ಯೋಗ

ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ

ಯೋಗ (ಸಂಸ್ಕೃತ, ಪಾಳಿ ಭಾಷೆ ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಪಾಲಿಗ್ರಂಥಗಳಲ್ಲಿನ ಪದ ಬಳಕೆಗಾಗಿ, ನೋಡಿ ಥಾಮಸ್‌‌ ವಿಲಿಯಂ ರಿಸ್‌ ಡೇವಿಡ್ಸ್‌, ವಿಲಿಯಂ ಸ್ಟೆಡೆ, ಪಾಲಿ-ಆಂಗ್ಲ ನಿಘಂಟು.[೧] ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ.ಡೆನಿಸ್‌ ಲಾರ್ಡನರ್‌ ಕಾರ್ಮಡಿ , ಜಾನ್‌ ಕಾರ್ಮಡಿ, ಸೆರೆನೆ ಕಂಪ್ಯಾಷನ್. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮುದ್ರಣಾಲಯ ಯು.ಎಸ್, ೧೯೯೬,.ಸ್ಟುವರ್ಟ್‌ ರೇ ಸರ್ಬ್ಯಾಕರ್‌, ಸಮಾಧಿ: ದ ನ್ಯೂಮಿನಸ್‌ ಅಂಡ್‌ ಸೆಸ್ಸೇಟಿವ್‌ ಇನ್‌ ಇಂಡೋ-ಟಿಬೆಟನ್‌ ಯೋಗ. SUNY ಪ್ರೆಸ್, ೨೦೦೫,ತತ್ವಾರ್ಥಸೂತ್ರ [6.1], ನೋಡಿ ಮನು ದೋಷಿ (2007)ಟ್ರಾನ್ಸ್ಲೇಷನ್‌ ಆಫ್‌ ತತ್ವಾರ್ಥಸೂತ್ರ, ಅಹಮದಾಬಾದ್‌: ಶ್ರುತ್‌ ರತ್ನಾಕರ್‌ p. 102</ref> ಹಿಂದೂ ಧರ್ಮದಲ್ಲಿ, ಹಿಂದೂ ತತ್ವಶಾಸ್ತ್ರದ ಆರು ಸಂಪ್ರದಾಯಬದ್ಧ(ಆಸ್ತಿಕ) ಶಾಖೆ/ಪಂಥಗಳಲ್ಲಿ ಒಂದಕ್ಕೆ ಈ ಪದವನ್ನು ಬಳಸುತ್ತಾರಲ್ಲದೆ, ಆ ಪಂಥವು ತನ್ನ ಆಚರಣೆಗಳಿಂದ ತಲುಪಲು ಬಯಸುವ ಗುರಿಗೂ ಇದೇ ಪದವನ್ನು ಬಳಸುತ್ತಾರೆ.[೨][೩] ಜೈನ ಧರ್ಮದಲ್ಲಿ —ಮಾನಸಿಕ,ಮೌಖಿಕ ಮತ್ತು ದೈಹಿಕ ಎಲ್ಲಾ ಚಟುವಟಿಕೆಗಳಿಗೆ ಇಡಿಯಾಗಿ ಈ ಪದವನ್ನು ಬಳಸುತ್ತಾರೆ.

ಪದ್ಮಾಸನದ ಭಂಗಿಯಲ್ಲಿ ಯೋಗರೀತಿಯ ಧ್ಯಾನ ಮಾಡುತ್ತಿರುವ ಶಿವನ ಪ್ರತಿಮೆ (ಬೆಂಗಳೂರು, ಭಾರತ).

ಹಿಂದೂ ತತ್ವಶಾಸ್ತ್ರದಲ್ಲಿ ಪ್ರಸ್ತಾಪವಾಗುವ ಯೋಗದ ಪ್ರಮುಖ ಶಾಖೆಗಳೆಂದರೆ ರಾಜ ಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ, ಮತ್ತು ಹಠ ಯೋಗ.[೪][೫][೬] ಪತಂಜಲಿಯ ಯೋಗಸೂತ್ರ ಗಳಲ್ಲಿ ಪ್ರಸ್ತಾಪವಾಗಿರುವ ಹಾಗೂ ಹಿಂದೂ ತತ್ವಶಾಸ್ತ್ರದ ಸಂದರ್ಭದಲ್ಲಿ ಸರಳವಾಗಿ ಯೋಗ ಎಂದೆನಿಸಿಕೊಳ್ಳುವ ರಾಜ ಯೋಗವು ಸಾಂಖ್ಯ ಸಂಪ್ರದಾಯಕ್ಕೆ ಸೇರಿದ್ದು.[೭] ಅನೇಕ ಇತರ ಹಿಂದೂ ಗ್ರಂಥಗಳು ಉಪನಿಷತ್ತುಗಳು, ಭಗವದ್ಗೀತೆ, ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಮತ್ತು ಅನೇಕ ತಂತ್ರಗಳು ಸೇರಿದಂತೆ ಯೋಗದ ವಿವಿಧ ಮುಖ/ಮಗ್ಗಲುಗಳನ್ನು ಚರ್ಚಿಸುತ್ತವೆ.

ಸಂಸ್ಕೃತ ಪದ ಯೋಗ ವು ಅನೇಕ ಅರ್ಥಗಳನ್ನು ಹೊಂದಿದೆ,[೮] ಮತ್ತು ಆ ಪದವು "ನಿಯಂತ್ರಿಸುವ,", "ಐಕ್ಯವಾಗು" ಅಥವಾ "ಒಗ್ಗಟ್ಟಾಗು" ಎಂಬರ್ಥಗಳ ಸಂಸ್ಕೃತ ಮೂಲ "ಯುಜ್‌,"ನಿಂದ ವ್ಯತ್ಪನ್ನವಾಗಿದೆ.[೯] ಇದರ ರೂಪಾಂತರಗಳೆಂದರೆ "ಸೇರಿಸುವಿಕೆ," "ಜೊತೆಗೂಡುವಿಕೆ" "ಒಕ್ಕೂಟ" "ಸಂಯೋಗ," ಮತ್ತು "ನಿಮಿತ್ತ/ಉಪಕರಣ."[೧೦][೧೧][೧೨] ಭಾರತದ ಹೊರಗೆ, ಯೋಗ ಪದವನ್ನು ಸಾಮಾನ್ಯವಾಗಿ ಹಠ ಯೋಗ ಮತ್ತು ಅದರ ಆಸನಗಳನ್ನು ಸೂಚಿಸಲು (ಭಂಗಿಗಳು) ಅಥವಾ ವ್ಯಾಯಾಮದ ಒಂದು ರೂಪವಾಗಿ ಪರಿಗಣಿಸಲಾಗುತ್ತದೆ. ಯೋಗವನ್ನು ಅಭ್ಯಾಸ ಮಾಡುವವರು ಅಥವಾ ಯೋಗ ಸಿದ್ಧಾಂತವನ್ನು ಅನುಸರಿಸುವವರನ್ನು ಯೋಗಿ ಅಥವಾ ಯೋಗಿನಿ ಎಂದು ಕರೆಯುತ್ತಾರೆ.[೧೩]

ಯೋಗದ ಇತಿಹಾಸ ಬದಲಾಯಿಸಿ

ರಾಜಯೋಗ

ವೇದ ಸಂಹಿತೆಗಳು ತಪಸ್ವಿಗಳ ಬಗ್ಗೆ ಪ್ರಸ್ತಾಪಿಸುತ್ತವೆ, ಆದರೆ ತಪಶ್ಚರ್ಯೆಗಳ(ತಪಸ್ಸು ಮಾಡುವಿಕೆ ) ಬಗ್ಗೆ [[Brāhmaṇas]] (900ರಿಂದ 500 BCE)ಗಳಲ್ಲಿ ವೇದಗಳ ಮೇಲೆ ಬರೆದ ವ್ಯಾಖ್ಯೆಗಳಲ್ಲಿ ಉಲ್ಲೇಖಗಳಿವೆ.[೧೪] ಸಿಂಧೂ ಕಣಿವೆ ನಾಗರೀಕತೆಯ (c. 3300–1700 B.C.E.) ಪಾಕಿಸ್ತಾನದಲ್ಲಿನ ಸ್ಥಳಗಳಲ್ಲಿ ಪತ್ತೆಯಾದ ಮೊಹರುಗಳಲ್ಲಿ ಸಾಮಾನ್ಯವಾಗಿ ಯೋಗ ಅಥವಾ ಧ್ಯಾನದ ಭಂಗಿಯನ್ನು ಹೋಲುವ ಚಿತ್ರಗಳಿದ್ದವು, "ಶಾಸ್ತ್ರೀಯ ಚರ್ಯೆಗಳ ಒಂದು ವಿಧ" ಯೋಗದ ಪ್ರಾಚೀನ ರೂಪವನ್ನು ತೋರಿಸುವಂತಹದು" ಎಂಬುದು ಪುರಾತತ್ವಶಾಸ್ತ್ರಜ್ಞ ಗ್ರೆಗೋರಿ ಪಾಸ್ಸೆಲ್‌ರ ಅಭಿಪ್ರಾಯವಾಗಿತ್ತು.[೧೫] ಸಿಂಧೂ ಕಣಿವೆಯ ಮೊಹರುಗಳಿಗೂ ಹಾಗೂ ನಂತರದ ಸಿಂಧೂ ಯೋಗ ಮತ್ತು ಧ್ಯಾನಗಳ ಆಚರಣೆಗಳಿಗೂ ಯಾವುದೋ ವಿಧದ ಸಂಬಂಧವಿದೆ ಎಂಬುದನ್ನು ಅನೇಕ ತಜ್ಞರು ಊಹಿಸಿರುತ್ತಾರಾದರೂ, ಇದಕ್ಕೆ ಯಾವುದೇ ರೀತಿಯ ನಿರ್ಣಾಯಕ ಪುರಾವೆಗಳು ದೊರೆತಿಲ್ಲ.

 • ಜೋನಾಥನ್‌ ಮಾರ್ಕ್‌ ಕೆನಾಯರ್ ಒಂದು ಚಿತ್ರವನ್ನು "ಯೋಗದ ಭಂಗಿಯಲ್ಲಿ ಕುಳಿತಿದೆ" ಎಂದು ವರ್ಣಿಸುತ್ತಾರೆ.[೧೬]
 • ಕಾರೆಲ್‌ ವರ್ನರ್‌ರು "ಪುರಾತತ್ವಶಾಸ್ತ್ರೀಯ ಶೋಧನೆಗಳು ಆರ್ಯರ ಕಾಲಕ್ಕಿಂತ ಮುಂಚಿನ ಭಾರತದ ಜನರಿಗೆ ವ್ಯಾಪಕ ಯೋಗ ಚಟುವಟಿಕೆಗಳ ಅರಿವಿತ್ತು ಎಂದು ಊಹಿಸಲು ನಮಗೆ ಸಮರ್ಥನೆ ನೀಡುತ್ತವೆ." ಎಂದು ಬರೆಯುತ್ತಾರೆ.[೧೭]
 • ಹೇನ್‌ರಿಚ್‌ ಝಿಮ್ಮರ್‌ರು ಒಂದು ಮೊಹರನ್ನು "ಯೋಗಿಯ ಹಾಗೆ ಕುಳಿತಿದೆ" ಎಂದು ವರ್ಣಿಸಿದ್ದಾರೆ.[೧೮]
 • ಥಾಮಸ್‌‌ ಮೆಕ್‌ಎವಿಲೆ "ಆರು ರಹಸ್ಯಾತ್ಮಕ ಸಿಂಧೂ ಕಣಿವೆ ಮೊಹರಿನ ಚಿತ್ರಗಳು... ಎಲ್ಲವೂ ಯಾವುದೇ ಸಂದೇಹವಿಲ್ಲದಂತೆ ಹಠಯೋಗದಲ್ಲಿ ಮೂಲಭಂಧಾಸನ ಎಂದು ಕರೆಯಲ್ಪಡುವ ಅಥವಾ ಬಹುಶಃ ಉತ್ಕಟಾಸನ ಅಥವಾ ಬದ್ಧ ಕೋಣಾಸನ ಗಳಿಗೆ ಹತ್ತಿರದ ಭಂಗಿಯಲ್ಲಿರುವ ಆಕೃತಿಗಳನ್ನು ತೋರಿಸುತ್ತವೆ ...." ಎಂದು ಬರೆಯುತ್ತಾರೆ.[೧೯]
 • ಪಂಜಾಬ್‌ ವಿಶ್ವವಿದ್ಯಾಲಯದ ಪುರಾತತ್ವಶಾಸ್ತ್ರ ವಿಭಾಗದ ಅಧ್ಯಕ್ಷರಾದ Dr. ಫರ್ಜಾಂಡ್‌ ಮಾಸಿಹ್‌ರು, ಇತ್ತೀಚೆಗೆ ಪತ್ತೆಯಾದ ಮೊಹರಿನಲ್ಲಿ "ಯೋಗಿ"ಯೊಬ್ಬನ ಚಿತ್ರವಿದೆ ಎಂದು ವರ್ಣಿಸುತ್ತಾರೆ. ಅಪರೂಪದ ವಸ್ತುಗಳ ಪತ್ತೆ ವಿನಾಶ ಹೊಂದಿದ ನಿಧಿಯನ್ನು ಸೂಚಿಸುತ್ತಿದೆ
 • ಗ್ಯಾವಿನ್‌ ಫ್ಲಡ್‌ರು ಆ ಮೊಹರುಗಳಲ್ಲಿ ಒಂದಾದ "ಪಶುಪತಿ ಮೊಹರು" ಎಂದು ಕರೆಯಲ್ಪಡುವ ಮೊಹರಿನ ಬಗ್ಗೆ ಈ ಆಲೋಚನೆಯನ್ನು ಅಲ್ಲಗಳೆಯುತ್ತಾ ಚಿತ್ರವು ಯೋಗದ ಭಂಗಿಯಲ್ಲಿದೆಯೇ ಅಥವಾ ಆ ಆಕೃತಿಯು ಮಾನವನ ಆಕೃತಿಯನ್ನೇ ಪ್ರತಿನಿಧಿಸುತ್ತಿದೆ ಎಂಬುದೇ ಸ್ಪಷ್ಟವಾಗಿಲ್ಲ ಎನ್ನುತ್ತಾರೆ.[೨೦]
 • ಜೆಫ್ರಿ ಸ್ಯಾಮ್ಯುಯೆಲ್‌, ಪಶುಪತಿ ಮೊಹರಿಗೆ ಸಂಬಂಧಪಟ್ಟಂತೆ, "ನಮಗೆ ಚಿತ್ರವನ್ನು ಹೇಗೆ ಅರ್ಥೈಸಿಕೊಳ್ಳಬೇಕೋ ತಿಳಿಯು ತ್ತಾ ಇಲ್ಲ ಅಲ್ಲದೇ ಆತ ಅಥವಾ ಆಕೆ ಏನನ್ನು ಪ್ರತಿನಿಧಿಸುತ್ತಿರುವುದು ಎಂಬುದೂ ತಿಳಿದಿಲ್ಲ " ಎಂದು ಅಭಿಪ್ರಾಯ ಪಡುತ್ತಾರೆ"}[೨೧]

ಧ್ಯಾನದ ಮೂಲಕ ಪ್ರಜ್ಞೆಯ ಉನ್ನತ ಹಂತಗಳನ್ನು ಅನುಭವಿಸುವುದರ ತಂತ್ರಗಳನ್ನು ಶ್ರಮಣಿಕ/ಶ್ರಮಾಣಿಕ್‌/ಶ್ರೌತ/ಶೃತಿ ಮತ್ತು ಉಪನಿಷತ್ತುಗಳ ಸಂಪ್ರದಾಯಗಳಲ್ಲಿ ಅಭಿವೃದ್ಧಿಪಡಿಸಲಾಗಿತ್ತು.[೨೨]

ಬೌದ್ಧಧರ್ಮಕ್ಕೆ ಮುಂಚಿನ ಬ್ರಾಹ್ಮಣ ಗ್ರಂಥಗಳಲ್ಲಿ ಧ್ಯಾನದ ಬಗ್ಗೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲವಾದರೂ, ಉಪನಿಷತ್ತುಗಳಲ್ಲಿನ ಬ್ರಹ್ಮಾಂಡದ ಬಗೆಗಿನ ಹೇಳಿಕೆಗಳು ಮತ್ತು ಪ್ರಾಚೀನ ಬೌದ್ಧಧರ್ಮೀಯ ಗ್ರಂಥಗಳಲ್ಲಿ ದಾಖಲಾಗಿರುವ ಪ್ರಕಾರ ಬುದ್ಧನ ಇಬ್ಬರು ಗುರುಗಳ ಧ್ಯಾನದಿಂದ ಸಾಧಿಸುವ ಗುರಿಗಳ ಬಗೆಗಿನ ಉಲ್ಲೇಖಗಳ ಸಮಾಂತರ ಪ್ರಸ್ತಾಪವನ್ನು ಆಧಾರವಾಗಿಟ್ಟುಕೊಂಡು ಬ್ರಾಹ್ಮಣ ಸಂಪ್ರದಾಯದಿಂದಲೇ ನಿರ್ದಿಷ್ಟ ಸ್ವರೂಪವಿರದ ಧ್ಯಾನದ ಸಂಸ್ಕೃತಿಯು ಉದಯವಾಯಿತು ಎಂದು ವಾದಿಸುತ್ತಾರೆ.[೨೩] ಅವರು ಇದರ ಸಾಧ್ಯತೆಗಳೂ ಕಡಿಮೆ ಎಂದೂ ತಿಳಿಸುತ್ತಾರೆ.[೨೪] ಉಪನಿಷತ್ತುಗಳಲ್ಲಿನ ಬ್ರಹ್ಮಾಂಡದ ಬಗೆಗಿನ ಹೇಳಿಕೆಗಳು ವಿಚಾರಶೀಲ ಸಂಪ್ರದಾಯವನ್ನು ಬಿಂಬಿಸುತ್ತವೆ ಎಂಬುದನ್ನು ತರ್ಕಿಸುವ ಅವರು, ವಿಚಾರಶೀಲ ಸಂಪ್ರದಾಯವಿತ್ತು ಎಂಬುದಕ್ಕೆ ಪ್ರಾಚೀನ ಋಗ್ವೇದ ಕಾಲದಲ್ಲೇ ನಾಸದೀಯ ಸೂಕ್ತವು ಇದಕ್ಕೆ ಪುರಾವೆಯನ್ನು ಹೊಂದಿದೆ ಎಂದು ವಾದಿಸುತ್ತಾರೆ.[೨೫]

ಬೌದ್ಧ ಧರ್ಮದ ಗ್ರಂಥಗಳೇ ಬಹುಶಃ ಧ್ಯಾನದ ತಂತ್ರ/ಪ್ರಕ್ರಿಯೆಗಳನ್ನು ವಿವರಿಸುವ ಪ್ರಾಚೀನ ಗ್ರಂಥಗಳಿರಬೇಕು.[೨೬] ಅವುಗಳಲ್ಲಿ ಬುದ್ಧನಿಗಿಂತ ಮುಂಚೆಯೇ ಚಾಲ್ತಿಯಲ್ಲಿದ್ದ ಧ್ಯಾನದ ಆಚರಣೆಗಳು ಮತ್ತು ಅದರ ಸ್ಥಿತಿ/ಭಂಗಿಗಳನ್ನು ಹಾಗೆಯೇ ಮೊದಲಿಗೆ ಬೌದ್ಧ ಧರ್ಮದಲ್ಲಿಯೇ ಉದಯವಾದ ಆಚರಣೆಗಳ ಬಗ್ಗೆ ಸಹಾ ವಿವರಣೆಗಳಿವೆ.[೨೭] ಹಿಂದೂ ಗ್ರಂಥಗಳಲ್ಲಿ "ಯೋಗ" ಎಂಬ ಪದವು ಮೊದಲಿಗೆ ಕಠೋಪನಿಷತ್‌ನಲ್ಲಿ ಮೊದಲಿಗೆ ಕಂಡುಬರುತ್ತದೆ, ಅದರಲ್ಲಿ ಇಂದ್ರಿಯಗಳ ನಿಯಂತ್ರಣ ಮತ್ತು ಮಾನಸಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಉತ್ತುಂಗ ಸ್ಥಿತಿಗೆ ತಲುಪುವುದನ್ನು ಉಲ್ಲೇಖಿಸಲಾಗಿದೆ.[೨೮] ತಜ್ಞರು ಕಠೋಪನಿತ್‌ ಅನ್ನು ಬೌದ್ಧಧರ್ಮ ಕಾಲಕ್ಕಿಂತ ಮುಂಚಿನದು ಎಂದು ಅನುಮಾನವಿಲ್ಲದೇ ಮಾಡುವ ಪಟ್ಟಿಯಲ್ಲಿ ಸೇರಿಸುವುದಿಲ್ಲ, ಉದಾಹರಣೆಗೆ ನೋಡಿ ಹೆಲ್‌ಮತ್‌ ವಾನ್‌ ಗ್ಲೇಸ್‌ನಾಪ್‌, 1950ರ ಕಾರ್ಯಾಚರಣೆಯ/ವ್ಯಾಜ್ಯದಲ್ಲಿನ "ಅಕಾಡೆಮೀ ಡೆರ್‌ ವಿಸ್ಸೆನ್‌ಛಾಫ್ಟೆನ್‌ ಉಂಡ್‌ ಲಿಟರೇಚರ್‌,"ನಿಂದ [೨೯] ಕೆಲವರು ಇದನ್ನು ಬೌದ್ಧಧರ್ಮದ ನಂತರದ್ದು ಎಂದು ವಾದಿಸುತ್ತಾರೆ, ಉದಾಹರಣೆಗೆ ನೋಡಿ [೩೦] ಪ್ರಾಚೀನ ಬೌದ್ಧ ಧರ್ಮೀಯ ಗ್ರಂಥಗಳಲ್ಲಿನ ಪಾಲಿ ಪದ "ಯೋಗ"ದ ಬಳಕೆಯ ವಿಸ್ತೃತ ಪರಿಶೀಲನೆಗಾಗಿ, ನೋಡಿ [೩೧][೩೨] "ಧಾರ್ಮಿಕ ಆಚರಣೆ" ಎಂರ್ಥದಲ್ಲಿ ಯೋಗ ಪದದ ಧಮ್ಮಪಾದದಲ್ಲಿನ ಬಳಕೆಗೆ, ನೋಡಿ:[೩೩] ಯೋಗದ ಕಲ್ಪನೆಯ ವಿಕಾಸದ ಬಗೆಗಿನ ಪ್ರಮುಖ ಗ್ರಂಥಮೂಲಗಳೆಂದರೆ ಮಧ್ಯಕಾಲೀನ ಉಪನಿಷತ್ತುಗಳು, (ca. 400 BCE), ಭಗವದ್ಗೀತೆಯೂ ಸೇರಿದಂತೆ ಮಹಾಭಾರತ (ca. 200 BCE), ಮತ್ತು ಪತಂಜಲಿಯ ಯೋಗಸೂತ್ರಗಳು (150 BCE).

ಪತಂಜಲಿಯ ಯೋಗಸೂತ್ರಗಳು ಬದಲಾಯಿಸಿ

ಭಾರತೀಯ ತತ್ವಜ್ಞಾನದ ಪ್ರಕಾರ, ಯೋಗ ಎಂಬುದು ಆರು ಸಾಂಪ್ರದಾಯಿಕ ಶಾಖೆಗಳಲ್ಲೊಂದು. ಸಾಂಖ್ಯ ದರ್ಶನ, ಯೋಗ ದರ್ಶನ, ನ್ಯಾಯ ದರ್ಶನ, ವೈಶೇಷಿಕ ದರ್ಶನ, ಮೀಮಾಂಸ ದರ್ಶನ, ವೇದಾಂತ ದರ್ಶನ , ಇವು ರೂಢಿಯಲ್ಲಿ ಬಂದ ಭಾರ್ತೀಯ ಷಡ್ ದರ್ಶನಗಳು (ಆರು ತತ್ವ ಸಿದ್ಧಾಂತಗಳು) ಪಂಥಗಳ ಗುಂಪಾಗಿಸುವಿಕೆಯ ವಿವರಗಳೊಡನೆ ಆರು ಸಾಂಪ್ರದಾಯಿಕ ಪಂಥಗಳ ಅವಲೋಕನಕ್ಕಾಗಿ, ನೋಡಿ: ರಾಧಾಕೃಷ್ಣನ್‌ ಮತ್ತು ಮೂರ್‌/ರೆ, "ಕಂಟೆಟ್ಸ್‌/ಪರಿವಿಡಿ," ಮತ್ತು ತತ್ವಶಾಸ್ತ್ರದಲ್ಲಿನ ಯೋಗ ಪಂಥದ ಸಂಕ್ಷಿಪ್ತ ಅವಲೋಕನಕ್ಕಾಗಿ ನೋಡಿ:[೩೪][೩೫] ಯೋಗದ ತಾತ್ವಿಕ ವ್ಯವಸ್ಥೆಯು ಸಾಂಖ್ಯ ಪಂಥದೊಂದಿಗೆ ಸಮೀಪದ ಸಂಪರ್ಕ ಹೊಂದಿದೆ.ಯೋಗ ಸಿದ್ಧಾಂತ ಮತ್ತು ಸಾಂಖ್ಯಗಳ ನಡುವಿನ ಸಮೀಪ ಸಂಪರ್ಕದ ಕುರಿತು, ನೋಡಿ:[೩೬] ಪತಂಜಲಿ ಋಷಿಗಳು ವ್ಯಾಖ್ಯಾನಿಸಿದ ಯೋಗ ಪಂಥವು ಸಾಂಖ್ಯ ಮನಶ್ಶಾಸ್ತ್ರ ಮತ್ತು ಆಧ್ಯಾತ್ಮವನ್ನು ಸ್ವೀಕರಿಸುತ್ತದೆ, ಆದರೆ ಇದು ಸಾಂಖ್ಯ ಶಾಖೆಗಿಂತಲೂ ಹೆಚ್ಚು ಆಸ್ತಿಕ ವ್ಯವಸ್ಥೆಯಾಗಿದ್ದು, ಸಾಂಖ್ಯದ ಸತ್ಯದ ಇಪ್ಪತ್ತೈದು ಅಂಶಗಳಲ್ಲಿ ದೈವಿಕ ಅಂಶವನ್ನು ಸೇರಿಸಿರುವುದು ಇದಕ್ಕೆ ಪೂರಕವಾಗಿದೆ. ಸಾಂಖ್ಯ ಕಲ್ಪನೆಗಳನ್ನು ದೇವರ ವಿಭಾಗವೊಂದನ್ನು ಸೇರಿಸಿಕೊಂಡು ಯೋಗವು ಸ್ವೀಕರಿಸಿದೆ ಎಂಬುದರ ಕುರಿತು, ನೋಡಿ:[೩೭]. ಸಾಂಖ್ಯದ 25 ತತ್ವಗಳನ್ನು ದೇವರ ಅಸ್ತಿತ್ವದ ಪ್ರಸ್ತಾಪದೊಡನೆ ಯೋಗವು ಸ್ವೀಕರಿಸಿದೆ ಎಂಬುದರ ಕುರಿತು, ನೋಡಿ:[೩೬] ಯೋಗ ಮತ್ತು ಸಾಂಖ್ಯಗಳ ನಡುವಿನ ಹೋಲಿಕೆಯು ಎಷ್ಟು ಸಾಮ್ಯತೆ ಹೊಂದಿವೆಯೆಂದರೆ ಮ್ಯಾಕ್ಸ್‌ ಮುಲ್ಲರ್‌‌ "ಪರಸ್ಪರ ಸಾಮ್ಯತೆ ಹೊಂದಿರುವ ಎರಡೂ ತತ್ವಗಳನ್ನು ರೂಢಿಗತವಾಗಿ ದೇವರ ಅಸ್ತಿತ್ವದಲ್ಲಿ ನಂಬಿಕೆಯಿರುವ ಸಾಂಖ್ಯ ಮತ್ತು ಇಲ್ಲದ ಸಾಂಖ್ಯ ಎಂದು ಗುರುತಿಸಲಾಗುತ್ತದೆ...."[೩೮] ಎನ್ನುತ್ತಾರೆ. ಸಾಂಖ್ಯ ಮತ್ತು ಯೋಗಗಳ ನಡುವಿನ ಅನ್ಯೋನ್ಯತೆಯನ್ನು ಹೇನ್‌ರಿಚ್‌ ಝಿಮ್ಮರ್‌ ಹೀಗೆ ವಿವರಿಸುತ್ತಾರೆ:

ಭಾರತದಲ್ಲಿ ಇವೆರಡನ್ನು ಅವಳಿಗಳೆಂದು ಪರಿಗಣಿಸಲಾಗುತ್ತದೆ, ಒಂದೇ ಪಂಥದ ಎರಡು ಮಗ್ಗಲುಗಳು. Sāṅkhyaವು ಮಾನವ ಧರ್ಮದ ಮೂಲಭೂತ ಸೈದ್ಧಾಂತಿಕ ಪ್ರತಿಪಾದನೆಯನ್ನು ನೀಡುತ್ತದಲ್ಲದೇ ಅದರ ಘಟಕಗಳನ್ನು ನಿರೂಪಿಸಿ ಗಣಿಸುವುದಲ್ಲದೇ, ನಿರ್ಬಂಧದ(ಬಂಧ ) ಸ್ಥಿತಿಯಲ್ಲಿ ಪರಸ್ಪರ ಸಹಕಾರಗಳನ್ನು ವಿಶ್ಲೇಷಿಸಿ, ಅವುಗಳ ತೊಡಕಿನಿಂದ ಬಿಡುಗಡೆ ಪಡೆಯುವುದು ಅಥವಾ ಬಿಡುಗಡೆಯಲ್ಲಿ ಪ್ರತ್ಯೇಕಗೊಳ್ಳುವುದನ್ನು ವಿವರಿಸಿದರೆ, ([[mokṣa]] ), ಯೋಗವು ತೊಡಕಿನಿಂದ ಬಿಡುಗಡೆ ಪಡೆಯುವುದರ ಪ್ರಕ್ರಿಯೆಯ ಶಕ್ತಿಕ್ರಿಯಾವಾದವನ್ನು, ಆ ಬಿಡುಗಡೆಯನ್ನು ಪಡೆಯಲು ಕಾರ್ಯತಃ ಸಾಧಿಸಲು ಬೇಕಾದ ತಂತ್ರಗಳ ಅಥವಾ 'ಬೇರ್ಪಡಿಕೆ-ಏಕೀಕರಣ' (ಕೈವಲ್ಯ ) ತಂತ್ರಗಳ ಸ್ಥೂಲ ವಿವರಣೆ ನೀಡುತ್ತದೆ.[೩೯]

ಪತಂಜಲಿಯವರಿಗೆ ಔಪಚಾರಿಕ ಯೋಗ ತತ್ವಜ್ಞಾನದ ಸ್ಥಾಪಕರೆಂದು ವ್ಯಾಪಕವಾಗಿ ಮನ್ನಣೆ ನೀಡಲಾಗಿದೆ. ಯೋಗವೆಂಬ ಹೆಸರಿನ ತಾತ್ವಿಕ ವ್ಯವಸ್ಥೆಯ ಸ್ಥಾಪಕರಾಗಿ ಪತಂಜಲಿ ನೋಡಿ:[೪೦] ಮನಸ್ಸನ್ನು ನಿಯಂತ್ರಿಸುವ ವ್ಯವಸ್ಥೆಯಾದ ಪತಂಜಲಿಯವರ ಯೋಗವನ್ನು ರಾಜಯೋಗವೆಂದು ಕರೆಯಲಾಗುತ್ತದೆ. ಮನಸ್ಸಿನ ನಿಯಂತ್ರಣಕ್ಕೆ ಬಳಸುವ ವ್ಯವಸ್ಥೆಯಾಗಿ "ರಾಜಯೋಗ" ಮತ್ತು ಪತಂಜಲಿಯವರ ಯೋಗಸೂತ್ರಗಳು ರಾಜಯೋಗಕ್ಕೆ ಪ್ರಮುಖ ಮೂಲ ಎಂಬುದಕ್ಕೆ ನೋಡಿ:[೪೧] ಪತಂಜಲಿ "ಯೋಗ" ಎಂಬ ಪದವನ್ನು ತಮ್ಮ ಎರಡನೇ ಸೂತ್ರದಲ್ಲಿ ನಿರೂಪಿಸುತ್ತಾರೆ,[೪೨] ಅದು ಅವರ ಸಂಪೂರ್ಣ ಸಾಧನೆಯ ನಿರೂಪಣೆಯನ್ನು ಕೊಡುವ ಸೂತ್ರ ಕೂಡ ಹೌದು:

योग: चित्त-वृत्ति निरोध:
( yogaś citta-vṛtti-nirodhaḥ )

- ಯೋಗಸೂತ್ರಗಳು 1.2

ಈ ಸಂಕ್ಷಿಪ್ತ ನಿರೂಪಣೆಯು ಮೂರು ಸಂಸ್ಕೃತ ಪದಗಳ ಅರ್ಥದ ಮೇಲೆ ಅವಲಂಬಿತವಾಗಿದೆ. I. K. ತೈಮ್ನಿಯವರು ಇದನ್ನು "ಯೋಗವೆಂದರೆ ಮನಸ್ಸಿನ (citta ) ಚಂಚಲತೆಗಳ (vṛtti ) ಮೇಲಿನ ಪ್ರತಿರೋಧ/ನಿರ್ಬಂಧ ಹೇರುವಿಕೆ (nirodhaḥ )" ಎಂದು ಭಾಷಾಂತರಿಸುತ್ತಾರೆ. "ಯೋಗವು ಮನಸ್ಸಿನ ಚಂಚಲತೆಗಳ ಮೇಲಿನ ನಿರ್ಬಂಧ ಹೇರುವಿಕೆ"ನ ಪಠ್ಯ ಹಾಗೂ ಪದಶಃ ಭಾಷಾಂತರಕ್ಕಾಗಿ ನೋಡಿ:[೪೩] ಯೋಗದ ನಿರೂಪಣೆಯ ಪ್ರಾರಂಭದಲ್ಲೇ nirodhaḥ ಪದದ ಬಳಕೆ ಮಾಡಿರುವುದು ಬೌದ್ಧ ಧರ್ಮದ ತಾಂತ್ರಿಕ/ಪಾರಿಭಾಷಿಕ ಪದಗಳು ಹಾಗೂ ಕಲ್ಪನೆಗಳು ಯೋಗಸೂತ್ರದಲ್ಲಿ ವಹಿಸುತ್ತಿರುವ ಪ್ರಮುಖ ಪಾತ್ರಕ್ಕೆ ಉದಾಹರಣೆಯಾಗಿದೆ; ಈ ಪ್ರಾಮುಖ್ಯತೆಯು ಪತಂಜಲಿಯವರಿಗೆ ಬೌದ್ಧ ಧರ್ಮದ ಕಲ್ಪನೆಗಳ ಅರಿವಿತ್ತು ಹಾಗೂ ಅವರು ಅದನ್ನು ತಮ್ಮ ವ್ಯವಸ್ಥೆಯೊಳಗೆ ಅಳವಡಿಸಿದರು ಎಂಬುದನ್ನು ಸೂಚಿಸುತ್ತದೆ.[೪೪] ಸ್ವಾಮಿ ವಿವೇಕಾನಂದರು ಈ ಸೂತ್ರವನ್ನು "ಯೋಗವೆಂದರೆ ಮನಸ್ಸಿನ ಅಂತರಾಳವನ್ನು (ಚಿತ್ತ) ವಿವಿಧ ರೂಪಗಳನ್ನು(ವೃತ್ತಿಗಳು) ತಾಳದಂತೆ ನಿಗ್ರಹಿಸುವುದು" ಎಂದು ವ್ಯಾಖ್ಯಾನಿಸಿದರು.[೪೫]

 
ದೆಹಲಿಯ ಬಿರ್ಲಾ ಮಂದಿರದಲ್ಲಿರುವ ಹಿಂದೂ ಯೋಗಿಯ ಶಿಲ್ಪ/ಮೂರ್ತಿ

ಪತಂಜಲಿಯ ಗ್ರಂಥಗಳು "ಅಷ್ಟಾಂಗ ಯೋಗ" ("ಎಂಟು-ಅಂಗಗಳ ಯೋಗ ") ಎಂದು ಕರೆಯಲಾದ ವ್ಯವಸ್ಥೆಗೆ ಸಹಾ ತಳಹದಿಯಾದವು. ಈ ಎಂಟು-ಅಂಗಗಳ ಕಲ್ಪನೆಯು 2ನೇ ಗ್ರಂಥದ 29ನೇ ಸೂತ್ರದಿಂದ ವ್ಯುತ್ಪನ್ನವಾಗಿದೆಯಲ್ಲದೇ ಇಂದು ಬೋಧಿಸಲಾಗುತ್ತಿರುವ ಕಾರ್ಯತಃ ರಾಜಯೋಗದ ಪ್ರತಿ ರೂಪದ ಜೀವಾಳ ಲಕ್ಷಣವು ಇದೇ ಆಗಿದೆ.

