ಪ್ರಶ್ನೋಪನಿಷತ್
ಪ್ರಶ್ನೋಪನಿಷತ್ಇದು ಅಥರ್ವವೇದದ ಪೈಪ್ಪಲಾದ ಶಾಖೆಗೆ ಸೇರಿದೆ ಸಾಂಖ್ಯ ದರ್ಶನದ ಮೂಲ ಸಿದ್ಧಾಂತಗಳನ್ನು ನಾವು ಈ ಉಪನಿಷತ್ತಿನಲ್ಲಿ ಕಾಣಬಹುದು .ಪ್ರಶ್ನೋಪನಿಷತ್ ಪಿಪ್ಪಲಾದ ಮಹರ್ಷಿಗಳಿಗೆ ಆರು ಮಂದಿ ಜಿಜ್ಞಾಸುಗಳು ಕೇಳಿದ ಪ್ರಶ್ನೆ ಹಾಗೂ ಮಹರ್ಷಿಗಳು ನೀಡಿದ ಉತ್ತರಗಳನ್ನೊಳಗೊಂಡಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಇದನ್ನು ಷಟ್ ಪ್ರಶ್ನ ಉಪನಿಷತ್ ಎಂದೂ ಕರೆಯುತ್ತಾರೆ.
ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ |
ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ |
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ |
‘ಭದ್ರಂ ಕರ್ಣೇಭಿಃ ಶೃಣು ಯಾಮ ದೇವಾಃ’ ಎಂಬುದು ಇದರ ಶಾಂತಿಮಂತ್ರ. ಗದ್ಯಮಯವಾಗಿದ್ದು, ಆರು ಮಂದಿ ಬ್ರಹ್ಮಾನ್ವೇಷಕರು ಭಗವಂತನಾದ ಪಿಪ್ಪಲಾದ ಮಹರ್ಷಿಯೊಡನೆ ಮಾಡಿದ ಸಂವಾದ ರೂಪದ ಆರು ಪ್ರಶ್ನೆಗಳನ್ನೊಳಗೊಂಡಿದೆ. ಲೋಕದಲ್ಲಿ ಪ್ರಜೆಗಳು ಹೇಗೆ ಎಲ್ಲಿಂದ ಜನಿಸುತ್ತಾರೆ ? ಎಂಬುದು ಕಬಂಧಿ ಕಾತ್ಯಾಯನ ಮೊದಲು ಕೇಳಿದ ಪ್ರಶ್ನೆ. ಪ್ರಜಾಪತಿಯ ತಪಸ್ಸಿನ ಫಲವಾಗಿ ಆದಿತ್ಯನೂ (ಪ್ರಾಣ) ಚಂದ್ರಮನೂ (ರಯಿ) ಸೃಷ್ಟಿಯಾಗಿ ಅವರಿಂದ ಪ್ರಜಾಸೃಷ್ಟಿಯಾಯಿತು ಎಂಬುದು ಅದಕ್ಕೆ ಉತ್ತರ. ದೇವತೆಗಳೆಷ್ಟು ಮಂದಿ ಪ್ರಜೆಗಳಿಗೆ ಆಧಾರಭೂತರು ? ಅವರಲ್ಲಿ ವರಿಷ್ಠರು ಯಾರು ? ಎಂಬುದು ಭಾರ್ಗವ ವೈದರ್ಭಿ ಕೇಳಿದ ಎರಡನೆಯ ಪ್ರಶ್ನೆ. ಆಕಾಶ, ವಾಯು, ಅಗ್ನಿ, ಆಪಃ, ಪೃಥಿವೀ, ವಾಕ್, ಮನಸ್ಸು, ಚಕ್ಷುಸ್ಸು, ಶ್ರೋತ್ರ ಇವರು ದೇವತೆಗಳು; ಇವರಲ್ಲಿ ವರಿಷ್ಠ ಪ್ರಾಣ, ಇದು ಉತ್ತರ. ಕೊನೆಯಲ್ಲಿ ಪ್ರಾಣಸ್ವರೂಪಿಯಾದ ಪರಬ್ರಹ್ಮನ ಸ್ತುತಿ ಇದೆ. ಮೂರನೆಯ ಪ್ರಶ್ನೆ ಈ ಪ್ರಾಣ ಎಲ್ಲಿಂದ ಹುಟ್ಟಿ ಈ ಶರೀರಕ್ಕೆ ಹೇಗೆ ಬಂದು ವಿಭಾಗ ಮಾಡಿಕೊಂಡು ಪ್ರತಿಷ್ಠಿತವಾಗುತ್ತದೆ ? ಎಂಬುದು ಅಶ್ವಲಾಯನ ಕೇಳಿದುದು. ಇದಕ್ಕೆ ಉತ್ತರ: ಪುರುಷನನ್ನು ನೆರಳು ಹಿಂಬಾಲಿಸುವಂತೆ, ಈ ಶರೀರದಲ್ಲಿ ಆತ್ಮನಿಂದ ಕರ್ಮನಿಮಿತ್ತವಾಗಿ ಪ್ರಾಣ ಜನಿಸುತ್ತದೆ. ಸಾಮ್ರಾಟನಾದವ ಬೇರೆ ಬೇರೆ ಗ್ರಾಮಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸುವಂತೆ ಇದು ಇತರ ಪ್ರಾಣಗಳನ್ನು ನಿಯೋಜಿಸುತ್ತದೆ. ಪುಣ್ಯಾಧಿಕ್ಯವಾದರೆ ದೇವಲೋಕಕ್ಕೂ ಪಾಪಾಧಿಕ್ಯವಾದರೆ ನರಕಕ್ಕೂ ಮೇಲ್ಮುಖವಾದ ನಾಡಿಯಿಂದ ಇದು ಉತ್ಕ್ರಮಿಸುತ್ತದೆ. ನಾಲ್ಕನೆಯ ಪ್ರಶ್ನೆ ಸೌರ್ಯಾಯಣಿ ಗಾಗರ್ಯ್‌ರದು: ಈ ಪುರುಷನಲ್ಲಿ ನಿದ್ರಿಸುವವರು ಯಾರು ? ಜಾಗೃತರಾಗಿರುವವರು ಯಾರು ? ಸ್ವಪ್ನಗಳನ್ನು ಕಾಣುವವರೂ ಅನುಭವಿಸುವವರೂ ಯಾರು ? ಯಾರಲ್ಲಿ ಎಲ್ಲರೂ ಸಂಪ್ರತಿಷ್ಠಿತರಾಗುತ್ತಾರೆ ? ಉತ್ತರ: ಶ್ರೋತ್ರಾದಿ ಇಂದ್ರಿಯಗಳು ಮನಸ್ಸಿನಲ್ಲಿ ಏಕೀಭವಿಸಿ ನಿದ್ರಿಸುವುವು. ಪ್ರಾಣಾದಿ ಪಂಚವಾಯುಗಳು ಎಚ್ಚರವಾಗಿರುವುವು. ಮನಸ್ಸೆಂಬ ದೇವ ಸ್ವಪ್ನಗಳನ್ನು ಕಾಣುವಾತ. ಪಕ್ಷಿಗಳು ವೃಕ್ಷದಲ್ಲಿರುವಂತೆ ಅಕ್ಷರರೂಪಿಯಾದ ಪರಮಾತ್ಮನಲ್ಲಿ ಎಲ್ಲರೂ ಸಂಪ್ರತಿಷ್ಠಿತರಾಗಿರುತ್ತಾರೆ. ಶೈಬ್ಯ ಸತ್ಯಕಾಮನದು ಐದನೆಯ ಪ್ರಶ್ನೆ. ಪ್ರಣವೋಪಾಸಕ ಯಾವ ಲೋಕವನ್ನು ಜಯಿಸುತ್ತಾನೆ ? ಅಂಥವ ಸೂರ್ಯನಲ್ಲಿ ಸಂಗತವಾಗಿ ಪಾಪವಿಮುಕ್ತನಾಗಿ ಬ್ರಹ್ಮಲೋಕವನ್ನು ಸೇರುತ್ತಾನೆಂದು ಪಿಪ್ಪಲಾದಿ ಋಷಿ ಉತ್ತರ ಹೇಳಿದ್ದಾನೆ. ಸುರೇಶ ಭಾರದ್ವಾಜ ಷೋಡಶ ಕಲಾ ಪುರುಷನ ವಿಚಾರವಾಗಿ ಕೇಳಿದ ಆರನೆಯ ಪ್ರಶ್ನೆಗೆ ಪ್ರಾಣಾದಿ ಷೋಡಶ ಕಲೆಗಳು ಹೃದಯ ಪುಂಡರೀಕಾಕ್ಷದ ಮಧ್ಯದಲ್ಲಿ ಸಂಭವಿಸುವುದರಿಂದ ಆ ಪುರುಷ ಶರೀರದೊಳಗಿದ್ದಾನೆಂಬ ಉತ್ತರವಿದೆ. ಅನಂತರ ಆರು ಮಂದಿ ಶಿಷ್ಯರೂ ತಮ್ಮ ಅವಿದ್ಯೆಯನ್ನು ಹೋಗಲಾಡಿಸಿದ ಆಚಾರ್ಯರನ್ನು ವಂದಿಸುತ್ತಾರೆ.
ಜಗತ್ತಿನ ಜೀವಿಗಳ ಹುಟ್ಟು,ಪ್ರಾಣ,ಪ್ರಾಣಕ್ಕೂ ದೇಹಕ್ಕೂ ಇರುವ ಸಂಬಂಧ,ಜಾಗ್ರತಾವಸ್ಠೆ ಹಾಗೂ ನಿದ್ರಾವಸ್ಥೆಗಳ ರಹಸ್ಯ,ಸುಖ ದುಃಖ ವಿವೇಕ,ಓಂ ಶಬ್ದದ ಮಹತ್ವ, ಷೋಡಶ ಭಾಗಾತ್ಮಕ ಶಕ್ತಿಯ ನೆಲೆ ಎಂಬ ಆರು ವಿಷಯಗಳ ಬಗೆಗೆ ಪ್ರಶ್ನೋತ್ತರಗಳು ಇದರಲ್ಲಿವೆ.
ಶಾಂತಿ ಪಾಠ
ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ |
ಸ್ಥಿರೈರಂಗೈಸ್ತುಷ್ಟುವಾಂ ಸಸ್ತನೂಭಿ-
ರ್ವ್ಯಶೇಮ ದೇವಹಿತಂ ಯದಾಯುಃ ||
ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ । ಸ್ವಸ್ತಿ ನಃ ಪೂಷಾ ವಿಶ್ವವೇದಾಃ ।
ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ । ಸ್ವಸ್ತಿ ನೋ ಬೃಹಸ್ಪತಿರ್ದಧಾತು ॥
ಓಂ ಶಾಂತಿಃ ಶಾಂತಿಃ ಶಾಂತಿಃ
ಮೊದಲನೆಯ ಪ್ರಶ್ನೆ
ಸುಕೇಶಾ ಚ ಭಾರದ್ವಾಜಃ ಶೈಬ್ಯಸ್ಚ ಸತ್ಯಕಾಮಃ, ಸೌರ್ಯಾಯಣೀ ಚ ಗಾರ್ಗ್ಯಃ, ಕೌಸಲ್ಯಶ್ಚಾಶ್ವಲಾಯನೋ ಭಾರ್ಗವೋ ವೈದರ್ಭಿ:, ಕಬಂಧೀ ಕಾತ್ಯಾ ಯನಸ್ತೇ ಹೈತೇ ಬ್ರಹ್ಮಪರಾ ಬ್ರಹ್ಮ ನಿಷ್ಟಾಃ ಪರಂ ಬ್ರಹ್ಮಾಅನ್ವೇಷಮಾಣಾ ಏಷ ಹ ವೈ ತತ್ಸರ್ವಂ ವಕ್ಷ್ಯ ತೀತಿ ತೇ ಹ ಸಮಿತ್ಪಾಣಯೋ ಭಗವತಂ ಪಿಪ್ಪಲಾದಂ ಮುಪಸನ್ನಾಃ ||೧||
