ಕರ್ಮ ಸಿದ್ಧಾಂತ
ಪೀಠಿಕೆ
ಬದಲಾಯಿಸಿ- ಭಾರತೀಯ ದರ್ಶನಗಳಲ್ಲಿ ಕರ್ಮ ಅಥವಾ ಕರ್ಮ ಸಿದ್ಧಾಂತ ಚರ್ವಾಕರನ್ನು ಹೊರತು ಪಡಿಸಿ ಎಲ್ಲಾ ದಾರ್ಶನಿಕರೂ ಒಪ್ಪಿರುವ ತತ್ವ . ಇದು ಸಾಮಾನ್ಯ ಜನರ ಜೀವನದಲ್ಲಿಯೂ ಸಾಸು ಹೊಕ್ಕಾಗಿದೆ .
- ಕರ್ಮವೆಂದರೆ ಕೆಲಸ, ಕ್ರಿಯೆ , ಎಂದು ಸರಳ ಅರ್ಥ . ಯಾವುದೇ ಕರ್ಮಕ್ಕೂ ಫಲವಿದೆ ; ಸತ್ಕರ್ಮಕ್ಕೆ - ಸತ್ಫಲ ; ದುಷ್ಕರ್ಮಕ್ಕೆ ದುಷ್ಫಲ . (ಇದು ಕಾರ್ಯ-ಕಾರಣ ಸಂಬಂಧದ ನಿಯಮದ ಆಧಾರ ).ಈ ನಿಯಮ ತರ್ಕ ಮೀರಿದ ಎಲ್ಲರೂ ಒಪ್ಪಿರುವ ಒದು ಪ್ರಮುಖ ತತ್ವ .
- ಈ ತತ್ವದ ಆಧಾರದ ಮೇಲೆಯೇ ಎಲ್ಲಾ ದರ್ಶಗಳೂ ನಿಂತಿವೆ . ಈ ನಿಯಮವು ಧರ್ಮಪ್ರವೃತ್ತಿಗೆ ಆಧಾರವಾಗಿದೆ. ಇಲ್ಲದಿದ್ದರೆ ಮಾನವನು ಒಳ್ಳೆಯ ಕೆಲಸದಲ್ಲಿ ತೊಡಗಲು , ಧರ್ಮಮಾರ್ಗಗಲ್ಲಿ ತೊಡಗಲು ಪ್ರೇರಪಣೆಯೇ ಇಲ್ಲ. ಆದ್ದರಿಂದ ಒಬ್ಬನ ಪ್ರಗತಿಗೆ - ಅವನತಿಗೆ ಅವನವನ ಕರ್ಮವೇ ಕಾರಣ ಎಂಬುದು ಗಟ್ಟಿ ನಂಬುಗೆ. ದರ್ಶನಗಳ ಸಿದ್ಧಾಂತ ;
- ಕರ್ಮಗಳಿಂದಲೇ ಜನ್ಮ -ಪುನರ್ ಜನ್ಮ ಎಂಬ ಗಟ್ಟಿ ವಿಶ್ವಾಸ ನಂಬುಗೆ ಇದೆ.
- ತತ್ತ್ವಶಾಸ್ತ್ರ -ಅದರಲ್ಲೂ ಭಾರತೀಯ ತತ್ತ್ವ ಶಾಸ್ತ್ರ ವು ಕಾರ್ಯ-ಕಾರಣ ಸಿದ್ಧಾಂತ ಮತ್ತು ಕರ್ಮ-ಕರ್ಮಫಲ ಸಿದ್ದಾಂತದ ಮೇಲೆ ನಿಂತಿದೆ.
