ದರ್ಶನಶಾಸ್ತ್ರ
ದರ್ಶನ ಶಾಸ್ತ್ರ-ಪಾಶ್ಚ್ಯಾತ್ಯ ದೃಷ್ಠಿಕೋನ
ಬದಲಾಯಿಸಿ- ೧.ತತ್ವ ಮೀಮಾಂಸೆ - (ಮೆಟಾಫಿಸಿಕ್ಸ್) : ತತ್ವಗಳಾವುವು - ಅವು ಹೇಗಿವೆ?
- ೨. ಜ್ಞಾನ ಮೀಮಾಂಸೆ -(ಎಪಿಸ್ಟೋಮಾಲೊಜಿ) : ಪ್ರಮಾಣಗಳೆಷ್ಠು -ಯಾವುವು-ಹೇಗಿವೆ? ಜ್ಞಾನವುಂಟಾಗುವುದು ಹೇಗೆ?
- ೩ ತರ್ಕ ಶಾಸ್ತ್ರ (ಲಾಜಿಕ್) : ಸತ್ಯ ಅಸತ್ಯಗಳ ಪರಿಶೀಲನಾ ವಿಧಾನ.
- ೪ ಮನೋವಿಜ್ಞಾನ (ಸೈಕೊಲೊಜಿ) : ಮನೋ ವ್ಯಾಪಾರ- ಪ್ರವೃತ್ತಿಗಳ ಅಧ್ಯಯನ.
- ೫ ನೀತಿ ನಿಯಮ (ಎಥಿಕ್ಸ್ ) : ಲೌಕಿಕ - ಪಾರಮಾರ್ಥಿಕ ಜೇವನಕ್ಕೆ ಬೇಕಾದ ನೀತಿ ನಿಯಮಗಳು, ಆಚಾರಗಳು.
- ೬.ಸೌಂದರ್ಯ ಶಾಸ್ತ್ರ (ಈಸ್ಥೆಟಿಕ್ಸ್ ) : ಭೌತ - ಅಭೌತ ಅನುಭವಗಳ - ಸೌಂದರ್ಯಾತ್ಮಕ ಮೌಲ್ಯ ಮಾಪನ
- ತತ್ವ ಶಾಸ್ತ್ರವೇ ಎಲ್ಲದಕ್ಕಿಂತ ಶ್ರೇಷ್ಠ ವಿದ್ಯೆ, ಎಂಬ ಅಭಿಪ್ರಾಯ ಸಲ್ಲದು. ಎಲ್ಲಾ ಶಾಸಗಳೂ ಶ್ರೇಷ್ಠವೇ. ತತ್ವ ಶಾಸ್ತ್ರವು ವೃದ್ಧರು ಮಾತ್ರರವಲ್ಲದೇ ಎಲ್ಲರೂ ಅಭ್ಯಾಸ ಮಾಡಬಹುದಾದ ಶಾಸ್ತ್ರ. ( ಎಂ. ಪ್ರಭಾಕರ ಜೋಷಿ & ಎಂ.ಎಂ. ಹೆಗಡೆ _ಭಾರತೀಯ ತತ್ವ ಶಾಸ್ತ್ರ ಪರಿಚಯ )
ಭಾರತದ ದರ್ಶನಗಳು.
ಬದಲಾಯಿಸಿ- ೧ . ಸಾಂಖ್ಯ- (ಸಾಂಖ್ಯ ದರ್ಶನ), ಯೋಗ(ಯೋಗ ದರ್ಶನ), ನ್ಯಾಯ, ವೈಶೇಷಿಕ, ಮೀಮಾಂಸ, ವೇದಾಂತ, ಜೈನ, ಬೌದ್ಧ, ಚಾರ್ವಾಕ, ಇವು ಒಂಭತ್ತು ಪ್ರಮುಖ ದರ್ಶನಗಳು.