ಅಷ್ಟಾಂಗಗಳು ಬದಲಾಯಿಸಿ

ಆ ಎಂಟು ಅಂಗಗಳೆಂದರೆ:

 1. ಯಮ (ಐದು "ವರ್ಜನೆಗಳು" ): ಅಹಿಂಸೆ, ಸತ್ಯಪಾಲನೆ, ಅತ್ಯಾಸೆಪಡದಿರುವುದು, ಇಂದ್ರಿಯ ನಿಗ್ರಹ, ಮತ್ತು ಸ್ವಾಧೀನತೆಯ ನಿಗ್ರಹ.
 2. ನಿಯಮ (ಐದು "ಅನುಷ್ಠಾನಗಳು"): ಶುದ್ಧತೆ, ಸಂತುಷ್ಟಿ, ಸಂಯಮ, ಅಧ್ಯಯನ, ಮತ್ತು ದೇವರಲ್ಲಿ ಶರಣಾಗತಿ.
 3. ಯೋಗಾಸನ : ಅಕ್ಷರಶಃ ಅರ್ಥವೆಂದರೆ "ಪೀಠ/ಕುಳಿತುಕೊಳ್ಳುವಿಕೆ", ಹಾಗೂ ಪತಂಜಲಿಯವರ ಸೂತ್ರಗಳಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುವ ಭಂಗಿಗಳಿಗೆ ಈ ಪದವನ್ನು ಉಲ್ಲೇಖಿಸಲಾಗುತ್ತದೆ.
 4. ಪ್ರಾಣಾಯಾಮ ("ಉಸಿರನ್ನು ನಿಯಂತ್ರಿಸುವುದು"): ಪ್ರಾಣ , ಉಸಿರು, "ಆಯಾಮ", ನಿಯಂತ್ರಣ ಅಥವಾ ನಿಲ್ಲಿಸುವಿಕೆ. ಜೀವ ಶಕ್ತಿಯ ನಿಯಂತ್ರಣವೆಂದೂ ಸಹಾ ಅರ್ಥೈಸಲಾಗುತ್ತದೆ.
 5. ಪ್ರತ್ಯಾಹಾರ ("ಆಮೂರ್ತವಾಗಿರುವಿಕೆ"): ಬಾಹ್ಯ ವಸ್ತುಗಳಿಂದ ಇಂದ್ರಿಯಗಳನ್ನು ದೂರವಿಡುವಿಕೆ.
 6. ಧಾರಣ ("ಏಕಾಗ್ರತೆ"): ಗಮನವನ್ನು ಒಂದು ವಸ್ತುವಿನ ಮೇಲೆಯೇ ಕೇಂದ್ರೀಕರಿಸುವುದು.
 7. ಧ್ಯಾನ ("ಧ್ಯಾನ"): ಧ್ಯಾನದ ಗುರಿಯ ಸ್ವಭಾವದತ್ತ ಅತೀವ ಚಿಂತನೆ.
 8. ಸಮಾಧಿ ("ಬಿಡುಗಡೆ"): ಧ್ಯಾನದ ಗುರಿಯಲ್ಲಿಯೇ ತನ್ನನ್ನು ಮಗ್ನನಾಗಿಸಿಕೊಳ್ಳುವುದು.

ಈ ಪಂಥದ ದೃಷ್ಟಿ ಕೋನದಲ್ಲಿ ಉತ್ತುಂಗ ಸ್ಥಿತಿಯು ವಿಶ್ವದ ವೈವಿಧ್ಯತೆಗಳ ಅನುಭವಗಳನ್ನು ಮಿಥ್ಯೆಯೆನ್ನುವುದಿಲ್ಲ. ಈ ದೈನಂದಿನ ವಿಶ್ವವು ವಾಸ್ತವ. ಇದು ಮಾತ್ರವಲ್ಲ, ಉತ್ತುಂಗ ಸ್ಥಿತಿಯೆನ್ನುವುದು ವಿಶ್ವದಲ್ಲಿರುವ ಜೀವಿಗಳಲ್ಲಿ ಕೆಲವು ಜೀವಿಗಳು ತಮ್ಮನ್ನು ತಾವು ಅರಿತುಕೊಳ್ಳುವುದು ಮಾತ್ರ; ಎಲ್ಲಾ ವ್ಯಕ್ತಿಗಳಲ್ಲಿರುವ ಅಂಶ ಸಾರ್ವತ್ರಿಕವಾದುದದಲ್ಲ.[೪೬]

ಭಗವದ್ಗೀತೆ ಬದಲಾಯಿಸಿ

ಭಗವದ್ಗೀತೆಯು ('ಭಗವಂತನ ಗೀತೆ'), ಯೋಗ ಎಂಬ ಪದವನ್ನು ಬಹಳ ವ್ಯಾಪಕ ಅರ್ಥಗಳಲ್ಲಿ ಬಳಸುತ್ತದೆ. ಪೂರ್ಣ ಅಧ್ಯಾಯವೊಂದನ್ನೇ (ch. 6) ಧ್ಯಾನದೊಂದಿಗೆ[೪೭] ಸಾಂಪ್ರದಾಯಿಕ ಯೋಗದ ಆಚರಣೆಯ ಬಗ್ಗೆ ಮುಡಿಪಾಗಿಟ್ಟಿರುವುದಲ್ಲದೇ, ಇದು ಯೋಗದ ಮೂರು ಪ್ರಧಾನ ವಿಧಗಳನ್ನು ಪರಿಚಯಿಸುತ್ತದೆ :[೪೮]

ಮಧುಸೂದನ ಸರಸ್ವತಿಯವರು (b. ಸುಮಾರು 1490) ಗೀತೆಯ ಮೊದಲ ಆರು ಅಧ್ಯಾಯಗಳನ್ನು ಕರ್ಮ ಯೋಗಕ್ಕೆ ಸಂಬಂಧಪಟ್ಟದ್ದೆಂದು, ಮಧ್ಯದ ಆರು ಅಧ್ಯಾಯಗಳು ಭಕ್ತಿ ಯೋಗಕ್ಕೆ ಸಂಬಂಧಪಟ್ಟದ್ದೆಂದು, ಹಾಗೂ ಕೊನೆಯ ಆರು ಜ್ಞಾನಕ್ಕೆ(ತಿಳುವಳಿಕೆ) ಸಂಬಂಧಪಟ್ಟುದೆಂದು ಗೀತೆಯನ್ನು ಮೂರು ಭಾಗಗಳಾಗಿ ವಿಭಜಿಸಿದರು.[೪೯] ಇತರ ವ್ಯಾಖ್ಯಾನಕಾರರು ಪ್ರತಿ ಅಧ್ಯಾಯಕ್ಕೆ ಪ್ರತ್ಯೇಕ 'ಯೋಗ'ವನ್ನು ಆರೋಪಿಸಿ, ಹದಿನೆಂಟು ವಿವಿಧ ಯೋಗಗಳನ್ನು ವರ್ಣಿಸಿದ್ದಾರೆ.[೫೦]

ಹಠ ಯೋಗ ಬದಲಾಯಿಸಿ

ಹಠಯೋಗವೆಂಬುದು 15ನೇ ಶತಮಾನದ ಭಾರತದಲ್ಲಿ ಹಠಯೋಗ ಪ್ರದೀಪಿಕಾವನ್ನು ಸಂಪಾದಿಸಿದ ಯೋಗಿ ಸ್ವಾತ್ಮಾರಾಮರಿಂದ ವರ್ಣಿಸಲ್ಪಟ್ಟ ನಿರ್ದಿಷ್ಟ ಯೋಗ ವ್ಯವಸ್ಥೆ. ಹಠ ಯೋಗವು ಪತಂಜಲಿಯವರ ರಾಜಯೋಗದಿಂದ ಗಣನೀಯ ಪ್ರಮಾಣದ ವ್ಯತ್ಯಾಸಗಳನ್ನು ಹೊಂದಿದ್ದು, ಇದು ಷಟ್ಕರ್ಮ ಗಳ ಮೇಲೆ ಹಾಗೂ ಭೌತಿಕ ಶರೀರವನ್ನು ಶುದ್ಧೀಕರಿಸಿ, ತನ್ಮೂಲಕ ಮನಸ್ಸು ( ), ಮತ್ತು ಪ್ರಾಣ , ಅಥವಾ ಚೈತನ್ಯ( )ಗಳ ಶುದ್ಧೀಕರಣ ಮಾಡುವುದರ ಮೇಲೆ ಕೇಂದ್ರೀಕರಿಸುತ್ತದೆ.[೫೧][೫೨] ಕುಳಿತುಕೊಳ್ಳುವ ಆಸನ, ಅಥವಾ ಕುಳಿತು ಧ್ಯಾನಿಸುವ ಭಂಗಿಯ, ಪತಂಜಲಿಯವರ ರಾಜಯೋಗಕ್ಕೆ ಹೋಲಿಸಿದರೆ,[೫೩] ಇದು ಆಸನಗಳನ್ನು (ಬಹುವಚನ) ಜನಪ್ರಿಯ ಬಳಕೆಯಲ್ಲಿ ಹೇಳುವಂತೆ ಪೂರ್ಣ ದೇಹದ 'ಭಂಗಿಗಳಾಗಿ' ವಿಕಾಸಗೊಳಿಸುತ್ತದೆ.[೫೪] ಇತ್ತೀಚಿನ ದಿನಗಳಲ್ಲಿ ಅನೇಕರು "ಯೋಗ" ಪದದೊಂದಿಗೆ ಸಮೀಕರಿಸುವ ಶೈಲಿಗಳು ಹಠ ಯೋಗದ ಆಧುನಿಕ ವೈವಿಧ್ಯಗಳಲ್ಲಿ ಒಂದಾಗಿರುತ್ತದೆ.[೫೫]

ಇತರೆ ಸಂಪ್ರದಾಯಗಳಲ್ಲಿ ಯೋಗದ ಆಚರಣೆಗಳು ಬದಲಾಯಿಸಿ

ಬೌದ್ಧಧರ್ಮ ಬದಲಾಯಿಸಿ

 
ಜಪಾನ್‌ನ ಕಾಮಕುರಾದಲ್ಲಿ ಯೋಗರೀತಿಯ ಧ್ಯಾನ ಮಾಡುತ್ತಿರುವ ಬುದ್ಧನ ಚಿತ್ರಣ

ಪ್ರಾಚೀನ ಬೌದ್ಧ ಧರ್ಮವು ಧ್ಯಾನಸ್ಥ ತನ್ಮಯತೆಯಲ್ಲಿ ಸ್ಥಿತಿಗಳನ್ನು ಮೂರ್ತೀಕರಿಸಿತ್ತು.[೫೬] ಅತಿ ಪ್ರಾಚೀನವಾಗಿ ವ್ಯಕ್ತವಾದ ಯೋಗದ ಚಿಂತನೆಯು ಬುದ್ಧನ ಮೊದಲಿನ ಧರ್ಮಪ್ರವಚನಗಳಲ್ಲಿ ಕಂಡುಬರುತ್ತದೆ.[೫೭] ಬುದ್ಧನ ಒಂದು ಮಹತ್ವದ ನವೀನ ಬೋಧವೆಂದರೆ ಧ್ಯಾನದ ತನ್ಮಯತೆಯನ್ನು ಗಮನಪೂರ್ವಕ ಆಚರಣೆಯೊಂದಿಗೆ ಮೇಳೈಸುವುದು.[೫೮] ಬುದ್ಧನ ಬೋಧನೆಗಳು ಮತ್ತು ಪ್ರಾಚೀನ ಬ್ರಾಹ್ಮಣ ಗ್ರಂಥಗಳಲ್ಲಿ ದಾಖಲಿಸಿರುವ ಯೋಗದ ನಡುವಿನ ವ್ಯತ್ಯಾಸಗಳು ಒಡೆದು ಕಾಣುತ್ತವೆ. ಧ್ಯಾನದ ಸ್ಥಿತಿಗಳು ತಾವೇ ಅಂತಿಮವಲ್ಲ, ಅಲ್ಲದೇ ಬುದ್ಧನ ಪ್ರಕಾರ ಧ್ಯಾನದ ಉನ್ನತ ಸ್ಥಿತಿ ಕೂಡ ಬಿಡುಗಡೆ ನೀಡುವುದಿಲ್ಲ. ಪೂರ್ಣ ಪ್ರಮಾಣದ ಸಂವೇದನಾರಾಹಿತ್ಯದ ಬದಲಿಗೆ, ಕೆಲ ಮಟ್ಟದ ಮನಸ್ಸಿನ ಚಟುವಟಿಕೆ ಇರಬೇಕು: ಬಿಡುಗಡೆಯ ಸಂವೇದನೆಯೊಂದಿಗೆ ಗಮನಪೂರ್ವಕ ಎಚ್ಚರವಿರಬೇಕು.[೫೯] ಬುದ್ಧನು ಪ್ರಾಚೀನ ಯೋಗದಲ್ಲಿ ಬರುವ ಸಾವಿನ ನಂತರ ಮುಕ್ತಿ ಸಿಗುವ ಅಭಿಪ್ರಾಯವನ್ನು ಕೂಡ ಅಲ್ಲಗಳೆಯುತ್ತಾನೆ.[೬೦] ಬ್ರಾಹ್ಮಣ ಯೋಗಿಯ ಪ್ರಕಾರ ಮೋಕ್ಷವೆಂದರೆ ಜೀವನದಲ್ಲಿ ಅದ್ವೈತ ಧ್ಯಾನಸ್ಥ ಸ್ಥಿತಿಯಲ್ಲಿರುವಾಗ ಸಾವಿನಲ್ಲಿ ಕಂಡುಬರುವ ಸಾಕ್ಷಾತ್ಕಾರ. ವಾಸ್ತವಿಕವಾಗಿ ಹಳೆಯ ಬ್ರಾಹ್ಮಣ ರೂಪಕಗಳಲ್ಲಿ ಯೋಗಕ್ಕೆ ಸಂಬಂಧಿಸಿದಂತೆ ಸಾವಿನಲ್ಲಿ ಸಿಗುವ ಮುಕ್ತಿಗೆ ("ಶಾಂತಗೊಳ್ಳುವಿಕೆ", "ಹೊರನಡೆಯುವಿಕೆ") ಬುದ್ಧನು ಬೇರೆಯೇ ಆದ ನವೀನ ಅರ್ಥ ನೀಡಿದನು; ಅವರ ಉಲ್ಲೇಖಿತ ಆಧಾರಗಳು ಜೀವನ್ಮುಕ್ತರಾದ ಸಾಧುಗಳೆಡೆ ತೋರಿದವು.[೬೧]