ತಾನ್ ಹ ಸ ಋಷಿರುವಾಚ-ಭೂಯ ಏವ ತಪಸಾ ಬ್ರಹ್ಮಚರ್ಯೇಣ ಶ್ರದ್ಧಯಾ ಸಂವಸ್ಸರಂ ಸಂವತ್ಸ್ಯಥ; ಯಥಾಕಾಮಂ ಪ್ರಶ್ನಾನ್ ಪೈಚ್ಛತ; ಯದಿ ವಿಜ್ಞಾಸ್ಯಾಮಃ ಸರ್ವಂ ಹ ವೋ ವಕ್ಷ್ಯಾಮ ಇತಿ ||೨||
ಅಥ ಕಬಂಧೀ ಕಾತ್ಯಾಯನ ಉಪೇತ್ಯ ಪಪ್ರಚ್ಛ - ಭಗವನ್ ಕುತೋ ಹ ವಾ ಇಮಾಃ ಪ್ರಜಾಃ ಪ್ರಜಾಯಂತ ಇತಿ ||೩||
ತಸ್ಮೈ ಸ ಹೋವಾಚ - ಪ್ರಜಾ ಕಮೋ ವೈ ಪ್ರಜಾಪತಿಃ ಸ ತಪೋssತಪ್ಯತ; ಸ ತಪಸ್ತಪ್ತ್ವಾ ಸ ಮಿಥುನ ಮುತ್ಪಾದಯತೇ, ರಯಿಂ ಚ ಪ್ರಾಣಂ ಚೇತ್ಯೇತೌ ಮೇ ಬಹುಧಾ ಪ್ರಜಾಃ ಕರಿಷ್ಯತ ಇತಿ ||೪||
ಆದಿತ್ಯೋ ಹ ವೈ ಪ್ರಾಣೋ, ರಯಿರೇವ ಚಂದ್ರಮಾ, ರಯಿರ್ವಾ ಏತತ್ ಸರ್ವಂ ಯನ್ಮೂರ್ತಂ ಚಾಮೂರ್ತಂ ಚ ; ತಸ್ಮಾನ್ಮೂರ್ತಿರೇವ ರಯಿ: ||೫||
ಅಥಾದಿತ್ಯ ಉದಯನ್ ಯತ್ ಪ್ರಾಚೀಂ ದಿಶಂ ಪ್ರವಿಶತಿ, ತೆನ ಪ್ರಾಚ್ಯಾನ್ ಪ್ರಾಣಾನ್ ರಶ್ಮಿಷು ಸಂನಿಧತ್ತೇ |
ಯದ್ಧ ಕ್ಷಿಣಾಂ ಯತ್ ಪ್ರತೀಚೀಂ ಯದುದೀಚೀಂ ಯದಧೋ ಯದೂರ್ಧ್ವಂ ಯದಂತರಾ ದಿಶೋ, ಯತ್ಸರ್ವಂ ಪ್ರಕಾಶಯತಿ, ತೇನ ಸರ್ವಾನ್ ಪ್ರಾಣಾನ್ ರಶ್ಮಿಷು ಸಂನಿಧತ್ತೇ ||೬||
ಸ ಏಷ ವೈಶ್ವಾನರೋ ವಿಶ್ವರೂಪಃ ಪ್ರಾಣೋsಗ್ನಿರುದಯತೇ |
ತದೆತದೈಚಾಭ್ಯುಕ್ತಮ್ ||೭||
ವಿಶ್ವರೂಪಂ ಹರಿಣಂ ಜಾತವೇದಸಂ ಪರಾಯಣಂ ಜ್ಯೋತಿರೇಕಂ ತಪಂತಮ್ |
ಸಹಸ್ರ ರಶ್ಮಿಃ ಶತಧಾ ವರ್ತಮಾನಃ ಪ್ರಾಣಃ ಪ್ರಜಾನಾ ಮುದಯತ್ಯೇಷ ಸೂರ್ಯಃ ||೮||
ಸಂವಸ್ಸರೋ ವೈ ಪ್ರಜಾಪತಿಸ್ತಸ್ಯಾಯನೇ ದಕ್ಷಿಣಂ ಚೋತ್ತರಂ ಚ | ತದ್ಯೇ ಹ ವೈ ತದಿಷ್ಟಾ ಪೂರ್ತೆ ಕೃತಮಿತ್ಯುಪಾಸತೇ | ತೇ ಚಾಂದ್ರಮಸಮೇವ ಲೋಕ ಮಭಿಜಯಂತೇ | ತ ಏವ ಪುನರಾವರ್ತಂತೇ ತಸ್ಮಾ ದೇತ ಋಷಯಃ ಪ್ರಜಾ ಕಾಮಾ ದಕ್ಷಿಣಂ ಪ್ರತಿಪದ್ಯತೇ | ಏಷ ಹ ವೈ ರಯಿರ್ಯಃ ಪಿತೃಯಾಣಃ ||೯||
ಅಥೋತ್ತರೇಣ ತಪಸಾ ಬ್ರಹ್ಮಚರ್ಯೇಣ ಶ್ರದ್ಧಯಾ ವಿದ್ಯಯಾತ್ಮಾನಮನ್ವಿಷ್ಯಾದಿತ್ಯಮಭಿಜಯಂತೇ | ಏತದ್ವೈ ಪ್ರಾಣಾನಾಮಾಯತನಮೇತದ-ಮೃತಮಭಯಮೇತತ್ಪರಾಯಣಮೇತಸ್ಮಾನ್ನ ಪುನರಾವರ್ತಂತ ಇತ್ಯೇಷ ನಿರೋಧಸ್ತದೇಷ ಶ್ಲೋಕಃ ||೧೦||
ಪಂಚಪಾದಂ ಪಿತರಂ ದ್ವಾದಶಾಕೃತಿಂ ದಿವ ಆಹುಃ ಪರೇ ಅರ್ದೇ ಪುರೀಶಿಣಮ್ |
ಅಥೇಮೇ ಅನ್ಯ ಉ ಪರೇ ವಿಚಲಕ್ಷಣಂ ಸಪ್ತ ಚಕ್ರೇ ಷಡರ ಆಹುರರ್ಪಿತಮಿತಿ ||೧೧||
ಮಾಸೋ ವೈ ಪ್ರಜಾಪತಿಸ್ತಸ್ಯ ಕೃಷ್ಣ ಪಕ್ಷ ಏವ ರಯಿ: , ಶುಕ್ಲಃ ಪ್ರಾಣಸ್ತಸ್ಮಾದೇತ ಋಷಯಃ ಶುಕ್ಲ ಕುರ್ವಂತೀತರ ಇತರಸ್ಮಿನ್ ||೧೨||
