ಇತಿಹಾಸ [೧] ಎಂದರೆ ನಮ್ಮ ಭೂತಕಾಲದ ಬಗೆಗಿನ ಮಾಹಿತಿ ಎಂದರ್ಥ (ಸಂಸ್ಕೃತದಲ್ಲಿ ಇತಿ=ಹೀಗೆ ಮತ್ತು ಹಾಸ=ಆದದ್ದು ಎಂಬ ವಿವರಣೆ ಇದೆ). ಸಂಬಂಧಪಟ್ಟ ವಿಷಯಗಳಿಗೆ ಈ ಪದವನ್ನು ನಾಮಪದವನ್ನಾಗಿ ಉಪಯೋಗಿಸಿದಾಗ ಇತಿಹಾಸವು ಮಾನವ, ಕುಟುಂಬ, ಮತ್ತು ಸಮಾಜದ ಮತ್ತು ಜೈವಿಕ ಬದುಕಿನ ಆಗುಹೋಗುಗಳ ದಾಖಲೆಗಳ ವೈಚಾರಿಕ ಚಿಂತನೆಗೆ ಪರಿಭಾಷೆಯಾಗಿ ಬಳಸಲ್ಪಡುತ್ತದೆ. ಬಹುಮಟ್ಟಿನ ಇತಿಹಾಸಕಾರರು ತಮ್ಮ ಅಧ್ಯಯನಗಳಿಗೆ ಬರವಣಿಗೆಯಲ್ಲಿ ದಾಖಲಾಗಿರುವ ಮೂಲಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಕೆಲವು ವಿಷಯಗಳಲ್ಲಿ ಐದು ಸಾವಿರ ವರ್ಷಗಳ ಹಿಂದಿನವರೆಗಿನ ಬರವಣಿಗೆಯ ಇತಿಹಾಸವು ಅಸ್ಥಿತ್ವದಲ್ಲಿದೆ . ಇದಕ್ಕೊ ಹಿಂದಿನ ಆಗು ಹೋಗುಗಳಿಗೆ, ಪುರಾತತ್ವ ಸರ್ವೇಕ್ಷಣಾ ಶಾಸ್ತ್ರವನ್ನೂ ಮತ್ತು ಪುರಾತನ ಜೀವಶಾಸ್ತ್ರ ಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಆದರೆ ಹಲವಾರು ಸಂಸ್ಕೃತಿಗಳಲ್ಲಿ ಇತಿಹಾಸವನ್ನು ಮೌಖಿಕ ಪರಂಪರೆಯ ಮೂಲಕವೂ ಅಭ್ಯಾಸಮಾಡುತ್ತಾರೆ.

ಇತಿಹಾಸದ ವಿಭಾಗಗಳು ಸಂಪಾದಿಸಿ

ಇತಿಹಾಸದ ಅಧ್ಯಯನವನ್ನು ಹಲವು ರೀತಿಗಳಲ್ಲಿ ವಿಂಗಡಿಸಬಹುದಾಗಿದೆ.

  • ಕಾಲಕ್ರಮದ ಮೇಲೆ.
  • ಭೌಗೋಳಿಕ ಪ್ರದೇಶದ ಮೇಲೆ.
  • ದೇಶಗಳ ಮೇಲೆ.
  • ಜನ ಪಂಗಡಗಳ ಮೇಲೆ.
  • ವಿಚಾರದ ಮೇಲೆ.

