ವೇದಗಳು ಪ್ರಾಚೀನ ಭಾರತದ ಸಾಹಿತ್ಯ. ಇವು ವೇದ ಕಾಲದ ಸಂಸ್ಕೃತ ಭಾಷೆಯಲ್ಲಿ ರಚಿಸಲ್ಪಟ್ಟಿದ್ದು, ಹಿಂದೂ ಧರ್ಮದ ಅತ್ಯಂತ ಪ್ರಾಚೀನ ಧರ್ಮಗ್ರಂಥಗಳಾಗಿವೆ.[೧][೨] ಹಿಂದೂಗಳು ಇದನ್ನು ಅಪೌರುಷೇಯ ಎಂದರೆ [೩] ಮನುಷ್ಯನಿಂದ ಮಾಡಲ್ಪಟ್ಟದ್ದಲ್ಲ ಎಂದು ಭಾವಿಸುತ್ತಾರೆ.[೪][೫][೬]

Rigveda (padapatha) manuscript in Devanagari

ವೇದ-ಹೆಚ್ಚಿನ ವಿವರಸಂಪಾದಿಸಿ

ಪ್ರಸ್ಥಾವನೆ

ಮೇಲೆ ತಿಳಿಸಿದಂತೆ ವೇದಗಳು ನಾಲ್ಕು . ಋಕ್, ಯಜುಸ್ , ಸಾಮ , ಅಥರ್ವ . ವೇದವೆಂದರೆ ಜ್ಞಾನ -ತಿಳುವಳಿಕೆ ಎಂದು ಅರ್ಥ. ಋಗ್ವೇದವು ಜಗತ್ತಿನಲ್ಲಿ ಅತ್ಯಂತ ಪ್ರಾಚೀನ ವಾಙ್ಮಯ(ಸಾಹಿತ್ಯ) ಎನಿಸಿದೆ. ಋಕ್, ಯಜುಸ್, ಸಾಮವೇದ ಇವು ಮೂರು ವೇದಗಳಿಗೆ ತ್ರಯೀ ಎಂದು ಹೆಸರು. ಅವಕ್ಕೆ ಹೆಚ್ಚು ಮಹತ್ವ .
ಋಗ್ವೇದದಲ್ಲಿ ದೇವತೆಗಳ ಸ್ತುತಿಗೆ, ಎಂದರೆ, ಋಕ್ಗಳಿಗೆ ಪ್ರಾಧಾನ್ಯ. ಪ್ರಾಮುಖ್ಯತೆ ; ಯಜುರ್ವೇದದಲ್ಲಿ ಯಜ್ಞಕ್ಕೆ ಸಂಬಂಧಪಟ್ಟ ಮಂತ್ರಗಳಿವೆ. ಅದರಲ್ಲಿ ಬಹಳಷ್ಟು ಋಗ್ವೇದ ಮಂತ್ರಗಳೇ ಇವೆ . ಸಾಮವೇದ ಮಂತ್ರಗಳು ಗಾನಕ್ಕೆ -ಯಜ್ಞದಲ್ಲಿ ಅಥವಾ ದೇವತೆಗಳ ಪ್ರೀತಿಗಾಗಿ ಹಾಡುವವು. ಅಥರ್ವದಲ್ಲಿ ಯಜ್ಞ, ಮದ್ದು , ಮಾಟ , ಇವುಗಳಿಗೆ ಸಂಬಂಧಪಟ್ಟ ಮಂತ್ರಗಳಿವೆ.
ವೇದ ಸಂಹಿತೆಯನ್ನು ಅಷ್ಟಕ, ಅದ್ಯಾಯ, ವರ್ಗ ಎಂದು ವಿಭಾಗಿಸಿದ್ದಾರೆ. ಇನ್ನೊಂದು ಬಗೆಯ ವಿಭಾಗ , ಮಂಡಲ , ಅನುವಾಕ , ಸೂಕ್ತ, ಮಂತ್ರ, -ಈ ಎರಡನೆಯ ಬಗೆಯ ವಿಭಾಗ ಹೆಚ್ಚು ಪ್ರಚಲಿತವಾಗಿದೆ.ಅನವಾಕಗಳ ೮೫, ಅನುವಾಮದಲ್ಲಿ ಸೂಕ್ತಗಳು ೧೦೨೮, ಅದರಲ್ಲಿ ಮಂತ್ರಗಳು ೧೦೫೫೦.ಯಜ್ಞದಲ್ಲಿ ಋಗ್ವೇದವು ಹೋತೃವಿಗೆ ಸಂಬಂಧಿಸಿದೆ , ಯಜುರ್ವೇದವು -ಅಧ್ವರ್ಯುವಿಗೆ , ಸಾಮವೇದವು ಉದ್ಗಾತೃವಿಗೆ ಸಂಬಂಧಿಸಿವೆ. ಯಜ್ಞದಲ್ಲಿ ಬ್ರಹ್ಮ ಸ್ಥಾನದಲ್ಲಿರುವವನಿಗೆ ಅಥರ್ವವೇದ ; ಅವನು ಎಲ್ಲರ ಮೇಲ್ವಿಚಾರಕ.[೭]