ಅಹೋರಾತ್ರೋ ವೈ ಪ್ರಜಾಪತಿಸ್ತಸ್ಯಾಹರೇವ ಪ್ರಾಣೋರಾತ್ರಿರೇವ ರಯಿ: ಪ್ರಾಣಂ ವಾ ಎತೇ ಪ್ರಸ್ಕಂದಂತಿ ಯೇ ದಿವಾರತ್ಯಾ ಸಂಯಜ್ಯಂತೇ ||೧೩||
ಅನ್ನಂ ವೈ ಪ್ರಜಾಪತಿಸ್ತತೋ ಹ ವೈ ತದ್ರೇತಸ್ತಸ್ಮಾದಿಮಾಃ ಪ್ರಜಾಃ ಪ್ರಜಾಯಂತ ಇತಿ ||೧೪||
ತದ್ಯೇ ಹ ವೈ ತತ್ಪ್ರಜಾಪತಿವ್ರತಂ ಚರಂತಿ ತೇ ಮಿಥುನಮುತ್ಪಾದಯಂತೇ |
ತೇಷಾಮೇವೈಷ ಬ್ರಹ್ಮಲೋಕೋ ಯೇಷಾಂ ತಪೋ ಬ್ರಹ್ಮಚರ್ಯಂಯೇಷು ಸತ್ಯಂ ಪ್ರತಿಷ್ಟಿತಂ ||೧೫||
ತೇಷಾಮಸೌ ವಿರಜೋ ಬ್ರಹ್ಮಲೋಕೋ ನ ಯೇಷು ಜಿಹ್ಮ ಮನೃತಂ ನ ಮಾಯಾ ಚೇತಿ ||೧೬||
ಎರಡನೆಯ ಪ್ರಶ್ನೆ
ಅಥ ಹೈನಂ ಭಾರ್ಗವೋ ವೈದರ್ಬಿ: ಪಪ್ರಚ್ಛ | ಭಗವನ್ ಕತ್ಯೇವ ದೇವಾಃ ಪ್ರಜಾಂ ವಿಧಾರಯಂತೇ, ಕತರ ಏತತ್ ಪ್ರಕಾಶಯಂತೇ, ಕಃ ಪುನರೇಷಾಂ ವರಿಷ್ಠ ಇತಿ ||೧||
ತಸ್ಮೈ ಸ ಹೋವಾಚಾಕಾಶೋ ಹ ವಾ ಏಷ ದೇವೋ ವಾಯುರಗ್ನಿರಾಪಃ ಪೈಥಿವೀ ವಾಙ್ಮನಶ್ಚಕ್ಷುಃ ಶ್ರೋತ್ರಂ ಚ | ತೇ ಪ್ರಕಾಶ್ಯಾಭಿವದಂತಿ 'ವಯಮೇತದ್ಬಾಣಮವಷ್ಟಭ್ಯ ವಿಧಾರಯಾಮಃ' ||೨||
ತಾನ್ ವರಿಷ್ಟಃ ಪ್ರಾಣ ಉವಾಚ | ಮಾ ಮೋಹಮಾ ಪದ್ಯಥಾಹಮೇವೈ ತತ್ ಪಂಚಧಾತ್ಮಾನಂ ಪ್ರವಿಭಜ್ಯ ಏತತ್ ಬಾಣಂ ಅವಷ್ಟಭ್ಯ ವಿಧಾರಯಾಮೀತಿ ತೇsಶ್ರದ್ಧಧಾನಾಬಭೂವುಃ ||೩||
ಸೋsಭಿಮಾನಾದೂರ್ಧ್ವಮುತ್ಕ್ರಾಮತ ಇವ ತಸ್ಮಿನ್ನುತ್ಕ್ರಾಮತ್ಯಥೇತರೇ ಸರ್ವ ಎವೋತ್ಕಾಮಂತೇ, ತಸ್ಮಿಂಶ್ಚ ಪ್ರತಿಷ್ಟಂತೇ ತದ್ಯಥಾ ಮಕ್ಷಿಕಾ ಮಧುಕರರಾಜಾನಮುತ್ಕ್ರಾಮಂತಂ ಸರ್ವಾ ಎವೋತ್ಕ್ರಾಮಂತೇ, ತಸ್ಮಿಂಶ್ಚ ಪ್ರತಿಷ್ಠಮಾನೇ ಸರ್ವಾ ಏವ ಪ್ರಾತಿಷ್ಟಂತ ಏವಂ ನಶ್ಚಕ್ಷುಃ ಶ್ರೋತ್ರಂ ಚ; ತೇ ಪ್ರೀತಾ, ಪ್ರಾಣಂಸ್ತುನ್ವಂತಿ ||೪||
ಎಷೋsಗ್ನಿಸ್ತಪತ್ಯೇಷ ಸೂರ್ಯ ಏಷ ಪೈಥಿವೀರಯಿರ್ದೆವಃ ಸದಸ ಸಚ್ಚಾಮೃತಂ ಚ ಯತ್ ||೫||
ಅರಾ ಇವ ರಥನಾಭೌ ಪ್ರಾಣೇ ಸರ್ವಂ ಪ್ರತಿಷ್ಠಿತಮ್ | ಋಚೋ ಯಜೂಷಿ ಸಾಮಾನಿ ಯಜ್ಞಂ ಕ್ಷತ್ರಂ ಬ್ರಹ್ಮ ಚ ||೬||
ಪ್ರಜಾಪತಿಶ್ಚರಸಿ ಗರ್ಭೇ ತ್ವಮೇವ ಪ್ರತಿಜಾಯಸೇ | ತುಭ್ಯಂ ಪ್ರಾಣ ಪ್ರಜಾಸ್ತ್ವಿಮಾ ಬಲಿಂ ಹರಂತಿ ಯಃ ಪ್ರಾಣ್ಯ:ಪ್ರತಿತಿಷ್ಠಸಿ ||೭||
ದೇವಾನಾಮಸಿ ವಹ್ನಿತಮಃ ಪಿತೃಣಾಂ ಪ್ರಥಮಾ ಸ್ವಧಾ | ಋಷೀಣಾಂ ಚರಿತಂಸತ್ಯಮಥರ್ವಾಂಗಿರಸಾಮಸಿ ||೮||
ಇಂದ್ರಸ್ತ್ವಂ ಪ್ರಾಣ ತೇಜಸಾ ರುದ್ರೋsಸಿ ಪರಿರಕ್ಷಿತಾ | ತ್ವಮಂತರಿಕ್ಷೇ ಚರಸಿ ಸೂರ್ಯಾಸ್ತ್ವಂ ಜ್ಯೋತಿಷಾಂ ಪತಿಃ ||೯||
ಯದಾ ತ್ವಮಭಿವರ್ಷಸ್ಯಥೇಮಾಃ ಪ್ರಾಣತೇ ಪ್ರಜಾಃ | ಆನಂದರೂಪಾಸ್ತಿಷ್ಟಂತಿ ಕಾಮಾಯಾನ್ನಂ ಭವಿಷ್ಯತೀತಿ ||೧೦||
