ಮಹಾಭಾರತ

ಪ್ರಾಚೀನ ಭಾರತದ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯಗಳಲ್ಲಿ ಒಂದು

ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು. ಇದು ಹಿಂದೂ ಧರ್ಮದ ಒಂದು ಮುಖ್ಯ ಪಠ್ಯವೂ ಹೌದು. ವಿಶ್ವ ಸಾಹಿತ್ಯದ ಸಾಧನೆಗಳಲ್ಲಿ ಒಂದೆಂದು ಪರಿಗಣಿತವಾಗಿರುವ ಮಹಾಭಾರತ ಭಾರತೀಯ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಸಂಪೂರ್ಣ ಮಹಾಭಾರತ ಒಂದು ಲಕ್ಷಕ್ಕೂ ಹೆಚ್ಚು ಶ್ಲೋಕಗಳನ್ನು ಒಳಗೊಂಡಿದ್ದು ಗ್ರೀಕ್ ನ ಜನಪದ ಮಹಾಕಾವ್ಯಗಳಾದ ಇಲಿಯಡ್ ಮತ್ತು ಒಡಿಸ್ಸಿ - ಎರಡನ್ನೂ ಸೇರಿಸಿದರೂ ಮಹಾಭಾರತದ ಏಳನೇ ಒಂದು ಭಾಗದಷ್ಟು ಮಾತ್ರ ಆಗುತ್ತದೆ. ಮಹಾಭಾರತ 18ಪರ್ವ ಮತ್ತು 1ಲಕ್ಷ ಶ್ಲೋಕಗಳನ್ನು ಒಳಗೊಂಡ ಅದ್ಭುತ ಮಹಾಕಾವ್ಯವಾಗಿದೆ. ಮಹಾಭಾರತವು ವ್ಯಾಸ ಮುನಿಶ್ರೇಷ್ಠರಿಂದ ಮೂಲವಾಗಿ ರಚಿಸಲ್ಪಟ್ಟಿದೆ; ಎಂದು ನಂಬಲಾಗಿದೆ. ಮಹಾಭಾರತವನ್ನು ಪಂಚಮವೇದವೆಂದು ಕರೆಯಲಾಗಿದೆ. ಶ್ರೀ ಕೃಷ್ಣನಿಂದ ಪಾರ್ಥನಾದ ಅರ್ಜುನನಿಗೆ ಉಪದೇಶಿಸಲ್ಪಟ್ಟ ಮಹಿಮಾನ್ವಿತವಾದ ಭಗವದ್ಗೀತೆ ಯನ್ನು ಮಹಾಭಾರತದ ಆತ್ಮ (ಅಂತರಾತ್ಮ) ಎನ್ನಲಾಗಿದೆ.

ಮಹಾಭಾರತ
महाभारतम्
Kurukshetra.jpg
ಕುರುಕ್ಷೇತ್ರ ಕಾಳಗದ ಒಂದು ಪ್ರಾಚೀನ ಚಿತ್ರಣ
ಮಾಹಿತಿ
ಧರ್ಮಹಿಂದೂ ಧರ್ಮ
ಲೇಖಕವೇದವ್ಯಾಸ
ಭಾಷೆಸಂಸ್ಕೃತ
ಕಾವ್ಯ೨೦೦೦೦೦

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ
Modern depiction of Vyasa narrating the Mahabharata to Ganesha at the Murudeshwara temple, Karnataka.
Krishna and Arjuna at Kurukshetra, 18th-19th-century painting.

ಇತಿಹಾಸ/ಹಿನ್ನೆಲೆಸಂಪಾದಿಸಿ

ಮಹಾಭಾರತ 'ಜಯ' ಎಂಬ ಗ್ರಂಥದಿಂದ ನಿಷ್ಪನ್ನವಾಗಿದ್ದೆಂದು ಕೆಲವರ ಪ್ರತೀತಿ. ಇದರಲ್ಲಿ ಉಲ್ಲೇಖಿಸಿರುವ ಘಟನೆಗಳ ನಿಜವಾದ ಕಾಲ ಸರಿಯಾಗಿ ತಿಳಿದಿಲ್ಲ. ಮಹಾಭಾರತದಲ್ಲಿ ಕಂಡು ಬರುವ ಘಟನೆಗಳು ನಿಜವಾದ ಘಟನೆಗಳನ್ನು ಆಧರಿಸಿ ಬರೆದದ್ದೋ ಅಲ್ಲವೋ ಎಂಬುದು ಕೆಲವರಲ್ಲಿ ಚರ್ಚಾಸ್ಪದ ವಿಷಯ. ಮ್ಯಾಕ್ಸ್ ಮುಲ್ಲರ್ ಪ್ರಕಾರ ಈ ಘಟನೆಗಳು ನಡೆದ ಸಂದರ್ಭ ಸುಮಾರು ಕ್ರಿ.ಪೂ. 1400. ಇನ್ನು ಮಹಾಭಾರತದ ಘಟನೆಗಳನ್ನು ಅವಲೋಕಿಸಿ ಭಾರತೀಯ ಪಂಚಾಂಗ ರೀತ್ಯ ಕಾಲನಿರ್ಣಯ ಮಾಡಿದ ಹಲವು ವಿದ್ವಾಂಸರ ಪ್ರಕಾರ ಅದರಲ್ಲಿ ಉಲ್ಲೇಖ ಮಾಡಲಾಗಿರುವ ಅಂತರಿಕ್ಷ ಚಟುವಟಿಕೆಗಳು (ಗ್ರಹಣ ಇತ್ಯಾದಿ) ಸುಮಾರು ಕ್ರಿ.ಪೂ. 3100ಕ್ಕೆ ಹೋಲುತ್ತವೆ.