- ೨ . ಸಾಂಖ್ಯ ದರ್ಶನ, ಯೋಗ, ನ್ಯಾಯ ದರ್ಶನ, ವೈಶೇಷಿಕ ದರ್ಶನ, ಮೀಮಾಂಸ ದರ್ಶನ, ಉತ್ತರ ಮೀಮಾಂಸಾ - ಉತ್ತರ ಮೀಮಾಂಸಾ , ಇವು ರೂಢಿಯಲ್ಲಿ ಬಂದ ಷಡ್ ದರ್ಶನಗಳು (ಆರು ತತ್ವ ಸಿದ್ಧಾಂತಗಳು)
- ೩ . ಆಸ್ತಿಕ : ದೇವರು , ಪಾಪ ಪುಣ್ಯ ಗಳನ್ನು ಒಪ್ಪುವ ಅಥವಾ ವೇದಗಳನ್ನು ಒಪ್ಪುವವನು.
- ೪ . ನಾಸ್ತಿಕ : ಮೇಲಿನವುಗಳನ್ನು ಒಪ್ಪದವನು. ನಾಸ್ತಿಕೋ ವೇದ ನಿಂದಕಃ. ಮನು ಸ್ಮೃತಿ.
- ೫ . ನಾಸ್ತಿಕ ದರ್ಶನಗಳು ಅಥವಾ ಅವೈದಿಕ ದರ್ಶನಗಳು : ಜೈನ , ಬೌದ್ಧ, - ಪರಲೋಕ, ದೇವತೆಗಳು, ಧರ್ಮ , ಪಾಪ ಪುಣ್ಯಗಳನ್ನು ಒಪ್ಪಿದರೂ ವೇದಗಳನ್ನು ಪ್ರಮಾಣವೆಂದು ಒಪ್ಪುವುದಿಲ್ಲ. ಚಾರ್ವಾಕರು ದೇವರನ್ನೂ, ವೇದಗಳನ್ನೂ , ಪರಲೋಕವನ್ನೂ ಒಪ್ಪುವುದಿಲ್ಲ.
- ೬ . ನಿರೀಶ್ವರ ದರ್ಶನ ಆದರೂ ಆಸ್ತಿಕ ದರ್ಶನಗಳು : ಸಾಂಖ್ಯ, ಮತ್ತು ನ್ಯಾಯ, ಮೀಮಾಂಸ, ಇವು ವೇದಗಳನ್ನು ಒಪ್ಪುತ್ತವೆ; ಆದರೆ ದೇವರು ಅಥವಾ ಜಗನ್ನಿಯಾಮಕನನ್ನು ಒಪ್ಪುವುದಿಲ್ಲ
- ೭ . ಸೇಶ್ವರ ದರ್ಶನ : ಈಶ್ವರ, ದೇವರು, ಜಗನ್ನಿಯಾಮಕನನ್ನು ಒಪ್ಪುತ್ತವೆ. ಯೋಗ, ವೈಶೇಷಿಕ, ವೇದಾಂತ, ವೇದಗಳು, ಅವಕ್ಕೆ ಆಧಾರ -ಪ್ರಮಾಣ ಎಂದು ಒಪ್ಪುತ್ತವೆ.
ಸೂತ್ರ ಮತ್ತು ವ್ಯಾಖ್ಯಾನ
ಬದಲಾಯಿಸಿ- ೧. ಸೂತ್ರಗಳು , ದರ್ಶನಗಳ ಬಗ್ಗೆ ಹೇಳುವ ಸಂಕ್ಷಿಪ್ತ ಹೇಳಿಕೆ, ಪದಗಳ ಗುಂಪು.
