟ್ ಗಳು), ಬಾಂಬೆ (೨ ಫ್ಲೈಟ್ ಗಳು), ಕೋಲ್ಕತ್ತಾ (೨), ಭೂಪಾಲ್ (೨), ಇಂದೋರ್ (೨), ಮತ್ತು ಚೆನ್ನೈ(೧). ಅಲ್ಲದೆ ಇತರ ಜಾಗಗಳಿಗೂ ಸಂಪರ್ಕವಿದೆ. ಅವೆಂದರೆ:ಜೈಪುರ್ (ದಿನಕ್ಕೆ ಒಂದು ಫ್ಲೈಟ್), ನಾಗ್ ಪುರ್ (೨ ಫ್ಲೈಟ್ ಗಳು), ಭುವನೇಶ್ವರ್, ಅಹಮದಾಬಾದ್ (೨), ಗ್ವಾಲಿಯರ್, ವೈಝಾಗ್ ಮತ್ತು ಹೈದರಾಬಾದ್(೨).

ಆರ್ಥಿಕ ಸ್ಥಿತಿ

ಬದಲಾಯಿಸಿ

ಇತ್ತೀಚಿನ ವರ್ಷಗಳಲ್ಲಿ ಛತ್ತೀಸ್ ಘಡ್ ನ (೦}ವಾಣಿಜ್ಯವು ಕ್ಷಿಪ್ರಗತಿಯಲ್ಲಿ ಬೆಳೆದಿದೆ: ೨೦೦೪-೦೫ರಿಂದ ೨೦೦೮-೦೯ರ ಅವಧಿಯಲ್ಲಿ GDP ೭.೩೫%ರಷ್ಟು ಬೆಳೆಯಿತು. ರಾಜ್ಯದ ೮೦%ಗಿಂತಲು ಹೆಚ್ಚು ಜನ ವ್ಯವಸಾಯವನ್ನು ಅವಲಂಬಿಸಿದ್ದಾರೆ ಹಾಗೂ ರಾಜ್ಯದ ೪೩%ರಷ್ಟು ಜಮೀನು ಕೃಷಿಭರಿತವಾಗಿದೆ. ಇಲ್ಲಿನ ಪ್ರಮುಖ ಬೆಳೆಗಳು ಬತ್ತ, ಗೋಧಿ, ಜೋಳ, ಕಡಲೆಕಾಯಿ, ಧಾನ್ಯಗಳು ಮತ್ತು ತೈಲಬೀಜಗಳು. ಛತ್ತೀಸ್ ಘಡ್ ಅನ್ನು "ಭಾರತದ ಅನ್ನದ ಪಾತ್ರೆ" ಎಂದೂ ಕರೆಯುತ್ತಾರೆ. ರಾಜ್ಯದಲ್ಲಿ ಉತ್ತಮವಾದ ನೀರಾವರಿ ಪದ್ಧತಿಯಿದ್ದು ಹಲವಾರು ನದಿಗಳಿಗೆ ಅಡ್ಡಲಾಗಿ ಅಣೆಕಟ್ಟುಗಳು ಮತ್ತು ಹಲವಾರು ಕಾಲುವೆಗಳು ನಿರ್ಮಿತವಾಗಿವೆ.

ರಾಜ್ಯದ ೪೧.೩೩%ರಷ್ಟು ವಿಸ್ತೀರ್ಣವು ಕಾಡುಗಳಿಂದ ಆವೃತವಾಗಿದೆ(ಭಾರತೀಯ ಅರಣ್ಯ ಸೇವೆಯ ಇತ್ತೀಚಿನ ವರದಿಯ ಪ್ರಕಾರ) ಹಾಗೂ ಅರಣ್ಯಗಳು ಮರ, ರಂಡು ಎಲೆಗಳು, ಜೇನು ಮತ್ತು ಬಂಗಾರದ ಅರಗಿನಿಂದ ತುಂಬಿ ತುಳುಕುತ್ತಿವೆ.

ಛತ್ತೀಸ್ ಘಡ್ ನ ಖನಿಜ ಸಂಪತ್ತೂ ಶ್ರೀಮಂತವೇ. ಅದು ದೇಶದ ೨೦%ನಷ್ಟು ಉಕ್ಕು ಮತ್ತು ಸಿಮೆಂಟ್ ಅನ್ನು ಉತ್ಪಾದಿಸುತ್ತದೆ. ಕಬ್ಬಿಣದ ಅದಿರು, ಸುಣ್ಣದಕಲ್ಲು, ಮೆಗ್ನೀಶಿಯಮ್ ಸುಣ್ಣದ ಕಲ್ಲು, ಕಲ್ಲಿದ್ದಲು, ಹಾಗೂ ಬಾಕ್ಸೈಟ್ ಗಳು ಹೇರಳವಾಗಿ ದೊರೆಯುತ್ತವೆ. ಸತು ಅದಿರನ್ನು ಉತ್ಪಾದಿಸುವ ದೇಶದ ಏಕೈಕ ರಾಜ್ಯವಿದು. ಇತರ ಖನಿಜಗಳೆಂದರೆ ಕೊರಾಂಡಮ್, ಗಾರ್ನೆಟ್, ಕ್ವಾರ್ಟ್ಝ್, ಅಮೃತಶಿಲೆ ಮತ್ತು ವಜ್ರಗಳು.

ರಾಜ್ಯದ ಗಮನಾರ್ಹ ಆದಾಯಕ್ಕೆ ಇಲ್ಲಿನ ಕೈಗಾರಿಕೆಗಳ ಕೊಡುಗೆ ದೊಡ್ಡದು. ರಾಜ್ಯ-ಸ್ವಾಮ್ಯದ ಕೈಗಾರಿಕೆಗಳ ಪೈಕಿ ಭಿಲಾಯ್ ಉಕ್ಕಿನ ಕಾರ್ಖಾನೆ ಮತ್ತು ಎನ್.ಟಿ.ಪಿ.ಸಿ. ಸಹ ಸೇರಿವೆ.ದೊಡ್ಡ ಖಾಸಗಿ ಕಂಪನಿಗಳೆಂದರೆ ಬಾಲ್ಕೋ (ಸ್ಟೆರ್ಲೈಟ್ ಕೈಗಾರಿಕೆ), ಲಾಫಾರ್ಗೆ ಮತ್ತು ಜಿಂದಾಲ್ ಸ್ಟೀಲ್.

ಪ್ರವಾಸೋದ್ಯಮ

ಬದಲಾಯಿಸಿ
 
ಛತ್ತೀಸ್‌ಘಡ್ ನ ಸೂರಜ್ ಪುರ್ ನ ಚಿತ್ರಕೂಟ ಜಲಪಾತ, ಜಗ್ ದಾಲ್ ಪುರ್, ಕುದರ್ ಘರ್ ದೇವಸ್ಥಾನಗಳ ಪಕ್ಷಿನೋಟ.