ಕಥಾವಸ್ತುಸಂಪಾದಿಸಿ

 
ಗೀತೋಪದೇಶ

ಮಹಾಭಾರತದ ಮುಖ್ಯವಾಗಿ ಚಂದ್ರವಂಶದ ರಾಜರುಗಳ ಕಥೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಕುರುವಂಶ (ಚಂದ್ರ ವಂಶ)ದ ಸದಸ್ಯರ ನಡುವೆ ನಡೆಯುವ ಹೋರಾಟವನ್ನು ಕುರಿತದ್ದು ಎಂದು ಹಲವರ ಅಭಿಮತವಾದರೂ ಈ ಹೋರಾಟದ ಕಥೆ ಕುರುಕ್ಷೇತ್ರ ಎನಿಸಿಕೊಳ್ಳುತ್ತದೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಪಾಂಡವರು ಮತ್ತು ಕೌರವರ ನಡುವೆ ನಡೆಯುವ ಈ ಹೋರಾಟ ಕುರುಕ್ಷೇತ್ರದಲ್ಲಿ ನಡೆಯುವ ಹದಿನೆಂಟು ದಿನದ ಕುರುಕ್ಷೇತ್ರ ಯುದ್ದದಲ್ಲಿ ನಿರ್ಧಾರವಾಗುತ್ತದೆ. ಮಹಾಭಾರತದ ಕಥೆ ಶಂತನು ಮಹಾರಾಜನ ಕಥೆಯಿಂದ ಆರಂಭವಾಗಿ, ಕೃಷ್ಣನ ಅವಸಾನ, ಪಾಂಡವರ ಸ್ವರ್ಗಾರೋಹಣದೊಂದಿಗೆ ಕೊನೆಗೊಳ್ಳುತ್ತದೆ. ಮಹಾಭಾರತದ ಉದ್ದಕ್ಕೂ ಬರುವ ಪಾತ್ರಗಳು ಭಾರತೀಯ ಸಂಸ್ಕೃತಿಯಲ್ಲಿ ಅಚ್ಚೊತ್ತಿರುವ ಪಾತ್ರಗಳು. ಮುಖ್ಯ ಕಥೆಯಲ್ಲದೆ, ಮಹಾಭಾರತದಲ್ಲಿ ಅನೇಕ ಉಪಕಥೆ ಗಳುಂಟು. ಹಾಗೆಯೇ ಭಗವದ್ಗೀತೆಯಂಥ ಸ್ವತಂತ್ರವಾಗಿ ನಿಲ್ಲಬಲ್ಲಂಥ ಗ್ರಂಥಗಳೂ ಮಹಾಭಾರತದ ಭಾಗಗಳಾಗಿ ಭೀಷ್ಮ ಪರ್ವದಲ್ಲಿ ಕಂಡುಬರುತ್ತವೆ. ವ್ಯವಸ್ಥೆಯ ದೃಷ್ಟಿಯಿಂದ, ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ.