ವ್ರಾತ್ಯಸ್ತ್ವಂಪ್ರಾಣ್ಯಕ ಋಶಿರತ್ತಾ ವಿಶ್ವಸ್ಯ ಸತ್ಪತಿ: ವಯಮಾದ್ಯಸ್ಯ ದಾತಾರಃ ಪಿತಾ ತ್ವಂ ಮಾತರಿಶ್ವ ನಃ ||೧೧||
ಯಾ ತೇ ತನೂರ್ವಾಚಿ ಪ್ರತಿಷ್ಠಿತಾ ಯಾ ಶ್ರೋತ್ರೇ ಯಾ ಚ ಚಕ್ಷುಷಿ |
ಯಾ ಚ ಮನಸಿ ಸಂತತಾ ಶಿವಾಂ ತಾಂ ಕುರು ಮೋತ್ಕ್ರಮೀ: ||೧೨||
ಪ್ರಾಣಸ್ಯೇದಂ ವಶೇ ಸರ್ವಂ ತ್ರಿದಿನೇ ಯತ್ ಪ್ರತಿಷ್ಟಿತಮ್ |
ಮಾತೇವ ಪುತ್ರಾನ್ ರಕ್ಷಸ್ವ ಶ್ರೀಸ್ಚ ಪ್ರಜ್ಞಾಂ ಚ ವಿಧೇಹಿ ನ ಇತಿ ||೧೩||
ಮೂರನೇ ಪ್ರಶ್ನೆ:
ಅಥ ಹೈನಂ ಕೌಶಲ್ಯಷ್ಚಾಶ್ವಲಾಯನಃ ಪಪ್ರಚ್ಛ | ಭಗವನ್ ಕುತ ಏಷ ಪ್ರಾಣೋ ಜಾಯತೇ ಕಥಮಾಯಾತ್ಯಸ್ಮಿಞ್ಶರೀರ ಆತ್ಮಾನಂ ವಾ ಪ್ರವಿಭಜ್ಯ ಕಥಂ ಪ್ರತಿಷ್ಠತೇ ಕೇನೋತ್ಕ್ರಮತೇ ಕಥಂ ಬಹ್ಯಮಭಿಧತೇ ಕಥಮಧ್ಯಾತ್ಮಮಿತಿ || ೧||
ತಸ್ಮೈ ಸ ಹೋಉವಾಚಾತಿಪ್ರಷ್ಚಾನ್ ಪೃಚ್ಛಸಿ ಬ್ರಹ್ಮಿಷ್ಠೋಽಸೀತಿ ತಸ್ಮಾತ್ತೇಽಹಂ ಬ್ರವೀಮಿ || ೨||
ಆತ್ಮನ ಏಷ ಪ್ರಾಣೋ ಜಾಯತೇ | ಯಥೈಷಾ ಪುರುಷೇ ಛಾಯೈತಸ್ಮಿನ್ನೇತದಾತತಂ ಮನೋಕೃತೇನಾಯಾತ್ಯಸ್ಮಿಞ್ಶರೀರೇ || ೩||
ಯಥಾ ಸಮ್ರಾದೇವಾಧಿಕೃತಾನ್ ವಿನಿಯುಂಕ್ತೇ | ಏತನ್ ಗ್ರಾಮಾನೋತಾನ್ ಗ್ರಾಮಾನಧಿತಿಷ್ಟಸ್ವೇತ್ಯೇವಮೇವೈಷ ಪ್ರಾಣ ಇತರಾನ್ ಪ್ರಾಣಾನ್ ಪೃಥಕ್ ಪೃಥಗೇವ ಸನ್ನಿಧತ್ತೇ
ಪಾಯೂಪಸ್ಥೇಽಪಾನಂ ಚಕ್ಷುಃಶ್ರೋತ್ರೇ ಮುಖನಾಸಿಕಾಭ್ಯಾಂ ಪ್ರಾಣಃ ಸ್ವಯಂ ಪ್ರಾತಿಷ್ಟತೇ ಮಧ್ಯೇ ತು ಸಮಾನಃ |
ಏಷ ಹ್ಯೇತದ್ಧುತಮನ್ನಂ ಸಮಂ ನಯತಿ ತಸ್ಮಾದೇತಾಃ ಸಪ್ತಾರ್ಚಿಷೋ ಭವಂತಿ || ೫||
ಹೃದಿ ಹ್ಯೇಷ ಆತ್ಮಾ | ಅತ್ರೈತದೇಕಶತಂ ನಾಡೀನಂ ತಾಸಾಂ ಶತಂ ಶತಮೇಕೈಕಸ್ಯಾ ದ್ವಾಸಪ್ತತಿರ್ದ್ವಾಸಪ್ತತಿಃ ಪ್ರತಿಶಾಖಾನಾಡೀಸಹಸ್ರಾಣಿ ಭವಂತ್ಯಾಸು ವ್ಯಾನಶ್ಚರತಿ || ೬||
ಅಥೈಕಯೋರ್ಧ್ವ ಉದಾನಃ ಪುಣ್ಯೇನ ಪುಣ್ಯಂ ಲೋಕಂ ನಯತಿ ಪಾಪೇನ ಪಾಪಮುಭಾಭ್ಯಾಮೇವ ಮನುಷ್ಯಲೋಕಂ || ೭||
ಆದಿತ್ಯೋ ಹ ವೈ ಬಾಹ್ಯಃ ಪ್ರಾಣ ಉದಯತ್ಯೇಷ ಹ್ಯೇನಂ ಚಾಕ್ಷುಷಂ ಪ್ರಾಣಮನುಗೃಹ್ಣಾನಃ |
ಪೃಥಿವ್ಯಾಂ ಯಾ ದೇವತಾ ಸೈಷಾ ಪುರುಷಸ್ಯ ಅಪಾನಮವಷ್ಟಭ್ಯಾಂತರಾ ಯದಾಕಾಶಃ ಸ ಸಮಾನೋ ವಾಯುರ್ವ್ಯಾನಃ || ೮||
ತೇಜೋ ಹ ವಾ ಉದಾನಸ್ತಸ್ಮಾದುಪಶಾಂತತೇಜಾಃ | ಪುನರ್ಭವಮಿಂದ್ರಿಯೈರ್ಮನಸಿ ಸಂಪಧ್ಯಮಾನೈಃ || ೯||
ಯಚ್ಚಿತ್ತಸ್ತೇನೈಷ ಪ್ರಾಣಮಾಯಾತಿ | ಪ್ರಾಣಸ್ತೇಜಸಾ ಯುಕ್ತಃ ಸಹಾತ್ಮನಾ ತಥಾಸಂಕಲ್ಪಿತಂ ಲೋಕಂ ನಯತಿ || ೧೦||
ಯ ಏವಂ ವಿದ್ವಾನ್ ಪ್ರಾಣಂ ವೇದ ನ ಹಾಸ್ಯ ಪ್ರಜಾ ಹೀಯತೇಽಮೃತೋ ಭವತಿ ತದೇಷಃ ಶ್ಲೋಕಃ || ೧೧||