;ಜಗತ್ತಿಗೆ ಕಾರಣವಾದ ಮೂಲ ಚೈತನ್ಯ-ದೇವರು ಅಥವಾ ಬ್ರಹ್ಮ ಇದೆ ಎನ್ನಲು ಈ ಕಾರ್ಯ ಕಾರಣಸಿದ್ಧಾಂತ ಮುಖ್ಯ -ಇದನ್ನು ಒಪ್ಪದ ಚರ್ವಾಕರು/ ನಾಸ್ತಿಕರು/ಲೋಕಾಯತರು ದೇವನಿಲ್ಲವೆಂದು ಹೇಳುತ್ತಾರೆ.:- ಕಾರಣವು ಮೂರು ವಿಧ - ಸಮವಾಯು, ಅಸಮವಾಯು,ಮತ್ತು ನಿಮಿತ್ತ.
ಉದಾರಣೆ : ಮಡಕೆ -ಮಣ್ಣು (ಮಡಕೆಗೆ ಮಣ್ಣು ಉಪಾದಾನ ಕಾರಣ).
ಉದಾ : ದಾರಗಳ ಸಂಯೋಗವು ಬಟ್ಟೆಗೆ ಅಸಮವಾಯು ಕಾರಣ - ದಾರಗಳಿಗೂ ಅವುಗಳ ಸಂಯೋಗಕ್ಕೂ ಸಮವಾಯು ಸಂಬಂಧ. ನೂಲಿನ ರೂಪವು ಬಟ್ಟೆಗಳ ರೂಪಕ್ಕೆ ಅಸಮವಾಯು ಕಾರಣ. ಗುಣ ಮತ್ತು ಕ್ರಿಯೆಗಳು ಅಸಮವಾಯುಗಳಾಗಿರುತ್ತವೆ. ನೈಯಾಯಿಕರು (ನ್ಯಾಯ ದರ್ಶನದ ಅನಯಾಯಿಗಳು) ಮಾತ್ರಾ ಈ ಸಂಬಂಧ ಹೇಳುತ್ತಾರೆ.
ಉದಾಹರಣೆ ಮಡಕೆ ಮಾಡಲು ಕುಂಬಾರ ಬೇಕು ; ಇಲ್ಲಿ ಕುಂಬಾರ ನಿಮಿತ್ತ ಕಾರಣ. (ಇದಕ್ಕೆ ಸಂಪ್ರದಾನ ಕಾರಣವೆಂದೂ ಹೇಳುವರು). |
ಭವಚಕ್ರ
ಬದಲಾಯಿಸಿ- ಕರ್ಮದ ಬಗೆ
- ಕರ್ಮಸಿದ್ಧಾಂತದ ಪ್ರಕಾರ ಕರ್ಮದಲ್ಲಿ ಮೂರು ಬಗೆ.
- ಸಂಚಿತ ;ಪ್ರಾರಬ್ದ ; ಮತ್ತು ಆಗಾಮಿ
- ೧. ಸಂಚಿತ ಕರ್ಮವೆಂದರೆ ಹಿಂದಿನಿಂದ - ಪೂರ್ವಜನ್ಮಗಳಲ್ಲಿ ಸಂಗ್ರಹವಾದ ಕರ್ಮಗಳ ಮೊತ್ತ.
- ೨. ಪ್ರಾರಭ್ಧವೆಂದರೆ ಆ ಕರ್ಮಗಳು (ಸಂಚಿತ) ಫಲ ಕೊಡಲು ಆರಂಭವಾದದ್ದು ; ಈಜನ್ಮದಲ್ಲಿ ಅನುಭವಿಸುತ್ತಿರುವುದು ; ಸುಖ-ದುಃಖಗಳು ; ರೋಗ -ನಿರೋಗ ; ಪದವಿ, ಐಶ್ವರ್ಯ- ದಾರಿದ್ರ್ಯ ಇತ್ಯಾದಿ .
- ೩. ಆಗಾಮೀ ಎಂದರೆ ಉಳಿದಿದ್ದು ; ಮುಂದೆ ಅನುಭವಿಬೇಕಾದ ಕರ್ಮಫಲ ; ಹಿಂದಿನ ಜನ್ಮ ಮತ್ತು ಈ ಜನ್ಮಗಳಲ್ಲಿ ಅನುಭವಿಸಿ ಉಳಿದ ಕರ್ಮಫಲದ ಮೊತ್ತ ; ಅದು ಪ್ರತಿ ಜೀವವನ್ನೂ ಬಿಡದೆ ಹಿಂಬಾಲಿಸುತ್ತದೆ.