ಯೋಗಾಚಾರ ಬೌದ್ಧ ಧರ್ಮ ಬದಲಾಯಿಸಿ

ಯೋಗಚಾರ (ಸಂಸ್ಕೃತ : "ಯೋಗ ಆಚರಣೆ"[81]), ಯೋಗಾಚಾರ ಎಂದೂ ಹೇಳಲ್ಪಡುವ ಪಂಥವು, 4ರಿಂದ 5ನೇ ಶತಮಾನಗಳಲ್ಲಿ ಭಾರತದಲ್ಲಿ ವಿಕಸನಗೊಂಡ ತತ್ವಜ್ಞಾನ ಮತ್ತು ಮನಶ್ಶಾಸ್ತ್ರಗಳ ಶಾಖೆಯಾಗಿದೆ. ಯೋಗಾಚಾರವು ತನ್ನ ಹೆಸರನ್ನು, ಬೋಧಿಸತ್ವನ ಹಾದಿಯೆಡೆಗೆ ತಲುಪುವ ಆಚರಣೆಗಳಲ್ಲಿ ಉದ್ಯುಕ್ತರಾಗುವ ಚೌಕಟ್ಟನ್ನು ನೀಡುವ ಯೋಗ ವನ್ನು ಹೊಂದಿದ್ದರಿಂದ ಪಡೆದುಕೊಂಡಿದೆ.[೬೨] ಯೋಗಾಚಾರ ಪಂಥವು ಜ್ಞಾನೋದಯವನ್ನು ಪಡೆಯುವ ಮಾರ್ಗವಾಗಿ ಯೋಗ ವನ್ನು ಬೋಧಿಸುತ್ತದೆ.[೬೩]

ಛಾ'ನ್‌ (ಸಿಯೋನ್‌/ಝೆನ್‌‌) ಬೌದ್ಧ ಧರ್ಮ ಬದಲಾಯಿಸಿ

ಝೆನ್ (ಇದರ ಹೆಸರು ಚೀನೀ "ಛಾ'ನ್‌"[೬೪] ಮುಖಾಂತರ ಸಂಸ್ಕೃತದ "ಧ್ಯಾನ"ದಿಂದ ಉತ್ಪನ್ನವಾಗಿದೆ) ಎಂಬುದು ಮಹಾಯಾನ ಬೌದ್ಧ ಧರ್ಮದ ಒಂದು ರೂಪ. ಬೌದ್ಧ ಧರ್ಮದ ಮಹಾಯಾನ ಶಾಖೆಯು ಯೋಗದೊಂದಿಗಿನ ತನ್ನ ಸಾಮೀಪ್ಯಕ್ಕೆ ಪ್ರಸಿದ್ಧವಾಗಿದೆ.[೫೬] ಪಶ್ಚಿಮದಲ್ಲಿ, ಝೆನ್ಅನ್ನು ಯೋಗದೊಂದಿಗೆ ಅನೇಕ ವೇಳೆ ಸಮನ್ವಯಗೊಳಿಸಲಾಗುತ್ತದೆ; ಧ್ಯಾನದ ಈ ಎರಡೂ ಶಾಖೆಗಳು ಸಹಜವಾಗಿ ಸಮುದಾಯ ಹೋಲಿಕೆಗಳನ್ನು ಪ್ರದರ್ಶಿಸುತ್ತವೆ.[೬೫] ಈ ಸಂಗತಿಯು ಧ್ಯಾನಕ್ಕೆ ಸಂಬಂಧಿಸಿದ ಝೆನ್ ಬೌದ್ಧ ಶಾಖೆಯು ತನ್ನ ಕೆಲ ಮೂಲಗಳನ್ನು ಯೋಗದ ಆಚರಣೆಗಳಲ್ಲಿ ಹೊಂದಿರುವುದರಿಂದ ವಿಶೇಷ ಗಮನ ಸೆಳೆಯುತ್ತದೆ.[೬೬] ಯೋಗದ ನಿರ್ದಿಷ್ಟ ಅತ್ಯಗತ್ಯ ಅಂಶಗಳು ಸಾಮಾನ್ಯವಾಗಿ ಬೌದ್ಧ ಧರ್ಮಕ್ಕೆ ಹಾಗೂ ನಿರ್ದಿಷ್ಟವಾಗಿ ಝೆನ್‌ಗೆ ಕೂಡ ಮಹತ್ವವಾದವು.[೬೭]

ಭಾರತೀಯ-ಟಿಬೆಟಿಯನ್‌ ಬೌದ್ಧ ಧರ್ಮ ಬದಲಾಯಿಸಿ

ಟಿಬೆಟಿಯನ್‌ ಬೌದ್ಧ ಧರ್ಮಕ್ಕೆ ಯೋಗವು ಪ್ರಧಾನ ಅಂಶವಾಗಿದೆ. ನಿಂಗ್‌ಮಾ ಸಂಪ್ರದಾಯದಲ್ಲಿ ಧ್ಯಾನದ ಆಚರಣೆಯನ್ನು ಏರುತ್ತ ಹೋಗುವ ಗಹನತೆಯನ್ನು ಹೊಂದಿರುವ ಒಂಬತ್ತು ಯಾನಗಳಾ ಗಿ ಅಥವಾ ವಾಹನಗಳಾಗಿ ವಿಭಜಿಸಲಾಗುತ್ತದೆ.[೬೮] ಕೊನೆಯ ಆರನ್ನು "ಯೋಗಯಾನಗಳ"ನ್ನಾಗಿ ವರ್ಣಿಸಲಾಗುತ್ತದೆ : ಕ್ರಿಯಾ ಯೋಗ , ಉಪ ಯೋಗ , ಯೋಗ ಯಾನ , ಮಹಾ ಯೋಗ , ಅನು ಯೋಗ ಮತ್ತು ಅತ್ಯುಚ್ಚ ಆಚರಣೆಯಾದ, ಅತಿ ಯೋಗ .[೬೯] ಸರ್ಮಾ ಸಂಪ್ರದಾಯಗಳು ಮಹಾಯೋಗ ಮತ್ತು ಅತಿಯೋಗಗಳಿಗೆ ಪರ್ಯಾಯವಾಗಿ ಅನುತ್ತರ ಯೋಗ ವರ್ಗದೊಂದಿಗೆ ಕ್ರಿಯಾ, ಉಪ (ಚರ್ಯೆ/ಚರ್ಯಾ ಎನ್ನಲಾಗುವ), ಮತ್ತು ಯೋಗಗಳನ್ನು ಕೂಡಾ ಹೊಂದಿವೆ.[೭೦] ಇತರ ತಂತ್ರಯೋಗದ ಆಚರಣೆಗಳಲ್ಲಿ ಉಸಿರು ಮತ್ತು ಹೃದಯಗಳ ಲಯದೊಂದಿಗೆ ಆಚರಿಸುವ 108 ದೈಹಿಕ ಭಂಗಿಗಳೂ ಸೇರಿವೆ. ನಿಂಗ್‌ಮಾ ಸಂಪ್ರದಾಯವು ಆಚರಿಸುವ ಯಂತ್ರ ಯೋಗವೆಂಬ (Tib. ತ್ರುಲ್‌ ಖೊರ್ ‌‌) ಪದ್ಧತಿಯು ಉಸಿರಿನ ಚಟುವಟಿಕೆ (ಅಥವಾ ಪ್ರಾಣಾಯಾಮ), ಧ್ಯಾನಸ್ಥ ತನ್ಮಯತೆ ಮತ್ತು ಪಾಲಕನ ಮೇಲೆ ಕೇಂದ್ರೀಕರಿಸಲಾಗುವಂತಹಾ ನಿಖರ ಸಕ್ರಿಯ ಚಟುವಟಿಕೆಗಳನ್ನು ಒಳಗೊಂಡಿದೆ.[೭೧] ಟಿಬೆಟಿಯನ್‌ ಪ್ರಾಚೀನ ಯೋಗಿಗಳ ದೇಹಭಂಗಿಗಳನ್ನು ಲುಖಾಂಗ್‌ನಲ್ಲಿನ ದಲಾಯಿ ಲಾಮಾರ ಬೇಸಿಗೆಯ ದೇವಾಲಯದ ಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಚಾಂಗ್‌ ರಚಿತ ಮಧ್ಯಮ ಜನಪ್ರಿಯತೆಯ ಟಿಬೆಟಿಯನ್‌ ಯೋಗದ ಗ್ರಂಥ(1993)ವು ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವ ಶಾಖ ಚಾಂದಲಿ (Tib. ತುಮ್ಮೋ )ಯು "ಒಟ್ಟಾರೆ ಟಿಬೆಟಿಯನ್‌ ಯೋಗದ ಮೂಲಾಧಾರವೆಂದು" ದಾಖಲಿಸುತ್ತದೆ.[೭೨] ತಂತ್ರಶಾಸ್ತ್ರದ ಸೈದ್ಧಾಂತಿಕ ಪರಿಣಾಮಗಳೊಂದಿಗೆ ಸಂಬಂಧಿಸುತ್ತಾ, ಪ್ರಾಣ ಮತ್ತು ಮನಸ್ಸುಗಳಂತಹಾ ಸುವ್ಯಕ್ತ ಧೃವಗಳ ಸಮನ್ವಯೀಕರಣವನ್ನು ಟಿಬೆಟಿಯನ್‌ ಯೋಗವು ಹೊಂದಿದೆ ಎಂದು ಚಾಂಗ್‌ ಹೇಳುತ್ತಾರೆ.

ಜೈನಧರ್ಮ ಬದಲಾಯಿಸಿ

 
ಕಾಯೋತ್ಸರ್ಗ ಭಂಗಿಯಲ್ಲಿ ಯೋಗರೀತಿಯ ಧ್ಯಾನ ಮಾಡುತ್ತಿರುವ ತೀರ್ಥಂಕರ ಪಾರ್ಶ್ವರು.
 
ಮೂಲಬಂಧಾಸನ ಭಂಗಿಯಲ್ಲಿ ಮಹಾವೀರರು ಪಡೆದ ಕೇವಲ ಜ್ಞಾನ

2ನೇ ಶತಮಾನದ CEಯ ಜೈನ ಗ್ರಂಥವಾದ ತತ್ವಾರ್ಥಸೂತ್ರ ದ ಪ್ರಕಾರ ಯೋಗ ವು ಮನಸ್ಸು, ಉಸಿರು ಮತ್ತು ದೇಹದ ಎಲ್ಲಾ ಚಟುವಟಿಕೆಗಳ ಸಂಗ್ರಹ.[೭೩] ಉಮಾಸ್ವತಿ ಯೋಗವನ್ನು ಅಸ್ರವ ಅಥವಾ ಕರ್ಮದ ಒಳಪ್ರವಾಹ[೭೪] ದ ಜೊತೆಗೆ ಮುಕ್ತಿ ಪಡೆಯುವ ದಾರಿಯ ಅವಶ್ಯಕತೆಗಳಲ್ಲಿ ಒಂದಾದ —ಸಮ್ಯಕ್‌ ಚರಿತ್ರೆ —ಗಳ ನಿಮಿತ್ತವೂ ಹೌದು ಎನ್ನುತ್ತಾರೆ.[೭೪] ತಮ್ಮ ನಿಯಮಸಾರ ಗ್ರಂಥದಲ್ಲಿ, ಆಚಾರ್ಯ ಕುಂದಕುಂದರು, ಯೋಗ ಭಕ್ತಿ ಯನ್ನು—ಮುಕ್ತಿ ಪಥದ ಬಗೆಗಿನ ಶ್ರದ್ಧೆಯೆಂದು—ಹಾಗೂ ಅದೇ ಭಕ್ತಿಯ ಉನ್ನತರೂಪವೆಂದು ವರ್ಣಿಸುತ್ತಾರೆ.[೭೫] ಆಚಾರ್ಯ ಹರಿಭದ್ರ ಮತ್ತು ಆಚಾರ್ಯ ಹೇಮಚಂದ್ರರು ತಪಶ್ಚರ್ಯೆಯ ಐದು ಪ್ರಮುಖ ಸಂಕಲ್ಪಗಳು ಹಾಗೂ ಗೃಹಸ್ಥಾಶ್ರಮದ 12 ಲಘು ಸಂಕಲ್ಪಗಳನ್ನು ಯೋಗದ ಅಂಗಗಳೆಂದು ಹೇಳುತ್ತಾರೆ. ಇದರಿಂದಾಗಿ Prof. ರಾಬರ್ಟ್‌ J. ಝೈಡೆನ್‌ಬಾಸ್‌ರಂತಹ ಭಾರತ-ಅಧ್ಯಯನತಜ್ಞರು ಜೈನ ಧರ್ಮವನ್ನು ಪೂರ್ಣಪ್ರಮಾಣದ ಧರ್ಮವಾಗಿ ಬೆಳವಣಿಗೆ ಕಂಡಿರುವ ಯೋಗದ ಚಿಂತನಶೈಲಿಯ ವ್ಯವಸ್ಥೆ ಎಂದು ಅರ್ಥೈಸಿಕೊಳ್ಳುವ ಪರಿಸ್ಥಿತಿಯಿದೆ.[೭೬] Dr. ಹೇನ್‌ರಿಚ್‌ ಝಿಮ್ಮರ್‌ರು ಯೋಗವ್ಯವಸ್ಥೆಯ ಮೂಲವು ಆರ್ಯರಿಗಿಂತಲೂ ಪ್ರಾಚೀನವಾಗಿದ್ದು, ಅವು ವೇದಪ್ರಮಾಣವನ್ನು ಒಪ್ಪಿಕೊಳ್ಳುತ್ತಿರಲಿಲ್ಲವೆಂದು, ಹಾಗಾಗಿ ಅದನ್ನು ಜೈನ ಧರ್ಮದಂತೆಯೇ ಅಸಾಂಪ್ರದಾಯಿಕ ಸಿದ್ಧಾಂತಗಳಂತೆ ಪರಿಗಣಿಸಲಾಗಿದೆ ಎಂದು ವಾದಿಸುತ್ತಾರೆ.[೭೭] ಜೈನ ಪ್ರತಿಮಾಶಾಸ್ತ್ರವು ಜೈನ ತೀರ್ಥಂಕರರು ಪದ್ಮಾಸನ ಅಥವಾ ಕಾಯೋತ್ಸರ್ಗ ಯೋಗಭಂಗಿಗಳಲ್ಲಿ ಧ್ಯಾನವನ್ನು ಮಾಡುತ್ತಿದ್ದುದನ್ನು ಚಿತ್ರಿಸುತ್ತವೆ. ಮಹಾವೀರರು ಮೂಲಬಂಧಾಸನ ಭಂಗಿಯಲ್ಲಿ ಕುಳಿತುಕೊಂಡೇ ಕೇವಲ ಜ್ಞಾನ "ಜ್ಞಾನೋದಯ"ವನ್ನು ಪಡೆದರು ಎನ್ನಲಾಗುತ್ತದೆ ಹಾಗೂ ಇದು ಪ್ರಥಮ ಮೊದಲಿಗೆ ಆಚಾರಾಂಗ ಸೂತ್ರದಲ್ಲಿ ಹಾಗೂ ನಂತರ ಕಲ್ಪಸೂತ್ರದಲ್ಲಿ [೭೮] ಲಿಖಿತರೂಪದಲ್ಲಿ ಪ್ರಸ್ತಾಪಗೊಂಡಿದೆ

ಪತಂಜಲಿಯವರ ಯೋಗಸೂತ್ರಗಳಲ್ಲಿನ ಐದು ಯಮಗಳು ಅಥವಾ ನಿರ್ಬಂಧಗಳು ಜೈನ ಧರ್ಮದಲ್ಲಿನ ಐದು ಪ್ರಧಾನ ಸಂಕಲ್ಪಗಳೊಂದಿಗೆ ಗೂಢ ಸಂಬಂಧವನ್ನು ಹೊಂದಿದ್ದು, ಜೈನ ಧರ್ಮದ ಪ್ರಬಲ ಪ್ರಭಾವಕ್ಕೊಳಪಟ್ಟಂತೆ ಕಂಡುಬರುತ್ತದೆ.[೭೯][೮೦] ಯೋಗಸಿದ್ಧಾಂತ ಮತ್ತು ಜೈನ ಧರ್ಮಗಳ ನಡುವಿನ ಪರಸ್ಪರ ಪ್ರಭಾವಗಳನ್ನು ಅನುಮೋದಿಸುವ ಲೇಖಕ ವಿವಿಯನ್‌ ವರ್ತಿಂಗ್‌ಟನ್‌ರು "ಯೋಗವು ಜೈನಧರ್ಮಕ್ಕೆ ತಾನು ಋಣಿಯಾಗಿರುವುದನ್ನು ಪೂರ್ಣವಾಗಿ ಒಪ್ಪಿಕೊಳ್ಳುತ್ತದಲ್ಲದೇ, ಜೈನ ಧರ್ಮವು ಕೂಡ ಯೋಗದ ಆಚರಣೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು ಅದನ್ನು ಹಿಂದಿರುಗಿಸುತ್ತದೆ." ಎಂದು ಬರೆಯುತ್ತಾರೆ.[೮೧] ಸಿಂಧೂಕಣಿವೆಯ ಮೊಹರುಗಳು ಹಾಗೂ ಪ್ರತಿಮಾಶಾಸ್ತ್ರಗಳು ಕೂಡ ಜೈನ ಧರ್ಮಕ್ಕೆ ಸಂಬಂಧಿತ ಯೋಗ ಸಂಪ್ರದಾಯಕ್ಕೂ ಪೂರ್ವದ ಸಂಪ್ರದಾಯದ ಅಸ್ತಿತ್ವಕ್ಕೆ ಸಮಂಜಸ ಪುರಾವೆಗಳನ್ನು ನೀಡುತ್ತದೆ.[೮೨] ಮತ್ತಷ್ಟು ನಿರ್ದಿಷ್ಟವಾಗಿ, ತಜ್ಞರು ಹಾಗೂ ಪುರಾತತ್ವಶಾಸ್ತ್ರಜ್ಞರು ಮೊಹರುಗಳಲ್ಲಿ ಚಿತ್ರಿತವಾದ ಯೋಗಕ್ಕೆ ಸಂಬಂಧಿಸಿದಂತಹಾ ಮತ್ತು ಧ್ಯಾನದ ಭಂಗಿಗಳ ಹಾಗೂ ಅನೇಕ ತೀರ್ಥಂಕರರ : ಎಂದರೆ ಋಷಭರ "ಕಾಯೋತ್ಸರ್ಗ" ಭಂಗಿ ಮತ್ತು ಮಹಾವೀರಮೂಲಬಂಧಾಸನ ಭಂಗಿಗಳ ಜೊತೆಗೆ ಪಾರ್ಶ್ವರ ಪ್ರತಿಮೆಯನ್ನುಹೋಲುವ ನೆಟ್ಟಗೆ ನಿಂತಿರುವ ಸರ್ಪಗಳಿಂದ ಸುತ್ತುವರೆಯಲ್ಪಟ್ಟ ಧ್ಯಾನ ಮಾಡುತ್ತಿರುವ ಮೂರ್ತಿಯನ್ನು ಚಿತ್ರಿಸಿರುವ ಮೊಹರುಗಳ ನಡುವಿನ ವಿಪರೀತ ಸಾಮ್ಯತೆಗಳನ್ನು ಗಮನಿಸಿದ್ದಾರೆ. ಇವೆಲ್ಲವೂ ಕೇವಲ ಸಿಂಧೂ ಕಣಿವೆ ನಾಗರೀಕತೆ ಮತ್ತು ಜೈನ ಧರ್ಮಗಳ ನಡುವಿನ ಸಂಪರ್ಕವನ್ನು ಮಾತ್ರವಲ್ಲ, ಅದರೊಂದಿಗೆ ಅನೇಕ ಯೋಗದ ಆಚರಣೆಗಳಿಗೆ ಜೈನ ಧರ್ಮ ನೀಡಿರುವ ಕಾಣಿಕೆಯನ್ನೂ ಸಹಾ ಸೂಚಿಸುತ್ತವೆ.[೮೩]