ಶಾಖೆಗಳುಸಂಪಾದಿಸಿ

ವೇದಗಳಲ್ಲಿ ಹಿಂದೆ ಅನಂತ ಶಾಖೆಗಳಿದ್ದು ಈಗ ೧೦-೧೨ ಶಾಖೆಗಳಿವೆ. ಪ್ರತಿಯೊಂದು ವೇದಕ್ಕೂ ನಾಲ್ಕು ಸ್ಕಂದಗಳಿವೆ (ಭಾಗ). ಸಂಹಿತೆ , ಬ್ರಾಹ್ಮಣ , ಆರಣ್ಯಕ , ಉಪನಿಷತ್ತು . ಸಂಹಿತೆಗಳು ಮಂತ್ರ ಭಾಗ , ಬ್ರಾಹ್ಮಣಗಳು ಯಜ್ಞ ಕ್ರಮ ಹೇಳುವವು , ಆರಣ್ಯಕಗಳಲ್ಲಿ ಯಾಗ ವಿಧಾನ , ಅಧ್ಯಾತ್ಮಿಕ ವಿಚಾರ , ಉಪನಿಷತ್ (ಬ್ರಹ್ಮ -ಮೂಲ ಚೈತನ್ಯ ವಿಚಾರ) ಚರ್ಚೆಗೆ ಮುಖ್ಯವಾದುದು. ,ಮಂತ್ರಗಳು ಪ್ರಾಚೀನವಾದವು ; ಉಪನಿಷತ್ ಅತ್ಯಂತ ಅನಂತರದ್ದು . ವೇದದ ಮೊದಲ ಮೂರುಭಾಗಗಳಿಗೆ ಕರ್ಮಕಾಂಡವೆಂತಲೂ , ಉಪನಿಷತ್ತಿಗೆ ಜ್ಞಾನ ಕಾಂಡವೆಂತಲೂ ಹೆಸರಿದೆ. ವೇದಗಳನ್ನು ಅಪೌರುಷೇಯವೆಂದು ಹೇಳುತ್ತಾರೆ . ಎಂದರೆ ಮನುಷ್ಯರಿಂದ ರಚಿಲ್ಪಟ್ಟುದಲ್ಲ -ದೇವರಿಂದಲೇ ಬಂದಿದ್ದು -ಋಷಿಗಳ ಮನಸ್ಸಿಗೆ ತಾನಾಗಿ ಗೋಚರಿಸಿದ್ದು. ಅವು ಬಾಯಿಯಿಂದ ಬಾಯಿಗೆ ಬಂದದ್ದರಿಂದ ಶ್ರುತಿ (ಕೇಳಿದ್ದು) ಎಂಬ ಹೆಸರಿದೆ .
ವೈದಿಕ ದೇವತೆಗಳಲ್ಲಿ ಪ್ರಮುಖರು : ಇಂದ್ರ , ಅಗ್ನಿ , ವರುಣ , ವಾಯು , ಯಮ , ವಿಷ್ಣು , ಮಿತ್ರ , ರುದ್ರ , ಬ್ರಹಸ್ಪತಿ , ಸರಸ್ವತಿ , ಪೃಥ್ವೀ , ರಾತ್ರೀ , ವಾಕ್ , ಇಳಾ, ಸಂಧ್ಯಾ ಇತ್ಯಾದಿ ದೇವತೆಗಳಿದ್ದಾರೆ. ಆದಿತ್ಯರು ೧೨ , ರುದ್ರರು ೧೧ , ಮಾರುತಗಳು ಏಳು , ಹೀಗೆ ದೇವತೆಗಳ ಗುಂಪುಗಳು ಇವೆ. ವಿಶ್ವೇದೇವತೆಗಳೆಂದರೆ ಎಲ್ಲಾದೇವತೆಗಳು ಸೇರಿದ ಗುಂಪು.

ದೇವತೆಗಳಲ್ಲಿ ವಿಭಾಗಗಳುಸಂಪಾದಿಸಿ

ದೇವತೆಗಳಲ್ಲಿ ಮೂರು ಭಾಗಗಳು :