- ಇದು ಸತತ ನಡೆಯುತ್ತಿರುವುದರಿಂದ , ಜನ್ಮ ಜನ್ಮಾಂತರಳಲ್ಲಿ ಮುಂದುವರೆಯುವದರಿಂದ ಇದನ್ನು ಭವಚಕ್ರ ಎಂದು ಕರೆಯಲಾಗಿದೆ. ಇದರೀಂದ ಬಿಡುಗಡೆಯಾದರೆ ಮೋಕ್ಷ.
ಕರ್ಮದ ಮೂಲ
ಬದಲಾಯಿಸಿಕರ್ಮ ಮತ್ತು ದೇವರು (ಈಶ್ವರ)
- ಕರ್ಮಕ್ಕೂ ದೇವರಿಗೂ ಏನು ಸಂಬಂಧ ? ಕರ್ಮಕ್ಕೆ ತಕ್ಕಫಲವೆಂದಾದರೆ , ದೇವರ ಅಗತ್ಯವಿಲ್ಲವೆಂದು ಕೆಲವು ದರ್ಶನಗಳು ಹೇಳುತ್ತವೆ(ಮೀಮಾಂಸ) . ಕರ್ಮಫಲವನ್ನು ಕೊಡಲು ಈಶ್ವರನು ಬೇಕೆಂದು ಕೆಲವರು ಹೇಳುತ್ತಾರೆ. ಇದ್ದರೂ ಅವನಿಗೆ (ದೇವನಿಗೆ ಕರ್ಮಫಲವನ್ನು ತೆಗೆದು ಹಾಕಲು ) ಸ್ವಾತಂತ್ರ್ಯವಿಲ್ಲವೆಂದೂ -ಜೀವರಿಗೆ ಅವರವರ ಕರ್ಮದಂತೆಯೇ ಅವರವರ ಜನ್ಮ ಕೊಡಬೇಕಾಗುವುದಲ್ಲಾ ?. ಕರ್ಮ ಜಡ (ಅಚೇತನ-ತಾರ್ಕಿಕವಾಗಿ) -ಅದನ್ನು ಪ್ರವರ್ತಿಸಲು (ದೇವರು) -ಚೇತನ ಬೇಕು . ಅದರಿಂದ ಬಿಡುಗಡೆ ಹೊಂದಲೂ ಅವನ ಅನುಗ್ರಹ ಬೇಕೆಂದು ಭಕ್ತಿಪಂಥ ಹೇಳುತ್ತದೆ. ಹಾಗೆ ಕೆಲವರಿಗೆ ಅನುಗ್ರಹ ಮಾಡಿದರೆ ದೇವನಿಗೆ ಪಕ್ಷಪಾತದ ಬರುವುದಲ್ಲಾ ? -ಎಂದು ಪ್ರತಿ ವಾದ .
- ಕರ್ಮ ಫಲವನ್ನು ಅನುಭವಿಸಿಯೇ ತೀರಿಸಬೇಕೆಂದು ಒಂದು ವಾದ ; ಪುಣ್ಯದಿಂದ ಪಾಪ ಕರ್ಮ ಬಿಡುಗಡೆಯಾಗುದೆಂದು ಮತ್ತೊಂದು ವಾದ ಭಕ್ತಿಮಾರ್ಗದಿಂದ ಆಗಾಮಿ ಕರ್ಮವನ್ನು ತಡೆಗಟ್ಟಬಹುದು -ಆದರೆ ಪ್ರಾರಬ್ಧವನ್ನು ಅನುಭವಿಸಿಯೇ ತೀರಬೇಕೆಂದು ಕೆಲವರು ಹೇಳುವರು .