ಭಾರತದ ಹೃದಯಭಾಗದಲ್ಲಿ ಸ್ಥಾಪಿತವಾಗಿರುವ ಛತ್ತೀಸ್ ಘಡ್ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನೂ, ಆಕರ್ಷಕ ನೈಸರ್ಗಿಕ ವೈವಿಧ್ಯಗಳನ್ನೂ ಹೊಂದಿದೆ. ಹಲವಾರು ಪುರಾತನ ಸ್ಮಾರಕಗಳು, ಅಪರೂಪದ ಕಾಡುಪ್ರಾಣಿಗಳು, ಬಹಳ ಕುಶಲತೆಯಿಂದ ಕೆತ್ತನೆ ಮಾಡಿದ ಶಿಲ್ಪಗಳಿರುವ ದೇಗುಲಗಳು, ಬೌದ್ಧಧರ್ಮಸಂಬಂಧಿತ ಸ್ಥಳಗಳು, ಅರಮನೆಗಳು, ಜಲಪಾತಗಳು, ಗುಹೆಗಳು, ಬಂಡೆಯ ಮೇಲಿನ ಕುಂಚಕಲೆಗಳು ಮತ್ತು ಬೆಟ್ಟದ ಪ್ರಸ್ಥಭೂಮಿಗಳು ಈ ರಾಜ್ಯಾದ್ಯಂತ ಕಂಡುಬರುತ್ತವೆ. ಇವುಗಳಲ್ಲಿ ಬಹುತೇಕ ತಾಣಗಳು ಯಾರೂ ಮಟ್ಟದೆ, ಯಾರೂ ಇಂದಿನವರೆಗೂ ಪ್ರವೇಶಿಸದಂತಹವಾಗಿವೆ ಹಾಗೂ ಪ್ರವಾಸಿಗರಿಗೆ ಒಂದು ವಿಶಿಷ್ಟವಾದ ಮತ್ತು ವಿಭಿನ್ನವಾದ ಅನುಭವವನ್ನು ನೀಡುತ್ತವೆ; ಬಹಳವೇ ಜನನಿಬಿಡವಾದ ಇತರ ಸಾಂಪ್ರದಾಯಿಕ ಪ್ರವಾಸಿ ತಾಣಗಳಿಗಿಂತಲೂ ಇದು ವಿಶೇಷವಾದ ಆಕರ್ಷಣೆ ಹೊಂದಿದೆ. ಪ್ರಮುಖವಾದ ಪ್ರವಾಸಿತಾಣಗಳಲ್ಲಿನ ಜನಜಂಗುಳಿಯಿಂದ ಬೇಸತ್ತ ಪ್ರವಾಸಿಗರಿಗೆ ಬಸ್ತಾರ್ ಜಿಲ್ಲೆಯು ತನ್ನ ವಿಶಿಷ್ಟವಾದ ಸಂಸ್ಕೃತಿ ಮತ್ತು ಪರಿಸರದ ಲಕ್ಷಣಗಳಿಂದ ಮನಕ್ಕೆ ಮುದ ನೀಡುತ್ತದೆ. ಹಸಿರು ರಾಜ್ಯವಾದ ಛತ್ತೀಸ್ ಘಡ್ ನ ವಿಸ್ತಾರದ ೪೧.೩೩% ಅರಣ್ಯವಿದ್ದು, ಇದು ಜೈವಿಕ-ವೈವಿಧ್ಯದಲ್ಲಿ ದೇಶದ ಅತಿ ಶ್ರೀಮಂತ ಪ್ರದೇಶಗಳಲ್ಲಿ ಒಂದಾಗಿದೆ. ಭೋರಾಮ್ ದೇವ್ ದೇವಸ್ಥಾನವೂ ಛತ್ತೀಸ್ ಘಡ್ ನ ಬಹಳ ಪುರಾತನ ದೇವಸ್ಥಾನವಾಗಿದೆ.ಈ ದೇವಸ್ಥಾನವು ಏಳನೆಯ ಶತಮಾನದಿಂದ ೧೧ನೆಯ ಶತಮಾನದ ಅವಧಿಯಲ್ಲಿ ನಿರ್ಮಾಣಗೊಂಡಿತು. ಈ ಸ್ಥಳವು ಕವಾರ್ಧಾದ ಬಳಿಯಲ್ಲಿದೆ. ರಸ್ತೆಯ ಮಾರ್ಗವಾಗಿ ಬಂದರೆ ಈ ಸ್ಥಳವು ಕವಾರ್ಧಾದಿಂದ ೧೮ ಕಿಲೋಮೀಟರ್ ದೂರದಲ್ಲಿದೆ. ಗಿರೌಧ್ ಪುರಿ - ಸತ್ನಾಮೀಗಳ ಧಾರ್ಮಿಕ ಕ್ಷೇತ್ರ; ಸತ್ನಾಮಿಗಳು ಸತ್ನಾಮ್ ಪಂಥದ ಅನುಯಾಯಿಗಳು. ಸಿರ್ ಪುರ್ ಮತ್ತು ಮಲ್ಹಾರ್ - ಇವಕ್ಕೆ ಐತಿಹಾಸಿಕ ಪ್ರಾಮುಖ್ಯತೆಯಿದೆ; ಚೀನಾದ ಇತಿಹಾಸಕಾರರಾದ ಝುಯಾನ್ ಝಾಂಗ್ ಈ ಸ್ಥಳಗಳಿಗೆ ಭೇಟಿ ನೀಡಿದ್ದರು. ೨೦ ಕಿಲೋಮೀಟರ್ ದೂ ಇರುವ ತಾಲಾ ರುದ್ರಶಿವನ ದೇಗುಲಕ್ಕೆ ಖ್ಯಾತಿ ಪಡೆದಿದೆ. ಪಾಳಿಯಲ್ಲಿ ಭಗವಾನ್ ಶಿವನ ದೇವಸ್ಥಾನವಿದೆ. ಜಂಜಿಗಿರ್ ನಲ್ಲಿ ಪೂರ್ಣಗೊಳಿಸದ ವಿಷ್ಣುವಿನ ದೇವಸ್ಥಾನವಿದೆ. ಖರೋದ್ ನಲ್ಲಿ ಲಕ್ಷ್ಮಣೇಶ್ವರನ ದೇವಸ್ಥಾನವಿದೆ. ಶಿಯೋರಿನಾರಾಯಣ್ ನಲ್ಲಿ ಶ್ರೀರಾಮನ ದೇವಸ್ಥಾನವಿದೆ ಸಿಂಘ್ ಪುರ್ ನಲ್ಲಿ ಇತಿಹಾಸ-ಪೂರ್ವ ಚಿತ್ರಗಳನ್ನು ಹೊಂದಿದ ಗುಹೆಗಳಿವೆ. ಭೋರಾಮ್ ದೇವ್ ಅನ್ನು ಮಿನಿ ಖಜುರಾಹೋ ಎಂದೇ ಕರೆಯಲಾಗುತ್ತದೆ ರಾಜಿಮ್ ಭಗವಾನ್ ರಾಜೀವ ಲೋಚನ ದೇವಸ್ಥಾನಕ್ಕೆ ಖ್ಯಾತಿಹೊಂದಿದೆ. ರತನ್ ಪುರ್ ನಲ್ಲಿ ಮಹಾಮಾಯಾ ದೇವಸ್ಥಾನವಿದೆ. ಶ್ರೀ ಅಯ್ಯಪ್ಪ ಮಂದಿರ (ಶನಿ ದೋಷ ಹರಕೆ) ಸೇತುವೆಯ ಮೇಲೆ, ತಿಫ್ರಾದಲ್ಲಿದೆ (ಭಾರತೀಯ ನಗರ್) ನರ್ಮದಾ ನದಿ ಮತ್ತು ಸೋನ್ ನದಿಗಳು ಅಮರ್ ಕಂಟಕ್ ನಲ್ಲಿ ಹುಟ್ಟುತ್ತವೆ ಕಾನನ್ ಪೆಂಡಾರಿ ಮುಂಗೇಲಿಯಲ್ಲಿ ಮಾ ಮಹಾಮಾಯಾ ದೇವಸ್ಥಾನವಿದೆ ರತನ್ ಪುರ್ ನಲ್ಲಿ ಖುದಿಯಾ ಅಣೆಕಟ್ಟು, ಖುತಾಘಾಟ್ ಅಣೆಕಟ್ಟು, ಮತ್ತು ಲೋರ್ಮಿ ಅಣೆಕಟ್ಟುಗಳಿವೆ ಅಚಾನಕ್ ಮಾರ್ ವನ್ಯಮೃಗ ಸಂರಕ್ಷಣಾ ಉದ್ಯಾನವನ್ಉ ಭಾರತದ ಛತ್ತೀಸ್ ಘಡ್ ನಲ್ಲಿರುವ ಒಂದು ವನ್ಯಮೃಗ ಸಂರಕ್ಷಣೋದ್ಯಾನ. ಈ ಸಂರಕ್ಷಣೋದ್ಯಾನದಲ್ಲಿ ಹಲವಾರು ವಿನಾಶದಂಚಿನಲ್ಲಿರುವ ಪ್ರಾಣಿವರ್ಗಗಳಿದ್ದು, ಅದರಲ್ಲಿ ಚಿರತೆಗಳು, ಬಂಗಾಳದ ಹುಲಿಗಳು ಮತ್ತು ಕಾಡೆಮ್ಮೆಗಳೂ ಸೇರಿವೆ.


ಸಂರಕ್ಷಣೋದ್ಯಾನದ ಎರಡು c.೩೫ ಹುಲಿಗಳು ಕಾಡೆಮ್ಮೆ, ಒಂದು ವಿನಾಶದಂಚಿನಲ್ಲಿರುವ ಪ್ರಾಣಿವರ್ಗ ಚುಕ್ಕೆಗಳಿರುವ ಜಿಂಕೆಗಳು ಅಚಾನಕ್ ಮಾರ್ ಸಂರಕ್ಷಣೋದ್ಯಾನದ ಬಳಿಯ ಮೈದಾನಗಳಲ್ಲಿ ಕಾಣಸಿಗುತ್ತವೆ. ಅಚಾನಕ್ ಮಾರ್ ವನ್ಯಮೃಗ ಸಂರಕ್ಷಣೋದ್ಯಾನವು ೧೯೭೫ರಲ್ಲಿ ಸ್ಥಾಪನೆಯಾಯಿತು. ಇದು ೧೯೭೨ರ ವನ್ಯಮೃಗ ರಕ್ಷಣಾ ಕಾಯಿದೆಯ ಅಡಿಯಲ್ಲಿ ಸ್ಥಾಪಿತಗೊಂಡಿತು. ಈ ಉದ್ಯಾನವು ೫೫೭.೫೫ km೨ ವಿಸ್ತೀರ್ಣದ ಅರಣ್ಯವನ್ನು ಹೊಂದಿದೆ. ಇದು ಗುಡ್ಡಗಾಡುಭರಿತ ಕನ್ಹಾ-ಅಚಾನಕ್ ಮಾರ್ ಕಾರಿಡಾರ್ ಮೂಲಕ ಮಧ್ಯಪ್ರದೇಶದ ಕನ್ಹಾ ಹುಲಿ ಸಂರಕ್ಷಣೋದ್ಯಾನಕ್ಕೆ ಸಂಪರ್ಕಿತವಾಗಿದೆ[1]. ಈ ಉದ್ಯಾನವು ಛತ್ತೀಸ್ ಘಡ್ ನ ವಾಯುವ್ಯ ಭಾಗದಲ್ಲಿರುವ ಬಿಲಾಸ್ ಪುರ್ ಅರಣ್ಯ ವಿಭಾಗದ ಒಂದು ಭಾಗವಾಗಿದ್ದು, ಇದು ಬಿಲಾಸ್ ಪುರ್ ನ ವಾಯುವ್ಯಕ್ಕೆ ೫೫ ಕಿಲೋಮೀಟರ್ ಗಳ ದೂರದಲ್ಲಿದೆ. ಇದಕ್ಕೆ ಸಮೀಪದ ರೈಲ್ವೇ ನಿಲ್ದಾಣ ಬೆಲ್ಗಾಹ್ನಾದಲ್ಲಿದೆ. ಅಚಾನಕ್ ಮಾರ್ ಅನ್ನು ರಸ್ತೆಯ ಮಾರ್ಗದಲ್ಲಿ ಪೆಂಡ್ರಾ ರಸ್ತೆ ಮತ್ತು ಬಿಲಾಸ್ ಪುರ್ ರೈಲ್ವೇ ನಿಲ್ದಾಣಗಳ ಮೂಲಕ ಸುಲಭವಾಗಿ ತಲುಪಬಹುದು; ಬಸ್ ಗಳು, ಬಾಡಿಗೆ ಕಾರುಗಳು ಮತ್ತು ಎಲ್ಲಾ ವಿಧವಾದ ವಾಹನಗಳೂ ಅನತಿ ದೂರದಲ್ಲಿ ಲಭ್ಯ. ಈ ಸ್ಥಳ ಭೇಟಿ ನೀಡುವ ಪ್ರವಾಸಿಗರ ಕಣ್ಣಿಗೆ ಹಬ್ಬ ಎನಿಸುವ ಮಟ್ಟದ ಪ್ರಕೃತಿಸೌಂದರ್ಯವನ್ನು ಹೊಂದಿದೆ. ಅಚಾನಕ್ ಮಾರ್ ನಲ್ಲಿ ಕಾಫೀಹೌಸ್ ಗಳು, ಹೊಟೆಲ್ ಗಳು ಮತ್ತು ಇನ್ನೂ ಹಲವಾರು ಸೌಲಭ್ಯಗಳು ಲಭ್ಯವಿವೆ. ಈ ಸಂರಕ್ಷಣೋದ್ಯಾನವು ಅಮರ್ ಕಂಟಕ್ ನ ಸಮೀಪದಲ್ಲಿದೆ ಮತ್ತು ನರ್ಮದಾ ನದಿಯ ಉಗಮಸ್ಥಾನವೂ ಇದೇ ಆಗಿದೆ.[2]

ಜಿಲ್ಲೆಗಳು

ಬದಲಾಯಿಸಿ

ಛತ್ತೀಸ್ ಘಡ್ ನಲ್ಲಿ ಒಟ್ಟು ೧೮ ಜಿಲ್ಲೆಗಳಿವೆ:[][][][]