ಮುಖ್ಯ ಪಾತ್ರಗಳುಸಂಪಾದಿಸಿ

 • ಭೀಷ್ಮ : ಭೀಷ್ಮ ಶಂತನು ಮತ್ತು ಗಂಗೆಯ ಮಗ. ಶಂತನು ಮತ್ತು ಸತ್ಯವತಿಯ ವಿವಾಹಕ್ಕೆ ಸಹಾಯವಾಗಲೆಂದು ಮದುವೆಯಾಗದಿರುವ ಮತ್ತು ರಾಜನಾಗದಿರುವ ವ್ರತವನ್ನು ತೆಗೆದುಕೊಳ್ಳುತ್ತಾನೆ. ಭೀಷ್ಮನಿಗೆ "ದೇವವ್ರತ" , "ಗಾಂಗೇಯ" , "ಪಿತಾಮಹ" ಎಂಬ ಹೆಸರುಗಳಿವೆ. ಇಚ್ಛಾಮರಣಿಯಾದ ಭೀಷ್ಮ ಮಹಾಭಾರತ ಯುದ್ಧದ ಮೊದಲ ಹತ್ತು ದಿನಗಳ ಕಾಲ ಕೌರವರ ಸೇನಾನಿ. ಮಹಾಭಾರತದ ಯುದ್ಧದ ನಂತರ ತನ್ನ ಜೀವನವನ್ನು ಅಂತ್ಯಗೊಳಿಸುತ್ತಾನೆ.
 • ಕೃಷ್ಣ: ಸಾಂಪ್ರದಾಯಿಕ ಹಿಂದೂ ನಂಬಿಕೆಯಂತೆ, ಕೃಷ್ಣ ವಿಷ್ಣುವಿನ ಅವತಾರಗಳಲ್ಲಿ ಒಬ್ಬನು. ಮಹಾಭಾರತದಲ್ಲಿ ಕೃಷ್ಣನ ಪಾತ್ರವನ್ನು ಸೂತ್ರಧಾರನ ಪಾತ್ರಕ್ಕೆ ಹೋಲಿಸಲಾಗಿದೆ. ಕೃಷ್ಣಾವತಾರದ ಕಥೆ ಮಹಾಭಾರತದ ಉದ್ದಕ್ಕೂ ಕಂಡು ಬರುತ್ತದೆ. ಕಂಸ, ಶಿಶುಪಾಲ, ಮೊದಲಾದವರನ್ನು ಕೊಲ್ಲುವ ಕೃಷ್ಣ ಪಾಂಡವರ ಮಿತ್ರ. ಪಗಡೆಯಾಟದ ಸಂದರ್ಭದಲ್ಲಿ ದ್ರೌಪದಿಯ ವಸ್ತ್ರಾಪಹರಣವನ್ನು ತಡೆಯುವ ಕೃಷ್ಣ, ಮಹಾಭಾರತ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಪಾಲ್ಗೊಳ್ಳುತ್ತಾನೆ. ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ. ಇದೇ ಸಂದರ್ಭದಲ್ಲೇ ಅರ್ಜುನನಿಗೆ ಪ್ರಸಿದ್ಧ ಗೀತೋಪದೇಶ (ಭಗವದ್ಗೀತೆ) ನಡೆಸುತ್ತಾನೆ.
 • ಪಾಂಡವರು: ಪಾಂಡವರು ಪಾಂಡು ಹಾಗೂ ಕುಂತಿಯ ಮಕ್ಕಳು. ಋಷಿಯ ಶಾಪದಿಂದ ಮಕ್ಕಳನ್ನು ಪಾಂಡು ಪಡೆಯಲಾಗದಿದ್ದರೂ, ಕುಂತಿಗೆ ದೊರೆತಿದ್ದ ದೂರ್ವಾಸನ ವರವನ್ನು ಉಪಯೋಗಿಸಿ ಕುಂತಿ ಮತ್ತು ಮಾದ್ರಿ ಪಾಂಡವರನ್ನು ಮಕ್ಕಳಾಗಿ ಪಡೆಯುತ್ತಾರೆ. ಐವರು ಪಾಂಡವರು: ಯುಧಿಷ್ಠಿರ (ಯಮನಿಂದ), ಭೀಮ (ವಾಯುವಿನಿಂದ), ಅರ್ಜುನ (ಇಂದ್ರನಿಂದ), ಮಾದ್ರಿಯಲ್ಲಿ ನಕುಲ ಮತ್ತು ಸಹದೇವ (ಅಶ್ವಿನಿ ದೇವತೆಗಳಿಂದ) ಜನಿಸಿದವರು. ಮಹಾಭಾರತದ ಯುದ್ಧ ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ನಡೆಯುತ್ತದೆ.
 • ದ್ರೌಪದಿ:ಭಾರತೀಯ ಸಾಹಿತ್ಯದ ಪ್ರಸಿದ್ಧ ಸ್ತ್ರೀಪಾತ್ರಗಳಲ್ಲಿ ದ್ರೌಪದಿಯ ಪಾತ್ರವೂ ಒಂದು. ಪಾಂಚಾಲ ರಾಜ ದ್ರುಪದನ ಅಗ್ನಿಪುತ್ರಿ. ದ್ರುಷ್ಟ್ಯದ್ಯುಮ್ನನ ತಂಗಿ. ದ್ರೌಪದಿಯು ಐವರೂ ಪಾಂಡವರ ಪತ್ನಿ. ಮಹಾಭಾರತದ ಅತ್ಯಂತ ಸಂಕೀರ್ಣವಾದ ಪಾತ್ರಗಳಲ್ಲಿ ದ್ರೌಪದಿಯ ಪಾತ್ರ ಒಂದು.
 • ಕೌರವರು: ಕೌರವರು ಪಾಂಡುವಿನ ಅಣ್ಣ ಧೃತರಾಷ್ಟ್ರನ ಮಕ್ಕಳು (ಗಾಂಧಾರಿಯಿಂದ); ಒಟ್ಟು ನೂರು ಕೌರವರು - ಇವರಲ್ಲಿ ಹಿರಿಯರು ದುರ್ಯೋಧನ ಮತ್ತು ದುಶ್ಯಾಸನ. ಕೊನೆಯವಳು ದುಶ್ಯೀಲೆ.
 • ಕರ್ಣ: ಕರ್ಣನ ಪಾತ್ರ ಮಹಾಭಾರತದ ದುರಂತ ಪಾತ್ರಗಳಲ್ಲಿ ಒಂದು. ಮದುವೆಗೆ ಮೊದಲು ಸೂರ್ಯನಿಂದ ಕುಂತಿಯ ಮಗನಾಗಿ ಹುಟ್ಟುವ ಕರ್ಣನನ್ನು ಕುಂತಿ ನದಿಯಲ್ಲಿ ತೇಲಿ ಬಿಡುತ್ತಾಳೆ. ಸೂತನೊಬ್ಬನ ಮನೆಯಲ್ಲಿ ಬೆಳೆಯುವ ಕರ್ಣ ಪರಶುರಾಮನಿಂದ ಶಿಕ್ಷಣವನ್ನು ಪಡೆದರೂ ಶಾಪವನ್ನು ಪಡೆಯುತ್ತಾನೆ. ಕರ್ಣನು ದುರ್ಯೋಧನ ಆಪ್ತ ಗೆಳೆಯ. ಅಂಗದ ರಾಜ್ಯದ ದೊರೆ. ಕೊನೆಗೆ ಮಹಾಭಾರತ ಯುದ್ಧದ ಸಮಯದಲ್ಲಿ ಪರಶುರಾಮನ ಶಾಪದ ಕಾರಣ, ತನ್ನ ವಿದ್ಯೆ ಮರೆತುಹೋಗಿ ರಥ ಮಣ್ಣಿನಲ್ಲಿ ಹೂತಿದ್ದಾಗ ಅರ್ಜುನನ ಬಾಣದಿಂದ ಸಾಯುತ್ತಾನೆ.