ಜೈನ ನಿಯಮಗಳು ಮತ್ತು ಗ್ರಂಥಗಳಲ್ಲಿನ ಆಕರಗಳು ಬದಲಾಯಿಸಿ

ಜೈನರ ಪ್ರಾಚೀನ ಶಾಸ್ತ್ರೀಯ ಗ್ರಂಥಗಳು ಹಾಗೂ ಆಚಾರಾಂಗ ಸೂತ್ರ ಮತ್ತು ನಿಯಮಸಾರ, ತತ್ವಾರ್ಥಸೂತ್ರ etcದಂತಹಾ ಗ್ರಂಥಗಳು ಯೋಗವನ್ನು ಪಾಮರರು ಹಾಗೂ ತಪಸ್ವಿಗಳಿಬ್ಬರಿಗೂ ಅನ್ವಯಿಸುವ ಜೀವನಶೈಲಿ ಎಂದು ಸೂಚಿಸಿರುವ ಪ್ರಸ್ತಾಪಗಳಿವೆ. ಯೋಗದ ಜೈನರ ಕಲ್ಪನೆಯನ್ನು ಮತ್ತಷ್ಟು ವಿಷದವಾಗಿ ವಿವರಿಸಿದ ನಂತರದ ಗ್ರಂಥಗಳೆಂದರೆ:

 • ಪೂಜ್ಯಪಾದ (5ನೇ ಶತಮಾನ CE)
  • ಇಷ್ಟೋಪದೇಶ
 • ಆಚಾರ್ಯ ಹರಿಭದ್ರ ಸೂರಿ(8ನೇ ಶತಮಾನ CE)
  • ಯೋಗಬಿಂದು
  • ಯೋಗದೃಷ್ಠಿ ಸಮುಚ್ಛಯ
  • ಯೋಗಸಾಧ/ತಕ
  • ಯೋಗವಿಮಿಶಿಕಾ
 • ಆಚಾರ್ಯ ಜೋಯಿಂದು (8ನೇ ಶತಮಾನ CE)
  • ಯೋಗಸಾರ
 • ಆಚಾರ್ಯ ಹೇಮಚಂದ್ರ (11ನೇ ಶತಮಾನ CE)
  • ಯೋಗಶಾಸ್ತ್ರ
 • ಆಚಾರ್ಯ ಅಮಿತಾಗತಿ (11ನೇ ಶತಮಾನ CE)
  • ಯೋಗಸಾರಪ್ರಭೃತ

ಇಸ್ಲಾಂ ಬದಲಾಯಿಸಿ

ಭೌತಿಕ ಭಂಗಿಗಳನ್ನು(ಆಸನಗಳು) ಹಾಗೂ ಉಸಿರಿನ ನಿಯಂತ್ರಣ (ಪ್ರಾಣಾಯಾಮ)ಗಳೆರಡನ್ನೂ ಅಳವಡಿಸಿಕೊಂಡ ಸೂಫಿಪಂಥದ ಬೆಳವಣಿಗೆಯಲ್ಲಿ ಭಾರತೀಯರ ಯೋಗದ ಆಚರಣೆಗಳ ಪ್ರಭಾವವು ಗಮನಾರ್ಹವಾಗಿವೆ.[೮೪] ಪ್ರಾಚೀನ ಭಾರತೀಯ ಯೋಗಕ್ಕೆ ಸಂಬಂಧಿಸಿದ ಗ್ರಂಥವಾದ, ಅಮೃತಕುಂಡವು, ("ಅಮೃತದ ಕೊಳ)" 11ನೇ ಶತಮಾನದಷ್ಟು ಮುಂಚೆಯೇ ಅರೇಬಿಕ್‌ ಹಾಗೂ ಪರ್ಷಿಯನ್‌ ಭಾಷೆಗಳಿಗೆ ಭಾಷಾಂತರಗೊಂಡಿತ್ತು.[೮೫]

ಮಲೇಷಿಯಾದ ಅಗ್ರ ಇಸ್ಲಾಂ ಸಂಸ್ಥೆಯು 2008ರಲ್ಲಿ, ಕಾನೂನಿಗೆ ವಿರುದ್ಧವಲ್ಲದೇ ಹೋದರೂ, ಯೋಗವು "ಹಿಂದೂ ಆಧ್ಯಾತ್ಮಿಕ ಬೋಧನೆಗಳ" ಅಂಶಗಳನ್ನು ಹೊಂದಿರುವುದರಿಂದ ಅದನ್ನು ಆಚರಿಸುವುದು ದೈವದ್ರೋಹ ಹಾಗೂ ಹರಾಮ್‌ ಆಗುತ್ತದೆ ಎಂದು ಯೋಗವನ್ನು ಆಚರಿಸುತ್ತಿರುವ ಮುಸ್ಲಿಮರ ವಿರುದ್ಧ ಒಂದು ಫತ್ವಾವನ್ನು ಹೊರಡಿಸಿತು. ಮಲೇಷಿಯಾದ ಮುಸ್ಲಿಂ ಯೋಗ ಬೋಧಕರು ಈ ನಿರ್ಧಾರವನ್ನು "ಅಪಮಾನಕರ" ಎಂದು ಟೀಕಿಸಿದರು.[೮೬] ಮಲೇಷಿಯಾದ ಮಹಿಳಾ ಹಕ್ಕುಗಳ ಸಂಘಟನೆ ಸಿಸ್ಟರ್ಸ್‌ ಇನ್‌ ಇಸ್ಲಾಂ ಕೂಡಾ ಈ ನಿರ್ಧಾರಕ್ಕೆ ನಿರಾಶಾದಾಯಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿದುದಲ್ಲದೇ, ತಾವು ತಮ್ಮ ಯೋಗ ತರಗತಿಗಳನ್ನು ಮುಂದುವರೆಸುವುದಾಗಿ ಹೇಳಿತು.[೮೭] ಕೇವಲ ದೈಹಿಕ ವ್ಯಾಯಾಮವಾಗಿ ಆಚರಿಸುವ ಯೋಗವನ್ನು ಒಪ್ಪಬಹುದು, ಆದರೆ ಧಾರ್ಮಿಕ ಮಂತ್ರಗಳ ಪಠಣ ನಿಷೇಧಾರ್ಹವಾಗಿರುತ್ತದೆ,[೮೮] ಹಾಗೂ ಮಾನವನನ್ನು ದೈವದೊಂದಿಗೆ ಸಮೀಕರಿಸುವಂತಹಾ ಬೋಧನೆಗಳು ಇಸ್ಲಾಂ ತತ್ವಶಾಸ್ತ್ರಕ್ಕೆ ವಿರೋಧವಾದುದು ಎಂದು ಮೇಲಿನ ಫತ್ವಾ ಘೋಷಿಸುತ್ತಿತ್ತು.[೮೯] ಇದೇ ತರಹದ ಧಾಟಿಯಲ್ಲಿ, ಇಂಡೋನೇಷ್ಯಾದ ಕೌನ್ಸಿಲ್‌ ಆಫ್‌ ಉಲೇಮಾಸ್‌ ಎಂಬ ಇಸ್ಲಾಂ ಸಂಸ್ಥೆಯು, ಯೋಗವು "ಹಿಂದೂ ಅಂಶಗಳನ್ನು"[೯೦] ಹೊಂದಿದೆ ಎಂಬುದರ ಆಧಾರದ ಮೇಲೆ ಅದನ್ನು ನಿಷೇಧಿಸಿ ಫತ್ವಾವನ್ನು ಹೊರಡಿಸಿತು. ಈ ಫತ್ವಾಗಳನ್ನು ಭಾರತದ ದಾರುಲ್‌ ಉಲೂಂ ದಿಯೋಬಂದ್‌ ಎಂಬ ದಿಯೋಬಂದಿ ಇಸ್ಲಾಂ ಬ್ರಹ್ಮಜ್ಞಾನ ಶಿಕ್ಷಣಾಲಯವು ಟೀಕಿಸಿದೆ.[೯೧]

2009ರ ಮೇನಲ್ಲಿ, ಟರ್ಕಿಯ ಅಲಿ ಬರ್ದಕೋಗ್ಲು ಎಂಬ ಧಾರ್ಮಿಕ ವ್ಯವಹಾರಗಳ ನಿರ್ದೇಶನಾಲಯವು ಅತಿರೇಕತೆಯನ್ನು ಉತ್ತೇಜಿಸುವ ಉದ್ಯಮವೆಂದು ಯೋಗದ ವಾಣಿಜ್ಯ ಉದ್ಯಮವನ್ನು ಕಡೆಗಣಿಸಿತು-ಇದಕ್ಕೆ ಕಾರಣವೇನೆಂದರೆ ಯೋಗದ ಆಚರಣೆಯು ಬಹುಶಃ ಇಸ್ಲಾಂನಲ್ಲಿ ಭಾಗವಹಿಸುವಿಕೆಯನ್ನು ನಾಶಗೊಳಿಸುತ್ತಿದೆಯೆಂದು ಹಾಗೂ ಇಸ್ಲಾಂಗೆ ಸ್ಪರ್ಧೆ ನೀಡುತ್ತಿದೆಯೆಂದು ಬಂದ ಟೀಕೆಗಳು [೯೨].

ಕ್ರೈಸ್ತ ಧರ್ಮ ಬದಲಾಯಿಸಿ

1989ರಲ್ಲಿ, ವ್ಯಾಟಿಕನ್‌ ಸಿಟಿಯು ಝೆನ್‌ ಮತ್ತು ಯೋಗದಂತಹಾ ಪೂರ್ವದ ಧ್ಯಾನದ ಆಚರಣೆಗಳು "ಅಸಾಂಪ್ರದಾಯಿಕ ಧಾರ್ಮಿಕ ಸಂಸ್ಥೆಗಳಾಗಿ ಅವನತಿ ಹೊಂದುವ ಸಾಧ್ಯತೆ ಇದೆ" ಎಂದು ಘೋಷಿಸಿತು.[೯೩] ವ್ಯಾಟಿಕನ್‌ ಸಿಟಿಯ ಈ ಹೇಳಿಕೆಯ ಹೊರತಾಗಿಯೂ, ಅನೇಕ ರೋಮನ್‌ ಕ್ಯಾಥೊಲಿಕರು ಯೋಗ, ಬೌದ್ಧಧರ್ಮ ಮತ್ತು ಹಿಂದೂ ಧರ್ಮಗಳ ಅಂಶಗಳನ್ನು ತಮ್ಮ ಧಾರ್ಮಿಕ ಚಟುವಟಿಕೆಗಳಲ್ಲಿ ಬಳಸುತ್ತಲೇ ಇದ್ದಾರೆ.[೯೪]

ತಂತ್ರ ಬದಲಾಯಿಸಿ

ತಂತ್ರಶಾಸ್ತ್ರವು ಜನರ ಬದುಕಿನ ಸಾಮಾನ್ಯ ಸಾಮಾಜಿಕ, ಧಾರ್ಮಿಕ, ಮತ್ತು ತಾರ್ಕಿಕ ವಸ್ತುಸ್ಥಿತಿಯಿಂದ ಅದರ ಆಚರಣೆ ನಡೆಸುವವರ ಸಂಬಂಧವನ್ನು ಬದಲಿಸುವಂತೆ ಮಾಡುವಂತಹಾ ಆಚರಣೆಯಾಗಿದೆ. ತಾಂತ್ರಿಕ ಆಚರಣೆಯ ಮೂಲಕ ಓರ್ವ ವ್ಯಕ್ತಿ ವಸ್ತುಸ್ಥಿತಿಯನ್ನು/ವಾಸ್ತವವನ್ನು ಮಾಯೆ, ಭ್ರಮೆ ಎಂದು ಗ್ರಹಿಸಬಹುದು ಹಾಗೂ ವ್ಯಕ್ತಿಯು ಅದರಿಂದ ಮುಕ್ತನಾಗಬಹುದು.[೯೫] ಹಿಂದೂಧರ್ಮವು ಮುಕ್ತಿ ಪಡೆಯಲು ನೀಡುವ ಅನೇಕ ದಾರಿಗಳಲ್ಲಿ ಒಂದಾದ ಈ ನಿರ್ದಿಷ್ಟ ದಾರಿಯು ಸಾಮಾಜಿಕ ಸಂಬಂಧಗಳು ಮತ್ತು ರೂಢಿಗಳಿಂದ ತಾತ್ಕಾಲಿಕ ಅಥವಾ ಸಂಪೂರ್ಣ ನಿವೃತ್ತಿ/ತ್ಯಾಗಗಳ ಮೇಲೆ ಆಧಾರಿತವಾದ ಭಾರತೀಯ ಧರ್ಮಗಳ ಆಚರಣೆಗಳಾದ ಯೋಗ, ಧ್ಯಾನ ಮತ್ತು ವೈರಾಗ್ಯಗಳೊಂದಿಗೆ ತಂತ್ರಶಾಸ್ತ್ರವನ್ನು ಸಂಪರ್ಕಿಸುತ್ತದೆ.[೯೫]

ತಾಂತ್ರಿಕ ಆಚರಣೆಗಳು ಹಾಗೂ ಅಧ್ಯಯನಗಳ ಸಮಯದಲ್ಲಿ, ಜಿಜ್ಞಾಸುವಿಗೆ ಧ್ಯಾನದ ಮತ್ತಷ್ಟು ವಿಧಾನಗಳ ಬಗ್ಗೆ, ನಿರ್ದಿಷ್ಟವಾಗಿ ಚಕ್ರ ಧ್ಯಾನದ ಬಗ್ಗೆ ಬೋಧಿಸಲಾಗುತ್ತದೆ. ಈ ಬಗೆಯ ಧ್ಯಾನದ ಬೋಧನೆಯು ಗೊತ್ತಿರುವವರಿಗೆ ಹಾಗೂ ತಂತ್ರಶಾಸ್ತ್ರವನ್ನು ಆಚರಿಸುವವರಿಗೆ ಹಾಗೂ ಯೋಗಿಗಳಿಗೆ ಹೋಲಿಸಿದರೆ ಸೀಮಿತವಾಗಿರುತ್ತದೆ, ಆದರೆ ಜಿಜ್ಞಾಸುವಿನ ಈ ಮುಂಚಿನ ಧ್ಯಾನದ ಚರ್ಯೆಗಳಿಗಿಂತ ವಿಷದವಾಗಿರುತ್ತದೆ. ಇದನ್ನು ದೇವತೆಯನ್ನು ಧ್ಯಾನ ಹಾಗೂ ಆರಾಧನೆಯ ಉದ್ದೇಶದಿಂದ "ಹೃದಯ"ದೊಳಗಿರುವ ಚಕ್ರದಲ್ಲಿ ಪ್ರತಿಷ್ಠಾಪಿಸಲು ಬಳಸುವ ಕುಂಡಲಿನಿ ಯೋಗದ ಒಂದು ವಿಧವೆಂದು ಪರಿಗಣಿಸುತ್ತಾರೆ.[೯೬]