  • ಬಸ್ತಾರ್
  • ಬಿಲಾಸ್ ಪುರ್
  • ದಾಂತೇವಾಡ (ದಕ್ಷಿಣ ಬಸ್ತಾರ್)
  • ಧಮ್ ತರಿ
  • ದುರ್ಗ್
  • ಜಂಜ್ ಗಿರ್-ಚಂಪಾ
  • ಜಶ್ ಪುರ್
  • ಕಾಂಕೆರ್ (ಉತ್ತರ ಬಸ್ತಾರ್)
  • ಕಬೀರ್ ಧಾಮ್ (ಕವರ್ಧಾ)
  • ಕೊರ್ಬಾ
  • ಕೊರಿಯಾ 
  • ಮಹಾಸಮುಂದ್
  • ನಾರಾಯಣ್ ಪುರ್
  • ರಾಯಘಡ
  • ರಾಯ್‌ಪುರ್‌
  • ರಾಜ್ ನಂದ್ ಗಾವ್
  • ಬಿಜಾಪುರ್
  • ಸೂರ್ ಗುಜಾ

ಪುರಸಭಾ ಪಾಲಿಕೆಗಳು

ಬದಲಾಯಿಸಿ
  • ರಾಯ್‌ಪುರ್‌
  • ಬಿಲಾಸ್ ಪುರ್
  • ದುರ್ಗ್
  • ಭಿಲಾಯ್
  • ರಾಜ್ ನಂದ್ ಗಾವ್
  • ರಾಜ್ ಗಢ್
  • ಕೊರ್ಬಾ
  • ಚಿರ್ಮಿರಿ
  • ಅಂಬಿಕಾಪುರ್
  • ಜಗ್ದಾಲ್ಪುರ್
  • ರಾಜ್ ನಂದ್ ಗಾವ್

ವಿಮಾನ ನಿಲ್ದಾಣಗಳು

ಬದಲಾಯಿಸಿ
  • ರಾಯ್ ಪುರ್ ವಿಮಾನ ನಿಲ್ದಾಣ
  • ಬಿಲಾಸ್ ಪುರ್ ವಿಮಾನ ನಿಲ್ದಾಣ
  • ಜಗ್ದಲ್ ಪುರ್ ವಿಮಾನ ನಿಲ್ದಾಣ

ಇತರ ವಿಮಾನ ನಿಲ್ದಾಣಗಳು

ಬದಲಾಯಿಸಿ
  • ನಂದಿನಿ ವಿಮಾನ ನಿಲ್ದಾಣ, ಭಿಲಾಯ್
  • ಬೈಕುಂಠ್ ಏರ್ ಸ್ಟ್ರಿಪ್ (ವಿಮಾನ ನಿಲ್ದಾಣ), ಬೈಕುಂಠ್
  • ಕೊಂಡತರಾಯ್ ಏರ್ ಸ್ಟ್ರಿಪ್ (ವಿಮಾನ ನಿಲ್ದಾಣ), ರಾಯಘಡ
  • JSPLನ, ಏರ್ ಸ್ಟ್ರಿಪ್ (ವಿಮಾನ ನಿಲ್ದಾಣ) ರಾಜ್ ಘಡ್
  • ದಾರಿಮಾ ಏರ್ ಸ್ಟ್ರಿಪ್ (ವಿಮಾನ ನಿಲ್ದಾಣ), ಅಂಬಿಕಾಪುರ್
  • ಕೊರ್ಬಾ ಏರ್ ಸ್ಟ್ರಿಪ್ (ವಿಮಾನ ನಿಲ್ದಾಣ), ಕೊರ್ಬಾ
  • ಆಗ್ ದಿಹ್ ಏರ್ ಸ್ಟ್ರಿಪ್ (ವಿಮಾನ ನಿಲ್ದಾಣ), ಜಶ್ ಪುರ್
  • ದೊಂದಿ ಏರ್ ಸ್ಟ್ರಿಪ್ (ವಿಮಾನ ನಿಲ್ದಾಣ), ದೊಂದಿ, ದುರ್ಗ್

ಹೆಚ್ಚಿನ ಸಂಪರ್ಕಕ್ಕಾಗಿ ಕೆಲವು ಹೊಸ ವಿಮಾನ ತಾಣಗಳನ್ನು ಹಮ್ಮಿಕೊಳ್ಳಲು ಆಲೋಚಿಸಲಾಗಿದೆ:

  • ಕಾಂಕೆರ್
  • ಕಬೀರ್ ಧಾಮ್
  • ಸೂರಜ್ ಪುರ್
  • ದಾಂತೇವಾಡಾ
  • ಬಿಜಾಪುರ್
  • ಕೊರ್ಬಾ
  • ಬಲ್ ರಾಮ್ ಪುರ್
  • ರಾಜ್ ನಂದ್ ಗಾವ್
  • ರಾಯ್‌ಘಡ್

ಅಭಿವೃದ್ಧಿ ಮತ್ತು ದಂಗೆಯ ವಿಷಯಗಳು

ಬದಲಾಯಿಸಿ

ಛತ್ತೀಸ್ ಘಡ್ ರಾಜ್ಯದಲ್ಲಿ ಹೇರಳವಾದ ಬಳಸಿಲ್ಲದ ಮರ ಮತ್ತು ಖನಿಜ ಸಂಪತ್ತು ಇದೆ. ಈ ಸಂಪನ್ಮೂಲಗಳನ್ನು ಬಳಸುವುದರ ಬಗ್ಗೆ ಸ್ಥಳೀಯ ಬುಡಕಟ್ಟು ಜನಾಂಗಗಳು ಹಾಗೂ ರಾಷ್ಟ್ರೀಯ ಸರ್ಕಾರದ ಮಧ್ಯೆ ಭಿನ್ನಾಭಿಪ್ರಾಯಗಳಿವೆ.

ಅಲ್ಲದೆ, ಮಾವೋ ಪಂಥದವರು ಮತ್ತು ಕೇಂದ್ರ ಭಾರತ ಸರ್ಕಾರದ ನಡುವೆ ಇರುವ ದಂಗೆಯ ಬಗೆಗಿನ ಧೋರಣೆಗಳು ಬಹಳ ರಕ್ತಪಾತಕ್ಕೆ ಎಡೆ ಮಾಡಿದೆ. ಡಾಕ್ಟರ್ ಬಿನಾಯಕ್ ಸೇನ್ ರ ದಸ್ತಗಿರಿ ಸಂಬಂಧಿತವಾದ ವಿವಾದವೇ ಈ ದಂಗೆಗೆ ಕಾರಣವಾಗಿದೆ.

ಶಿಕ್ಷಣ

ಬದಲಾಯಿಸಿ

೧೯೪೮ರಲ್ಲಿ ಮೊದಲ ಸರ್ಕಾರಿ ವಿಜ್ಞಾನ ಕಾಲೇಜನ್ನು ಇಂಟರ್ ಮೀಡಿಯಟ್ ಕಾಲೇಜ್ ಆಗಿ ಸ್ಥಾಪಿಸಲಾಯಿತು. ೧೯೫೬ರಲ್ಲಿ ಅದನ್ನು ಸ್ನಾತಕೋತ್ತರ ವಿಜ್ಞಾನ ಕಾಲೇಜ್ ನ ಮಟ್ಟಕ್ಕೆ ಏರಿಸಲಾಯಿತು. ಅದೇ ವರ್ಷ ರಾಯ್ ಪುರ್ ನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ ಅನ್ನೂ ಸ್ಥಾಪಿಸಲಾಯಿತು ಹಾಗೂ ಕ್ರಮೇಣ ಈ ಕಾಲೇಜನ್ನೂ ಸಹ ಹೆಚ್ಚಿನ ಶ್ರೇಣಿಗೆ ಏರಿಸಿ ನ್ಯಾಷನಲ್ ಇಂಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಯ್ ಪುರ್ ಎಂದು ಮರುನಾಮಕರಣ ಮಾಡಲಾಯಿತು. ಸಂಸ್ಕೃತ ಕಾಲೇಜನ್ನೂ ಅದೇ ವರ್ಷ ಸ್ಥಾಪಿಸಲಾಯಿತು. ೧೯೬೦ರ ವರೆಗೆ ಯೂನಿವರ್ಸಿಟಿ ಆಫ್ ಸೌಗೋರ್ ಗೆ ಸೇರಿದ್ದ ಪ್ರದೇಶವನ್ನು, ಬಾಬು ರಾಮ್ ಸಕ್ಸೇನಾ ಎಂಬ ಭಾಷಾತಜ್ಞರು ಹಾಗೂ ಯೂನಿವರ್ಸಿಟಿಯ ಮೊದಲ ಉಪಕುಲಪತಿಗಳು ಪಂಡಿತ್ ರವಿಶಂಕರ್ ಶುಕ್ಲ ಯೂನಿವರ್ಸಿಟಿ ಸ್ಥಾಪಿಸಿದಾಗ, ಆ ಯೂನಿವರ್ಸಿಟಿಗೆ ನೀಡಲಾಯಿತು. ಸರ್ಕಾರಿ VYTPG ಆಟೋನಮಸ್ ಕಾಲೇಜ್, ದುರ್ಗ್ ೨೦೦೬ರಲ್ಲಿ UGC, ನವದೆಹಲಿಯಿಂದ 'ಶ್ರೇಷ್ಠತೆಯನ್ನು ತಲುಪಲು ಸಾಮರ್ಥ್ಯವಿರುವ ಕಾಲೇಜ್' ಎಂದು ಘೋಷಿಸಲ್ಪಟ್ಟ ಛತ್ತೀಸ್ ಘಡ್ ನ ಏಕೈಕ ಕಾಲೇಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

೧೯೫೬ರಲ್ಲಿ ಆಯುರ್ವೇದಿಕ್ ಶಾಲೆಯನ್ನು ಪೂರ್ಣಪ್ರಮಾಣದ ಕಾಲೇಜಿನ ಮಟ್ಟಕ್ಕೆ ಉನ್ನತಗೊಳಿಸಲಾಯಿತು; ಅಲ್ಲಿಯವರೆಗೆ ಆ ಶಾಲೆಯು ಆಯುರ್ವೇದ ವೃತ್ತಿ ಕೈಗೊಳ್ಳಲು ಪರವಾನಗಿಗಳು ಮತ್ತು ಡಿಪ್ಲೊಮಾಗಳನ್ನು ನೀಡುತ್ತಿತ್ತು. ಸರ್ಕಾರಿ ಪ್ರೌಢಶಾಲೆ, ಸೇಂಟ್ ಪಾಲರ ಪ್ರೌಢಶಾಲೆ ಮತ್ತು ಮಾಧವ್ ರಾವ್ ಸಪ್ರೆ ಪ್ರೌಢಶಾಲೆಗಳು ೧೯೬೦ರವರೆಗೆ ಮುಂಚೂಣಿಯಲ್ಲಿದ್ದ ಶಾಲೆಗಳಾಗಿದ್ದವು. ಮಧ್ಯಪ್ರದೇಶದಲ್ಲಿ ನಾಲ್ಕನೆಯ ಶ್ರೇಷ್ಠ ವೈದ್ಯಕೀಯ ಕಾಲೇಜ್ ಎಂದು ಪರಿಗಣಿಸಲ್ಪಟ್ಟ ವೈದ್ಯಕೀಯ ಕಾಲೇಜನ್ನು ೧೯೬೨-೬೩ರಲ್ಲಿ ಸ್ಥಾಪಿಸಲಾಯಿತು.

ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಶೈಕ್ಷಣಿಕ ಸಂಸ್ಥೆಗಳೇ ಪ್ರಾಥಮಿಕ ಶಾಲೆಗಳಿಂದ ಹಿಡಿದು ಪದವಿ ಕಾಲೇಜ್ ಗಳ ವರೆಗೆ ಶಿಕ್ಷಣ ನೀಡುವ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳು ಮತ್ತು ಶಾಲೆಗಳಲ್ಲಿ (ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಹೊರತಾಗಿ), ಬೋಧಿಸಲು ಉಪಯೋಗಿಸುವ ಪ್ರಧಾನ ಭಾಷೆ ಹಿಂದಿ.

ಛತ್ತೀಸ್ ಘಡ್ ನಲ್ಲಿ ಏಳು ಸರ್ಕಾರದ ಪರವಾನಗಿ ಇರುವ ವಿಶ್ವವಿದ್ಯಾಲಯಗಳಿವೆ:

  • ಗುರು ಘಾಸೀದಾಸ್ ಕೇಂದ್ರೀಯ ವಿಶ್ವವಿದ್ಯಾಲಯ, ಬಿಲಾಸ್ ಪುರ್
  • ಪಂಡಿತ್‌ ರವಿಶಂಕರ್‌ ಶುಕ್ಲಾ ವಿಶ್ವವಿದ್ಯಾಲಯ, ರಾಯ್‌ಪುರ್‌
  • ಸರ್ಗೂಜಾ ವಿಶ್ವವಿದ್ಯಾಲಯ, ಅಂಬಿಕಾಪುರ್, ಸರ್ಗೂಜಾ
  • ಹಿದಾಯಿತುಲ್ಲಾಹ್‌‌ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ರಾಯ್‌ಪುರ್‌
  • ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾಲಯ, ರಾಯ್ ಪುರ್
  • ಇಂದಿರಾ ಕಲಾ ಸಂಗೀತ ವಿಶ್ವವಿದ್ಯಾಲಯ, ಕೈರಾಘಢ್‌
  • ನ್ಯಾಷನಲ್‌ ಇನ್‌ಸ್ಟಿಟ್ಯುಟ್‌ ಆಫ್‌ ಟೆಕ್ನಾಲಜಿ, ರಾಯ್‌ಪುರ್‌
  • ಛತ್ತೀಸ್‌ಘಢ್‌ ಸ್ವಾಮಿ ವಿವೇಕಾನಂದ ತಾಂತ್ರಿಕ ವಿಶ್ವವಿದ್ಯಾಲಯ, ಭಿಲಾಯ್
  • ಕುಶಬಾಹು ಠಾಕ್ರೆ ಪತ್ರಕರಿತ ಆವಾಮ್ ಜನ್ ಸಂಚಾರ್ ವಿಶ್ವವಿದ್ಯಾಲಯ (KTUJM), ರಾಜ್ ಪುರ್
  • ಪಂಡಿತ್‌‌ ಸುಂದರ್ ಲಾಲ್ ಶರ್ಮ ಮುಕ್ತ ವಿಶ್ವವಿದ್ಯಾಲಯ, ಬಿಲಾಸ್ ಪುರ್

ಈ ರಾಜ್ಯದಲ್ಲಿರುವ ಪ್ರಖ್ಯಾತ ಇಂಜಿನಿಯರಿಂಗ್ ಕಾಲೇಜುಗಳೆಂದರೆ:

  • ನ್ಯಾಷನಲ್‌ ಇನ್‌ಸ್ಟಿಟ್ಯುಟ್‌ ಆಫ್‌ ಟೆಕ್ನಾಲಜಿ, ರಾಯ್‌ಪುರ್‌
  • ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್, ರಾಜ್ ಪುರ್
  • ಭಿಲಾಯ್ ತಾಂತ್ರಿಕ ಶಿಕ್ಷಣಾಲಯ , ದುರ್ಗ್
  • ರಂಗ್ತಾ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಭಿಲಾಯ್
  • ಛತ್ತೀಸ್ ಘಡ್ ಶಿವಾಜಿ ಇಂಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದುರ್ಗ್
  • ಎಂ.ಪಿ. ಕ್ರಿಶ್ಚಿಯನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ಭಿಲಾಯ್
  • ಶ್ರೀ ಶಂಕರಾಚಾರ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, , ಭಿಲಾಯ್
  • O.P.ಜಿಂದಾಲ್ ಇಂಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಜ್ ಘಡ್
  • ರಾಯ್ ಪುರ್ ಇಂಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
  • ಛತ್ತೀಸ್ ಘಡ್ ಇಂಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಜ್ ನಂದ್ ಗಾವ್
  • ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಬಿಲಾಸ್ ಪುರ್
  • ಕಂಪ್ಯೂಟರ್ ಸ್ಕೂಲ್, (ಕಂಪ್ಯೂಟರ್ ತರಬೇತಿ ಆರಂಭವಾಗುವ ತಾಣ), ಬಿಲಾಸ್ ಪುರ್, www.kamputerskool.com

ಅಲೋಪಥಿ ರೀತಿಯ ವೈದ್ಯಕೀಯವನ್ನು ಬೋಧಿಸುವ ವಿದ್ಯಾಲಯಗಳ ಪೈಕಿ ಕೆಲವೆಂದರೆ:

  • ಛತ್ತೀಸ್ ಘಡ್ ಇಂಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಅಸೋಸಿಯೇಟೆಡ್ ಸರ್ದಾರ್ ಪಟೇಲ್ ಆಸ್ಪತ್ರೆಗಳು, ಬಿಲಾಸ್ ಪುರ್
  • ಸರ್ಕಾರಿ ವೈದ್ಯಕೀಯ ಕಾಲೇಜು, ಜಗ್ದಾಲ್ ಪುರ್
  • ಪಂಡಿತ್‌‌ ಜೆಎನ್ ಎಂ ಮೆಡಿಕಲ್ ಕಾಲೇಜ್ ಮತ್ತು ಅಸೋಸಿಯೇಟೆಡ್ ಅಂಬೇಡ್ಕರ್ ಆಸ್ಪತ್ರೆಗಳು, ರಾಯ್ ಪುರ್

ರಾಜ್ಯದ ಬಹುತೇಕ ಕಾಲೇಜುಗಳು ಮೇಲ್ಕಂಡ ಯಾವುದಾದರೊಂದು ಯೂನಿವರ್ಸಿಟಿಗೆ ಸೇರಿದಂತಹವಾಗಿವೆ. ಛತ್ತೀಸ್ ಘಡ್ ನಲ್ಲಿ ಒಂದೇ ಒಂದು ವೆಟರ್ನರಿ ಕಾಲೇಜ್ ಇದ್ದು ಅದು ದುರ್ಗ್ ಜಿಲ್ಲೆಯ ಅಂಜೋರಾದಲ್ಲಿ ಸ್ಥಾಪಿತವಾಗಿದ್ದು, ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾಲಯ, ರಾಯ್ ಪುರ್ ಗೆ ಸಂಯೋಜಿತವಾಗಿದೆ.

೨೦೦೬ರಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ನ್ಯಾಷನಲ್ ಇಂಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂದು ಘೋಷಿಸಲಾಯಿತು (NIT ಎಂದೂ ಕರೆಯುತ್ತಾರೆ). ಆ ವಿಧದ ವಿದ್ಯಾಲಯ ರಾಜ್ಯದಲ್ಲೇ ಮೊದಲನೆಯದಾಗಿದೆ. ಆಗಸ್ಟ್ ೨೮ , ೨೦೦೯ರಂದು ಯೂನಿಯನ್ ಕ್ಯಾಬಿನೆಟ್ (ಕೇಂದ್ರ ಸಂಪುಟ) ರಾಯ್ ಪುರ್ ನಲ್ಲಿ ಒಂದು ಇಂಡಿಯನ್ ಇಂಸ್ಟಿಟ್ಯೂಟ್ಸ್ ಆಫ್ ಮ್ಯಾನೇಜ್ ಮೆಂಟ್ ಸ್ಥಾಪಿಸಬೇಕೆಂಬ ಯೋಜನೆಯನ್ನು ಅಂಗೀಕರಿಸಿತು. IIM ರಾಯ್ ಪುರ್ ನ ಮೊದಲ ವರ್ಷದ ಸ್ನಾತಕೋತ್ತರ ವಿದ್ಯಾಕಾರ್ಯಗಳ ಉದ್ಘಾಟನಾ ಸಮಾರಂಭವನ್ನು (http://www.iimraipur.ac.in/) ಅಕ್ಟೋಬರ್ ೧೧,೨೦೧೦ರಂದು ಛತ್ತಿಶ್ ಘಡ್ ನ ಮುಖ್ಯಮಂತ್ರಿಗಳಾದ ಡಾ. ರಮಣ್ ಸಿಂಗ್ ರೂ ಸೇರಿದಂತೆ ರಾಜ್ಯದ ಪ್ರಮುಖ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು. ಛತ್ತೀಸ್ ಘಡ್ ನಲ್ಲಿ AIIMS ಸಹ ಇದೆ; ಅದು ಇನ್ನು ಎರಡು ವರ್ಷಗಳಲ್ಲಿ ಆರಂಭವಾಗುತ್ತದೆ.

ಸಂಸ್ಕೃತಿ

ಬದಲಾಯಿಸಿ
 
ಮಧ್ಯ ಛತ್ತೀಸ್‌ಘಡ್ ನಲ್ಲಿ ಕಂಡುಬರುವ, ಸಾಮಾನ್ಯವಾಗಿ ಜೋಡಿ ನೀರು-ಎಮ್ಮೆಗಳಿಂದ ಎಳೆಯಲ್ಪಡುವ ಮತ್ತು ಗ್ರಾಮೀಣ ಸಾರಿಗೆಗಾಗಿ ಬಳಸಲ್ಪಡುವ ಗ್ರಾಮೀಣ ಗಾಡಿ.
 