- ೨. ವ್ಯಾಖ್ಯಾನ : ಸೂತ್ರಗಳ ವಿವರಣೆ. ಒಂದೆ ಸೂತ್ರಕ್ಕೆ, ಬೇರೆ ಬೇರೆ ದರ್ಶನದವರು , ಬೇರೆ ಬೇರೆ ವ್ಯಾಖ್ಯಾನ-ವಿವರಣೆ ನೀಡಬಹುದು. ಹಾಗೆ ಬೇರೆ ಬೇರೆ ಪಂಥಗಳಾಗುವುವು. ಇವಕ್ಕೆ ಬಾಷ್ಯಗಳೆಂದೂ , ಬಾಷ್ಯಗಳನ್ನು ವಿವರಿಸಿದರೆ ವಾರ್ತಿಕಗಳೆಂದೂ, ವಾರ್ತಿಕಗಳನ್ನು ಅರ್ಥೈಸಿದರೆ ವ್ಯಾಖ್ಯಾನ / ಟೀಕೆ ಎಂದೂ ಆಗುವುದು.
ಆಧಾರಗಳು (ಪ್ರಾಚೀನ)
ಬದಲಾಯಿಸಿ- ೧. ಯೋಗ ದರ್ಶನಕ್ಕೆ : ಪಾತಂಜಲಿಯ ಯೋಗ ಸೂತ್ರ.
- ೨. ಮೀಮಾಂಸಕ್ಕೆ : ಜೈಮಿನಿಯ ಧರ್ಮ ಸೂತ್ರ.
- ೩. ವೇದಾಂತಕ್ಕೆ : ಬಾದರಾಯಣರ ಬ್ರಹ್ಮ ಸೂತ್ರ.
- ೪. ನ್ಯಾಯಕ್ಕೆ : ಗೌತಮರ [[ನ್ಯಾಯ ಸೂತ್ರ]].
- ೫. ವೈಶೇಷಿಕಕ್ಕೆ : ಕಣಾದನ ಸೂತ್ರ. ಕಣಾದ
- ೬. ಸಾಂಖ್ಯ- ಈಶ್ವರ ಕೃಷ್ಣನ -ಸಾಂಖ್ಯ ಕಾರಿಕಾ
- ಚಾರ್ವಾಕ ದರ್ಶನ ಸೂತ್ರ ಗಳು ನಷ್ಟವಾಗಿವೆ. ಚಾರ್ವಾಕ
ತತ್ವ ಚರ್ಚೆಯ ಮುಖ್ಯ ಅಂಶಗಳು
ಬದಲಾಯಿಸಿ- ೧. ಜಡತ್ವ :- ಜೀವವಿಲ್ಲದ್ದು.
- ೨. ಚೇತನತ್ವ :- ಜೀವ ಅಥವಾ ಚಿತ್ ಭಾವ ವುಳ್ಳದ್ದು (ಮನಸ್ಸು ಉಳ್ಳದ್ದು)
- ೩. ಬೌದ್ಧರು -ಮತ್ತು ಶಂಕರರ ಅದ್ವೈತ :-ಚೈತನ್ಯ ಪ್ರಧಾನ ವಾದಿಗಳು.
- ೪. ಸಾಂಖ್ಯರು -ಮತ್ತು ಚಾರ್ವಾಕರು : -ಜಡ ಪ್ರಧಾನ ವಾದಿಗಳು.
- ೫. ನ್ಯಾಯ , ವೈಶೇಷಿಕ , ಮೀಮಾಂಸ , ದ್ವೈತ (ದ್ ವೈ ತ), ಜೈನ ದರ್ಶನಗಳು ಉಭಯ ವಾದಿಗಳು, ಎರಡೂ ಪ್ರಧಾನ ವೆನ್ನುವರು.