 1. ಪೃಥ್ವಿಸ್ಥಾನದವರು -ಅಗ್ನಿ, ಪೃಥ್ವೀ, ಸೋಮ, ನದಿ, ಬೃಹಸ್ಪತಿ, ಇತ್ಯಾದಿ.[೮]
 2. ಅಂತರಿಕ್ಷ ಸ್ಥಾನದವರು :ವಾಯು, ಇಂದ್ರ, ರುದ್ರ, ಮಾರುತ, ಆಪ, ಇತ್ಯಾದಿ.
 3. ದ್ಯುಸ್ಥಾನದವರು :ವರುಣ, ಮಿತ್ರ, ಸೂರ್ಯ, ಸವಿತಾ, ರಾತ್ರಿ, ಅದಿತಿ, ವಿಷ್ಣು, - ಇತ್ಯಾದಿ ;
ಒಟ್ಟು - ಮೂವತ್ಮೂರು (೧೧×೩=೩೩) ದೇವತೆಗಳು .ಇವರೇ ಮೂವತ್ಮೂರು ಕೋಟಿ ಎನಿಸಲ್ಪಟ್ಟಿದ್ದಾರೆ .
ಅನೇಕ ದೇವತೆಗಳಿದ್ದರೂ ಕೆಲವೆಡೆ ದೇವರೊಬ್ಬನೇ ಎಂಬ ವಿಚಾರವೂ ಇದೆ. ಏಕಂ ಸತ್ ವಿಪ್ರಾಃ ಬಹುದಾ ವದಂತಿ ;
ಋಗ್ವೇದದಲ್ಲಿ - ಸತ್ತವರು ಪಿತೃಲೋಕಕ್ಕೆ ಹೋಗಿ ಅಲ್ಲಿರುವ -ಅಲ್ಲಿ ವಾಸಿಸುವ ಕಲ್ಪನೆ ಇದ್ದಂತೆ ಕಾಣುತ್ತದೆ . ಪುನರ್ಜನ್ಮ ನಂತರದ ಕಲ್ಪನೆ ಎಂಬ ಅಭಿಪ್ರಾಯವಿದೆ. ಹಾಗಾಗಿ ದೇವತೆಗಳಲ್ಲದೆ ಪಿತೃಗಳದ್ದೂ ಒಂದು ಗುಂಪು ಇದೆ.
ಮೊಟ್ಟಮೊದಲಿಗೆ ಪುರುಷಸೂಕ್ತವು ಪ್ರಪಂಚದ ವಿಕಾಸಕ್ಕೆ ಪುರುಷನೇ (ಬ್ರಹ್ಮ-ಮೂಲ ಚೈತನ್ಯ) ಕಾರಣವೆನ್ನುತ್ತದೆ .
ವೇದಗಳು ಅತ್ಯಂತ ಪ್ರಾಚೀನವಾಗಿದ್ದು (೫೦೦೦ವರ್ಷಕ್ಕಿಂತ ಹಿಂದಿನದು ), ಅದರ ಶುದ್ಧರೂಪವನ್ನು ಸ್ವಲ್ಪವೂ ಕೆಡದಂತೆ ಉಳಿಸಿಕೊಂಡು ಬಂದಿದ್ದು ಮಾನವನ ಇತಿಹಾಸಕ್ಕೆ ಒಂದು ಅಪೂರ್ವ ದಾಖಲೆಯಗಿದೆ . ಅದನ್ನು ಯಥಾ ರೂಪದಲ್ಲಿ ಕಾಪಾಡಿ ಕೊಂಡುಬರಲು ಜಟೆ, ಘನ, ಕ್ರಮ ಹೀಗೆ ಹೇಳುವ ಒಂದು ವಿಶಿಷ್ಟ ಪದ್ದತಿ ಕಾರಣವಾಗಿದೆ.

ಉಲ್ಲೇಖಗಳುಸಂಪಾದಿಸಿ

 1. see e.g. Radhakrishnan & Moore 1957, p. 3; Witzel, Michael, "Vedas and Upaniṣads", in: Flood 2003, p. 68; MacDonell 2004, pp. 29–39; Sanskrit literature (2003) in Philip's Encyclopedia. Accessed 2007-08-09
 2. Sanujit Ghose (2011). "Religious Developments in Ancient India" in Ancient History Encyclopedia.
 3. Vaman Shivaram Apte, The Practical Sanskrit-English Dictionary, see apauruSeya
 4. D Sharma, Classical Indian Philosophy: A Reader, Columbia University Press, ISBN , pages 196-197
 5. Jan Westerhoff (2009), Nagarjuna's Madhyamaka: A Philosophical Introduction, Oxford University Press, ISBN 978-0195384963, page 290
 6. Warren Lee Todd (2013), The Ethics of Śaṅkara and Śāntideva: A Selfless Response to an Illusory World, ISBN 978-1409466819, page 128
 7. https://www.sampada.net/article/22844
 8. http://www.nammakannadanaadu.com/purana/vedagalu.php

ನೋಡಿಸಂಪಾದಿಸಿ

ಹೊರಗಿನ ಕೊಂಡಿಗಳು (ಸಂಪರ್ಕ)ಸಂಪಾದಿಸಿ

"https://kn.wikipedia.org/w/index.php?title=ವೇದ&oldid=1002598" ಇಂದ ಪಡೆಯಲ್ಪಟ್ಟಿದೆ