ಮಲ್ಹಾರ್ ಗ್ರಾಮದಲ್ಲಿನ ಹಿಂದೂ ದೇವಸ್ಥಾನದಲ್ಲಿರುವ 10ನೆಯ ಅಥವಾ 11ನೆಯ ಶತಮಾನದ ಕೆತ್ತನೆ ಕೆಲಸ(ಶಿಲ್ಪ).ಬಿಲಾಸ್ ಪುರ್ ನಿಂದ ೪೦ ಕಿಲೋಮೀಟರ್ ದೂರದಲ್ಲಿರುವ ಈ ಪ್ರದೇಶವು ಪುರಾತನ ಕಾಲದಲ್ಲಿ ಒಂದು ಪ್ರಮುಖ ಬೌದ್ಧ ಕೇಂದ್ರವಾಗಿತ್ತು ಎಂದು ನಂಬಲಾಗಿದೆ.

ರಾಜ್ಯವು ಹಲವಾರು ಧಾರ್ಮಿಕ ಪಂಗಡಗಳಿಗೆ ನೆಲೆಯಾಗಿದ್ದು ಅವುಗಳ ಪೈಕಿ ಸತ್ನಾಮೀ ಪಂಥ್ , ಕಬೀರ್ ಪಂಥ್, ರಾಮ್ ನಾಮೀ ಸಮಾಜ್ ಹಾಗೂ ಇತರ ಪಂಗಡಗಳೂ ಸೇರಿವೆ. ಸಂತ ವಲ್ಲಭಾಚಾರ್ಯರ ಜನ್ಮಸ್ಥಳವಾದ ಚಂಪಾರನ್ (ಛತ್ತೀಸ್ ಘಡ್) ಒಂದು ಸಣ್ಣ, ಆದರೆ ಧಾರ್ಮಿಕವಾಗಿ ಮುಖ್ಯವಾದ, ಪಟ್ಟಣವಾಗಿದ್ದು ಗುಜರಾತಿ ಪಂಗಡದವರಿಗೆ ಪುಣ್ಯಕ್ಷೇತ್ರವಾಗಿ ಬಹಳ ಪ್ರಸಿದ್ಧಿಯನ್ನು ಪಡೆಯುತ್ತಿರುವ ಪಟ್ಟಣವಾಗಿದೆ.

ಛತ್ತೀಸ್ ಘಡ್ ನ ಪೂರ್ವಭಾಗಗಳಲ್ಲಿ ಒರಿಯಾ ಸಂಸ್ಕೃತಿಯು ಹೆಚ್ಚು ಚಾಲ್ತಿಯಲ್ಲಿದೆ.

ಕುಶಲಕಲೆಗಳು

ಬದಲಾಯಿಸಿ

ಛತ್ತೀಸ್ ಘಡ್ ಕೋಸಾ ರೇಷ್ಮೆ, ಗತಿಸಿದ ಅರಗಿನ ಕಲೆಗಳಿಗೆ ಹೆಸರುವಾಸಿಯಾಗಿದೆ. ಸೀರೆಗಳು ಮತ್ತು ಸಲ್ವಾರ್ ಸೂಟ್ ಗಳಿಗಷ್ಟೇ ಅಲ್ಲದೆ ಈ ವಸ್ತ್ರವನ್ನು ಲೆಹೆಂಗಾಗಳು, ಶಾಲುಗಳು,ಸ್ಟೋಲ್ ಗಳು(ಸ್ತ್ರೀಯರ ಪುಟ್ಟ ಉತ್ತರೀಯಗಳು ಹಾಗೂ ಪುರುಷರ ಜ್ಯಾಕೆಟ್ ಗಳು, ಅಂಗಿಗಳು, ಆಚ್ಕನ್ ಗಳು ಮತ್ತು ಶೆರ್ವಾನಿಗಳಿಗೂ ಬಳಸಲಾಗುತ್ತದೆ. ಗಳಿತ ಅರಗಿನ ಲೋಹದಲ್ಲಿ, ಅಂತರರಾಷ್ಟ್ರೀಯ ಮಟ್ಟದ ಶಿಲ್ಪಿ ಸುಶೀಲ್ ಸಖೂಜಾರ ಧೋಕ್ರಾ ನಂದಿಯು ವಿಶ್ವವಿಖ್ಯಾತವಾಗಿದ್ದು ಇದು ಸರ್ಕಾರದ ಶಬರಿ ಕರಕುಶಲ ವಸ್ತುಗಳ ಎಂಪೋರಿಯಂ, ರಾಯ್ ಪುರ್ ನಲ್ಲಿ ಲಭ್ಯವಿದೆ.

ಪಂಥಿ , ರಾವುತ್ ನಾಚಾ "ಕರ್ಮ" ಮತ್ತು ಸೋವಾ ಶೈಲಿಯ ನೃತ್ಯಗಳು ಈ ಪ್ರದೇಶದಲ್ಲಿ ಹೆಚ್ಚು ಜನಪ್ರಿಯವಾಗಿವೆ.

ರಾವುತ್ ನಾಚಾ ಎಂಬ ಗೋಪಾಲಕರ ಜನಪದ ನೃತ್ಯವು ಯಾದವರ/ಯದುವಂಶೀಯರ ಸಾಂಪ್ರಾದಾಯಿಕ ಜನಪದ ನೃತ್ಯವಾಗಿದ್ದು ಇದು ಹಿಂದೂ ಕ್ಯಾಲೆಂಡರ್ ನ ಪ್ರಕಾರ 'ದೇವ್ ಉಡ್ನೀ ಏಕಾದಶಿ'(ಕೊಂಚ ವಿರಾಮದ ನಂತರ ದೇವನನ್ನು ಎಬ್ಬಿಸುವ ದಿನ)ಯಂದು ಕೃಷ್ಣನಿಗೆ ಪೂಜಿಸುವುದರ ಸಂಕೇತವಾಗಿ ನರ್ತಿಸುವ ನೃತ್ಯವಾಗಿದೆ. ಈ ನೃತ್ಯವು ಕೃಷ್ಣನು ಗೋಪಿಕೆ(ಗೌಳಗಿತ್ತಿಯರು)ಯರೊಡನೆ ಆಡಿದ ನೃತ್ಯಗಳನ್ನು ಹೋಲುವಂತಹುದಾಗಿದೆ.

ಸತ್ನಾಮೀ ಪಂಗಡದವರ ಪಂಥಿ ಜನಪದ ನೃತ್ಯವು ಧಾರ್ಮಿಕ ವಿಧಿಗಳ ಕ್ರಮಗಳನ್ನು ಹೆಚ್ಚು ಅಳವಡಿಸಿಕೊಂಡಿದೆ. ಪಂಥಿ ನೃತ್ಯವನ್ನು ಗುರು ಘಾಸೀದಾಸರ ಜನ್ಮದಿನವಾದ ಮಾಘಿ ಪೂರ್ಣಿಮೆಯಂದು ವಾರ್ಷ ವರ್ಷವೂ ಮಾಡಲಾಗುತ್ತದೆ. ಗುರುಗಳ ಗುಣಗಾನ ಮಾಡುವಂತಹ ಹಾಡುಗಳನ್ನು ಹಾಡುತ್ತಾ, ಆ ಸಂದರ್ಭಕ್ಕೆಂದೇ ನಿರ್ಮಿಸಿದ/ನಿಲ್ಲಿಸಿದ ಜೈತ್ ಖಂಭ್ ನ ಸುತ್ತಲೂ ನೃತ್ಯಗಾರ/ಗಾರ್ತಿಯರು ನರ್ತಿಸುತ್ತಾರೆ. ಈ ಹಾಡುಗಳು ನಿರ್ವಾಣದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತಾ, ಗುರುಗಳ ತ್ಯಾಗದ ಮಹಿಮೆಯನ್ನು ಸಾರುತ್ತವೆ; ಸಂತ ಕವಿಗಳಾದ ಕಬೀರ್, ರಾಮ್ ದಾಸ್ ಮತ್ತು ದಾದುರವರ ಬೋಧನೆಗಳನ್ನೂ ಈ ಗೀತೆಗಳಲ್ಲಿ ಸಾರಲಾಗುತ್ತದೆ. ಸೊಂಟ ಬಗ್ಗಿಸಿ, ಕೈಗಳನ್ನು ಬೀಸುತ್ತಾ ನರ್ತಿಸುವ ಭಕ್ತರು ನರ್ತಿಸುತ್ತಾ, ನರ್ತಿಸುತ್ತಾ ಭಾವಪರವಶರಾಗುತ್ತಾರೆ. ಲಯ ಹೆಚ್ಚಿದಂತೆ, ಅವರು ಕಸರತ್ತುಗಳನ್ನು ಮಾಡುತ್ತಾ ಮಾನವ ಪಿರಮಿಡ್ ಗಳನ್ನು ರಚಿಸುತ್ತಾರೆ.

ಛತ್ತೀಸ್ ಘಡ್ ನಲ್ಲಿ ಜನಪದ ಗೀತೆಗಳು ವಿಪುಲವಾಗಿದ್ದು, ಅವುಗಳ ಪೈಕಿ ಸೊಹಾರ್ , ಬಿಹಾವ್ & ಪಥೋನಿ ಹಾಡುಗಳು ಪ್ರಸಿದ್ಧವಾಗಿವೆ.

ಸೊಹಾರ್ ಗೀತೆಗಳು ಮಗುವಿನ ಜನನಕ್ಕೆ ಸಂಭಂದಿತವಾದವು. ಬಿಹಾವ್ ಹಾಡುಗಳು ವಿವಾಹ ಸಂಭ್ರಮಕ್ಕೆ ಸಂಬಂಧಿತವಾದವು. ಬಿಹಾವ್ ಹಾಡುಗಳ ಪ್ರಮುಖ ಅಂಶಗಳು ಚುಲ್ಮತಿ, ತೇಲ್ಮತಿ, ಮಾಯ್ ಮೌರಿ, ನಾಹ್ ದೌರಿ, ಪರ್ಘನಿ, ಭಡೋನಿ ಹಾಗೂ ಭನ್ ವೆರ್, ವಿದಾಯ್ ಗೀತೆಗಳಿಗೆ ಸಂಬಂಧಿಸಿದ ಇತರ ಗೀತೆಗಳು.

ಪಥೋನಿ ಹಾಡುಗಳು ಗೌನಾ ,ವಧುವು ವರನ ಮನೆಗೆ ಹೊರಡುವ ಸಮಯದಲ್ಲಿ ಹಾಡಲ್ಪಡುವ ಹಾಡುಗಳು.