- ಸತ್ಕರ್ಮದಿಂದ ಪುಣ್ಯ , ದುಷ್ಕರ್ಮದಿಂದ ಪಾಪ ಎಂದರೆ , ಸತ್ಕರ್ಮ -ದುಷ್ಕರ್ಮ ಎಂದು ನಿರ್ಧರಿಸುವವರು ಯಾರು ? ಅದಕ್ಕೆ ಉತ್ತರ -ವೇದ ! ಆದರೆ ಅದರಲ್ಲಿಲ್ಲದ ವಿಚಾರಗಳಿಗೆ ಫಲ ನಿರ್ಣಯ ಹೇಗೆ ? ಅದಕ್ಕೇನು ಉತ್ತರ ? ಮಹಾಭಾರತದಲ್ಲಿ ಸರಳವಾಗಿ, ||ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಂ ||ಎಂದಿದೆ.
- ಮೀಮಾಂಸಕರು ವೈದಿಕ (ವೇದದಲ್ಲಿ ವಿಧಿಸಿದ) ಕರ್ಮಗಳಿಗೆ ಮಾತ್ರಾ ಪುಣ್ಯವೆಂದು ಹೇಳುತ್ತಾರೆ -ಅದೇ ಯಜ್ಞ, ಯಾಗ ಇತ್ಯಾದಿ. ಅದರೆ ಅದೇ ವೇದಾಂತಿಗಳು ,ಅದರಿಂದ ಸಿಗುವುದು ಅಶಾಶ್ವತ ಫಲ (ಸ್ವರ್ಗಫಲವನ್ನು ಕೊಟ್ಟರೂ-ಆ ಫಲ ತೀರಿದ ನಂತರ ಪುನಃ ಜನ್ಮವೆತ್ತಬೇಕು); ಅಶಾಶ್ವತ ಫಲ ಕೊಡುವುದರಿಂದ ಅವು ಮುಖ್ಯವಲ್ಲ ಎನ್ನುತ್ತಾರೆ . ಆದ್ದರಿಂದ ಜ್ಞಾನಮಾರ್ಗವೇ ಮುಖ್ಯ, ಅದಾದರೆ -ಜ್ಞಾನವಾದರೆ ಎಲ್ಲಾ ಕರ್ಮದಿಂದ ಬಿಡುಗಡೆ ಎನ್ನುತ್ತಾರೆ.
- ಮೀಮಾಂಸಕರು ಕರ್ಮವು -ನಿತ್ಯ , ನೈಮಿತ್ತಿಕ , ಕಾಮ್ಯ , ಪ್ರಾಯಶ್ಚಿತ ಎಂದು ನಾಲ್ಕು ಬಗೆ ('ನಿಷಿದ್ಧ'ವೂ -ಮಾಡಬಾರದ್ದು ಸೇರಿದರೆ ಐದು ಬಗೆ) . ಎನ್ನುತ್ತಾರೆ. ವೇದಾಂತಿಗಳು 'ಈಶ್ವರಾರ್ಪಣ ಬುದ್ಧಿ'ಯಿಂದ ಮಾಡಿದ ಕರ್ಮಗಳೆಲ್ಲಾ ನಿತ್ಯಕರ್ಮದಂತೆ - ಫಲವಿಲ್ಲ -ಚಿತ್ತಶುದ್ಧಿಯಾಗುವುದು - ಫಲಾಪೇಕ್ಷೆಯಿಂದ ಮಾಡಿದರೆ 'ಕಾಮ್ಯ' ಅದು ಜೀವನಿಗೆ ಅಂಟುವುದು, ಹೀಗೆ ಕರ್ಮದಲ್ಲಿ ಎರಡೇ ವಿಧ ಎನ್ನುತ್ತಾರೆ.