ಯೋಗದ ಗುರಿ ಬದಲಾಯಿಸಿ

ಯೋಗದ ಗುರಿಗಳು ಆರೋಗ್ಯದ ಸುಧಾರಣೆಯಿಂದ ಹಿಡಿದು ಮೋಕ್ಷ ವನ್ನು ಸಾಧಿಸುವ ಉದ್ದೇಶಗಳವರೆಗೆ ಬೇರೆ ಬೇರೆಯಾಗಿರಬಹುದಾಗಿದೆ.[೪೭] ಜೈನಧರ್ಮ ಹಾಗೂ ಅದ್ವೈತ ವೇದಾಂತ ಮತ್ತು ಶೈವಧರ್ಮಗಳ ಅದ್ವೈತ ಪಂಥಗಳಲ್ಲಿ, ಯೋಗದ ಗುರಿಯು ಲೌಕಿಕ ಯಾತನೆ ಮತ್ತು ಹುಟ್ಟುಸಾವುಗಳ ಆವರ್ತನೆ(ಸಂಸಾರ)ಗಳಿಂದ ಬಿಡುಗಡೆಯಾದ ಮೋಕ್ಷವಾಗಿರುತ್ತದೆ, ಆ ಸಂದರ್ಭದಲ್ಲಿ ಪರಮಶ್ರೇಷ್ಠ ಬ್ರಾಹ್ಮಣನಾಗಿ ಗುರುತಿಸಿಕೊಳ್ಳುವ ಸಾಕ್ಷಾತ್ಕಾರ ಸಿಗುತ್ತದೆ. ಮಹಾಭಾರತದಲ್ಲಿ ಬ್ರಾಹ್ಮಣನಾಗಿ ಬ್ರಹ್ಮನ ವಿಶ್ವಕ್ಕೆ ಪ್ರವೇಶಿಸುವುದು ಅಥವಾ ಎಲ್ಲಾ ವಸ್ತುಗಳಲ್ಲಿ ವ್ಯಾಪಿಸಿರುವ ಬ್ರಹ್ಮ ಅಥವಾ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವುದು ಎಂಬುದಾಗಿ ಯೋಗದ ಗುರಿಯನ್ನು ಅನೇಕ ರೀತಿಗಳಲ್ಲಿ ವಿವರಿಸಲಾಗಿದೆ.[೯೭] ವೈಷ್ಣವ ಧರ್ಮಭಕ್ತಿಪಂಥಗಳಲ್ಲಿ, ಸ್ವಯಂ ಭಗವಾನ ರಿಗೆ ಭಕ್ತಿ ಅಥವಾ ಸೇವೆ ಅರ್ಪಿಸುವುದೇ ಯೋಗ ಪ್ರಕ್ರಿಯೆಯ ಪರಮೋತ್ಕೃಷ್ಠ ಗುರಿಯಾಗಿದ್ದು, ಈ ಗುರಿಯು ವಿಷ್ಣುವಿನೊಂದಿಗೆ ಪಾರಮಾರ್ಥಿಕ ಸಂಬಂಧ ಸಾಧಿಸಿ ನಲಿಯುವುದಾಗಿರುತ್ತದೆ.[೯೮]

 
ಯೋಗಾಭ್ಯಾಸ

ದೇಹ ಮತ್ತು ಮನಸ್ಸುಗಳ, ಆತ್ಮ ಮತ್ತು ಪರಮಾತ್ಮರ ಕೂದುವಿಕೆಯೆ-ಸೇರುವಿಕೆಯೆ ಯೋಗ. ಯೋಗವು ದೈಹಿಕ-ಮಾನಸಿಕ-ಆಧ್ಯಾತ್ಮಿಕ ಅಬ್ಯಾಸ.ಯೋಗಕ್ಕೆ ಯಾವುದೇ ಧರ್ಮ-ಜಾತಿ-ವರ್ಣ--ಇತ್ಯಾದಿಗಳ ಬೇಧವಿಲ್ಲ.ಆಸಕ್ತಿ ಇರುವ ಯಾರೂ ಅಭ್ಯಸಿಸಬಹುದು.

 
ಯೋಗದ ಪಿತಾಮಹ

ಭಾರತ ಸನಾತನ ಸಂಸ್ಕೃತಿಯಲ್ಲಿ ಸೂತ್ರ-ಆಗಮಗಳಿಗೆ ತನ್ನದೇ ಆದ ಇತಿಹಾಸವಿದೆ. ಅತಿ ಮುಖ್ಯವಾದ ಸೂತ್ರಗಳಲ್ಲಿ ಪತಂಜಲಿ ಮಹರ್ಷಿಯ "ಯೋಗ ಸೂತ್ರ"ವೂ ಒಂದು." ಪತಂಜಲಿ ಮಹರ್ಷಿಯನ್ನು ಯೋಗದ

 
ಆಸನಗಳು

ಪಿತಾಮಹ ಎಂದು ಕರೆಯುತ್ತಾರೆ,ಹಾಗು ಪತಂಜಲಿಯನ್ನು ಭಕ್ತಿಯಿಂದ ಈ ಶ್ಲೋಕದೊಂದಿಗೆ ಪ್ರಾರ್ಥಿಸುತ್ತಾರೆ.. ಯೋಗಪಿತಾಮಹ ಪತಂಜಲಿ.

'ಯೋಗೇನ ಚಿತ್ತಸ್ಯ ಪದೇನ ವಾಚಾಮ್

ಮಲಂ ಶರೀರಸ್ಯಚ ವೈದ್ಯಕೇನ

ಯೋಪಾಕರೋತ್ತಮ್ ಪ್ರವರಮ್ ಮುನೀನಾಮ್

ಪತಂಜಲಿಮ್ ಪ್ರಾಂಜಲಿರಾನತೋಸ್ಮಿ.

ಯೋಗದ ಬಗೆಗಿನ ಶ್ಲೋಕಗಳು.

 1. ಯೋಗ: ಚಿತ್ತವೃತ್ತಿ ನಿರೋಧಃ-ಅಂದರೆ ಮನಸ್ಸಿನಲ್ಲಾಗುವ ಚಿತ್ತವೃತ್ತಿಗಳನ್ನು ನಿರೋಧಿಸುತ್ತದೆ.
 2. ಯೋಗ: ಕರ್ಮಸು ಕೌಶಲಮ್.-ಅಂದರೆ ಯೋಗದಿಂದಾಗಿ ಮಾಡುವ ಕೆಲಸ ಕೌಶಲಗಳಿಂದ ಕೂಡಿರುತ್ತದೆ.
 3. ಭವತಾಪೇನ ತಪ್ತಾನಾಮ್ ಯೋಗೋ ಹಿ ಪರಮೌಷಧಮ್.-ಅಂದರೆ ಭೂಮಿಮೇಲೆ ಜನ್ಮತಾಳಿ ಎದುರಾಗುವ ಎಲ್ಲ ಕಷ್ಟ-ನಷ್ಟಗಳಿಗೆ,ನೋವುಗಳಿಗೆ,ದುಗುಡ-ದುಮ್ಮಾನಗಳಿಗೆ ಈ ಸೃಷ್ಟಿಯಲ್ಲಿ ಸಿಗುವ ಏಕೈಕ ಔಷಧ ಕೇವಲ ಯೋಗ ಮಾತ್ರ.

ನೋಡಿ ಬದಲಾಯಿಸಿ

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಟಿಪ್ಪಣಿಗಳು ಬದಲಾಯಿಸಿ

ಮೂಲಗಳು ಬದಲಾಯಿಸಿ

 • Apte, Vaman Shivram (1965). The Practical Sanskrit Dictionary. Delhi: Motilal Banarsidass Publishers. ISBN 81-208-0567-4. (ನಾಲ್ಕನೇ ಪರಿಷ್ಕೃತ & ವಿಸ್ತರಿಸಿದ ಆವೃತ್ತಿ).
 • ಚಾಂಗ್, G.C.C. (1993). ಟಿಬೆಟಿಯನ್‌ ಯೋಗ. ನ್ಯೂಜೆರ್ಸಿ: ಕೆರೋಲ್‌ ಪಬ್ಲಿಷಿಂಗ್ ಗ್ರೂಪ್. ISBN 0-8065-1453-1
 • ಚಾಪಲ್‌, ಕ್ರಿಸ್ಟೋಫರ್‌.(1993) ನಾನ್‌ವಯೊಲೆನ್ಸ್‌ ಟು ಅನಿಮಲ್ಸ್‌‌, ಅರ್ಥ್‌, ಅಂಡ್‌ ಸೆಲ್ಫ್ ಇನ್‌ ಏಷ್ಯನ್‌ ಟ್ರೆಡಿಷನ್ಸ್. ನ್ಯೂಯಾರ್ಕ್‌: SUNY ಪ್ರೆಸ್, 1993 p. 7
 • ಫಿಯೆರ್‌ಸ್ಟೀನ್‌‌, ಜಾರ್ಜ್. ದ ಷಂಬಾಲಾ ಗೈಡ್‌ ಟು ಯೋಗ. 1ನೇ ed. ಬಾಸ್ಟನ್‌‌ & ಲಂಡನ್‌: ಷಂಬಾಲಾ ಪಬ್ಲಿಕೇಷನ್ಸ್‌ 1996.
 • Flood, Gavin (1996). An Introduction to Hinduism. Cambridge: Cambridge University Press. ISBN 0-521-43878-0.
 • Gambhirananda, Swami (1998). Madhusudana Sarasvati Bhagavad_Gita: With the annotation Gūḍhārtha Dīpikā. Calcutta: Advaita Ashrama Publication Department. ISBN 81-7505-194-9.
 • Jacobsen, Knut A. (Editor) (2005). Theory And Practice of Yoga: Essays in Honour of Gerald James Larson. Brill Academic Publishers. ISBN 9004147578. {{cite book}}: |first= has generic name (help); Unknown parameter |coauthors= ignored (|author= suggested) (help) (ಧರ್ಮಗಳ ಇತಿಹಾಸದ ಅಧ್ಯಯನಗಳು/ಸ್ಟಡೀಸ್‌ ಇನ್‌ ದ ಹಿಸ್ಟರಿ ಆಫ್‌ ರಿಲಿಜನ್ಸ್, 110)
 • Müller, Max (1899). Six Systems of Indian Philosophy; Samkhya and Yoga, Naya and Vaiseshika. Calcutta: Susil Gupta (India) Ltd. ISBN 0-7661-4296-5. ಮರುಮುದ್ರಿತ ಆವೃತ್ತಿ; ದ ಸಿಕ್ಸ್‌ ಸಿಸ್ಟಂಸ್‌ ಆಫ್‌ ಇಂಡಿಯನ್‌ ಫಿಲಾಸಫಿ ಎಂಬ ಶೀರ್ಷಿಕೆಯಲ್ಲಿ ಮೊದಲು ಪ್ರಕಟವಾಗಿತ್ತು.
 • Possehl, Gregory (2003). The Indus Civilization: A Contemporary Perspective. AltaMira Press. ISBN 978-0759101722.
 • Radhakrishnan, S. (1967). A Sourcebook in Indian Philosophy. Princeton. ISBN 0-691-01958-4. {{cite book}}: Unknown parameter |coauthors= ignored (|author= suggested) (help)
 • Taimni, I. K. (1961). The Science of Yoga. Adyar, India: The Theosophical Publishing House. ISBN 81-7059-212-7.

ವರ್ತಿಂಗ್‌ ಟನ್‌ , ವಿವಿಯನ್‌ ಎ ಹಿಸ್ಟರಿ ಆಫ್‌ ಯೋಗ 1982 ರೂಟ್‌ಲೆಡ್ಜ್‌ ISBN 0-7100-9258-X

 • Zimmer, Heinrich (1951). Philosophies of India. New York, New York: Princeton University Press. ISBN 0-691-01758-1. ಬಾಲಿಂಗೆನ್‌ ಸರಣಿ XXVI; ಜೋಸೆಫ್‌ ಕ್ಯಾಂಬೆಲ್‌ರಿಂದ ಸಂಪಾದಿತ.
 • ಝೈಡೆನ್‌ಬಾಸ್‌, ರಾಬರ್ಟ್. ಜೈನಿಸಂ ಟುಡೇ ಅಂಡ್‌ ಇಟ್ಸ್‌‌ ಫ್ಯೂಚರ್‌. ಮುಂಚೆನ್‌ : ಮನ್ಯ ವರ್ಲಾಗ್, 2006. p. 66

ಹೆಚ್ಚಿನ ಓದಿಗಾಗಿ ಬದಲಾಯಿಸಿ

 • Patañjali (2001). Yoga Sutras of Patañjali. Studio 34 Yoga Healing Arts. Archived from the original on 2011-08-25. Retrieved 2009-12-29.
 • Chatterjee, Satischandra (1984). An Introduction to Indian Philosophy (Eighth Reprint ed.). Calcutta: University of Calcutta. {{cite book}}: Unknown parameter |coauthors= ignored (|author= suggested) (help)
 • ಡೊನೆಟೆಲ್ಲೆ, ರೆಬೆಕ್ಕಾ J. ಹೆಲ್ತ್‌ : ದ ಬೇಸಿಕ್ಸ್‌‌. 6ನೇ ed. ಸ್ಯಾನ್‌ ಫ್ರಾನ್ಸಿಸ್ಕೋ : ಪಿಯೆರ್ಸನ್‌ ಎಜುಕೇಷನ್‌, Inc. 2005.
 • Harinanda, Swami. Yoga and The Portal. Jai Dee Marketing. ISBN 0978142950.
 • Keay, John (2000). India: A History. New York: Grove Press. ISBN 0-8021-3797-0.
 • ಮಾರ್ಷಲ್‌, ಜಾನ್‌ (1931). ಮೊಹೆಂಜೋದಾರೋ ಅಂಡ್‌ ದ ಇಂಡಸ್‌ ಸಿವಿಲೈಜೇಷನ್‌ : ಬೀಯಿಂಗ್‌ ಆನ್‌ ಅಫಿಷಿಯಲ್‌ ಅಕೌಂಟ್‌ ಆಫ್‌ ಆರ್ಕೆಯೋಲಾಜಿಕಲ್‌ ಎಕ್ಸ್‌ಕವೇಷನ್ಸ್‌ ಅಟ್‌ ಮೊಹೆಂಜೋದಾರೋ ಕ್ಯಾರೀಡ್‌ ಔಟ್‌ ಬೈ ದ ಗವರ್ನಮೆಂಟ್‌ ಆಫ್‌ ಇಂಡಿಯಾ ಬಿಟ್ವೀನ್‌ ದ ಇಯರ್ಸ್‌ 1922-27 . ದೆಹಲಿ: ಇಂಡೋಲಾಜಿಕಲ್‌ ಬುಕ್‌ ಹೌಸ್‌.
 • Michaels, Axel (2004). Hinduism: Past and Present. Princeton, New Jersey: Princeton University Press. ISBN 0-691-08953-1.
 • ಮಿತ್ರ, ಧರ್ಮ Sri. ಆಸನಾಸ್‌‌: 608 ಯೋಗಾ ಪೋಸಸ್. 1ನೇ ed. ಕ್ಯಾಲಿಫೋರ್ನಿಯಾ : ನ್ಯೂವರ್ಲ್ಡ್‌ ಲೈಬ್ರರಿ 2003.
 • ಸರಸ್ವತಿ, ಸ್ವಾಮಿ ಸತ್ಯಾನಂದ. ನವೆಂಬರ್‌ 2002 (12ನೇ ಆವೃತ್ತಿ). "ಆಸನ ಪ್ರಾಣಾಯಾಮ ಮುದ್ರಾ ಭಂದ" ISBN 81-86336-14-1
 • ಉಷರಬುದ್ಧ್‌, ಆರ್ಯ ಪಂಡಿತ್. ಫಿಲಾಸಫಿ ಆಫ್‌ ಹಠ ಯೋಗ. 2ನೇ ed. ಪೆನ್ಸಿಲ್‌ವೇನಿಯಾ : ಹಿಮಾಲಯನ್‌ ಇನ್‌ಸ್ಟಿಟ್ಯೂಟ್‌ ಪ್ರೆಸ್‌ 1977, 1985.
 • Vivekananda, Swami (1994). Raja Yoga. Calcutta: Advaita Ashrama Publication Department. ISBN 81-85301-16-6. 21ನೇ ಮರು ಮುದ್ರಿತ ಆವೃತ್ತಿ.
 • Weber, Hans-Jörg L. (2007). Yogalehrende in Deutschland: eine humangeographische Studie unter besonderer Berücksichtigung von netzwerktheoretischen, bildungs- und religionsgeographischen Aspekten. Heidelberg: University of Heidelberg. http://archiv.ub.uni-heidelberg.de/savifadok/volltexte/2008/121/