ಉತ್ಪತ್ತಿಮಾಯತಿಂ ಸ್ಥಾನಂ ವಿಭುತ್ವಂ ಚೈವ ಪಂಚಧಾ |
ಅಧ್ಯಾತ್ಮಂ ಚೈವ ಪ್ರಾಣಸ್ಯ ವಿಜ್ಞಾಯಾಮೃತಮಶ್ನುತೇ ವಿಜ್ಞಾಯಾಮೃತಮಶ್ನುತ ಇತಿ || ೧೨||
ನಾಲ್ಕನೇ ಪ್ರಶ್ನೆ:
ಅಥ ಹೈನಂ ಸೌರ್ಯಾಯಣಿ ಗಾರ್ಗ್ಯಃ ಪಪ್ರಚ್ಛ | ಭಗವನ್ನೇತಸ್ಮಿನ್ ಪುರುಷೇ ಕಾನಿ ಸ್ವಪಂತಿ ಕಾನ್ಯಸ್ಮಿಂಜಾಗ್ರತಿ ಕತರ ಏಷ ದೇವಃ ಸ್ವಪ್ನಾನ್ ಪಶ್ಯತಿ ಕಸ್ಯೈತತ್ ಸುಖಂ ಭವತಿ ಕಸ್ಮಿನ್ನು ಸರ್ವೇ ಸಂಪ್ರತಿಷ್ಟಿತಾ ಭವಂತೀತಿ || ೧||
ತಸ್ಮೈ ಸ ಹೋವಚ | ಯಥ ಗಾರ್ಗ್ಯ ಮರೀಚಯೋಽರ್ಕಸ್ಯಾಸ್ತಂ
ಗಚ್ಛತಃ ಸರ್ವಾ ಏತಸ್ಮಿಂಸ್ತೇಜೋಮಂಡಲ ಏಕೀಭವಂತಿ | ತಾಃ ಪುನಃ
ಪುನರುದಯತಃ ಪ್ರಚರಂತ್ಯೇವಂ ಹ ವೈ ತತ್ ಸರ್ವಂ ಪರೇ ದೇವೇ
ಮನಸ್ಯೇಕೀಭವತಿ
ತೇನ ತರ್ಹ್ಯೇಷ ಪುರುಷೋ ನ ಶೃಣೋತಿ ನ ಪಶ್ಯತಿ ನ
ಜಿಘ್ರತಿ ನ ರಸಯತೇ ನ ಸ್ಪೃಶತೇ ನಾಭಿವದತೇ ನಾದತ್ತೇ ನಾನಂದಯತೇ
ನ ವಿಸೃಜತೇ ನೇಯಾಯತೇ ಸ್ವಪಿತೀತ್ಯಾಚಕ್ಷತೇ || ೨||
ಪ್ರಾಣಾಗ್ರಯ ಏವೈತಸ್ಮಿನ್ ಪುರೇ ಜಾಗ್ರತಿ | ಗಾರ್ಹಪತ್ಯೋ ಹ
ವಾ ಏಷೋಽಪಾನೋ ವ್ಯಾನೋಽನ್ವಾಹಾರ್ಯಪಚನೋ ಯದ್ಗಾರ್ಹಪತ್ಯಾತ್ ಪ್ರಣೀಯತೇ
ಪ್ರಣಯನಾದಾಹವನೀಯಃ ಪ್ರಾಣಃ || ೩||
ಯದುಚ್ಛ್ವಾಸನಿಃಶ್ವಾಸಾವೇತಾವಾಹುತೀ ಸಮಂ ನಯತೀತಿ ಸ ಸಮಾನಃ | ಮನೋ ಹ ವಾವ ಯಜಮಾನಃ | ಇಷ್ಟಫಲಮೇವೋದಾನಃ | ಸ ಏನಂ ಯಜಮಾನಮಹರಹರ್ಬ್ರಹ್ಮ ಗಮಯತಿ || ೪||
ಅತ್ರೈಷ ದೇವಃ ಸ್ವಪ್ನೇ ಮಹಿಮಾನಮನುಭವತಿ | ಯದ್ದೃಷ್ಟಂ
ದೃಷ್ಟಮನುಪಶ್ಯತಿ
ಶ್ರುತಂ ಶ್ರುತಮೇವಾರ್ಥಮನುಶೃಣೋತಿ ದೇಶದಿಗಂತರೈಶ್ಚ
ಪ್ರತ್ಯನುಭೂತಂ
ಪುನಃ ಪುನಃ ಪ್ರತ್ಯನುಭವತಿ ದೃಷ್ಟಂ ಚಾದೃಷ್ಟಂ ಚ ಶ್ರುತಂ
ಚಾಶ್ರುತಂ
ಚಾನುಭೂತಂ ಚಾನನುಭೂತಂ ಚ ಸ್ಚ್ಚಾಸಚ್ಚ ಸರ್ವಂ ಪಶ್ಯತಿ ಸರ್ವಃ
ಪಸ್ಯತಿ || ೫||
ಸ ಯದಾ ತೇಜಸಾಽಭಿಭೂತೋ ಭವತಿ | ಅತ್ರೈಷ ದೇವಃ ಸ್ವಪ್ನಾನ್ನ
ಪಶ್ಯತ್ಯಥ ಯದೈತಸ್ಮಿಞ್ಶರೀರ ಏತತ್ಸುಖಂ ಭವತಿ || ೬||
ಸ ಯಥಾ ಸೋಭ್ಯ ವಯಾಂಸಿ ವಸೋವೃಕ್ಷಂ ಸಂಪ್ರತಿಷ್ಠಂತೇ | ಏವಂ
ಹ ವೈ ತತ್ ಸರ್ವಂ ಪರ ಆತ್ಮನಿ ಸಂಪ್ರತಿಷ್ಠತೇ || ೭||
ಪೃಥಿವೀ ಚ ಪೃಥಿವೀಮಾತ್ರಾ ಚಾಪಶ್ಚಾಪೋಮಾತ್ರಾ ಚ ತೇಜಶ್ಚ
ತೇಜೋಮಾತ್ರಾ ಚ ವಾಯುಶ್ಚ ವಾಯುಮಾತ್ರಾ ಚಾಕಾಶಶ್ಚಾಕಾಶಮಾತ್ರಾ
ಚ ಚಕ್ಷುಶ್ಚ ದ್ರಷ್ಟವ್ಯಂ ಚ ಶ್ರೋತ್ರಂ ಚ ಶ್ರೋತವ್ಯಂ ಚ ಗ್ರಾಣಂ ಚ
ಘ್ರಾತವ್ಯಂ ಚ ರಸಶ್ಚ ರಸಯಿತವ್ಯಂ ಚ ತ್ವಕ್ಚ ಸ್ಪರ್ಶಯಿತವ್ಯಂ ಚ
ವಾಕ್ಚ ವಕ್ತವ್ಯಂ ಚ ಹಸ್ತೌ ಚಾದಾತವ್ಯಂ ಚೋಪಸ್ಥಶ್ಚಾನಂದಯಿತವ್ಯಂ