ಪರ್ವಗಳುಸಂಪಾದಿಸಿ

ಮಹಾಭಾರತದ ಹದಿನೆಂಟು ಪರ್ವಗಳ ಸಂಕ್ಷಿಪ್ತ ಚಿತ್ರ:

 1. ಆದಿಪರ್ವ:- ಪರಿಚಯ, ವಿಶ್ವಸೃಷ್ಟಿಯ ವಿವರ ( ಸೃಷ್ಟಿ ಮತ್ತು ಮಹಾಭಾರತ), ಹಿನ್ನೆಲೆ, ಪಾಂಡವ ಮತ್ತು ಕೌರವರ ಜನನ ಹಾಗೂ ಬೆಳವಣಿಗೆ
 2. ಸಭಾಪರ್ವ:- ಆಸ್ಥಾನದ ಜೀವನ, ಪಗಡೆಯಾಟ, ಇಂದ್ರಪ್ರಸ್ಥ, ಪಾಂಡವರ ವನವಾಸ ಆರಂಭ
 3. ಅರಣ್ಯಕಪರ್ವ: -ಹನ್ನೆರಡು ವರ್ಷದ ವನವಾಸ
 4. ವಿರಾಟಪರ್ವ: -ವಿರಾಟನ ಆಸ್ಥಾನದಲ್ಲಿ ಒಂದು ವರ್ಷದ ಅಜ್ಞಾತವಾಸ
 5. ಉದ್ಯೋಗಪರ್ವ: -ಯುದ್ಧದ ತಯಾರಿ
 6. ಭೀಷ್ಮಪರ್ವ:- ಯುದ್ಧ ಆರಂಭ, ಭೀಷ್ಮ ಕೌರವರ ಸೇನಾನಿ - ಶ್ರೀ ಕೃಷ್ಣನಿಂದ ಭಗವದ್ಗೀತೆ ಉಪದೇಶ
 7. ದ್ರೋಣಪರ್ವ: -ಯುದ್ಧದ ಮುಂದುವರಿಕೆ, ದ್ರೋಣರ ಸೇನಾಧಿಪತ್ಯದಲ್ಲಿ
 8. ಕರ್ಣ ಪರ್ವ:- ದ್ರೋಣರ ಮರಣಾನಂತರ, ಕರ್ಣನ ನೇತೃತ್ವದಲ್ಲಿ ಯುದ್ಧದ ಮುಂದುವರಿಕೆ
 9. ಶಲ್ಯಪರ್ವ:- ಶಲ್ಯನ ಸೇನಾಧಿಪತ್ಯ
 10. ಸೌಪ್ತಿಕಪರ್ವ:- ಅಶ್ವತ್ಥಾಮ ಪಾಂಡವರ ಮಕ್ಕಳನ್ನು ಕೊಲ್ಲುತ್ತಾನೆ
 11. ಸ್ತ್ರೀಪರ್ವ:- ಗಾಂಧಾರಿಯ ವಿಲಾಪ
 12. ಶಾಂತಿಪರ್ವ:- ಯುಧಿಷ್ಠಿರನ ಪಟ್ಟಾಭಿಷೇಕ, ಭೀಷ್ಮನಿಂದ ಸಲಹೆ
 13. ಅನುಶಾಸನಪರ್ವ:- ಭೀಷ್ಮನ ಕೊನೆಯ ಮಾತುಗಳು
 14. ಅಶ್ವಮೇಧಿಕಪರ್ವ:- ಯುಧಿಷ್ಠಿರನಿಂದ ಅಶ್ವಮೇಧಯಾಗ/ಯಜ್ಞ
 15. ಆಶ್ರಮವಾಸಿಕಪರ್ವ:-ಧೃತರಾಷ್ಟ್ರ, ಗಾಂಧಾರಿ, ಕುಂತಿಯರ ಆಶ್ರಮವಾಸ, ಕೊನೆಗೆ ಮರಣ
 16. ಮೌಸಲಪರ್ವ:- ಯಾದವರಲ್ಲಿ ಕಲಹ ("ಯಾದವೀ ಕಲಹ")
 17. ಮಹಾಪ್ರಸ್ತಾನಿಕಪರ್ವ:- ಪಾಂಡವರ ಮರಣದ ಮೊದಲ ಭಾಗ
 18. ಸ್ವರ್ಗಾರೋಹಣಪರ್ವ:- ಪಾಂಡವರ ಸ್ವರ್ಗಾರೋಹಣ