ಹೊರಗಿನ ಕೊಂಡಿಗಳು ಬದಲಾಯಿಸಿ

 • Yoga links ಓಪನ್ ಡೈರೆಕ್ಟರಿ ಪ್ರಾಜೆಕ್ಟ್

ಉಲ್ಲೇಖಗಳು ಬದಲಾಯಿಸಿ

 1. Davids, Thomas William Rhys; Stede, William (1993). Pali-English Dictionary. ISBN 9788120811447.
 2. "ಯೋಗವು ಐದು ಪ್ರಧಾನ ಅರ್ಥಗಳನ್ನು ಹೊಂದಿದೆ : 1) ಗುರಿಯನ್ನು ಸಾಧಿಸಲು ಆಚರಿಸುವ ವಿಧಾನವಾಗಿ ಬಳಸುವ ಯೋಗ ; 2) ದೇಹ ಮತ್ತು ಮನಸ್ಸನ್ನು ನಿಯಂತ್ರಿಸಲು ತಂತ್ರವಾಗಿ ಬಳಸುವ ಯೋಗ; 3) ತತ್ವಶಾಸ್ತ್ರದ ವ್ಯವಸ್ಥೆಗಳ ಅಥವಾ ಪಂಥಗಳ ಹೆಸರಾಗಿ ಬಳಸುವ ಯೋಗ (darśana ); 4) ಯೋಗದ ನಿರ್ದಿಷ್ಟ ಸಂಪ್ರದಾಯ/ಆಚರಣೆಗಳ ವಿಶಿಷ್ಟತೆಗಳನ್ನು ಸೂಚಿಸುವ ಹಠ-, ಮಂತ್ರ-, ಮತ್ತು ಲಯ- ಗಳಂತಹಾ ಇತರ ಪದಗಳೊಡನೆ ಸಂಪರ್ಕಿಸಲು ಬಳಸುವ ಪದವಾಗಿ ಯೋಗ; 5) ಯೋಗ ಆಚರಣೆಯ ಗುರಿಯಾಗಿರುವ ಯೋಗ." ಜಾಕೊಬ್‌ಸೆನ್‌, p. 4.
 3. ಮೋನಿಯರ್‌-ವಿಲಿಯಮ್ಸ್‌ "ಯೋಗ" ಪದಕ್ಕೆ ನೀಡಿರುವ ವರ್ಣನೆಗಳಲ್ಲಿ "ಎರಡು ಸಾಂಖ್ಯ ವ್ಯವಸ್ಥೆಗಳಲ್ಲಿ ಇದು ಎರಡನೆಯದು" ಮತ್ತು "ಅಮೂರ್ತತೆಯನ್ನು ಒಂದು ವ್ಯವಸ್ಥೆಯಾಗಿ ಆಚರಿಸುವಿಕೆ (ಪತಂಜಲಿಯವರು ಬೋಧಿಸಿದ ಹಾಗೆ ಮತ್ತು ಯೋಗ ಸಿದ್ಧಾಂತವೆನ್ನುವ ಹಾಗೆ)" ಗಳನ್ನೂ ಸೇರಿಸಿದ್ದಾರೆ.
 4. ಪಂಡಿತ್‌ ಉಷರ್‌ಬುದ್ಧ್‌ ಆರ್ಯ (1985). ದ ಫಿಲಾಸಫಿ ಆಫ್‌ ಹಠ ಯೋಗ. ಹಿಮಾಲಯನ್‌ ಇನ್‌ಸ್ಟಿಟ್ಯೂಟ್‌ ಪ್ರೆಸ್‌; 2ನೇ ed.
 5. ಶ್ರೀ ಸ್ವಾಮಿ ರಾಮ (2008) ದ ರಾಯಲ್‌ ಪಾತ್‌: ಪ್ರಾಕ್ಟಿಕಲ್‌ ಲೆಸನ್ಸ್‌ ಆನ್‌ ಯೋಗ ಹಿಮಾಲಯನ್‌ ಇನ್‌ಸ್ಟಿಟ್ಯೂಟ್‌ ಪ್ರೆಸ್‌ ; ಹೊಸ Ed ಆವೃತ್ತಿ.
 6. ಸ್ವಾಮಿ ಪ್ರಭವಾನಂದ (ಭಾಷಾಂತರಕಾರ), ಕ್ರಿಸ್ಟೋಫರ್‌ ಇಷರ್‌ವುಡ್‌ (ಭಾಷಾಂತರಕಾರ), ಪತಂಜಲಿ (ಲೇಖಕ)). (1996). ವೇದಾಂತ ಪ್ರೆಸ್‌; ಹೌ ಟು ನೋ ಗಾಡ್‌ : ದ ಯೋಗ ಆಫ್ರಾಸಿಮ್ಸ್‌ ಆಫ್‌ ಪತಂಜಲಿ. ಹೊಸ Ed ಆವೃತ್ತಿ.
 7. ಜಾಕೊಬ್‌ಸೆನ್‌, p. 4.
 8. "ಯೋಗ" ಪದದ 38 ಅರ್ಥಗಳ ಪಟ್ಟಿಗಾಗಿ ನೋಡಿ : ಆಪ್ಟೆ, p. 788.
 9. "ನಿಯಂತ್ರಿಸುವ," "ಐಕ್ಯವಾಗು",ಅಥವಾ "ಒಗ್ಗಟ್ಟಾಗು" ಎಂಬ ಅರ್ಥಗಳನ್ನು ಹೊಂದಿರುವ ಸಂಸ್ಕೃತ ಮೂಲ "ಯುಜ್‌"ನಿಂದ ವ್ಯುತ್ಪನ್ನಗೊಂಡಿರುವ "ಯೋಗ" ಪದಕ್ಕೆ ನೋಡಿ: ಫ್ಲಡ್‌ (1996), p. 94.
 10. ಅರ್ಥಗಳಿಗಾಗಿ 1. ಸೇರಿಕೊಳ್ಳುವುದು, ಒಗ್ಗಟ್ಟಾಗುವುದು, ಮತ್ತು 2., ಒಕ್ಕೂಟ, ಸಂಧಿ, ಸಂಯೋಜನೆ ನೋಡಿ : ಆಪ್ಟೆ, p. 788.
 11. "ಪದ್ಧತಿ, ವಿಧಾನ, ಮಾರ್ಗ,"ಗಳಿಗಾಗಿ ನೋಡಿ : ಆಪ್ಟೆ, p. 788, ನಿರೂಪಣೆ 5.
 12. "ಸಾಧಾರಣವಾಗಿ ಸಮಯೋಚಿತ ಸಾಧನವಾಗಿ," ಇದಕ್ಕೆ ನೋಡಿ : ಆಪ್ಟೆ, p. 788, ನಿರೂಪಣೆ 13.
 13. ಅಮೇರಿಕನ್‌ ಹೆರಿಟೇಜ್‌ ಡಿಕ್ಷನರಿ: "ಯೋಗಿ, ಒನ್‌ ಹೂ ಪ್ರಾಕ್ಟೀಸಸ್‌ ಯೋಗ." ವೆಬ್‌ಸ್ಟರ್ಸ್‌ : "ಯೋಗಿ, ಎ ಫಾಲೋಯರ್‌ ಆಫ್‌ ದ ಯೋಗ ಫಿಲಾಸಫಿ; ಆನ್‌ ಆಸ್ಸೆಟಿಕ್."
 14. ಫ್ಲಡ್‌, p. 94.
 15. ಪಾಸ್ಸೆಲ್‌ (2003), pp. 144-145
 16. ಜೋನಾಥನ್‌ ಮಾರ್ಕ್‌ ಕೆನಾಯರ್‌ರ ಅರೌಂಡ್‌ ದ ಇಂಡಸ್‌ ಇನ್‌ 90 ಸ್ಲೈಡ್ಸ್‌.
 17. Werner, Karel (1998). Yoga and Indian Philosophy. Motilal Banarsidass Publ. p. 103. ISBN 9788120816091.
 18. Zimmer, Heinrich (1972). Myths and Symbols in Indian Art and Civilization. Princeton University Press, New Ed edition. p. 168. ISBN 978-0691017785.
 19. McEvilley, Thomas (2002). The shape of ancient thought. Allworth Communications. pp. 219–220. ISBN 9781581152036.
 20. ಫ್ಲಡ್, pp. 28-29.
 21. Samuel, Geoffrey (2008). The Origins of Yoga and Tantra. Cambridge University Press. p. 4. ISBN 9780521695343.
 22. ಫ್ಲಡ್‌, pp. 94–95.
 23. name="ReferenceA">ಅಲೆಕ್ಸಾಂಡರ್‌ ವಿನ್ನೆ, ದ ಆರಿಜಿನ್‌ ಆಫ್‌ ಬುದ್ಧಿಸ್ಟ್‌ ಮೆಡಿಟೇಷನ್‌. ರೂಟ್‌ಲೆಡ್ಜ್‌ 2007, ಪುಟ 51.
 24. ಅಲೆಕ್ಸಾಂಡರ್‌ ವಿನ್ನೆ, ದ ಆರಿಜಿನ್‌ ಆಫ್‌ ಬುದ್ಧಿಸ್ಟ್‌ ಮೆಡಿಟೇಷನ್‌. ರೂಟ್‌ಲೆಡ್ಜ್‌ 2007, ಪುಟ 56.
 25. name="ReferenceA"
 26. ರಿಚರ್ಡ್ ಗಾಂಬ್ರಿಚ್‌, "ಥೇರವಾದ ಬುದ್ಧಿಸಂ : ಎ ಸೋಷಿಯಲ್‌ ಹಿಸ್ಟರಿ ಫ್ರಂ ಆನ್‌ಷಿಯೆಂಟ್‌ ಬೆನಾರಸ್‌ ಟು ಮಾಡರ್ನ್ ಕೊಲೊಂಬೋ." ರೂಟ್‌ಲೆಡ್ಜ್‌ ಮತ್ತು ಕೆಗನ್‌ ಪಾಲ್, 1988, ಪುಟ 44.
 27. ಅಲೆಕ್ಸಾಂಡರ್‌ ವಿನ್ನೆ, ದ ಆರಿಜಿನ್‌ ಆಫ್‌ ಬುದ್ಧಿಸ್ಟ್‌ ಮೆಡಿಟೇಷನ್‌. ರೂಟ್‌ಲೆಡ್ಜ್‌ 2007, ಪುಟ 50.
 28. ಫ್ಲಡ್‌, p. 95.
 29. [೧].
 30. ಹಾಜಿಮೆ ನಕಮುರಾ'ರ ಎ ಹಿಸ್ಟರಿ ಆಫ್‌ ಅರ್ಲಿ ವೇದಾಂತ ಫಿಲಾಸಫಿ , ಫಿಲಾಸಫಿ ಈಸ್ಟ್‌ ಅಂಡ್‌ ವೆಸ್ಟ್‌,ನ ಅರ್‌ವಿಂದ್‌ ಶರ್ಮಾರ ವಿಮರ್ಶೆ, Vol. 37, No. 3 (Jul., 1987), pp. 325-331.
 31. ಥಾಮಸ್‌‌ ವಿಲಿಯಂ ರಿಸ್‌ ಡೇವಿಡ್ಸ್‌, ವಿಲಿಯಂ ಸ್ಟೆಡೆ, "ಪಾಲಿ-ಆಂಗ್ಲ ನಿಘಂಟು." ಮೋತಿಲಾಲ್‌ ಬನಾರ್ಸಿದಾಸ್‌ Publ.ನಿಂದ ಮರುಮುದ್ರಿತ, 1993, ಪುಟ 558:
 32. Davids, Thomas William Rhys; Stede, William (1993). Pali-English Dictionary. ISBN 9788120811447.
 33. ಗಿಲ್‌ ಫ್ರಾನ್ಸ್‌ಡಲ್‌, "ದ ಧಮ್ಮಪಾದ," ಷಂಬಾಲಾ, 2005, ಪುಟಗಳು 56, 130.
 34. pp. 453–487.
 35. ಚಟರ್ಜಿ ಮತ್ತು ದತ್ತ, p. 43.
 36. ೩೬.೦ ೩೬.೧ ಚಟರ್ಜಿ ಮತ್ತು ದತ್ತ , p. 43.
 37. ರಾಧಾಕೃಷ್ಣನ್‌ ಮತ್ತು ಮೂರ್‌/ರೆ, p. 453.
 38. ಮುಲ್ಲರ್‌ (1899), ಅಧ್ಯಾಯ 7, "ಯೋಗ ಫಿಲಾಸಫಿ", p. 104.
 39. ಝಿಮ್ಮರ್ (1951), p. 280.
 40. ಚಟರ್ಜಿ ಮತ್ತು ದತ್ತ , p. 42.
 41. ಫ್ಲಡ್‌ (1996), pp. 96–98.
 42. Patañjali (2001-02-01). "Yoga Sutras of Patañjali". Studio 34 Yoga Healing Arts. Archived from the original (etext) on 2011-08-25. Retrieved 2008-11-24.
 43. ತೈಮಿನಿ, p. 6.
 44. ಬಾರ್ಬರಾ ಸ್ಟೋಲರ್‌ ಮಿಲ್ಲರ್‌, ಯೋಗ : ಡಿಸಿಪ್ಲೀನ್‌ ಆಫ್‌ ಫ್ರೀಡಂ : ದ ಯೋಗಸೂತ್ರ ಅಟ್ರಿಬ್ಯೂಟೆಡ್‌ ಟು ಪತಂಜಲಿ ; ವ್ಯಾಖ್ಯಾನ, ಪೀಠಿಕೆ ಮತ್ತು ಮುಖ್ಯ ಸೂಚಿಪದಗಳ ಶಬ್ದಾವಳಿಯೊಡನೆ ಗ್ರಂಥದ/ಪಠ್ಯದ ಭಾಷಾಂತರ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮುದ್ರಣಾಲಯ, 1996, ಪುಟ 9.
 45. ವಿವೇಕಾನಂದ, p. 115.
 46. ಸ್ಟೀಫನ್‌ H. ಫಿಲಿಪ್ಸ್‌, ಕ್ಲಾಸಿಕಲ್‌ ಇಂಡಿಯನ್‌ ಮೆಟಾಫಿಸಿಕ್ಸ್‌: ರೆಫ್ಯುಟೇಶನ್ಸ್‌ ಆಫ್‌ ರಿಯಲಿಸಂ ಅಂಡ್‌ ದ ಎಮರ್ಜೆನ್ಸ್‌ ಆಫ್‌ "ನ್ಯೂ ಲಾಜಿಕ್‌". ಓಪನ್‌ ಕೋರ್ಟ್‌ ಪಬ್ಲಿಷಿಂಗ್, 1995., ಪುಟಗಳು 12–13.
 47. ೪೭.೦ ೪೭.೧ ಜಾಕೊಬ್‌ಸೆನ್‌, p. 10.
 48. "...ಸಾಂಪ್ರದಾಯಿಕ ಯೋಗದ ಆಚರಣೆಯ ಬಗ್ಗೆ ಸಂಪೂರ್ಣ ಅಧ್ಯಾಯವನ್ನೇ(ch. 6) ಮೀಸಲಿಟ್ಟಿರುವ ಭಗವದ್ಗೀತೆ. ಗೀತೆಯು ಯೋಗದ ಪ್ರಸಿದ್ಧ ಮೂರು ವಿಧಗಳಾದ, 'ತಿಳುವಳಿಕೆ' (ಜ್ಞಾನ), 'ಕಾರ್ಯ' (ಕರ್ಮ), ಮತ್ತು 'ಪ್ರೀತಿ' (ಭಕ್ತಿ)"ಗಳನ್ನು ಕೂಡ ಪರಿಚಯಿಸುತ್ತದೆ." ಫ್ಲಡ್‌, p. 96.
 49. ಗಂಭೀರಾನಂದ, p. 16.
 50. ಜಾಕೊಬ್‌ಸೆನ್‌, p. 46.
 51. ಲಿವಿಂಗ್‌ ಯೋಗ : ಕ್ರಿಯೇಟಿಂಗ್‌ ಎ ಲೈಫ್‌ ಪ್ರಾಕ್ಟೀಸ್‌e - ಪುಟ 42 ಕ್ರಿಸ್ಟಿ ಟರ್ಲಿಂಗ್‌ಟನ್‌ರಿಂದ (ಪುಟ 42)
 52. ಗೈಡಿಂಗ್‌ ಯೋಗಾಸ್‌ ಲೈಟ್‌ : ಯೋಗ ಲೆಸನ್ಸ್‌ ಫಾರ್‌ ಯೋಗ ಟೀಚರ್ಸ್‌ - ಪುಟ 10 ನ್ಯಾನ್ಸಿ ಗರ್ಸ್ಟೇನ್‌ರಿಂದ
 53. ಮೈಂಡ್‌ಫುಲ್‌ನೆಸ್‌ ಯೋಗ : ದ ಅವೇಕನ್‌ಡ್‌ ಯೂನಿಯನ್‌ ಆಫ್‌ ಬ್ರೆತ್‌ ಬಾಡಿ & ಮೈಂಡ್‌ - ಪುಟ 6 ಫ್ರಾಂಕ್‌ ಜ್ಯೂಡ್‌ ಬಾಕ್ಕಿಯೋರಿಂದ
 54. ಹಠಯೋಗ : ಇಟ್ಸ್‌ ಕಾಂಟೆಕ್ಸ್ಟ್‌, ಥಿಯರಿ ಅಂಡ್‌ ಪ್ರಾಕ್ಟೀಸ್‌ ಮೈಕೆಲ್‌ ಬರ್ಲೆರಿಂದ (ಪುಟ 16)
 55. ಫಿಯೆರ್‌ಸ್ಟೀನ್‌‌, ಜಾರ್ಜ್. (1996). ದ ಷಂಬಾಲಾ ಗೈಡ್‌ ಟು ಯೋಗ . ಬಾಸ್ಟನ್‌‌ & ಲಂಡನ್‌: ಷಂಬಾಲಾ ಪಬ್ಲಿಕೇಷನ್ಸ್‌, Inc.