ಚ ಪಾಯುಶ್ಚ ವಿಸರ್ಜಯಿತವ್ಯಂ ಚ ಯಾದೌ ಚ ಗಂತವ್ಯಂ ಚ ಮನಶ್ಚ
ಮಂತವ್ಯಂ ಚ ಬುದ್ಧಿಶ್ಚ ಬೋದ್ಧಿವ್ಯಂ ಚಾಹಂಕಾರಶ್ಚಾಹಂಕರ್ತವ್ಯಂ ಚ
ಚಿತ್ತಂ ಚ ಚೇತಯಿತವ್ಯಂ ಚ ತೇಜಶ್ಚ ವಿದ್ಯೋತಯಿತವ್ಯಂ ಚ ಪ್ರಾಣಶ್ಚ
ವಿದ್ಯಾರಯಿತವ್ಯಂ ಚ || ೮||
ಏಷ ಹಿ ದ್ರಷ್ಟ ಸ್ಪ್ರಷ್ಟಾ ಶ್ರೋತಾ ಘ್ರಾತಾ ರಸಯಿತಾ ಮಂತಾ
ಬೋದ್ಧಾ ಕರ್ತಾ ವಿಜ್ಞಾನಾತ್ಮಾ ಪುರುಷಃ | ಸ ಪರೇಽಕ್ಷರ ಆತ್ಮನಿ
ಸಂಪ್ರತಿಷ್ಠತೇ || ೯||
ಪರಮೇವಾಕ್ಷರಂ ಪ್ರತಿಪದ್ಯತೇ ಸ ಯೋ ಹ ವೈ
ತದಚ್ಛಾಯಮಶರೀರಮ್ಲೋಹಿತಂ
ಶುಭ್ರಮಕ್ಷರಂ ವೇದಯತೇ ಯಸ್ತು ಸೋಮ್ಯ | ಸ ಸರ್ವಜ್ಞಃ ಸರ್ವೋ ಭವತಿ |
ತದೇಷ ಶ್ಲೋಕಃ || ೧೦||
ವಿಜ್ಞಾನಾತ್ಮಾ ಸಹ ದೇವೈಶ್ಚ ಸರ್ವೈಃ
ಪ್ರಾಣಾ ಭುತಾನಿ ಸಂಪ್ರತಿಷ್ಠಂತಿ ಯತ್ರ
ತದಕ್ಷರಂ ವೇದಯತೇ ಯಸ್ತು ಸೋಮ್ಯ
ಸ ಸರ್ವಜ್ಞಃ ಸರ್ವಮೇವಾವಿವೇಶೇತಿ || ೧೧||
ಐದನೇ ಪ್ರಶ್ನೆ:
ಅಥ ಹೈನಂ ಸೈಬ್ಯಃ ಸತ್ಯಕಾಮಃ ಪಪ್ರಚ್ಛ | ಸ ಯೋ ಹ ವೈ ತಭ್ದಗವನ್ಮನುಷ್ಯೇಷು ಪ್ರಾಯಣಾಂತಮೋಂಕಾರಮಭಿಧ್ಯಾಯೀತ | ಕತಮಂ ವಾವ ಸ ತೇನ ಲೋಕಂ ಜಯತೀತಿ | ತಸ್ಮೈ ಸ ಹೋವಾಚ || ೧||
ಏತದ್ವೈ ಸತ್ಯಕಾಮ ಪರಂ ಚಾಪರಂ ಚ ಬ್ರಹ್ಮ ಯದೋಂಕಾರಃ |
ತಸ್ಮಾದ್ವಿದ್ವಾನೇತೇನೈವಾಯತನೇನೈಕತರಮನ್ವೇತಿ || ೨||
ಸ ಯಧ್ಯೇಕಮಾತ್ರಮಭಿಧ್ಯಾಯೀತ ಸ ತೇನೈವ ಸಂವೇದಿತಸ್ತೂರ್ಣಮೇವ
ಜಗತ್ಯಾಭಿಸಂಪಧ್ಯತೇ | ತಮೃಚೋ ಮನುಷ್ಯಲೋಕಮುಪನಯಂತೇ ಸ ತತ್ರ
ತಪಸಾ ಬ್ರಹ್ಮಚರ್ಯೇಣ ಶ್ರದ್ಧಯಾ ಸಂಪನ್ನೋ ಮಹಿಮಾನಮನುಭವತಿ || ೩||
ಅಥ ಯದಿ ದ್ವಿಮಾತ್ರೇಣ ಮನಸಿ ಸಂಪಧ್ಯತೇ ಸೋಽನ್ತರಿಕ್ಷಂ
ಯಜುರ್ಭಿರುನ್ನೀಯತೇ ಸೋಮಲೋಕಂ | ಸ ಸೋಮಲೋಕೇ ವಿಭುತಿಮನುಭೂಯ
ಪುನರಾವರ್ತತೇ || ೪||
ಯಃ ಪುನರೇತಂ ತ್ರಿಮಾತ್ರೇಣೋಮಿತ್ಯೇತೇನೈವಾಕ್ಷರೇಣ ಪರಂ ಪುರುಷಮಭಿ-
ಧ್ಯಾಯೀತ ಸ ತೇಜಸಿ ಸೂರ್ಯೇ ಸಂಪನ್ನಃ | ಯಥಾ ಪಾದೋದರಸ್ತ್ವಚಾ
ವಿನಿರ್ಭುಚ್ಯತ ಏವಂ ಹ ವೈ ಸ ಪಾಪ್ಮನಾ ವಿನಿರ್ಭುಕ್ತಃ ಸ
ಸಾಮಭಿರುನ್ನೀಯತೇ ಬ್ರಹ್ಮಲೋಕಂ ಸ ಏತಸ್ಮಾಜ್ಜೀವಘನಾತ್ ಪರಾತ್ಪರಂ
ಪುರುಶಯಂ ಪುರುಷಮೀಕ್ಷತೇ | ತದೇತೌ ಶ್ಲೋಕೌ ಭವತಃ || ೫||
ತಿಸ್ರೋ ಮಾತ್ರಾ ಮೃಅತ್ಯುಮತ್ಯಃ ಪ್ರಯುಕ್ತಾ
ಅನ್ಯೋನ್ಯಸಕ್ತಾಃ ಅನವಿಪ್ರಯುಕ್ತಾಃ |
ಕ್ರಿಯಾಸು ಬಾಹ್ಯಾಭ್ಯಂತರಮಧ್ಯಮಾಸು
ಸಮ್ಯಕ್ ಪ್ರಯುಕ್ತಾಸು ನ ಕಂಪತೇ ಜ್ಞಃ || ೬||
ಋಗ್ಭಿರೇತಂ ಯಜುರ್ಭಿರಂತರಿಕ್ಷಂ
ಸಾಮಭಿರ್ಯತ್ ತತ್ ಕವಯೋ ವೇದಯಂತೇ |
ತಮೋಂಕಾರೇಣೈವಾಯತನೇನಾನ್ವೇತಿ ವಿದ್ವಾನ್