ಉಪಕಥೆಗಳು ಮತ್ತು ಗ್ರಂಥಗಳುಸಂಪಾದಿಸಿ

 • ಮಹಾಭಾರತದ ಭಾಗವಾದ ಹಲವು ಪ್ರಮುಖ ಕಥೆಗಳು/ಗ್ರಂಥಗಳು:-
 • ಭಗವದ್ಗೀತೆ (ಭೀಷ್ಮಪರ್ವ): ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಮುಖ್ಯ ಪಠ್ಯಗಳಲ್ಲಿ ಒಂದಾದ ಭಗವದ್ಗೀತೆ ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳ ಒಟ್ಟು ಸಮಾಗಮವೆನ್ನಬಹುದು.
 • ದಮಯಂತಿ (ಅರಣ್ಯಕಪರ್ವ): ನಳ ಮತ್ತು ದಮಯಂತಿಯರ ಕಥೆ ಮಹಾಭಾರತದ ಪ್ರಸಿದ್ಧ ಉಪಕಥೆಗಳಲ್ಲಿ ಒಂದು. ಸ್ವಯಂವರದಲ್ಲಿ ಇಂದ್ರ, ವರುಣ ಮೊದಲಾದವರನ್ನು ಕಡೆಗಣಿಸಿ ದಮಯಂತಿ ನಳನನ್ನೇ ಮದುವೆಯಾಗುತ್ತಾಳೆ. ಜೂಜಾಡಿ ಎಲ್ಲವನ್ನೂ ನಳ ಕಳೆದುಕೊಂಡ ನಂತರ ಕಾಡಿನಲ್ಲಿ ಇರಬೇಕಾಗುತ್ತದೆ. ದಮಯಂತಿ ತನ್ನ ತಂದೆಯ ಮನೆಗೆ ಹೋಗಲೆಂದು ಅವಳನ್ನು ಬಿಟ್ಟು ಓಡಿ ಹೋಗುವ ನಳ ಅಡಿಗೆ ಭಟ್ಟ ಮತ್ತು ಕುದುರೆ ತರಬೇತುಗಾರನಾಗಿ ರಾಜನೊಬ್ಬನ ಹತ್ತಿರ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಇದರ ಅನುಮಾನ ಬಂದ ದಮಯಂತಿ ಈ ರಾಜನನ್ನು ಇನ್ನೊಂದು ಸ್ವಯಂವರಕ್ಕೆ ಕರೆಸಿ ಅಡಿಗೆಯ ರುಚಿಯಿಂದ ನಳನನ್ನು ಗುರುತು ಹಿಡಿಯುತ್ತಾಳೆ. ನಳ ಮತ್ತೆ ತನ್ನ ಆಸ್ತಿಯೆಲ್ಲವನ್ನೂ ಗೆದ್ದ ನಂತರ ಕಥೆ ಮುಗಿಯುತ್ತದೆ.
 • ಕೃಷ್ಣಾವತಾರ: ಕೃಷ್ಣನ ಸಂಪೂರ್ಣ ಕಥೆ "ಕೃಷ್ಣಾವತಾರ" ಪುರಾಣದಲ್ಲಿ ಮೂಡಿ ಬಂದಿದೆ. ಇದೇ ಕಥೆ ಮಹಾಭಾರತದ ಉದ್ದಕ್ಕೂ ನೇಯಲ್ಪಟ್ಟಿದೆ.
 • ಋಷ್ಯಶೃಂಗ (ಅರಣ್ಯಕಪರ್ವ): ಋಷ್ಯಶೃಂಗ ಋಷಿ, ಪೌರಾಣಿಕವಾಗಿ ವಿಭಾಂಡಕ ಋಷಿಯ ಮಗ. ರೋಮಪಾದ ರಾಜ್ಯದಲ್ಲಿ ಕ್ಷಾಮ ಬಂದಾಗ ಋಷ್ಯಶೃಂಗನೇ ಮಳೆಯನ್ನು ಅಲ್ಲಿಗೆ ತಂದನಂತೆ. ಇಂದಿನ ಕರ್ನಾಟಕ ರಾಜ್ಯದ ಶೃಂಗೇರಿಯ ಮೊದಲ ಹೆಸರು "ಋಷ್ಯಶೃಂಗ ಗಿರಿ" ಆಗಿತ್ತೆಂದು ಹೇಳುತ್ತಾರೆ.
 • (ಅನುಶಾಸನಪರ್ವ): ವಿಷ್ಣು ಸಹಸ್ರನಾಮ ವಿಷ್ಣುವಿನ ೧,೦೦೦ ಹೆಸರುಗಳನ್ನು ಒಳಗೊಂಡ ಸ್ತೋತ್ರ. ಇದು ಮಹಾಭಾರತದ ಅನುಶಾಸನ ಪರ್ವದ ೧೪೯ ನೆ ಅಧ್ಯಾಯದಲ್ಲಿ ಕಂಡು ಬರುತ್ತದೆ. ಯುದ್ಧದ ನಂತರ ಭೀಷ್ಮನ ಬಳಿ ಹೋಗುವ ಯುಧಿಷ್ಠಿರ ಭೀಷ್ಮನನ್ನು ಅನೇಕ ಧರ್ಮಪ್ರಶ್ನೆ ಗಳ ಪರಿಹಾರದ ಬಗ್ಗೆ ಕೇಳುತ್ತಾನೆ. ಹಾಗೆಯೇ, ಪುಣ್ಯಸಂಪಾದನೆಯ ದಾರಿಗಳ ಬಗ್ಗೆ ಕೇಳುತ್ತಾನೆ. ಭೀಷ್ಮ ಉತ್ತರವಾಗಿ ವಿಷ್ಣು ಸಹಸ್ರನಾಮವನ್ನು ತಿಳಿಸುತ್ತಾನೆ.
 • ರಾಮಾಯಣದ ಕಥೆಯೂ ಮಹಾಭಾರತದ ಅರಣ್ಯಪರ್ವದಲ್ಲಿ ಸಂಕ್ಷಿಪ್ತವಾಗಿ ಮೂಡಿಬಂದಿದೆ.
 • ಇದು ವ್ಯಾಸರಾಯರು ಬರೆದ ಕೃತಿಯೆಂದು ಹೇಳಲಾಗುತ್ತದೆ.

