ಎಂ. ಎ. ಹೆಗಡೆ

(ಪ್ರೊ.ಎಂ.ಎ.ಹೆಗಡೆ ಇಂದ ಪುನರ್ನಿರ್ದೇಶಿತ)

ಪ್ರೊ.ಎಂ.ಎ.ಹೆಗಡೆಯವರು ಸಂಸ್ಕೃತ ವಿದ್ವಾಂಸರು, ಗ್ರಂಥಕರ್ತರು, ಭಾಷಾಶಾಸ್ತ್ರಜ್ಞರು,ಹಾಗೂ ನಿವೃತ್ತ ಪ್ರಾಂಶುಪಾಲರು.

ಜೀವನ ವಿವರ

ಬದಲಾಯಿಸಿ

  • ಪ್ರೊ. ಎಂ.ಎ.ಹೆಗಡೆಯವರ ,ಹೆಸರು : ಮಹಾಬಲೇಶ್ವರ , ಹುಟ್ಟಿದ ಊರು : ದಂಟಕಲ್ (ತಾಯಿಯ ತವರುಮನೆ);
  • ಜನ್ಮ ದಿನಾಂಕ ೩-೭-೧೯೪೮. ಈಗಿನ ವಾಸ ಶಿರಸಿಯಲ್ಲಿ.; ತಂದೆ : ಅಣ್ಣಪ್ಪ ಹೆಗಢೆ ಮತ್ತು ತಾಯಿ : ಕಾಮಾಕ್ಷಿ ಊರು: ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಜೋಗಿನ್ಮನೆ

ವಿದ್ಯಾಭ್ಯಾಸ

ಬದಲಾಯಿಸಿ
  • ಪ್ರೊ. ಎಂ.ಎ.ಹೆಗಡೆಯವರ ಪ್ರೌಢಶಾಲಾ ವಿದ್ಯಾಭ್ಯಾಸ , ಹೆಗ್ಗರಣಿಯ ಶ್ರೀ ಸ್ವಾಮಿ ವಿವೇಕಾನಂದ ಹೈಸ್ಕೂಲಿನಲ್ಲಿ ನಡೆಯಿತು, ಎಂ.ಎಂ. ಆರ್ಟ್ಸ್ ಕಾಲೇಜು ಶಿರಸಿಯ ಎಂ. ಎಂ.ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ.ಪದವಿ ಮತ್ತು ಅವರ ಎಂ.ಎ. ಉನ್ನತ ಪದವಿ ಶಿಕ್ಷಣವು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ೧೯೭೧ ರಲ್ಲಿ ಆಯಿತು. ಬಿ.ಎ. ಪದವಿಯಲ್ಲಿ ಪ್ರಥಮ ಸ್ಥಾನ ಪಡೆದುದಕ್ಕೆ ಶ್ರೀ ಬಿ.ವಿ.ಬೇವೂರ ಅವರ ಬಹುಮಾನ ಲಭಿಸಿದೆ. ಎಂ.ಎ.ಯಲ್ಲಿ ಪ್ರಥಮ ಸ್ಥಾನ ಪಡೆದುದಕ್ಕೆ ಸಿ.ಡಿ. ದೇಶಮುಖ್ ಬಹುಮಾನ ಲಭಿಸಿದೆ.
  • ಇವರು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸಕಾಲೇಜು ಮತ್ತು ಪಿ.ಸಿ.ಜಾಬಿನ್ ಸೈನ್ಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ೧೯೭೧ರಿಂದ ೧೯೭೩ರ ವರೆಗೆ ಸೇವೆಸಲ್ಲಿಸಿದ್ದಾರೆ. ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ಧಿ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ,ಆ ವಿಭಾಗದ ಮುಖ್ಯಸ್ಥರಾಗಿ ೧೯೭೩ ರಿಂದ ೨೦೦೪ ರ ವರೆಗೆ ಸೇವೆಸಲ್ಲಿಸಿದ್ದಾರೆ. ಅದೇ ಕಾಲೇಜಿನಲ್ಲಿ ೨೦೦೪ ರಿಂದ ೨೦೦೬ ರವರೆಗೆ ಪ್ರಾಂಶುಪಾಲರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.