ಯತ್ತಚ್ಛಾಂತಮಜರಮಮೃತಮಭಯಂ ಪರಂ ಚೇತಿ || ೭||
ಆರನೇ ಪ್ರಶ್ನೆ:
ಅಥ ಹೈನಂ ಸುಕೇಶಾ ಭಾರದ್ವಾಜಃ ಪಪ್ರಚ್ಛ | ಭಗವನ್ ಹಿರಣ್ಯನಾಭಃ ಕೌಸಲ್ಯೋ ರಾಜಪುತ್ರೋ ಮಾಮುಪೇತ್ಯೈತಂ ಪ್ರಶ್ನಮಪೃಚ್ಛತ | ಷೋಡಶಕಲಂ ಭಾರದ್ವಾಜ ಪುರುಷಂ ವೇತ್ಥ | ತಮಹಂ ಕುಮಾರಂಬ್ರುವಂ ನಾಹಮಿಮಂ ವೇದ | ಯಧ್ಯಹಮಿಮಮವೇದಿಷಂ ಕಥಂ ತೇ ನಾವಕ್ಷ್ಯಮಿತಿ | ಸಮೂಲೋ ವಾ ಏಷ ಪರಿಶುಷ್ಯತಿ ಯೋಽನೃತಮಭಿವದತಿ ತಸ್ಮಾನ್ನಾರ್ಹಮ್ಯನೃತಂ ವಕ್ತುಂ | ಸ ತೂಷ್ಣೀಂ ರಥಮಾರುಹ್ಯ ಪ್ರವವ್ರಾಜ | ತಂ ತ್ವಾ ಪೃಚ್ಛಾಮಿ ಕ್ವಾಸೌ ಪುರುಷ ಇತಿ || ೧||
ತಸ್ಮೈ ಸ ಹೋವಾಚ | ಇಹೈಇವಾಂತಃಶರೀರೇ ಸೋಭ್ಯ ಸ ಪುರುಷೋ
ಯಸ್ಮಿನ್ನತಾಃ ಷೋಡಶಕಲಾಃ ಪ್ರಭವಂತೀತಿ || ೨||
ಸ ಈಕ್ಷಾಚಕ್ರೇ | ಕಸ್ಮಿನ್ನಹಮುತ್ಕ್ರಾಂತ ಉತ್ಕ್ರಾಂತೋ ಭವಿಷ್ಯಾಮಿ
ಕಸ್ಮಿನ್ವಾ ಪ್ರತಿಷ್ಟಿತೇ ಪ್ರತಿಷ್ಟಸ್ಯಾಮೀತಿ || ೩||
ಸ ಪ್ರಾಣಮಸೃಜತ ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ
ಪೃಥಿವೀಂದ್ರಿಯಂ ಮನಃ | ಅನ್ನಮನ್ನಾದ್ವೀರ್ಯಂ ತಪೋ ಮಂತ್ರಾಃ ಕರ್ಮ
ಲೋಕಾ
ಲೋಕೇಷು ಚ ನಾಮ ಚ || ೪||
ಸ ಯಥೇಮಾ ನಧ್ಯಃ ಸ್ಯಂದಮಾನಾಃ ಸಮುದ್ರಾಯಣಾಃ ಸಮುದ್ರಂ
ಪ್ರಾಪ್ಯಾಸ್ತಂ
ಗಚ್ಛಂತಿ ಭಿಧ್ಯೇತೇ ತಾಸಾಂ ನಾಮರುಪೇ ಸಮುದ್ರ ಇತ್ಯೇವಂ ಪ್ರೋಚ್ಯತೇ |
ಏವಮೇವಾಸ್ಯ ಪರಿದ್ರಷ್ಟುರಿಮಾಃ ಷೋಡಶಕಲಾಃ ಪುರುಷಾಯಣಾಃ
ಪುರುಷಂ
ಪ್ರಾಪ್ಯಾಸ್ತಂ ಗಚ್ಛಂತಿ ಭಿಧ್ಯೇತೇ ಚಾಸಾಂ ನಾಮರುಪೇ ಪುರುಷ ಇತ್ಯೇವಂ
ಪ್ರೋಚ್ಯತೇ ಸ ಏಷೋಽಕಲೋಽಮೃತೋ ಭವತಿ ತದೇಷ ಶ್ಲೋಕಃ || ೫||
ಅರಾ ಇವ ರಥನಾಭೌ ಕಲಾ ಯಸ್ಮಿನ್ಪ್ರತಿಷ್ಟಿತಾಃ |
ತಂ ವೇಧ್ಯಂ ಪುರುಷಂ ವೇದ ಯಥ ಮಾ ವೋ ಮೃತ್ಯುಃ ಪರಿವ್ಯಥಾ ಇತಿ || ೬||
ತಾನ್ ಹೋವಾಚೈತಾವದೇವಾಹಮೇತತ್ ಪರಂ ಬ್ರಹ್ಮ ವೇದ | ನಾತಃ
ಪರಮಸ್ತೀತಿ || ೭||
ತೇ ತಮರ್ಚಯಂತಸ್ತ್ವಂ ಹಿ ನಃ ಪಿತಾ ಯೋಽಸ್ಮಾಕಮವಿಧ್ಯಾಯಾಃ
ಪರಂ ಪರಂ ತಾರಯಸೀತಿ | ನಮಃ ಪರಮಋಷಿಭ್ಯೋ ನಮಃ
ಪರಮಋಷಿಭ್ಯಃ || ೮||
ಬಾಹ್ಯಸಂಪರ್ಕಗಳು
ಬದಲಾಯಿಸಿ- Sri Aurobindo, The Upanishads Sri Aurobindo Ashram, Pondicherry.1972.
- Multiple translations (Johnston, Nikhilānanda, Gambhirananda)
- Prashna Upanishad Chanting by Pt. Ganesh Vidyalankar
- Prashna Upanishad Sanskrit PDF [೧]
- Sri Aurobindo on Prashna Upanishad [೨].