ತತ್ವಶಾಸ್ತ್ರಸಂಪಾದಿಸಿ

 • ಮಹಾಭಾರತ ವಿಶಾಲವಾದ ತತ್ವಶಾಸ್ತ್ರವನ್ನು ಒಳಗೊಂಡ ಗ್ರಂಥ. ಕೆಲವರು ಇದನ್ನು "ಐದನೆಯ ವೇದ" ಎಂದೇ ಕರೆದಿದ್ದಾರೆ. ಮಹಾಭಾರತದ ತಾತ್ವಿಕ ಬೇರುಗಳು ಇರುವುದು ವೈದಿಕ ತತ್ವಶಾಸ್ತ್ರದಲ್ಲಿ. ಮಹಾಭಾರತದ ಒಂದು ಶ್ಲೋಕ ಹೇಳುವಂತೆ, ಅದರ ಮುಖ್ಯ ಗುರಿ ನಾಲ್ಕು ಪುರುಷಾರ್ಥಗಳನ್ನು ತಿಳಿಸಿಕೊಡುವುದು: ಅರ್ಥ, ಕಾಮ, ಧರ್ಮ ಮತ್ತು ಮೋಕ್ಷ.
 • ಮಹಾಭಾರತದ ಅನೇಕ ಭಾಗಗಳು, ಉಪಕಥೆಗಳು ಮತ್ತು ಉಪಗ್ರಂಥಗಳು ಪ್ರಾಚೀನ ಭಾರತದ ವಿವಿಧ ತತ್ವಶಾಸ್ತ್ರಗಳನ್ನು ವರ್ಣಿಸುತ್ತವೆ. ವೇದಾಂತ, ಸಾಂಖ್ಯ, ಯೋಗ, ಪಂಚರಾತ್ರ, ಯೋಗ ಮೊದಲಾದ ತಾತ್ವಿಕ ಸಂಪ್ರದಾಯಗಳನ್ನು ಒಳಗೊಂಡ ಮಹಾಭಾರತ ಭಾರತೀಯ ತತ್ವಶಾಸ್ತ್ರದ ಮುಖ್ಯ ಆಕರಗಳಲ್ಲಿ ಒಂದೂ ಹೌದು. ವಿವಿಧ ತಾತ್ವಿಕ ನೆಲೆಗಟ್ಟುಗಳ ಮಧ್ಯೆ ಅವುಗಳ ಬಗೆಗಿನ ಸಹಿಷ್ಣುತೆಯೂ ಮಹಾಭಾರತದ ತತ್ವಶಾಸ್ತ್ರದಲ್ಲಿ ಕಂಡುಬರುತ್ತದೆ. ಮಹಾಭಾರತದಲ್ಲಿ ವೈಶಂಪಾಯನ ಜನಮೇಜಯನಿಗೆ ಈ ಕಥೆಯನ್ನು ಹೇಳುತ್ತಾನೆ:
 • "ಓ ವಿವೇಕಿ! ಇವೆಲ್ಲವೂ ಜ್ಞಾನವನ್ನೇ ಪ್ರತಿನಿಧಿಸುತ್ತವೆ ಎಂದು ತಿಳಿ: ಸಾಂಖ್ಯ, ಯೋಗ, ಪಂಚರಾತ್ರ, ಆರಣ್ಯಕ. ಅವುಗಳ ದಾರಿಗಳು ಬೇರೆ, ಆದರೆ ಮೂಲದಲ್ಲಿ ಎಲ್ಲವೂ ಒಂದೇ!"
 • ಮಹಾಭಾರತದಲ್ಲಿ ಅಧ್ಯಾತ್ಮಿಕ ತತ್ವಶಾಸ್ತ್ರವಲ್ಲದೇ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜನೀತಿ, ಯುದ್ಧನೀತಿ, ಖಗೋಳಶಾಸ್ತ್ರ ಮೊದಲಾದ ವಿಷಯಗಳ ಬಗ್ಗೆಯೂ ಬಹಳಷ್ಟು ಮಾಹಿತಿಯುಂಟು.