ಭಾರತದ ಮುಖ್ಯ ದರ್ಶನಗಳು ಮತ್ತು ವಿಚಾರಗಳು
ಬದಲಾಯಿಸಿ- ವಿಭಾಗಗಳು:
- ೧. ಚಾರ್ವಾಕ ದರ್ಶನ
- ೨. ಜೈನ ಧರ್ಮ
- ೩. ಬೌದ್ಧ ಧರ್ಮ
- ೪. ಬೌದ್ಧ ದರ್ಶನ
- ೫. ಸಾಂಖ್ಯ ದರ್ಶನ
- ೬. ಯೋಗ ದರ್ಶನ
- ೭. ನ್ಯಾಯ ದರ್ಶನ-ನ್ಯಾಯ (ತರ್ಕಶಾಸ್ತ್ರ)
- ೮. ವೈಶೇಷಿಕ ದರ್ಶನ
- ೯.ಮೀಮಾಂಸ ದರ್ಶನ
- ೧೦. ವೇದಾಂತ ದರ್ಶನ ವೇದಾಂತ ದರ್ಶನ / ಉತ್ತರ ಮೀಮಾಂಸಾ
- ೧೧. ಅದ್ವೈತ| ದರ್ಶನ
- ೧೨. ಆದಿ ಶಂಕರರು ಮತ್ತು ಅದ್ವೈತ ದಿ:೨೩-೫-೨೦೧೩
- ೧೩. ವಿಶಿಷ್ಠಾದ್ವೈತ ದರ್ಶನ
- ೧೪. ದ್ವೈತ ದರ್ಶನ(ಮಾಧ್ವ ಸಿದ್ಧಾಂತ.)
- ೧೫.ಇತರ ದ್ವೈತ ಪಂಥಗಳು
- ೧೬ ಶೈವ ಸಿದ್ಧಾಂತಗಳು /ಶೈವ ಪಂಥ
- ೧೭. ವೀರ ಶೈವ.(ಶಕ್ತಿ ವಿಶಿಷ್ಟಾದ್ವೈತ) ವೀರಶೈವ
- ೧೮. ಭಾರತೀಯ ತತ್ವಶಾಸ್ತ್ರ ಸಮೀಕ್ಷೆ.-ಭಾರತೀಯ ತತ್ವಶಾಸ್ತ್ರ ಉಪಸಂಹಾರ
- ೧೯. ವೇದಗಳು--(ವೀರಶೈವ; ಬಸವಣ್ಣ); --
- ೨೦.ಕರ್ಮ ಸಿದ್ಧಾಂತ--
- ೨೧.ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು
ದರ್ಶನಗಳಲ್ಲಿ ವಿಚಾರ ವಿಮರ್ಶೆ
ಬದಲಾಯಿಸಿ- ೧೯. ದರ್ಶನ ಶಾಸ್ತ್ರಗಳ ಕಲವು ಆಧಾರಗಳು.
- ೨೦.ಕರ್ಮ ಸಿದ್ಧಾಂತ
- ೨೧.ಪರಮಾತ್ಮ-ಈಶ್ವರ ಅಥವಾ ದೇವರು
- ೨೨.ಈಶ್ವರನ ಅಸ್ತಿತ್ವ-ಸಮರ್ಥನೆ-ನಿರಾಕರಣೆ
- ೨೩.ಜಗತ್ತು -ದರ್ಶನಗಳ ದೃಷ್ಠಿಕೋನ
- ೨೪.ಜೀವಾತ್ಮ,
- ೨೫. ಮೋಕ್ಷ.
- ೨೬. ಜ್ಞಾನ ಕರ್ಮ ವಿವಾದ
- ೨೭. ಮಾಯಾವಾದ
- ೨೮.ತತ್ತ್ವಶಾಸ್ತ್ರ[೧][೨]
ನೋಡಿ
ಬದಲಾಯಿಸಿಸೃಷ್ಟಿ ಮತ್ತು ಪುರಾಣ ದರ್ಶನ ಗಳಲ್ಲಿ ವಿಶ್ವ ಸೃಷ್ಟಿ . ಭಗವದ್ಗೀತಾ ತಾತ್ಪರ್ಯ ಹುಟ್ಟು , ಇತಿಹಾಸ, ಹಿನ್ನೆಲೆ, ಪಠನ ಕ್ರಮ