- ಮೀಮಾಂಸ ದರ್ಶನದಲ್ಲಿ ಪ್ರಧಾನವಾದುದು ಕರ್ಮತತ್ವ. ವೇದ ವಿಹಿತವಾದ ಯಾಗಾದಿಗಳ ಆಚರಣೆಯೇ, ಧರ್ಮ . ಇದೇ ಕರ್ಮ ಅಥವಾ ಕರ್ತವ್ಯ. ವೇದ ನಿಷೇಧವಾದದ್ದು ಅಧರ್ಮ. ವೇದ ವಿಧಿಸಿದ ಕರ್ಮಗಳು ಮೂರು
- ವಿಧ. :- ನಿತ್ಯ , ನೈಮಿತ್ತಿಕ , ಕಾಮ್ಯ .
- ೧. ಸಂಧ್ಯಾವಂದನೆ , ದೇವರ ಪೂಜೆ ಮೊದಲಾದವು -ನಿತ್ಯಕರ್ಮ.
- ೨. ಶ್ರಾದ್ಧಾದಿ ವಿಶೇಷ ಕರ್ಮಗಳು ನೈಮಿತ್ತಿಕ ಕರ್ಮಗಳು.
- ೩. ಕಾಮನೆಯ (ಬಯಕೆಯ) ಪೂರ್ತಿಗಾಗಿ ಮಾಡುವುದು ಕಾಮ್ಯ ಕರ್ಮ.
- ಇವು ಧರ್ಮವೆನಿಸುತ್ತವೆ. ವೇದ ವಿರೋಧಿ ಕರ್ಮಗಳು ನಿಷಿದ್ಧ ಕರ್ಮಗಳು.
ಉಪಸಂಹಾರ
ಬದಲಾಯಿಸಿ- ಜೈನರು ಕರ್ಮವನ್ನು ಅಮೂರ್ತವಲ್ಲ, ಮೂರ್ತ (ಭೌತವಸ್ತು) ಅಂದರೆ ಭೌದ್ಧರು ಕರ್ಮವು ಪ್ರರ್ತಿ ಪೂರ್ವಾರ್ಜಿತವೂ ಅಲ್ಲ , ಪೂರ್ತಿ ಆಕಸ್ಮಿಕವೂ ಅಲ್ಲ, ಎಂದು ಮಧ್ಯಮಾರ್ಗವನ್ನು ಹಿಡಿದಿದ್ದಾರೆ.
- ಕುರುಡನೋ , ಕುಂಟನೋ , ಹುಲ್ಲೆಯೋ ಆಗಿ ಹುಟ್ಟುವುದಕ್ಕೆ ಪೂರ್ವಾರ್ಜಿತ ಕರ್ಮಫಲವೆಂದು ವಾದವಿದೆ. ಇಲ್ಲದಿದ್ದರೆ ದೇವರ ಇಚ್ಛೆ ಎಂದು ತೀರ್ಮಾನ ಮಾಡಬೇಕಾಗುತ್ತದೆ. ಆಗ ದೇವರು ಪಕ್ಷಪಾತಿಯೂ . ಕ್ರೂರನೂ ಆಗಿರುವ ದೋಷವನ್ನು ಹೇಳಬೇಕಾಗುತ್ತದೆ.
- ಮತ್ತೊಂದು ಪ್ರಶ್ನೆ ಎಲ್ಲವೂ ಪೂರ್ವಜನ್ಮದ ಕರ್ಮದಂತೆ ನೆಡೆಯುವಂತಿದ್ದರೆ , ಜೀವನಿಗೆ ಸ್ವಾತಂತ್ರ್ಯವೇ ಇಲ್ಲವೇ ? ಎಲ್ಲವೂ ಕರ್ಮ -ದೇವರಿಂದ , ನಿಯಂತ್ರಿತವಾದರೆ , ಜೀವನು ಕೇವಲ ಸುಖ ದುಃಖ ಅನುಭವಿಸುವ , ಸ್ವತಂತ್ರ್ಯವಿಲ್ಲದ ಜೀವಿಯಾಗಿ -ಜಗತ್ತು , ದೇವರು, ಕರ್ಮ ಇವು -ಜಗತ್ತು ,ದೇವರು , ಇವು ಕ್ರೂರವೆನಿಸಿಕೊಳ್ಳುತ್ತವೆ/ ಕ್ರೂರತೆಯ ದೋಷಕ್ಕೆ ಒಳಗಾಗುತ್ತವೆ. -ದೀನರನ್ನೂ ದುರ್ಬಲರನ್ನೂ ಇದು ನಿನ್ನ ಪ್ರಾರಬ್ಧ ಕರ್ಮವೆಂದು ಶೋಷಿಸಲು ದಾರಿಯಾಗುವುದು.