ಪಾಂಡವಾನಿ ಎಂಬುದು ಜನಪ್ರಿಯವಾದ ಲಾವಣಿ ಮಾದರಿಯ ಗೀತಶೈಲಿಯಾಗಿದ್ದು, ಮಹತ್ಕೃತಿಯಾದ ಮಹಾಭಾರತದ ಕಥೆಗಳನ್ನು ಆಧರಿಸಿದ ಗೀತರೂಪಕವಾಗಿದೆ; ಒಂದೇ ವ್ಯತ್ಯಾಸವೆಂದರೆ ಈ ಗೀತೆಗಳಲ್ಲಿ ಭೀಮನನ್ನು ಮಹಾಭಾರತದ ನಾಯಕನಾಗಿ ಬಿಂಬಿಸಲಾಗಿದೆ. ತೀಜನ್ ಬಾಯು ಪಾಂಡವಾನಿಯನ್ನು ಪ್ರಸ್ತುತಪಡಿಸುವ ಮಹಾನ್ ಕಲಾವಿದರಾಗಿದ್ದು, ಅಂತರರಾಷ್ಟ್ರೀಯ ಖ್ಯಾತೆಯನ್ನೂ ಪಡೆದವರಾಗಿದ್ದು, ೨೦೦೩ರಲ್ಲಿ ಪಾಂಡವಾನಿ ಕಲೆಗೆ ಅವರು ನೀಡಿದ ಕೊಡುಗೆಗೆ ಅವರಿಗೆ ಪದ್ಮ ಭೂಷಣ ಪ್ರಶ್ತಿಯನ್ನು ನೀಡಿ ಗೌರವಿಸಲಾಯಿತು. ರೀತು ವರ್ಮ ಸಹ ಈ ನಿಟ್ಟಿನಲ್ಲಿ ಖ್ಯಾತರಾಗಿದ್ದಾರೆ .[]

ರಂಗಭೂಮಿ

ಬದಲಾಯಿಸಿ

ಛತ್ತೀಸ್ ಘಡ್ ನಲ್ಲಿ ನಾಟಕ ಕಲೆಯನ್ನು ಗಮ್ಮತ್ ಎಂದು ಕರೆಯುತ್ತಾರೆ. ಈ ರಂಗದಲ್ಲಿ ಪಾಂಡವಾನಿಯು ಕಾವ್ಯರೂಪದಲ್ಲಿ ಪ್ರಸ್ತುತಪಡಿಸಲಾಗುವ ಒಂದು ಕ್ರಮ. ಹಬೀಬ್ ತನ್ವೀರ್ ರ ಹಲವಾರು ಪ್ರಸಿದ್ಧ ನಾಟಕಗಳು; ವಿಶೇಷತಃ ಚರಣ್ ದಾಸ್ ಚೋರ್, ಛತ್ತೀಸ್ ಘರ್ಹಿ ನಾಟಕರಂಗದ ಅನ್ಯ/ವಿವಿಧ ರೂಪಗಳಾಗಿದ್ದು, ಛತ್ತೀಸ್ ಘರ್ಹಿ ಜನಪದ ಗೀತೆಗಳು ಮತ್ತು ಜನಪದಸಂಗೀತದಿಂದ ಆವೃತವಾಗಿರುತ್ತವೆ.

ಧಾರ್ಮಿಕತೆ

ಬದಲಾಯಿಸಿ
Religion in Chhattisgarh
Religion Percent
ಹಿಂದೂ ಧರ್ಮ
  
96%
Others
  
4%

ರಾಜ್ಯದಲ್ಲಿ ೯೫%ಗಿಂತಲೂ ಹೆಚ್ಚು ಜನರು ಹಿಂದೂಗಳು. (೦}ಪರಶುರಾಮ ರಾಮ್ ನಾಮಿ ಮತ್ತು ವಲ್ಲಭ ಆಚಾರ್ಯರೂ ಸೇರಿದಂತೆ ಹಲವಾರು ಸಂತರ ಮೂಲಸ್ಥಾನಗಳು ಛತ್ತೀಸ್ ಘಡ್ ನಲ್ಲಿವೆ. ಮಹರ್ಷಿ ಮಹೇಶ್ ಯೋಗಿ ಎಂಬ ಖ್ಯಾತ ಹಿಂದೂ ಮುಖಂಡ ಹಾಗೂ ಉತ್ಕೃಷ್ಟ ಧ್ಯಾನದ ಹರಿಕಾರು ಜಬಲ್ ಪುರ್ (ಮಧ್ಯಪ್ರದೇಶ)ನವರಾಗಿದ್ದರು. ಹಲವಾರು ಬುಡಕಟ್ಟು ಜನಾಂಗಗಳಲ್ಲಿ ಗಮನಾರ್ಹವಾದ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ನರು ಕಂಡುಬರುವರಾದರೂ, ಅವರ ಜನಸಂಖ್ಯೆಯ ಬಗ್ಗೆ ನಂಬಲರ್ಹವಾದ ಅಂಕಿ ಅಂಶಗಳು ಲಭ್ಯವಿಲ್ಲ.

ಭಾರ ಸರ್ಕಾರದ ವರದಿಯ ಪ್ರಕಾರ[] ಕಡಿಮೆಯೆಂದರೆ ೯೬% ಛತ್ತೀಸ್ ಘಡ್ ಜನರು ಶೂದ್ರ ಅಥವಾ ಪರಿಶಿಷ್ಟ ವರ್ಗ[ST]ಕ್ಕೆ ಸೇರಿದವರಾಗಿದ್ದಾರೆ: ೩೪% (೨}ಪರಿಶಿಷ್ಟ ವರ್ಗದವರಿದ್ದಾರೆ, ೧೨% ಪರಿಶಿಷ್ಟ ಜಾತಿಯವರು ಹಾಗೂ ೫೦%ಗೂ ಹೆಚ್ಚಿನವರು ಇತರ ಹಿಂದುಳಿದ ಜಾತಿಗಳು ಎಂಬ ಅಧಿಕೃತ ಪಟ್ಟಿಗೆ ಸೇರಿದವರಾಗಿದ್ದಾರೆ. ಸಮತಟ್ಟು ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಲ್ಲಿರುವ ಜನರು ಈ ಕೆಳಕಂಡ ಜಾತಿಗಳಿಗೆ ಸೇರಿದವರಾಗಿದ್ದಾರೆ: ತೇಲಿ, ಸತ್ನಾಮಿ ಮತ್ತು ಕುರ್ಮಿ; ಅರಣ್ಯ ಪ್ರದೇಶಗಳಲ್ಲಿ ಕಂಡು ಬರುವ ಬುಡಕಕಟ್ಟು ಜನಾಂಗಗಳೆಂದರೆ ಗೋಂಡ್, ಹಲ್ಬಾ ಮತ್ತು ಕಮಾರ್/ಬುಜ್ಜ ಮತ್ತು ಒರಯಾನ್.

ಸ್ತ್ರೀಯರ ಸ್ಥಿತಿಗತಿಗಳು

ಬದಲಾಯಿಸಿ

ಭಾರತದ ಇತರ ಜಾಗಗಳಿಗೆ ಹೋಲಿಸಿದರೆ ಛತ್ತೀಸ್ ಗಢ್ ನಲ್ಲಿ ಅತಿ ಹೆಚ್ಚಿನ ಹೆಣ್ಣು-ಗಂಡುಗಳ ಲಿಂಗ ಅನುಪಾತವಿದೆ(೯೯೦), ಇದಕ್ಕಿಂತಲೂ ಹೆಚ್ಚಿನ ಅನುಪಾತವಿರುವುದು ಕೇರಳದಲ್ಲಿ; ಗ್ರಾಮೀಣ ಪ್ರದೇಶಗಳಲ್ಲಿ ಈ ಲಿಂ-ಅನುಪಾತವು ೧೦೦೪ರಷ್ಟಿದೆ.[] ಈ ಅನುಪಾತವು ಇತರ ರಾಜ್ಯಗಳಲ್ಲಿನ ಚಿಕ್ಕ ಪ್ರದೇಶಗಳಿಗೆ ಹೋಲಿಸಲ್ಪಡಬಹುದಾದರೂ, ಛತ್ತೀಸ್ ಘಡ್ ನಷ್ಟು ವಿಸ್ತಾರವಾದ ರಾಜ್ಯದಲ್ಲಿ ಈ ಅನುಪಾತ ಕಂಡುಬರುವುದು ಇಡೀ ದೇಶದಲ್ಲೇ ಅದ್ವಿತೀಯವಾದುದಾಗಿದೆ. (ಇದು ದೇಶದ ಹತ್ತನೆಯ ಅತಿ ದೊಡ್ಡ ರಾಜ್ಯವಾಗಿದ್ದು, ಇದು ತಮಿಳ್ ನಾಡು)ಗಿಂತಲೂ ಹಲವಾರುಪಟ್ಟು ದೊಡ್ಡ ರಾಜ್ಯವಾಗಿದೆ. ಪ್ರಾಯಶಃ ಈ ವಿಧದ ಸಾಮಾಜಿಕ ಮಿಶ್ರತೆಯು ಛತ್ತೀಸ್ ಘಡ್ ಗೆ ಮಾತ್ರ ಸೀಮಿತವಾದ ಕೆಲವು ರೀತಿರಿವಾಜುಗಳು ಹಾಗೂ ಸಾಂಸ್ಕೃತಿಕ ಆಚಾರಗಳಿಗೆ ಬುನಾದಿಯಾಗಿದೆ: ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಹೀಗೆ ಪ್ರಾದೇಶಿಕ ವಿಭಿನ್ನತೆಗಳು ಕಂಡುಬರುವುದು ಅಸಾಮಾನ್ಯವೇನಲ್ಲ. ಇಲ್ಲಿನ ಗ್ರಾಮೀಣ ಮಹಿಳೆಯರು ಬಡವರಾಗಿದ್ದರೂ ಹೆಚ್ಚು ಸ್ವತಂತ್ರವುಳ್ಳವರು, ಗಟ್ಟಿಗರು, ಹೆಚ್ಚು ವ್ಯವಸ್ಥಿತವಾಗಿ ಜೀವನ ನಡೆಸುವವರು, ಸಾಮಾಜಿಕವಾಗಿ ತಮ್ಮ ಅನಿಸಿಕೆಗಳಿಗೆ ದನಿ ನೀಡುವವರು, ಹಾಗೂ ಈಶಾನ್ಯ ಭಾರತೀಯ ಮಹಿಳೆಯರಂತೆಯೇ ಹೆಚ್ಚು ಅಧಿಕಾರ ಚಲಾಯಿಸುವವರು[ಸೂಕ್ತ ಉಲ್ಲೇಖನ ಬೇಕು]: ಈ ಅಧಿಕಾರ ಯಾವ ಮಟ್ಟಕ್ಕಿದೆಯೆಂದರೆ ಅವರು ತಮ್ಮ ವಿವಾಹಕ್ಕೆ ತಮ್ಮದೇ ಆದ ಆಯ್ಕೆ ಹೊಂದಲೂ, ಬೇಡವೆನಿಸಿದಾಗ ಪತಿಯನ್ನು ತೊರೆದು ಹೊರನಡೆಯಲೂ ಸಮರ್ಥರಾಗಿದ್ದಾರೆ[ಸೂಕ್ತ ಉಲ್ಲೇಖನ ಬೇಕು]. ಇಲ್ಲಿನ ಹಲವಾರು ಗುಡಿಗಳು, ದೇಗುರಲಗಳು ಮತ್ತು ಪ್ರತಿಮೆಗಳು 'ಸ್ತ್ರೀ ಶಕ್ತಿ'ಗೆ ಸಂಬಂಧಿತವಾಗಿವೆ; (ಉದಾಹರಣೆಗೆ, ಶಬರಿ, ಮಹಾಮಾಯಾ, ದಾಂತೇಶ್ವರಿ) ಮತ್ತು ಈ ದೇಗುಲಗಳ ಅಸ್ಥಿತ್ವವು ಈ ಸ್ಥಳದ ಐತಿಹಾಸಿಕ ಹಿನ್ನೆಲೆಯನ್ನೂ, ರಾಜ್ಯದ ಪ್ರಸ್ತುತ ಸಾಮಾಜಿಕ ರೀತಿನೀತಿಗಳನ್ನು ಬಿಂಬಿಸುವಲ್ಲಿ ಸಮರ್ಥವಾಗಿದೆ.