ಹವ್ಯಾಸ :

ಬದಲಾಯಿಸಿ

ಪ್ರೊ. ಎಂ. ಎ. ಹೆಗಡೆ ಅವರು ಸಂಸ್ಕೃತ, ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ಸಮಾನ ಪ್ರಭುತ್ವ ಹೊಂದಿದ ನಾಡಿನ ಕೆಲವೇ ವಿದ್ವಾಂಸರಲ್ಲಿ ಒಬ್ಬರು. ಯಕ್ಷಗಾನ ಇವರ ಪ್ರಿಯವಾದ ಹವ್ಯಾಸ. ಯಕ್ಷಗಾನದಲ್ಲಿ ವೇಷಧಾರಿ, ತಾಳಮದ್ದಲೆಯ ಅರ್ಥಧಾರಿ, ಸಂಶೋಧಕ, ವಿಮರ್ಶಕ, ಮತ್ತು ಪ್ರಸಂಗ ಕರ್ತರಾಗಿ ಕೆಲಸಮಾಡಿದ್ದಾರೆ. ಇವರು, ಸೀತಾ ವಿಯೋಗ, ತ್ರಿಶಂಕು ಚರಿತ್ರೆ, ರಾಜಾಕರಂಧಮ, ಮುಂತಾದ ಸುಮಾರು ಹದಿನೈದಕ್ಕೂ ಮಿಕ್ಕ ಪ್ರಸಂಗಗಳನ್ನು ರಚಿಸಿದ್ದಾರೆ. ಅವು ಜನಪ್ರಿಯವಾಗಿದ್ದು ಸಾಕಷ್ಟು ಪ್ರಯೋಗಗಳನ್ನು ಕಾಣುತ್ತಿವೆ. 2013ರ ಮಾರ್ಚ್ ತಿಂಗಳಲ್ಲಿ ಶಿರಸಿಯಲ್ಲಿ ನಡೆದ ಎಂಟನೇ ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಇವರಿಗೆ ಸಂದಿದೆ.

ಸಾಹಿತ್ಯ ಚಟುವಟಿಕೆ

ಬದಲಾಯಿಸಿ

ಈಕೆಳಗಿನ ಕೃತಿಗಳನ್ನು ರಚಿಸಿದ್ದಾರೆ :