ಕನ್ನಡ ಸಾಹಿತ್ಯದಲ್ಲಿ ಮಹಾಭಾರತಸಂಪಾದಿಸಿ

 • ಮಹಾಭಾರತದಿಂದ ಸ್ಫೂರ್ತಿ ಪಡೆದ ಕನ್ನಡ ಸಾಹಿತ್ಯ ವಿಪುಲವಾಗಿದೆ. ಕನ್ನಡದಲ್ಲಿ ಮಹಾಭಾರತದ ಮೊದಲ ಬರವಣಿಗೆಯ ಕರ್ತೃ ಆದಿಕವಿ ಪಂಪ - ಪಂಪನ ವಿಕ್ರಮಾರ್ಜುನ ವಿಜಯ ಕನ್ನಡದ ಮೇರುಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಗದ್ಯ ಮತ್ತು ಪದ್ಯಮಿಶ್ರಿತವಾದ "ಚಂಪೂ" ಶೈಲಿಯಲ್ಲಿ ಬರೆಯಲ್ಪಟ್ಟಿರುವ ಪಂಪ ಭಾರತ ತನ್ನ ಆಳವಾದ ಮಾನವೀಯ ಮೌಲ್ಯಗಳಿಗೆ ಹೆಸರಾಗಿದೆ.
 • ಸುಮಾರು ಇದೇ ಕಾಲದ ರನ್ನನ "ಗದಾಯುದ್ಧಂ" ಮಹಾಭಾರತ ಯುದ್ಧದ ಭೀಮ-ದುರ್ಯೋಧನರ ಗದಾಯುದ್ಧವನ್ನು ಕುರಿತದ್ದಾದರೂ ಇಡಿಯ ಮಹಾಭಾರತ ಕಥೆಯನ್ನು ಸಿಂಹಾವಲೋಕನ ಕ್ರಮದಲ್ಲಿ ಪರಿಶೀಲಿಸುತ್ತದೆ.
 • ಕನ್ನಡದಲ್ಲಿ ಬಹಳ ಖ್ಯಾತಿ ಪಡೆದ ಮಹಾಭಾರತ, ಕುಮಾರವ್ಯಾಸ ವಿರಚಿತ "ಕರ್ಣಾಟ ಭಾರತ ಕಥಾಮಂಜರಿ"ಯು ಕುಮಾರವ್ಯಾಸ ಭಾರತ ಅಥವಾ "ಗದುಗಿನ ಭಾರತ" ಎಂದು ಕರೆಯಲ್ಪಡುತ್ತದೆ. ಈ ಕೃತಿ ಭಾಮಿನಿ ಷಟ್ಪದಿಯಲ್ಲಿ ಬರೆಯಲ್ಪಟ್ಟಿದ್ದು ತನ್ನ ಪಾತ್ರವೈವಿಧ್ಯತೆ ಹಾಗೂ ಶ್ರೀಮಂತ ರೂಪಕಗಳಿಗೆ ಹೆಸರಾಗಿದೆ. ಕುಮಾರವ್ಯಾಸ ಕೃಷ್ಣನ ಭಕ್ತ .ಕುಮರವ್ಯಾಸನು, ದುರ್ಯೋಧನನ ಅವಸಾನದ ನಂತರ ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ.
 • ಕುಮಾರವ್ಯಾಸನು ಸಂಸ್ಕೃತದ ವ್ಯಾಸರ ಭಾರತವನ್ನು ಅನುಸರಿಸಿದರೂ, ಸ್ವತಂತ್ರ ಕಾವ್ಯವೆಂಬಂತೆ ಮೂಲ ಭಾರತಕ್ಕೆ ಸರಿಮಿಗಿಲಾಗಿ ರಚಿಸಿದ್ದಾನೆ. ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಮಾತ್ರ ಕುಮಾರವ್ಯಾಸ ಭಾರತ ಒಳಗೊಂಡಿದೆ.
 • ಆಧುನಿಕ ಕನ್ನಡದಲ್ಲಿ ಪ್ರಸಿದ್ಧವಾದ ಮಹಾಭಾರತದ ಆವೃತ್ತಿ ಎ ಅರ್ ಕೃಷ್ಣಶಾಸ್ತ್ರಿಗಳು ಬರೆದ "ವಚನ ಭಾರತ." ಈ ಕೃತಿ ಸರಳವಾದ ಆಧುನಿಕ ಕನ್ನಡದಲ್ಲಿ ಬರೆಯಲ್ಪಟ್ಟಿದೆ.
 • ಮೇಲಿನವು ಮುಖ್ಯ ಮಹಾಭಾರತ ಕಥೆಯನ್ನು ಆಧರಿಸಿ ಬರೆದ ಕೃತಿಗಳಾದರೆ, ಮಹಾಭಾರತದ ವಿವಿಧ ಪಾತ್ರಗಳು ಮತ್ತು ಸನ್ನಿವೇಶಗಳನ್ನು ಆಧರಿಸಿ ಬರೆದ ಕೃತಿಗಳು ಅನೇಕ.
 • ಆಧುನಿಕ ಕನ್ನಡದಲ್ಲಿ ಕುವೆಂಪು ರವರ "ಬೆರಳ್ ಗೆ ಕೊರಳ್" ಮಹಾಭಾರತದ ಏಕಲವ್ಯನ ಪಾತ್ರವನ್ನು ಆಧರಿಸಿ ಬರೆದ ನಾಟಕ.
 • ಇತ್ತೀಚೆಗೆ ರಾಮಚಂದ್ರ ಭಾವೆಯವರು ಅಂಧಪರ್ವ, ಅಶ್ವಮೇಧ ಕಾದಂಬರಿಗಳನ್ನು ಬರೆದಿದ್ದಾರೆ. ಅವು ಕ್ರಮವಾಗಿ ಸುಧಾ ಮತ್ತು ತರಂಗಗಳಲ್ಲಿ ಪ್ರಕಟವಾಗಿವೆ. ಅಂಧಪರ್ವ ಕಾದಂಬರಿಯಾಗಿ ಹೊರಬಂದಿದೆ. ಅಲ್ಲದೆ ಮಹಾಭಾರತ ಪಾತ್ರಪ್ರಪಂಚ ಎಂಬ ಸಂಕಲನವೂ ಇದೆ.