 56. ೫೬.೦ ೫೬.೧ ಝೆನ್‌ ಬುದ್ಧಿಸಂ: ಎ ಹಿಸ್ಟರಿ (ಇಂಡಿಯಾ ಅಂಡ್‌ ಚೀನಾ) ಹೇನ್‌ರಿಚ್‌ ಡುಮೌಲಿನ್‌, ಜೇಮ್ಸ್‌ W. ಹೇಯ್ಸಿಗ್‌, ಪಾಲ್‌ F. ನಿಟ್ಟರ್‌ ಇವರುಗಳಿಂದ (ಪುಟ 22)
 57. ಬಾರ್ಬರಾ ಸ್ಟೋಲರ್‌ ಮಿಲ್ಲರ್‌, ಯೋಗ : ಡಿಸಿಪ್ಲೀನ್‌ ಆಫ್‌ ಫ್ರೀಡಂ : ದ ಯೋಗಸೂತ್ರ ಅಟ್ರಿಬ್ಯೂಟೆಡ್‌ ಟು ಪತಂಜಲಿ ; ವ್ಯಾಖ್ಯಾನ, ಪೀಠಿಕೆ ಮತ್ತು ಮುಖ್ಯ ಸೂಚಿಪದಗಳ ಶಬ್ದಾವಳಿಯೊಡನೆ ಗ್ರಂಥದ/ಪಠ್ಯದ ಭಾಷಾಂತರ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮುದ್ರಣಾಲಯ, 1996, ಪುಟ 8.
 58. ಅಲೆಕ್ಸಾಂಡರ್‌ ವಿನ್ನೆ, ದ ಆರಿಜಿನ್‌ ಆಫ್‌ ಬುದ್ಧಿಸ್ಟ್‌ ಮೆಡಿಟೇಷನ್‌. ರೂಟ್‌ಲೆಡ್ಜ್‌, 2007, ಪುಟ 73.
 59. ಅಲೆಕ್ಸಾಂಡರ್‌ ವಿನ್ನೆ, ದ ಆರಿಜಿನ್‌ ಆಫ್‌ ಬುದ್ಧಿಸ್ಟ್‌ ಮೆಡಿಟೇಷನ್‌. ರೂಟ್‌ಲೆಡ್ಜ್‌, 2007, ಪುಟ 105.
 60. ಅಲೆಕ್ಸಾಂಡರ್‌ ವಿನ್ನೆ, ದ ಆರಿಜಿನ್‌ ಆಫ್‌ ಬುದ್ಧಿಸ್ಟ್‌ ಮೆಡಿಟೇಷನ್‌. ರೂಟ್‌ಲೆಡ್ಜ್‌ 2007, ಪುಟ 96.
 61. ಅಲೆಕ್ಸಾಂಡರ್‌ ವಿನ್ನೆ, ದ ಆರಿಜಿನ್‌ ಆಫ್‌ ಬುದ್ಧಿಸ್ಟ್‌ ಮೆಡಿಟೇಷನ್‌. ರೂಟ್‌ಲೆಡ್ಜ್‌ 2007, ಪುಟ 109.
 62. ಡಾನ್‌ ಲುಸ್ಥಾಸ್‌. ಬುದ್ಧಿಸ್ಟ್‌ ಫಿನೊಮೆನಾಲಜಿ : ಎ ಫಿಲಾಸಫಿಕಲ್‌ ಇನ್‌ವೆಸ್ಟಿಗೇಷನ್‌ ಆಫ್‌ ಯೋಗಾಚಾರ ಬುದ್ಧಿಸಂ ಅಂಡ್‌ ದ ಚೆಂಗ್‌ ವೇ-ಷಿಹ್‌ ಲುನ್. ಪ್ರಕಟಣೆ 2002 (ರೂಟ್‌ಲೆಡ್ಜ್‌). ISBN 0-7007-1186-4. pg 533
 63. ಸಿಂಪಲ್‌ ಟಿಬೆಟನ್‌ ಬುದ್ಧಿಸಂ : ಎ ಗೈಡ್‌ ಟು ತಾಂತ್ರಿಕ್‌ ಲಿವಿಂಗ್‌ C. ಅಲೆಕ್ಸಾಂಡರ್‌ ಸಿಂಪ್ಕಿನ್ಸ್‌, ಆನ್ನೆಲೆನ್‌ M. ಸಿಂಪ್ಕಿನ್ಸ್‌ ಇವರುಗಳಿಂದ. ಪ್ರಕಟಣೆ 2001. ಟಟ್ಟಲ್‌ ಪಬ್ಲಿಷಿಂಗ್‌. ISBN 978-0-7513-2886-8
 64. ದ ಬುದ್ಧಿಸ್ಟ್‌ ಟ್ರೆಡಿಷನ್‌ ಇನ್ ಇಂಡಿಯಾ, ಚೀನಾ ಅಂಡ್‌ ಜಪಾನ್. ವಿಲಿಯಂ ಥಿಯೋಡೋರ್‌ ಡೆ ಬೇರಿ ಇವರಿಂದ ಸಂಪಾದಿತ. Pgs. 207-208. ISBN 0-394-71696-5 - "ದ ಮೆಡಿಟೇಷನ್‌ ಸ್ಕೂಲ್‌, ಕಾಲ್ಡ್‌ ಚಾನ್‌ ಇನ್‌ ಚೀನೀಸ್‌ ಫ್ರಂ ದ ಸ್ಯಾನ್‌ಸ್ಕ್ರಿಟ್‌ ಧ್ಯಾನ ಈಸ್‌ ಬೆಸ್ಟ್‌ ನೋನ್‌ ಇನ್‌ ದ ವೆಸ್ಟ್‌ ಬೈ ದ ಜಪಾನೀಸ್‌ ಪ್ರೊನನ್ಷಿಯೇಷನ್‌ ಝೆನ್ "
 65. ಝೆನ್‌ ಬುದ್ಧಿಸಂ: ಎ ಹಿಸ್ಟರಿ (ಇಂಡಿಯಾ ಅಂಡ್‌ ಚೀನಾ) ಹೇನ್‌ರಿಚ್‌ ಡುಮೌಲಿನ್‌, ಜೇಮ್ಸ್‌ W. ಹೇಯ್ಸಿಗ್‌, ಪಾಲ್‌ F. ನಿಟ್ಟರ್‌ ಇವರುಗಳಿಂದ (ಪುಟ xviii)
 66. ಝೆನ್‌ ಬುದ್ಧಿಸಂ: ಎ ಹಿಸ್ಟರಿ (ಇಂಡಿಯಾ ಅಂಡ್‌ ಚೀನಾ) ಹೇನ್‌ರಿಚ್‌ ಡುಮೌಲಿನ್‌, ಜೇಮ್ಸ್‌ W. ಹೇಯ್ಸಿಗ್‌, ಪಾಲ್‌ F. ನಿಟ್ಟರ್‌ ಇವರುಗಳಿಂದ (ಪುಟ 13). ಜೇಮ್ಸ್‌ W. ಹೇಯ್ಸಿಗ್‌, ಪಾಲ್‌ F. ನಿಟ್ಟರ್‌ ಇವರುಗಳಿಂದ ಭಾಷಾಂತರಿತ. ಲೇಖನದಾತ ಜಾನ್‌ ಮೆಕ್‌ರೇ. ಪ್ರಕಟಣೆ 2005 ವರ್ಲ್ಡ್ ವಿಸ್ಡಮ್‌. 387 ಪುಟಗಳು. ISBN 0-941532-89-5 [ಮೂಲ ಉಲ್ಲೇಖ: "ದಿಸ್‌ ಫಿನಾಮೆನನ್ ಮೆರಿಟ್ಸ್‌ ಸ್ಪೆಷಲ್‌ ಅಟೆನ್ಷನ್‌ ಸಿನ್ಸ್‌ ಯೋಗಿಕಗಗ ರೂಟ್ಸ್‌ ಆರ್‌ ಟು ಬಿ ಫೌಂಡ್‌ ಇನ್‌ ದ ಝೆನ್‌ ಬುದ್ಧಿಸ್ಟ್‌ ಸ್ಕೂಲ್‌ ಆಫ್‌ ಮೆಡಿಟೇಶನ್‌."]
 67. ಝೆನ್‌ ಬುದ್ಧಿಸಂ: ಎ ಹಿಸ್ಟರಿ (ಇಂಡಿಯಾ ಅಂಡ್‌ ಚೀನಾ) ಹೇನ್‌ರಿಚ್‌ ಡುಮೌಲಿನ್‌, ಜೇಮ್ಸ್‌ W. ಹೇಯ್ಸಿಗ್‌, ಪಾಲ್‌ F. ನಿಟ್ಟರ್‌ ಇವರುಗಳಿಂದ (ಪುಟ 13)
 68. ದ ಲಯನ್ಸ್‌ ರೋರ್‌: ಆನ್‌ ಇಂಟ್ರೊಡಕ್ಷನ್‌ ಟು ತಂತ್ರ ಛೋಗ್ಯಾಮ್‌ ತ್ರುಂಗ್‌ಪಾರಿಂದ. ಷಂಬಾಲಾ, 2001 ISBN 1-57062-895-5
 69. ಸೀಕ್ರೆಟ್‌ ಆಫ್‌ ದ ವಜ್ರ ವರ್ಲ್ಡ್: ದ ತಾಂತ್ರಿಕ್‌ ಬುದ್ಧಿಸಂ ಆಫ್‌ ಟಿಬೆಟ್‌ ರೇ, ರೆಜಿನಾಲ್ಡ್‌ A ಇವರುಗಳಿಂದ ಷಂಬಾಲಾ: 2002. ISBN 1-57062-917-X pg 37-38
 70. ಸೀಕ್ರೆಟ್‌ ಆಫ್‌ ದ ವಜ್ರ ವರ್ಲ್ಡ್: ದ ತಾಂತ್ರಿಕ್‌ ಬುದ್ಧಿಸಂ ಆಫ್‌ ಟಿಬೆಟ್‌ ರೇ, ರೆಜಿನಾಲ್ಡ್‌ A ಇವರುಗಳಿಂದ ಷಂಬಾಲಾ: 2002. ISBN 1-57062-917-X pg 57
 71. ' ಯಂತ್ರ ಯೋಗ : ದ ಟಿಬೇಟನ್‌ ಯೋಗ ಆಫ್‌ ಮೂವ್‌ಮೆಂಟ್‌, ಛೋಗ್ಯಾಲ್‌ ನಂಖಾಯ್‌ ನೊರ್ಬುರಿಂದ. ಸ್ನೋ ಲಯನ್, 2008. ISBN 978-0-7513-2886-8
 72. ಚಾಂಗ್‌, G.C.C. (1993). ಟಿಬೇಟನ್‌ ಯೋಗ . ನ್ಯೂಜೆರ್ಸಿ: ಕೆರೋಲ್‌ ಪಬ್ಲಿಷಿಂಗ್ ಗ್ರೂಪ್. ISBN 0-8065-1453-1, p.7
 73. ಉಲ್ಲೇಖ ದೋಷ: Invalid <ref> tag; no text was provided for refs named Tattvarthasutra 2007 p. 102
 74. ೭೪.೦ ೭೪.೧ ತತ್ವಾರ್ಥಸೂತ್ರ [6.2]
 75. ನಿಯಮಸಾರ [134-40]
 76. ಝೈಡೆನ್‌ಬಾಸ್‌, ರಾಬರ್ಟ್. ಜೈನಿಸಂ ಟುಡೇ ಅಂಡ್‌ ಇಟ್ಸ್‌‌ ಫ್ಯೂಚರ್‌. ಮುಂಚೆನ್‌ : ಮನ್ಯ ವರ್ಲಾಗ್, 2006. p.66
 77. ಝಿಮ್ಮರ್‌, ಹೇನ್‌ರಿಚ್‌ ರಲ್ಲಿ (ed.) ಜೋಸೆಫ್‌ ಕ್ಯಾಂಪ್‌ಬೆಲ್‌ : ಫಿಲಾಸಫೀಸ್‌ ಆಫ್‌ ಇಂಡಿಯಾ. ನ್ಯೂಯಾರ್ಕ್‌ : ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯ ಮುದ್ರಣಾಲಯ, 1969 p.60
 78. ಚಾಪಲ್‌‌ , ಕ್ರಿಸ್ಟೋಫರ್‌.(1993) ನಾನ್‌ವಯೊಲೆನ್ಸ್‌ ಟು ಅನಿಮಲ್ಸ್‌‌, ಅರ್ಥ್‌, ಅಂಡ್‌ ಸೆಲ್ಫ್ ಇನ್‌ ಏಷ್ಯನ್‌ ಟ್ರೆಡಿಷನ್ಸ್. ನ್ಯೂಯಾರ್ಕ್‌: SUNY ಪ್ರೆಸ್, 1993 p. 7
 79. ಝೈಡೆನ್‌ಬಾಸ್ (2006) p.66
 80. ಎ ಹಿಸ್ಟರಿ ಆಫ್‌ ಯೋಗ ವಿವಿಯನ್‌ ವರ್ತಿಂಗ್‌ಟನ್‌ರಿಂದ (1982) ರೂಟ್‌ಲೆಡ್ಜ್‌ ISBN 0-7100-9258-X p. 29
 81. ವಿವಿಯನ್‌ ವರ್ತಿಂಗ್‌ಟನ್‌ (1982) p. 35
 82. ಚಾಪಲ್‌‌ , ಕ್ರಿಸ್ಟೋಫರ್‌.(1993), p.6
 83. ಚಾಪಲ್‌‌ , ಕ್ರಿಸ್ಟೋಫರ್‌.(1993), pp.6-9
 84. "ಸೂಫಿಧರ್ಮ ಮತ್ತು ಯೋಗಗಳ ಸ್ಥಾಪಿಸುವಿಕೆ". Archived from the original on 2009-03-27. Retrieved 2009-12-29.
 85. "ತುಲನಾತ್ಮಕ ಇಸ್ಲಾಮಿನ ಅಧ್ಯಯನಗಳ ಬಗ್ಗೆ ಕೆರೋಲಿನಾದಲ್ಲಿ ನಡೆದ ಚರ್ಚಾಗೋಷ್ಠಿ". Archived from the original on 2009-08-25. Retrieved 2009-12-29.
 86. ಅಗ್ರ ಇಸ್ಲಾಂ ಸಂಸ್ಥೆ: ಯೋಗವು ಮುಸ್ಲಿಮರಿಗಲ್ಲ Archived 2008-12-05 ವೇಬ್ಯಾಕ್ ಮೆಷಿನ್ ನಲ್ಲಿ. - CNN
 87. "ಆರ್ಕೈವ್ ನಕಲು". Archived from the original on 2011-06-22. Retrieved 2021-08-29.
 88. "ಮಲೇಷಿಯಾ ಲೀಡರ್‌: ಮುಸ್ಲಿಮರಿಗೆ ಮಂತ್ರಪಠನೆಯಿಲ್ಲದ ಯೋಗ OK[ಶಾಶ್ವತವಾಗಿ ಮಡಿದ ಕೊಂಡಿ]," ಅಸೋಸಿಯೇಟೆಡ್‌ ಪ್ರೆಸ್‌
 89. "ಆರ್ಕೈವ್ ನಕಲು". Archived from the original on 2009-01-06. Retrieved 2009-12-29.
 90. [೨]
 91. [೩]
 92. http://www.hurriyet.com.tr/english/domestic/11692086.asp?gid=244
 93. "ಬಿಷಪ್‌ಗಳಿಗೆ ಕ್ರೈಸ್ತ ಧ್ಯಾನಗಳ ಕೆಲ ಮಗ್ಗಲುಗಳ ಬಗ್ಗೆ 1989ರಲ್ಲಿ ವ್ಯಾಟಿಕನ್‌ ಸಿಟಿಯಿಂದ ಬಂದ ಪತ್ರ". Archived from the original on 2010-05-02. Retrieved 2009-12-29.
 94. Steinfels, Peter (1990-01-07). "Trying to Reconcile the Ways of the Vatican and the East". New York Times. Retrieved 2008-12-05.
 95. ೯೫.೦ ೯೫.೧ ಶೀರ್ಷಿಕೆ  : ಮೆಸೋಕಾಸ್‌ಮ್‌: ಹಿಂದೂಯಿಸಂ ಅಂಡ್‌ ದ ಆರ್ಗನೈಸೇಷನ್‌ ಆಫ್‌ ಎ ಟ್ರೆಡಿಷನಲ್‌ ನೇವರ್‌ ಸಿಟಿ ಇನ್‌ ನೇಪಾಲ್‌. ಲೇಖಕ: ರಾಬರ್ಟ್‌ I. ಲೆವಿ. ಪ್ರಕಟಣೆ: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮುದ್ರಣಾಲಯ, 1991. pp 313
 96. ಶೀರ್ಷಿಕೆ  : ಮೆಸೋಕಾಸ್‌ಮ್‌: ಹಿಂದೂಯಿಸಂ ಅಂಡ್‌ ದ ಆರ್ಗನೈಸೇಷನ್‌ ಆಫ್‌ ಎ ಟ್ರೆಡಿಷನಲ್‌ ನೇವರ್‌ ಸಿಟಿ ಇನ್‌ ನೇಪಾಲ್‌. ಲೇಖಕ: ರಾಬರ್ಟ್‌ I. ಲೆವಿ. ಪ್ರಕಟಣೆ: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮುದ್ರಣಾಲಯ, 1991. pp 317
 97. ಜಾಕೊಬ್‌ಸೆನ್‌, p. 9.
 98. ಬ್ರಿಟಾನಿಕಾ ಕನ್ಸೈಸ್‌ Archived 2007-12-17 ವೇಬ್ಯಾಕ್ ಮೆಷಿನ್ ನಲ್ಲಿ. "ಕ್ಯಾರೆಕ್ಟರೈಸ್ಡ್‌ ಬೈ ಎನ್‌ ಎಂಫಾಸಿಸ್‌ ಆನ್‌ ಭಕ್ತಿ, ಇಟ್ಸ್‌ ಗೋಲ್‌ ಈಸ್‌ ಟು ಎಸ್ಕೇಪ್‌ ಫ್ರಂ ದ ಸೈಕಲ್‌ ಆಫ್‌ ಬರ್ತ್‌ ಅಂಡ್‌ ಡೆತ್‌ ಇನ್‌ ಆರ್ಡರ್‌ ಟು ಎಂಜಾಯ್‌ ದ ಪ್ರೆಸೆನ್ಸ್‌ ಆಫ್‌ ವಿಷ್ಣು."
"https://kn.wikipedia.org/w/index.php?title=ಯೋಗ&oldid=1172833" ಇಂದ ಪಡೆಯಲ್ಪಟ್ಟಿದೆ