  • ೧, ಬ್ರಹ್ಮ ಸೂತ್ರ ಚತುಃಸೂತ್ರೀ - ಶ್ರೀ ಶಂಕರಾಚಾರ್ಯಬ್ರಹ್ಮಸೂತ್ರ ಭಾಷ್ಯದ ಚತುಃಸೂತ್ರೀ ಭಾಗದ ಅನುವಾದ ಮತ್ತು ಟಿಪ್ಪಣಿ.
  • ೨, ಅಲಂಕಾರ ತತ್ವ, :- ಭಾರತೀಯ ಕಾವ್ಯ ಮೀಮಾಂಸೆಯ ಸಂಕ್ಷಿಪ್ತ ಪರಿಚಯದೊಂದಿಗೆ ಸುಮಾರು ೪೫ ಅರ್ಥಾಲಂಕಾರಗಳ ವಿಸ್ತೃತ ವಿವೇಚನೆ. ಕನ್ನಡದ ಪ್ರಾಚೀನ ಹಾಗೂ ಆಧುನಿಕ ಕಾವ್ಯಗಳಿಂದ ಉದಾಹರಣೆ. ಕನ್ನಡದಲ್ಲಿ ಈ ಬಗೆಯ ಗ್ರಂಥ ಇದೊಂದೇ. ಇದು ಸಮಾಜ ಪುಸ್ತಕಾಲಯ ಧಾರವಾಡದಿಂದ ಪ್ರಕಟಗೊಂಡಿದೆ.
  • ೩, ಭಗವದ್ಭಕ್ತಿ ರಸಾಯನಮ್ :-ಮಧುಸೂದನ ಸರಸ್ವತಿಗಳ ಮೂಲಕೃತಿ , ಅನುವಾದ, ವಿವರಣೆ ;
  • ೪, ಸಿದ್ಧಾಂತ ಬಿಂದು :- ಮಧುಸೂದನ ಸರಸ್ವತಿಗಳ ಮೂಲಕೃತಿ , ಅನುವಾದ, ಮತ್ತು ವಿಸ್ತೃತ ಟಿಪ್ಪಣಿ. ಅದ್ವೈತ ವೇದಾಂತಕ್ಕೆ ಸಂಬಂಧಿಸಿದ ಮಹತ್ದದ ಕೃತಿ. ಸಂಸ್ಕೃತ ವಿಶ್ವವಿದ್ಯಾಲಯ ಅನುವಾದಕ್ಕಾಗಿ ನೀಡುವ ಪ್ರಶಸ್ತಿಯೂ ಈ ಕೃತಿಗೆ ಸಂದಿದೆ.
  • ೫, ಪರಮಾನಂದ ಸುಧಾ : -- ಶ್ರೀ ಶಂಕರಾಚಾರ್ಯರ ಬ್ರಹ್ಮಸೂತ್ರ ಭಾಷ್ಯದ ಮೊದಲ ನಾಲ್ಕು ಸೂತ್ರಭಾಷ್ಯದ ಅನುವಾದ ಮತ್ತು ವಿವರವಾದ ವ್ಯಾಖ್ಯಾನ. (ಈ ಮೇಲಿನ ಮೂರೂ ಗ್ರಂಥಗಳನ್ನು-ಉದಯ ಪ್ರಕಾಶನ ಬೆಂಗಳೂರು ಪ್ರಕಟಿಸಿದೆ.)
  • ೬, ಕುಮಾರಿಲ ಭಟ್ಟ :- ಡಾ. ಪ್ರಭಾಕರ ಜೋಷಿ ಯವರೊಂದಿಗೆ ಚಿಂತನ ಮಾಲೆ ಯೊಂದಿಗೆ ಪ್ರಕಟಗೊಂಡಿದೆ.
  • ೭, ಭಾರತೀಯ ತತ್ವ ಶಾಸ್ತ್ರ ಪರಿಚಯ :- ಡಾ. ಪ್ರಭಾಕರ ಜೋಷಿ ಯವರ ಸಹಯೋಗದೊಂದಿಗೆ ಪ್ರಕಟಿತ. ಭಾರತೀಯ ದರ್ಶನಗಳ ಸ್ವರೂಪವನ್ನು ಸರಳವಾಗಿ ಪರಿಚಯಿಸುವ ಗ್ರಂಥ. (ವರ್ಗ:ದರ್ಶನಶಾಸ್ತ್ರ )
  • ೮, ಶಬ್ದ ಮತ್ತು ಜಗತ್ತು : ಬಿ.ಕೆ.ಮತಿಲಾಲ್ ಅವರ ದ ವರ್ಲ್ಡ ಅಂಡ್ ತಹೆ ವರ್ಡ್ ಇಂಗ್ಲಿಷ್ ಕೃತಿಯ ಕನ್ನಡ ಅನುವಾದ (ಈ ಮೇಲಿನ ಮೂರೂ ಕೃತಿಗಳು ಅಕ್ಷರ ಪ್ರಕಾಶನ ಹೆಗ್ಗೋಡು, ಇವರಿಂದ ಪ್ರಕಟಗೊಂಡಿವೆ.)

ಆಧಾರ / ಉಲ್ಲೇಖ :ಪರಮಾನಂದ ಸುಧಾ ಗ್ರಂಥದಲ್ಲಿನ ಪೀಠಿಕೆ ಮತ್ತು ವ್ಯಕ್ತಿ ಪರಿಚಯ : ಉದಯ ಪ್ರಕಾಶನ 984 11ನೇ ಮುಖ್ಯರಸ್ತೆ 3ನೇ ವಿಭಾಗ ಬೆಂಗಳೂರು-560 010 ; ದೂರವಾಣಿ :080-23389142