- ಉಗ್ರನು ಹಿಂಸಾತ್ಮಕ ದಾರಿ -ತನ್ನ ಕರ್ಮವೆಂದು ಸಮರ್ಥಿಸಿಕೊಳ್ಳಬಹದು.ವ್ಯಕ್ತಿಯ ಅಭ್ಯುದಯಕ್ಕೆ ಅವನ ಸತ್ಕರ್ಮವೇ ಕಾರಣವೆಂದು ಹೇಳಲು ಹೊರಟ ಕರ್ಮವಾದ , ಕೊನೆಗೆ ಶೋಷಣೆಯ ಸ್ವಾರ್ಥದ ಸಾಧನವಾಗಿ ಪರಿಣಮಿಸಿದ್ದು , ದುರಂತ. ಆದ್ದರಿಂದ ಅದನ್ನು ಅಂಧ ಶ್ರದ್ಧೆಯಂದು ನಿರ್ಧರಿಸುವುದು ಮತ್ತು ನಿರಾಕರಿಸುವುದು ಸೂಕ್ತ . ಅಥವಾ ಕರ್ಮವನ್ನು , ಸ್ವತಂತ್ರ ಕರ್ಮ, ಆಕಸ್ಮಿಕ , ಮತ್ತು ಅನಿವಾರ್ಯ(ಪ್ರಾರಬ್ಧ) ವೆಂದು ತಿಳಿಯುವುದು ಒಳ್ಳೆಯದು.[೧] [೨]
- ಓಂತತ್ಸತ್
ನೋಡಿ
ಬದಲಾಯಿಸಿಚಾರ್ವಾಕ ದರ್ಶನ ; ಜೈನ ಧರ್ಮ- ಜೈನ ದರ್ಶನ ; ಬೌದ್ಧ ಧರ್ಮ ; ಸಾಂಖ್ಯ-ಸಾಂಖ್ಯ ದರ್ಶನ ; (ಯೋಗ)->ರಾಜಯೋಗ ; ನ್ಯಾಯ ದರ್ಶನ ; ವೈಶೇಷಿಕ ದರ್ಶನ;; ಮೀಮಾಂಸ ದರ್ಶನ - ; ವೇದಾಂತ ದರ್ಶನ / ಉತ್ತರ ಮೀಮಾಂಸಾ ; ಅದ್ವೈತ ; ಆದಿ ಶಂಕರರು ಮತ್ತು ಅದ್ವೈತ ; ವಿಶಿಷ್ಟಾದ್ವೈತ ದರ್ಶನ ; ದ್ವೈತ ದರ್ಶನ - ಮಾಧ್ವ ಸಿದ್ಧಾಂತ ; ಪಂಚ ಕೋಶ ; ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ; ವೀರಶೈವ; ಬಸವಣ್ಣ; ಭಾರತೀಯ ತತ್ವಶಾಸ್ತ್ರ ಸಮೀಕ್ಷೆ; ಭಗವದ್ಗೀತಾ ತಾತ್ಪರ್ಯ-- ಕರ್ಮ ಸಿದ್ಧಾಂತ-- ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು--
ಉಲ್ಲೇಖಗಳು
ಬದಲಾಯಿಸಿ- ↑ ಭಾರತೀಯ ತತ್ತ್ವಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.
- ↑ ಉಮರನ ಒಸಗೆ- ಪೀಠಿಕೆ ಡಿವಿಜಿ.