ಇಲ್ಲಿನ ಸ್ತ್ರೀಯರು ಮತ್ತು ಪುರುಷರು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುತ್ತಾರೆ; ನಾಗರಿಕತೆ ತನ್ನ ತಲೆ ಎತ್ತುವ ಮುನ್ನ ಸಮಗ್ರ ಭಾರತದಲ್ಲಷ್ಟೇ ಅಲ್ಲದೆ ವಿಶ್ವದಲ್ಲೇ ಬೇಗ ವಿವಾಹವಾಗುವ ಪದ್ಧತಿ ರೂಢಿಯಲ್ಲಿದ್ದಿತು, ಆ ರೂಢಿ ಇಂದಿಗೂ ಇಲ್ಲಿ ಮುಂದುವರಿದಿದೆ. ಒಂದು ಸಮೀಕ್ಷೆಯ ಪ್ರಕಾರ ೨೦ರಿಂದ ೪೯ರ ವರೆಗಿನ ವಯಸ್ಸಿನ ಮಹಿಳೆಯರು ಸರಾಸರಿ೧೫.೪ ವರ್ಷ ವಯಸ್ಸಿಗೇ ಮದುವೆಯಾಗಿದ್ದುದು ಕಂಡುಬಂದಿದೆO ಹಾಗೂ ೩೪% ಹುಡುಗಿಯರು, ಇನ್ನೂ ೧೫ರಿಂದ ೧೯ರ ಹರೆಯದವರು, ಆಗಲೇ ಮದುವೆಯಾಗಿರುವುದು ಕಂಡುಬಂದಿದೆ (ಸರ್ಕಾರದ ಹೇಳಿಕೆಯ ಪ್ರಕಾರ).[ಸೂಕ್ತ ಉಲ್ಲೇಖನ ಬೇಕು]

ಛತ್ತೀಸ್ ಘಡ್ ನಲ್ಲಿ ವಾಮಾಚಾರದ ಬಗ್ಗೆ ಬಹಳ ನಂಬಿಕೆಯಿದೆ. ಮಹಿಳೆಯರು ಮಾನವಾತೀತ ಶಕ್ತಿಗಳನ್ನು ಸಂಪರ್ಕಿಸಲು ಸಮರ್ಥರೆಂದು ಇಲ್ಲಿ ನಂಬಲಾಗಿದ್ದು, ಅವರನ್ನು ಮಾಟಗಾತಿಯರೆಂದು (ತೊಹ್ನೀ ) ಆರೋಪಿಸಲಾಗುತ್ತದೆ ಹಾಗೂ ಹೀಗೆ ಆರೋಪ ಹೊರಿಸುವುದು ಸಾಮಾನ್ಯವಾಗಿ ಸೇಡಿಗಾಗಿ ಆಗಿರುತ್ತದೆ. ಅವರನ್ನು ಕ್ರೂರವಾಗಿ ಹಿಂಸಿಸಲಾಗುತ್ತದೆ; ಅದರಲ್ಲೂ ಮುದುಕಿಯರು, ವಿಧವೆಯರು, ಅಂಗಾಂಗಗಳು ಊನವಿರುವವರು ಹಾಗೂ ಅಸಾಮಾನ್ಯವಾದ ಚಹರೆ ಇರುವವರನ್ನು ಬಹಳವೇ ಹಿಂಸಿಸಲಾಗುತ್ತದೆ. ೨೦೧೦ನೆಯ ಇಸವಿಯಲ್ಲೂ ಸಹ, ಆಸ್ತಿ ಮತ್ತು ಇತರ ಸಾಮಾನುಗಳನ್ನು ಅವರನ್ನು ವಂಚಿಸಿ ಪಡೆಯುವ ಸಲುವಾಗಿ ಅಥವಾ ಇನ್ನಾವುದೋ ದ್ವೇಷದ ಪರಿಣಾಮವಾಗಿ, ಪುರುಷ ಮಾಂತ್ರಿಕರಿಗೆ ಹಣದ ಆಮಿಷವೊಡ್ಡಿ ಅತಿ ಕ್ಷುಲ್ಲಕವಾದ ಆರೋಪಗಳನ್ನು ಹೊರಿಸಿ, ಮೇಲೆ ತಿಳಿಸಿದಂತಹ ಸ್ತ್ರೀಯರನ್ನು ಹಳ್ಳಿಯಿಂದ ಹೊರಗಟ್ಟಲಾಗುತ್ತಿದೆ.[ಸೂಕ್ತ ಉಲ್ಲೇಖನ ಬೇಕು] ನ್ಯಾಷನಲ್ ಜಿಯೋಗ್ರಾಫಿಕ್ ವಾಹಿನಿಯ ಶೋಧನೆಯ ಪ್ರಕಾರ, ಹೀಗೆ ಆರೋಪಿತರಾದವರು ಬರಿದೇ ಬೈಯಲ್ಲಪಟ್ಟರೆ ಅಥವಾ ಬಹಿಷ್ಕರಿಸಲ್ಪಟ್ಟರೆ ಅಥವಾ ಗ್ರಾಮದಿಂದ ಹೊರದಬ್ಬಲ್ಪಟ್ಟರೆ ಅಂತಹವರು ಅದೃಷ್ಟವಂತರೆಂದೇ ತಿಳಿಯಬೇಕು. ಅಂತಹ ಹೆಣ್ಣುಗಳಿಗೆ ಬಲವಂತವಾಗಿ ಮಲ ತಿನ್ನಿಸುವುದು ಹಾಗೂ ಇತರ ರೀತಿಯ ಅವಮಾನಗಳನ್ನು ಮಾಡುವುದು ಸರ್ವೇಸಾಮಾನ್ಯವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ೨,೫೦೦ ಸ್ತ್ರೀಯರನ್ನು ಮಾಟಗಾತಿಯರೆಂದು ಆರೋಪಿಸಿ ಅವರನ್ನು ಕಲ್ಲಿನಿಂದ ಹೊಡೆದೋ, ನೇಣುಹಾಕಿಯೋ ಅಥವಾ ಶಿರಚ್ಛೇದ ಮಾಡಿಯೋ ಅಕ್ಕಪಕ್ಕದವರು ಕೊಂದಂತಹ ಪ್ರಸಂಗಗಳು ದಾಖಲಾಗಿವೆ. ಪೊಲೀಸರು ಮತ್ತು ಕಾನೂನು ಅಧಿಕಾರಿಗಳು ಈ ಬಗ್ಗೆ ಏನೇನೂ ಕ್ರಮ ತೆಗೆದುಕೊಳ್ಳದೆ, ಸ್ತ್ರೀಯರಿಗೆ ರಕ್ಷಣೆ ನೀಡುವುದರಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಹಾಗೂ ಅಂತಹ ಹಿಂಸೆಗಳನ್ನು ಕೊನೆಗೊಳಿಸುವಲ್ಲಿ ಬಹಳ ಕಡಿಮೆ ಆಸಕ್ತಿ ತೋರಿಸಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ಈಗಿನ ದಿನಗಳಲ್ಲಿ, ಭಾರತದ ಮುಖ್ಯವಾಹಿನಿಯೊಂದಿಗೆ ಸಂಪರ್ಕ ಹೆಚ್ಚಿದಂತೆ, ಸ್ತ್ರೀಯರನ್ನು ಅಡಿಯಾಳಾಗಿ ಕಾಣುವಂತಹ ಭಾರತದ ಇತರ ಪ್ರದೇಶಗಳಲ್ಲಿನ ಹೀನ ಸಂಸ್ಕೃತಿಯು ಛತ್ತೀಸ್ ಘಡ್ ಗೂ ಮೆಲ್ಲಗೆ ನುಸುಳುತ್ತಿದೆ. ಈ ಶತಮಾನದಲ್ಲಿ ಛತ್ತೀಸ್ ಘಡ್ ನಲ್ಲಿ ಲಿಂಗ ಅನುಪಾತವು (ಪ್ರತಿ ನೂರು ಗಂಡುಗಳಿಗೆ ಹೆಣ್ಣುಗಳ ಸಂಖ್ಯೆ) ಕ್ರಮೇಣ ಕಡಿಮೆಯಾಗುತ್ತಾ ಬರುತ್ತಿದೆ: ೧೯೦೧ರಲ್ಲಿ ೧೦೪೬, ೧೯೪೧ರಲ್ಲಿ ೧೦೩೨, ೧೯೮೧ರಲ್ಲಿ ೯೯೬ ಮತ್ತು ೯೯೦ in ೦೦೧ರಲ್ಲಿ ೯೯೦; ಆದರೆ ಇಡೀ ಭಾರತಕ್ಕೆ ಹೋಲಿಸಿದರೆ ಇದು ದೇಶದಲ್ಲೇ ಅತ್ಯುತ್ತಮವಾದುದು: ೧೯೦೧ರಲ್ಲಿ ೯೭೨, ೯೪೫ in ೯೪೧ರಲ್ಲಿ ೯೪೫, ೧೯೮೧ರಲ್ಲಿ ೯೩೪ and ೯೩೩ in ೨೦೦೧. ಛತ್ತೀಸ್ ಘಡ್ ನಲ್ಲಿನ ವಿವಿಧ ವಿಷಯಗಳ ಕುರಿತು ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ದ ಲಿಂಕ್ಡ್ 103 ಪೇಜ್ ರಿಪೋರ್ಟ್ Archived 2009-06-19 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ 'ಎ ಸೆಚುಯೇಷನಲ್ ಅನಾಲಿಸಿಸ್ ಆಫ್ ವಿಮೆನ್ ಎಂಡ್ ಗರ್ಲ್ಸ್ ಇನ್ ಛತ್ತೀಸ್ ಘಡ್' ಎಂಬ ತಲೆಬರಹದಡಿಯಲ್ಲಿ ಪಡೆಯಬಹುದು; ಈ ಮಾಹಿತಿಯನ್ನು ೨೦೦೪ರಲ್ಲಿ 'ನ್ಯಾಷನಲ್ ಕಮಿಷನ್ ಆಫ್ ವಿಮೆನ್' ಎಂಬ ಭಾರತ ಸರ್ಕಾರಕ್ಕೆ ಸೇರಿದ ಸ್ಥಾಯಿ ಸಮಿತಿಯು ತಯಾರಿಸಿತು.