ಮಾಧ್ಯಮಗಳಲ್ಲಿ ಮಹಾಭಾರತಸಂಪಾದಿಸಿ

 • ಕನ್ನಡ, ತಮಿಳು, ಹಿಂದಿಗಳಲ್ಲಿ ವರ್ಷ ವರ್ಷವೂ ಮಹಾಭಾರತ ನವೀಕರಣಗೊಂಡು ದೂರದರ್ಶನದಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಕೆಲವು ಉಕ್ತಿಗಳುಸಂಪಾದಿಸಿ

 • ಮಹಾಭಾರತದಲ್ಲಿ ಕಂಡು ಬರುವ ಕೆಲವು ಪ್ರಸಿದ್ಧ ವಾಕ್ಯಗಳು
 • "ಇಲ್ಲಿ ಕಂಡು ಬರುವುದು ಬೇರೆ ಕಡೆಗಳಲ್ಲಿ ಸಿಗಬಹುದು, ಆದರೆ ಇಲ್ಲಿ ಇಲ್ಲದಿರುವುದು ಇನ್ನೆಲ್ಲಿಯೂ ಸಿಗುವುದಿಲ್ಲ." -- ಆದಿಪರ್ವ.
 • "ಅತೃಪ್ತಿಯೇ ಪ್ರಗತಿಯ ಮೂಲ." -- ದುರ್ಯೋಧನ.
 • "ಅಧಿಕಾರದ ನಶೆ ಮದ್ಯದ ನಶೆಗಿಂತಲೂ ಕೆಟ್ಟದ್ದು; ಏಕೆಂದರೆ ಅಧಿಕಾರದ ನಶೆ ಇರುವವನಿಗೆ ಆತ ಕೆಳಗೆ ಬೀಳುವವರೆಗೂ ನಶೆ ಇಳಿಯುವುದಿಲ್ಲ." -- ವಿದುರ.
 • "ಸಾಧುಗಳನ್ನು ರಕ್ಷಿಸಲು, ದುಷ್ಟರನ್ನು ಶಿಕ್ಷಿಸಲು, ಧರ್ಮದ ಸಂಸ್ಥಾಪನೆಗಾಗಿ, ಯುಗ ಯುಗಗಳಲ್ಲಿಯೂ ಸಂಭವಿಸುತ್ತೇನೆ." -- ಕೃಷ್ಣ.

Rajadharma , it is truth

ಬಾಹ್ಯ ಸಂಪರ್ಕಗಳುಸಂಪಾದಿಸಿ

 • ಸಂಸ್ಕೃತ ಮಹಾಭಾರತದ ಸಂಪೂರ್ಣ ಪಠ್ಯ:

ಉಲ್ಲೇಖಗಳುಸಂಪಾದಿಸಿ

ಕುರುವಂಶವೃಕ್ಷಸಂಪಾದಿಸಿ


ಪರಿವಿಡಿಸಂಪಾದಿಸಿಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ  
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ
"https://kn.wikipedia.org/w/index.php?title=ಮಹಾಭಾರತ&oldid=1008597" ಇಂದ ಪಡೆಯಲ್ಪಟ್ಟಿದೆ