ಐಲೆಗಳು ಸಂಪಾದಿಸಿ

ಇತಿಹಾಸದ ಪರಂಪರೆಇತಿಹಾಸ ( ಗ್ರೀಕ್‌ನಿಂದ ἱστορία , ಹಿಸ್ಟೋರಿಯಾ , ಇದರರ್ಥ "ವಿಚಾರಣೆ; ತನಿಖೆಯಿಂದ ಪಡೆದ ಜ್ಞಾನ")  ಹಿಂದಿನ ಅಧ್ಯಯನವಾಗಿದೆ.  ಬರವಣಿಗೆ ವ್ಯವಸ್ಥೆಗಳ ಆವಿಷ್ಕಾರದ ಹಿಂದಿನ ಘಟನೆಗಳನ್ನು ಇತಿಹಾಸಪೂರ್ವ ಎಂದು ಪರಿಗಣಿಸಲಾಗುತ್ತದೆ . "ಇತಿಹಾಸ" ಎಂಬುದು ಹಿಂದಿನ ಘಟನೆಗಳ ಜೊತೆಗೆ ಈ ಘಟನೆಗಳ ಸ್ಮರಣೆ, ​​ಆವಿಷ್ಕಾರ, ಸಂಗ್ರಹಣೆ, ಸಂಘಟನೆ, ಪ್ರಸ್ತುತಿ ಮತ್ತು ವ್ಯಾಖ್ಯಾನವನ್ನು ಒಳಗೊಂಡಿರುವ ಒಂದು ಛತ್ರಿ ಪದವಾಗಿದೆ . ಇತಿಹಾಸಕಾರರು ಐತಿಹಾಸಿಕ ಮೂಲಗಳಾದ ಲಿಖಿತ ದಾಖಲೆಗಳು, ಮೌಖಿಕ ಖಾತೆಗಳು, ಕಲೆ ಮತ್ತು ವಸ್ತು ಕಲಾಕೃತಿಗಳು ಮತ್ತು ಪರಿಸರ ಗುರುತುಗಳನ್ನು ಬಳಸಿಕೊಂಡು ಹಿಂದಿನ ಜ್ಞಾನವನ್ನು ಹುಡುಕುತ್ತಾರೆ . ಸಂಪಾದಿಸಿ

ಇತಿಹಾಸದಿಂದ ಕಲಿಯುವಿಕೆ ಸಂಪಾದಿಸಿ

ಭಾರತದ ಇತಿಹಾಸವು[೨] ೯,೫೦೦ ವರ್ಷಗಳಿಗೂ ಅಗಾಧವಾದುದು. ಸಿಂಧೂ ನದಿಯ[೩] ನಾಗರೀಕತೆಯಿಂದಾಚೆಗೂ ಪ್ರಾರಂಭವಾಗುವ ಭಾರತದ ಇತಿಹಾಸದ ಪಳೆಯುಳಿಕೆಗಳು ೫೦೦೦ ವರ್ಷದ ಕಾಲಗತಿಯವರೆಗೂ ಸಿಗುತ್ತವೆ.

ಕರ್ನಾಟಕದ ಇತಿಹಾಸಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ. ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯರುಗಳೆಂದು ಕರೆದು ಕೊಳ್ಳುತಿದ್ದರು.ಮಿಥಿಲಯಾ ಕರ್ನಾಟ ಕರು ಇಂದಿನ ಬಿಹಾರದ ಮೇಲೆ ರಾಜ್ಯ ಅಳುತಿದ್ದರು. ಅವರು ಕೂಡ ತಮ್ಮನು ತಾವು ಕರ್ನಾಟವಂಶ ಹಾಗು ಕರ್ನಾಟಕ ಕ್ಷತ್ರಿಯ ರೆಂದು ಕರೆದುಕೊಳ್ಳುತಿದ್ದರು.. ಮಧ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒಡಿಶಾ), ಮಾನ್ಯಖೇಟದ ರಾಷ್ಟ್ರಕೂಟರು, ವೆಂಗಿ ಚಾಲುಕ್ಯರು ದೇವಗಿರಿಯ ಯಾದವ ವಂಶ ಇವರೆಲ್ಲರೂ ಕನ್ನಡ ಮೂಲದವರೇ ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದರು. ಸಂಪಾದಿಸಿ

ಇತಿಹಾಸ ಕಾಲಸೂಚಿ ಸಂಪಾದಿಸಿ

Iran KingdomsOtherAssyrianOld BabylonThird UrAkkadianFirst UrEarly SumerMayan PeriodPre-MayanLatter PeriodChinese EmpiresEarly KingdomsPre ChinaIndian EmpiresVedic PeriodLate HarappaMature HarappaEarly IndusGreek/Roman EmpiresLater EmpiresKingdoms of Egyptಪ್ರಾಚೀನ ಈಜಿಪ್ಟ್ಸಮಾನಕಾಲಮಧ್ಯದಕಾಲಹಳೆಯಕಾಲಪೂರ್ವದಕಾಲ

ನೋಡಿ ಸಂಪಾದಿಸಿ

ಉಲ್ಲೇಖ ಸಂಪಾದಿಸಿ

"https://kn.wikipedia.org/w/index.php?title=ಇತಿಹಾಸ&oldid=1170355" ಇಂದ ಪಡೆಯಲ್ಪಟ್ಟಿದೆ