ರಾಜ್ಯದ ಅಧಿಕೃತ ಭಾಷೆ ಹಿಂದಿ; ಇದನ್ನು ರಾಜ್ಯದ ಎಲ್ಲಾ ಜನರೂ ಸಾಮಾನ್ಯವಾಗಿ ಬಳಸುತ್ತಾರೆ. ಛತ್ತೀಸ್ ಘರ್ಹಿ ಎಂಬ ಹಿಂದಿ ಭಾಷೆಯ ನಾಡಭಾಷೆ/ಆಡುಭಾಷೆಯ ರೂಪಯನ್ನು (ಅಥವಾ ತಾನೇ ಒಂದು ಪ್ರತ್ಯೇಕ ಭಾಷೆಯಂತೆಯೂ) ಛತ್ತೀಸ್ ಘಡ್ ನ ಬಹುತೇಕ ಜನರು ಮಾತನಾಡುತ್ತಾರೆ ಮತ್ತು ಅರ್ಥ ಮಾಡಿಕೊಳ್ಳುತ್ತಾರೆ. ಛತ್ತೀಸ್ಘರ್ಹಿಯನ್ನು ಖಲ್ ತಾಹಿಭಾಷೆಯೆಂದು ಸುತ್ತಲಿನ ಗುಡ್ಡಗಾಡಿನ ಜನರು ಕರೆಯುತ್ತಿದ್ದರು ಮತ್ತು ಅದೇ ಭಾಷೆಯನ್ನು ಸಂಬಲ್ ಪುರಿ ಮತ್ತು ಒರಿಯಾ ಭಾಷೆಯವರು ಲಾರಿಯಾ ಎಂದು ಕರೆಯುತ್ತಿದ್ದರು. ಕೊರಿಯಾ, ಸೂರಜ್ ಪುರ್, ಸುರೌಜಾ ಮತ್ತು ಜಶ್ ಪುರ್ ಗಳಲ್ಲಿ ಈ ಭಾಷೆಯು ಸುರ್ ಗುಜ್ಜಾ ಎಂಬ ಉಪ-ಆಡುಭಾಷೆಯಾಗಿ ಕಾಣಿಸಿಕೊಳ್ಳುತ್ತದೆ.ಬಸ್ತಾರ್ ನಲ್ಲಿ ಗೋಂಡಿ, ಬುಡಕಟ್ಟು ಭಾಷೆಗಳು ಬಳಕೆಯಲ್ಲಿವೆ. ಛತ್ತೀಸ್ ಘಡ್ ನಲ್ಲಿ ಬಳಸಲ್ಪಡುವ ಇತರ ಪ್ರಮುಖ ಭಾಷೆಗಳೆಂದರೆ ಹಿಂದಿ, ಸಂಬಲ್ ಪುರಿ, ಮರಾಠಿ ಮತ್ತು ಒರಿಯಾ

ರಾಜಕೀಯ ಮತ್ತು ಸರ್ಕಾರ

ಬದಲಾಯಿಸಿ
  • ೨೦೦೩ ರಿಂದ ಹತ್ತು ವರಷ ಬಿಜೆಪಿ ಆಡಳಿತ

ಚುನಾವಣೆ 2013

ಬದಲಾಯಿಸಿ
೨೦೧೩ ರ ವಿಧಾನ ಸಭೆ ಚುನಾವಣೆ - ಡಿಸೆಂಬರ್ ೮ ರಂದು ಎಣಿಕೆ ಮತ್ತು ಫಲಿತಾಂಶ:
ಚತ್ತಿಸಗಡ ಒಟ್ಟು ಸ್ಥಾನ::90 ಕಾಂಗ್ರೆಸ್-39 ಬಿಜೆಪಿ-49 ಬಿಎಸ್.ಪಿ-1 ಇತರೆ-1
ಫುನಃ ಬಿಜೆಪಿಯ ರಮಣ ಸಿಂಗ್ ಮೂರನೇ ಬಾರಿ ಮುಖ್ಯ ಮಂತ್ರಿಯಾಗಿ ೧೨-೧೨-೨೦೧೩ ರಂದು ಪ್ರಮಾಣವಚನ ಸ್ವೀಕರಿಸಿದರು.

ಚುನಾವಣೆ 2018

ಬದಲಾಯಿಸಿ
  • ೨೦೧೮ Chhattisgarh election
  • 5 ನೇ 2018-ಅಸೆಂಬ್ಲಿ ಪ್ರಸ್ತುತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍- ಸರ್ಕಾರ ರಚನೆ.ಭೂಪೇಶ್ ಬಘೆಲ್ ಮುಖ್ಯಮಂತ್ರಿ. 17-12-2018 ರಂದು ಛತ್ತೀಸಗಡದ ನೂತನ ಮುಖ್ಯಮಂತ್ರಿಯಾಗಿ ಭೂಪೇಶ್ ಬಘೆಲ್ ಪ್ರಮಾಣವಚನ ಸ್ವೀಕರಿಸಿದರು
  • ಸ್ಥಾನಗಳು 91 (90 + 1 ನಾಮನಿರ್ದೇಶಿತ)
  • ಸರ್ಕಾರ ಕಾಂಗ್ರಸ್: (68 ಸದಸ್ಯರು) ; ವಿರೋಧಪಕ್ಷ ಬಿಜೆಪಿ: (15);ಇತರೆ (7)->ಜೆಸಿಸಿ (5) ಬಿಎಸ್ಪಿ (2);ನಾಮನಿರ್ದೇಶಿತ (1)[][೧೦][೧೧][೧೨]

     

ಉಲ್ಲೇಖ

ಬದಲಾಯಿಸಿ
  1. ಡಾ. ಭಗವಾನ್ ಸಿಂಗ್ ವರ್ಮ, " ಛತ್ತೀಸ್‌ಘಡ್ ಕಾ ಇತಿಹಾಸ್ " {ಹಿಂದಿಯಲ್ಲಿ}, ಮಧ್ಯ ಪ್ರದೇಶ್ ಹಿಂದಿ ಗ್ರಂಥ್ ಅಕಾಡೆಮಿ, ಭೂಪಾಲ್(M.P.), ೪ನೆಯ ಆವೃತ್ತಿ(೨೦೦೩), ಪುಟ ೭
  2. "Electoral rolls". Office of the Chief Electoral Officer, Chhatisgarh. Archived from the original on 2012-03-05. Retrieved 2011-02-14.
  3. ಛತ್ತೀಸ್‌ಘಡ್ ಎಟ್ ಎ ಗ್ಲಾನ್ಸ್-2002 Archived 2012-04-04 ವೇಬ್ಯಾಕ್ ಮೆಷಿನ್ ನಲ್ಲಿ. ಸರ್ಕಾರಛತ್ತೀಸ್‌ಘಡ್ ಸರ್ಕಾರದ ಅಧಿಕೃತ ಜಾಲತಾಣ.
  4. ಛತ್ತೀಸ್‌ಘಡ್ ಜಿಲ್ಲಾ ಕೇಂದ್ರಗಳ ಪಟ್ಟಿ Archived 2012-02-20 ವೇಬ್ಯಾಕ್ ಮೆಷಿನ್ ನಲ್ಲಿ. NIC, ಛತ್ತೀಸ್‌ಘಡ್ ಅಧಿಕೃತ ಪೋರ್ಟಲ್ ನಲ್ಲಿ
  5. ಮ್ಯಾಥ್ಯೂ, ಕೆ.ಎಂ. (ಸಂ.). ಮನೋರಮಾ ವಾರ್ಷಿಕ ಸಂಚಿಕೆ ೨೦೦೮ , ಕೊಟ್ಟಾಯಮ್: ಮಲಯಾಳ ಮನೋರಮಾ, ISSN ೦೫೪೨-೫೭೭೮, ಪುಟ ೫೧೮
  6. ಪಾಂಡವಾನಿ
  7. "NCW Report, page 4" (PDF). National Commission of Women, Government of India. Archived from the original (PDF) on 2009-06-19. Retrieved 2010-08-22.
  8. Ilina, Sen. "A Situational Analysis of Women and Girls in Chhattisgarh" (PDF). National Commission for Women, New Delhi. Archived from the original (PDF) on 19 ಜೂನ್ 2009. Retrieved 26 November 2010.
  9. Chhattisgarh Legislative Assembly". Legislative Bodies in India website. Retrieved 9 December 2010.
  10. Chhattisgarh Vidhan Sabha". Government of India. Retrieved 19 March 2013.
  11. https://kannada.oneindia.com/ ವಿಧಾನಸಭೆ ಚುನಾವಣೆ ಫಲಿತಾಂಶ 2018
  12. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡದಲ್ಲಿ ‘ಕೈ’ ಅಧಿಪತ್ಯ ಆರಂಭ17 ಡಿಸೆಂಬರ್ 2018


ಟಿಪ್ಪಣಿಗಳು

ಬದಲಾಯಿಸಿ

ಛತ್ತೀಸ್ ಘಡ್ ನಲ್ಲಿ ಪ್ರವಾಸೋದ್ಯಮ [ಛತ್ತೀಸ್ ಘರ್ಹಿ ಚಲನಚಿತ್ರ ಸಂಗೀತ]ಛತ್ತೀಸ್ ಘರ್ಹಿ ಚಲನಚಿತ್ರ ಸಂಗೀತ Archived 2011-02-07 ವೇಬ್ಯಾಕ್ ಮೆಷಿನ್ ನಲ್ಲಿ.

ಆಧಾರಗಳು

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